ಪೀಠಿಕೆ

ಸಿಂಧನೂರು ತಾಲೂಕಿನಲ್ಲಿ ಬುಡಕಟ್ಟು ಸಮುದಾಯಗಳಲ್ಲಿ ನಾಯಕ ಸಮುದಾಯವು ಒಂದು ಆದರೆ ಅಧಿಕವಾಗಿ ಕಂಡುಬರುವಂತವೆಂದರೆ ನಾಯಕ, ವಾಲ್ಮೀಕಿ ಬೇಡರು, ಎಂತಲೂ ಕರೆಯಲಾಗುತ್ತದೆ. ಇತರ ಬಗ್ಗೆ ಅಧ್ಯಯನ ಮಾಡಿದ್ದು ಅಷ್ಟೇ ಅಲ್ಲ ಇದೇ ಸಮುದಾಯದಲ್ಲಿ ಜನಸಿದವನಾದರಿಂದ ನಾಯಕ ಸಮುದಾಯದ ಸಾಮಾಜಿಕ, ಸಾಂಸ್ಕೃತಿಕಾ ಆರ್ಥಿಕ, ರಾಜಕೀಯವಾಗಿ ಹಾಗೂ ಶೈಕ್ಷಣಿಕವಾಗಿ ಇನ್ನೂ ಅನೇಕ ಸಮಸ್ಯೆಗಳನ್ನು ಅನುಭವಿಸುತ್ತಿರುವದು  ಕಾಣಬಹುದು. ಮುಕ್ಕಾಲುಭಾಗ ಸಿಂಧನೂರು ತಾಲೂಕು ನೀರಾವರಿಯನ್ನು ಅವಲಂಬಿಸಿದೆ. ಇನ್ನು ಒಂದು ಭಾಗ ಒಣಬೇಸಾಯವನ್ನು ಹೊಂದಿದೆ. ಒಣಬೇಸಾಯವನ್ನು ಮಾಡುವವರಲ್ಲಿ ನಾಯಕರು ಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ಮತ್ತು ನೀರಾವರಿಯನ್ನು ಹೊಂದಿದವರು ಜೀವನ ಮಟ್ಟ ಸುಧಾರಣೆ ಹೊಂದುತ್ತಿದೆ ಎಂದು ಹೇಳಬಹುದು. ೧೯೫೦ ಕ್ಕಿಂತಲೂ ಹಿಂದೆ ಈ ಸಮುದಾಯವು ಗುಡ್ಡಗಾಡುಪ್ರದೇಶ, ಪ್ರಾಣಿಯಂತೆ ಜೀವನ ಸಾಗಿಸುತ್ತಿತ್ತು. ಆದರೆ ಇದು ಸಡಿಲಿಕೆ ಆಗುತ್ತದೆ ಎಂದರೆ ತಪ್ಪಾಗಲಾರದು. ಇದಕ್ಕೆಲ್ಲ ಕಾರಣ ಕಂಡು ಕೊಂಡ ಹಂತ ಹಂತವಾಗಿ ಪರಿವರ್ತನೆ ಹೊಂದುತ್ತಿದೆ. ಸಾಮಾನ್ಯವಾಗಿ ಸಮಾಜದಲ್ಲಿ ಪ್ರತಿಯೊಂದು ಪರಿವರ್ತನೆ ಹೊಂದುವುದು ನಿಸರ್ಗದ ನಿಮಯವಾಗಿದೆ. ಮೇಲೆ ತಿಳಿಸಿರುವ ಅನೇಕ ಅಂಶಗಳಿಂದ ಸಮಾಜದ ಪರಿವರ್ತನೆ ಕಂಡುಬಂದಿದೆ. ಅದರ ಪ್ರಭಾವದಿಂದಾಗಿ ಈ ಸಮುದಾಯವು ಪರಿವರ್ತನೆಯ ಹಾದಿಯಲ್ಲಿ ಹಂತ ಹಂತವಾಗಿ ಸಾಗುತ್ತ ಹೊರಟಿದೆ ಎನ್ನಬಹುದು.

. ಸಾಮಾಜಿಕ ಅಂಶಗಳು ಬದಲಾವಣೆ

ನಾಯಕ ಸಮುದಾಯ ಸಾಮಾಜಿಕ ಅಂಶಗಳಲ್ಲಿ ಪರಿವರ್ತನೆ ಹೊಂದುತ್ತಿದೆ ಹಿಂದಿನಿಂದಲೂ ಬಂದಿರುವಂತಹ ಕೆಲವು ಸಂಪ್ರದಾಯಗಳು ಅವರ ಜೀವನ ರೀತಿ – ನೀತಿಗಳು ಇಂದು ಮಾಯವಾಗುತ್ತಿವೆ. ಹೇಗೆಂದರೆ ನಿರ್ಜನವಾದ ಬೆಟ್ಟ ಗುಡ್ಡ, ಕಾಡುಮೇಡು ಗುಹೆ ಗುಂಡಾರಗಳಲ್ಲಿ ಬೇಟೆ, ಗೆಡ್ಡೆ ಗೆಣಸುಗಳನ್ನು ತಿನ್ನುತ್ತ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಅಲೆಯುತ್ತಿದ್ದವರು. ಒಂದೆಡೆ ನೆಲಿಸಲಿಕ್ಕೆ ಪ್ರಾರಂಭಿಸಿದರು ಅನ್ನುವಂತಗಳ ಆದಾರದ ಮೇಲೆ ಈ ತಾಲ್ಲೂಕಿನಲ್ಲಿ ಕೆಲವು ಗ್ರಾಮಗಳನ್ನು ನಾನು ಬುದ್ದಿ ತಿಳಿದ ಮಟ್ಟಿಗೆ ನೋಡುತ್ತಿದ್ದಂತೆ ಹಿರೇಬೇರಿಗಿ, ಚಿಕ್ಕಬೇರಿಗೆ, ಭೋಗಾಪೂರ, ವೀರಾಪೂರ, ಗೊರಲೂಟಿ ಇತ್ಯಾದಿ ಗ್ರಾಮಗಳಲ್ಲಿ ನಾಯಕ ಸಮುದಾಯದವರು ಶೇ. ೭೦ರಷ್ಟು ಇದ್ದಾರೆ. ಗೋರಲೂಟಿಯಲ್ಲಿ ಇವರ ಮನೆದೇವರು ಇದೆ ಎನ್ನುವಂಥಹದ್ದು ಪ್ರತಿ ೩ ವರ್ಷ ಅಥವಾ ೫ ವರ್ಷಕ್ಕೊಮ್ಮೆ ಜಾತ್ರೆ ಮಾಡುವ ಪದ್ದತಿ ಈಗಲೂ ಸಹ ಆಚರಣೆಯಲ್ಲಿ ಇದೆ. ಭಾರತ ಹುಣ್ಣಿಮೆಯಲ್ಲಿ ನಡೆಯುತ್ತಿದೆ ಈ ದೇವಿ(ಹುಲಿಗೆಮ್ಮ)ಗೆ ನಾಯಕ ಕುಲಬಾಂಧವರು ಪ್ರತಿಯೊಂದು ಮನೆಯಿಂದ ಪ್ರಾಣಿಯನ್ನು ದೇವರ ಹೆಸರಿನಲ್ಲಿ ಬಿಟ್ಟಿರುತ್ತಾರೆ. ಮೂರು ಅಥವಾ ಐದು ವರ್ಷ ಆದ ಮೇಲೆ ಆ ದೇವಿಗೆ ಹರಕೆಯಬಲಿ ಕೊಡುತ್ತಾರೆ. ಈಗ ಸುಮಾರು ೩೦೦ಕ್ಕಿಂತಲೂ ಅಧಿಕವಾಗಿ ಪ್ರಾಣಿಗಳನ್ನು ಬಲಿಕೊಡುತ್ತಾರೆ ಅರ್ಧ ದೇವಸ್ಥಾನದ ಅಕ್ಕಪಕ್ಕದಲ್ಲಿಯೇ ಅಡುಗೆ ಮಾಡಿ ಉಣಬಡಿಸಿದರೆ, ಇನ್ನರ್ಧ ತಮ್ಮ ಬಂಧುಬಳಗದವರಿಗಾಗಿ ಮನೆಗೆ ತೆಗೆದುಕೊಂಡು ಹೋಗಿ ಮನೆಯಲ್ಲಿಯೇ ಊಟ ಮಾಡಿಸುತ್ತಾರೆ. ಇಂತಹ ಒಂದು ವ್ಯವಸ್ಥೆ ಈಗಲೂ ಕಾಣಬಹುದು. ಈ ಜಾತ್ರೆಯ ಸಮಯದಲ್ಲಿ ಇದು ಇಂದೇ ‘ಪ್ರಾಣಿ’ ಬಲಿ ಮತ್ತು ಬೆತ್ತಲು ಸೇವೆ ನಡೆಯುವ ಸಂಪ್ರದಾಯವನ್ನು ಈಗಲೂ ಕಾಣಬಹುದು. ಈ ವಿಷಯದಲ್ಲಿ ಸರ್ಕಾರ ಕಟ್ಟುನಿಟ್ಟಿನ ಕ್ರಮವನ್ನು  ತೆಗೆದುಕೊಂಡಿದ್ದರೂ ಗುಪ್ತವಾಗಿ ಈ ಪದ್ದತಿ ಇನ್ನೂ ಜಾರಿಯಲ್ಲಿರುವುದನ್ನು ಗಮನಿಸಬಹುದು.

. ವೈವಾಹಿಕ ಜೀವನ ಪದ್ದತಿ

ಸಾಮಾನ್ಯವಾಗಿ ವಿವಾಹಗಳು ಒಳಬಾಂಧವ್ಯ ವಿವಾಹಗಳು ಹೆಚ್ಚು ಕಡಿಮೆ ಕಂಡುಬರುತ್ತಿವೆ. ತಮ್ಮ ರಕ್ತ ಸಂಬಂಧಿಕರಲ್ಲಿ ವಿವಾಹಗಳು ನಡೆಯುತ್ತಿವೆ. ಹಾಗೆ ಬಹುಪತ್ನಿತ್ವ ವಿವಾಹ ಮತ್ತು ಬಾಲ್ಯವಿವಾಹಗಳು ಕಂಡುಬರುತ್ತಿದ್ದವು. ಇತ್ತೀಚಿಗೆ ಅವುಗಳು ಸಹ ಕಡಿಮೆ ಯಾಗಿದೆ.

. ಆರ್ಥಿಕವಾಗಿ ಬದಲಾವಣೆ

ಈ ಭಾಗದಲ್ಲಿ ಕೆಲವರು ಕಡುಬಡವರು ಮತ್ತು ಮಧ್ಯಮವರ್ಗದವರು ಇದ್ದಾರೆ. ನಾನು ಕಂಡುಕೊಂಡ ಸಮುದಾಯಗಳಲ್ಲಿ ಎರಡು ರೀತಿಯ ಸಮುದಾಯಗಳವೆ. ನೀರಾವರಿಯಲ್ಲಿ ಜೀವನ ಸಾಗಿಸುವವರು ಇಂದು ಸುಧಾರಣೆಯಾಗಿದ್ದಾರೆ, ನೀರಾವರಿ ಇಲ್ಲದೇ ಜನರು ಕಡುಬಡತನದಿಂದ ಜೀವನ ಸಾಗಿಸುವಂತಹವರು ಇದ್ದಾರೆ. ಇದರು ಕಟ್ಟಿಗೆ ಮಾರಿ, ಕಾಡಿನಿಂದ ತಂದ ಜೇನು ಮಾರಿ ತಮ್ಮ ಜೀವನ ಸಾಗಿಸುತ್ತಾರೆ. ಈಗ ಅದು ಸಹ ನಾಶವಾಗಿದೆ. ಸಾಕು ಪ್ರಾಣಿಗಳಾದ ಕುರಿಗಳು, ದನಗಳನ್ನು ಕಾಯುವಂತವರಾಗಿದ್ದಾರೆ. ಇಂದು ಸ್ವಲ್ಪಮಟ್ಟಿಗೆ ಕೃಷಿಯನ್ನು ಮಾಡುತ್ತಿದ್ದಾರೆ. ಹಿಂದೆ ಇದು ಯಾವುದು ಇರಲಿಲ್ಲ. ಬೇರೆಯವರ ಹೊಲದಲ್ಲಿ ನೆಟ್ಟು ಕಡಿಯುವುದು, ಗಳೆವು ಹೊಡಿಯಲಿಕ್ಕೆ ಕೂಲಿಯಾಗಿ ಹೋಗುತ್ತಿದ್ದರು. ಇಂದು ಬದಲಾವಣೆಯಾಗಿದೆ. ಅಲ್ಪಸ್ವಲ್ಪ ಭೂಮಿ ಇದ್ದರೂ ಸಹ ಸಂಪ್ರದಾಯಿಕ ಮತ್ತು ಆಧುನಿಕ ಕೃಷಿಯೋಪಯೋಗಿ ವಸ್ತುಗಳನ್ನು ಬಳಸುತ್ತಿದ್ದಾರೆ. ಇದರಿಂದಾಗಿ ಸಾಕು ಪ್ರಾಣಿಗಳ ಜೊತೆಗೆ ಕೃಷಿಯಲ್ಲಿ ಅವರು ಸುಧಾರಣೆ ಹೊಂದುತ್ತಿದ್ದಾರೆ ಮತ್ತೆ ಕೆಲವರು ಭೂಮಿ ಇಲ್ಲದವರು ಇಂದು ಬೇರೆ ಬೇರೆ ಕಡೆಗೆ ವಲಸೆ ಹೋಗುತ್ತಿದ್ದಾರೆ. ಬೆಂಗಳೂರು, ಮಂಗಳೂರು, ಹೈದರಬಾದ್, ಗೋವಾ, ಮುಂಬಯಿಯಂತಹ ದೊಡ್ಡ ದೊಡ್ಡ ನಗರಗಳಿಗೆ ವರ್ಷಾನುಗಟ್ಟಲೇ ಇಂದಿನ ಯುವಕರು ವೃತ್ತಿಯನ್ನು ಅರಸಿ (ಕೈಗಾರಿಕೆಗಳಿಗೆ) ಹೋಗುವುದರಿಂದ ಹಣಗಳಿಸುವುದರ ಜೊತೆಗೆ ಅಲ್ಲಿಯ ಜನರ ನಡುವೆ ಬೆರತು ಅವರ ಜೀವನದ ಶೈಲಿಯನ್ನು ಬದಲಿಸಿಕೊಳ್ಳತ್ತಾರೆ. ಅಂತವರು ಮತ್ತೆ ಪುನಃ ನಮ್ಮ ಸಮುದಾಯಗಳಿಗೆ ಬಂದ ಮೇಲೆ ತಮ್ಮ ಹಿರಿಯರನ್ನು ಸಹ ಬದಲಾವಣೆ ಮಾಡಲಿಕ್ಕೆ ಅಸಾಧ್ಯವಾದರೂ ಸಹ ಪ್ರಯತ್ನದ ಹಂತ ಇವರದ್ದಾಗಿರುತ್ತದೆ. ಇದರಿಂದಾಗಿ ಸಾಕು ಪ್ರಾಣಿಗಳ ಜೊತೆ ಕೃಷಿಯಲ್ಲಿ ಅವರು ಸುಧಾರಣೆ ಹೊಂದುತ್ತಿದ್ದಾರೆ.

. ರಾಜಕೀಯವಾಗಿ ಬದಲಾವಣೆ

ಹೊಟ್ಟೆ ಸರಿಯಾಗಿ ತುಂಬಿಸಿಕೊಳ್ಳದೇ ಅರ್ಧ ಹೊಟ್ಟೆಯಲ್ಲಿ ಕಳ್ಳತನ ಮಾಡುತ್ತಾ ಕಟ್ಟಿಗೆ ಸುಣ್ಣ ಮಾರುತ್ತಾ ತಿರುಗಾಡುವ ಜನರಿಗೆ ರಾಜಕೀಯ ಗಂದಗಾಳಿಯು ಗೊತ್ತಿಲ್ಲದ ಕಾಲವೊಂದು ಇತ್ತು. ಹಿಂದೆ ಇಲ್ಲೆ ಗೌಡರು, ಕುಲಕರ್ಣಿಗಳು ಮತ್ತು ಧಣಿಗಳು ಪಾಟೇಲ್‌ರ ಕಾಲದಲ್ಲಿ ನಾಯಕರು ತಳವಾರರಾಗಿ ಕೆಲಸ ಮಾಡುತ್ತಿದ್ದರು. ಇವರ ಸೇವೆಗೆ ಸರ್ಕಾರ ಇಂದು  ಭೂಮಿ ನೀಡಿದೆ, ಕೆಲವೊಂದು ಹಳ್ಳಿಗಳಲ್ಲಿ ಅಥವಾ ಪ್ರಾಂತಗಳಲ್ಲಿ ತಮ್ಮ ಯಜಮಾನನ ರಕ್ಷಣೆಗಾಗಿ, ಗೌಡ, ಕುಲಕರ್ಣಿ ಧಣಿ, ಪಾಟೇಲ್ ಇವರುಗಳಗಳಿಗಾಗಿ ತಮ್ಮ ಜೀವನದ ಹಂಗು ತೊರೆದು ರಕ್ಷಣೆ ಮಾಡುತ್ತಿದ್ದರು. ಇಂತವರು ಬರುಬರುತ್ತಾ ಸರಕಾರ  ಆ ಭೂಮಿಯನ್ನು ಎಲ್ಲರಿಗೆ ಸಮವಾಗಿ ಹಂಚಿತು. ಕೆಲವೊಂದು ಯಶಸ್ವಿಯಾಗಿ ಸೌಲಭ್ಯಗಳನ್ನು ಪಡೆದುಕೊಂಡರೂ, ಇನ್ನು ಕೆಲವರು ಸರಕಾರ ಜಮೀನನ್ನು ತಿರಸ್ಕಾರ ಮಾಡಿದರು. ಅದು ಇತ್ತೀಚೆಗೆ ಉಪಯೋಗಿಸಿಕೊಂಡವರು ಕಡಿಮೆ ಜನ. ನಿರಾಕರಿಸಿದವರು ಬಹಳ. ಇವರಿಗೆ ಗೌಡರು, ಪಾಟೇಲ, ಧಣಿಗಳು, ರಾಜಕೀಯ ಅರಿವನ್ನು ನೀಡಿದರು. ಆ ವ್ಯವಸ್ಥೆ ನಾಶ ಹೊಂದಿ ಪ್ರಜಾಪ್ರಭುತ್ವ ಸರಕಾರದ ಸೌಲಭ್ಯಗಳಲ್ಲಿ ರಾಜಕೀಯ ಅವಕಾಶಗಳಲ್ಲಿ ಭಾಗವಹಿಸುವರು ಮತ್ತು ಅವರ ಅಧಿಕಾರಕ್ಕೆ ಬಂದ ನಂತರ ನಾಯಕ ವ್ಯವಸ್ಥೆಯಲ್ಲಿ ಅಧಿಕಾರ ನಡೆಸಿದವರು ಬಹಳಷ್ಟು ಜನ. ಇದರ ಲಾಭವೆಲ್ಲ ಶ್ರೀಮಂತ ವರ್ಗಗಳು ಪಡೆದುಕೊಳ್ಳುತ್ತವೆ. ಅವರ ಅಧಿಕಾರ ನಡೆಸುತ್ತಾರೆ. ಇಂತಹ ವ್ಯವಸ್ಥೆ ಇದ್ದಾಗ ನಾಯಕ ಜನಾಂಗ ರಾಜಕೀಯ ಜೀವನಮಟ್ಟದಲ್ಲಿ ಕಳಪೆ ಮಟ್ಟದಲ್ಲಿ ಬದಲಾವಣೆಯಾಗುತ್ತಿದೆ.

ಇಲ್ಲಿಯ ನಾಯಕರು ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದ ಜನರಾಗಿದ್ದಾರೆ. ‘ಶಿಕ್ಷಣವು ಸಮಾಜದ ಪ್ರತಿಯೊಂದು ಸಮಸ್ಯೆಗಳು ನಿರ್ಮೂಲನೆಗೆ ಇದು ಸಂಜೀವಿ ಎಂದು ಹೇಳಬಹುದು’ ಶೈಕ್ಷಣಿಕವಾಗಿ ಮುಂದುವರೆಯಲು ಸರಕಾರವು ಅನೇಕ ಸವಲತ್ತುಗಳನ್ನು ನೀಡಿದೆ ಆದರೆ ಇದರ ಸದುಪಯೋಗ ಇವರಿಗೆ ಆಗುತ್ತಿಲ್ಲ. ಇದಕ್ಕೆಲ್ಲ ಕಾರಣ ಇವರು ಕಂಡುಕೊಂಡಾಗ ಇವರು ಬಡವರು ಆಗಿರುವುದರಿಂದ ಬಹಳಷ್ಟು ಜನ ಮಕ್ಕಳನ್ನು ಎತ್ತಿತ್ತಿರುವುದು ಮತ್ತು ಎಲ್ಲರನ್ನು ಶಾಲೆಗೆ ಕಳಿಸಲಿಕ್ಕೆ ಆಗುವುದಿಲ್ಲ. ಶ್ರೀಮಂತರ ಮನೆಯಲ್ಲಿ ದುಡಿಯಲಿಕ್ಕೆ ಬಿಡುತ್ತಾರೆ. ಇತ್ತೀಚೆಗೆ ಹೋಟೆಲ್‌ಗಳಲ್ಲಿ ಬಾರ್‌ಗಳಲ್ಲಿ ಕಿರಾಣಿ ಅಂಗಡಿಗಳಲ್ಲಿ ಮತ್ತು ಮನೆಕೆಲಸಕ್ಕಾಗಿ ನಗರದಲ್ಲಿ ಬಿಡುತ್ತಾರೆ. ಹೀಗೇ ಮಾಡುವುದರಿಂದ ಶಿಕ್ಷಣದಿಂದ ವಂಚಿತರಾಗುವುದು ಮತ್ತೆ ಕೆಲವರು ಊರಲ್ಲಿ ಇದ್ದುಕೊಂಡು ಮಕ್ಕಳನ್ನು ಶಾಲೆಗೆ ಕಳಿಸಬೇಕು ಅಂತ ಬೇರೆ ಮಕ್ಕಳನ್ನು ನೋಡಿ ಶಾಲೆಗೆ ದಿನಾಲು ಕಳಿಸುವುದಿಲ್ಲ. ಹೊಲಕ್ಕೆ, ಕುರಿಕಾಯಿಸಲಿಕ್ಕೆ, ಎತ್ತು ಎಮ್ಮೆ ಆಕಳು ಕಾಯಲಿಕ್ಕೆ ಇಲ್ಲವೆ ಗದ್ದೆ  ಕೆಲಸಕ್ಕೆ ಕಳುಹಿಸುತ್ತಾರೆ. ಇದರಿಂದಾಗಿ ಮಕ್ಕಳು ಶಿಕ್ಷಣದಿಂದ ವಂಚಿತರಾಗುವುದು ಸಾಮಾನ್ಯವಾಗಿದೆ. ಶಾಲೆಗೆ ಹೋಗುವ ದಿನಗಳೆಂದರೆ ಶಾಲೆಯಲ್ಲಿ ಯಾವುದಾದರೂ ಕಾರ್ಯಕ್ರಮಗಳಿದ್ದಾಗ ಮತ್ತು ಬಟ್ಟೆ ಪುಸ್ತಕ ಹಾಗೂ ಹಣ ಬಂದಾಗ ಆ ಶಾಲೆಯ ಗುರುಗಳು ಹುಡುಗರನ್ನು ಹೇಳಿಕಳುಹಿಸಿರುತ್ತಾರೆ. ಇದರಿಂದಾಗಿ ಶೈಕ್ಷಣಿಕವಾಗಿ ಅವರು ಬಹಳಷ್ಟು ಹಿಂದೆ ಉಳಿದಿದ್ದಾರೆ. ಈಗ ಬೇರೆಯವರ ಮಕ್ಕಳನ್ನು ನೋಡಿ ಮತ್ತು ತಮ್ಮ ಸೇಹಿತರು ಮಕ್ಕಳು ನೌಕರಿ ಮಾಡುವುದರಿಂದಾಗಿ ನಾವಂತು ಮಾಡಲಿಲ್ಲ ನಮ್ಮ ಮಕ್ಕಳಾದರೂ ಇಂತಹ ಅವಕಾಶ ಪಡೆದುಕೊಂಡು ಸಂತೋಷವಾಗಿ ಇರಲಿ ಎಂದು ಬೆರಳೆಣಿಕೆಯಷ್ಟು ಜನರು ಇಂದು ಶಿಕ್ಷಣವನ್ನು ಕೊಡಿಸುತ್ತಿರುವದುವು ಉತ್ತಮ ಬೆಳವಣಿಗೆಯಾಗಿದೆ. ಒಂದು ಅಂದಾಜಿನಂತೆ ಸುಮಾರು ೧೦೦ಕ್ಕೆ ೧೧ರಷ್ಟು ಪ್ರಾಥಮಿಕ ಶಿಕ್ಷಣ (೧ರಿಂದ ೪ನೇ ತರಗತಿ),೧೦೦ಕ್ಕೆ ೯ರಷ್ಟು ಮಾಧ್ಯಮಿಕ ಶಿಕ್ಷಣ(೫ರಿಂದ ೭ನೇ ತರಗತಿ) ೧೦೦ಕ್ಕೆ ೭ರಷ್ಟು ಪ್ರೌಢಶಿಕ್ಷಣ ಹಾಗೂ ೧೦೦ಕ್ಕೆ ೧ರಷ್ಟು ಉನ್ನತ ಶಿಕ್ಷಣ ಈ ರೀತಿಯಾಗಿ ಇಂದು ಹಂತ ಹಂತವಾಗಿ ಬದಲಾವಣೆ ಹೊಂದುತ್ತಾ ಸಾಗುತ್ತಿದೆ ಎನ್ನಬಹುದು.

. ಮಹಿಳೆಯರ ಸ್ಥಾನಮಾನ

ನಾಯಕ ಸಮುದಾಯದ ಮಹಿಳೆಯರಿಗೆ ಕೆಳಮಟ್ಟದ ಸ್ಥಾನಮಾನವನ್ನು ನೀಡಲಾಗಿದೆ. ಮಹಿಳೆಯನ್ನು ಒಂದು ಭೋಗದ ವಸ್ತುವಿನಂತೆ ಕಾಣಲಾಗುತ್ತದೆ. ಹೇಗೆಂದರೆ ಮಹಿಳೆಯು ಮಕ್ಕಳನ್ನು ಹೇರುವ ಯಂತ್ರ ಇದ್ದಂತೆ ಎಂದು ಮತ್ತು ಮಹಿಳೆಯರು ಪುರುಷರು ಕೈಗೊಂಬೆಯಾಗಿ ಮತ್ತು ಮನೆಯಲ್ಲಿ ಗಾಣದ ಎತ್ತಿನಂತೆ ಕೆಲಸ ಮಾಡಿ, ಅಷ್ಟೇ ಅಲ್ಲದೇ ಪುರುಷನಿಗೆ ಸರಿಸಮನಾಗಿ ಕೆಲಸ ಮಾಡಬೇಕಾಗಿದೆ. ವಿಶ್ರಾಂತಿ ಇಲ್ಲದೇ ದುಡಿಯುವುದು ಮಹಿಳೆಯದ್ದಾಗಿದೆ. ಬೆಳಿಗ್ಗೆ ೪ ಗಂಟೆಗೆ ಎದ್ದು ಅಡುಗೆ ಮಾಡಿ ಬುತ್ತಿಕಟ್ಟಿಕೊಂಡು ಹೊಲಕ್ಕೆ ಹೋಗುವುದು ಇಲ್ಲವೇ ಕುರಿಕಾಯಲ್ಲಿಕ್ಕೆ ಹೋಗುವುದು ಮತ್ತೆ ರಾತ್ರಿ ತಾನೆ ಅಡುಗೆ ಮಾಡಿ ಎಲ್ಲರಿಗೆ ಊಟಕ್ಕೆ ಬಡಿಸಿ ಕೊನೆಗ ತಾನು ಊಟ ಮಾಡಿ ಮಲಗಬೇಕು. ಇಷ್ಟೇ ಅಲ್ಲ ಬಹುಪತ್ನಿತ್ವ ವಿವಾಹಗಳು ಸಾಕಷ್ಟು ಕಂಡುಬರುವುದರಿಂದ ವೈವಾಹಿಕ ಜೀವನದಲ್ಲಿ ಸಹ ನೆಮ್ಮದಿ ಇಲ್ಲದಂತೆ ಆಗಿದೆ. ಸಾಮಾನ್ಯವಾಗಿ ಇಲ್ಲಿ ೧೦೦ಕ್ಕೆ ೫೦ ರಷ್ಟು ಪುರುಷರು ಬಹುಪತ್ನಿತ್ವ ವಿವಾಹವನ್ನು ಆಚರಿಸುವಂತಹದು ಮತ್ತು ೧೦೦ಕ್ಕೆ ೩ರಷ್ಟು ಬಹುಪತ್ನಿತ್ವ ಮಾತ್ರ ಆಚರಣೆಯಲ್ಲಿದೆ. ಹೀಗಾಗಿ ಇಲ್ಲಿಯ ಮಹಿಳೆಯರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ವೇಶ್ಯಾವಾಟಿಕೆ ದೇವದಾಸಿ ಪದ್ದತಿ, ಬಸವಿಪದ್ದತಿ ಈ ಜನಾಂಗದಲ್ಲಿ ಕಂಡು ಬರುತ್ತದೆ. ಇಂದು ಅದನ್ನು ಇಲ್ಲಿಯ ಯುವ ಸಂಘಟನೆಗಳು, ಪ್ರಜ್ಞಾವಂತರು ಈ ಅನಿಷ್ಟಕರ ಪದ್ದತಿಯನ್ನು ನಿಲ್ಲಿಸಿ ಮತ್ತು ಬಸವಿಗೆ ಬಿಟ್ಟಿರುವಂತಹ ಮಹಿಳೆಯನ್ನು ವಿವಾಹ ಮಾಡಿಕೊಂಡಿರುವುದು ಕಾಣಬಹುದು. ಈ ರೀತಿ ಬಿಡುವ ಪಾಲಕರಿಗೆ ಎಚ್ಚರಿಕೆ ಸಹ ನೀಡಿದೆ. ಇದರಿಂದಾಗಿ ಇಂತಹ ವ್ಯವಸ್ಥೆ ಸಂಪೂರ್ಣವಾಗಿ ಮಾಯವಾಗಿದೆ. ಇಂದು ಮಹಿಳೆಯರು ಸಹ ಸ್ವಾವಲಂಬಿಗಳಾಗಿ ಸ್ವತಂತ್ರ್ಯ ಜೀವನವನ್ನು ಸಾಗಿಸಲಿಕ್ಕೆ ಮುಂದೆ ಬರುವುದರಿಂದ ಅವರು ಸಹ ಜಾಗತೃರಾಗುತ್ತಿದ್ದಾರೆ.

. ಅಪರಾಧಗಳು ಮತ್ತು ದುಶ್ಚಟಗಳು

ಸಿಂಧನೂರು ತಾಲೂಕಿನಲ್ಲಿಯ ನಾಯಕರು ಕೆಲವು ಕಡೆ ಅಪರಾಧಗಳ ಪಟ್ಟಿಯಲ್ಲಿ ನೋಡಿದಾಗ ಅಧಿಕವಾಗಿ ಕಂಡುಬರುತ್ತದೆ. ಅಂದರೆ ಬಡವರು ಆಗಿರುವುದರಿಂದ ಅನೇಕ ಸಮಾಜ ಬಾಹಿರ ಕೃತ್ಯಗಳಲ್ಲೂ ತೊಡಗುತ್ತಿದ್ದಾರೆ. ಕಳ್ಳತನ ಮಾಡುವುದು ಕೊಲೆ ಮಾಡುವುದು, ಸಣ್ಣಪುಟ್ಟ ಜಗಳಗಳು ನಡೆಯುತ್ತಲೇ ಇರುವುದು ಕಾಣುತ್ತೇವೆ. ಇದಕ್ಕೆಲ್ಲ ಅನೇಕ ಕಾರಣಗಳಿವೆ. ಇವರಿಗೆ ಯಾವುದು ಸರಿ ಯಾವುದು ತಪ್ಪು ಎಂದು ತುಲನೆ ಮಾಡಿ ನೋಡುವಂತಹ ಸ್ಥಿತಿ ಇಲ್ಲದೆ ಇರುವುದರಿಂದ ಇವರು ಗೌಡ್ರು, ಪಾಟೀಲ್, ಧಣಿಗಳ ಮಾತು ಕೇಳಿ ಅವರು ಕೊಡುವ ಹಣದ ಆಮಿಷಗಳಿಗಾಗಿ ಅನೇಕ ಸಮಾಜ ಬಾಹಿರ ಕೃತ್ಯಗಳು ಮಾಡುವುದು ಇಲ್ಲಿ ಕಾಣಬಹುದು. ಬಣವಿ ಸುಡುವುದು. ಹೊಲ ಮೇಯಿಸುವುದು, ಮನೆಗಳ್ಳತನ ಮಾಡುವುದು ಗುಡಸಲಿಗೆ ಬೆಂಕಿ ಹಚ್ಚುವುದು, ಕೊಲೆ ಮಾಡುವುದು ಇದಲ್ಲದೇ ಸಿಂಧನೂರು ತಾಲೂಕಿನ ಹಿರೇಭೇರಿಗಿರಿ ಆಟ್ರಸ್ಪಡ್ ಕೇಸ್‌ಗಳು ಅಧಿಕವಾಗಿವೇ ಎಂಬುದು ಕಂಡುಬರುತ್ತದೆ. ನಾಯಕರ ಜೊತೆ ಜಗಳ ಮಾಡಲಿಕ್ಕೆ ಯಾರು ಮುಂದೆ ಬರುವುದಿಲ್ಲ. ಅರಿವು ಮತ್ತು ಜ್ಞಾನದ ಕೊರತೆ ಆದರೂ ಈ ಸಮುದಾಯವು ಎಲ್ಲದಕ್ಕೂ ಸಿದ್ಧವಾಗಿರುತ್ತದೆ. ಹೀಗಿರುವಾಗ  ಅಪರಾಧಗಳು ತುಂಬಿ ತುಳುಕುತ್ತಿವೆ. ಅವರನ್ನು ಕೇಳಿದಾಗ ಹೇಳುವ ಮಾತು ಕುಂಡಿ ಹಡಕಮಗ  ಹುಟ್ಟಬಾರದು ದಂಡ ಕೋಡು ಮಗ ಹುಟ್ಟಬೇಕುಅಂತ ಇವರಿಗೆ  ದಂಡ ಕೊಡುವುದು ಹೆಮ್ಮೆಯ ವಿಷಯವಾಗಿದೆ. ದಂಡ ಕೊಟ್ಟು ಕೊಟ್ಟ ಎಂಡ್ರಮಕ್ಕಳಿಗೆ ಕೂಳ ಹಾಕದೆ ತಾವು ಸಹ ಧಿಕ್ಕಾರಾಗುವಂತೆ ಹೀಗಾಗಿ ಕೆಲವು ಜನರು ಸುಧಾರಣೆಯಾಗುತ್ತಿದ್ದಾರೆ. ಅದರಿಂದ ಏನಿದೆ ಸುಮ್ಮನೆ ನಾವು ಹಾಳಾಗುತ್ತಿದ್ದೇವೆ ಎಂದು ನಿರ್ಧಾರ ಮಾಡುತ್ತಿದ್ದಾರೆ.

. ವಿಷಪೂರಿತ ಪರಿಸರ

ಇಲ್ಲಿ ಸಾಮಾನ್ಯವಾಗಿ ಅವಲೋಕಿಸಿದ ಕೆಲವು ಸಮುದಾಯದಲ್ಲಿ ಇವರು ಸ್ವಚ್ಛವಾದ ಪರಿಸರದಲ್ಲಿ ವಾಸಿಸುವುದಿಲ್ಲ. ಮತ್ತು ಬಾವಿಗಳಲ್ಲಿನ ನೀರು ಸೇವಿಸುವವರಾಗಿದ್ದಾರೆ. ಈ ಸಮುದಾಯದ ಸುತ್ತಲೂ ತಿಪ್ಪೆ, ಗುಂಡಿಗಳು, ಜಾಲಿಮರಗಳು ಇರುವುದು ಆದರೆ ಈಗ ಸರಕಾರದ ಸೌಲಭ್ಯಗಳಿಂದ ಜನತಾ ಮನೆಗಳನ್ನು ಯೋಜನಾಬದ್ದವಾಗಿ ನಿರ್ಮಿಸಲಾಗಿದೆ. ಕೊರೆದ ಕೊಳವೆಬಾವಿಗಳನ್ನು ನಿರ್ಮಿಸಿದೆ ಕೆಲವು ಸಮುದಾಯಗಳಿಗೆ ೨೦೦೫ರಲ್ಲಿ ವಿದ್ಯುತ್ ಪೂರೈಸಿದೆ. ಇದರಿಂದಾಗಿ ಈ ಸಮುದಾಯ ತಾವು ಸಮುದಾಯದ ಸುತ್ತಲೂ ಇರುವ ಗಿಡಗಳು ಗುಂಡಿಗಳನ್ನು ಸರಿಪಡಿಸಿ ಉತ್ತಮವಾದ ಪರಿಸರವನ್ನು ನಿರ್ಮಿಸಿಕೊಳ್ಳುತ್ತಿರುವುದು ಕಾಣಬಹುದು.

. ಆಹಾರ ಮತ್ತು ಆರೋಗ್ಯದಲ್ಲಿ ಬದಲಾವಣೆ

ಈ ಸಮುದಾಯದಲ್ಲಿ ಸಹ ಅನೇಕ ಆರೋಗ್ಯ ದೃಷ್ಟಿಯಿಂದ ಸಮಸ್ಯೆಗಳು ಎದುರಾಗುವುದನ್ನು ಕಾಣುತ್ತೇವೆ. ಆದರೆ ಇಂದು ಆಹಾರವನ್ನು ಸರಕಾರ ಒದಗಿಸುತ್ತದೆ. ಆರೋಗ್ಯದ ದೃಷ್ಟಿಕೋನದಿಂದ  ನೋಡಿದಾಗ ಇಂದು ಆರ್ಯುವೇದಿಕ್ ಮತ್ತು ಆಧುನಿಕ ಔಷಧಿಗಳನ್ನು ಬಳಸುತ್ತಿದ್ದಾರೆ. ಹಿಂದೆ ಇಂತಹ ಔಷಧಿಗಳನ್ನು ತೆಗೆದುಕೊಳ್ಳಲಿಕ್ಕೆ ನೀರಾಕರಿಸುತ್ತಿದ್ದರು. ಆರ್.ಎಂ.ಫಿ. ಡಾಕ್ಟರ್ ಬಂದು ಇಂಜೆಕ್ಷನ್ ಮಾಡುತ್ತಾರೆ ಎಂದರೆ ಬೇಡ ಆರಾಮಾಗಿದೆ ಅಂತ ಹೇಳಿಬಿಡುತ್ತಿದ್ದರು. ಅಂದರೆ ಭಯ ಅವರಿಗೆ ಇತ್ತು. ಈಗ ಸ್ವಲ್ಪ ನೆಗಡಿ ಕೆಮ್ಮು, ಜ್ವರ ಬಂದ್ರೆ ಆಸ್ಪತ್ರೆಗೆ ಹೋಗುವಷ್ಟು ಬದಲಾವಣೆ ಹೊಂದಿದ್ದಾರೆ. ಇದರಿಂದಾಗಿ ಈ ಸಮುದಾಯವು ಸ್ಥಿತ್ಯಂತರ ಹೊಂದುತ್ತಿದೆ ಎಂದು ಹೇಳಬಹುದು.

* * *