ಯೂರೋಪಿಯನ್ನುರು ಭಾರತಕ್ಕೆ ಬರುವ ಮೊದಲು ಆರ್ಯರು ಅವರಿಗಿಂತ ಮೊದಲು ದ್ರಾವಿಡರು, ದ್ರಾವಿಡರು ಭಾರತದ ಮೂಲ ನಿವಾಸಿಗಳೆಂದು ಕರೆಯ ಬಹುದಾಗಿದೆ. ಇವರಿಗೂ ಮೊದಲು ಅಥವಾ ಇವರೊಂದಿಗಿದ್ದವರನ್ನು ‘ಕೋಲರು’ ನೀಗ್ರೋಯಿಡ್’ ಜನರೆಂದು ಗುರುತಿಸಲಾಗಿತು. ಪ್ರಧಾನವಾಗಿ ಅಲೆಮಾರಿಗಳು ಆಹಾರ ಮತ್ತು ವಸತಿಗಾಗಿ ಪ್ರದೇಶಿಂದ ಪ್ರದೇಶಕ್ಕೆ ವಲಸೆ ಹೋಗುತ್ತಿದ್ದವರು. ಪಂಗಡಗಳಲ್ಲಿ ವಾಸಿಸುತ್ತಿದ್ದರು. ಹೊಟ್ಟೆಪಾಡಿಗಗೊ ಬೇಟೆಯನ್ನು ಅರಣ್ಯಗಳಲ್ಲಿ ನೂಸರ್ಗಿಕವಾಗಿ ದೊರೆಯುವ ಗೆಡ್ಡೆ ಗೆಣಸುಗಳನ್ನು ತಮ್ಮ ಆಹಾರಕ್ಕಾಗಿ ಅವಲಂಬಿಸಿ ದವರು. ತರುವಾಯು ಪಶುಪಾಲನೆ ಇದರ ಜೊತೆಗೆ ಬೇಸಾಯವನ್ನು ಮಾಡುವುದನ್ನು ಕೈಗೊಂಡು ಒಂದು ಕಡೆ ನೆಲೆನಿಂತರು. ಮೊದಲಿಗೆ ಮೊದಲಿಗೆ ಅನೇಕ ಸಮಸ್ಯೆಗಳು ಹಾಗೂ ಸಂಘರ್ಷಗಳನ್ನು ಎದುರುಸಿ ಆದಿವಾಸಿಗಳು ಬದುಕುತ್ತಿದ್ದರು. ಕೆಲವು ಬಾರಿ ಸಾವುನೋವುಗಳನ್ನು ಎದುರಿಸಲಾಗದೆ ತಮ್ಮ ತಮಲೆಗಳನ್ನು ತೊರೆದು ಅರಣ್ಯ ಅಥವಾ ಕಾಡುಗಳನ್ನು ಸೇರುತ್ತಿದ್ದರು. ಸದಾ ಸಂಘರ್ಷಗಳು ಬುಡಕಟ್ಟು ಜನಾಂಗಗಳ ಜೀವನ್ಮರಣ ಸ್ಥಿತಿಯಾಗಿತ್ತು. ಇಂಥವರನ್ನು ಆದಿವಾಸಿಗಳು, ಸಂಚಾರಿಜನಾಂಗ, ಗಿರಿಜನರು ಅರಣ್ಯವಾಸಿಗಳು ಇತ್ಯಾದಿ ಹೆಸರುಗಳಿಂದ ಕರೆಯಲಾಗುತ್ತದೆ. ಇವರು ಬೇಟೆ, ಮೀನುಹಿಡಿಯುವುದು, ಕೂಲಿಕಾರ್ಮಿಕ, ಕೃಷಿಕಾರ್ಮಿಕರಾಗಿ ಹಾಗೂ ಸರಳ ರೀತಿಯ ಬೇಸಾಯ ಮಾಡಿ ಜೀವಿಸುತ್ತಿದ್ದಾರೆ.

ಇವರುಗಳನ್ನು ಹಲವಾರು ವಿದ್ವಾಂಸರುಗಳು ತಮ್ಮ ಅಭಿಪ್ರಾಯಗಳ ವ್ಯಕ್ತಪಡಿಸಿದ್ದಾರೆ ಭಾರತದ ಪ್ರಸಿದ್ದ ಮಾನವಿಜ್ಞಾನಿ ಹಾಗೂ ಸಮಾಜ ಶಾಸ್ತ್ರಜ್ಞರಾದ ಜಿ.ಎಸ್.ಪುಕ್ಕೆಯವರು ‘ಹಿಂದುಳಿದ ಹಿಂದೂಗಳು ಎಂದು ಕರೆದರೆ ವೆರಿಯರ್ ಎಲ್ವಿನ್‌ರವರ ಆದಿವಾಸಿಗಳು ಅಥವಾ ಮೂಲನಿವಾಸಿಗಳೆಂದು ಕರೆದಿದ್ದಾರೆ. ಆದಿವಾಸಿ ಸಮುದಾಯ ಹಾಗೂ ಸಂಸ್ಕೃತಿಗಳ ಅಧ್ಯಯನ ಹಾಗೂ ವೈಜ್ಞಾನಿಕ ಸಮೀಕ್ಷೆ ನಡೆಸಿ ಬುಡಕಟ್ಟು ಪದದ ಅರ್ಥವನ್ನು ಅತಿಸರಳವಾಗಿ ಸುಪ್ರಸಿದ್ದ ಮಾನವಶಾಸ್ತ್ರಜ್ಞರಾದ ಎ.ಎಲ್.ಕ್ರೋಬರ್‌ರವರು ಈ ರೀತಿಯಲ್ಲಿ ವ್ಯಕ್ತಪಡಿಸಿದ್ದಾರೆ. ಬುಡಕಟ್ಟು ಸಮುದಾಯವು ಚಿಕ್ಕದಾಗಿ ಒಂಟಿಯಾಗಿ ಹಾಗೂ ಸಾಂಸ್ಕ್ರತಿಕವಾದ ಸಂಬಂಧಗಳನ್ನು ಅಳವಡಿಸಿಕೊಂಡು ಸುವ್ಯವಸ್ಥಿತವಾಗಿ ರಚಿಸಿಕೊಂಡಿರುವ ಒಂದು ಸಮಾಜ ಎಂದಿದ್ದಾರೆ ಡಿ. ಎಮ್. ಮೆಜುಮೆ ದಾರರವರ ಪ್ರಕಾರ ಬುಡಕಟ್ಟು ಅಥವಾ ಆದಿವಾಸಿಗಳೆಂದರೆ ಹಲವಾರು, ನಿರ್ದಿಷ್ಟ ಭೂ ಪ್ರದೇಶದಲ್ಲಿ ನೆಲೆಸಿರುವ, ವಿಶಿಷ್ಟ ಭಾಷೆಯನ್ನಾಡುವ ಪರಸ್ಪರ ಸಹಕಾರ ಹಾಗೂ ತಿಳುವಳಿಕೆ ಮೇಲೆ ನೆಲೆಸಿರುವ ಜನ ಸಮುದಾಯಗಳೇ ಆದಿವಾಸಿಗಳು ಅಥವಾ ಬುಡಕಟ್ಟು ಎಂದು ಕರೆದಿದ್ದಾರೆ.

ಲಂಡನ್ನಿನ ರಾಯಲ್ ಅಂತ್ರೋಪಲಾಜಿಕಲ್ ಇನ್‌ಸ್ಟಿಟೂಟ್ ವ್ಯಾಖ್ಯೆ ಈ ರೀತಿ ಇದೆ. “ಒಂದು ನಿರ್ದಿಷ್ಟ ಪ್ರದೇಶದಲ್ಲಿ ವಾಸಿಸುವ ಅಥವಾ ಆದನ್ನು ತನ್ನದೇ ಎಂದು ಹೇಳಿಕೊಳ್ಳುವಂತ ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ. ಹೊಂದಿಕೊಂಡಿರುವ ಸ್ವಯಂ ಆಡಳಿತವನ್ನು ಹೊಂದಿರುವ ಸಂಗಡ ಅಥವಾ ಬುಡಕಟ್ಟು (ಮಾನವಶಾಸ್ತ್ರಜ್ಞರು ಬಳಸುವಂತ ಅಧಿವಾಸಿ ಅಥವಾ ಬುಡಕಟ್ಟು ಎಂಬ ಪದ ಭೌಗೋಳಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಗುರುತಿಸಬಹುದಾದ ಜನಾಂಗವನ್ನು ನಿರ್ದೇಶಿಸುತ್ತದೆ. ಸಾಮಾಜಿಕ ಮಾನವ ಶಾಸ್ತ್ರದಲ್ಲಿ ಬುಡಕಟ್ಟುಗಳನ್ನು ಐತಿಹಾಸಿಕವಾಗಿ ಮತ್ತು ತೌಲನಿಕವಾಗಿ ಅಧ್ಯಯನ ಮಾಡುವ ಜನಸಂಖ್ಯೆಯನ್ನು ಮಾವನ ಕುಲ ವಿಜ್ಞಾನ (ಯೆತ್ನೋಲಾಜಿ) ಎಂದೂ ಬುಡಕಟ್ಟುಗಳನ್ನು ವಿವರಣಾತ್ಮಕವಾಗಿ ಅಧ್ಯಯನ ಮಾಡುವ ಶಾಖೆಯನ್ನು ಮಾನವ ಕುಲ ವಿವರಣ ವಿಜ್ಞಾನ (ಯತ್ನೋಗ್ರಫಿ) ಎಂದು ಕರೆಯಲಾಗುತ್ತದೆ. ಸುರ್ಜಿತ್‌ಸಿಂಗ್ ಅವರು ‘ಇತರ ಜನಾಂಗೀಯ ಗುಂಪುಗಳಿಂದ ಪರಿಸರ, ಜನಸಂಖ್ಯಾಶಾಸ್ತ್ರ, ಅರ್ಥ ವ್ಯವಸ್ಥೆ, ರಾಜಕೀಯ ಹಾಗೂ ಇತರ ಸಾಮಾಜಿಕ ವರ್ತನೆಗಳಿಂದ ಪ್ರತ್ಯೇಕಿಸಲಾಗುವುದು’ ಎಂದು ಬುಡಕಟ್ಟುಗಳ ಅಧ್ಯಯನಕ್ಕೆ ಆಯಾಮವನ್ನು ಒದಗಿಸುತ್ತಿದೆ. ಬುಡಕಟ್ಟುಗಳ ಅಧ್ಯಯನ ಹಾಗೂ ಬುಡಕಟ್ಟುಗಳ ವಿಶಿಷ್ಟತೆಯನ್ನು ಅರಿಯಲು ಮೊದಲು ಪ್ರಯತ್ನಿಸಿದವರು ಬ್ರಿಟಿಷರು. ಏಷಿಯಾಟಿಕ್ ಸೊಸೈಟಿ ಆಫ್ ಬೆಂಗಾಲ್ ಎಂಬ ಸಂಸ್ಥೆಯ (೧೭೭೪)ರಲ್ಲಿ ಸ್ಥಾಪನೆಯೊಡನೆ ಭಾರತದಲ್ಲಿ ಮೊಟ್ಟಮೊದಲಿಗೆ ಪ್ರಾರಂಭಗೊಂಡಿತು. ೧೯೧೯ರಲ್ಲಿ ಸಮಾಶಾಸ್ತ್ರ ಮುಂಬಯಿ ಮತ್ತು  ೧೯೨೧ ರಲ್ಲಿ ಮಾನಶಾಸ್ತ್ರ, ಕಲ್ಕತ್ತದ ವಿಶ್ವವಿದ್ಯಾಲಯಗಳಲ್ಲಿ ಸಾಮಾಜಿಕ ಮಾನಶಾಸ್ತ್ರ ವಿಷಯಗಳನ್ನು ಸೇರಿಸಿದಾಗಿನಿಂದಲೂ ಬುಡಕಟ್ಟು ಅಧ್ಯಯನ ರಚನಾತ್ಮಕವಾಗಿ ಆರಂಭಗೊಂಡಿತು. ದಕ್ಷಣ ಭಾರತದಲ್ಲಿ ಟಿ. ಎಸ್.ಘುರ್ಯೆ, ಇರಾವತಿ ಕರ್ವೆ, ಎಲ್.ಕೆ. ಅನಂತಕೃಷ್ಣ ಅಯ್ಯರ್, ಕೆ.ಜಿ. ಗುರುಮೂರ್ತಿ, ಎಂ. ಎನ್. ಶ್ರೀನಿವಾಸ ಮುಂತಾದ ಮಾನವಶಾಸ್ತ್ರಜ್ಞರು ಕ್ಷೇತ್ರಕಾರ್ಯ ಕೈಗೊಂಡು ಅನೇಕ ರೀತಿಯ ಲೇಖನಗಳನ್ನು ಕೃತಿಗಳನ್ನು ಬರೆಯುವುದರ ಮೂಲಕ ವಿಶೇಷವಾಗಿ ಬುಡಕಟ್ಟು ಸಂಸ್ಕ್ರತಿಯ ವಿವಿಧ ಅಂಶಗಳ ಬಗ್ಗೆ ಮಾನವಶಾಸ್ತ್ರೀಯ ಸಂಶೋಧನೆ ನಡೆಸಲು ಸಂಶೋಧಕರಿಗೆ ತರಬೇತಿ ನೀಡುವುದರ ಮೂಲಕ ವೈಜ್ಞಾನಿಕ ಮಾನಶಾಸ್ತ್ರೀಯ ಸಂಶೋಧನೆಗಳಿಗೆ  ಚಾಲನೆ ಶಕ್ತಿಯಾದರು. ಬುಡಕಟ್ಟು ಅಧ್ಯಯನವು ಒಂದು ಪ್ರದೇಶ ಒಂದು ನಿರ್ದಿಷ್ಟ ಜನಾಂಗ ಅಥವಾ ಆದಿವಾಸಿಗಳ ಸಂಸ್ಕೃತಿಯನ್ನು ತಿಳಿಸುವಲ್ಲಿ ಬಹಳಷ್ಟು ಉಪಯುಕ್ತವಾಗಿದೆ. ಈ ರೀತಿಯ ಅಧ್ಯಯನವೂ ನಿಕರವಾಗಿ ಯಾವಾಗ ಎಂದು ಆರಂಭವಾಯಿತು ಎಂದು ಹೇಳಲಾಗದಿದ್ದರೂ ಈ ಕ್ಷೇತ್ರದಲ್ಲಿ ಕೆಲಸ ಮಾಡಿದ ವಿದ್ವಾಂಸರುಗಳ ಸಂಖ್ಯೆ ವಿರಳ. ರಾಷ್ಟ್ರ ಹಾಗೂ ರಾಜ್ಯದಾದ್ಯಂತ ಬುಡಕಟ್ಟು ಜನಾಂಗಗಳು ಅಧ್ಯಯನವು ವಿವಿಧ ಕೇಂದ್ರಗಳ ವಿದ್ವಾಂಸರುಗಳ ಕುತೂಹಲವನ್ನು ಕೆರಳಿಸಿ ವಿವಿಧ ಅಧ್ಯಯನಗಳ ಹಿನ್ನೆಲೆಯಲ್ಲಿ ಬುಡಕಟ್ಟು ಅಧ್ಯಯನ ನಡೆಯುವಂತೆ ಪ್ರೇರಪಿಸಿರುವುದು ಗಮನಾರ್ಹ ಅಂಶವಾಗಿದೆ. ಬುಡಕಟ್ಟು ಸಂಸ್ಕೃತಿಯ ವೈವಿದ್ಯತೆಯನ್ನು, ಸಾರ್ವತ್ರಿಕತೆಯನ್ನು, ಸಾಮಾಜಿಕ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಗುರುತಿಸುವಲ್ಲಿ ಈ ಅಧ್ಯಯನವು ಅವಶ್ಯಕವೆನಿಸಿದೆ. ಈಗಾಗಲೇ ಇಂತಹ ವಿವಿಧ ಕ್ಷೇತ್ರಗಳಲ್ಲಿ ಅಲ್ಪ ಸಂಖ್ಯೆಯ ವಿದ್ವಾಂಸರುಗಳು ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ಕಾರ್ಯನಿರ್ವಹಿಸಿದ್ದಾರೆ. ಉದಾ: ಹೆಚ್. ವಿ. ನಂಜುಂಡಯ್ಯ, ಕೆ.ಎಲ್. ಅನಂತಕೃಷ್ಣಅಯ್ಯರ್, ಎಲ್ವಿನ್ ಅಯ್ಯಪನ್, ಮಾಲಿನೋಸ್ಕಿ, ರೂತ್ಬೆನಿಡಿಕ್, ಎಂ.ಎನ್. ಶ್ರೀನಿವಾಸ್, ಕೆ.ಜಿ.ಗುರುಮೂರ್ತಿ, ಮುಂತಾದವರು ಈ ರೀತಿಯ ಬುಡಕಟ್ಟು ಸಂಸ್ಕೃತಿಯನ್ನು ವಿವರಿಸುವಲ್ಲಿ ದೇಶದಾದ್ಯಂತ ವಿದ್ವಾಂಸರುಗಳ ನಡುವೆ ಒಂದು ಹೋರಾಟವೇ ನಡೆದಿದೆ ಎಂದರೆ ತಪ್ಪಾಗಲಾರದು. ಆಸಕ್ತಿಯುಳ್ಳ ಅನೇಕ ವಿದ್ವಾಂಸರುಗಳು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಇಲ್ಲವೇ ವಿಶ್ವವಿದ್ಯಾಲಯಗಳ ಅನುಧಾನವನ್ನು ಪಡೆಯುವುದರ ಮೂಲಕ ಬುಡಕಟ್ಟು ಅಧ್ಯಯನಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಬುಡಕಟ್ಟು ಅಧ್ಯಯನವು ಸುಮಾರು ೧೯ನೇ ಶತಮಾನದಲ್ಲಿ ಆರಂಭವಾಗಿದೆ ಎಂದು ತಿಳಿಯುತ್ತದೆ.  ಮೈಸೂರು ರಾಜ್ಯದಲ್ಲಿ ಮಾನವ ಕುಲಶಾಸ್ತ್ರ  ಬುಡಕಟ್ಟು ಅಧ್ಯಯಕ್ಕೆ ಮೈಸೂರು ರಾಜ್ಯದ ಅರಸರಿಂದ ಇದಕ್ಕೆ ಮತ್ತಷ್ಟು ಉತ್ತೇಜನ ದೊರೆಯಿತು. ನಂತರ ಎಲ್.ಕೆ.ಅನಂತಕೃಷ್ಣ ಅಯ್ಯರ್ ಅವರು ಮರು ಪರಿಶೀಲನೆ ನಡೆಸಿ ಬುಡಕಟ್ಟುಗಳ ಜನಾಂಗದ ವಿವರಣಾತ್ಮಕ ಅಧ್ಯಯನಕ್ಕೆ ತಳಹದಿಯನ್ನು ಹಾಕಿ ಪ್ರಾಚೀನ ಆದಿವಾಸಿಗಳೊಂದಿಗೆ ಹೊಸ ಇನ್ನಿತರ ಬುಡಕಟ್ಟು ಜನಾಂಗಗಳ ಸಮಗ್ರ ಸಂಸ್ಕೃತಿಯನ್ನು ಪರಿಚಯ ಮಾಡುವಲ್ಲಿ ಸಫಲರಾದರು. ಭಾರತೀಯ ಮಾನವ ಶಾಸ್ತ್ರೀಯ ಪರಿವೀಕ್ಷಣ ಸಂಸ್ಥೆ ಬುಡಕಟ್ಟು ಜನರ ಅಧ್ಯಯನದಲ್ಲಿ ಹಲವಾರು ಮಾದರಿಯ ಅಧ್ಯಯನಗಳನ್ನು ಕೈಗೊಂಡು ಆದಿವಾಸಿಗಳ ಸಂಸ್ಕೃತಿಯ ವಿವಿಧ ಮುಖಗಳ ಪರಿಚಯ ಮಾಡುವಲ್ಲಿ ಯಶಸ್ವಿಯಾಗಿದೆ. ಪ್ರತಿಯೊಂದು ಬುಡಕಟ್ಟು  ಸಮುದಾಯವು ತನ್ನದೇಯಾದ ಸಾಂಸ್ಕೃತಿಕ ಪರಂಪರೆಯನ್ನು ಕಟ್ಟಿ ಕೊಂಡಿರುತ್ತದೆ.  ಇಂತಹ ಸಾಸ್ಕೃತಿಕ ಪರಂಪರೆಯ ನಿರಂತರವಾಗಿ ಚಲನೆಯಲ್ಲಿರುವುದು ವಾಸ್ತವದ ಸಂಗತಿಯಾಗಿದೆ. ಸಂಸ್ಕೃತಿಯ ಬದುಕಿನ ಎಲ್ಲಾ ವ್ಯವಸ್ಥೆಯ ಆಧಾರಗಳಾದ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ, ರಾಜಕೀಯ ಮುಂತಾದ ವ್ಯವಸ್ಥೆಗಳೆಲ್ಲವು ಸಂಸ್ಕೃತಿಯಲ್ಲಿಯೇ ಸಮಾಜದ ಪರಿವರ್ತನೆಯನ್ನು  ಕಾಣಬಹುದು. ಹೀಗೆ ಬುಡಕಟ್ಟು ಸಮುದಾಯಗಳು ಆಧುನಿಕತೆಯ ಕಡೆಗೆ ತೀವ್ರಗತಿಯಲ್ಲಿ ಬದಲಾಗುತ್ತಿರುವುದನ್ನು ಗಮನಿಸಬಹುದಾಗಿದೆ.

ದಕ್ಷಿಣ ಕರ್ನಾಟಕದ ಪ್ರಧಾನ ಬುಡಕಟ್ಟುಗಳೆಂದರೆ ಜೇನುಕುರುಬ, ಕಾಡುಕುರುಬ ಯುವರುವರು, ಹಕ್ಕಿ-ಪಿಕ್ಕಿ, ಸೋಲಿಗರು, ಹಸಲರು, ಕಾಡುಗೊಲ್ಲರು ಕುಡಿಯರು, ಮಲೆಕುಡಿಯರು ಈ ಬುಡಕಟ್ಟುಗಳ ಜನರ ಜೀವನ ಪದ್ದತಿ ಜನಸಂಖ್ಯೆ  ಸಾಮಾಜಿಕ ವ್ಯವಸ್ಥೆ, ಭಾಷೆ ಹಾಗೂ ಸಾಮಾಜಿಕ ಸಾಂಸ್ಕೃತಿಕ ಪರಿವರ್ತನೆ ಇತ್ಯಾದಿಯನ್ನು ಒಳಗೊಂಡಿರುತ್ತದೆ. ೧೯೮೮ರಲ್ಲಿ ಹೆಚ್.ಡಿ. ಕೋಟೆ ಅರಣ್ಯ ಪ್ರದೇಶದಲ್ಲಿ ಕಂಡುಬರುವ ಬುಡಕಟ್ಟುಗಳನ್ನು ಕುರಿತು ಒಂದು ವರದಿಯನ್ನು ಎನ್. ನಂಜುಂಡರಾವ್ ಅವರು ನೀಡಿದ್ದಾರೆ. ಈ ಪ್ರದೇಶದಲ್ಲಿ ಕಂಡುಬರುವ ಕಾಡುಕುರುಬ, ಜೇನುಕುರುಬ, ಬುಡಕಟ್ಟುಗಳ ಸಮಾಜಗಳು ಆರ್ಥಿಕ, ಸಾಮಾಜಿಕ  ಸ್ಥಾನಮಾನ ಸೌಲಭ್ಯಗಳನ್ನು ದಾಖಲಿಸಿದ್ದಾರೆ. ಜನಪದ ಟ್ರಸ್ಟಿಯಿಂದ ಕಾಡುಕುರುಬರು ಸಾಕ್ಷಚಿತ್ರ ಹಾಗೂ ಡಾ. ಹಿ.ಚಿ. ಬೋರಲಿಂಗಯ್ಯ ಅವರ “ಗಿರಿಜನ ನಾಡಿಗೆ ಪ್ರಮಾಣ” ಕೃತಿಯಲ್ಲಿ ಕರ್ನಾಟಕ ಬುಡಕಟ್ಟುಗಳನ್ನು ಕುರಿತಂತೆ ಒಂದು ಸಮೀಕ್ಷೆಯನ್ನು ನೀಡಿರುವುದು ಕಂಡುಬರುತ್ತದೆ. ಇದಲ್ಲದೆ ಸಮಾಜಕಲ್ಯಾಣ ಇಲಾಖೆಯವರು ಈ ಬುಡಕಟ್ಟು ಸಮಾಜಗಳ ಶೈಕ್ಷಣಿಕ ಜಾಗ್ರತೆಯನ್ನು ಮೂಡಿಸುವುದು ಅವರ  ಪುನರ್ವಸತಿ ನಿರ್ಮಾಣಕ್ಕಾಗಿ ಹಾಗೂ ಇವರಲ್ಲಿ ನಾಗರೀಕರ ಸಂಪರ್ಕವನ್ನು ಬೆಳೆಸುವಲ್ಲಿ ದೊಡ್ಡ ಹೋರಾಟವನ್ನು ಮಾಡಿದ್ದಾರೆ. ಇದರ ಜೊತೆಗೆ ಅನೇಕ ಸ್ವಯಂ ಸೇವೆ  ಸಂಸ್ಥೆಗಳು ಈ ಬುಡಕಟ್ಟು ಅಭಿವೃದ್ದಿ ಯೋಜನೆಯನ್ನು ರೂಪಿಸಿಕೊಂಡು ಕಾರ್ಯ ನಿರತವಾಗಿರುವ ನಿರ್ದೇಶನಗಳಿವೆ. ನಗರಗಳು ಹಾಗೂ ಅರಣ್ಯ ಪ್ರದೇಶಗಳ ಸುತ್ತ ಮುತ್ತಲಿನ ಹೆಚ್ಚಿನಸಂಖ್ಯೆಯಲ್ಲಿ ನೆಲೆಸಿರುವುದು ಕಂಡುಬರುತ್ತದೆ. ಇವರು ಈ ಕಾಡಿನಲ್ಲಿಯೇ ಇರುವ ಸ್ವಚ್ಛಂದ ಬದುಕನ್ನು ಇಲ್ಲಿಯವರೆಗೆ ಸಾಗಿಸುತ್ತ ಬಂದಿದ್ದಾರೆ. ಇತ್ತೇಚಿನ ಈ ಬುಡಕಟ್ಟುಗಳ ಜನಸಂಖ್ಯೆ ಗಣನೀಯವಾಗಿ ಬೆಳೆದಿದೆ. ಇವರು ಒಂದೇ ಭೌಗೀಳಿಕ ಪರಿಸರದಲ್ಲಿ ಇದ್ದು ಕೊಂಡೆ ವಿಭಿನ್ನ ರೀತಿಯ ಬದುಕನ್ನು ಸಾಗಿಸುತ್ತಿದ್ದಾರೆ. ನಾವು ಇವರು ವಾಸಿಸುವ ಪ್ರದೇಶಗಳನ್ನು ಹಾಡಿಗಳೆಂದು ಕರೆಯುತ್ತ ಒಂದೊಂದು ಹಾಡಿನಲ್ಲಿ ಕನಿಷ್ಠ ೧೫ ರಿಂದ ೨೦ ಕುಟುಂಬಗಳು ಕೆಲವು ಬಾರಿ ಅದಕ್ಕಿಂತ ಹೆಚ್ಚಿನ ಸಂಖ್ಯೆಯ ಕುಟುಂಬಗಳು ಕಂಡು ಬರುತ್ತವೆ. ಇವರು ಸಹಜವಾಗಿಯೇ ಕಾಡಿನಲ್ಲಿ ದೊರೆಯುವ ಬಿದಿರಿನ ಹಲ್ಲು ತೆಂಗಿನ ಗರಿಗಳು ಮುಂತಾದ ವಸ್ತುಗಳನ್ನು ಬಳಸಿಕೊಂಡು ಇದರ ಜೊತೆಗೆ ಮಣ್ಣು ನಾರಗಳನ್ನು ಬಳಸಿ ಗುಡಿಸಲಗಳನ್ನು ನಿರ್ಮಿಸಿಕೊಂಡಿರುವುದು ಕಾಣಬಹುದಾಗಿದೆ. ಇತ್ತೀಚಿಗೆ  ಸರಕಾರದ  ವತಿಯಿಂದ ಆಶ್ರಯ ಯೋಜನೆಯಡಿ ಅಂಚಿನ ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ.

ಬಹಳ ಸರಳ ಜೀವಿಗಳು, ಊಟೋಪಚಾರ, ಉಡುಗೆ, ತೊಡುಗೆಗಳಲ್ಲಿ ಅಥವಾ ಇನ್ನು ಬೇರೆ ವಿಚಾರದಲ್ಲಿಯಾಗಲಿ ಅಗತ್ಯಕ್ಕಿಂತ ಹೆಚ್ಚು ವಸ್ತುಗಳನ್ನು ಬಳಕೆ ಮಾಡುವುದಿಲ್ಲ. ಇತ್ತೀಚಿಗೆ ಇವರು ಅಲ್ಯುಮಿನಿಯಂ, ಸ್ಟೀಲ್, ಮಣ್ಣಿನ ಮಡಿಕೆಗಳು ಮಿತವಾದ ಬಳಕೆಯಲ್ಲಿವೆ. ಈ ಬುಡಕಟ್ಟು ಸಮಾಜದಲ್ಲಿ ಹೊಸದಾಗಿ ಮದುವೆಯಾದ ನವ ದಂಪತಿಗಳು ಬೇರೊಂದು ಸಂಸಾರ ಮಾಡಿಕೊಳ್ಳುವುದು ಬಹಳ  ಸರಳ ಹಾಗೂ ಸಹಜವಾದ ವಿಚಾರವಾಗಿದೆ. ಇದಕ್ಕೆ ಇವರಲ್ಲಿ ಯಾವ ಅಡೆತಡೆಗಳು ಇರುವುದಿಲ್ಲ. ಈ ಬುಡಕಟ್ಟುಗಳು ತಮ್ಮ ತಮ್ಮ ಗುಂಪಿಗೆ ಸಂಬಂಧಿಸಿದಂತೆ ಒಬ್ಬ ಯಜಮಾನ  ಇರುತ್ತಾನೆ. ಇವರಲ್ಲಿ ಕೆನ್ನಲಾಡಿ ಕಾಡು ಕುರುಬರಲ್ಲಿ ಸತ್ಕಟ್ಟು ಎಂಬುವರು ಹಾಗೂ ಇತರೆ ಈ ಜನಾಂಗದ ಸಮಾಜದ ಪುರೋಹಿತ ಹಾಗೂ ಪೂಜಾರಿಯಂತೆ ಇರುತ್ತಾರೆ. ಯಾವುದೇ ಕಾರ್ಯಗಳು ಇವರ ಮುಂದಾಳತ್ವದಲ್ಲಿ ನಡೆಯಬೇಕು. ಎಲ್ಲವೂ ಇವನನ್ನೇ ಅವಲಂಬಿಸಿರುತ್ತಾರೆ. ಇತರರು ಯಾರೇ ಆದರೂ ಧಾರ್ಮಿಕ ಪದ್ಧತಿಗಳು ಆಚರಣೆಗಳು ಪೂಜಾ ವಿಧಾನಗಳು ಕಂಡುಬರುತ್ತವೆ. ಇವರ ಆರಾಧನೆಗಳು, ಸಂಪ್ರದಾಯಗಳು ರೂಢಿಯಲ್ಲಿವೆ.

ಇತ್ತೀಚೆಗೆ ಈ ಬುಡಕಟ್ಟುಗಳ, ಸಮಾಜಗಳ ಜನರ ಸ್ಥಿತಿಗತಿಗಳು ಇತರರ ಸ್ಥಿತಿಗಳಿಗಿಂತ ಹಿಂದುಳಿದಿವೆ. ಇವರು ಮುಖ್ಯವಾಗಿ ಬೇಟೆಗಾರಿಕೆ, ಕೃಷಿಕಾರ್ಮಿಕ, ಕೂಲಿಕಾರ್ಮಿಕ ಹಾಗೂ ಕೃಷಿಯನ್ನು ಅವಲಂಬಿಸಿದ್ದಾರೆ. ಸರಕಾರದ ಪುನರ್ವಸತಿ ಕಾರ್ಯಕ್ರಮಗಳು ಇತರ ಜನಸಂಪರ್ಕ ವಾಹನ ಸೌಲಭ್ಯ ಅರಣ್ಯ ಇಲಾಖೆ, ನೌಕರಿ ಹೀಗೆ ಇವೆಲ್ಲವೂಗಳು ಪ್ರಭಾವಕ್ಕೆ ಒಳಗಾಗಿ ಅವರ ಆಚರಣೆಗಳು ನಂಬಿಕೆಗಳು, ಪೂಜಾ ವಿಧಿವಿಧಾನಗಳು, ಉಡುಗೆ ತೊಡುಗೆಗಳು, ಊಟೋಪಚಾರಗಳು ಹಾಗೂ ಹೊಸ ಹೊಸ ವಿಚಾರಗಳನ್ನು ಇವರು ಅಳವಡಿಸಿಕೊಂಡು ಬದಲಾವಣೆಗೊಳ್ಳುತ್ತಿದ್ದಾರೆ. ಈ ಬುಡಕಟ್ಟು ಜನಾಂಗಗಳ ಅಭಿವೃದ್ದಿಗಾಗಿ ಸರ್ಕಾರ ಹಾಗೂ ಸರ್ಕಾರೇತರ ಸಹಕಾರ ಸಂಘ ಸಂಸ್ಥೆಗಳು ಹಲವಾರು ಕಾರ್ತಕ್ರಮಗಳನ್ನು ಹಮ್ಮಿಕೊಂಡವು. ಇವರ ಜೀವನ ಸುಧಾರಣೆಗಾಗಿ ಶ್ರಮಿಸತೊಡಗಿದ್ದಾರೆ. ಆದಿವಾಸಿ ಜನಾಂಗಗಳಿಗಾಗಿ ರೂಪಿಸಿರುವ ಹಲವರು ಕಲ್ಯಾಣ  ಕಾರ್ಯಕ್ರಮಗಳು ಶಿಕ್ಷಣ ಕ್ಷೇತ್ರದಲ್ಲಿ, ಆರೋಗ್ಯ ಮತ್ತು ನೈರ್ಮಲ್ಯ ಹಾಗೂ ಆರ್ಥಿಕ ವೆಚ್ಚವನ್ನು ಆದಿವಾಸಿ  ಸಮುದಾಯಗಳ ರೀತಿ – ನೀತಿಗಳಲ್ಲಿ ಸುಧಾರಣೆ ಕಂಡು ಜೀವನಕ್ಕೊಂದು ಸ್ಥಿರತೆಯಿರುವಲ್ಲಿ ಹಾಗೂ ಇತರ ನಾಗರಿಕ ಸಮಾಜದವರೊಡನೆ ಹೊಂದಿಕೊಳ್ಳುತ್ತಿರುವುದರಲ್ಲಿ ಸಂದೇಹವಿಲ್ಲ. ಈ ಸಮುದಾಯದವರಿಗೆ ಮಕ್ಕಳಿಗಾಗಿ ಉಚಿತ ಶಿಕ್ಷಣ, ಗಿರಿಜನ ಆಶ್ರಮ ಶಾಲೆಗಳು, ಸ್ವಯಂ ಉದ್ಯೋಗದಲ್ಲಿ ತೊಡಗಿಕೊಳ್ಳುವ ಸಲುವಾಗಿ ಸ್ವಯಂ ಉದ್ಯೋಗ ತರಬೇತಿ ಕಾರ್ಯಕ್ರಮಗಳಡಿಯಲ್ಲಿ ತರಬೇತಿ ಪಡೆದು ಸ್ವಯಂ ಉದ್ಯೋಗಕ್ಕಾಗಿ ಸಾಲ ಸೌಲಭ್ಯಗಳ ಬೇಸಾಯ ಮಾಡುವವರಿಗೆ ಕೃಷಿ ಸೌಲಭ್ಯಗಳು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹಲವಾರು ಸೌಲಭ್ಯಗಳು ಸವಲತ್ತುಗಳು ಸರಿಯಾದ ರೀತಿಯಲ್ಲಿ ದೊರೆಯದೆ ಸಮಸ್ಯೆಗಳುಂಟಾದ ಸಮಯದಲ್ಲಿ ರಸ್ತೆಗೆ ಬಂದು ಹೋರಾಟಮಾಡಲಿ ಇಂದು ಹಲವಾರು ಗಿರಿಜನ ಹಿತರಕ್ಷಣ ಸಂಘ ಸಂಸ್ಥೆಗಳನ್ನು ನಿರ್ಮಿಸಿಕೊಂಡು ಎಲ್ಲರೂ ಸಂಘಟಿಕರಾಗಿ ಹೋರಾಡುತ್ತಿರುವುದು ಮಹತ್ವದ ವಿಷಯ. ಈ ಸಮುದಾಯದ ಜನರು ಸಹ ಮತ ಮೂಲನೆಲೆಯಾದ ಅರಣ್ಯಗಳು ಶೀಘ್ರಗತಿಯಲ್ಲಿ ನಾಶವಾಗುತ್ತಿರುವುದರಿಂದ ತಮ್ಮ ಜೀವನ ಕ್ರಮವನ್ನು ಪರಿವರ್ತನೆ ಮಾಡಿಕೊಳ್ಳುವುದು ಅನಿವಾರ್ಯವಾಗಿ ನಾಗರಿಕತೆ  ಕಡೆಗೆ ಪಲಾಯನ ಗೊಳ್ಳುತ್ತಿರುವುದು ತಮ್ಮ ಕಲಾ ಪ್ರತಿಭೆಗಳನ್ನು ಪ್ರದರ್ಶಿಸುವ ಧೈರ್ಯ ಮತ್ತು ವಿಶ್ವಾಸವನ್ನು ತೋರ್ಪಡಿಸುತ್ತಿದ್ದಾರೆ.

ವಿಶಿಷ್ಟವಾದ ಸಂಸ್ಕೃತಿ ಪರಂಪರೆಯುಳ್ಳ ಬುಡಕಟ್ಟು ಸಮುದಾಯಗಳು ಇತ್ತೀಚಿಗೆ ಗಮನಾರ್ಹವಾದ ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಪರಿವರ್ತನೆಗೊಳ್ಳುತ್ತಿದ್ದು, ಅರ್ಥಹೀನವಾಗಿರುವಂತಹ ಅನಿಷ್ಟಪದ್ದತಿಗಳ ಆಚರಣೆಗಳು, ರೂಢಿ ಸಂಪ್ರದಾಯಗಳು ಮೂಢನಂಬಿಕೆಗಳನ್ನು ಬಿಟ್ಟು ಇದರ ಜೊತೆಗೆ ಕಾಡಿನ ಸಂಸ್ಕೃತಿಯನ್ನು ತೊರೆದು ನಾಡಿನ ಸಂಸ್ಕೃತಿಯ ಕಡೆಗೆ ಪಯಣಿಸುತ್ತಿವೆ.

* * *