ಬುಡಕಟ್ಟುಗಳ ಬಗ್ಗೆ ಅಧ್ಯಯನ ಆರಂಭಿಸುವಲ್ಲಿ ಭಾರತದ ಮಟ್ಟಿಗೆ ಬ್ರಿಟೀಷರೆ ಮೊದಲಿಗರೆನ್ನಬಹುದು. ಅಧಿಕಾರಿಗಳು, ಕ್ರೈಸ್ತ ಪಾದ್ರಿಗಳು ಕ್ರಮವಾಗಿ ಆಡಳಿತ ಹಾಗೂ ಧರ್ಮಪ್ರಚಾರಗಳಿಗೆ ಅನುಕೂಲವಾಗುವಂತೆ ಬುಡಕಟ್ಟುಗಳ ಅಧ್ಯಯನ ನಡೆಸಿದ್ದಾರೆ. ಮತ್ತು ಮಾನವಿಯತೆಯ ಆಧಾರದಿಂದ ಅಧ್ಯಯನ ನಡೆಸಿದವರು ವೆರಿಯಕ್ ಎಲ್ವಿನರಂಥವರು ಬ್ರಿಟಿಷರು ‘ಟ್ರ್ಯೆಬ’ ಎಂಬ ಪದದಿಂದ ಗುರುತಿಸಿದರೆ, ಸ್ವಾತಂತ್ರ್ಯ ನಂತರ ದೇಶಿ ವಿದ್ವಾಂಸರು ಗಿರಿಜನರು ಆಧಿವಾಸಿಗಳು ಬುಡಕಟ್ಟುಗಳು ಎಂಬ ಹೆಸರುಗಳಿಂದ ಕರೆದಿದ್ದಾರೆ. ಹೆಸರೆ ಸೂಚಿಸುವಂತೆ ಮನುಕುಲದ ಮೂಲ ಪುರುಷರು ಗಿರಿಗಳಲ್ಲಿ ವಾಸ ಮಾಡುವವರು, ಬುಡಕಟ್ಟು ಜನ ಎನಿಸಿ ಕೊಮಡರು. ಬುಡ ಎಂದರೆ ಮೂಲ, ಕಟ್ಟು ಎಂದರೆ ಸಾಂಸ್ಕೃತಿ ಮೌಲ್ಯಗಳ ಕಟ್ಟು ಕಟ್ಟಳೆ ಆಚರಣೆ.

ಕರ್ನಾಟಕದಲ್ಲಿ ಸಂವಿಧಾನಬದ್ಧವಾಗಿ ಒಟ್ಟು ೫೦ ಬುಡಕಟ್ಟುಗಳಿವೆ. ಉಳಿದ ಕೆಲವು ಬುಡಕಟ್ಟುಗಳು-ಅಲೇಮಾರಿ ಬುಡಕಟ್ಟುಗಳು (Nomadic Tribes) ಅರೆ- ಅಲೆಮಾರಿ ಬುಡಕಟ್ಟುಗಳು Semi-Nomadic Tribe) ಎಂದು ಕರೆಯಲಾಗುತ್ತದೆ. ಭೌಗೋಳಿಕ ಸನ್ನಿವೇಶಗಳ ಮೇಲೆ ಮೂರು ಪ್ರತ್ಯೇಕ ವಲಯಗಳನ್ನಾಗಿ ವಿಂಗಡಿಸಬಹುದು.

೧. ಈಶಾನ್ಯ ವಲಯ (ದ್ರಾವಿಡ ಭಾಷಾ ಗುಂಪು-ಭಾರತದ ಈಶ್ಯಾನ್ಯಕ್ಕಿರುವ ತಿಸ್ತು ಕೊಳ್ಳ ಯಮುನಾ, ಪದ್ಮ, ಬ್ರಹ್ಮಪುತ್ರ, ನದಿಗಳ ಪ್ರದೇಶ ಆವರಿಸಿದೆ. ಉದಾ: ನಾಗಾ, ಹಾಸಿ, ಅಕಾ, ಲಿಂಬು, ಕಚಾರಿ, ಗ್ಯಾರೋ, ಕುಕುಲುಷಾಯ್, ಬುರಂಗ, ಚಾಕಮಾ, ನೇಯ್ಗೆಯಲ್ಲಿ ನಿಪುಣರು)

೨. ಮಥ್ಯ ವಲಯ (ಆಸ್ಟ್ರಿಕ್ ಭಾಷಾ ಗುಂಪಿಗೆ) ಗಂಗಾ ನದಿ ಬಯಲು ಪ್ರದೇಶದಿಂದ ಕೃಷ್ಣಾ ನದಿ ಪ್ರದೇಶದವರೆಗೆ ಉದಾ: ಭೂಮಿಯಾ, ಬೈಗಾ, ಬಿಲ್ಲ, ಬಿರೋರ, ಗೊಡೆ, ಹೂ ಮುಂಡಾ ಸಂತಾಳ ಸಂಚಾರಿ ಬೇಸಾಯಗಾರರು)

೩. ದಕ್ಷಿಣ ವಲಯ (ಚೀನಿ ಟಿಬೆಟ ಭಾಷೆಗೆ ಸೇರಿದವ) ಉದಾ: ತೋಡಾ, ಬಡಗಮ ಬೆಂಚು, ಕಾಡಾರ, ಸೋಲಿಗ ಕಾಡು ಕುರುಬ, ಉರುಲಿ, ಕನಿಕರ್, ಅಂಡಮಾನ ನಿಕೋಬಾರ ದ್ವೀಪದಲ್ಲಿ ಅಂಗೆ ಜಾರುವ ಎಂಬ ಆದಿವಾಸಿಗಳಿದ್ದಾರೆ.

ಬುಡಕಟ್ಟು ಜನರ ಲಕ್ಷಣಗಳು

೧. ಪ್ರತ್ಯೇಕ ಸಂಸ್ಕೃತಿ.
೨. ರಕ್ತ ಸಂಬಂಧದ ಅತಿಯಾದ ಅವಲಂಬನೆ.
೩. ಬೇರೆಯವರನ್ನು ಸಂದೇಹದಿಂದ ನೋಡುವ ದೃಷ್ಠಿ.
೪. ದೈವದ ವಿಶಿಷ್ಟ ಕಲ್ಪನೆ ಮತ್ತು ಭಕ್ತಿ.
೫. ಅತಿಯಾದ ಪಾವಿತ್ಯ್ರ.
೬. ಪ್ರತ್ಯೇಕ ಭಾಷೆ
೭. ಕಾಡಿನಲ್ಲಿ ಬದುಕು.

ಶೈಕ್ಷಣಿಕವಾಗಿ ಸ್ವಾತಂತ್ರ್ಯಕ್ಕೂ ಮುನ್ನ ಪರಿಶಿಷ್ಟ ಬುಡಕಟ್ಟುಗಳ ಜನರ ವಿದ್ಯಾಭ್ಯಾಸಕ್ಕೆ ಬ್ರಿಟೀಷ್ ಸರಕಾರ ಹೆಚ್ಚಿನ ಗಮನವನ್ನು ನೀಡಿರಲಿಲ್ಲ. ಕೇವಲ ಕ್ರೈಸ್ತರ, ಮಿಶಿನರಿಗಳು ಬುಡಕಟ್ಟಿನ ಜನರು ವಾಸಿಸುತ್ತಿರುವ ಪ್ರದೇಶಗಳಲ್ಲಿ ಶಾಲೆಗಳನ್ನು ತೆರೆದು ಬುಡಕಟ್ಟು ಮಕ್ಕಳಿಗೆ ಶಿಕ್ಷಣ ನೀಡುವುದರ ಜೊತೆಗೆ ಆರ್ಥಿಕ ಮತ್ತು ಸಾಮಾಜಿಕ ಸೌಲಭ್ಯಗಳನ್ನು ಒದಗಿಸಿದರು. ಆ ಮೂಲಕ ಅವರು ಕ್ರೈಸ್ತ ಧರ್ಮ ಪ್ರಚಾರ ಮಾಡಿದರು. ಆದ್ದರಿಂದ ಕೆಲವು ಬುಡಕಟ್ಟಿನ ಗುಂಪುಗಳು ಕ್ರೈಸ್ತ ಧರ್ಮಾವಲಂಬಿಗಳಾಗಿದ್ದರು. ಉದಾ: ಉತ್ತರ ಈಶಾನ್ಯ ರಾಜ್ಯಗಳಲ್ಲಿ  ವಾಸಿಸುತ್ತಿರುವ ಮಿಜು, ಚಿರು, ಖಾಸಿ ಮುಂತಾದ ಬುಡಕಟ್ಟುಗಳು ಕ್ರೈಸ್ತ ಧರ್ಮಕ್ಕೆ ಮತಾಂತರ ಗೊಂಡವರಲ್ಲದೆ ಮಿಶಿನರಿಗಳು ನೀಡಿದ ಶೈಕ್ಷಣಿಕ ಸೌಲಭ್ಯದಿಂದ ಅನೇಕರು ವಿದ್ಯಾವಂತರಾದರು.

ಬುಡಕಟ್ಟು ಜನರ ಸರ್ವತೋಮುಖ ಅಭಿವೃದ್ದಿಗೆ ಭಾರತ ಸರಕಾರ ಅನೇಕ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸಿದೆ. ಅದರಲ್ಲಿ ಶೈಕ್ಷಣಿಕ ಸೌಲಭ್ಯಗಳೆಂದರೆ ಉಚಿತ & ಕಡ್ಡಾಯ ಪ್ರಾಥಮಿಕ ಶಿಕ್ಷಣಜಾರಿ ಆ ಮಕ್ಕಳು ವಿದ್ಯಾಭ್ಯಾಸ ಪಡೆಯುವುದು ಅವರ ಹಕ್ಕು ಎಂಬುದನ್ನು ಸಂವಿಧಾನದಲ್ಲಿ ಸೇರಿಸಲಾಯಿತು. ಶಾಲೆಗೆ ಕಳಿಹಿಸುವಂತೆ ತಂದೆ ತಾಯಿಗಳಿಗೆ ಕ್ರಮ ಕೈಗೊಳ್ಳುವುದಾಗಿ ಸರ್ಕಾರ ಘೋಷಿಸಿವೆ.

ಬುಡಕಟ್ಟಿನ ಮಕ್ಕಳಿಗೆ ಶಾಲೆಯಲ್ಲಿ ಮಧ್ಯಾಹ್ನದ ಊಟ, ಉಚಿತ ಬಟ್ಟೆ, ಪುಸ್ತಕ ವಿತರಣೆ ವಿದ್ಯಾರ್ಥಿ ವೇತನ, ವಿದ್ಯಾರ್ಥಿ ನಿಲಯ, ಆಶ್ರಮ ಶಾಲೆಗಳು, ಉದ್ಯೋಗ ತಂತ್ರಜ್ಞಾನ ತರಬೇತಿ ಕೇಂದ್ರಗಳನ್ನು ತೆರೆದಿದೆ. ಎಲ್ಲ ಶಾಲಾ ಕಾಲೇಜು ಉನ್ನತ ವ್ಯಾಸಂಗ ವೃತ್ತಿಪರ ಕೋರ್ಸುಗಳಲ್ಲಿಯೂ ಅವರಿಗೆ ಮೀಸಲಾತಿಯನ್ನು ನೀಡಿದೆ. ಉನ್ನತ ಹುದ್ದೆಗಳಿಗೆ ಸೇರಬಯಸುವ ವಿದ್ಯಾರ್ಥಿಗಳಿಗೆ ಉಚಿತ ತರಬೇತಿಯನ್ನು ನೀಡಿದೆ. ಸರ್ಕಾರ ಹಣಕಾಸು ಮತ್ತು ಹಣಕಾಸೇತರ ಸೌಲಭ್ಯಗಳನ್ನು ಒದಗಿಸಿದ್ದರಿಂದ ಅವರು ವಿದ್ಯಾವಂತರಾಗುತ್ತಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಅವರ ವಿಧ್ಯಾಭ್ಯಾಸ ಏರಿಕೆಯಾಗಿಲ್ಲ.

ಅಕ್ಷರಸ್ಥಾನ ಶೇಕಡವಾರು ಪ್ರಮಾಣ:

೧೯೬೧   – ೮.೫೩%
೧೯೭೧   – ೭೧.೩೦%
೧೯೮೧   – ೧೯.೩೫%
೧೯೯೧   – ೨೯.೬೦%
೨೦೦೧  – ೪೭.೧೦% ರಷ್ಟು ಮಾತ್ರ ಏರಿಕೆಯಾಗಿದೆ.

ಹಿಮಾಲಯಪರ್ವತ ಪ್ರದೇಶದ ಲೂಷಿಯ ಬುಡಕಟ್ಟಿನಲ್ಲಿ ೪೦%ರಷ್ಟು ಜನ ವಿದ್ಯಾವಂತರಿದ್ದಾರೆ. ರಾಜ್ಯವಾರು ಶಿಕ್ಷಣವನ್ನು ಗಮನಿಸಿದಾಗ ಆಂದ್ರಪ್ರದೇಶದಲ್ಲಿ ೪% ರಷ್ಟು ಮಣಿಪೂರದಲ್ಲಿ ೨೭% ರಷ್ಟು, ಬುಡಕಟ್ಟಿನ ಜನರು ವಿದ್ಯಾವಂತರಾಗಿದ್ದಾರೆ. ಗುಜರಾತ್, ಕೇರಳ, ಮಹಾರಾಷ್ಟ್ರ, ರಾಜ್ಯಗಳಲ್ಲಿ ಬುಡಕಟ್ಟಿನ ವಿದ್ಯಾವಂತರ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದೆ. ಹಾಗೆಯೇ ಆಸಾಮಿನ ಮೀಜು, ಮಣಿಪುರದ ಚೇರು, ಮೇಘಾಲಯದ ಖಾಸಿ, ಕುಕಿಗಳಲಿ ವಿದ್ಯಾವಂತರ ಸಂಖ್ಯೆ ಹೆಚ್ಚಾಗಿದೆ.

“ದಿ ವೀವೇಕ ಟ್ರೈಬಲ ಸೆಂಟರ ಫಾರ್ ಲರ್ನಿಂಗ” ಎಂಬ ಶಾಲೆ ೧೯೮೯ರ ಜುಲೈನಲ್ಲಿ ಅಸ್ತಿತ್ವಕ್ಕೆ ಬಂತು. ಇದಕ್ಕೆ ವಿದೇಶಿ ಧನ ಸಹಾಯ ಅಮೇರಿಕಾ ಮತ್ತು ಜವಾನಿನಿಂದ ಬಂದರೆ ಈ ಕ್ಷೇತ್ರದಲ್ಲಿ ಕೆಲಸಮಾಡುತ್ತಿರುವ ಡ್ಯಾನಿಡಾ & ಮೈರಾಡಾ ಸಂಸ್ಥೆಗಳು, ಕೆನರಾಬ್ಯಾಂಕ್ ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿಗಳು ಧನ ಸಹಾಯ ನೀಡಿದ್ದಾರೆ. ಮೊದಲು ದನದ ಕೊಟ್ಟಿಗೆಯಲ್ಲಿ ಆರಂಭವಾದ ಶಾಲೆ, ಈಗ ಹೊಸಹಳ್ಳಿ ಸಮೀಪ ಒಂದು ವಸತಿ ಶಾಲೆಯಾಗಿ ರೂಪಗೊಂಡಿದೆ. ಕ್ರಿ.ಶ. ೧೯೯೧ ಜನೇವರಿಯಲ್ಲಿ ಕೇಂದ್ರ ಸರ್ಕಾರಗಳು ವಿವೇಕ ಸಂಸ್ಥೆಗೆ ನೀಡಿದ ಧನ ಸಹಾಯದ ಒಟ್ಟು ಮೊತ್ತ ೨೩ ಲಕ್ಷ ರೂಗಳು. ೧೯೯೪ರ ಡಿಸೆಂಬರ್‌ನಲ್ಲಿ ೧-೫ ನೇ ತರಗತಿಯವರೆಗಿನ ಮಕ್ಕಳು ಕಲಿಯುತ್ತಿದ್ದರು. ಬಾಲಕರು ಮತ್ತು ಬಾಲಕಿಯರಿಗೆ ಪ್ರತ್ಯೇಕವಾದ ಡಾರ್ಮಿಟರಿ ವಸತಿಯಿತ್ತು. ಮೈರಾಢ-ಫೆಡಿನಾ ವಿಕಾಸ ಮುಂತಾದ ಸ್ವಯಂ ಸೇವಾಸಂಸ್ಥೆಗಳ ಸೇವೆ ಶ್ಲಾಘನೀಯ. ಬ್ರಹ್ಮಗಿರಿ ಕಾಲೋನಿಯ ಬುಡಕಟ್ಟಿನವರು  ಶಾಲಾ ರಚನೆ ಮತ್ತು ಆರ್ಥಿಕ ಚಟುವಟಿಕೆಗಳಲ್ಲಿ ಮೈರಾಡ ಸಂಘಟನೆಯಿಂದಲೇ ಪ್ರಾರಂಭಗೊಂಡಿವೆ. ೧೪೦ ಕುಟುಂಬಗಳು ಶೈಕ್ಷಣಿಕ ಸೌಲಭ್ಯಗಳನ್ನು ಪಡೆದಿದ್ದು ೧೪೫ ಕುಟುಂಬಗಳು ವೈದ್ಯಕೀಯ ಆರೋಗ್ಯ ಅನುಕೂಲಗಳನ್ನು ಪಡೆದಿವೆ. ಇದುವರೆಗೆ ವೃತ್ತಿ  ತರಬೇತಿ ಪಡೆದಿರುವಂಥ ೨೭ ಕುಟುಂಬಗಳಲ್ಲಿ ನೇಯ್ಗೆಯಲ್ಲಿ ೩೦ ಕುಟುಂಬಗಳು, ಕೈಗಾರಿಕೆಯಲ್ಲಿ ೨ ಕುಟುಂಬಗಳು ತರಬೇತಿ ಹೊಂದಿವೆ.

ಡೀವ್ ಸಂಸ್ಥೆ ೧೯೮೦ ಸೆಪ್ಟಂಬರ್ ೧ ರಂದು ನೊಂದಾಯಿಸಲ್ಪಟ್ಟು, ಮೈಸೂರು ಮಂಗಳೂರು ರಸ್ತೆಯಲ್ಲಿ ೪೦ ಕಿ.ಮೀ ದೂರದಲ್ಲಿವೆ. ಇದರ ಸ್ಥಾಪಕರು ವೈದ್ಯಕೀಯ ಪಧವೀಧರ ಜೆರ್ರಿ ಪಾಯ್ಸ್ ಮತ್ತು ಶ್ರೀಮತಿ ಪಾಯ್ಸ್ ಕೂಡ ವೈದ್ಯಕೀಯ ಪಧವೀಧರೆ, ಇದರ ನಿರ್ದೇಶಕ ಮಂಡಳಿಯಲ್ಲಿ ೧೨ ಜನರು ಸದಸ್ಯರಿದ್ದಾರೆ. ಇಬ್ಬರು ಮಾತ್ರ ಜೇನು ಕುರುಬರಿಗೆ ಸೇರಿದವರು. ವಿ.ಜಿ.ಕೆ.ಕೆ. ಸಂಸ್ಥೆಯಲ್ಲಿ ಒಬ್ಬ ಸದಸ್ಯರನ್ನು ಬಿಟ್ಟು ಮಿಕ್ಕಂತೆ ಎಲ್ಲರೂ ಬುಡಕಟ್ಟು ಜನಾಂಗದವರೇ ಆಗಿದ್ದಾರೆ. ಒಬ್ಬರು ಮಹಿಳಾ ಸದಸ್ಯರಿದ್ದಾರೆ. ಇದು ಅವರ ಪ್ರಗತಿಗೆ ಸಾಕ್ಷಿಯಾಗಿದೆ. ಡೀಡ್ ಸಂಸ್ಥೆ ಬುಡಕಟ್ಟಿನವರಿಗೆ ಸಂವಿಧಾನಿಕ ಸವಲತ್ತುಗಳು ಕುರಿತು ತಿಳುವಳಿಕೆ ನೀಡುವುದರ ಜೊತೆಗೆ ಸರ್ಕಾರಿ ಅಧಿಕಾರಿಗಳು ಇದು ಸಫಲವಾಗಲು ಯಾವ ರೀತಿ ಪಾತ್ರವಹಿಸುತ್ತಾರೆಂಬುದನ್ನು ತಿಳಿಸಿರುತ್ತಾರೆ.

ಡೀಡ್ ಸಂಸ್ಥೆ ಶಿಕ್ಷಣ ರಂಗಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದು ಸಮುದಾಯ (ಮೂರು ತಾಲೂಕುಗಳಿಗೆ) ಕೇಂದ್ರಿತವಾದ ಅನೇಕ ಕಾರ್ಯ ಕ್ರಮಗಳನ್ನು ಹಮ್ಮಿಕೊಂಡಿದೆ. ಶಿಕ್ಷಣ ರಂಗಕ್ಕೆ ಹೆಚ್ಚಿನ ಆಧ್ಯತೆ ನೀಡಿದ್ದು ಗಣನೀಯ ಸಂಖ್ಯೆಯ ವಿದ್ಯಾರ್ಥಿಗಳನ್ನು ದೂರದ ಕೊಡುಗು ಸೇರಿದಂತೆ ಆಕರ್ಷಿಸಿದೆ. ಪ್ರಸ್ತುತ ಸೋಲಿಗ ಅಭಿವೃದ್ಧಿ ಸಂಘಗಳು ಅನ್ಯಾಯ ದೌರ್ಜನ್ಯಗಳ ವಿರುದ್ಧ ತಮ್ಮ ಅಭಿಪ್ರಾಯ ಹೇಳುವ ಪ್ರತಿಭಟಿಸುವ ಶಕ್ತಿಯನ್ನು ಪಡೆದುಕೊಂಡಿವೆ. ಡೀಡ್ ಸಂಸ್ಥೆ ಬುಡಕಟ್ಟು ಹಾಡುಗಳಲ್ಲಿ ಪ್ರಾರಂಭದಲ್ಲಿ ತಾತ್ಕಾಲಿಕ ಶಾಲೆಗಳನ್ನು ತೆರೆದು ವಯಸ್ಕರ ಶಿಕ್ಷಣವನ್ನು ನಡೆಸಿತು.

ಮೈಸೂರು ಜಿಲ್ಲೆಯ ಈ ಮೂರು ಮೇಲಿನ ಸ್ವಯಂ ಸೇವಾ ಸಂಸ್ಥೆಗಳ ಪ್ರಯತ್ನ ಶ್ಲಾಘನೀಯವಾಗಿದೆ. ಡೀಡ್ ಸಂಸ್ಥೆ ಶಿಕ್ಷಣ ಮತ್ತು ಸಮುದಾಯದ ಸಂಘಟನೆಯ ಮೂಲಕ ಅಭಿವೃದ್ಧಿ ಸಾಧಿಸಲು ಪ್ರಯತ್ನಿಸಿದೆ. ಹುನಸೂರು ತಾಲೂಕಿನ ಬುಡಕಟ್ಟು ಜನರು ಹೆಚ್ಚು ರಾಜಕೀಯ ಪ್ರಜ್ಞೆವುಳ್ಳವರಾಗಿದ್ದು, ಹಕ್ಕು ಕೇಳುವವರಾಗಿದ್ದಾರೆ. ಹಾಗಾಗಿ ಸಾಮಾಜಿಕ ರಾಜಕೀಯ ಆರ್ಥಿಕ, ನಾಯಕತ್ವ ಮತ್ತು ಧಾರ್ಮಿಕ ವಿಚಾರಗಳಲ್ಲಿ ನಂಬಿಕೆ, ಸಂಪ್ರದಾಯ ಆಚರಣೆಗಳಲ್ಲಿ ಬುಡಕಟ್ಟು ಸಂಸ್ಕೃತಿಯ ಸೇರಿದಂತೆ ಹಲವು ವಿಷಯಗಳಲ್ಲಿ ಪ್ರಜ್ಞೀಕರಣದ ಪ್ರಕ್ರಿಯೆ ಪ್ರಾರಂಭವಾಗಿರುವುದು ಸ್ಪಷ್ಟ. ಬುಡಕಟ್ಟು ಮಕ್ಕಳ ನಿಸರ್ಗದ ನಡುವೆಯೇ ಬೆಳೆಯುವುದರಿಂದ ಶಬ್ದಮಾತ್ರದಿಂದ ಪ್ರಾಣಿ, ಪಕ್ಷಿಗಳನ್ನು ಪತ್ತೆ ಹಚ್ಚುವಲ್ಲಿ, ಮರಗಿಡಗಳನ್ನು ಗುರುತು ಹಿಡಿಯುವುದರಲ್ಲಿ ನಿಷ್ಣಾತರು, ಆದ್ದರಿಂದ ಅನೌಪಚಾರಿಕ ಕ್ರಮ ಹಾಗೂ ವಿನ್ಯಾಸವಿಲ್ಲದಂತಹ ಓದಿನ ವಿಧಾನಕ್ಕೆ ತರಲಾಯಿತು. ಸ್ವಲ್ಪ ಮಟ್ಟಿನ ಓದು, ಬರಹ ಗಣಿತ ಜೊತೆಗೆ ನೈರ್ಮಲ್ಯ ಪೌಷ್ಠಿಕತೆ ಬುಡಕಟ್ಟು ಕುಶಲತೆಯನ್ನು ಉಪಯೋಗಿಸುವಂತಹ ಸಂಘಟಿತ ಆಟೋಟಗಳನ್ನು ವ್ಯಾಸಂಗ ಪಠ್ಯಕ್ರಮಗಳಲ್ಲಿ ಸೇರಿಸಲಾಗಿದೆ. ವಿ.ಜಿ.ಕೆ.ಯಲ್ಲಿ ಮಕ್ಕಳಿಗೆ ಸಾಮಾನ್ಯ ಜ್ಞಾನ ಭೋದಿಸುವಾಗ ಪರಿಸರ ಅಧ್ಯಯನವು ಸಹಜವಾಗಿಯೇ ಬುಡಕಟ್ಟು ಸಂಪ್ರದಾಯ ಆಚರಣೆ, ಗಿಡಮರಗಳು, ಪ್ರಾಣಿ ಪಕ್ಷಿಗಳು, ಪಾರಂಪರಿಕವಾಗಿ ಉಪಯೋಗಿಸುವ ಗಿಡಮೂಲಿಕೆಗಳು ಜಾನಪದ ಹಾಡುಗಳು ಮತ್ತು ಕಾಲದಿಂದ ಕಾಲಕ್ಕೆ ಪ್ರಸ್ತುತಗೊಳಿಸುವಂತಹ ಬುಡಕಟ್ಟು ಸಂಸ್ಕೃತಿಯನ್ನು ಉಳಿಸಿಕೊಂಡಿದ್ದರಿಂದ ಶಾಲಾ ಶಿಕ್ಷಣದಿಂದ ಅನೇಕ ಬಾಲಕ, ಬಾಲಕಿಯರು ಅನುಕೂಲ ಪಡೆದುಕೊಂಡು ವಿದ್ಯಾವಂತರಾಗಿದ್ದಾರೆ. ಸೋಲಿಗರಿಗೆ ಪದವಿ ಹಂತದವರೆಗೆ ಔಷಚಾರಿಕ ದೊರೆಯುವ ಉದ್ದೇಶದಿಂದ ಈಗ ಜ್ಯೂನಿಯರ್ ಕಾಲೇಜ್ ಮತ್ತು ಪದವಿ ಕಾಲೇಜ್‌ನ್ನು ತೆರೆಯುವ ಸಿದ್ಧತೆ ನಡೆದಿದೆ.

ಬುಡಕಟ್ಟಿನ ಪರಂಪರೆ ಸಂಸ್ಕೃತಿ ಜಾನಪದ ಅಂಶಗಳಿಗೆ ವಿ.ಜಿ.ಕೆ.ಕೆ. ಮಹತ್ವ ನೀಡಿದ್ದು, ಮುಕ್ತ ವಾತಾವರಣದಲ್ಲಿ ಅನೌಪಚಾರಿಕ ಭೋದನೆಯಿಂದ ಪ್ರಾರಂಭಿಸಿ ಔಪಚಾರಿಕ ಶಾಲಾ ಪಠ್ಯಕ್ರಮವನ್ನು ಅಳವಡಿಸಿದೆ. ‘ಸೋಲಿಗ ದನಿ’ ಎಂಬ ವಾರ್ತಾ ಪತ್ರ ಪಾಕ್ಷಿಕವಾಗಿ ಹೊರಬರುತ್ತಿದ್ದು, ಸೋಲಿಗರ ಜ್ಞಾನಾಭಿವೃದ್ಧಿಗೆ ಸಹಾಯಕವಾಗಲಿದೆ. ೧೯೮೯ರಿಂದ ಬುಡಕಟ್ಟು ಮಕ್ಕಳ ಶಿಶು ವಿಹಾರ ಕಾರ್ಯಕ್ರಮಗಳಿಗಾಗಿ ಕೇಂದ್ರ ಸಮಾಜ ಕಲ್ಯಾಣ ಮಂಡಳಿ ೧.೭೫ ಲಕ್ಷ ರೂ.ಗಳನ್ನು ವರ್ಷಕ್ಕೊಮ್ಮೆ ಕೊಡುತ್ತಿದೆ. ಹಾಡಿಯಲ್ಲಿಯ ಶಾಲೆ ಸಮುದಾಯದ ಆಸ್ತಿಯಾದರೆ ಅಲ್ಲಿರುವ ಇಪ್ಪತ್ತು ಜನ ಉಪಾಧ್ಯಾಯರಲ್ಲಿ ೧೮ ಜನ ಉಪಾಧ್ಯಾಯರು ಬುಡಕಟ್ಟಿನವರೆಗೆ ಆಗಿದ್ದಾರೆ. ಇದು ಪರಿವರ್ತನೆಯ ಸೂಚಕವಾಗಿದೆ.

ವಿ.ಜಿ.ಕೆ.ಕೆ. ಬಿಳಿಗಿರಿರಂಗನ ಬೆಟ್ಟ ಪ್ರದೇಶದ ಸೋಲಿಗರ ಆರೋಗ್ಯ ಸ್ಥಿತಿಯನ್ನು ಸುಧಾರಿಸಲು ಅಸ್ತಿತ್ವಕ್ಕೆ ಬಂದ ಈ ಸಂಸ್ಥೆ ವಿ.ಜಿ.ಕೆ.ಕೆ. (ಅಂದರೆ ವಿನಾಕಾನಂದ ನಿರಿಜನ ಕಲ್ಯಾಣ ಕೇಂದ್ರ) ಮಕ್ಕಳಿಗೆ ಪೌಷ್ಠಿಕತೆಯನ್ನು ಒದಗಿಸಲು ಕಾಫಿ ಬೆಳೆ, ಬಾಳೆ ಹಾಗೂ ಕೋಳಿ ಸಾಕಣೆ ಮುಂತಾದವುಗಳು ಸಾಗಿವೆ. ಈ ಪ್ರದೇಶದಲ್ಲಿ ಶಾಲೆ ಮತ್ತು ವಸತಿ ವಿದ್ಯಾರ್ಥಿನಿಲಯದ ವಿನೂತನ ಏರ್ಪಾಟಾಗಿದೆ. ಸೋಲಿಗರ ಮಕ್ಕಳಿಗೆ ಶಿಕ್ಷಣ ನೀಡುವುದರ ಜೊತೆಗೆ ದೂರದ ಕೊಡುಗು ಇತ್ಯಾದಿ ಸ್ಥಳಗಳಿಂದ ಮಕ್ಕಳು ಬರುವುದರಿಂದ ಅವರಲ್ಲಿ ಸೋದರತ್ವದ ಭಾವನೆ ಬೆಳೆಯುವುದಕ್ಕೆ ಸಹಾಯವಾಗುವುದು. ಮೈಸೂರು ವಿಶ್ವವಿದ್ಯಾಲಯದಲ್ಲಿ ಸ್ನಾತ್ತಕೋತ್ತರ ಪದವಿಗೆ ೧೯೯೫-೯೬ರಲ್ಲಿ ಬಿ.ಎ. ಪದವಿ ಪಡೆದ ಬುಡಕಟ್ಟಿನ ಬಾಲಕಿಗೆ ಪ್ರವೇಶ ಸಿಗಲಿಲ್ಲ. ಯಾಕೆಂದರೆ ಅವಳು ವಿ.ಜಿ.ಕೆ.ಕೆ. ಪ್ರದೇಶದಿಂದ ಬಂದವಳಾಗಿದ್ದು, ಪರಿಶಿಷ್ಟ ಪಂಗಡದ ಕೋಟಾ ಭರ್ತಿಯಾಗಿದ್ದರಿಂದ ಸಿಗಲಿಲ್ಲ. ಮತ್ತು ಸೋಲಿಗರ ಆ ಹುಡುಗಿಗೆ ಬೇಕಾದ ಅಂಕಗಳಿರಲಿಲ್ಲ. ಡಾ. ಸುದರ್ಶನ ಕೂಡ ಅಸಹಾಯಕರಾದರು. ಕುಡುಬಿಯವರಲ್ಲಿ ಮೇಘಾನೆ ಕುಡುಬಿ ಬಚ್ಚೋಡಿ ಕುಡುಬಿಯರಿದ್ದಾರೆ. ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಬೆಟ್ಟದ ತುದಿಯಲ್ಲಿಂದ ಕರ್ನಾಟಕದ ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳ ಇಳಿಜಾರಿನ ಪ್ರದೇಶಗಳಲ್ಲಿ ವಾಸಿಸುವಂಥವರು. ಪೋರ್ಚುಗಿಸರ ದಾಳಿಯಿಂದ ಬೆಸತ್ತು ಗೋವಾದಿಂದ ವಲಸೆಯಾಗಿ ಇಲ್ಲಿ ಬಂದು ಜೀವನ ನಡೆಸಿದ್ದಾರೆ. ಮೇಘಾನೆ ಕುಡುಬಿಯವರು ಕಾಡಿನ ಉತ್ಪನ್ನಗಳನ್ನು ಆಶ್ರಯಿಸಿದ್ದಾರೆ. ಆಧುನಿಕ ಸೌಕರ್ಯಗಳನ್ನು ಸ್ವೀಕರಿಸಿದೇ ತಮ್ಮದೇ ಆದ ರೀತಿಯಲ್ಲಿ ಜೀವನ ನಡೆಸುತ್ತಿದ್ದಾರೆ. ಯಾವುದೇ ಹಬ್ಬ ಮತ್ತು ಮದುವೆಗಳಲ್ಲಿ ವಿವಿಧ ಬಗೆಯ ಜಾನಪದ ನೃತ್ಯಗಳನ್ನು ಗುಮ್ಮಟೆಯ ಪದಗಳ ಮೂಲಕ ಹಾಡುತ್ತಾರೆ. ತುಳಸಿ ಪೂಜೆ ಇಲ್ಲದ ಗುಮ್ಮಟೆಯನ್ನು ಹೊರ ತೆಗೆಯಬಾರದು ಎಂಬ ನಿಯಮ ಪಾಲಿಸುತ್ತಾರೆ. ಒಟ್ಟಿನಲ್ಲಿ ಅವರ ಸಂಸ್ಕೃತಿಕ ಬದುಕು ಶ್ರೀಮಂತವಾಗಿದೆ.

ಆದರೆ, ಬಚ್ಚೋಡಿ ಕುಡುಬಿಯರು ಶಾಲೆ, ಆಸ್ಪತ್ರೆಯ, ರಸ್ತೆ ವಿದ್ಯುತ್ ಮುಂತಾದ ಆಧುನಿಕ ಸೌಲಭ್ಯಗಳನ್ನು ಪಡೆದು ಯಾವುದೇ ಸಂಘರ್ಷಕ್ಕೆ ಒಳಗಾಗದೆ ಆಧುನಿಕ ಬದುಕನ್ನು ಒಪ್ಪಿಕೊಂಡಿದ್ದಾರೆ. ಸಂಪ್ರದಾಯದಿಂದ ದೂರ ಸರಿದು ಗಿಡಮೂಲಿಕೆ ಔಷಧಿಯ ಸಸ್ಯಗಳನ್ನು ಬಳಸದೆ ಬೇಟೆಗಾರಿಕೆಯನ್ನು ಮಾಡದೇ ನಾಡಿನ ಜನರಂತೆ ಜೀವನ ನಡೆಸಿದ್ದಾರೆ. ಯಾವುದೇ ನೃತ್ಯವನ್ನಲ್ಲದೇ ಧರ್ಮಸ್ಥಳದ ಮಂಜುನಾಥಸ್ವಾಮಿ ಅವರ ಮನೆ ದೇವರೆಂದು ಒಪ್ಪಿಕೊಂಡು, ಎಲ್ಲಾ ಹಳ್ಳಿಗಳೊಂದಿಗೆ ಸಂಪರ್ಕ ಹೊಂದಿದ್ದಾರೆ. ಯಾವುದೇ ಸಮಸ್ಯೆಗಳು ಎದುರಾದರೆ ರಕ್ಷಣೆಗಾಗಿ ರಕ್ಷಣಾ ಇಲಾಖೆಗೆ ಹೋಗುತ್ತಾರೆ. ಕೋರ್ಟ್ ಕಚೇರಿ ಅನುಭವ ಪಡೆದಿದ್ದಾರೆ. ಜಾತಿ ಪಂಚಾಯಿತಿಗಳಲ್ಲಿ ಹಾಡಿಯ ಮುಖಂಡನಿಲ್ಲದಾಗಿದೆ. ಕಾಡಿನ ಉತ್ಪನ್ನಗಳನ್ನು ಸಂಗ್ರಹಿಸುವುದು ಕಡಿಮೆಯಾಗಿ ಅವರು ಬೇರೆಯವರ ತೋಟದಲ್ಲಿ ಕೂಲಿ ಮಾಡುವ ಸ್ಥಿತಿಗೆ ತಲುಪಿದ್ದಾರೆ. ಹೀಗೆ ತಮ್ಮದೇ ಆದ ವೈಯಕ್ತಿಕತೆ ಬೆಳೆಯುತ್ತದೆ. ಕುಡುಬಿ ಸಮುದಾಯವು ಸಮಸ್ಯೆಗಳನ್ನು ಹೊತ್ತುಕೊಂಡು ಗೋವಾದಿಂದ ಕರ್ನಾಟಕಕ್ಕೆ ವಲಸೆ ಬಂದು ಆರ್ಥಿಕ ಸ್ಥಿತ್ಯಂತರಕ್ಕೆ  ಒಳಗಾಗಿದ್ದಾರೆ. ಅಂದರೆ ಬ್ರಾಹ್ಮಣರ ಮನೆಗಳಲ್ಲಿ, ತೋಟಗಳಲ್ಲಿ ಕೂಲಿಗಳಾಗಿ ದುಡಿಯುತ್ತಿದ್ದಾರೆ. ಇವರಿಗೆ ಕೃಷಿ ಅನುಭವವಿರುವುದರಿಂದ ಬೆಟ್ಟದ ತುದಿಯಿಂದ ನೀರು ಧುಮುಕುವ ಸ್ಥಳಗಳ ಕೆಳಗೆ ಗಿಡಗಳನ್ನು ಕಡಿದು ಕೃಷಿ ಮಾಡಿದ್ದಾರೆ. ಈಗಲೂ ಸಹ ಅವರ ಮುಖ್ಯ ಉದ್ಯೋಗ ಕೃಷಿ ಆಗಿದೆ. ಕಾಡಿನಲ್ಲಿ ಸಿಗುವ ಇತರ ಉತ್ಪನ್ನಗಳಿಂದ ಬುಟ್ಟಿ, ದಬ್ಬೆ ಬೇಸಾಯದ ಪರಿಕರಗಳು ಪಶುಗಳ ಸಾಕಾಣಿಕೆ ಮುಂತಾದ ಕಸುಬಗಳನ್ನು ಮಾಡುತ್ತಿದ್ದಾರೆ.

ಶೈಕ್ಷಣಿಕವಾಗಿ ಕುಡುಬಿಯರು ಬಹಳ ಹಿಂದೆ ಉಳಿದಿದ್ದಾರೆ. ಇಲ್ಲಿ ೧ರಿಂದ ೨ ತರಗತಿಯವರೆಗೆ ಶಾಲೆ ಇದೆ. ಹೆಚ್ಚಿನ ವಿದ್ಯಾಭ್ಯಾಸಕ್ಕೆ ಸಾಗರಕ್ಕೆ ಬರಬೇಕು. ಶಿಕ್ಷಣವನ್ನು ಪಡೆದರೆ ಅಭಿವೃದ್ಧಿಗಾಗಿ ಯಾರನ್ನೂ ಅವಲಂಬಿಸಬೇಕಾಗಿಲ್ಲ ಅವರು, ಬೆಳೆಯುವ ಭತ್ತ ಊಟಕ್ಕೆ ಮಾತ್ರ ಸೀಮಿತವಾಗಿದೆ. ಆದ್ದರಿಂದ ಆರ್ಥಿಕವಾಗಿ ಕಷ್ಟದಲ್ಲಿದ್ದಾರೆ. ಜಾಗತೀಕರಣ ಸಂದರ್ಭದಲ್ಲಿ ಕುಡುಬಿಯವರು ಅರಣ್ಯಾಧಿಕಾರಿಗಳಿಂದ ಸರ್ಕಾರಿ ಇಲಾಖೆಯವರಿಂದ ಸಮಾಜ ಸೇವಕರಿಂದ ಯೋಜನೆಗಳ ಬಗ್ಗೆ ಜ್ಞಾನವನ್ನು ಪಡೆಯುವ ಹಂತಕ್ಕೆ ಬಂದಿದ್ದಾರೆ.

ಭಾಷೆ ಮತ್ತು ಸಂಸ್ಕೃತಿಯ ವಿಷಯದಲ್ಲಿ ಡೀಡ್ ಸಂಘಟನೆಯ ಬುಡಕಟ್ಟು ಭಾಷೆ ಮತ್ತು ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಕಡೆ ಗಮನ ಕೊಟ್ಟಿದೆ. ಬುಡಕಟ್ಟು ಉಪಭಾಷೆ ಜೇನುನುಡಿ ಮತ್ತದರ ಅಭಿವೃದ್ಧಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಸಾಮಾಜಿಕ ನಾಯಕತ್ವ ಬೆಳವಣಿಗೆ ಒಂದು ಪ್ರಮುಖ ಅಂಗವಾಗಿದ್ದರಿಂದ ಆ ಮೂಲಕ ಜನರು ಅಭಿವೃದ್ಧಿ ಹೊಂದಬಹುದಾಗಿದೆ. ಅನೇಕ ಸಲ ವಿವಿಧ ಸಂಗತಿಗಳನ್ನು ಕುರಿತು ಕವನ ರಚಿಸಿ ಶಾಲಾ ಮಕ್ಕಳಿಂದ ಹಾಡಿಸಲಾಗುತ್ತಿದೆ. ಈ ವಿಧಾನದಿಂದ ವಿರೋಧಿಗಳಂತಿದ್ದ ಅರಣ್ಯ ಇಲಾಖೆ ಸಿಬ್ಬಂದಿಗಳು ಸಹ ಪರಿವರ್ತನೆಗೊಂಡಿದ್ದಾರೆ. ಡೀಡ್ ಸಂಸ್ಥೆಯು ತಿಂಗಳಿಗೆ ೨ ಬಾರಿಯಂತೆ ಕನ್ನಡ ಭಾಷೆಯಲ್ಲಿ ‘ಹಂಬಲ ಎಂಬ ವಾರ್ತಾ ಪತ್ರವನ್ನು ಹೊರತರುತ್ತದೆ. ಇದು ಖಾಸಗಿ ಪ್ರಸಾರಕ್ಕೆ ಮೀಸಲಾಗಿದೆ.

ಬುಡಕಟ್ಟು ಜನರು ಸಣ್ಣ ವ್ಯಾಪಾರಸ್ಥರಿಂದ ಉಪ್ಪು, ಸಾಬೂನು, ಬೆಂಕಿ ಕಡ್ಡಿಯಂತ ಪದಾರ್ಥಗಳನ್ನು ಕೊಳ್ಳಲು ಬರುವರು. ಟೀ ಕುಡಿಯಲು ಟೀ ಮಾರುವವರ ಬಳಿ ಅವರು ಬರುವುದು ಸಾಮಾನ್ಯವಾಗಿದೆ. ಈ ಕಾರಣದಿಂದ ಬುಡಕಟ್ಟಿನವರು ಮತ್ತು ಇತರರ ನಡುವೆ ಹೆಚ್ಚಿನ ರೀತಿಯ ಸಂಪರ್ಕ ಈಗ ನಡೆಸಿರುವುದನ್ನು ಗಮನಿಸಬಹುದಾಗಿದೆ. ಕ್ರಿಸ್ತಶಕ ೧೯೮೨ರ ಡಿಸೆಂಬರ್‌ನಲ್ಲಿ ಡಾ. ಸುದರ್ಶನ ಚಾಮರಾಜನಗರದ ತಾಲೂಕು ಕಛೇರಿಯ ಮುಂದೆ ಧರಣಿ ಕುಳಿತು ಬುಡಕಟ್ಟಿನವರಿಗೆ ಅವರ ಭೂಮಿಯನ್ನು ಮರು ಪೂರೈಸುವಂತೆ ಒತ್ತಾಯಿಸಿದರು. ಈ ಜಮೀನು ಸಮೀಪದ ಜಮೀನಿನ ದೊಡ್ಡ ರೈತ ಹೆಸರಿಗೆ ನೋಂದಾಯಿಸಿದ್ದರು. ಡಾ. ಸುದರ್ಶನರು ಜೈಲು ಸೇರಿದರು. ಆದರೆ ಯಳಂದೂರು, ಚಾಮರಾಜನಗರ, ಕೊಳ್ಳೇಗಾಲ ಮೂರು ತಾಲೂಕುಗಳ ಸೊಲಿಗರ ಹೆಂಗಸರು ಗಂಡಸರು ಮಕ್ಕಳಾದಿಯಾಗಿ ಎಲ್ಲರೂ ಜಾಮರಾಜನಗರದ ಎಸ್‌ಪಿ ಕಚೇರಿ ಬಳಿ ಬಂದು ಘೇರಾಯಿಸಿ ತಮ್ಮ ಹಕ್ಕನ್ನು ಕೇಳಿದರು. ಇದು ಅವರ ಪ್ರಗತಿಯ ಪ್ರಜ್ಞೆಯನ್ನು ಸೂಚಿಸುತ್ತದೆ. ಡಾ. ಸುದರ್ಶನರನ್ನು ತಮ್ಮ ರಕ್ಷಕರೆಂದು ಸೋಲಿಗರು ತಿಳಿಸಿದ್ದಾರೆ. ಬಹಳ ಕುತೂಹಲಕಾರಿ ಸಂಗತಿಯೆಂದರೆ ವಿವಾಹ ವಿಚ್ಛೇದನ ಬೇರೆಯಾಗುವ ಒಂದೇ ಒಂದು ಉದಾಹರಣೆಯನ್ನು ಸೋಲಿಗರಲಿಲ್ಲ. ಜೊತೆಗೆ ವಿಧವೇಯರು ವಿಧುರರ ಸಂಖ್ಯೆಯು ಕೂಡ ತೀರಾ ಗೌಣವಾಗಿದೆ.

ರಾಜಕೀಯವಾಗಿ ಹುಣಸೂರು ತಾಲೂಕಿನ ಬುಡಕಟ್ಟು ಜನರು ಹೆಚ್ಚು ರಾಜಕೀಯ ಪ್ರಜ್ಞೆವುಳ್ಳವರಾಗಿದ್ದು, ಹಕ್ಕು ಕೇಳುವವರಾಗಿದ್ದಾರೆ. ಹಾಗಾಗಿ ಸಾಮಾಜಿಕ, ಆರ್ಥಿಕ, ರಾಜಕೀಯ, ನಾಯಕತ್ವ ಮತ್ತು ಧಾರ್ಮಿಕ ವಿಚಾರಗಳಲ್ಲಿ ನಂಬಿಕೆ ಸಂಪ್ರದಾಯ, ಆಚರಣೆಗಳಲ್ಲಿ ಬುಡಕಟ್ಟು ಸಂಸ್ಕೃತಿಯೂ ಸೇರಿದಂತೆ ಹಲವು ವಿಷಯಗಳಲ್ಲಿ ಪ್ರಜ್ಞೀಕರಣದ ಪ್ರಕ್ರಿಯೆ ಪ್ರಾರಂಭವಾಗಿರುವುದು ಸ್ಪಷ್ಟ ಡೀಡ್ ಸಂಸ್ಥೆಯ ವಿವಿಧ ಹಾಡಿಗಳಲ್ಲಿ ವಿಚಾರ ಸಂಕೀರ್ಣ, ಉಪನ್ಯಾಸ ಸಭೆಗಳನ್ನು ಏರ್ಪಡಿಸಿ ಜನರಲ್ಲಿ ರಾಜಕೀಯ ಅರಿವು ಮೂಡಿಸುವ ಪ್ರಕ್ರಿಯೆ ಕಳೆದ ೪ ವರ್ಷಗಳಿಂದ ಪ್ರಾರಂಭವಾಗಿದೆ. ವೈದ್ಯಕೀಯ ಪರವೀಧರರು ಸ್ವಯಂ ಸೇವಾ ವಲಯದಲ್ಲಿ ಕೆಲಸ ಮಾಡುತ್ತಿದ್ದಾರೆ. ಬುಡಕಟ್ಟಿನವರ ಬಗ್ಗೆ ಆಸೆ ತೋರಿದವರಲ್ಲಿ ಬೆರಳೆಣಿಕೆಯಷ್ಟು ಜನ ಮಾತ್ರ. ಉದಾ: ಜೆರ್ರಿಪಾಯಸ್ಸ್ ಮತ್ತು ಡಾ. ಸುದರ್ಶನ ವೈದ್ಯಕೀಯ ರಂಗದಲ್ಲಿ ವಿಶೇಷವಾಗಿ ಯಳಂದೂರು ತಾಲೂಕಿನ ಕುಷ್ಠರೋಗ ಪತ್ತೆ ಮಾಡಿ ಚಿಕಿತ್ಸೆ ಮಾಡಲು ಸರ್ಕಾರದ ನೆರವಿನೊಂದಿಗೆ ವಿಜಿಕೆಕೆ ಅದರ ನಿವಾರಣೆ ಕಾರ್ಯ ಕೈಗೆತ್ತಿಕೊಂಡಿದೆ. ಸೋಲಿಗರನ್ನು ಸಾಮಾನ್ಯವಾಗಿ ಕಾಡುವ ಸಿಕ್ಕಲ್ ಸೇಲ್ ಅನಿಮಿಯಾ ರೋಗದಿಂದ ಉಂಟಾಗುವ ರಕ್ತಹೀನತೆಯನ್ನು ಗುರುತಿಸಿ ವೈದ್ಯಕೀಯ ಉಪಚಾರ ನೀಡಲಾಗಿದೆ. ಇದನ್ನು ಗುರುತಿಸಿದ ಇದರ ಕೀರ್ತಿ ಡಾ. ಸುದರ್ಶನರದು. ಅನೇಕ ವೈದ್ಯರು ವಿಶೇಷವಾಗಿ ತರಬೇತಿ ಪಡೆಯುತ್ತಿರುವವರು. ವಿ.ಜಿ.ಕೆ.ಕೆ.ಗೆ ಭೇಟಿ ಕೊಟ್ಟು ಆ ಮೂಲಕ ಬುಡಕಟ್ಟಿನವರ ವಿಶ್ವಾಸವನ್ನು ಗಳಿಸುತ್ತಾರೆ. ಹೆಚ್ಚುವರಿಯಾಗಿ ಸಂಘಟನೆಗೆ ಸಹಾಯ ಹಸ್ತಚಾಚುತ್ತಾರೆ. ದಂತರಕ್ಷಣೆಗೂ ವಿ.ಜಿ.ಕೆ.ಕೆ.ಯು ಮುಂದಾಗಿದ್ದು, ಅರ್ಹ ದಂತವೈದ್ಯರು ಬಿಳಿಗಿರಿ ರಂಗನಬೆಟ್ಟದಲ್ಲಿ ಉಚಿತ ಸೇವೆ ಸಲ್ಲಿಸಿದ್ದಾರೆ. ಡಾ. ಸುದರ್ಶನ ಆಲೋಪತಿಕ ವೈದ್ಯರಾಗಿ ಹಾವು ಕಡಿತದಿಂದ ಜೀವ ಉಳಿಸಿದರು. ಬುಡಕಟ್ಟು ನಂಬಿಕೆಗಳ ಬಗ್ಗೆ ಅಪಾರ ತಿಳುವಳಿಕೆ ಪಡೆದಿದ್ದಾರೆ. ಆದರೆ, ಮಾಗಿರುವ ಡಾ. ಸುದರ್ಶನವರು ಸೋಲಿಗರ ಪಾರಂಪರಿಕ ಔಷಧಿ ವಿಧಾನಗಳ ಬಗ್ಗೆ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ತುಂಬಾ ಕಠಿಣ ಪ್ರಸಂಗಗಳನ್ನು ಯಶಸ್ವಿಯಾಗಿ ನೆರವೇರಿಸಿದ್ದಾರೆ. ಇಂದಿನ ಹೆರಿಗೆ ಪದ್ಧತಿ ಅವರಿಗೆ ಸಲ್ಲದು. ಸುದರ್ಶನ ಸಹ ಇದು ವೈದ್ಯರು ದಾದಿಯರು ಅನುಕೂಲಕ್ಕೆನ್ನುತ್ತಾರೆ. ೧೯೯೦ರ ನವೆಂಬರ್‌ನಲ್ಲಿ ಅಸ್ಥಿತ್ವಕ್ಕೆ ಬಂದ ಶಂಕರ ಸಮುದಾಯ ಆರೋಗ್ಯ ಕೇಂದ್ರದ ಲಾಭ ಪಡೆದಿದ್ದಾರೆ. ವಿ.ಜಿ.ಕೆ.ಕೆ. ೧೦ ಹಾಸಿಗೆಯ ಆಸ್ಪತ್ರೆಯನ್ನು ಹೊಂದಿದೆ. ಈಗ ಸಂಚಾರಿ ವೈದ್ಯಕೀಯ ಸೇವೆಗಳೂ ಸಹ ಲಭ್ಯವಿದ್ದು, ಯಳಂದೂರು, ಚಾಮರಾಜನಗರ, ಕೊಳ್ಳೇಗಾಲ, ನಂಜನಗೂಡು ತಾಲೂಕುಗಳಿಗೆ ವಿಸ್ತೃತವಾಗಿದೆ. ಉರಿಯುತ ಧನುರವಾಯು, ಪೋಲಿಯೋ, ಕ್ಷಯ ರೋಗಗಳಿಗೆ ಚುಚ್ಚುಮದ್ದು ಹಾಕುವ ವ್ಯವಸ್ಥೆಯ ಸಮುದಾಯ ಆರೋಗ್ಯ ಕಾರ್ಯಕ್ರಮದಲ್ಲಿ ಸೇರ್ಪಡೆಯಾಗಿದೆ. ವಿ.ಜಿ.ಕೆ.ಕೆ. ೧೯೮೧ರಲ್ಲಿ ಬಿಳಿಗಿರಿ ರಂಗನಬೆಟ್ಟದಲ್ಲಿ ಆರಂಭಗೊಂಡಾಗ ಡಾ. ಸುದರ್ಶನ ಪ್ರಧಾನ ಕಾರ್ಯದರ್ಶಿಗಳಾದರೆ ಅಧ್ಯಕ್ಷರಾದ ಕೋಣುರೇಗೌಡ ಎಂಬುವರು ಸೋಲಿಗರ ವ್ಯಕ್ತಿ ಎಂದು ಪರಿವರ್ತನೆಯ ಸೂಚಿಯಾಗಿದೆ. ಗಿಡಮೂಲಿಕೆಯನ್ನು ಪತ್ತೆ ಹಚ್ಚಲಾಗಿದೆ. ಅನೇಕ ಗಿಡಮೂಲಿಕೆಗಳು ನಾಶವಾಗಿವೆ. ವಿ.ಜಿ.ಕೆ.ಕೆ. ಲಭ್ಯವಿರುವ ಗಿಡಮೂಲಿಕೆಗಳನ್ನು ಹೊಸದಾಗಿ ದಕ್ಕಿಸುವ ಪ್ರಯತ್ನ ಮಾಡಿದೆ.

ಸಂಘಟನೆಯ ವಿಷಯಕ್ಕೆ ಬುಡಕಟ್ಟು ಜನರು ಅಭಿವೃದ್ಧಿ ಸಂಘಗಳನ್ನು ರಚಿಸಿರುವುದು ಸಂಘಟನೆಯ ಪ್ರಧಾನವಾದ ಸಾಧನೆಗಳಲ್ಲೊಂದು ಬುಡಕಟ್ಟು ಪ್ರಜ್ಞೆ ಮೂಡಿಸುವಲ್ಲಿ ಇದು ಪ್ರಾಯೋಗಿಕವಾದ ತರಬೇತು ತನ್ಮೂಲಕ ಬುಡಕಟ್ಟು ನಾಯಕರು ಹೊರ ಹೊಮ್ಮಿದ್ದು ಇವರು ಸಾಮಾಜಿಕ ನ್ಯಾಯವನ್ನು ಹೇಳುವುದರ ಜೊತೆಗೆ ಸರ್ಕಾರವು ತನ್ನ ಸಂವಿಧಾನಿಕ ಜವಾಬ್ದಾರಿಯನ್ನು ನಿರ್ವಹಿಸುತ್ತಿದೆಯೇ ಎಂಬುದರ ಕುರಿತು ನಿಗಾ ನೀಡುವಷ್ಟು ಪ್ರಜ್ಞಾವಂತರಾಗಿದ್ದಾರೆ. ಮಹಾ ಸಂಘದಲ್ಲಿ ಎಲ್ಲಾ ಸೋಲಿಗರು ಒಳಗೊಳ್ಳುತ್ತಾರೆ. ಅನಂತರ ಕ್ರಮದ ಆಧಾರದ ಮೇಲ ಅವರೆಲ್ಲಾ ಒಗ್ಗಟ್ಟಾಗುವುದಕ್ಕೆ ಈ ಕ್ರಮ ಅನುಕೂಲ ಕಲ್ಪಿಸಿದೆ. ಸೋಲಿಗರ ಹಿತಾಸಕ್ತಿಗೆ ಧಕ್ಕೆ ಬಂದಾಗ ಅಂತಹ ಸಂದರ್ಭದಲ್ಲಿ ತಮ್ಮ ಅಭಿಪ್ರಾಯಗಳನ್ನು ಸುದ್ದಿ ಪತ್ರಿಕೆಗಳಲ್ಲಿ ಬರೆದು ಸ್ಪಷ್ಟಪಡಿಸುವಷ್ಟು ಮುಖಂಡರು ಪ್ರಜ್ಞಾವಂತರಾಗಿದ್ದಾರೆ. ಸಂಬಂಧಪಟ್ಟ ಸರ್ಕಾರಿ ಅಧಿಕಾರಿಗಳನ್ನು ಸಹ ಅವರು ಭೇಟಿ ಮಾಡುತ್ತಿದ್ದಾರೆ. ಆದರೆ ಮಹಿಳಾ ಮುಖಂಡರ ಮತ್ತು ಸ್ವಯಂ ಸೇವಕರ ಕೊರತೆಯಿದೆ ಯಾಕೆಂದರೆ ಸೋಲಿಗರಲ್ಲಿ ಪುರುಷ ಯಜಮಾನ ಸಾಮಾನ್ಯವಾಗಿದೆ.

ಬುಡಕಟ್ಟು ಹಿರಿಯ ಸಭೆ, ಬುಡಕಟ್ಟು ರಂಗವೇದಿಕೆ, ಜಿಲ್ಲಾ ರಾಜ್ಯ ಬುಡಕಟ್ಟು ಸಮಿತಿಗಳು, ಗಿಡಮೂಲಿಕೆ ಔಷಧಿ ತಯಾರಕರನ್ನೊಳಗೊಂಡಿದೆ. ರಾಜ್ಯಮಟ್ಟದಲ್ಲಿ ಪೆವಾರ್ಡ್ ಜಿಲ್ಲಾ ಮಟ್ಟದಲ್ಲಿ ಮೈತ್ರಿ ಎಂಬ ಒಕ್ಕೂಟಗಳಿವೆ. ಟ್ರ್ಯೆಬಲ್‌ಪಾಯಿಂಟ್ ಆಕ್ಷನ್ ಕಮಿಟಿಯು ಅವರ ಪುನರ್ವಸತಿ ಸ್ಥಳಾಂತರ ಮೀಸಲಾತಿ ಅರಣ್ಯ ಹಕ್ಕು ಜೈವಿಕ ವೈವಿಧ್ಯ, ಬುಡಕಟ್ಟು ಸ್ವಾಯತತ್ತೆ ಮುಂತಾದ ಯೋಜನೆಗಳನ್ನು ಸಾಧಿಸಿವೆ. ಇತರ ಸಂಘಟನೆಗಳಾದ ಬುಡಕಟ್ಟು ಕೃಷಿಕರ ಸಂಘ (ಬಿಕೆಎಸ್) ವನವಾಸಿ ಮಹಿಳಾ ಸಂಘ (ವಿಎಂಎಸ್) ಎಂಬ ಸಂಘಟನೆಗಳು ಈ ಸಮುದಾಯದ ಪ್ರಗತಿಗಾಗಿ ಶ್ರಮಿಸುತ್ತಿವೆ.

ಈಗ ಪ್ರಚಲಿತವಿರುವ ಪ್ರಗತಿಪರ ಕ್ರಿಯೆಗಳಾಗಿ ವಯಸ್ಕರ ಶಿಕ್ಷಣ ಸಮಿತಿ, ಪಾರಂಪರಿಕ ಮುಖಂಡರ ಸಮಿತಿ, ಬುಡಕಟ್ಟು ಸಾಂಸ್ಕೃತಿಕ ವೇದಿಕೆ, ಬುಡಕಟ್ಟು ವಿದ್ಯಾರ್ಥಿಗಳ ವೇದಿಕೆ, ಬುಡಕಟ್ಟು ಪರಿಸರ ಸಮಿತಿ, ಬುಡಕಟ್ಟು ಸಂಪನ್ಮೂಲ ಗುಂಪು ಮುಂತಾದವುಗಳ ಅವರ ಪರಿವರ್ತನೆಯ ದಾರಿಯನ್ನು ತೋರಿಸುತ್ತಿವೆ. ಬುಡಕಟ್ಟು ಸಹಕಾರ ಸಂಘ ಅಸ್ಥಿತ್ವಕ್ಕೆ ಬಂದಿರುವುದರಿಂದ ಜೇನುತುಪ್ಪ, ಅಣಬೆ, ನೆಲ್ಲಿಕಾಯಿ ಮುಂತಾದವುಗಳನ್ನು ಸಂಗ್ರಹಿಸುವ ಬುಡಕಟ್ಟು ಜನರು ಬುಡಕಟ್ಟು ವಿವಿಧೋದ್ದೇಶ ಸಹಕಾರ ದುಬಾರಿ ಇಲ್ಲದ ಬೆಲೆಗೆ ಮಾರುವವರು ಇದರಿಂದ ಖಾಸಗಿ ಗುತ್ತಿಗೆದಾರರ ಶೋಷಣೆ ಕಡಿಮೆಯಾಗುತ್ತಿದೆ.

ಅಥಣಿ ಪರಿಸರದ ಬೇಡ ಸಮುದಾಯವು ಪರಿವರ್ತನೆಯ ಹಾದಿಯಲ್ಲಿದ್ದು, ಪರಿಶಿಷ್ಟ ಪಂಗಡದವರು ಗ್ರಾಮೀಣ ಪ್ರದೇಶಗಳಾದ ಶೇಡಬಾಳ, ಬಡಚಿ, ರಡ್ಡೆ ರೆಡ್ಡಿ, ಕೋಹಳ್ಳಿ, ಬೇಡರ ಹಟ್ಟಿ ಮುಂತಾದ ಊರುಗಳಲ್ಲಿ ಶಿಕ್ಷಣದಿಂದ ಪರಿವರ್ತನೆ ಆಗುತ್ತಿದೆ. ಮದ್ಯಪಾನ ನಿಷೇಧಕ್ಕಾಗಿ ಬುಡಕಟ್ಟಿಗೆ ಸೇರದ ಸಾರಾಯಿ ಗುತ್ತಿಗೆದಾರನ ದಾಳಿಯನ್ನು ತಡೆಯಲು ಪರವಾನಿಗೆ ಪಡೆದು ಸಾರಾಯಿ ಅಂಗಡಿಗಳ ತಲೆ ಎತ್ತದಂತೆ ತಡೆಯಲು ಬುಡಕಟ್ಟು ಮಹಿಳೆಯರು ಮತ್ತು ಮಕ್ಕಳು ಸಂಘಟಿತರಾಗಿದ್ದಾರೆ. ಕರ್ನಾಟಕ, ಆಂಧ್ರ ಮತ್ತು ಓರಿಸ್ಸಾಗಳಲ್ಲಿಯೂ ಬುಡಕಟ್ಟು ಚಳುವಳಿಗಾರರು ಪ್ರತಿಭಟನೆ ಮಾಡಿ ಮದ್ಯದ ದೊರೆಗಳಿಗೆ ಮುಖಭಂಗ ಮಾಡಿದ ಪ್ರಸಂಗಗಳಿವೆ.

ಭೂ ಸ್ವಾಧೀನ ವಿಷಯದಲ್ಲಿ ಡೀಡ್‌ನಂತಹ ಸೇವಾ ಸಂಸ್ಥೆಗಳು ಇಲ್ಲಿಗೆ ಬರುವುದಕ್ಕೆ ಮೊದಲು ಅನೇಕ ಬುಡಕಟ್ಟಿನ ಜನರು ತಮ್ಮ ಜಮೀನಿನಲ್ಲೇ ಕೂಲಿಗಳಾಗಿ ದುಡ್ಡಿಯುತ್ತಿದ್ದಾರೆ. ೧೯೬೦-೭೦ರಲ್ಲಿ ಬುಡಕಟ್ಟು ಜನರ ಜಮೀನನ್ನು ಸ್ವಲ್ಪ ಹಣ ಕೊಟ್ಟು ಉಪಯೋಗಿಸುವ ಪದ್ಧತಿ ಬಹಳ ಇತ್ತು. ಕಂದಾಯ ಅಧಿಕಾರಿಗಳ ಸಹಾಯದಿಂದ ಮಾಲೀಕತ್ವದ ದಾಖಲೆಗಳನ್ನೇ ಬದಲಾಯಿಸುವ ಪ್ರಕ್ರಿಯೆ ನಿರಂತರವಾಗಿ ನಡೆದಿದೆ. ಇಂತಹ ವಂಚನೆ ನಡೆದಿರುವ ಪ್ರಸಂಗಗಳನ್ನು ಇಂತಿಷ್ಟು ಗುಡುವಿನ ಒಳಗೆ ಬುಡಕಟ್ಟಿನವರಿಂದ ಲಪಟಾಯಿಸಿದ ಜಮೀನನ್ನು ಹಿಂತಿರುಗಿಸಬೇಕೆಂದು ಕಾನೂನು ಮಾಡಲು ಕರ್ನಾಟಕ ಸರ್ಕಾರದ ಮೇಲೆ ಒತ್ತಡ ತರಲಾಯಿತು. ಡೀಡ್ ಸಂಸ್ಥೆಯಿಂದಾಗಿ ಅವರ ಜಮೀನು ಅವರಿಗೆ ಸೇರಿತು. ಡೀಡ್ ಸಂಸ್ಥೆಯ ಜೀತ ಪದ್ಧತಿಯ ವಿಷಯವನ್ನು ಕೈಗೆತ್ತಿಕೊಂಡ ನಂತರ ಕೃಷಿ ಭೂಮಿಗೆ ಸಂಬಂಧಿಸಿ ಸಂಗತಿಗಳನ್ನು ಚರ್ಚಿಸಲು ಪ್ರಾರಂಭಿಸಿತು. ಕುಂಬರಿ ವಂಚಿತನೊಂದ ಜೋಯಿಡಾ ರೈತರುಗಳು ಗ್ರೀನ್ ಇಂಡಿಯಾ ಸಂಸ್ಥೆಯ ಸಹಯೋಗದೊಂದಿಗೆ ಸೇರಿ ಕುಂಬರಿ ಹಕ್ಕಲ ಹೋರಾಟ ಸಮಿತಿ ರಚಿಸಿಕೊಂಡಿದ್ದು, ಪರಿವರ್ತನೆ ಹಾದಿಯೇ. ಕೈಗಾರಿಕೆಯಲ್ಲಿ ಗುಡಿಕೈಗಾರಿಕೆಗಳಾದ ನೇಯ್ಗೆ, ಹಗ್ಗ, ಹೊಸೆಯುವುದು, ಹೊಲಿಗೆ, ಮರಗೆಲಸ, ಕಸುತಿ, ಅಗರಬತ್ತಿ ತಯಾರಿಕೆ ಮುಂತಾದವುಗಳ ಕುರಿತು ಸ್ತ್ರೀ-ಪುರುಷರಿಗೆ ತರಬೇತಿ ನೀಡುವ ಕಾರ್ಯಕ್ರಮವನ್ನು ವಿ.ಜಿ.ಕೆ.ಕೆ. ಮಾಡಿದೆ. ಬುಡಕಟ್ಟು ಜನರು ನ್ಯಾಯ ವಿಧಾನವನ್ನು ಸದೃಢಗೊಳಿಸಿ ತೀವ್ರವಾಗಿ ತಕರಾರುಗಳನ್ನು ವಿವಾದಗಳನ್ನು ಇತ್ಯರ್ಥ ಪಡಿಸುವಲ್ಲಿ ಯಶಸ್ವಿಯಾಗಿದೆ.

ನೌಕರಿ :- ೧೯೬೨ರಲ್ಲಿ ಒಟ್ಟು ೪೦,೦೦೦ ಆದಿವಾಸಿಗಳು ನೌಕರಿಯಲ್ಲಿ ಸೇರಿದ್ದರೆ, ೧೯೫೭ರಲ್ಲಿ ಆಯ್.ಎ.ಎಸ್ ಕೇವಲ ೫೦ ಜನ ಆದಿವಾಸಿಗಳಿದ್ದರೆ. ಭಾರತ ಸರ್ಕಾರ ಒಂದು ಮೀಲಿಯನ್ನಿಗಿಂತಲೂ ಹೆಚ್ಚು ಆದಿವಾಸಿಗಳನ್ನೊಳಗೊಂಡ ಪ್ರತಿಯೊಂದು ರಾಜ್ಯಕ್ಕೂ ಒಂದು ಸಂಶೋಧನಾ ವಿಭಾಗಗಳನ್ನು ಸ್ಥಾಪಿಸಿರುತ್ತವೆ. ಇಂತಹ ಪ್ರಾಯೋಗಿಕ ಸಂಶೋಧನಾ ವಿಭಾಗಗಳು ಕರ್ನಾಟಕ, ಆಂಧ್ರಪ್ರದೇಶ, ಅಸ್ಸಾಂ, ಮಧ್ಯಪ್ರದೇಶ, ಮಹರಾಷ್ಟ್ರ, ಒರಿಸ್ಸಾ, ಪ.ಬಂಗಾಳ ಮುಂತಾದ ರಾಜ್ಯಗಳಲ್ಲಿ ಸ್ಥಾಪಿಸಲ್ಪಟ್ಟಿವೆ.

ಭಾರತ ಸರ್ಕಾರ ನಮ್ಮ ದೇಶದಲ್ಲಿ ಒಟ್ಟು ೯ ಸಂಶೋಧನಾ ಸಂಸ್ಥೆಗಳು ಪ್ರಾರಂಭಿಸಿರುತ್ತದೆ.

೧. ಆದಿವಾಸಿ ಸಂಶೋಧನಾ ಸಂಸ್ಥೆ- ಕರ್ನಾಟಕ
೨. ಆದಿವಾಸಿ ಸಂಶೋಧನಾ ಸಂಸ್ಥೆ- ಶಿಲಾಂಗ (ಅಸ್ಸಾಂ)
೩. ಆದಿವಾಸಿ ಸಂಶೋಧನಾ ಸಂಸ್ಥೆ- ರಾಂಚೀ (ಬಿಹಾರ್)
೪. ಆದಿವಾಸಿ ಸಂಶೋಧನಾ ಮತ್ತು ತರಬೇತಿ ಕೇಂದ್ರ-ಗುಜರಾತ್ ವಿದ್ಯಾಪೀಠ (ಅಹಮದಾಬಾದ್)
೫. ಸಂಸ್ಕೃತಿ ಸಂಶೋಧನಾ ಸಂಸ್ಥೆ-ಕೋಲ್ಕತ್ತಾ ಮತ್ತು (ಬಂಗಾಳ)
೬. ಆದಿವಾಸಿ ಸಂಸ್ಕೃತಿ ಸಂಶೋಧನಾ ಮತ್ತು ತರಬೇತಿ ಕೇಂದ್ರ-ಹೈದ್ರಾಬಾದ್.

೧೯೫೫ರಲ್ಲಿ ಆದಿವಾಸಿ ಕಲ್ಯಾಣ ವಿಭಾಗ ಪ್ರಾರಂಭವಾಯಿತು. ಹುಸನೂರಿಗೆ ಸಂಬಂಧಪಟ್ಟ ಡೀಡ್ ಸಂಸ್ಥೆಯ ಅಡಿಯಲ್ಲಿ ಜೇನುಕುರುಬ, ಬೆಟ್ಟಕುರುಬ, ಯರವ ಮತ್ತು ಸೋಲಿಗರು ಲೋಕೋಪಯೋಗಿ ಇಲಾಖೆಗೆ ದುಡ್ಡಿಯುತ್ತಾರೆ ಮತ್ತು ತಮ್ಮ ವರಮಾನವನ್ನು ಹೆಚ್ಚಿಸಿಕೊಂಡಿದ್ದಾರೆ. ಕಾಡಿನ ಪ್ರದೇಶಕ್ಕೆ ಸಮೀಪದಲ್ಲಿ ಬಿಳಿಗಿರಿರಂಗನ ಬೆಟ್ಟದಲ್ಲಿರುವ ೧೭೯ ಸೋಲಿಗರನ್ನು ಅಧ್ಯಾಯನ ಮಾಡಲಾಗಿದೆ. ಸೂ.೧/೩ ಭಾಗದಷ್ಟಿರುವ ೯೩ ಬುಡಕಟ್ಟಿನವರು ಗ್ರಾಮಗಳ ಸಮೀಪ ಬದುಕುತ್ತಿದ್ದಾರೆ. ಪಂಚವಾರ್ಷಿಕ ಯೋಜನೆಗಳ ಮೂಲಕ ಕಳೆದ ೧೮ ವರ್ಷಗಳಲ್ಲಿ ಆದಿವಾಸಿಗಳ ಕಲ್ಯಾಣಕ್ಕಾಗಿ ೧೫೦ ಕೋಟಿ ರೂ.ಗಳನ್ನು ಖರ್ಚು ಮಾಡಿದೆ. ಆದಿವಾಸಿ ವಿಭಾಗಗಳಲ್ಲಿ ಮಕ್ಕಳು ಪ್ರಾಥಮಿಕ ಶಿಕ್ಷಣವನ್ನು ಅಧಿಕ ಸಂಖ್ಯೆಯಲ್ಲಿ ಪಡೆಯುತ್ತಿದ್ದಾರೆ. ಎಸ್‌ಎಸ್‌ಎಲ್‌ಸಿ ಪಾಸಾದ ಆದಿವಾಸಿ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ಕೇಂದ್ರಗಳಿವೆ. ಇವೆಲ್ಲವುಗಳು ಅವರ ಪರಿವರ್ತನೆಯ ಸಾಧನೆಗಳೇ. ಇದರ ಜೊತೆಗೆ ಅನೇಕ ಸೇವಾ ಸಂಸ್ಥೆಗಳು ವಿವಿಧ ಪ್ರದೇಶಗಳಲ್ಲಿ ವಿವಿಧ ಸೇವೆಯನ್ನು ಕೈಗೊಳ್ಳುವುದರಿಂದ ಬುಡಕಟ್ಟುಗಳ ಅಭಿವೃದ್ಧಿ ಸಾಧ್ಯ. ನಾಗರಹೊಳೆ ರಾಷ್ಟ್ರೀಯ ಉದ್ಯಾನ ಪ್ರದೇಶದಿಂದ ಬುಡಕಟ್ಟ ಜನರನ್ನು ಸಾರಸಗಟು ಹೊರಗೆ ಹಾಕುವ ಸರ್ಕಾರದ ಪ್ರಯತ್ನ ಸುಲಭವಾಗಿ ಈಡೇರುವುದಿಲ್ಲ. ಏಕೆಂದರೆ, ಬುಡಕಟ್ಟುಗಳ ಯೋಜನೆಗಳು ಸರ್ಕಾರದಿಂದ ಅಲ್ಲಿ ಜಾರಿಗೆ ಬಂದಿಲ್ಲ. ಈಗ ಸರ್ಕಾರ ನೀಡುವ ಭರವಸೆಗಳನ್ನು ಅವರ ನಂಬು ತಯಾರಿಲ್ಲ. ಒಟ್ಟಿನಲ್ಲಿ ಬುಡಕಟ್ಟು ಪರಿವರ್ತನೆ ದಾರಿಯತ್ತ ಸಾಗಿವೆ.

* * *