ಒಂದು ದೇಶ/ಪ್ರದೇಶದ ಅಭಿವೃದ್ಧಿಯಲ್ಲಿ “ಮೂಲ ಸೌಲಭ್ಯ”ಗಳ ಪಾತ್ರ ತುಂಬಾ ಮಹತ್ವವಾದುದು. ಮೂಲ ಸೌಲಭ್ಯಗಳಲ್ಲಿ ಬಹು ಪ್ರಮುಖವಾದ ಸೌಲಭ್ಯವೆಂದರೆ ಸಾರಿಗೆ ಸೌಲಭ್ಯ. ಕಚ್ಚಾ ಮಾಲನ್ನು ಉತ್ಪಾದನೆ ನಡೆಯುವ ಸ್ಥಳಕ್ಕೆ ಕೊಂಡೊಯ್ಯಲು ಮತ್ತು ಪಕ್ಕಾ ಮಾಲನ್ನು ಉತ್ಪಾದನೆ ಮಾಡಿದ ಸ್ಥಳದಿಂದ ಮಾರುಕಟ್ಟೆಗೆ – ಗ್ರಾಹಕರ ಮನೆ ಸಾಗಿಸಲು ಸಾರಿಗೆಯು ಅಗತ್ಯವಾದ ಒಂದು ಸೌಲಭ್ಯವಾಗಿದೆ. ಒಂದು ದೇಶ ಅಥವಾ ಪ್ರದೇಶದ ಆಂತರಿಕ ಮಾರುಕಟ್ಟೆಯ ಬೆಳವಣಿಗೆ, ಮಾರಾಟ ವೆಚ್ಚದ ಪ್ರಮಾಣ ಮಾರುಕಟ್ಟೆಯ ಕಾರ್ಯಕ್ಷಮತೆ ಮುಂತಾದವು ಸಾರಿಗೆ ಸೌಲಭ್ಯದ ಜಾಲವನ್ನು ಅವಲಂಬಿಸಿದೆ.

ಒಂದು ಆರ್ಥಿಕತೆಯು ಸರಕು – ಸೇವೆಗಳನ್ನು ಎಷ್ಟು ಪ್ರಮಾಣದಲ್ಲಿ ಉತ್ಪಾದಿಸಬಹುದು ಎನ್ನುವುದು ಆ ಆರ್ಥಿಕತೆಯ ಮಾರುಕಟ್ಟೆಯ ವ್ಯಾಪ್ತಿ, ಬೆಳವಣಿಗೆಯನ್ನು ಅವಲಂಬಿಸಿದೆ. ಮಾರುಕಟ್ಟೆಯ ವ್ಯಾಪ್ತಿ, ಬೆಳವಣಿಗೆಯನ್ನು ಅವಲಂಬಿಸಿದೆ. ೧೯೯೦ರ ದಶಕದಲ್ಲಿ ಆರಂಭಗೊಂಡ ಉದಾರೀಕರಣ ಪ್ರಕ್ರಿಯೆಯಲ್ಲಿ ಸಾರಿಗೆ ಸೌಲಭ್ಯಗಳ ಕೊರತೆ,ಕೀಳು ಗುಣಮಟ್ಟ, ಬಂಡವಾಳದ ಕೊರತೆ, ಖಾಸಗೀಕರಣ ಮುಂತಾದ ಸಂಗತಿಗಳ ಚರ್ಚೆಯ ಮಂಚೂಣಿಗೆ ಬಂದವು. ನಮ್ಮ ದೇಶದ ಔದ್ಯಮಿಕ ಕ್ರಾಂತಿಗೆ ಕಂಟಕವಾಗಿರುವ ಬಹು ಮುಖ್ಯ ಸಂಗತಿಯೆಂದರೆ ಸಾರಿಗೆ ಸೌಲಭ್ಯದ ಕೊರತೆ ಮತ್ತು ಅದರ ಕೀಳು ಗುಣಮಟ್ಟ ಎಂದು ಹೇಳಲಾಗಿದೆ. ಸಾರಿಗೆ ಸೌಲಭ್ಯದ ಕೊರತೆ, ಕೀಳು ಗುಣಮಟ್ಟಗಳಿಂದಾಗಿ ಭಾರತದಲ್ಲಿ ಉತ್ಪಾದನಾ ವೆಚ್ಚವು ಅತ್ಯಂತ ದುಬಾರಿಯಾದುದಾಗಿದೆ.

ರಾಜ್ಯಮಟ್ಟದಲ್ಲಿ ಸಾರಿಗೆ ಸೌಲಭ್ಯ.

ಸಾರಿಗೆ ಸೌಲಭ್ಯದ ಬೆಳವಣಿಯನ್ನು ಅಳೆಯಲು ಇರುವ ಮೂರು ಮುಖ್ಯ ಅಳತೆಗೋಲುಗಳೆಂದರೆ – (೧) ರಸ್ತೆಗಳ ಉದ್ದ (೨) ಪ್ರತಿ ೧೦೦ ಚದರ ಕಿಲೊ ಮೀಟರ್ ಪ್ರದೇಶದಲ್ಲಿ ಇರುವ ರಸ್ತೆಗಳ ಉದ್ದ ಮತ್ತು (೩) ಪ್ರತಿ ಒಂದು ಲಕ್ಷ ಜನಸಂಖ್ಯೆಗೆ ಇರುವ ರಸ್ತೆಗಳ ಉದ್ದ. ಕೋಷ್ಟಕ – ೯,೧ ರಲ್ಲಿ ಕರ್ನಾಟಕ ರಾಜ್ಯದಲ್ಲಿನ ರಸ್ತೆಗಳ ಉದ್ದದ ವಿವರಗಳನ್ನು ೨೭ ಜಿಲ್ಲಿಗಳಿಗೆ ಸಂಬಂಧಿಸಿದಂತೆ ನೀಡಲಾಗಿದೆ.

೧೯೯೬ ರಲ್ಲಿ ರಾಜ್ಯಮಟ್ಟದಲ್ಲಿ ಇದ್ದ ಒಟ್ಟು ರಸ್ತೆಗಳ ಉದ್ದ ೧.೨೪,೪೮೯ಕಿ.ಮಿ. ರಾಜ್ಯ ಮಟ್ಟದಲ್ಲಿ ಪ್ರತಿ ೧೦೦ ಚ.ಕಿ.ಮಿ ಪ್ರದೇಶದಲ್ಲಿದ್ದ ರಸ್ತೆಗಳ ಸರಾಸರಿ ಉದ್ದ ೬೫ ಕಿ.ಮಿ. ಮತ್ತು ಪ್ರತಿ ಒಂದು ಲಕ್ಷ ಜನಸಂಖ್ಯೆಗೆ ಇದ್ದ ರಸ್ತೆಗಳ ಉದ್ದ ೨೭೭ ಕಿ.ಮಿ. ರಸ್ತೆ ವ್ಯವಸ್ಥೆಗೆ ಸಂಬಂಧಿಸಿದಂತೆ ದಕ್ಷಿಣ ಭಾರತದಲ್ಲಿನ ೪ ರಾಜ್ಯಗಳಲ್ಲಿ ಆಂದ್ರ ಮತ್ತು ತಮಿಳುನಾಡು ರಾಜ್ಯಗಳಿಂಗಿಂತ ಕರ್ನಾಟಕದ ಸ್ಥಾನವು ಉತ್ತಮ ಉತ್ತಮವಾಗಿದೆ. ಕೇರಳವು ರಸ್ತೆ ವ್ಯವಸ್ಥೆಗೆ ಸಂಬಂಧಿಸಿದಂತೆ ಕರ್ನಾಟಕಕ್ಕಿಂತ ಉತ್ತಮ ಸಾಧನೆ ಮಾಡಿದೆ.

ಜನಸಂಖ್ಯೆಯ ಅಳತೆಗೋಲಿನಿಂದ ಗಣನೆ ಮಾಡಿದರೆ ರಸ್ತೆ ವ್ಯವಸ್ಥೆಗೆ ಸಂಬಂಧಿಸಿದಂತೆ ಮೊದಲ ಸ್ಥಾನವು ಕೊಡಗು ಜಿಲ್ಲೆಗೆ ಸಂದರೆ ಪ್ರದೇಶದ ದೃಷ್ಟಿಯಿಂದ ಮಂಡ್ಯ ಜಿಲ್ಲೆಯು ಮೊದಲನೆಯ ಸ್ಥಾನ ಪಡೆದಿದೆ. ಕೊಪ್ಪಳ ಜಿಲ್ಲೆಯು ರಾಜ್ಯದ ಭೂಪ್ರದೇಶದಲ್ಲಿ ಶೇ.೨.೯೦ ಪಾಲು ಪಡೆದಿದ್ದರೆ ರಸ್ತೆಗಳ ಉದ್ದಕ್ಕೆ ಸಂಬಂಧ ಪಟ್ಟಂತೆ ಈ ಜಿಲ್ಲೆಯ ಪಾಲು ಕೇವಲ ಶೇ ೨.೧೩. ಕೊಪ್ಪಳ ಜಿಲ್ಲೆಯು ರಸ್ತೆಗಳ ಉದ್ದದಲ್ಲಿ ಜನಸಂಖ್ಯೆಗೆ ಸಂಬಂಧಪಟ್ಟಂತೆ ೧೩ ನೆ ಸ್ಥಾನ ಪಡೆದಿದ್ದರೆ ಭೂಪ್ರದೇಶದ ದೃಷ್ಟಿಯಿಂದ ೨೩ ನೆಯ ಸ್ಥಾನ ಪಡೆದಿದೆ. ಈ ಜಿಲ್ಲೆಯಲ್ಲಿ ಪ್ರತಿ ೧೦೦ ಚ ಕಿ.ಮಿ. ಪ್ರದೇಶಕ್ಕೆ ಸರಾಸರಿ ೪೮ ಕಿ.ಮಿ ರಸ್ತೆ ಇದ್ದರೆ ಪ್ರತಿ ಒಂದು ಲಕ್ಷ ಜನಸಂಖ್ಯೆಗೆ ೨೭೬ ಕಿ.ಮಿ. ರಸ್ತೆ ಇದೆ.

ಕೊಪ್ಪಳ ಜಿಲ್ಲೆಯಲ್ಲಿರುವ ಒಟ್ಟು ರಸ್ತೆಗಳ ಉದ್ದ ೨೬೪೭ಕಿ.ಮಿ.ಇದರಲ್ಲಿ ಜಿಲ್ಲೆಯಲ್ಲಿರುವ ರಾಷ್ಟೀಯ ಹೆದ್ದಾರಿಗಳ ಉದ್ದ ೪೯ ಕಿ.ಮಿ. ರಾಜ್ಯ ಹೆದ್ದಾರಿಗಳ ಉದ್ದ ೩೩೮ ಕಿ.ಮಿ. ಜಿಲ್ಲಾ ಮುಖ್ಯ ರಸ್ತೆಗಳ ಉದ್ದ ೫೩೭ ಕಿ.ಮಿ. ಒಟ್ಟು ಹಳ್ಳಿ ರಸ್ತೆಗಳ ಉದ್ದ ೧೬೮೭. ಒಟ್ಟು ರಸ್ತೆಗಳ ಉದ್ದದಲ್ಲಿ ಹಳ್ಳಿ ರಸ್ತೆಗಳ ಪ್ರಮಾಣ ಶೇ ೬೩.೭೩ ರಷ್ಟಿದೆ.

ಕೋಷ್ಟಕ – ೯.೨ ಮತ್ತು ೯.೩ಗಳಲ್ಲಿ ಹೊಸ ಜಿಲ್ಲೆಗಳಲ್ಲಿ ರಸ್ತೆಗಳ ಉದ್ದಕ್ಕೆ ಸಂಬಂಧಸಿದ ವಿವರಣೆ ನೀಡಲಾಗಿದೆ. ಏಳು ಹೊಸ ಜಿಲ್ಲೆಗಳ ಪೈಕಿ ಕೊಪ್ಪಳ ಜಿಲ್ಲೆಯ ಸ್ಥಾನ ಯಾವುದು ಎಂಬುದು ಈ ಕೋಷ್ಟಕಗಳಿಂದ ಸ್ಪಷ್ಟವಾಗುತ್ತದೆ.

೧. ಒಂದು ನೂರು ಚದರ ಕಿಲೊ ಮೀಟರ್ ಪ್ರದೇಶದಲ್ಲಿರುವ ರಸ್ತೆಗಳ ಉದ್ದಕ್ಕೆ ಸಂಬಂಧಿಸಿದಂತೆ ರಾಜ್ಯ ಸರಾಸರಿ ೬೫ ಕಿ.ಮಿ ಗಳಿಗಿಂತ ದಾವಣಗೆರೆ ಮತ್ತು ಹಾವೇರಿಗಳನ್ನು ಬಿಟ್ಟರೆ ಉಳಿದ ಐದು ಹೊಸ ಜಿಲ್ಲೆಗಳ ರಸ್ತೆಗಳ ಉದ್ದ ರಾಜ್ಯ ಸರಾಸರಿಗಿಂತ ಕಡಿಮೆ ಇದೆ.

೨. ಒಂದು ಲಕ್ಷ ಜನಸಂಖ್ಯೆಗೆ ಇರುವ ರಸ್ತೆಗಳ ಉದ್ದಕ್ಕೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ ಸ್ಥಾಪನೆಯಾದ ಏಳು ಜಿಲ್ಲೆಗಳಲ್ಲಿ ಉಡುಪಿ, ಕೊಪ್ಪಳ ಮತ್ತು ಬಾಗಲಕೋಟೆ ಜಿಲ್ಲೆಗಳ ರಸ್ತೆಗಳ ಉದ್ದವು ರಾಜ್ಯ ಸರಾಸರಿಗಿಂತ ಕಡಿಮೆ ಇದೆ.

೧೦೬ ಜಿಲ್ಲಾ ಅಭಿವೃದ್ಧಿ ಅಧ್ಯಯನಕೊಪ್ಪಳ

ರಸ್ತೆಗಳ ಬೆಳವಣಿಗೆ ಕುರಿತಂತೆ ಮೇಲಿನ ಎರಡು ಮಾನದಂಡಗಳಲ್ಲಿ ಪ್ರದೇಶವಾರು ರಸ್ತೆಗಳ ಉದ್ದದ ಅಳತೆಯ ಹೆಚ್ಚು ಪ್ರಸ್ತುತವಾದದು ಎಂದು ಹೇಳಬಹುದು.

ಬ್ಯಾಂಕಿಂಗ್ ಮತ್ತು ಹಣಕಾಸು ವ್ಯವಸ್ಥೆ

ಉಳಿತಾಯದ ಕ್ರೋಡೀಕರಣ ಮತ್ತು ಕ್ರೋಡೀಕರಿಸಿದ ನಿರ್ಮಾಣ ಚಟುವಟಿಕೆಗಳಲ್ಲಿ ತೊಡಗಿಸುವ ಸಲುವಾಗಿ ಸುಸಂಘಟಿತ ಹಾಗೂ ಸಮರ್ಥವಾದ ಹಣಕಾಸು ವ್ಯವಸ್ಥೆ ಬೇಕಾಗುತ್ತದೆ. ಇಂತಹ ಸುಸಂಘಟಿತವಾದ ಹಾಗೂ ಸಮರ್ಥವಾದ ಹಣಕಾಸು ವ್ಯವಸ್ಥೆಯು ಬಂಡವಾಳ ನಿರ್ಮಾಣ ಚಟುವಕೆಗಳು ತೀವ್ರಗತಿಯಲ್ಲಿ ಬೆಳೆಯಲು ಸಹಾಯಕವಾಗುತ್ತದೆ. ಬ್ಯಾಂಕಿಂಗ್ ವ್ಯವಸ್ಥೆಯು ಒಂದು ಹಣಕಾಸು ಜಾಲದ ಪ್ರಮುಖ ಅಂಗವಾಗಿದೆ. ವಾಣಿಜ್ಯ ಬ್ಯಾಂಕುಗಳು ನಿವ್ವಳ ಉಳಿತಾಯ ಮಾಡುವ ವರ್ಗಗಳಿಂದ ನಿವ್ವಳ ಹೂಡಿಕೆದಾರರಿಗೆ ಹಣಕಾಸು ಸಂಪನ್ಮೂಲವನ್ನು ವರ್ಗಾಯಿಸುವ ಕೆಲಸ ಮಾಡುತ್ತವೆ. ವಾಣಿಜ್ಯ ಬ್ಯಾಂಕುಗಳು ತಮ್ಮ ಶಾಖೆಗಳ ಮೂಲಕ ವ್ಯಾಪಾರ – ಉದ್ದಿಮೆ – ವಾಣಿಜ್ಯ ಚಟುವಟಿಕೆಗಳಿಗೆ ಅನೇಕ ಬಗೆಯ ಸೌಲಭ್ಯ ಒದಗಿಸುತ್ತದೆ. ಸಾರ್ವಜನಿಕರು ಬ್ಯಾಂಕುಗಳಲ್ಲಿ ಇಡುವ ಠೇವಣಿಗಳಿಗೆ ಬಡ್ಡಿ ಬರುತ್ತದೆ. ವಾಣಿಜ್ಯ ಬ್ಯಾಂಕುಗಳಲ್ಲಿರುವ ಠೇವಣಿಗಳಿಗೆಲ್ಲ ವಿಮಾ ರಕ್ಷಣೆ ಇರುವುದುರಿಂದ ಸಾರ್ವಜನಿಕರು ತಮ್ಮ ಉಳಿತಾಯದ ಬಗ್ಗೆ ಯಾವುದೇ ರೀತಿಯ ಭಯವನ್ನು ಇಟ್ಟುಕೊಳ್ಳುವ ಅಗತ್ಯವಿಲ್ಲ.

ನಮ್ಮ ಸಮಾಜದ ಸಂದರ್ಭದಲ್ಲಿ ಹಣಕಾಸು ವ್ಯವಸ್ಥೆಗೆ ಸಂಬಂಧಿಸಿದಂತೆ ಅನೇಕ ಬಗೆಯ ಸಮಸ್ಯೆಗಳಿಗೆ ಲೇವಾದೇವಿಗಾರರು, ದಲ್ಲಾಳಿಗಳು, ಜಮೀನ್ದಾರರು ಮುಂತಾದವರು ಹಣಕಾಸು ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಜಿಲ್ಲೆಯ ಒಟ್ಟು ಹಣಕಾಸು ವ್ಯವಹಾರದಲ್ಲಿ ಇವರದೇ ಸಿಂಹ ಪಾಲು. ಆದರೆ ಇಲ್ಲಿ ಬಡ್ಡಿಯು ವಿಪರೀತ. ಇದಕ್ಕೆ ಮುಖ್ಯವಾಗಿ ಇಲ್ಲಿ “ವ್ಯಾಪಾರ – ಲೇವಾದೇವಿ – ಉತ್ಪಾದನೆ” ಮೂರು ಚಟುವಟಿಕೆಗಳು ಒಂದರೊಡನೊಂದು ಮಿಕ್ಸ್ ಅಗಿಬಿಟ್ಟಿಡುವುದು ಕಾರಣವಾಗಿರುತ್ತದೆ. ಇಂತಹ ವಿಷಜಾಲದಲ್ಲಿ ರೈತರು ಅನೇಕ ಬಗೆಯ ಅನ್ಯಾಯಗಳಿಗೆ ಬಲಿಯಾಗಿ ಬಿಡುತ್ತಾರೆ.

ಈ ಬಗೆಯ ವಿಷಜಾಲದಿಂದ ಸಾರ್ವಜನಿಕರನ್ನು ಬಿಡುಗಡೆಗೊಳಿಸುವ ಉದ್ದೇಶದಿಂದ “ಸಂಘಟಿತ ಬ್ಯಾಂಕಿಂಗ್” ವ್ಯವಸ್ಥೆಯ ಬೆಳವಣಿಗೆಗೆ ಅನೇಕ ಕ್ರಮಗಳನ್ನು ಭಾರತದಲ್ಲಿ ಸ್ವಾತಂತ್ರಾ ನಂತರ ಜಾರಿಗೊಳಿಸಲಾಯಿತು. ಪ್ರಸ್ತುತ ಭಾಗದಲ್ಲಿ ಕೊಪ್ಪಳ ಜಿಲ್ಲೆಯಲ್ಲಿರುವ ಬ್ಯಾಂಕಿಂಗ್ ವ್ಯವಸ್ಥೆಯ ಬೆಳವಣಿಗೆ, ಚಟುವಟಿಕೆಗಳು, ಕೊಡುಗೆಗಳು ಚರ್ಚಿಸಲು ಪ್ರಯತ್ನಿಸಲಾಗಿದೆ.

ಕೋಷ್ಟಕ – ೯.೪ರಲ್ಲಿ ಕೊಪ್ಪಳ ಜಿಲ್ಲೆಯಲ್ಲಿರುವ ಹಣಕಾಸು ಸಂಸ್ಥೆಗಳ ಶಾಖೆಗಳ ವಿವರವನ್ನು ತಾಲ್ಲೂಕುವಾರು ನೀಡಲಾಗಿದೆ.

ಕೊಪ್ಪಳ ಜಿಲ್ಲೆಯಲ್ಲಿ ಇಂದು ಒಟ್ಟು ೮೪ ಹಣಕಾಸು ಸಂಸ್ಥೆಗಳ ಶಾಖೆಗಳು ಹಣಕಾಸು ವ್ಯವಹಾರದಲ್ಲಿ ನಿರತವಾಗಿದೆ. ರಾಷ್ಟ್ರ ಮಟ್ಟದಲ್ಲಿ ಪ್ರತಿ ೧೪.೦೦೦ ಜನರಿಗೆ ಒಂದು ಬ್ಯಾಂಕಿಂಗ್ ಶಾಖೆಯ ಸೌಲಭ್ಯ ದೊರೆತಿದ್ದರೆ ಕೊಪ್ಪಳದಲ್ಲಿ ಪ್ರತಿ ೧೩.೦೦೦ ಜನರಿಗೆ ಒಂದು ಬ್ಯಾಂಕ್ ಶಾಖೆಯ ಸೌಲಭ್ಯವಿದೆ. ಅಂದರೆ ಕೊಪ್ಪಳ ಜಿಲ್ಲೆಯಲ್ಲಿ ಬ್ಯಾಂಕಿಂಗ್ ಸೌಲಭ್ಯವು ರಾಷ್ಟ್ರ ಮಟ್ಟದಲ್ಲಿ ಲಭ್ಯವಿರುವ ಸೌಲಭ್ಯದ ಪ್ರಮಾಣಕ್ಕೆ ಸಮವಾಗಿದೆ.

ರಾಯಚೂರು ಜಿಲ್ಲೆಯಲ್ಲಿನ ಬ್ಯಾಂಕಿಂಗ್ ಠೇವಣಿ ಪ್ರಮಾಣವು ೧೯೯೭ರಲ್ಲಿ ರೂ.೫೦೯.೩೧ ಕೋಟಿ ಇತ್ತು. ಈ ಬ್ಯಾಂಕಗಳು ನೀಡಿರುವ ಸಾಲದ ಮೊತ್ತ ರೂ.೫೬೭.೮೫ ಕೋಟಿ. ಈ ಜಿಲ್ಲೆಯಲ್ಲಿ ಉದ್ದರಿ – ಠೇವಣಿ ನಡುವಿನ ಅನುಪಾತ ೧೧೧ ಇದೆ. ಅಂದರೆ ಬ್ಯಾಂಕುಗಳು ಬೇರೆ ಜಿಲ್ಲೆಗಳಿಂದ ಹಣವನ್ನು ತಂದು ಈ ಜಿಲ್ಲೆಯಲ್ಲಿ ಹಂಚುತ್ತಿರುವ ಸ್ಥಿತಿ ಇದೆ. ಈ ಜಿಲ್ಲೆಯಲ್ಲಿ ಬ್ಯಾಂಕುಗಳು ನೀಡಿರುವ ಒಟ್ಟು ಸಾಲದಲ್ಲಿ ಶೇ ೬೮.೬೭ ರಷ್ಟನ್ನು ಆದ್ಯತಾವಲಯಕ್ಕೆ ನೀಡಿದೆ. ಇದೊಂದು ಶ್ಲಾಘನೀಯ ಕಾರ್ಯವಾಗಿದೆ.

ರಾಯಚೂರು ಜಿಲ್ಲೆಯಲ್ಲಿರುವ ಸಾಲ ಮರುಪಾವತಿ ಪ್ರಮಾಣ ಉತ್ತಮವಾಗಿದೆ. ಸಾಲ ವಸೂಲಾತಿ ಪ್ರಮಾಣವು ೧೯೯೪ – ೯೫ರಲ್ಲಿ ಶೇ.೫೫ ರಷ್ಟಿದ್ದುದು ೧೯೯೬ – ೯೭ ರಲ್ಲಿ ಶೇ ೫೯ ಕ್ಕೆ ಏರಿದೆ. ಇದೊಂದು ಆರೋಗ್ಯಕಾರಿ ಬೆಳವಣಿಗೆಯಾಗಿದೆ. ೧೯೯೮ – ೯೯ನೆಯ ಸಾಲಿಗೆ ಕೊಪ್ಪಳ ಜಿಲ್ಲೆಯಲ್ಲಿ ಸಿದ್ದಪಡಿಸಿರುವ ವಾರ್ಷಿಕ ಸಾಲ ಕ್ರಿಯಾ ಯೋಜನೆಯಲ್ಲಿ ಆದ್ಯತಾವಲಯಕ್ಕೆ ನಿಗದಿಪಡಿಸುರುವ ಸಾಲದ ಮೊತ್ತ ರೂ.೮೩.೦೪ ಕೋಟಿ ಮತ್ತು ಆದ್ಯತೆಯಲ್ಲದ ಸಾಮಾನ್ಯ ವಲಯಕ್ಕೆ ನಿಗದಿಪಡಿಸಿರುವ ಮೊತ್ತ ರೂ. ೧೮.೪೬ ಕೋಟಿ. ಈ ಸಾಲಿನಲ್ಲಿ ಆದ್ಯತಾವಲಯಕ್ಕೆ ನಿಗಿದಿಪಡಿಸಿರುವ ಸಾಲದ ಪ್ರಮಾಣ ಶೇ. ೮೨.

ಕನಾಟಕದಲ್ಲಿ ರಸ್ತೆಗಳ ಉದ್ದ ಜಿಲ್ಲಾವಾರು
ಕೋಷ್ಟಕ: ೯.೧

ಕ್ರ. ಸಂ.

ಜಿಲ್ಲೆಗಳು

(.ಕಿ.ಮಿ)

ವಿಸ್ತೀರ್ಣ

(ಲಕ್ಷಗಳಲ್ಲಿ)

ಜನಸಂಖ್ಯೆ

ರಸ್ತೆಗಳ ಉದ್ದ (ಕಿ.ಮಿ)

ಪ್ರತಿ ಒಂದು

ಲಕ್ಷ

ಜನಸಂಖ್ಯೆಗೆ

ರಸ್ತೆಗಳ

ಉದ್ದ

ರಾಜ್ಯದಲ್ಲಿ

ಸ್ಥಾನ

ಪ್ರತಿ ೧೦೦

.ಕಿ.ಮಿಗೆ

ರಸ್ತೆಗಳ

ಉದ್ದ

ರಾಜ್ಯದಲ್ಲಿ

ಸ್ಥಾನ

ರಸ್ತೆಗಳ

ಉದ್ದ

ರಾಜ್ಯದ ಒಟ್ಟು ರಸ್ತೆಗಳ ಉದ್ದದಲ್ಲಿ ಜಿಲ್ಲೆಯ ಪಾಲು (ಶೇಕಡ)

೧೨೩೪

೧೦

೧೧

೧೨

೧೩

೧೪

೧೫

೧೬

೧೭

೧೮

೧೯

೨೦

೨೧

೨೨

೨೩

೨೪

೨೫

೨೬

೨೭

 

ಬೆಂಗಳೂರು (ನ)ಬೆಂಗಳೂರು (ಗ್ರಾ)ಬೆಳಗಾವಿಬಳ್ಳಾರಿ

ಬೀದರ್

ಬಿಜಾಪುರ

ಬಾಗಲಕೋಟಿ

ಚಿಕ್ಕಮಗಳೂರು

ಚಿತ್ರದುರ್ಗ

ದಾವಣಗೆರೆ

ದಕ್ಷಿಣ ಕನ್ನಡ

ಉಡುಪಿ

ಧಾರವಾಡ

ಗದಗ

ಹಾವೇರಿ

ಗುಲ್ಬರ್ಗಾ

ಹಾಸನ

ಕೊಡಗು

ಕೋಲಾರ

ಮಂಡ್ಯ

ಮೈಸೂರು

ಚಾ.ರಾ.ನಗರ

ರಾಯಚೂರು

ಕೊಪ್ಪಳ

ಶಿವಮೊಗ್ಗ

ತುಮಕೂರು

ಉತ್ತರ ಕನ್ನಡ

ಕರ್ನಾಟಕ

೨೧೯೦

೫೮೧೫

೧೨೪೧೫

೮೪೪೭

೫೪೪೮

೧೦೪೮೧

೬೫೮೮

೭೨೦೧

೮೪೪೬

೫೯೪೧

೪೫೯೦

೩೮೫೧

೪೨೪೯

೪೬೩೭

೪೮೫೨

೧೬೨೨೪

೬೮೧೪

೪೧೦೨

೮೨೨೩

೪೯೬೧

೬೨೬೮

೫೬೮೬

೮೪೫೮

೫೫೯

೮೪೭೯

೧೦೫೯೮

೧೦೨೯೧

೧೯೧೨೯೦

೪೮.೩೯

೧೬.೭೩

೩೫.೮೪

೧೬.೫೬

೧೨.೫೬

೧೫.೩೮

೧೩.೯೦

೧೦೧೭

೧೩.೧೩

೧೫.೫೯

೧೬.೫೬

೧೦.೩೮

೧೩.೭೫

೮.೫೯

೨.೬೯

೨೫.೮೨

೧೫.೭೦

೪.೮೮

೨೨.೧೭

೧೬.೪೪

೨೨.೮೨

೮.೮೩

೧೩.೫೨

೯.೫೮

೧೪.೫೨

೨೩.೦೬

೧೨.೨೦

೪೪೯.೭೭

೨೬೭೯

೪೭.೫೦

೭೨೮೪

೪೩೯೭

೨೮.೯೦

೩೯.೬೬

೩೬೨೨

೬೧೦೫

೪೫೨೬

೪೪೦೦

೪೫.೮೦

೨೨೫೧

೨೩೨೬

೨೬೧೪

೪೫೪೨

೬೬೭೭

೫೦೬೫

೩೦೫೩

೬೦೫೦

೮೦೦೩

೬೦೫೫

೩೦೦೩

೩೧೫೨

೨೬೪೭

೬೨೦೬

೭೫೮೪

೬೦೬೨

೧೨೪೪೮೯

೫೫

೨೮೩

೨೦೩

೨೬೬

೨೩೦

೨೫೮

೨೬೦

೬೦೦

೩೪೬

೨೮೨

೧೭೦

೨೧೭

೧೬೯

೨೦೪

೩೫೮

೨೫೮

೪೩೫

೬೨೬

೨೭೩

೪೮೭

೨೬೫

೩೪೦

೨೩೩

೨೭೬

೪೨೭

೩೨೯

೪೯೭

೨೭೭

೨೭

೧೨

೨೪

೧೬

೨೨

೬೦

೧೮

೧೩

೨೫

೨೩

೨೬

೧೧

೧೯

೧೫

೧೭

೨೧

೧೪

೧೦

೧೨೨

೮೧

೫೪

೫೨

೫೩

೩೮

೫೫

೮೫

೫೪

೭೪

೬೧

೫೮

೫೫

೫೬

೯೪

೪೧

೧೦೦

೭೪

೭೩

೧೬೧

೯೭

೫೩

೩೭

೪೮

೭೩

೭೧

೫೯

೬೫

೧೯

೨೩

೨೧

೨೬

೧೮

೨೦

೧೩

೧೫

೧೭

೧೬

೨೫

೧೦

೨೨

೨೭

೨೪

೧೧

೧೨

೧೪

೨.೧೫

೩.೮೦

೫.೮೫

೩.೫೩

೨.೩೨

೩.೧೯

೨.೯೧

೪.೯೦

೩.೬೫

೩.೫೪

೨.೨೬

೧.೮೧

೧.೮೭

೨.೧೦

೩.೩೬

೫.೩೬

೫.೪೯

೨.೪೫

೪.೮೬

೬.೪೩

೪.೮೬

೨.೪೧

೨.೫೩

೨.೧೩

೪.೯೯

೬.೦೯

೪.೮೭

೧೦೦.೦೦

ಹೊಸ ಜಿಲ್ಲೆಗಳಲ್ಲಿನ ರಸ್ತೆಗಳ ಉದ್ದ
ಕೋಷ್ಟಕ: ೯.೨

ಜಿಲ್ಲೆಗಳು

ರಾಷ್ಟ್ರೀಯ ಹೆದ್ದಾರಿ

ರಾಜ್ಯ ಹೆದ್ದಾರೆ

ಜಿಲ್ಲಾ ಮುಖ್ಯ ರಸ್ತೆ

ಇತರೆ ಜಿಲ್ಲಾ ರಸ್ತೆ

ಹಳ್ಳಿ ರಸ್ತೆ

ಒಟ್ಟು

ರಾಜ್ಯದಲ್ಲಿ ಜಿಲ್ಲೆಗಳ ಸ್ಥಾನ (R)

ಉಡುಪಿ

೧೦೭

೩೫೭

೬೮೮

೧೦೯೧

೨೨೫೧
೧.೮೦೮೧೯

೨೭

ಕೊಪ್ಪಳ

೪೯

೩೩೮

೫೩೭

೩೬

೧೬೮೭

೨೬೪೭
೨.೧೨೬೨೯

೨೫

ಗದಗ

೨೪೯

೬೫೭

೧೩

೧೬೯೫

೨೬೧೪
೨.೦೯೯೭೮

೨೩

ಚಾಮರಾಜ ನಗರ

೨೪೨

೬೪೯

೨೧೩೨

೩೦೨೩
೨.೪೨೮೩೨

೨೦

ದಾವಣಗೆರೆ

೫೭

೨೮೦

೧೦೦೩

೮೬

೨೯೭೪

೪೪೦೦
೩.೫೩೪೪

೧೩

ಬಾಗಲಕೋಟೆ

೬೦

೩೯೬

೧೦೫೨

೧೫೧

೧೯೩೩

೩೬೨೨
೨.೯೦೯೪೯

೧೭

ಹಾವೇರಿ

೧೦೩

೧೯೭

೭೪೨

೪೬

೩೪೬೦

೪೫೪೨
೩.೬೪೮೫

೧೪

ಕರ್ನಾಟಕ ರಾಜ್ಯ

೧೯೯೭

೧೯೭೯೫

೨೮೩೧೧

೨೦೯೦

೩೮೬೭೭

೧.೨೪.೪೮೯

ಇಡೀ ರಾಜ್ಯದಲ್ಲಿರುವ ಒಟ್ಟು ರಸ್ತೆಗಳ ಉದ್ದದಲ್ಲಿ ಉಡುಪಿಯ ಪಾಲು ಶೇ. ೧೧.೮೦

ಹೊಸ ಜಿಲ್ಲೆಗಳಲ್ಲಿ ರಸ್ತೆಗಳ ಸ್ಥಾನಮಾನ
ಕೋಷ್ಟಕ : ೯.೩

ಹೊಸ ಜಿಲ್ಲೆಗಳು ಮತ್ತು ರಾಜ್ಯ

೧೦೦ ಚ.ಕಿ.ಮೀಗಳ ಪ್ರದೇಶದಲ್ಲಿರುವ ರಸ್ತೆಗಳ ಉದ್ದ (ಕಿ.ಮೀ.ಗಳು)

ಒಂದು ಲಕ್ಷ ಜನಸಂಖ್ಯೆಗೆ ಇರುವ ರಸ್ತೆಗಳ ಉದ್ದ (ಕಿ.ಮೀ.ಗಳಲ್ಲಿ)

ಮೊದಲನೆಯದರಲ್ಲಿ ರಾಜ್ಯದಲ್ಲಿ ಜಿಲ್ಲೆಯ ಸ್ಥಾನ

ಎರಡನೆಯದರಲ್ಲಿ ರಾಜ್ಯದಲ್ಲಿ ಜಿಲ್ಲೆಯ ಸ್ಥಾನ

ಉಡುಪಿ

೫೮

೧೯೯

೧೪

೨೩

ಕೊಪ್ಪಳ

೪೮

೨೭೬

೨೩

೧೩

ಗದಗ

೫೬

೩೦೩

೧೬

೧೦

ಚಾಮರಾಜನಗರ

೫೩

೩೪೩

೨೦

ದಾವಣಗೆರೆ

೭೪

೨೮೨

೧೨

ಬಾಗಲಕೋಟೆ

೫೫

೨೬೫

೧೭

೧೭

ಹಾವೇರಿ

೯೩

೩೫೭

ಕರ್ನಾಟಕ ರಾಜ್ಯ

೬೫

೨೭೭

ಜಿಲ್ಲೆಯಲ್ಲಿ ಹಣಕಾಸು ಮತ್ತು ಬ್ಯಾಂಕಿಂಗ್ ವ್ಯವಸ್ಥೆ
ಕೋಷ್ಟಕ.

ಕ್ರ.
ಸಂ.

ಹಣಕಾಸು ಸಂಸ್ಥೆಗಳು

ಗಂಗಾವತಿ

ಕೊಪ್ಪಳ

ಕುಷ್ಟಗಿ

ಯಲಬುರ್ಗಾ

ಜಿಲ್ಲೆ

೧.೨.೩.೪.

೫.

ವಾಣಿಜ್ಯ ಬ್ಯಾಂಕ್‌ಗಳುಗ್ರಾಮೀಣ ಬ್ಯಾಂಕ್‌ಗಳುಡಿಸಿಸಿ ಬ್ಯಾಂಕ್‌ನ ಶಾಖೆಗಳುಪಿ ಎಲ್‌ ಡಿ ಬ್ಯಾಂಕ್‌ಗಳ ಶಾಖೆಗಳು

ಕೆ ಎಸ್ ಎಫ್‌ ಸಿ

೧೪

೧೪

 –

೧೦

 –

 –

೨೪

೨೮

ಕೊಪ್ಪಳ ಜಿಲ್ಲೆಯ ೧೯೯೮೯೯ನೆಯ ಸಾಲಿನ ವಾರ್ಷಿಕ ಸಾಲ ಕ್ರಿಯಾ ಯೋಜನೆ
ಕೋಷ್ಟಕ: .

(ರೂಪಾಯಿ ಲಕ್ಷಗಳಲ್ಲಿ)

ಬ್ಯಾಂಕಿನ ಹೆಸರು

ಶಾಖೆಗಳ ಸಂಖ್ಯೆ

ಆದ್ಯತಾವಲಯ

ಆದ್ಯತೆಯಲ್ಲದ

ವಲಯ

ಒಟ್ಟು

ಶೇಕಡ (ಒಟ್ಟು

ಸಾಲದಲ್ಲಿ ಆದ್ಯತಾ

ವಲಯದ ಪಾಲು)

೧. ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್೨. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ೩. ಸ್ಟೇಟ್ ಬ್ಯಾಂಕ್ ಆಫ್ ಮೈಸೂರು೪. ಸಿಂಡಿಕೇಟ್ ಬ್ಯಾಂಕ್

೫. ಕೆನರಾ ಬ್ಯಾಂಕ್

೬. ಆಂಧ್ರ ಬ್ಯಾಂಕ್

೭. ವಿಜಯಾ ಬ್ಯಾಂಕ್

೮. ಬ್ಯಾಂಕ್ ಆಫ್ ಇಂಡಿಯಾ

೯. ವೈಶ್ಯ ಬ್ಯಾಂಕ್

೧೦. ತುಂಗಭದ್ರ ಗ್ರಾಮೀಣ ಬ್ಯಾಂಕ್

೧೧. ಡಿ.ಸಿ.ಸಿ. ಬ್ಯಾಂಕ್

೧೨. ಕೆ. ಎಸ್. ಎಫ್. ಸಿ

೧೩. ಪಿ. ಎಲ್. ಡಿ. ಬ್ಯಾಂಕ್

೧೬

೩೮

೧೬೬೧.೩೭

೧೫೫.೨೦

೪೨.೮೦

೬೨೩.೬೩

೬೧೯.೯೪

೧೦೦.೫೦

೬೩.೦೨

೩೫.೨೫

೫೦.೦೦

೩೨೭೫.೦೦

೩೯೦.೦೦

೫೪೫.೦೦

೭೪೨.೨೩

೧೬೧.೫೦

೪೪.೦೦

೩.೦೦

೧೧೩.೧೫

೪೧.೨೦

೧೪.೫೦

೫.೦೦

೨೯.೦೦

 –

೧೪.೨೦

 –

 –

೧೫.೦೦

೧೮೨೨.೮೭

೧೯೯.೨೦

೪೫.೮೦

೭೩೬.೭೮

೬೬೧.೧೪

೧೧೫.೦೦

೬೮.೦೨

೬೪.೩೫

೫೦.೦೦

೪೬೯೫.೦೦

೨೯೦.೦೦

೫೪೫.೦೦

೭೫೭.೨೩

೯೧

೭೮

೯೩

೮೪

೯೪

೮೭

೯೨

೫೪

೧೦೦

೭೦

೧೦೦

೧೦೦

೧೦೦

ಒಟ್ಟು

೮೪

೮೨೦೪.೦೪

೧೮೪೬.೩೫

೧೦೧೫೦.೩೯

೮೨