ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಕೊಪ್ಪಳ ಜಿಲ್ಲೆಯಲ್ಲಿ ಮೂಲತಃ ರಾಯಚೂರು ಜಿಲ್ಲೆಯ ಭಾಗವಾಗಿತ್ತು. ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ಸೇರಿದ ರಾಯಚೂರು ಐತಿಹಾಸಿಕವಾಗಿ ಕಳೆದ ಎರಡು ಶತಮಾನಗಳಲ್ಲಿ ಅನೇಕ ಬಗೆಯ ಸ್ಥಿತ್ಯಂತರಗಳನ್ನು ಕಂಡಿದೆ. ಕ್ರಿ.ಶ. ೧೯೪೯ ರವರೆಗೆ ಹೈದರಾಬಾದ್ ನಿಜಾಮನ ಸಾಮ್ರಾಜ್ಯದ ಭಾಗವಾಗಿದ್ದ ರಾಯಚೂರು ಅಭಿವೃದ್ಧಿಯ ದೃಷ್ಟಿಯಿಂದ ನೂರಾರು ವರ್ಷ ನಿರ್ಲಲಕ್ಷಕ್ಕೆ ಒಳಗಾಗಿತ್ತು.ವಸಾಹತುಶಾಹಿ ಆಡಳಿತಕ್ಕೆ ಒಳಗಾಗದೆ ಇದ್ದ ಪರಿಣಾಮವಾಗಿ ಇದು ಅನೇಕ ಒಗೆಯ ಅನಕೂಲಗಳಿಂದ ವಂಚಿತವಾಯಿತು. ನಿಜಾಮನ ಆಳ್ವಿಕೆಯ ಕಾಲದಲ್ಲಿ ಕೊಪ್ಪಳವು ಒಂದು ಜಹಗೀರ ಜಿಲ್ಲೆಯಾಗಿತ್ತು. ಕರ್ನಾಟಕದ ಉಳಿದ ಭಾಗಗಳು ಸ್ವಾತಂ‌ತ್ರಾ ಪೂರ್ವದಲ್ಲಿ ಯಾವ ರೀತಿಯಲ್ಲಿ ಸರ್ಕಾರದ ನೆರವಿನಿಂದ ಅಭಿವೃದ್ಧಿ ಸಾಧಿಸಿಕೊಂಡವೋ ಅದೇ ಬಗೆಯ ಅಭಿವೃದ್ಧಿಯನ್ನು ರಾಯಚೂರು ಜಿಲ್ಲೆ ಪಡೆದುಕೊಳ್ಳಲು ಸಾಧ್ಯವಾಗಲಿಲ್ಲ. ಪಾಳೆಗಾರರು, ಜಹಗೀರ್ ದಾರರು, ಜಮೀನ್ದಾರರು ಮುಂತಾದ ಊಳಿಗಮಾನ್ಯ ಪಳೆಯುಳಿಕೆಗಳ ಹಿಡಿತದಲ್ಲಿ ಅದು ನುಗ್ಗು ನುಸಿಯಾಯಿತು. ೧೯೬೧ರಲ್ಲಿ ರಾಯಚೂರು ಜಿಲ್ಲೆಯಲ್ಲಿ ಸಾಕ್ಷರತೆ ಪ್ರಮಾಣ ಶೇ. ೧೮.೩೫ ಇತ್ತು ಎಂದರೆ ಅಲ್ಲಿನ ಅಭಿವೃದ್ಧಿಯ ಸ್ವರೂಪವನ್ನು ಊಹಿಸಿಕೊಳ್ಳಬಹುದು. ಜಿಲ್ಲೆಯ ಮಹಿಳೆಯರ ಸಾಕ್ಷರತೆ ೧೯೬೧ರಲ್ಲಿ ಶೇ. ೬.೧೧ ಇತ್ತು.

೧೯೫೬ ನವೆಂಬರ್ ಒಂದರಂದು ರಾಯಚೂರು ಜಿಲ್ಲೆ ಕರ್ನಾಟಕದಲ್ಲಿ ವಿಲೀನಗೊಂಡಿತು. ಅಲ್ಲಿಂದ ರಾಯಚೂರು ಜಿಲ್ಲೆಯ ಅಭಿವೃದ್ಧಿ ಎನ್ನುವುದು ಪ್ರಾರಂಭವಾಯಿತು ಎಂದು ಹೇಳಬಹುದು.

ಅಭಿವೃದ್ಧಿಯ ದೃಷ್ಟಿಯಿಂದ ರಾಯಚೂರು ಜಿಲ್ಲೆ ಇಂದಿಗೂ ರಾಜ್ಯದಲ್ಲಿ ಕೊನೆಯ ಸ್ಥಾನದಲ್ಲಿದೆ. ರಾಜ್ಯದಲ್ಲಿ ೨೦ ಜಿಲ್ಲೆಗಳಿದ್ದಾಗ ರಾಯಚೂರು ಜಿಲ್ಲೆಯ ಸ್ಥಾನ ೨೦ ನೆದಾಗಿತ್ತು. ಇಂದು ರಾಜ್ಯದಲ್ಲಿ ೨೭ ಜಿಲ್ಲೆಗಳಾಗಿವೆ. ಇದರಿಂದಾಗಿ ವಿಭಜಿತ ರಾಯಚೂರು ಮತ್ತು ಹೊಸದಾಗಿ ಜನ್ಮ ತಳೆದ ಕೊಪ್ಪಳ – ಇವೆರಡೂ ಜಿಲ್ಲೆಗಳ ಸ್ಥಾನಮಾನ ರಾಜ್ಯಮಟ್ಟದಲ್ಲಿ ಬದಲಾವಣೆಯಾಗಿಲ್ಲ. ಅನೇಕ ಅಭಿವೃದ್ಧಿ ಸೂಚಿಗಳಲ್ಲಿ ಈಗ ರಾಯಚೂರಿಗೆ ೨೭ ನೆಯ ಸ್ಥಾನವಿದ್ದರೆ ಕೊಪ್ಪಳಕ್ಕೆ ೨೬ನೆಯ ಸ್ಥಾನವಿದೆ. ವಿಭಜಿತ ರಾಯಚೂರು ಜಿಲ್ಲೆಗಿಂತ ಹೊಸ ಜಿಲ್ಲೆ ಕೊಪ್ಪಳದದ ಸ್ಥಾನಮಾನ ಸ್ವಲ್ಪಮಟ್ಟಿಗೆ ಉತ್ತಮವಾಗಿದೆ. ಏಕೆಂದರೆ ಕೊಪ್ಪಳವನನ್ನು ಹೊಸ ಜಿಲ್ಲೆಯಾಗಿ ರೂಪಿಸಲು ರಾಯಚೂರು ಜಿಲ್ಲೆಯನ್ನು ವಿಭಜಿಸಿದಾಗ ಅನೇಕ ಕ್ಷೇತ್ರಗಳಲ್ಲಿ ಮುಂದುವರಿದ ತಾಲ್ಲೂಕುಗಳು ಕೊಪ್ಪಳ ಜಿಲ್ಲೆಗೆ ಸೇರಿಕೊಂಡಿರೆ ಹಿಂದುಳಿದ ತಾಲ್ಲೂಕುಗಳೆಲ್ಲ ರಾಯಚೂರು ಜಿಲ್ಲೆಯಲ್ಲಿ ಉಳಿದುಕೊಂಡವು. ಉದಾಹರಣೆಗೆ ರಾಯಚೂರು ಜಿಲ್ಲೆಯಲ್ಲಿ ಸಾಕ್ಷರತೆ ಶೇ. ೩೪.೩೪ ಇದ್ದರೆ ಕೊಪ್ಪಳ ಜಿಲ್ಲೆಯಲ್ಲಿ ಅದು ಶೇ. ೩೮.೨೩ ಇದೆ. ಅವಿಭಜಿತ ರಾಯಚೂರು ಜಿಲ್ಲೆಯಲ್ಲಿ ಸಾಕ್ಷರತೆ ಶೇ. ೩೫.೯೬ ಇತ್ತು. ಲಿಂಗ ಪರಿಣಾಮವು ರಾಯಚೂರು ಜಿಲ್ಲೆಯಲ್ಲಿ ೯೭೮ ಇದ್ದರೆ ಕೊಪ್ಪಳದಲ್ಲಿ ಅದು ೯೮೧ ಇದೆ.ಇಡೀ ರಾಜ್ಯದಲ್ಲಿ ಕೊಪ್ಪಳಕ್ಕೆ ಲಿಂಗ ಪರಿಣಾಮದಲ್ಲಿ ೪ನೆಯ ಸ್ಥಾನದವಿದ್ದರೆ ರಾಯಚೂರಿಗೆ ೫ನೆಯ ಸ್ಥಾನವಿದೆ.

ಮಹಿಳೆಯರ ನಿರ್ಣಾಯಕ ಪಾತ್ರ

ಕೊಪ್ಪಳ ಜಿಲ್ಲೆಯಲ್ಲಿ ಲಿಂಗ ಪರಿಣಾಮವು ಮಹಿಳೆಯರಿಗೆ ಅನಕೂಲವಾಗಿದೆ. ರಾಜ್ಯ ಮಟ್ಟದಲ್ಲಿ ಲಿಂಗ ಪರಿಣಾಮವು ೯೬೦ ಇದ್ದರೆ ಕೊಪ್ಪಳದಲ್ಲಿ ಅದು ೯೮೧. ರಾಜ್ಯ ಮಟ್ಟದಲ್ಲಿ ಒಟ್ಟು ಮಹಿಳಾ ಜನಸಂಖ್ಯೆಯಲ್ಲಿ ದುಡಿಯುವ ಮಹಿಳಾ ವರ್ಗದ ಪ್ರಮಾಣ ಕೇವಲ ಶೇ. ೨೨.೭೩ ಇದ್ದರೆ ಕೊಪ್ಪಳದಲ್ಲಿ ಅದು ೩೨.೬೭ ಇದೆ. ದುಡಿಯುವ ವರ್ಗವನ್ನೇ ತೆಗೆದುಕೊಂಡರೆ, ಜನಸಂಖ್ಯೆಯಲ್ಲಿ ಅವರ ಪ್ರಮಾಣ ರಾಜ್ಯಮಟ್ಟದಲ್ಲಿ ಶೇ. ೨೮.೯೫ ರಷ್ಟಿದ್ದರೆ ಕೊಪ್ಪಳ ಜಿಲ್ಲೆಯಲ್ಲಿ ಅವರ ಪ್ರಮಾಣ ಶೇ. ೩೭.೩೧ರಷ್ಟಿದೆ. ಒಟ್ಟಾರೆ ಕೊಪ್ಪಳ ಜಿಲ್ಲೆಯ ಅಭಿವೃದ್ಧಿಯಲ್ಲಿ ಮೂಲ ದ್ರವ್ಯ ಮಹಿಳೆಯರಿದ್ದಾರೆ. ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ನಿರ್ಣಾಯಕವಾದುದಾಗಿದೆ. ಅಂಕಿ – ಅಂಶಗಳನ್ನು ನಂಬುವುದಾದರೆ ಕೊಪ್ಪಳ ಜಿಲ್ಲೆಯ ಅಭಿವೃದ್ಧಿಗೆ ಮಹಿಳೆಯ ಕಾಣಿಕೆ ೧/೩ಕ್ಕಿಂತ ಅಧಿಕವಾಗಿದೆ. ಆದರೆ ಅಭಿವೃದ್ಧಿಯಿಂದ ದೊರೆಯುವ ಫಲದಲ್ಲಿ ಮಾತ್ರ ಮಹಿಳೆಯರಿಗೆ ೧/೩ರಷ್ಟು ಪಾಲು ದೊರೆಯುತ್ತಿಲ್ಲ.ಉದಾಹರಣೆಗೆ ಜಿಲ್ಲೆಯಲ್ಲಿರುವ ಅಕ್ಷರಸ್ಥರಲ್ಲಿ ಮಹಿಳೆಯರ ಪಾಲು ಕೇವಲ ಶೇ.೨೯.೨೮ ಇದು ೧/೩ಕ್ಕಿಂತ ಕಡಿಮೆಯಾಗಿದೆ.

ಆರೋಗ್ಯಕ್ಕೆ ಸಂಬಂಧಿಸಿದಂತೆಯೂ ಮಹಿಳೆಯರ ದುಃಸ್ಥಿತಿಯು ದಾರುಣವಾಗಿದೆ. ಕೊಪ್ಪಳ ಜಿಲ್ಲೆಗೆ ಸಂಬಂಧಿಸಿದಂತೆ ಆರೋಗ್ಯ ಸೂಚಿಯ ವಿವರಗಳು ದೊರೆಯುವುದಿಲ್ಲ. ಕೊಪಳ್ಳದ ತಾಯಿ ಜಿಲ್ಲೆಯಾದ ರಾಯಚೂರು ಜಿಲ್ಲೆಯ ಆರೋಗ್ಯ ಸೂಚಿಗಳನ್ನೇ ಕೊಪ್ಪಳ್ಳಕ್ಕೂ ಅನ್ವಯಿಸುವುದಾದರೆ, ಇಲ್ಲಿ ಆರೋಗ್ಯ ದುಃಸ್ಥಿತಿಯಿಂದ ಕೂಡಿರುವುದು ತಿಳಿಯುತ್ತದೆ. ಜನಸಂಖ್ಯೆಯ ತೀವ್ರಗತಿ ಬೆಳಗಣಿಗೆಯನ್ನು ಅರೋಗ್ಯ ದುಸ್ಥಿತಿಯ ಮಾನದಂಡವವಾಗಿ ಉಪಯೋಗಿಸಿಬಹುದಾಗಿದೆ. ಕರ್ನಾಟಕದಲ್ಲಿ ಜನಸಂಖ್ಯೆಯ ಬೆಳವಣಿಗೆ ಪ್ರಮಾಣ ಅತಿ ಹೆಚ್ಚಾಗಿರುವುದು ಕೊಫ್ಲಳ ಜಿಲ್ಲೆಯನ್ನು ಒಳಗೊಂಡತೆ ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಎಂಬುದು ಸ್ಪಷ್ಟವಾಗಿದೆ.

ಲಿಂಗತಾರತಮ್ಯ

ಲಿಂಗ ಪರಿಣಾಮವೇನೊ ಮಹಿಳೆಯರಿಗೆ ಸ್ವಲ್ಪ ಮಟ್ಟಿಗೆ ಪರವಾಗಿದೆ. ರಾಜ್ಯ ಸರಾಸರಿ ಲಿಂಗ ಪರಿಣಾಮಕ್ಕಿಂತ ಕೊಪ್ಪಳದಲ್ಲಿ ಅದು ಉನ್ನತವಾಗಿದೆ.ದುಡಿಮೆಗಾರ ವರ್ಗದಲ್ಲಿ ಮಹಿಳೆಯ ಪ್ರಮಾಣ ಆಗಾಧವಾಗಿದೆ. ಆದರೆ ಮಹಿಳೆಯರು ಅನೇಕ ಬಗೆಯ ತಾರತಮ್ಯ ನಿರ್ಲಕ್ಷಕ್ಕೆ ಜಿಲ್ಲೆಯಲ್ಲಿ ಒಳಗಾಗುತ್ತಿದ್ದಾರೆ. ಐದು ವರ್ಷಕ್ಕೆ ಒಳಗಿನ ಮಕ್ಕಳ ಮರಣ ಪ್ರಮಾಣಕ್ಕೆ ಸಂಬಂಧಿಸಿದಂತೆ ರಾಯಚೂರು ಜಿಲ್ಲೆಯಲ್ಲಿ ಹೆಣ್ಣು ಮಕ್ಕಳ ಮರಣ ಪ್ರಮಾಣ ಗಂಡು ಮಕ್ಕಳ ಮರಣ ಪ್ರಮಾಣಕ್ಕಿಂತ ಅಧಿಕವಾಗಿದೆ. ಶಾಲೆಗೆ ಪ್ರವೇಶಿಸಿದ ಮಕ್ಕಳ ಪ್ರಮಾಣದಲ್ಲೂ ಲಿಂಗ ತಾರತಮ್ಯ ದಟ್ಟವಾಗಿದೆ.ಬಾಲಕರಿಗೆ ಸಂಬಂಧಿಸಿದಂತೆ ರಾಯಚೂರು ಜಿಲ್ಲೆಯಲ್ಲಿ ಶಾಲೆ ಪ್ರವೇಶಿಸಿದ ಬಾಲಕರ ಪ್ರಮಾಣ ಶೇ. ೩೩.೨೪ ಇದ್ದರೆ ಬಾಲಕಿಯರಲ್ಲಿ ಅದು ಶೇ. ೫೪.೪೩ ಇದೆ. ರಾಯಚೂರು ಜಿಲ್ಲೆಯಲ್ಲಿ ಬಾಲ ಕಾರ್ಮಿಕರ ಸಂಖ್ಯೆ ೮೬.೦೦೦. ಇವರಲ್ಲಿ ಶೇ. ೫೧.೧೬ರಷ್ಟು ಬಾಲಕಿಯರಿದ್ದಾರೆ. ಇಡೀ ರಾಜ್ಯದಲ್ಲಿ ಮಹಿಳೆಯರ ವಿವಾಹದ ವಯಸ್ಸು ಅತ್ಯಂತ ಕಡಿಮೆ ಇರುವುದು (೧೮ – ೨೦ವರ್ಷ) ರಾಯಚೂರು ಜಿಲ್ಲೆಯಲ್ಲಿ ಎಂಬುದು ಆತಂಕಕ್ಕೆ ಕಾರಣವಾಗಿರಬೇಕು. ಈ ಜಿಲ್ಲೆಯಲ್ಲಿ ಅರ್ಧದಷ್ಟು ಹೆಣ್ಣು ಮಕ್ಕಳು ೨೦ ವರ್ಷ ತುಂಬುವುದರೊಳಗೆ ವಿವಾಹವಾಗಿ ಬಿಟ್ಟಿರುತ್ತಾರೆ.

ಕೊಪ್ಪಳ ಜಿಲ್ಲೆಯು ೨೧ ನೆಯ ಶತಮಾನದಲ್ಲಿ ಎದುರಿಸಬೇಕಾದ ದೊಡ್ಡ ಸಮಸ್ಯೆಯೆಂದರೆ ಲಿಂಗ ತಾರತಮ್ಯದ ನಿವಾರಣೆಯಾಗಿದೆ. ಅಭಿವೃದ್ಧಿಯನ್ನು ಹೇಗೆ ಲಿಂಗೀಕರಣಗೊಳಿಸುವುದು? ಎಂಬುದು ಇಲ್ಲಿನ ಮುಖ್ಯ ಸಮಸ್ಯೆಯಾಗಬೇಕು. ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಮಹಿಳೆಯರ ಪ್ರಧಾನ ಸ್ಥಾನ ಪಡೆಯಬೇಕು.

ಅಭಿವೃದ್ಧಿಯ ಮೌಲ್ಯ ನಿರಪೇಕ್ಷತೆ

ಮೂಲಧಾರೆ ಅಭಿವೃದ್ಧಿ ವಿಚಾರ ಪ್ರಣಾಳಿಕೆಗೆ ಸಂಬಂಧಪಟ್ಟಂತೆ ಇರುವ ತೊಂದರೆಯೇನೆಂದರೆ ಅವರ ಮೌಲ್ಯ ನಿರಪೇಕ್ಷ ದೃಷ್ಟಿಕೋನ. ಸಮಾಜದ ಎಲ್ಲ ವರ್ಗಗಳನ್ನು ಅಭಿವೃದ್ಧಿ ಒಳಗೊಳ್ಳುತ್ತದೆ – ಅಂತರ್ಗತ ಮಾಡಿಕೊಳ್ಳುತ್ತದೆ ಎಂಬ ನಂಬಿಕೆ ಇಲ್ಲಿದೆ. ಅಭಿವೃದ್ಧಿ ಎನ್ನುವುದು ನಿರ್ವಾತದಲ್ಲಿ ಸಂಭವಿಸುವ ಪ್ರಕ್ರಿಯೆಯಲ್ಲ. ಒಂದು ಸಾಮಾಜಿಕ ಚೌಕಟ್ಟಿನೊಳಗೆ ಸಂಭವಿಸುವ ಒಂದು ಪ್ರಕ್ರಿಯೆ. ಒಂದು ದೇಶ/ಪ್ರದೇಶದ ಸಾಮಾಜಿಕ ವ್ಯವಸ್ಥೆಯ ಸ್ವರೂಪಕ್ಕೆ ಅನುಗುಣವಾದ ರೀತಿಯಲ್ಲಿ ಅಭಿವೃದ್ಧಿ ಪ್ರಕ್ರಿಯೆ ರೂಪುಗೊಳ್ಳುತ್ತದೆ. ಈ ಬಗ್ಗೆ ಅಮರ್ತ್ಯಸೇನ ಹೀಗೆ ಬರೆಯುತ್ತಾರೆ. ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಅಸಮಾನತೆ – ತಾರತಮ್ಯಗಳು ಸಮಾಜದಲ್ಲಿ ಮೂಲದಲ್ಲಿರುವ ಸಮಾಜಿಕ ಮತ್ತು ಅರ್ಥಿಕ ಶಕ್ತಿ ಸಂಬಂಧಗಳ ಅಸೌಷ್ಟವತೆಯ ಅಭಿವ್ಯಕ್ತಿಯಾಗಿರುತ್ತದೆ (೧೯೯೪) ಸಾಮಾಜಿಕ ವ್ಯವಸ್ಥೆಗೆ ಅದು ಅತೀತವಾಗಿರುತ್ತದೆ ಎಂಬುದುನ್ನು ನಂಬಲು ಸಾಧ್ಯವಿಲ್ಲ. ಏಣಿ ಶ್ರೇಣಿ, ಲಿಂಗ ತಾರತಮ್ಯ,ಜಾತಿ ಭೇದಗಳಿಂದ ಕೂಡಿರುವ ನಮ್ಮ ಸಮಾಜದ ಸಂದರ್ಭದಲ್ಲಿ ಅಭಿವೃದ್ಧಿಯು ಸಮಾಜದ ಉನ್ನತವರ್ಗದ, ಪ್ರತಿಷ್ಠಿತರ ಹಿತಾಸಕ್ತಿಗಳನ್ನು ಮಾತ್ರ ಪೂರೈಸುತ್ತದೆ. ಉನ್ನತ್ತವರ್ಗದ – ಪ್ರತಿಷ್ಠಿತ ವರ್ಗದ, ಪುರುಷವರ್ಗದ ಹಿತಾಸಕ್ತಿಗಳೇ, ಅವರ ಸಮಸ್ಯೆಗಳೇ ಇಡೀ ಸಮಾಜದ ಹಿತಾಸಕ್ತಿಗಳು ಸಮಸ್ಯೆಗಳು ಎಂಬ ಭ್ರಮೆಯನ್ನು ಸೃಷ್ಟಿಸಲಾಗಿದೆ, ಇದನ್ನು ಪ್ರಸಿದ್ಧ ಅಭಿವೃದ್ಧಿ ಚಿಂತಕ, ನೊಬೆಲ್ ಪ್ರಶಸ್ತಿ ವಿಜೇತ ಗುನ್ನಾರ್ ಮಿರ್ಡಾಲ್ `ಆಪ್ರೋಜ್ ಬಯಾಸ್’ ಎಂದು ಕರೆಯುತ್ತಾರೆ. ಆದ್ದರಿಂದ ಅದು ಮೌಲ್ಯ ನಿರಪೇಕ್ಷವಾಗಿರುತ್ತದೆ ಎಂಬುದು ಸುಳ್ಳು. ನಿರಪೇಕ್ಷತೆ ಎನ್ನುವುದೇ ಒಂದು ಮೌಲ್ಯ ನಿರ್ಣಯ.

ಅಸ್ವಿತ್ವದಲ್ಲಿರುವ ಸಾಮಾಜಿಕ ಸ್ವರೂಪಕ್ಕೆ ಅನುಗುಣವಾದ ರೀತಿಯಲ್ಲಿ ಅಭಿವೃದ್ಧಿ ರೂಪೂಗೊಳ್ಳುತ್ತಿರುತ್ತದೆ. ಆದ್ದರಿಂದ ಅದು ಸಮಾಜದಲ್ಲಿ ದುಸ್ಥಿತಿಯಲ್ಲಿರುವ ವರ್ಗದ ಹಿತಾಸ್ತಿಗಳನ್ನು ಅಗ್ರಗಣ್ಯವನ್ನಾಗಿ ಮಾಡಿಕೊಳ್ಳುವಂತೆ ಪ್ರಜ್ಞಾಪೂರ್ವಕವಾಗಿ ಪ್ರಯತ್ನಿಸಬೇಕಾಗುತ್ತದೆ. ಕೊಪ್ಪಳ ಜಿಲ್ಲೆಯ ಸಂದರ್ಭದಲ್ಲಿ ಅಭಿವೃದ್ಧಿಯು ೧.೯೨ ಲಕ್ಷ ಭೂ ರಹಿತ ಕೃಷಿ ಕಾರ್ಮಿಕರ ಹಾಗೂ ೪ ಲಕ್ಷದಷ್ಟಿರುವ ಮಹಿಳೆಯರ ಹಿತಾಸಕ್ತಿಗಳನ್ನು ಪೂರೈಸುವುದನ್ನು ಮೂಲ ಗುರಿಯನ್ನಾಗಿ ಇಟ್ಟುಕೊಳ್ಳಬೇಕಾಗುತ್ತದೆ. ಈ ವರ್ಗಗುಂಪುಗಳ ಹಿತಾಸಕ್ತಿಗಳನ್ನು ಕಾಪಾಡುವ – ಪೂರೈಸುವ ವ್ರತವನ್ನು ಅಭಿವೃದ್ಧಿ ಕೈಗೊಳ್ಳಬೇಕಾಗುತ್ತದೆ. ಅಭಿವೃದ್ಧಿಯು ಕೊಪ್ಪಳ ಜಿಲ್ಲೆಯಲ್ಲಿ ೨.೦೮ ಲಕ್ಷದಷ್ಟಿರುವ ಪರಿಶಿಷ್ಟರ ಬದುಕನ್ನು ಉತ್ತಮ ಪಡಿಸುವ ದೀಕ್ಷೆಯನ್ನು ತೊಡಬೇಕಾಗುತ್ತದೆ.

ಉತ್ತಮ ವರಮಾನವೋ? ಅಥವಾ ಉತ್ತಮ ಬದುಕೊ?

ವರಮಾನವು ಅಭಿವೃದ್ದಿಯನ್ನು ಮಾನವ ಮಾಡುವ ಮಾನದಂಡಿವಾಗಿದೆ.ಸಮಾಜದ ಜನರ ವರಮನದಲ್ಲಾಗುವ ವೃದ್ಧಿಯನ್ನೇ ಅಭಿವೃದ್ಧಿ ಎನ್ನಲಾಗಿದೆ. ವರಮಾನದ ವೃದ್ಧಿಯನ್ನು ಅಭಿವೃದ್ಧಿಗೆ ಸಂವಾದಿಯನ್ನಾಗಿ ಮಾಡಲಾಗಿದೆ. ವರಮಾನದ ವೃದ್ಧಿಯೇ ಅಭಿವೃದ್ಧಿಯ ಗುರಿಯಾಗಿದೆ. ಈ ವಿಚಾರ ಪ್ರಣಾಳಿಕೆಯಲ್ಲಿ ಅಭಿವೃದ್ದಿಗೆ ಸಂಬಂಧಪಟ್ಟ ಅನೇಕ ಸಂಗತಿಗಳು – ಉದಾಹರಣೆಗೆ ಸಾಕ್ಷರತೆ, ಆರೋಗ್ಯ, ಕುಡಿಯುವ ನೀರು, ಆಹಾರ ಮುಂತಾದ ಅಭಿವೃದ್ಧಿಯ ಸಾಧನಗಳಾಗಿಬಿಟ್ಟಿದೆ. ಮನುಸ್ಯ, ಅವನ ಶ್ರಮಶಕ್ತಿ ಕೂಡ ಕೇವಲ ಉಪಕರಣಾವಾದಿ ಮಹತ್ವ ಮಾತ್ರ ಪಡೆದಿದೆ.

ಈ ಬಗೆಯ ಅಭಿವೃದ್ದಿ ವಿಚಾರ ಪ್ರಣಾಳಿಕೆಯನ್ನು ಅಮರ್ತ್ಯಸೇನ್ ಟೀಕಿಸುತ್ತಾರೆ. ಅಭಿವೃದ್ಧಿಯನ್ನು ಅತ್ಯಂತ ವಿಸ್ತೃತ ನೆಲೆಯಲ್ಲಿ ಹಿಡಿದಿಡಲು ಅವರು ಪ್ರಯತ್ನಿಸುತ್ತಾರೆ. ಅತ್ಯಂತ ಸರಳವಾಗಿ ಅವರು `ಮನುಷ್ಯನ ಬದುಕು ಉತ್ತಮಗೊಳ್ಳುವ ಪರಿಯೇ ಅಭಿವೃದ್ಧಿ’ ಎನ್ನುತ್ತಾರೆ. ಅವರ ಪ್ರಕಾರ ಮನುಷ್ಯನು ಅಭಿವೃದ್ದಿ ಯ `ಸಾಧನ’ವೂ ಹೌದು ಮತ್ತು ಸಾಧ್ಯ’ವೂ ಹೌದು. ಈ ವಿಚಾರ ಪ್ರಣಾಳಿಕೆಯಲ್ಲಿ ಸಾಕ್ಷರತೆ, ಅರೋಗ್ಯ, ಆಹಾರ ಮುಂತಾದವು ತಮ್ಮಷ್ಟಕ್ಕೆ ತಾವು ಮಹತ್ವದ್ದಾಗಿರುತ್ತವೆ. ಅವು ಮನುಷ್ಯನ ಅಂತರ್ಗತ ಗುಣವನ್ನು ಸಂವರ್ಧಿಸುತ್ತವೆ. ಅವುಗಳು ಅಭಿವೃದ್ಧಿಯ ಉಪಕರಣಗಳೂ ಆಗಿವೆ ಮತ್ತು ಅದೇ ರೀತಿ, ಅವು ಮನುಷ್ಯನ ಅಂತಸತ್ವವನ್ನು ಬಲಪಡಿಸುವ ಶಕ್ರಿಯಾಗಿದೆ.

ಈ ನೆಲೆಯಲ್ಲಿ ನೋಡಿದಾಗ ಕೊಪ್ಪಳ ಜಿಲ್ಲೆಯು ಎಲ್ಲ ದೃಷ್ಟಿಯಿಂದಲೂ ಹಿಂದುಳಿದಿರುವ, ಜನರ ಬದುಕು ದುಸ್ಥಿತಿಯಲ್ಲಿರುವ ಜಿಲ್ಲೆಯಾಗಿದೆ. ವರಮಾನದ ದೃಷ್ಟಿಯಿಂದಲೂ ಅದು ಬಡ ಜಿಲ್ಲೆಯಾಗಿದೆ. ಅಮರ್ತ್ಯಸೇನ್ ಹೇಳುವ ಧಾರಣಶಕ್ತಿಯ ದುಸ್ಥಿತಿಯಿಂದ ನರಳುತ್ತಿರುವ ಜಿಲ್ಲೆಯಾಗಿದೆ. ಲಿಂಗ ತಾರತಮ್ಯವು ತೀವ್ರವಾಗಿದೆ. ಕೊಪ್ಪಳ ಜಿಲ್ಲೆಯ ಅಭಿವೃದ್ಧಿಯನ್ನು ಚರ್ಚಿಸುವಾಗ ಈ ಎಲ್ಲ ಸಂಗತಿಗಳನ್ನು ಪರಿಗಣಿಸಬೇಕಾಗುತ್ತದೆ. ಈ ಕುರಿತು ಜನರು ಚಿಂತಿಸಬೇಕಾಗಿದೆ.

ಸಾಕ್ಷರತೆ, ಆರೋಗ್ಯ, ಆಹಾರ ವಿರತಣೆ, ಕುಡಿಯುವ ನೀರಿನ ಪೂರೈಕೆ ಮುಂತಾದವು “ಮೊದಲು” ಎನ್ನುವಂತಾಗಬೇಕು. ಪರಿಶಿಷ್ಟರು, ಮಹಿಳೆಯರು, ಕೃಷಿ ಕಾರ್ಮಿಕರು ಅಭಿವೃದ್ಧಿಯ ಆದ್ಯ ಗುರಿಯಾಗಿಬೇಕು. ವರಮಾನಕ್ಕೆ ಪ್ರತಿಯಾಗಿ ಜನರು ಎಷ್ಟು ವರ್ಷಗಳ ಕಾಲ ಬದುಕುತ್ತಾರೆ? ಅವರು ರೋಗ – ರುಜಿನಗಳಿಂದ ಮುಕ್ತರಾಗಿದ್ದಾರೆಯೆ? ಹುಟ್ಟಿದ ಮಕ್ಕಳು ದಷ್ಟ – ಪುಷ್ಟವಾಗಿ ಬೆಳೆದು ಬದುಕು ನಡೆಸಬಲ್ಲವೆ? ಜನರಿಗೆ ಓದುವ – ಬರೆಯುವ ಕೂಡಿಸುವ – ಕಳೆಯುವ ಲೆಕ್ಕ – ಮುಂತಾದ ಕುಶಲತೆಗಳು ಪ್ರಾಪ್ತವಾಗಿದ್ದಾವೆಯೆ? ಮುಂತಾದವು ಅಭಿವೃದ್ಧಿಯ ಮಾನದಂಡವಾಗಬೇಕು. ಅಭಿವೃದ್ಧಿಯ ಗುರಿ ಜನರ ಬದುಕು ಎಂದಾಗಬೇಕು. ವರಮಾನವು ಜನರ ಬದುಕನ್ನು ಉತ್ತಮಪಡಿಸಬಲ್ಲ ಒಂದು ಸಾಧನ ಅದು ಅನುಷಂಗಿಕ. ಜನರು ಜನರ ಬದುಕು ಪ್ರಧಾನ.

ಏಕರೂಪತೆಯಿಂದ ಬಹುರೂಪದ ಕಡೆಗೆ

ಕೊಪ್ಪಳ ಜಿಲ್ಲೆಯ ಆರ್ಥಿಕ ರಚನೆಯ ಮೂಲ ಲಕ್ಷಣ ಏಕರೂಪತೆ. ಈ ಏಕರೂಪ ಸ್ವರೂಪವನ್ನು ಒಡೆದು ಅದನ್ನು ಬಹುರೂಪಿಯನ್ನಾಗಿ ಮಾಡುವ ಅಗತ್ಯವಿದೆ. ಏಕರೂಪಿಯೆಂದರೆ ಜಿಲ್ಲೆಯ ಶೇ. ೮.೨ ರಷ್ಟು ದುಡಿಮೆಗಾರರು ಪ್ರಾಥಮಿಕ ವಲಯವನ್ನು ಅವಲಂಬಿಸಿದ್ದಾರೆ. ಪ್ರಾಥಮಿಕೇತರ ಆರ್ಥಿಕ ಚಟುವಟಿಕೆಗಳು ವಿರಳವಾಗಿವೆ. ಇದು ಬದಲಾಗಬೇಕು. ಜಮೀನಿನ ಮೇಲೆ – ಕೃಷಿಯ ಮೇಲೆ ಇರುವ ಅತಿಯಾದ ಅವಲಂಬನೆ ತಪ್ಪಬೇಕು.

ಬಹುರೂಪಿ ಆರ್ಥಿಕತೆ ಎಂದರೆ ನಗರೀಕರಣವಲ್ಲ. ಗ್ರಾಮೀಣ ಪ್ರದೇಶದಲ್ಲೇ ಕೃಷಿಯೇತರ ಚಟುವಟಿಕೆಗಳನ್ನು ಒದಗಿಸಬಹುದು. ಕರಕುಶಲ ಕಲೆ, ಕೈಮಗ್ಗ, ಸಣ್ಣ – ಪುಟ್ಟ ಯಂತ್ರಗಳ ತಯಾರಿಕೆ, ರಿಪೇರಿ, ಸಣ್ಣ – ಪುಟ್ಟ ಅಂಗಡಿ, ಹಣಕಾಸು ಸೇವೆ – ಮುಂತಾದ ಚಟುವಟಿಕೆಗಳನ್ನು ಅಭಿವೃದ್ಧಿಪಡಿಸಬಹುದು. ಬಹುರೂಪತೆ ಎಂಬುದು ವೃತ್ತಿಗಳ ವೈವಿಧ್ಯೀಕರಣ ಎಂದು ತಿಳಿಯಬೇಕು. ಈ ದಿಶೆಯಲ್ಲಿ ಮಹಿಳೆಯರು ದುಡಿಮೆ – ಚಟುವಟಿಕೆಗಳನ್ನು ಸಂಘಟಿಸಬೇಕಾಗುತ್ತದೆ. ಬಹುರೂಪತೆ ಇವೆಲ್ಲವನ್ನು ಒಳಗೊಳ್ಳಬೇಕು.

ಸಂಕಷ್ಟ ಸಂಧರ್ಭದಲ್ಲಿ ಏಕರೂಪಿ ಅರ್ಥಕತೆಗಳು ತೀವ್ರ ಆಘಾತಕ್ಕೆ ಒಳಗಾಗಿ ಬಿಡುತ್ತವೆ. ಏಕೆಂದರೆ ಈ ಆರ್ಥಿಕತೆಗಳು ಅವಲಂಬಿಸಿಕೊಂಡಿರುವ ವೃತ್ತಿ ಕುಸಿತ ಅನುಭವಿಸಿದರೆ ಜನರ ಬದುಕು ಮೂರಾಬಟ್ಟೆಯಾಗಿ ಬಿಡುತ್ತದೆ. ಆದರೆ ಬಹುರೂಪಿ ಆರ್ಥಿಕತೆಗಳು ಸಂಕಷ್ಟವನ್ನು ಅರಗಿಸಿಕೊಳ್ಳುವ ಸಾಮರ್ಥ್ಯ ಪಡೆದಿರುತ್ತದೆ.ಅರ್ಥಿಕತೆಯೊಳಗೆ ಒಂದು ಭಾಗದಲ್ಲಿ ಅಥವಾ ಒಂದು ವೃತ್ತಿಯಲ್ಲಿ ಸಂಕಷ್ಟ ಉಂಟಾದರೆ ಅದರ ಇನ್ನೊಂದು ಭಾಗ ಅಥವಾ ಇನ್ನೊಂದು ವೃತ್ತಿ ಜನರ ಬದುಕನ್ನು ಸಂಬಾಳಿಸಬಲ್ಲದು.

ಜಿಲ್ಲೆಯಲ್ಲಿ ಬಡವರ ಪ್ರಮಾಣ ಎಷ್ಟು?

ಕೊಪ್ಪಳ ಜಿಲ್ಲೆಯ ಅಭಿವೃದ್ಧಿ ಅಧ್ಯಯನದ ಸಂದರ್ಭದಲ್ಲಿ ಆ ಜಿಲ್ಲೆಯ ಬಡತನದ ಗಾತ್ರ, ಸ್ವರೂಪ ಯಾವ ಬಗೆಯದು ಎಂಬ ಪ್ರಶ್ನೆ ಸಹಜವಾಗಿ ಉದ್ಭವಿಸುತ್ತದೆ, ಬಡತನದ – ಬಡವರ ಗಾತ್ರವನ್ನು ಮಾಪವ ಮಾಡುವ ಅನೇಕ ವಿಧಾನಗಳು ಬಳಕೆಗೆ ಬಂದಿವೆ. ಕೊಪ್ಪಳ ಜಿಲ್ಲೆಯ ಬಡವರ ಪ್ರಮಾಣದ ವಿವರ ಲಭ್ಯವಿಲ್ಲ. ಅವಿಭಜಿತ ರಾಯಚೂರು ಜಿಲ್ಲೆಯ ಬಡವರ ಪ್ರಮಾಣ ವಿವರ ದೊರೆಯುತ್ತದೆ. ೧೯೯೩ – ೯೪ರಲ್ಲಿ ರಾಯಚೂರು ಜಲ್ಲೆಯಲ್ಲಿನ ಬಡವರ ಪ್ರಮಾಣ ಶೇ.೨೪.೫೭ ಎನ್ನಲಾಗಿದೆ. ಇದನ್ನೇ ಕೊಪ್ಪಳ ಜಿಲ್ಲೆಗೂ ಅನ್ವಯಿಸಬಹುದು. ಅಂದ ಮೇಲೆ ಕೊಪ್ಪಳ ಜಿಲ್ಲೆಯಲ್ಲಿನ ಬಡವರ ಪ್ರಮಾಣ ೨.೩೫ ಲಕ್ಷವಾಗಿದೆ

ಇದಲ್ಲದೆ ಅಪ್ರತ್ಯಕ್ಷ ವಿಧಾನದಿಂದ ಒಂದು ದೇಶ/ಪ್ರದೇಶದ ಬಡತನ ಪ್ರಮಾಣ ಕೃಷಿಕಾರ್ಮಿಕರ ಪ್ರಮಾಣವನ್ನು ಬಡವರ ಸಂಖ್ಯೆಯನ್ನು ಲೆಕ್ಕ ಹಾಕಬಹುದಾಗಿದೆ. ಕೊಪ್ಪಳ ಜಿಲ್ಲೆಯಲ್ಲಿರುವ ಕೃಷಿ ಕಾರ್ಮಿಕರ ಪ್ರಮಾಣ ೧.೯೨ ಲಕ್ಷ. ಈ ವರ್ಗವನ್ನು “ಬಡವರು” ಎಂದು ವರ್ಗಿಕರಿಸಬಹುದು. ಜಿಲ್ಲೆಯಲ್ಲಿರುವ ಪರಿಶಿಷ್ಟರ ಸಂಖ್ಯೆ ೨.೦೮ ಲಕ್ಷ. ಇವರನ್ನು ಕಡುಬಡವರರೆಂದು ವರ್ಗಿಕರಿಸಬಹುದು. ಕೊಪ್ಪಳ ಜಿಲ್ಲೆಯಲ್ಲಿರುವ ನಿರಕ್ಷರಸ್ಥರ ಸಂಖ್ಯೆ ೪.೬೯ ಲಕ್ಷ. ಇವೆಲ್ಲವನ್ನು ಗಮನದಲ್ಲಿಟ್ಟುಕೊಂಡರೆ ಕೊಪ್ಪಳ ಜಿಲ್ಲೆಯ ಅರ್ಧದಷ್ಟು ಜನರು ಬಡವರು ಎಂದು ತೀರ್ಮಾನಿಸಬಹುದು.

ಕೊಪ್ಪಳ ಜಿಲ್ಲೆಯ ಬಡತನಕ್ಕೆ ಹೆಣ್ಣಿನ ಮುಖವಿದೆ.ಈ ಜಿಲ್ಲೆಯಲ್ಲಿ ಬಡತನವು ಲಿಂಗೀಕರಣಕ್ಕೆ ಒಳಗಾಗಿದೆ. ಈ ಜಿಲ್ಲೆಯ ಬಡವರಲ್ಲಿ ಅರ್ಧಕ್ಕಿಂತ ಅಧಿಕ ಮಹಿಳೆಯರಿದ್ದಾರೆ. ಕೃಷಿಕಾರ್ಮಿಕರಲ್ಲಿ ಮಹಿಳೆಯರ ಪ್ರಮಾಣ ಶೇ. ೫೮. ದುಡಿಮೆಗಾರ ವರ್ಗದಲ್ಲಿ ಮಹಿಳೆಯರ ಪ್ರಮಾಣ ಶೇ. ೩೭. ಜಿಲ್ಲೆಯ ಒಟ್ಟು ಅನಕ್ಷರಸ್ಥರಲ್ಲಿ ಮಹಿಳೆಯರ ಸಂಖ್ಯೆ ೨.೯೧,೫೬೫ (ಶೇ.೬೨.೦೬) ಲಕ್ಷ. ಈ ಎಲ್ಲ ಸಂಗತಿಗಳ ಆಧಾರದ ಮೇಲೆ ಜಿಲ್ಲೆಯಲ್ಲಿ ಬಡತನದ ತೀವ್ರ ಒತ್ತಡ ಮಹಿಳೆಯರ ಮೇಲೆ ಅಧಿಕವಾಗಿದೆ ಎಂದು ಹೇಳಬಹುದು. ಕೊಪ್ಪಳ ಜಿಲ್ಲೆಯ ಅಭಿವೃದ್ಧಿಯಲ್ಲಿ ಆಸಕ್ತಿ ಇರುವವರು. ಈ ಬಗ್ಗೆ ಚಿಂತಿಸಬೇಕಾಗಿದೆ. ಅಭಿವೃದ್ದಿಯನ್ನು ಲಿಂಗೀಕರಣಕ್ಕೆ ಒಳಪಡಿಸುವ ಬಗ್ಗೆ ಯೋಚಿಸಬೆಕಾಗಿದೆ.

ನೆಲಮಟ್ಟದ ಯೋಜನೆ

ಭಾರತದ ಸಂವಿಧಾನದ ೭೩ ಮತ್ತು ೭೪ನೆಯ ತಿದ್ದುಪಡಿಯ ನಂತರ ವಿಕೇಂದ್ರೀಕೃತ ಪಂಚಾಯತ್ ರಾಜ ವ್ಯವಸ್ಥೆಯು ಶಾಸನಬದ್ದ ಮನ್ನಣೆಯನ್ನು ಪಡೆದುಕೊಂಡಿದೆ. ನೆಲ ಮಟ್ಟದಿಂದ ಅಭಿವೃದ್ಧಿಯನ್ನು ಕಟ್ಟಬೇಕೆಂಬ ಉದ್ದೇಶಕ್ಕೆ ಒಂದು ಸ್ಪಷ್ಟ ರೂಪ ಈಗ ಸಿಕ್ಕದಂತಾಗಿದೆ. ‘ನೆಲಮಟ್ಟದ ಅಭಿವೃದ್ಧಿ ಯೋಜನೆ’ ಎಂಬುದು ಕೇವಲ ಒಂದು ಆದರ್ಶವಲ್ಲ. ಅದಕ್ಕೆ ಈಗ ಕಾರ್ಯರೂಪಿ ನಲೆ ದೊರಕಿದೆ. ಜಿಲ್ಲಾ ಪಂಚಾಯತಿಗಳು ಇಂದು ಜಿಲ್ಲಾ ಮಟ್ಟದಲ್ಲಿ ಅಭಿವೃದ್ಧಿಯ ಮೂಲ ಘಟಕವಾಗಿದೆ. ಜಿಲ್ಲೆಯನ್ನು, ತಾಲ್ಲೂಕನ್ನು, ಗ್ರಾಮ ಪಂಚಾಯತಿಯನ್ನು ಮೂಲವನ್ನಾಗಿ ಮಾಡಿಕೊಂಡು ಅಭಿವೃದ್ಧಿ ಯೋಜನೆಯನ್ನು ರೂಪಿಸುವ ಕೆಲಸ ನಡೆಸಬೇಕಾಗಿದೆ.

ಕೊಪ್ಪಳ ಜಿಲ್ಲೆಯಲ್ಲಿ ೧೩೫ ಗ್ರಾಮ ಪಂಚಾಯತಿಗಳಿವೆ. ಈ ಗ್ರಾಮ ಪಂಚಾಯತಿಗಳಿಗೆ ಸಂಬಂದಿಸಿಧಂತೆ ಅಭಿವೃದ್ಧಿ ಯೋಜನೆಗಳು ರೂಪುಗೊಳ್ಳಬೇಕು. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ದುಡಿಮೆಗಾರರ ವರ್ಗವೆಷ್ಟು? ನಿರಕ್ಷರಸ್ಥರೆಷ್ಟು? ೦.೬ ವಯೋಮಾನದ ಮಕ್ಕಳ ಸಂಖ್ಯೆ ಎಷ್ಟು? ಜಿಲ್ಲೆಗೆ ಅಗತ್ಯಾವಾದ ಪ್ರಾಥಮಿಕ ಅರೋಗ್ಯ ಕೇಂದ್ರಗಳು ಎಷ್ಟು? ಮುಂತಾದವುಗಳ ಬಗ್ಗೆ ತಳಮಟ್ಟ ಯೋಚಿಸಬೇಕಾಗಿದೆ. ಈ ವಿಷಯಗಳ ಬಗ್ಗೆ ಪ್ರತಿಯೊಂದು ಗ್ರಾಮಮಟ್ಟದಲ್ಲಿ ಅಭಿವೃದ್ಧಿ ಯೋಜನೆ ತಯಾರಾಗಬೇಕು. ಗ್ರಾಮ ಮಟ್ಟದಲ್ಲಿ ರೂಪುಗೊಂಡ ಯೋಜನೆಗಳನ್ನು ಸಂಯೋಜಿಸಿ ಜಿಲ್ಲಾ ಪಂಚಾಯತಿಯು ಜಿಲ್ಲಾ ಅಭಿವೃದ್ಧಿ ಯೋಜನೆ ತಯಾರಿಸಬೇಕು. ಇದಕ್ಕೆ ಸಂಘಟಿತ ಪ್ರಯತ್ನ ಬೇಕು. ನೌಕರಶಾಹಿಯಿಂದ ಇಂತಹ ಕೆಲಸ ಸಾಧ್ಯವಿಲ್ಲ.

ಜಿಲ್ಲೆಯೊಳಗೆ ಪ್ರಾದೇಶಿಕ ಅಸಮಾನತೆ

ಕೊಪ್ಪಳ ಜಿಲ್ಲೆಯಲ್ಲಿ ನಾಲ್ಕು ತಾಲ್ಲೂಕುಗಳಿಗೆ. ಈ ನಾಲ್ಕು ತಾಲ್ಲೂಕುಗಳ ಅಭಿವೃದ್ಧಿಯ ಸ್ವರೂಪ ಹಾಗೂ ಮಟ್ಟವು ಎಕತೆರನಾಗಿಲ್ಲ. ತಾಲ್ಲೂಕುಗಳ ನಡುವೆ ತೀವ್ರ ರೀತಿಯ ಅಂತರ ಅಸಮಾನತೆಗಳಿವೆ. ತಾಲ್ಲೂಕುಗಳ ನಡುವಿನ ಅಭಿವೃದ್ಧಿ ಅಂತರವನ್ನು ಸರಿಪಡಿಸುವ ಕಡೆ ಜಿಲ್ಲಾ ಪಂಚಾಯತಿ ಗಮನಹರಿಸಬೆಕಾಗಿದೆ. ಏಕೆಂದರೆ ಕೊಪ್ಪಳ ಜಿಲ್ಲೆಗೆ ಒದಗುವ ಎಲ್ಲ ಸೌಲಭ್ಯ – ಸವಲತ್ತುಗಳನ್ನು ಜಿಲ್ಲೆಯೊಳಗಿನ ಮುಂದುವರಿದ ತಾಲ್ಲೂಕುಗಳೇ ಕಬಳಿಸಿಕೊಂಡು ಬಿಡಬಹುದು.

ಕೊಪ್ಪಳ ಜಿಲ್ಲೆಯಲ್ಲಿರುವ ನಾಲ್ಕು ತಾಲ್ಲೂಕುಗಳಲ್ಲಿ ಗಂಗಾವತಿಯು ತುಂಬಾ ಮುಂದುವರಿದ ತಾಲ್ಲೂಕಾಗಿದೆ. ಈ ತಾಲ್ಲೂಕಿನಲ್ಲಿನ ಬಿತ್ತನೆ ಪ್ರದೇಶದಲ್ಲಿ ಸುಮಾರು ಶೇ. ೫೫.೫೬ ರಷ್ಟು ನೀರಾವರಿಗೊಳಪಟ್ಟಿದ್ದರೆ ಉಳಿದ ತಾಲ್ಲೂಕುಗಳಲ್ಲಿ ನೀರಾವರಿ ಪ್ರಮಾಣ ಶೇ. ೧೦ ಮೀರಿಲ್ಲ. ಜಿಲ್ಲೆಯಲ್ಲಿ ರುವ ಒಟ್ಟು ಬ್ಯಾಂಕ್ ಶಾಖೆಗಳಲ್ಲಿ ಶೇ. ೩೫.೭೧ ರಷ್ಟು ಈ ತಾಲ್ಲೂಕಿನಲ್ಲಿವೆ. ಕೊಪ್ಪಳ ಜಿಲ್ಲೆಯಲ್ಲಿರುವ ಒಟ್ಟು ಆಸ್ಪತ್ರೆ ಹಾಸಿಗೆಗಳಲ್ಲಿ ಸಿಂಹಪಾಲು ಗಂಗಾವತಿ ತಾಲ್ಲೂಕು ಪಡೆದಿದೆ.

ಈ ಬಗೆಯ ಜಿಲ್ಲೆಯೊಳಗೆ ಇರುವ ಪ್ರಾದೇಶಿಕ ಅಂತರ – ಅಸಮಾನತೆಗಳನ್ನು ನಿವಾರಿಸುವುದರ ಕಡೆ ಜಿಲ್ಲಾ ಪಂಚಯತಿ ಗಮನ ನೀಡಬೇಕಾಗಿದೆ. ಕುಷ್ಟಗಿ ಮತ್ತು ಯಲಬುರ್ಗಾ ತಾಲ್ಲೂಕುಗಳು ತೀವ್ರ ಹಿಂದುಳಿದ ತಾಲ್ಲೂಕುಗಳಾಗಿವೆ. ಈ ತಾಲ್ಲೂಕುಗಳ ಅಭಿವೃದ್ಧಿಗೆ ವಿಶೇಷ ಗಮನ ನೀಡುವ ಅವಶ್ಯಕತೆ ಇದೆ.

ಕೊಪ್ಪಳ ಜಿಲ್ಲೆಯಲ್ಲಿನ ಗ್ರಾಮ ಪಂಚಾಯತ್ಗಳ ವಿವರ (ತಾಲೂಕುವಾರು)

ಕ್ರ. ಸಂ.

ಕೊಪ್ಪಳ

ಗಂಗಾವತಿ

ಯಲಬುರ್ಗಾ

ಕುಷ್ಟಗಿ

೧.೨.೩.

೪.

೫.

೬.

೭.

೮.

೯.

೧೦.

೧೧.

೧೨.

೧೩.

೧೪.

೧೫.

೧೬.

೧೭.

೧೮.

೧೯.

೨೦.

೨೧.

೨೨.

೨೩.

೨೪.

೨೫.

೨೬.

೨೭.

೨೮.

೨೯.

೩೦.

೩೧.

೩೨.

೩೩.

೩೪

೩೫.

೩೬.

೩೭.

೩೮.

೩೯.

ಕವಲೂರುಹಟ್ಟಿಆಳವಂಡಿ

ಬೋಚನಹಳ್ಳಿ

ಬೆಟಗೇರಿ

ಮತ್ತೂರು

ಕಾತರಕಿ ಗುಡ್ಲಾನೂರು

ಬಸರಳ್ಳಿ

ಹಿರೇಸಿಂಧೋಗಿ

ಹಲಗೇರಿ

ಭಾಗ್ಯನಗರ

ಕೋಳೂರು

ಓಜನಹಳ್ಳಿ

ಮಾದಿನೂರು

ಕಿನ್ನಾಳ

ಲೇಬಗೇರಾ

ಇರಕಲ್‌ಗಡಾ

ಚಿಕ್ಕಬೊಮ್ಮನಾಳ

ಹಾನಗಲ್

ಕಲ್‌ ತಾವರಗೇರಾ

ಬೂದಗುಂಪಾ

ಇಂದರಗಿ

ಗುಳದಳ್ಳಿ

ಗಿಣಿಗೇರಾ

ಗೊಂಡಬಾಳ

ಹಿರೇಬಗನಾಳ

ಕುಣಿಕೇರಿ

ಹೊಸಳ್ಳಿ

ಮುನಿರಾಬಾದ ಡ್ಯಾಂ

ಹುಲಿಗಿ

ಹಿಟ್ನಾಳ

ಅಗಳಕೇರಾ

ಶಿವಪೂರ

ಬಂಡಿಹರ್ಲಾಪುರ

ಬಹದ್ದೂರ ಬಂಡಿ

 

 

ಕನಕಗಿರಿಕಾರಟಿಗಿನವಲಿ

ಹೊಸಕೇರಾ

ಚಿಕ್‌ ಡಂಗನಕಲ್

ಹುಲಿಹೈದರ್

ಮಸಲಾಪುರ

ಶ್ರೀ ರಾಮನಗರ

ಢಾಣಾಪುರ

ಬೆನ್ನೂರು

ವೆಂಕಟ್‌ ಗಿರಿ

ಸಿದ್ದಾಪುರ

ಬೂದ ಗುಂಪಾ

ಚಿಕ್‌ ಜಂತಕಲ್

ಚೆಳ್ಳೂರು

ಗೌರಿಪುರ

ಕರಡೋಣಾ

ಬೆವಿನಹಾಳ

ಮರ್ಲಾನಹಳ್ಳಿ

ಹುಲ್ಕಿಹಾಳ

ಆನೆಗುಂದಿ

ವಡ್ಡರಹಟ್ಟಿ

ಮಲ್ಲಾಪುರ

ಬಸ್ಸಾಪಟ್ಟಣ

ಮುಷ್ಟೂರು

ಆಗೋಲಿ

ಉಳೆನೂರು

ಯರಡೋಣಾ

ಸುಳೆಕಲ್

ಮರಳಿ

ಕೇಸರ ಹಟ್ಟಿ

ಹೆರೂರು

ಹನವಾಳ

ಗುಂಡೂರು

ಸಂಗಾಪುರ

ಚಿಕ್ ಬೆಣಕಲ್

ಚಿಕ್ ಮಾದಿನಾಳ

ಹಿರೇಖೇಡ್

ಚಿಕ್ ಡಂಕಣಕಲ್

ತಳಕಲ್ಮಂಗಳೂರುಮುಧೋಳ

ಕಲ್ಲೂರು

ಮಂಡಲಗೇರಾ

ಚಿಕ್ ಮ್ಯಾಗೇರಿ

ಬೇವೊರು

ಶಿರೂರು

ಬಂಡಿ

ಬಳ್ಳುಟಗಿ

ಇಟಗಿ

ಹಿರೇವೆಂಕಲಕುಂಟಾ

ಬನಿಕೊಪ್ಪ

ಹಿರೇಮ್ಯಾಗೇರಿ

ಭಾನಾಪುರ

ಗದ್ದಿಗೇರಿ

ಬಳಗೇರಿ

ಕರಮುಡಿ

ವಜ್ಜರಬಂಡಿ

ಹಿರೇ ಅರಳಹಳ್ಳಿ

ಮಾಟಲದಿನ್ನಿ

ತಾಳಕೇರಿ

ಗಾಣಧಾಳ

ಗುನ್ನಾಳ

ಕುದರಿಮೋತಿ

ಹಿರೇಬಡ್‌ನಾಳ

ವಣಗೇರಿ

ಮುರಡಿ

ಸಂಗನಾಳ

ರಾಜೂರು

ಕುಕನೂರು

ಯರೇಹಂಚಿನಾಳ

ಬೆಣಕಲ್

ತಾವರಗೇರಾಮಾಲಗಿತ್ತಿಹನುಮಸಾಗರ

ಹನುಮನಾಳ

ನಿಲೋಗಲ್

ಕೊರಡಕೇರಾ

ಜಾಗಿರಗುಡದೂರ

ಹೊಲಗೇರಾ

ಕಬ್ಬರಗಿ

ದೋಟಿಹಾಳ

ಜುಮಲಾಪುರ

ಚಳಗೇರಿ

ಮೊದೇನೂರು

ತುಗ್ಗಲದಿನ್ನಿ

ಬೆನಕನಹಾಳೆ

ಹರಗೇರಿ

ಕಾಟಾಪುರ

ಆಡವಿಭಾವಿ

ತಳುವಗೇರಾ

ಹಿರೇಗೊಣ್ಣಾಗರ

ಹಿರೇಬನ್ನಿಗೊಳ

ಕ್ಯಾದಿಗುಂಪಿ

ಬಚಕಲ್

ಕಂದಕೂರು

ಮೆಣೆಧಾಳ

ಸಂಗನಾಳ

ಕಿಲ್ಲಾರ ಹಟ್ಟಿ

ಹಿರೇಮನ್ನಾಪುರ