ಅಭಿವೃದ್ಧಿ ಪ್ರಕ್ರಿಯೆ ಮತ್ತು ಜನಸಂಖ್ಯಾ ಬೆಳವಣಿಗೆಗಳ ನಡುವೆ ಒಂದು ನಿರ್ದಿಷ್ಟ ಬಗೆಯ ಸಂಬಂಧವನ್ನು ಗುರುತಿಸಲಾಗಿದೆ. ಇವೆರಡರ ನಡುವಿನ ಸಂಬಂಧದ ಬಗ್ಗೆ ಭಿನ್ನಾಭಿಪ್ರಾಯ ಸಾಧ್ಯವಿಲ್ಲ. ಆದರೆ, ಈ ಸಂಬಂಧದ ಸ್ವರೂಪ, ಕಾರಣ – ಪರಿಣಾಮಗಳ ನಡುವಿನ ಸಂಬಂಧದ ಬಗ್ಗೆ ಒಮ್ಮತಾಭಿಪ್ರಾಯ ಸಾಧ್ಯವಿಲ್ಲ. ಇವೆರಡೆ ನಡುವಿನ ಸಂಬಂಧದ ಬಗ್ಗೆ ಸಿದ್ಧಾಂತವೊಂದನ್ನು ರೂಪಿಸಿದ ಕೀರ್ತಿ ಥಾಮಸ್ ರಾಬರ್ಟ್‌ ಮಾಲ್ಥಸ್‌ಗೆ ಸಲ್ಲಬೇಕು. ಇವನು ಕ್ರಿ.ಶ. ೧೭೯೮ರಲ್ಲಿ ಅಂದರೆ ಇಂದಿಗೆ ೨೦೦ ವರ್ಷಗಳ ಹಿಂದೆ ರೂಪಿಸಿದ ಸಿದ್ಧಾಂಯಬು ಇಂದಿಗೂ ಅತ್ಯಂತ ಜನಪ್ರಿಯವಾಗಿದೆ. ಬಡದೇಶಗಳ ಜನಸಂಖ್ಯೆಯ ಬೆಳವಣಿಗೆ, ಅದರ ಪರಿಣಾಮಗಳು, ನಿಯಂತ್ರಣ ಮುಂತಾದ ಸಂಗತಿಗಳನ್ನು ಮಾಲ್ಥಸ್‌ನ ಪ್ರಮೇಯದ ಚೌಕಟ್ಟಿನಲ್ಲೇ ಅರ್ಥ ಮಾಡಿಕೊಳ್ಳಲು ಪ್ರಯತ್ನಗಳು ನಡೆಯುತ್ತಿವೆ.

ಮಾಲ್ಥಸ್ ಪ್ರಮೇಯ:

ಜನಸಂಖ್ಯಾ ಬೆಳವಣಿಗೆ ಗತಿಯು ಆರ್ಥಿಕತೆಯ
ಆಹಾರೋತ್ಪಾದನೆ ಬೆಳವಣಿಗೆ ಗತಿಗಿಂತ ಅಧಿಕ
ವಾಗಿರುವ ಸಾಧ್ಯತೆ ಇರುವುದರಿಂದ, ಅದು ಅಭಿ
ವೃದ್ಧಿಗೆ ಕಂಟಕವಾಗಿ ಶಾಪವಾಗಿ ಪರಿಣಮಿಸುವ
ಸಾಧ್ಯತೆ ಇದೆ”.

ಈ ಪ್ರಮೇಯದ ಆಧಾರದ ಮೇಲೆ ಮಾಲ್ಥಸ್‌ ಜನಸಂಖ್ಯೆಯ ಬೆಳವಣಿಗೆಯನ್ನು ತಡೆಯಬೇಕು. ತಗ್ಗಿಸಬೇಕು ಎಂಬ ಸಲಹೆಯನ್ನು ಮುಂದಿಟ್ಟ. ಆಹಾರೋತ್ಪಾದನೆಯ ಬೆಳವಣಿಗೆಯ ಗತಿಗೆ – ಮಟ್ಟಕ್ಕೆ ಒಂದು ಮಿತಿ – ಗಡಿ ಇರುತ್ತದೆ ಎಂಬುದು ಇಲ್ಲಿ ಗೃಹೀತ. ಏಕೆಂದರೆ ಆಹಾರೋತ್ಪಾದನೆಯು ‘ಇಳಿಮುಖ ಸೀಮಾಂತ ಪ್ರತಿಫಲ’ ನಿಯಮಕ್ಕೆ ಬದ್ಧವಾಗಿರುತ್ತದೆ. ಆದರೆ, ಜನಸಂಖ್ಯೆಯ ಬೆಳವಣಿಗೆಗೆ ಮಿತಿ ಅಥವಾ ಗರಿ ಎಂಬುದು ಇರುವುದಿಲ್ಲ. ಇಳಿಮುಖ ಸೀಮಾಂತ ಪ್ರತಿಫಲ ನಿಯಮವೂ ಅದಕ್ಕೆ ಅನ್ವಯವಾಗುವುದಿಲ್ಲ.

ಜನಸಂಖ್ಯೆಯ ಬೆಳವಣಿಗೆಯನ್ನು ನಿಯಂತ್ರಿಸದಿದ್ದ ಪಕ್ಷದಲ್ಲಿ ಅದು ಮಿತಿಮೀರಿ ಬಿಡುತ್ತದೆ. ಇದರಿಂದಾಗಿ ಜನಸಂಖ್ಯೆಯ ಗಾತ್ರ ಮತ್ತು ಆಹಾರೋತ್ಪಾದನೆ ಪ್ರಮಾಣಗಳ ನಡುವೆ ಅಸಮತೋಲನ ಉಂಟಾಗುತ್ತದೆ. ಈ ಅಸಮತೋಲನವು ಅನೇಕ ಗಂಭೀರ ಸಮಸ್ಯೆಗಳಿಗೆ, ಅಂದರೆ ಹಸಿವು, ಬರಗಾಲ, ಸಾವು, ನೋವು, ರೋಗ – ರುಜಿನಗಳಿಗೆ ಕಾರಣವಾಗಬಹುದು ಎಂದು ಮಾಲ್ಥಸ್‌ ಭವಿಷ್ಯ ನುಡಿದಿದ್ದ. ಅವನ ಭವಿಷ್ಯವಾಣಿ ನಿಜವಾಗಲಿಲ್ಲ ಎಂಬುದು ಬೇರೆ ಮಾತು, ಆದರೆ ಅವನ ಪ್ರಮೇಯಗಳು, ವಿಚಾರಗಳು ಇಂದಿಗೂ ಪ್ರಚಲಿತದಲ್ಲಿವೆ. ಭಾರತದ ಜನಸಂಖ್ಯಾ ಬೆಳವಣಿಗೆ ಗತಿಯನ್ನು ‘ಮಾಲ್ಥಸ್‌ವಾದಿ’ ಎಂದು ವರ್ಣಿಸುವುದು ರೂಢಿಯಲ್ಲಿದೆ. ಜನಸಂಖ್ಯೆಗೆ ಸಂಬಂಧಿಸಿದಂತೆ ಒಂದು ಪರಿಭಾಷೆಯನ್ನೆ ಮಾಲ್ಥಸ್‌ ರೂಪಿಸಿಬಿಟ್ಟ. ಜನಸಂಖ್ಯೆ ಎಂಬ ನುಡಿಯಲ್ಲಿ ‘ಸಂಖ್ಯೆ’ಯು ಪ್ರಧಾನವಾಗಿ ‘ಜನ’ ಆನುಷಂಗಿಕವಾಗಿಬಿಟ್ಟಿತು. ಜನಸಂಖ್ಯೆ ಎಂಬುದು ಒಂದು ಸಂಖ್ಯಾವಾಚಿ ನುಡಿಯಾಗಿ ಬಳಕೆಗೆ ಬಂದುಬಿಟ್ಟಿತು. ಜನರ ‘ಅಜ್ಞಾನ’, ‘ಅವಿವೇಕ’, ‘ಮೌಡ್ಯ’’ವೇ ಜನಸಂಖ್ಯೆಯ ಬೆಳವಣಿಗೆಗೆ – ದೊಡ್ಡ ಗಾತ್ರದ ಕುಟುಂಬಗಳಿಗೆ ಕಾರಣ ಎಂಬುದು ಮಾಲ್ಥಸ್‌ವಾದಿ ಸಂಕಥನದ ಒಂದು ಮುಖ್ಯ ಪ್ರತಿಪಾದನೆಯಾಗಿದೆ. ‘ಜನಸಂಖ್ಯೆ’ಯನ್ನು ಒಂದು ಸರ್ವತಂತ್ರ ಸ್ವತಂತ್ರ ಪ್ರಕ್ರಿಯೆಯನ್ನಾಗಿ ಪರಿಭಾವಿಸಿ, ಅದನ್ನು ಸಾಮಾಜಿಕ ಚೌಕಟ್ಟಿನಿಂದ ಬೇರ್ಪಡಿಸಿ ಅನ್ಯಗೊಳಿಸಿ ನೋಡುವ ಪರಿಯೊಂದು ಬೆಳೆವು ಬಂದಿತು. ಈ ಬಗೆಯ ವಿಚಾರ ಪ್ರಣಾಳಿಕೆಯನ್ನು ಒಪ್ಪಿಕೊಳ್ಳುವುದು ಕಷ್ಟ. ಏಕೆಂದರೆ ಜನಸಂಖ್ಯೆಯ ಬೆಳವಣಿಗೆಯು ‘ನಿರ್ವಾತ’ದಲ್ಲಿ ಸಂಭವಿಸುವ ಪ್ರಕ್ರಿಯೆಯಲ್ಲ. ಆದರೆ ಬೆಳವಣಿಗೆಯ ಮೂಲದಲ್ಲಿ ಸಾಮಾಜಿಕ – ರಾಜಕೀಯ – ಕೌಟುಂಬಿಕ ಸಂಗತಿಗಳು ಕ್ರಿಯಾಶೀಲವಾಗಿರುತ್ತವೆ. ಮಾಲ್ಥಸ್‌ಗೆ ಜನಸಂಖ್ಯೆಯ ಸಾಮಾಜಿಕ ನೆಲೆಗಳು ಮುಖ್ಯವಾಗಿರಲಿಲ್ಲ. ಅದರ ತೀವ್ರಗತಿ ಬೆಳವಣಿಗೆಯನ್ನು ಹೇಗೆ ನಿಯಂತ್ರಿಸುವುದು ಎಂಬುದೇ ಅವನ ಮುಖ್ಯ ಕಾಳಜಿಯಾಗಿತ್ತು. ಈ ವಿಷಯದಲ್ಲಿ ಸರ್ಕಾರವು ಬಲಪ್ರಯೋಗದಂತಹ ಕ್ರಮ ತೆಗೆದುಕೊಂಡರೂ ಅದರಲ್ಲಿ ತಪ್ಪೇನಿಲ್ಲ ಎಂಬ ವಾದಗಳೂ ಹುಟ್ಟಿಕೊಂಡವು. ಸಮಾಜದ – ಸಮಷ್ಟಿಯ ಹಿತಕ್ಕಾಗಿ ವ್ಯಕ್ರಿಯ – ಕುಟುಂಬದ ವ್ಯವಹಾರದಲ್ಲಿ ಸರ್ಕಾರವು ಮಧ್ಯ ಪ್ರವೇಶಿಸಿ ನಿರೀಕ್ಷಿತ ಬದಲಾವಣೆ ಉಂಟಾಗುವಂತೆ ಮಾಡಬೇಕು ಎಂಬ ತರ್ಕವನ್ನು ಕಟ್ಟಲಾಯಿತು.

ಜನಸಂಖ್ಯಾ ಬೆಳವಣಿಗೆ ಮತ್ತು ಅಭಿವೃದ್ಧಿಗಳ ನಡುವಿನ ಸಂಬಂಧ ಕುರಿತಂತೆ ಅನೇಕ ತಪ್ಪು ಕಲ್ಪನೆಗಳು ಮೂಡಿಬಿಟ್ಟಿವೆ. ಮೊದಲನೆಯದಾಗಿ, ಜನಸಂಖ್ಯೆಯ ಮಿತಿ ಮೀರಿದ ಬೆಳವಣಿಗೆ, ಅದರ ಬೃಹತ್ ಗಾತ್ರ – ಇವು ಭಾರತದ – ಕರ್ನಾಟಕದ –ಕೊಪ್ಪಳದ ಅಭಿವೃದ್ಧಿಗೆ ಇರುವ ಏಕೈಕ – ಪ್ರಧಾನ ಕಂಟಕ ಎಂಬುದು ಅಂತಹ ಒಂದು ತಪ್ಪು ಕಲ್ಪನೆಯಾಗಿದೆ.

ಎರಡನೆಯದಾಗಿ, ಪರಿಸರಕ್ಕೆ ಸಂಬಂಧಿಸಿದಂತೆ ಅನೇಕ ಸಮಸ್ಯೆಗಳಿವೆ, ಈ ಸಮಸ್ಯೆಗಳಿಗೆಲ್ಲ ಜನಸಂಖ್ಯೆಯ ಮಿತಿ ಮೀರಿದ ಏರಿಕೆಯೇ ಕಾರಣವಾಗಿದೆ ಎಂಬುದು ಇನ್ನೊಂದು ತಪ್ಪು ಕಲ್ಪನೆಯಾಗಿದೆ.

ಮೂರನೆಯದಾಗಿ ಜನರ ಅವಿವೇಕ, ಅಜ್ಞಾನ ಜನಸಂಖ್ಯೆಯ ವಿಪರೀತ ಬೆಳವಣಿಗೆಗೆ ಹಾಗೂ ದೊಡ್ಡ ಕುಟುಂಬಗಳಿಗೆ, ಅತಿಯಾದ ಜನನ ಪ್ರಮಾಣಕ್ಕೆ ಕಾರಣವಾಗಿದೆ ಎಂಬುದೂ ಇಂತಹುದೇ ಒಂದು ತಪ್ಪು ಕಲ್ಪನೆ.

ನಾಲ್ಕನೆಯದಾಗಿ ಜನಸಂಖ್ಯೆಯ ಬೆಳವಣಿಗೆಯನ್ನು, ಅತಿಯಾದ ಜನನ ಪ್ರಮಾಣವನ್ನು ತಡೆಯಲು – ತಗ್ಗಿಸಲು ಏಕೈಕ ಹಾಗೂ ಪರಿಣಾಮಕಾರಿ ಸಾಧನವೆಂದರೆ ಕುಟುಂಬ ಯೋಜನೆ ಎಂಬ ನಂಬಿಕೆ.

ಐದನೆಯದಾಗಿ ಕುಟುಂಬ ಯೋಜನೆಯು ಮಹಿಳೆಯರಿಗೆ ಸಂಬಂದಿಸಿದ ಒಂದು ಸಂಗತಿಯೆಂಬ ನಂಬಿಕೆ. ಬಡತನಕ್ಕೂ, ಬರಗಾಲಕ್ಕೂ ಜನಸಂಖ್ಯೆಯ ಬೆಳವಣಿಗೆಯನ್ನೇ ಕಾರಣ ಮಾಡುವ ಪ್ರತೀತಿಯೊಂದು ಇದೆ.

ಇವೆಲ್ಲವೂ ತಪ್ಪು ಕಲ್ಪನೆಗಳಾಗಿವೆ. ಭ್ರಮೆಗಳಾಗಿವೆ. ಒಂದು ದೇಶ/ ಪ್ರದೇಶದ ಅಭಿವೃದ್ಧಿಗೆ ಜನಸಂಖ್ಯೆಯನ್ನು ಬಿಟ್ಟು ಇನ್ನೂ ಅನೇಕ ಕಂಟಕಗಳೂ ಸಾಧ್ಯ, ಅಭಿವೃದ್ಧಿಯ ವೈಫಲ್ಯವನ್ನು ಜನಸಂಖ್ಯೆಯ ತಲೆಗೆ ಕಟ್ಟುವುದು ಸರಿಯಲ್ಲ. ಪರಿಸರಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಬಡದೇಶಗಳ ಜನಸಂಖ್ಯೆಯ ಮಿತಿ ಮೀರಿದ ಬೆಳವಣಿಗೆಯು ಎಷ್ಟು ಕಾರಣವೊ ಅಷ್ಟೇ ಪ್ರಮಾಣದ ಕಾರಣದ ಭಾರವನ್ನು ಮುಂದುವರಿದ ದೇಶಗಳ ರಾಕ್ಷಸ ಸ್ವರೂಪಿ ಅನುಭೋಗ ಪ್ರವೃತ್ತಿಯೂ ಹೊರಬೇಕಾಗುತ್ತದೆ. ಬಡ ದೇಶಗಳಲ್ಲಿನ ಎಲ್ಲ ಬಗೆಯ ವೈಫಲ್ಯಗಳಿಗೂ ಜನರ ಅವಿವೇಕವನ್ನು ಕಾರಣವನ್ನಾಗಿ ಮಾಡುವುದನ್ನು ನಂಬಲು ಸಾಧ್ಯಲ್ಲ. ಎರಡಕ್ಕಿಂತ ಹೆಚ್ಚಿ ಮಕ್ಕಳನ್ನು ಪಡೆಯುವುದು ಜನರ ಅವಿವೇಕ ಎಂದು ಭಾವಿಸುವುದು ತುಂಬಾ ಸರಳವಾದ ತೀರ್ಮಾನದಂತೆ ಕಾಣುತ್ತದೆ. ಜನಸಂಖ್ಯೆಯ ಬೆಳವಣಿಗೆಯನ್ನು ತಗ್ಗಿಸಲು ಕುಟುಂಬಯೋಜನೆಯೊಂದೆ ಏಕೈಕ ಮಾರ್ಗವಲ್ಲ. ಕೇರಳ ರಾಜ್ಯವು ಕುಟುಂಬ ಯೋಜನೆಗೆ ಪ್ರತಿಯಾಗಿ ‘ಮಾನವಮುಖಿ ಅಭಿವೃದ್ಧಿ’ ಮೂಲಕ ಜನಸಂಖ್ಯೆಯ ಬೆಳವಣಿಗೆಯನ್ನು ತಡೆಯುವುದರಲ್ಲಿ ಯಶಸ್ವಿಯಾಗಿದೆ. ಕುಟುಂಬ ಯೋಜನೆಯು ಮಹಿಳೆಯರಿಗೆ ಎಷ್ಟರ ಮಟ್ಟಿಗೆ ಸಂಬಂಧಿಸಿದೆಯೋ ಅಷ್ಟರಮಟ್ಟಿಗೆ ಪುರುಷರಿಗೂ ಸಂಬಂದಿಸಿದೆ.

ಒಟ್ಟಾರೆ ಜನಸಂಖ್ಯೆಗೆ ಸಂಬಂಧಿಸಿದಂತೆ ಮಾಲ್ಥಸ್‌ವಾದಿ ಭ್ರಮೆಯಿಂದ ನಾವು ಹೊರಬರಬೇಕಾಗಿದೆ. ಅಮರ್ತ್ಯಸೇನ್ ಅವರು ತಮ್ಮ ಅನೇಕ ಅಧ್ಯಯನಗಳಲ್ಲಿ ಮಾಲ್ಥಸ್‌ವಾದಿ ಸಂಕಥನದ ಇತಿಮಿತಿಗಳನ್ನು, ಮಾಲ್ಥಸ್‌ನ ಜನಸಂಖ್ಯಾ ಸಿದ್ಧಾಂತದ ತಾಂತ್ರಿಕ ಲೋಪಗಳನ್ನು ವಿವರವಾಗಿ ಚರ್ಚಿಸಿದ್ದಾರೆ (ಅಮರ್ತ್ಯಸೇನ್ ೧೯೯೫).

ಕೊಪ್ಪಳ ಜಿಲ್ಲಾ ಅಭಿವೃದ್ಧಿ ಅಧ್ಯಯನದ ಪ್ರಸ್ತುತ ಅಧ್ಯಾಯದಲ್ಲಿ ಜಿಲ್ಲೆಯ ಜನಸಂಖ್ಯೆಯ ಬೆಳವಣಿಗೆಯ ಗತಿಯನ್ನು, ಅದರ ಸಾಮಾಜಿಕ ನೆಲೆಗಳನ್ನು, ಆರೋಗ್ಯ ಸಂಬಂಧಿ ಸೂಚಿಗಳನ್ನು ವಿಶ್ಲೇಷಿಸಲಾಗಿದೆ. ಜನಸಂಖ್ಯೆಯ ಬೆಳವಣಿಗೆ ಮೂಲದಲ್ಲಿನ ಸಮಾಜೋ – ಆರ್ಥಿಕ – ರಾಜಕೀಯ ಸಂಗತಿಗಳನ್ನು ಹಿಡಿದಿಡಲು ಪ್ರಯತ್ನಿಸಲಾಗಿದೆ.

ಕೊಪ್ಪಳ ಜಿಲ್ಲೆಯ ಜನಸಂಖ್ಯೆಯ ಬೆಳವಣಿಗೆಯ ಪರಿ

೧೯೮೧ – ೯೧ ರಲ್ಲಿ ರಾಜ್ಯ ಮಟ್ಟದಲ್ಲಿ ಜನಸಂಖ್ಯೆಯ ಬೆಳವಣಿಗೆಯ ಪ್ರಮಾಣ ಶೇ. ೨೧.೧೨ ಇತ್ತು. ಇದು ಹಿಂದಿನ ದಶಕ (೧೯೭೧ – ೮೧) ದಲ್ಲಿದ್ದ ಬೆಳವಣಿಗೆ ಪ್ರಮಾಣ (ಶೇ. ೨೬.೭೫) ಕ್ಕಿಂತ ಶೇ. ೫.೬೩ ಅಂಶಗಳಷ್ಟು ಕಡಿಮೆ ಇತ್ತು. ೧೯೯೧ ರಲ್ಲಿ ರಾಜ್ಯ ಮಟ್ಟದ ಜನಸಂಖ್ಯಾ ಬೆಳವಣಿಗೆಯ ಸರಾಸರಿ ಪ್ರಮಾಣಕ್ಕಿಂತ ಅಧಿಕ ಪ್ರಮಾಣದಲ್ಲಿ ಜನಸಂಖ್ಯಾ ಬೆಳವಣಿಗೆ ಅನುಭವಿಸಿದ ಜಿಲ್ಲೆಗಳೆಂದರೆ ಬಳ್ಳಾರಿ (ಶೇ. ೨೬.೯೨), ಬೀದರ್ (ಶೇ. ೨೬.೧೨), ಗುಲಬರ್ಗಾ (ಶೇ. ೨೪.೧೦) ಮತ್ತು ರಾಯಚೂರು (ಶೇ.೨೯.೪೯). ೧೯೯೧ ರಲ್ಲಿ ಅತ್ಯಧಿಕ ಪ್ರಮಾಣದ ಜನಸಂಖ್ಯಾ ಬೆಳವಣಿಗೆಯನ್ನು ಕಂಡ ಜಿಲ್ಲೆ ರಾಯಚೂರು. ಇಂತಹ ರಾಯಚೂರು ಜಿಲ್ಲೆಯೊಳಗಿಂದ ಉದಯಿಸಿರುವ ಕೊಪ್ಪಳ ಜಿಲ್ಲೆಯ ಜನಸಂಖ್ಯೆಯ ಬೆಳವಣಿಗೆಯನ್ನು ಪರಾಮರ್ಶಿಸಬೇಕಾಗಿದೆ.

೧೯೮೧ – ೯೧ರ ದಶಕಕ್ಕೆ ಸಂಬಂಧಿಸಿದಂತೆ ಕೊಪ್ಪಳ ಜಿಲ್ಲೆಯ ಜನಸಂಖ್ಯಾ ಬೆಳವಣಿಗೆ ಪ್ರಮಾಣವನ್ನು ಕೋಷ್ಟಕ ೩.೧ ರಲ್ಲಿ ತೋರಿಸಿದೆ.

ತಾಲ್ಲೂಕುವಾರು ಜನಸಂಖ್ಯೆಯ ಬೆಳವಣಿಗೆ ಪ್ರಮಾಣ೧೯೮೧೯೧

ಕೋಷ್ಟಕ: .

ತಾಲ್ಲೂಕುಗಳು

ಜನಸಂಖ್ಯೆ

೧೯೯೧೯೧ ದಶಕದಲ್ಲಿನ ಬದಲಾವಣೆ

೧೯೮೧

೧೯೯೧

ಗಂಗಾವತಿಕೊಪ್ಪಳಕುಷ್ಟಗಿ

ಯಲಬುರ್ಗ

ಕೊಪ್ಪಳ ಜಿಲ್ಲೆ

೨,೫೭,೧೯೪

೧,೯೯,೮೨೧

೧,೩೬,೮೬೪

೧,೫೪,೩೪೩

೭,೪೮,೨೨೨

೩,೨೦,೩೯೪

೨,೫೧,೭೧೩

೧,೮೯,೮೯೧

೧,೯೬,೦೮೦

೯,೫೮,೦೭೮

+೨೪.೫೭

+೨೫.೯೭

+೩೮.೭೪

+೨೭.೦೪

+೨೮.೦೫

೧೯೮೧ ರಲ್ಲಿ ಕೊಪ್ಪಳ ಜಿಲ್ಲೆಯ ಜನಸಂಖ್ಯೆ ೭.೪೮ ಲಕ್ಷ ಇತ್ತು. ೧೯೯೧ ರಲ್ಲಿ ಅದು ೯.೫೮ ಲಕ್ಷಕ್ಕೆ ಏರಿಕೆಯಾಗಿದೆ. ಅಂದರೆ ೧೯೮೧ – ೯೧ ದಶಕದಲ್ಲಿ ಜಿಲ್ಲೆಯ ಜನಸಂಖ್ಯೆ ನಿವ್ವಳ ೨.೧೦ ಲಕ್ಷ ಅಧಿಕಗೊಂಡಿದೆ. ಇಲ್ಲಿ ಉಂಟಾದ ದಶಕವಾರು ಶೇಕಡ ಏರಿಕೆ ೨೮.೦೫. ಇದು ರಾಜ್ಯ ಮಟ್ಟದ ಜನಸಂಖ್ಯಾ ಬೆಳವಣಿಗೆಯು ಸರಾಸರಿ ಬೆಳವಣಿಗೆಗಿಂತ ಅಧಿಕವಾಗಿದೆ. ಅವಿಭಜಿತ ರಾಯಚೂರು ಜಿಲ್ಲೆಯ ಬೆಳವಣಿಗೆ ಪ್ರಮಾಣ ಶೇ. ೨೯.೪೯ ರಷ್ಟಿತ್ತು. ವಿಭಜನೆಗೊಂಡ ಮೇಲೆ ಕೊಪ್ಪಳ ಜಿಲ್ಲೆಯ ಜನಸಂಖ್ಯಾ ಬೆಳವಣಿಗೆ ಪ್ರಮಾಣವು ರಾಯಚೂರು ಜಿಲ್ಲೆಯ ಜನಸಂಖ್ಯೆಯ ಬೆಳವಣಿಗೆ ಪ್ರಮಾಣಕ್ಕಿಂತ ಕಡಿಮೆ ಇದೆ. ಜನಸಂಖ್ಯೆ ಬೆಳವಣಿಗೆಗೆ ಸಂಬಂಧಿಸಿದಂತೆ ರಾಜ್ಯದಲ್ಲಿ (ಬೆಂಗಳೂರು ನಗರ ಬಿಟ್ಟು) ೨೭ನೆಯ ಸ್ಥಾನ ರಾಯಚೂರಿನದಾಗಿದ್ದರೆ, ೨೬ನೇ ಸ್ಥಾನ ಕೊಪ್ಪಳದ್ದಾಗಿದೆ.

ತಾಲ್ಲೂಕುವಾರು ಜನಸಂಖ್ಯಾ ಬೆಳವಣಿಗೆ

ಕೋಷ್ಟಕ ೩.೧ ರಲ್ಲಿ ತೋರಿಸಿರುವಂತೆ ಕೊಪ್ಪಳ ಜಿಲ್ಲೆಯ ನಾಲ್ಕು ತಾಲ್ಲೂಕುಗಳಲ್ಲಿ ಅತಿ ಹೆಚ್ಚಿನ ಜನಸಂಖ್ಯಾ ಬೆಳವಣಿಗೆ ಪ್ರಮಾಣವನ್ನು ಅನುಭವಿಸಿದ ತಾಲ್ಲೂಕು ಕುಷ್ಟಗಿ. ಕುಷ್ಟಗಿ ತಾಲ್ಲೂಕಿನಲ್ಲಿ ಜನಸಂಖ್ಯಾ ಬೆಳವಣಿಗೆ ಶೇ. ೩೮.೨೪ ರಷ್ಟಿತ್ತು. ಉಳಿದ ತಾಲ್ಲೂಕುಗಳಲ್ಲಿ ಜನಸಂಖ್ಯಾ ಬೆಳವಣಿಗೆ ಪ್ರಮಾಣವು ಜಿಲ್ಲಾ ಸರಾಸರಿಗಿಂತ ಕಡಿಮೆ ಇದೆ. ಕೊಪ್ಪಳ ಜಿಲ್ಲೆಯಲ್ಲಿ ಜನಸಂಖ್ಯಾ ಬೆಳವಣಿಗೆಯ ತೀವ್ರ ಒತ್ತಡ ಇರುವುದು ಕುಷ್ಟಗಿ ತಾಲ್ಲೂಕಿನಲ್ಲಿ ಎಂಬುದು ಸ್ಪಷ್ಟ. ಜನಸಂಖ್ಯೆಯ ಬೆಳವಣಿಗೆಯನ್ನು ತಡೆಯುವ ಕ್ರಮಗಳು ತಾವ ತಾಲ್ಲೂಕಿನಲ್ಲಿ ಕೇಂದ್ರೀಕರಣಗೊಳ್ಳಬೇಕು ಎಂಬುದು ಇಲ್ಲಿನ ವಿವರದಿಂದ ಸ್ಪಷ್ಟವಾಗುತ್ತದೆ.

ವರ್ಷ ವಯೋಮಾನದ ಮಕ್ಕಳ ಸಂಖ್ಯೆ

ಒಂದು ದೇಶ / ಪ್ರದೇಶದ ಜನಸಂಖ್ಯೆಯ ಒತ್ತಡವನ್ನು ಮಾಪನ ಮಾಡಲು ಅನೇಕ ಮಾನದಂಡಗಳನ್ನು ಬಳಸಬಹುದಾಗಿದೆ. ಜನನ ಪ್ರಮಾಣ, ಜನಸಂಖ್ಯೆಯ ಬೆಳವಣಿಗೆ ಪ್ರಮಾಣ, ಜನಸಾಂದ್ರತೆ ಮುಂತಾದವು ಸಾಂಪ್ರದಾಯಿಕವಾಗಿ ಬಳಕೆಯಾಗುತ್ತಿರುವ ಜನಸಂಖ್ಯೆಯ ಒತ್ತಡವನ್ನು ಮಾಪನ ಮಾಡುವ ಅಳತೆಗೋಲುಗಳು. ಇದೇ ರೀತಿ ಒಂದು ದೇಶ ಯಾ ಪ್ರದೇಶದ ಜನಸಂಖ್ಯೆಯಲ್ಲಿ ೦ – ೬ ವರ್ಷ ವಯೋಮಾನದ ಮಕ್ಕಳ ಸಂಖ್ಯೆ ಪ್ರಮಾಣ ಎಷ್ಟಿದೆ ಎಂಬುದರ ಆಧಾರದ ಮೇಲೆ ಜನಸಂಖ್ಯೆಯ ಒತ್ತಡವನ್ನು ಅಳೆಯಲು ಸಾಧ್ಯ. ಯಾವ ದೇಶ ಯಾ ಪ್ರದೇಶದ ಜನಸಂಖ್ಯೆ ಅಧಿಕ ಪ್ರಮಾಣದಲ್ಲಿ/ ತೀವ್ರಗತಿಯಲ್ಲಿ ಬೆಳೆಯುತ್ತಿದೆಯೊ ಆ ಜನಸಂಖ್ಯೆಯನ್ನು ‘ಎಳೆತನದಿಂದ ಕೂಡಿರುವ ಜನಸಂಖ್ಯೆ’ ಎಂದು ಕರೆಯುವುದು ರೂಢಿ. ಜನನ ಪ್ರಮಾಣ ಹಾಗೂ ಪ್ರಜನೋತ್ಪತ್ತಿ ಪ್ರಮಾಣವು ಅಧಿಕವಿರುವ ದೇಶ/ ಪ್ರದೇಶದಲ್ಲಿ ಎಳೆ ವಯಸ್ಸಿನ ಮಕ್ಕಳ ಸಂಖ್ಯೆ ಅಧಿಕವಾಗಿರುತ್ತದೆ.

ಕರ್ನಾಟಕದ ೨೭ ಜಿಲ್ಲೆಗಳಲ್ಲಿ ೦ – ೬ ವರ್ಷ ವಯೋಮಾನದ ಮಕ್ಕಳ ಸಂಖ್ಯೆ ಹಾಗೂ ಜನಸಂಖ್ಯೆಯಲ್ಲಿ ಅವರ ಪ್ರಮಾಣ ಎಷ್ಟಿದೆ ಎಂಬುದನ್ನು ಅನುಬಂಧ ಕೋಷ್ಟಕ – ೧.೮ ಮತ್ತು ೧.೯ ರಲ್ಲಿ ತೋರಿಸಿದೆ. ರಾಜ್ಯ ಮಟ್ಟದಲ್ಲಿ ಜನಸಂಖ್ಯೆಯಲ್ಲಿ ೦ – ೬ ವರ್ಷ ವಯೋಮಾನದ ಮಕ್ಕಳ ಪ್ರಮಾಣ ಶೇ. ೧೬.೬೩. ಆದರೆ ದಕ್ಷಿಣ ಕರ್ನಾಟಕ ಪ್ರದೇಶದಲ್ಲಿ (ಜಿಲ್ಲೆಗಳು ೧೫) ೦ – ೬ ವಯೋಮಾನದ ಮಕ್ಕಳ ಪ್ರಮಾಣ ಕೇವಲ ಶೇ. ೧೫.೧೫ ಆದರೆ ಉತ್ತರ ಕರ್ನಾಟಕ ಪ್ರದೇಶದಲ್ಲಿ (ಜಿಲ್ಲೆಗಳು ೧೨) ಈ ವಯೋಮಾನದ ಮಕ್ಕಳ ಪ್ರಮಾಣ ಶೇ. ೧೮.೬೪. ಉತ್ತರ ಕರ್ನಾಟಕದ ಗುಲಬರ್ಗಾ ವಿಭಾಗದಲ್ಲಿ ೦ – ೬ ವರ್ಷಗಳ ವಯೋಮಾನದ ಮಕ್ಕಳ ಪ್ರಮಾಣ ಶೇ. ೨೦.೨೨. ಇದರಿಂದ ಸ್ಪಷ್ಟವಾಗುವ ಸಂಗತಿಯೇನೆಂದರೆ ಉತ್ತರ ಕರ್ನಾಟಕ ಪ್ರದೇಶದಲ್ಲಿ ಜನಸಂಖ್ಯೆಯ ಒತ್ತಡವು ದಕ್ಷಿಣ ಕರ್ನಾಟಕ ಪ್ರದೇಶದಲ್ಲಿರುವ ಜನಸಂಖ್ಯೆಯ ಒತ್ತಡಕ್ಕಿಂತ ಅಧಿಕವಾಗಿದೆ. ವಿಭಾಗಗಳಲ್ಲಿ ಜನಸಂಖ್ಯೆಯ ಒತ್ತಡವು ಅತಿ ಹೆಚ್ಚು ಗುಲಬರ್ಗಾ ವಿಭಾಗದಲ್ಲಿದೆ.

ಕೊಪ್ಪಳ ಜಿಲ್ಲೆಯಲ್ಲಿ ಅತಿ ಹೆಚ್ಚು!

ಕರ್ನಾಟಕದ ೨೭ ಜಿಲ್ಲೆಗಳ ಪೈಕಿ ೦ – ೬ ವರ್ಷ ವಯೋಮಾನದ ಮಕ್ಕಳ ಪ್ರಮಾಣವು ಅತಿ ಕಡಿಮೆ ಇರುವುದು ಉಡುಪಿ ಜಿಲ್ಲೆಯಲ್ಲಾಗಿದ್ದರೆ ಅತಿ ಹೆಚ್ಚು ಕೊಪ್ಪಳ ಜಿಲ್ಲೆಯಲ್ಲಿದೆ. ಕೊಪ್ಪಳ ಜಿಲ್ಲೆಯಲ್ಲಿ ೦ – ೬ ವರ್ಷ ವಯೋಮಾನದ ಮಕ್ಕಳ ಪ್ರಮಾಣ ಶೇ. ೨೦.೬೨. ಕರ್ನಾಟಕ ರಾಜ್ಯದಲ್ಲಿರುವ ೦ – ೬ ವರ್ಷ ವಯೋಮಾನದ ಮಕ್ಕಳ ಸಂಖ್ಯೆ ೭೪.೭೭ ಲಕ್ಷ. ಇವರಲ್ಲಿ ದಕ್ಷಿಣ ಕರ್ನಾಟಕದ ಪಾಲು ಶೇ. ೫೨.೫೫. ಆದರೆ ಜನಸಂಖ್ಯೆಯಲ್ಲಿ ದ.ಕ. ಪ್ರದೇಶದ ಪಾಲು ಶೇ.೫೭.೬೭. ಕರ್ನಾಟಕ ಪ್ರದೇಶದಲ್ಲಿ ೦ – ೬ ವರ್ಷ ವಯೋಮಾನದ ಮಕ್ಕಳ ಸಂಖ್ಯೆ ೯೮.೬೪೯. ಈ ಪ್ರದೇಶದ ಜನಸಂಖ್ಯೆಯಲ್ಲಿ ೦ – ೬ ವರ್ಷ ವಯೋಮಾನದ ಮಕ್ಕಳ ಪ್ರಮಾಣ ಶೇ. ೪೭.೪೫. ಆದರೆ ಜನಸಂಖ್ಯೆಯಲ್ಲಿ ಈ ಪ್ರದೇಶದ ಪಾಲು ಕೇವಲ ಶೇ. ೪೨.೩೩.

ಕರ್ನಾಟಕ ರಾಜ್ಯದ ಜನಸಂಖ್ಯೆಯಲ್ಲಿ ಕೊಪ್ಪಳ ಜಿಲ್ಲೆಯ ಜನಸಂಖ್ಯೆಯ ಪಾಲು ಶೇ. ೨.೧೨. ಆದರೆ ೦ – ೬ ವರ್ಷ ವಯೋಮಾನದ ಮಕ್ಕಳ ಸಂಖ್ಯೆಯಲ್ಲಿ ಕೊಪ್ಪಳ ಜಿಲ್ಲೆಯ ಪಾಲು ಶೇ. ೨.೬೪. ಈ ಎಲ್ಲ ಸಂಗತಿಗಳ ಆಧಾರದ ಮೇಲೆ ಕೊಪ್ಪಳ ಜಿಲ್ಲೆಯು ತೀವ್ರಗತಿಯ ಜನಸಂಖ್ಯೆಯ ಬೆಳವಣಿಗೆ ಗತಿಯಿಂದ, ಒತ್ತಡದಿಂದ ನರಳುತ್ತಿದೆ ಎಂದು ಹೇಳಬಹುದು.

ಜನಸಂಖ್ಯೆಯ ಬೆಳವಣಿಗೆ ಹಿಂದಿನ ಕಾರಣ ಮೀಮಾಂಸೆ

ಈ ಅಧ್ಯಯನದಲ್ಲಿ ಜನಸಂಖ್ಯೆಯ ಬೆಳವಣಿಗೆಯ ಹಿಂದಿನ ಕಾರಣಗಳನ್ನು ಸಮಾಜೋ – ಆರ್ಥಿಕ ಸಂಗತಿಗಳಲ್ಲಿ ಗುರುತಿಸಲು ಪ್ರಯತ್ನಿಸಲಾಗಿದೆ. ಜನಸಂಖ್ಯೆಯನ್ನು ಕೇವಲ ಆರ್ಥಿಕ ವಿಷಯ ಅಥವಾ ಸಾಮಾಜಿಕ ವಿಷಯವೆಂದು ವರ್ಗೀಕರಿಸುವುದು ಸಾಧ್ಯವಿಲ್ಲ. ಅದೊಂದು ಬಹುರೂಪಿಯೂ ಬಹು ಆಯಾಮವೂ ಉಳ್ಳ ಸಮಸ್ಯೆಯಾಗಿದೆ. ಜನರ ಅಜ್ಞಾನ, ಅವಿವೇಕ, ಮೌಢ್ಯ ಜನಸಂಖ್ಯೆಯ ಮಿತಿ ಮೀರಿದ ಏರಿಕೆಗೆ ಕಾರಣ ಎಂಬ ಸಂಗತಿಯನ್ನು ಒಪ್ಪಲು ಸಾಧ್ಯವಿಲ್ಲ. ಅಧಿಕ ಸಂಖ್ಯೆಯಲ್ಲಿ ಮಕ್ಕಳನ್ನು ಪಡೆಯುವ ದಂಪತಿಗಳ ನಿರ್ಣಯದ ಹಿಂದೆ ಒಂದು ಉದ್ದೇಶವಿರುತ್ತದೆ, ವಿವೇಚನೆ ಇರುತ್ತದೆ. ಮೊದಲನೆಯದಾಗಿ ಕೊಪ್ಪಳ ಜಿಲ್ಲೆಯು ಒಣ ಬೇಸಾಯವನ್ನು ಹೊಂದಿರುವ ಆರ್ಥಿಕತೆಯಾಗಿದೆ. ಈ ಜಿಲ್ಲೆಯಲ್ಲಿ ಶೇ. ೮೦ಕ್ಕೂ ಮಿಕ್ಕು ಜನ ಕೃಷಿಯನ್ನು ಅವಲಂಬಿಸಿಕೊಂಡಿದ್ದಾರೆ. ದುಡಿಮೆಗಾರ ವರ್ಗದಲ್ಲಿ ಶೇ.೮೦ ರಷ್ಟು ದುಡಿಮೆಗಾರ ವರ್ಗದ ವರಮಾನ ಮತ್ತು ಉದ್ಯೋಗದ ಮೂಲ ಕೃಷಿ. ಕೃಷಿಯನ್ನು ಅವಲಂಬಿಸಿಕೊಂಡಿರುವ ೩.೩೫ ಲಕ್ಷ ಜನರಲ್ಲಿ ಶೇ. ೫೭.೪೭ ರಷ್ಟು ಕೃಷಿ ಕಾರ್ಮಿಕರಿದ್ದಾರೆ. ಕೃಷಿ ಚಟುವಟಿಕೆಗಳು ಅಗಾಧವಾಗಿ ಶ್ರಮಶಕ್ತಿಯನ್ನು ಬಯಸುತ್ತವೆ. ಅದೊಂದು ಶ್ರಮಸಾಂದ್ರ ಚಟುವಟಿಕೆಯಾಗಿದೆ. ಆದ್ದರಿಂದ ಕುಟುಂಬದ ಗಾತ್ರ ದೊಡ್ಡದಿರುವುದು ಇಲ್ಲಿ ಅನಿವಾರ್ಯವಾಗಿದೆ. ಕುಟುಂಬದ ಎಲ್ಲ ಸದಸ್ಯರು ದುಡಿದರೂ ಹೊಟ್ಟೆ ತುಂಬದಿರುವ ಮೈ ಮುಚ್ಚದಿರುವ ಪರಿಸ್ಥಿತಿ ಇಲ್ಲಿದೆ. ಇದರಿಂದಾಗಿ ಕುಟುಂಬಗಳು ಹೆಚ್ಚು ಮಕ್ಕಳನ್ನು ಬಯಸುತ್ತವೆ. ಇದೇನು ವಿವೇಚನಾರಹಿತ ತೀರ್ಮಾನವಲ್ಲ. ಅಧಿಕ ಸಂಖ್ಯೆಯಲ್ಲಿ ಮಕ್ಕಳನ್ನು ಪಡೆಯುವುದು ಸಮಾಜೋ – ಆರ್ಥಿಕ ಅಗತ್ಯವಾಗಿದೆ. ಅನಿವಾರ್ಯವಾಗಿದೆ.

ಕೊಪ್ಪಳ ಜಿಲ್ಲೆಯಲ್ಲಿನ ಜನಸಂದ್ರಾತೆ ಕೇವಲ ೧೭೨ (೧೯೯೧). ರಾಜ್ಯದ ಸರಾಸರಿ ಜನಸಂದ್ರಾತೆ ೨೩೪. ಜನಸಾಂದ್ರತೆಯಲ್ಲಿ ಕೊಪ್ಪಳಕ್ಕೆ ರಾಜ್ಯದಲ್ಲಿ ೧೯ನೆಯ ಸ್ಥಾನವಿದೆ. ಈ ಕಾರಣದಿಂದಾಗಿ ಕೊಪ್ಪಳ ಜಿಲ್ಲೆಯಲ್ಲಿ ಸಂಭವಿಸುತ್ತಿರುವ ಜನಸಂಖ್ಯಾ ಬೆಳವಣಿಗೆಯನ್ನು ಭೀಕರ – ಭಯಾನಕ – ಆತಂಕಕಾರಿ ಎಂದು ತಿಳಿಯಬೇಕಾಗಿಲ್ಲ. ಇದರ ಅರ್ಥ ಜಿಲ್ಲೆಯಲ್ಲಿನ ಜನಸಂಖ್ಯೆಯನ್ನು ತೀವ್ರಗತಿಯಲ್ಲಿ ಬೆಳೆಯಲು ಬಿಡಬೇಕು ಎಂಬುದು ಇಲ್ಲಿನ ಅರ್ಥವಲ್ಲ. ಆದರೆ, ಜನಸಂಖ್ಯೆಯ ಬೆಳವಣಿಗೆಯನ್ನೇ ಅಭಿವೃದ್ಧಿಗೆ ಇರುವ ಏಕೈಕ ಕಂಟಕ ಎನ್ನುವ ಕಾರಣ ಮೀಮಾಂಸೆಯಲ್ಲಿ ಹುರುಳಿಲ್ಲ ಎಂಬುದನ್ನು ಇದರಿಂದ ತೋರಿಸಬಹುದಾಗಿದೆ.

ಮೂರನೆಯದಾಗಿ, ಬಹಳ ಮುಖ್ಯವಾಗಿ, ಸಾಕ್ಷರತೆ, ಅದರಲ್ಲೂ ಮಹಿಳೆಯರ ಸಾಕ್ಷರತೆ ಮತ್ತು ಜನಸಂಖ್ಯಾ ಬೆಳವಣಿಗೆಗಳ ನಡುವೆ ವಿಲೋಮ ಸಂಬಂಧವಿರುವುದನ್ನು ಅನೇಕ ಅಧ್ಯಯನಗಳು ದೃಢಪಡಿಸಿವೆ. ಕೋಷ್ಟಕ ೩.೨ ರಲ್ಲಿ ಕರ್ನಾಟಕದ ವಿಭಾಗಗಳಲ್ಲಿ ಸಾಕ್ಷರತೆ, ಮಹಿಳಾ ಸಾಕ್ಷರತೆ ಹಾಗೂ ಜನಸಂಖ್ಯೆಯ ಬೆಳವಣಿಗೆ ಪ್ರಮಾಣವನ್ನು ತೋರಿಸಿದೆ.

ಯಾವ ಪ್ರದೇಶ / ವಿಭಾಗಗಳಲ್ಲಿ ಸಾಕ್ಷರತೆ ಪ್ರಮಾಣ, ಅದರಲ್ಲೂ ಮಹಿಳೆಯರ ಸಾಕ್ಷರತೆ ಪ್ರಮಾಣ ಕಡಿಮೆ ಇದೆಯೋ ಅಲ್ಲಿ ಜನಸಂಖ್ಯೆಯ ಬೆಳವಣಿಗೆ ಪ್ರಮಾಣವೂ ಅಧಿಕವಾಗಿರುತ್ತದೆ. ಕೊಪ್ಪಳ ಜಿಲ್ಲೆಯು ಗುಲಬರ್ಗಾ ವಿಭಾಗಕ್ಕೆ ಸೇರುತ್ತದೆ. ರಾಜ್ಯದ ಜನಸಂಖ್ಯೆಯಲ್ಲಿ ಶೇ. ೨.೧೩ ಪಾಲು ಪಡೆದಿರುವ ಕೊಪ್ಪಳ ಜಿಲ್ಲೆಯು ರಾಜ್ಯದಲ್ಲಿರುವ ಅಕ್ಷರಸ್ಥರಲ್ಲಿ ಕೇವಲ ಶೇ. ೧.೩೮ ಪಾಲು ಪಡೆದಿದೆ. ಆದರೆ ರಾಜ್ಯ ಒಟ್ಟು ಅನಕ್ಷರಸ್ಥರಲ್ಲಿ ಕೊಪ್ಪಳದ ಪಾಲು ಶೇ. ೨.೮೫.

ಸಾಕ್ಷರತೆಮಹಿಳೆಯರ ಸಾಕ್ಷರತೆ ಮತ್ತು ಜನಸಂಖ್ಯೆಯ ಬೆಳವಣಿಗೆ: ೧೯೯೯

ಕೋಷ್ಟಕ: .

ಕ್ರ.ಸಂ.

ವಿಭಾಗಗಳ ಹೆಸರು

ಒಟ್ಟು ಸಾಕ್ಷರತೆ

ಮಹಿಳೆಯರ ಸಾಕ್ಷರತೆ

೧೯೮೧-೯೧
ರಲ್ಲಿ ಜನಸಂಖ್ಯೆಯ ಬೆಳವಣಿಗೆ

ಬೆಂಗಳೂರುಮೈಸೂರುಬೆಳಗಾಂ

ಗುಲಬರ್ಗಾ

ಕರ್ನಾಟಕ

೬೧.೨೪

೫೮.೪೯

೫೬.೮೫

೪೦.೪೧

೫೬.೦೪

೫೦.೫೧

೪೯.೧೪

೪೩.೦೯

೨೬.೪೧

೪೪.೩೪

೨೩.೩೨

೧೫.೯೮

೧೯.೫೨

೨೬.೫೯

೨೧.೧೨

ಜನಸಂಖ್ಯೆಯ ಬೆಳವಣಿಗೆ ಮತ್ತು ಸಾಕ್ಷರತೆ ಪ್ರಮಾಣಗಳ ನಡುವೆ ಯಾವುದು ಕಾರಣ ಮತ್ತು ಯಾವುದು ಪರಿಣಾಮ ಎಂಬುದನ್ನು ನಿರ್ಧರಿಸುವುದು ಕಷ್ಟ. ಇವೆರಡೂ ಸಂಗತಿಗಳನ್ನು ನಿರ್ಧರಿಸುವ ಮೂರನೆಯ ಸಂಗತಿಯೊಂದಿರಬಹುದು. ಇದು ತುಂಬಾ ಸಂಕೀರ್ಣವಾದ ಸಂಗತಿ.

ಈಗ ಅದರ ಚರ್ಚೆಯನ್ನು ಮಾಡಬಹುದು. ಆ ಮೂರನೆಯ ಸಂಗತಿಯೆಂದರೆ ಕೃಷಿ ಕಾರ್ಮಿಕರ ಪ್ರಮಾಣ. ಯಾವ ಜಿಲ್ಲೆಯಲ್ಲಿ ಕೃಷಿ ಕಾರ್ಮಿಕರ ಪ್ರಮಾಣ ಅಧಿಕವಾಗಿದೆಯೋ ಆ ಜಿಲ್ಲೆಯಲ್ಲಿ ಸಾಕ್ಷರತೆ ಪ್ರಮಾಣ ಕಡಿಮೆ ಇದೆ. ಜನಸಂಖ್ಯೆಯ ಬೆಳವಣಿಗೆ, ಸಾಕ್ಷರತೆ ಮತ್ತು ಕೃಷಿ ಕಾರ್ಮಿಕರ ನಡುವಿನ ಸಂಬಂಧವನ್ನು ಅರ್ಥಮಾಡಿಕೊಳ್ಳುವುದು ಕಷ್ಟವಾಗಬಾರದು.

ಈ ಸಂಬಂಧದ ಎಳೆಯನ್ನು ಇನ್ನೂ ಮುಂದುವರಿಸಬಹುದು. ಜನಸಂಖ್ಯೆಯು ತೀವ್ರಗತಿಯಲ್ಲಿ ಬೆಳೆಯುತ್ತಿರುವುದಕ್ಕೂ, ಕೃಷಿ ಕಾರ್ಮಿಕರ ಪ್ರಮಾಣ ಅಗಾಧವಾಗಿರುವುದಕ್ಕೂ, ಸಾಕ್ಷರತಾ ಪ್ರಮಾಣ ಕೆಳಮಟ್ಟದಲ್ಲಿರುವುದಕ್ಕೂ ಮತ್ತು ಮಹಿಳೆಯರ ವಿವಾಹದ ವಯಸ್ಸಿಗೂ ಸಂಬಂಧವಿದೆ. ಕೋಷ್ಟಕ – ೩.೩ ರಲ್ಲಿ ಜನಸಂಖ್ಯೆಯ ಬೆಳವಣಿಗೆ, ಸಾಕ್ಷರತೆ ಹಾಗೂ ವಿವಾಹದ ವಯಸ್ಸುಗಳ ನಡುವಿನ ಸಂಬಂಧವನ್ನು ತೋರಿಸಲಾಗಿದೆ.

ಈ ಎಲ್ಲ ವಿವರಣೆ ಮೂಲಕ ಇಲ್ಲಿ ನಾವು ಏನನ್ನು ಹೇಳಲು ಪ್ರಯತ್ನಿಸುತ್ತಿದ್ದೇವೆ ಎಂದರೆ ಜನಸಂಖ್ಯೆಯ ಬೆಳವಣಿಗೆಯ ಮೂಲದಲ್ಲಿರುವ ಪ್ರಶ್ನೆ ಸಮಾಜೋ – ಆರ್ಥಿಕ ಸ್ವರೂಪದ್ದಾಗಿದೆ ವಿನಾ ಜನರ ಅವಿವೇಕವಲ್ಲ ಎಂಬುದಾಗಿದೆ.

ಜನಸಂಖ್ಯೆಯ ಬೆಳವಣಿಗೆಯು ಒಂದು ಸಾಮಾಜಿಕ ಚೌಕಟ್ಟಿನಲ್ಲಿ ಸಂಭವಿಸುವ ಪ್ರಕ್ರಿಯೆಯಾಗಿದೆ. ಅದು ನಿರ್ವಾತದಲ್ಲಿ ಸಂಭವಿಸುವುದಿಲ್ಲ. ಈ ಪ್ರಕ್ರಿಯೆಯನ್ನು ‘ವ್ಯಕ್ತಿಗತ’ ನೆಲೆಯಲ್ಲಿ ನಿರ್ವಹಿಸುವುದು ಸಾಧ್ಯವಿಲ್ಲ. ವ್ಯಕ್ತಿಗತ ಮನೋಭಾವವನ್ನು ಬದಲಾಯಿಸುವುದರ ಮೂಲಕ ಜನನ ಪ್ರಮಾಣವನ್ನು ತಗ್ಗಿಸಲು ತಡೆಯಲು ಸಾಧ್ಯವಿಲ್ಲ. ಸಾಮಾಜಿಕ ಅಭಿವೃದ್ಧಿಯ ನೆಲೆಯಿಂದ ಜನಸಂಖ್ಯೆಯ ಬೆಳವಣಿಗೆಯ ಪರಿಯನ್ನು ನೋಡುವ ಅಗತ್ಯವಿದೆ.

ನಾಲ್ಕನೆಯದಾಗಿ, ಕೊಪ್ಪಳ ಜಿಲ್ಲೆಯಲ್ಲಿ ಆರೋಗ್ಯ ಸೌಲಭ್ಯಗಳು ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ ಇವೆ. ಕೊಪ್ಪಳ ಜಿಲ್ಲೆಗೆ ಸಂಬಂಧಿಸಿದಂತೆ ನಮಗೆ ಆರೋಗ್ಯ ಸೌಲಭ್ಯಗಳ ವಿವರ ದೊರೆಯುವುದಿಲ್ಲ. ಆದ್ದರಿಂದ ಇಲ್ಲಿ ರಾಯಚೂರು ಜಿಲ್ಲೆಗೆ ಸಂಬಂಧಿಸಿದ ಆರೋಗ್ಯ ಸಂಬಂಧಿ ಸೂಚಿಗಳನ್ನು ಕೊಪ್ಪಳ ಜಿಲ್ಲೆಗೆ ಅನ್ವಯಿಸಲಾಗಿದೆ.

ರಾಜ್ಯಮಟ್ಟದಲ್ಲಿ ಪ್ರತಿ ೧೯,೦೦೦ ಜನರಿಗೆ ಒಂದು ವೈದ್ಯಕೀಯ ಸಂಸ್ಥೆಯ ಸೇವೆ ಲಭ್ಯವಿದ್ದರೆ ಕೊಪ್ಪಳದಲ್ಲಿ ಅದು ೨೬,೦೦೦ ಇದೆ. ರಾಜ್ಯಮಟ್ಟದಲ್ಲಿ ಪ್ರತಿ ಒಂದು ಲಕ್ಷ ಜನರಿಗೆ ೮೮ ಆಸ್ಪತ್ರೆ ಹಾಸಿಗೆಗಳ ಸೌಲಭ್ಯವಿದ್ದರೆ ಕೊಪ್ಪಳ ಜಿಲ್ಲೆಯಲ್ಲಿ ಇದರ ಪ್ರಮಾಣ ಕೇವಲ ೪೩. ನಮ್ಮ ರಾಜ್ಯದ ಗ್ರಾಮಾಂತರ ಪ್ರದೇಶಗಳಲ್ಲಿ ವೈದ್ಯಕೀಯ ಸೇವೆಯೆಂದರೆ ಕುಟುಂಬ ಯೋಜನಾ ಸೌಲಭ್ಯವೆಂದೇ ತಿಳಿಯಲಾಗಿದೆ. ಗ್ರಾಮಾಂತರ ಪ್ರದೇಶದಲ್ಲಿರುವ ಆರೋಗ್ಯ ಘಟಕ, ಕೇಂದ್ರಗಳ ಕಾರ್ಯಪಟುತ್ವ ಹೀನಾಯ ಸ್ಥಿತಿಯಲ್ಲಿದೆ. ಈ ದಿಶೆಯಲ್ಲಿ ಕೊಪ್ಪಳದ ಸ್ಥಿತಿಗತಿ ರಾಜ್ಯದಲ್ಲಿ ಅತ್ಯಂತ ಕೆಳಮಟ್ಟದಲ್ಲಿದೆ.

ಜನಸಂಖ್ಯೆ ಬೆಳವಣಿಗೆ, ಸಾಕ್ಷರತೆ ಮತ್ತು ಮಹಿಳೆಯರ ವಿವಾಹದ ವಯಸ್ಸು: ೧೯೯೯

ಕೋಷ್ಟಕ: .

ಕ್ರಮ ಸಂಖ್ಯೆ

ವಿಭಾಗಗಳು

೧೯೮೧೯೧ರ ದಶಕದಲ್ಲಿ ಜನಸಂಖ್ಯೆಯ ಬೆಳವಣಿಗೆ

ಸಾಕ್ಷರತೆ (ಒಟ್ಟು)

ಮಹಿಳೆಯರ ವಿವಾಹದ ವಯಸ್ಸು (ವರ್ಷಗಳಲ್ಲಿ)

ಬೆಂಗಳೂರುಮೈಸೂರುಬೆಳಗಾಂ

ಗುಲಬರ್ಗಾ

ಕರ್ನಾಟಕ ರಾಜ್ಯ

೨೩.೩೨

೧೫.೯೮

೧೯.೫೨

೨೬.೫೯

೨೧.೧೨

೬೧.೨೪

೫೮.೪೯

೫೬.೮೫

೪೦.೪೧

೫೬.೦೪

೧೮.೨

೧೮.೫

೧೮.೦೧

೧೭.೨೫

೧೮.೦

 

ಕೊನೆಯದಾಗಿ ಜನಸಂಖ್ಯಾ ಬೆಳವಣಿಗೆಯನ್ನು ತಗ್ಗಿಸಲು ಕುಟುಂಬ ಯೋಜನೆಯೊಂದೆ ಪರಿಣಾಮಕಾರಿ ಮಾರ್ಗವೆಂದು ಸರ್ಕಾರ – ತಜ್ಞರು ಭಾವಿಸಿರುವಂತಿದೆ. ಕುಟುಂಬ ಯೋಜನೆಯನ್ನು ಜನರು ಅನುಸರಿಸುವಂತೆ ಮಾಡಲು ಸರ್ಕಾರ ಬಲಪ್ರಯೋಗದ ಮಾರ್ಗವನ್ನು ಬಳಸುತ್ತಿದೆ. ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಲು ಕುಟುಂಬ ಯೋಜನಾ ಶಸ್ತ್ರಕ್ರಿಯೆಯನ್ನು ಪಡೆಯುವ ದಂಪತಿಗಳಿಗೆ ನೌಕರಿಯಲ್ಲಿ ಬಡ್ರಿಯನ್ನು ನಡೆಯಬೇಕು ಎನ್ನುವ ಮಾತು ಕೇಳಿ ಬರುತ್ತಿದೆ. ಇವೆಲ್ಲ ‘ಬಲಪ್ರಯೋಗ’ದ ‘ಬಲವಂತ’ದ ಕ್ರಮಗಳಾಗಿವೆ. ಅಮರ್ತ್ಯಸೇನ್ ಅವರು (೧೯೯೫) ತಮ್ಮ ಒಂದು ವಿಶೇಷ ಉಪನ್ಯಾಸದಲ್ಲಿ ಈ ಸಂಗತಿಯನ್ನು ಚರ್ಚಿಸುತ್ತಾ ಜನಸಂಖ್ಯಾ ಬೆಳವಣಿಗೆಯನ್ನು ತಡೆಯಲು ಭಾರತದ ರಾಜ್ಯಗಳು ಕೇರಳದಿಂದ ಪಾಠ ಕಲಿಯಬೇಕು ಎಂದು ಹೇಳುತ್ತಾರೆ. (ಟಿ.ಆರ್. ಚಂದ್ರಶೇಖರ ೧೯೯೯) ಸರ್ವಾಧಿಕಾರಿ ಸ್ವರೂಪದ ಕ್ರಮಗಳಿಗಿಂತ ಸಹಕಾರವಾದಿ ಕ್ರಮಗಳು ಇಲ್ಲಿ ಹೆಚ್ಚು ಯಶಸ್ವಿಯಾಗಬಲ್ಲವು. ಕೊಪ್ಪಳ ಜಿಲ್ಲೆಯಲ್ಲಿ ಜನಸಂಖ್ಯೆಯ ಬೆಳವಣಿಗೆಯು ಆಗಾಧವಾಗಿದ್ದರೆ ಅದಕ್ಕೆ ಕಾರಣಗಳು ಕೆಳಮಟ್ಟದ ಸಾಕ್ಷರತೆ, ಅತಿಕಡಿಮೆ ಮಹಿಳೆಯರ ಸಾಕ್ಷರತೆ, ಅಗಾಧವಾದ ಕೃಷಿ ಕಾರ್ಮಿಕರ ಪ್ರಮಾಣ, ವಿವಾಹದ ವಯಸ್ಸು ಕಡಿಮೆ, ಆರೋಗ್ಯ ಸೌಲಭ್ಯದ ಕೊರತೆ ಮುಂತಾದವು ಎಂಬುದನ್ನು ನಾವು ಅರಿತು ಕೊಳ್ಳಬೇಕಾಗಿದೆ. ಜಿಲ್ಲೆಯ ಜನರ ಬದುಕನ್ನು ಉತ್ತಮಪಡಿಸದೆ ಜನಸಂಖ್ಯೆಯ ಮಿತಿ ಮೀರಿದ ಬೆಳವಣಿಗೆಯನ್ನು ತಡೆಯಲು ಸಾಧ್ಯವಿಲ್ಲ.

ಕೊಪ್ಪಳ ಜಿಲ್ಲೆಯ ಆರೋಗ್ಯ ಸಂಪತ್ತು

ಆರೋಗ್ಯವನ್ನು ಒಂದು ಬಗೆಯ ‘ಸಂಪತ್ತು; ಎಂದು ನೋಡುವ ಪರಿ ನಮ್ಮಲ್ಲಿದೆ. ‘ಆರೋಗ್ಯ ಸಂಪತ್ತು’ ಎಂಬ ನುಡಿಗಟ್ಟು ಪ್ರಚಲಿತದಲ್ಲಿದೆ. ವಿಷಾದದ ಸಂಗತಿಯೆಂದರೆ ನಮ್ಮ ಅಭಿವೃದ್ಧಿ ಯೋಜನೆಗಳಲ್ಲಿ ಆರೋಗ್ಯ ಭಾಗ್ಯಕ್ಕೆ ಆದ್ಯತೆ ಸಿಗಲಿಲ್ಲ. ಅದೊಂದು ಆನುಷಂಗಿಕ ಸಂಗತಿಯಾಗಿಬಿಟ್ಟಿದೆ. ಸಾಂಪ್ರದಾಯಿಕ ಅಭಿವೃದ್ಧಿ ವಿಚಾರ ಪ್ರಣಾಳಿಕೆಯಲ್ಲಿ ಆರೋಗ್ಯ ಸಂಬಂಧಿ ಸಂಗತಿಗಳನ್ನು ಕೇವಲ ‘ಸಂಪನ್ಮೂಲ’ವೆಂದು, ಅಭಿವೃದ್ಧಿಯ ಸಾಧನವೆಂದೂ ಪರಿಗಣಿಸಲಾಗಿತ್ತು. ಆರೋಗ್ಯವಂತನಾದ ಕಾರ್ಮಿಕ ಹೆಚ್ಚು ದುಡಿಯುತ್ತಾನೆ; ಆರೋಗ್ಯವಂತನಾದ ಕಾರ್ಮಿಕ ನಿಯಮಿತವಾಗಿ ಕಾರ್ಖಾನೆಗೆ ಹಾಜರಾಗುತ್ತಾನೆ: ಆರೋಗ್ಯವಂತನಾದ ದುಡಿಮೆಗಾರ ಅಭಿವೃದ್ಧಿಯ ಗತಿಯನ್ನು ಉತ್ತಮಪಡಿಸುತ್ತಾನೆ. ಇವೇ ಮುಂತಾದ ಕಾರಣಗಳಿಗೆ ‘ಆರೋಗ್ಯ’ ಮುಖ್ಯವಾಗಿತ್ತು.

ಈ ಬಗೆಯ ಆರೋಗ್ಯ ಕುರಿತ ‘ಉಪಕರಣವಾದಿ’ ದೃಷ್ಟಿಕೋನವನ್ನು ಕೈಬಿಟ್ಟು ಅಮರ್ತ್ಯಸೇನ್ ಅವರು ಆರೋಗ್ಯವನ್ನು ಕುರಿತಂತೆ ‘ಅಂತಸ್ಥವಾದಿ’ ವಿಚಾರವನ್ನು ಮಂಡಿಸಿದ್ದಾರೆ. ಅವರ ಪ್ರಕಾರ ಆರೋಗ್ಯವೇ ಅಭಿವೃದ್ಧಿ. ಆರೋಗ್ಯವು ಅಭಿವೃದ್ಧಿಯ ಅಂತರ್ಗತ ಗುಣವಾಗಿದೆ. ಆರೋಗ್ಯವು ಅಭಿವೃದ್ಧಿಯ ಮಾನದಂಡವಾಗಿದೆ. ಅಭಿವೃದ್ಧಿಯು ತನ್ನಷ್ಟಕ್ಕೆ ತಾನೆ ಮಹತ್ವದ್ದಾಗಿದೆ. ಆರೋಗ್ಯ ಸಂಪತ್ತಿನ ಉಪಕರಣವಾದಿ ಮಹತ್ವವನ್ನು ಅಮರ್ತ್ಯಸೇನ್ ಅವರು ಅಲ್ಲಗಳೆಯುವುದಿಲ್ಲ. ಆದರೆ ಅದಕ್ಕಿಂತ ಅದರ ಅಂತಸ್ಥವಾದಿ ಪಾತ್ರ ತುಂಬಾ ಮಹತ್ವವಾದುದು ಎಂಬುದನ್ನು ಅವರು ತೋರಿಸಿದ್ದಾರೆ. ಸೇನ್ ಪ್ರಕಾರ ಆರೋಗ್ಯ ಸಂಬಂಧಿ ಸೂಚಿಗಳು ಅಭಿವೃದ್ಧಿಯ ಮಾನದಂಡಗಳಾಗಿವೆ. ಅವರ ಪ್ರಕಾರ ಅಭಿವೃದ್ಧಿಯೆಂದರೆ ಕೇವಲ ವರಮಾನದ ವೃದ್ಧಿಯಲ್ಲ, ಉತ್ಪನ್ನದ ಏರಿಕೆಯಲ್ಲ, ಜನರ ಆಯುರ್ಮಾನ, ಮಕ್ಕಳ ಮರಣ ಪ್ರಮಾಣ, ಮಹಿಳೆಯರ ಮರಣ ಪ್ರಮಾಣ ಮುಂತಾದವು ಅಭಿವೃದ್ಧಿಯ ಸೂಚಿಗಳು ಎಂದು ಸೇನ್ ವಾದಿಸುತ್ತಾರೆ. ಅಭಿವೃದ್ಧಿ ಎಂದರೆ ಉತ್ತಮ ಬದುಕು.ಉತ್ತಮಗೊಳ್ಳಬೇಕಾದರೆ ಜನರ ಆರೋಗ್ಯ ಉತ್ತಮವಾಗಿರಬೇಕು.

ಕೊಪ್ಪಳ ಜಿಲ್ಲೆಗೆ ಸಂಬಂಧಿಸಿದಂತೆ ಆರೋಗ್ಯ ವಿವಿರಗಳು, ಸೂಚಿಗಳು ಲಭ್ಯವಿಲ್ಲ. ಆದರೆ ರಾಯಚೂರು ಜಿಲ್ಲೆಗೆ ಸಂಬಂಧಿಸಿದಂತೆ ವಿವರಗಳು ಲಭ್ಯವಿವೆ. ಕೊಪ್ಪಳವು ರಾಯಚೂರು ಜಿಲ್ಲೆಯ ಭಾಗವೇ ಆಗಿತ್ತು. ಈಗ ಅದು ವಿಭಜನೆಗೊಂಡ ಪ್ರತ್ಯೇಕ ಜಿಲ್ಲೆಯಾಘಿದೆ. ಆದ್ದರಿಂದ ರಾಯಚೂರು ಜಿಲ್ಲೆಗೆ ಸಂಬಂಧಿಸಿದ ಆರೋಗ್ಯ ಸೂಚಿಗಳನ್ನು ಕೊಪ್ಪಳ ಜಿಲ್ಲೆಗೆ ಅನ್ವಯಿಸಬಹುದಾಗಿದೆ. ಕೊಪ್ಪಳ ಜಿಲ್ಲೆಗೆ ಸಂಬಂಧಿಸಿದ ಆರೋಗ್ಯ ಸೂಚಿಗಳು ಇನ್ನು ಸಿದ್ಧವಾಗಿಲ್ಲ.

ಸಾಮಾನ್ಯವಾಗಿ ಭಾವಿಸಿರುವಂತೆ ಯಾವ ದೇಶ/ ಪ್ರದೇಶದಲ್ಲಿ ಜನಸಂಖ್ಯೆಯ ಬೆಳವಣಿಗೆಯು ತೀವ್ರಗತಿಯಲ್ಲಿರುತ್ತದೋ ಅಲ್ಲಿ ಆರೋಗ್ಯ ಸಂಬಂಧಿ ಸ್ಥಿತಿಗತಿ ಕೆಳಮಟ್ಟದಲ್ಲಿರುತ್ತದೆ. ಕೊಪ್ಪಳ ಜಿಲ್ಲೆಗೆ ಸಂಬಂಧಿಸಿದಂತೆಯು ಸದರಿ ಪ್ರಮೇಯವನ್ನು ಅನ್ವಯಿಸಬಹುದಾಗಿದೆ. ಕರ್ನಾಟಕದಲ್ಲಿ ಜನಸಂಖ್ಯೆಯು ತೀವ್ರಗತಿಯಲ್ಲಿ ಬೆಳೆಯುತ್ತಿರುವ ಜಿಲ್ಲೆಗಳಲ್ಲಿ ಕೊಪ್ಪಳವು ಒಂದಾಗಿದೆ. ೧೯೮೧ – ೯೧ ರಲ್ಲಿ ಕೊಪ್ಪಳ ಜಿಲ್ಲೆ ಜನಸಂಖ್ಯೆಯು ವಾರ್ಷಿಕ ಶೇ. ೨.೮೧ರ ಪ್ರಮಾಣದಲ್ಲಿ ಏರಿಕೆಯಾಗಿದೆ. ರಾಜ್ಯ ಮಟ್ಟದ ಸರಾಸರಿ ವಾರ್ಷಿಕ ಜನಸಂಖ್ಯೆ ಬೆಳವಣಿಗೆ ಪ್ರಮಾಣ ಕೇವಲ ಶೇ. ೧.೯೨.

ಇಲ್ಲಿ ನೀಡಿರುವ ಆರೋಗ್ಯ ಸೂಚಿಗಳು ಏನನ್ನು ಸೂಚಿಸುತ್ತಿವೆ? ಪ್ರಜನೋತ್ವತ್ತಿ ಪ್ರಮಾಣ, ಮಹಿಳೆಯರ ವಿವಾಹದ ವಯಸ್ಸು, ಜನನಪ್ರಮಾಣ, ಮರಣ ಪ್ರಮಾಣ ಇವುಗಳಿಗೆ ಸಂಬಂಧಿಸಿದಂತೆ ರಾಯಚೂರು ಜಿಲ್ಲೆಯ ಸ್ಥಿತಿಯು ರಾಜ್ಯ ಸರಾಸರಿಗಿಂತ ಅಧಿಕವಾಗಿದೆ. ಶಿಶುಗಳ ಮರಣ ಪ್ರಮಾಣ ಹಾಗೂ ಆಯುರ್ಮಾನಕ್ಕೆ ಸಂಬಂಧಿಸಿದಂತೆ ರಾಯಚೂರು ಜಿಲ್ಲೆಯ ಸ್ಥಿತಿಯು ರಾಜ್ಯ ಸರಾಸರಿಗಿಂತ ಉತ್ತಮವಾಗಿದೆ.

ಕೊಪ್ಪಳ ಜಿಲ್ಲೆಯ ಆರೋಗ್ಯಕ್ಕೆ ಸಂಬಂಧಿಸಿದಂತೆ ಆತಂಕಕಾರಿ ಸಂಗತಿಯೆಂದರೆ ಜಿಲ್ಲೆಯಲ್ಲಿನ ಜನಸಂಖ್ಯೆಯ ತೀವ್ರ ಬೆಳವಣಿಗೆ ಗತಿ. ಈ ಜಿಲ್ಲೆಯಲ್ಲಿ ಮಹಿಳೆಯರ ವಿವಾಹರ ವಯಸ್ಸು ಕೇವಲ ೧೮.೩ ವರ್ಷ. ಒಟ್ಟು ಪ್ರಜನೋತ್ಪತ್ತಿ ಪ್ರಮಾಣ ೪.೬೫. ಜನನ ಪ್ರಮಾಣಕ್ಕೆ ಸಂಬಂಧಿಸಿದಂತೆ ರಾಯಚೂರು ಜಿಲ್ಲೆಗೆ ರಾಜ್ಯದಲ್ಲಿ ಎರಡನೆಯ ಸ್ಥಾನವಿದೆ. ಈ ಮೂರು ಸಂಗತಿಗಳು ಜಿಲ್ಲೆಯ ಆರೋಗ್ಯ, ಅದರಲ್ಲೂ ಜಿಲ್ಲೆಯ ಮಹಿಳೆಯರ ಆರೋಗ್ಯ ಸುಸ್ಥಿತಿಯಲ್ಲಿಲ್ಲ ಎಂಬುದನ್ನು ಸೂಚಿಸುತ್ತವೆ. ಪ್ರಜನೋತ್ಪತ್ತಿಯ ಪ್ರಮಾಣ ಅಧಿಕವಿದೆ ಎಂದರೆ ಅರ್ಥ, ಈ ಜಿಲ್ಲೆಯಲ್ಲಿ ಮಹಿಳೆಯರು ತಮ್ಮ ಸಂತಾನೋತ್ಪತ್ತಿ ಕಾಲಾವಧಿಯಲ್ಲಿ ಹೆಚ್ಚು ಬಾರಿ ಗರ್ಭ ಧರಿಸುತ್ತಾರೆ ಎಂಬುದಾಗಿದೆ. ಇದು ಮಹಿಳೆಯರ ಆರೋಗ್ಯದೃಷ್ಟಿಯಿಂದ ಅಘಾತಕಾರಿ ಸಂಗತಿಯಾಗಿದೆ.

ರಾಯಚೂರು ಜಿಲ್ಲೆ ಆರೋಗ್ಯ ಸೂಚಿಗಳು ೧೯೯೧
ಕೋಷ್ಟಕ:.

ರಾಯಚೂರು ಜಿಲ್ಲೆಯಲ್ಲಿ ಮಹಿಳೆಯರ
ವಿವಾಹದ ವಯಸ್ಸು ಜನನ ಪ್ರಮಾಣ 

ಒಟ್ಟು ಪ್ರಜನೋತ್ಪತ್ತಿ ಪ್ರಮಾಣ

 

ಮರಣ ಪ್ರಮಾಣ

 


ಶಿಶುಗಳ ಮರಣ ಪ್ರಮಾಣ            
ಹೆಣ್ಣು ಶಿಶು
ಗಂಡು ಶಿಶು
ಒಟ್ಟು

ಆಯುರ್ಮಾನ                             
ಮಹಿಳೆಯರು
ಪುರುಷರು
ಒಟ್ಟು

೧೮.೩ವರ್ಷಗಳು
(೧೮.೦ ವರ್ಷಗಳು)೩೦.೫೯
(೨೬.೪)೪.೬೫
(೩.೮೭)

೧೦.೩
(೮.೫)


೫೨. (೭೨)
೫೮.(೭೪)
೫೯.(೭೪)


೬೯.೫೩ ವರ್ಷಗಳು (೬೩.೬೧)
೬೧.೭೬ ವರ್ಷಗಳು (೬೦.೬೦)
೬೫.೫೫ ವರ್ಷಗಳು (೬೨.೦೭)

(ಆವರಣದಲ್ಲಿ ಕೊಟ್ಟಿರುವ ಸಂಖ್ಯೆಗಳು ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿವೆ.)

ಶಿಶುಗಳ ಮರಣ ಮತ್ತು ಮಕ್ಕಳ ಮರಣ ಪ್ರಮಾಣ

ಶಿಶು ಹಾಗೂ ಮಕ್ಕಳ ಮರಣ ಪ್ರಮಾಣವನ್ನು ಆರೋಗ್ಯದ ಸೂಚಿಯಾಗಿ ಬಳಸುವುದು ವಾಡಿಕೆಯಲ್ಲಿದೆ. ಶಿಶು ಪ್ರಮಾಣ (IMR) ಮತ್ತು ಮಕ್ಕಳ ಮರಣ ಪ್ರಮಾಣ (CMR)ಗಳ ನಡುವೆ ವ್ಯತ್ಯಾಸ ಇದೆ. ಹುಟ್ಟಿದ ೧೦೦೦ ಶಿಶುಗಳಲ್ಲಿ ೨ ವರ್ಷ ತುಂಬುವುದರೊಳಗೆ ಅಸು ನೀಗುವ ಶಿಶುಗಳ ಸಂಖ್ಯೆಯನ್ನು ಶಿಶು ಮರಣ ಪ್ರಮಾಣ ಎನ್ನಲಾಗಿದೆ. ಹುಟ್ಟಿದ ೧೦೦೦ ಮಕ್ಕಳಲ್ಲಿ ೫ನೆಯ ವರ್ಷ ತುಂಬುವುದರೊಳಗೆ ಅಸು ನೀಗುವ ಮಕ್ಕಳ ಸಂಖ್ಯೆಯನ್ನು ಮಕ್ಕಳ ಮರಣ ಪ್ರಮಾಣ ಎಂದು ಕರೆಯಲಾಗಿದೆ. ಕೋಷ್ಟಕ ೩.೫ ರಲ್ಲಿ ರಾಯಚೂರು ಹಾಗೂ ಕರ್ನಾಟಕದಲ್ಲಿನ ಶಿಶುಗಳ ಹಾಗೂ ಮಕ್ಕಳ ಮರಣ ಪ್ರಮಾಣಗಳನ್ನು ತೋರಿಸಿದೆ.

ಶಿಶು ಹಾಗೂ ಮಕ್ಕಳ ಮರಣ ಪ್ರಮಾಣ: ೧೯೯೧
ಕೋಷ್ಟಕ: .

ವಿವರಗಳು

ರಾಯಚೂರು

ಕರ್ನಾಟಕ

ಹೆಣ್ಣು

ಗಂಡು

ಒಟ್ಟು

ಹೆಣ್ಣು

ಗಂಡು

ಒಟ್ಟು

ಶಿಶುಗಳ ಮರಣ ಪ್ರಮಾಣಮಕ್ಕಳ ಮರಣ ಪ್ರಮಾಣ ೬೫೮೪ ೬೯೭೯ ೬೬೮೦ ೭೭೮೮ ೭೬೯೧ ೭೭೯೦

ಕರ್ನಾಟಕ ರಾಜ್ಯಮಟ್ಟದಲ್ಲಿರುವ ಶಿಶು ಹಾಗೂ ಮಕ್ಕಳ ಮರಣ ಪ್ರಮಾಣಕ್ಕಿಂತ ರಾಯಚೂರು ಜಿಲ್ಲೆಯಲ್ಲಿ ಅವುಗಳ ಪ್ರಮಾಣವು ಕಡಿಮೆ ಇದೆ. ಇದೊಂದು ಸ್ವಾಗತಾರ್ಹ ಸಂಗತಿಯಾಗಿದೆ. ಆದರೆ ಶಿಶು ಮತ್ತು ಮಕ್ಕಳ ಮರಣ ಪ್ರಮಾಣಗಳ ನಡುವೆ ಇರುವ ಭಿನ್ನತೆಯನ್ನು ನಾವು ಗುರುತಿಸಬೇಕಾಗಿದೆ. ಶಿಶು ಮರಣ ಪ್ರಮಾಣಕ್ಕೆ ಸಂಬಂದಿಸಿದಂತೆ ಹೇಳುವುದಾದರೆ ಗಂಡು ಶಿಶುವಿನ ಮರಣ ಪ್ರಮಾಣವು ಹೆಣ್ಣು ಶಿಶುವಿನ ಮರಣ ಪ್ರಮಾಣಕ್ಕಿಂತ ಅಧಿಕವಿದೆ. ಆದರೆ ಮಕ್ಕಳ ಮರಣ ಪ್ರಮಾಣದಲ್ಲಿ ಇದು ತಿರುವು – ಮುರುವು ಆಗಿರುವ ಸಂಗತಿಯನ್ನು ನೋಡಬಹುದು. ಮಕ್ಕಳ ಮರಣ ಪ್ರಮಾಣಕ್ಕೆ ಸಂಬಂಧಿಸಿದಂತೆ ಹೆಣ್ಣು ಮಕ್ಕಳ ಮರಣ ಪ್ರಮಾಣವು ಗಂಡು ಮಕ್ಕಳ ಮರಣ ಪ್ರಮಾಣಕ್ಕಿಂತ ಅಧಿಕವಿದೆ. ಈ ಸಂಗತಿ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಮಾತ್ರ ಶೀಶುಗಳ ಮರಣ ಪ್ರಮಾಣಕ್ಕೆ ಸಂಬಂಧಿಸಿದ ಲಿಂಗ ತಾರತಮ್ಯವಿದೆ. ಆದರೆ ಮಕ್ಕಳ ಮರಣ ಪ್ರಮಾಣಕ್ಕೆ ಸಂಬಂಧಿಸಿದಂತೆ ಲಿಂಗತಾರತಮ್ಯ ೧೨ ಜಿಲ್ಲೆಗಳಲ್ಲಿ ಕಂಡು ಬಂದಿದೆ. ಹುಟ್ಟಿನ ಸಂದರ್ಭದಲ್ಲಿ ಇಲ್ಲದ ಲಿಂಗ ತಾರತಮ್ಯವು ಸ್ತ್ರೀಯು ಬೆಳೆದಂತೆಲ್ಲಾ ಅದು ತೀವ್ರವಾಗುವ ಸಂಗತಿ ಇಲ್ಲಿದೆ. ಸಾಮಾನ್ಯವಾಗಿ ಹೆಣ್ಣು ಶಿಶುಗಳ ಮರಣ ಪ್ರಮಾಣ ಹಾಗೂ ಹೆಣ್ಣು ಮಕ್ಕಳ ಮರಣ ಪ್ರಮಾಣಗಳು ಗಂಡು ಶಿಶು ಹಾಗೂ ಗಂಡು ಮಕ್ಕಳ ಮರಣ ಪ್ರಮಾಣಕ್ಕಿಂತ ಕಡಿಮೆ ಇರಬೇಕು. ಇದು ಒಂದು ಜೈವಿಕ ಲಕ್ಷಣ. ಆದರೆ ಹೆಣ್ಣು ಶಿಶು ಹಾಗೂ ಹೆಣ್ಣು ಮಕ್ಕಳ ಮರಣ ಪ್ರಮಾಣಗಳು ಗಂಡು ಶಿಶು ಹಾಗೂ ಗಂಡು ಮಕ್ಕಳ ಮರಣ ಪ್ರಮಾಣಕ್ಕಿಂತ ಅಧಿಕವಿರುವುದು ಲಿಂಗ ತಾರತಮ್ಯದ ಸೂಚಿಯಾಗಿದೆ. ಈ ಲಿಂಗ ತಾರತಮ್ಯವು ಸ್ತ್ರೀಯರ ವಯಸ್ಸಿನ ಜೊತೆ ತೀವ್ರಗೊಳ್ಳುತ್ತಾ ನಡೆಯುವ ಸಂಗತಿ ನಮ್ಮ ಸಮಾಜದಲ್ಲಿದೆ. ರಾಯಚೂರು ಜಿಲ್ಲೆಯಲ್ಲೂ ಲಿಂಗ ತಾರತಮ್ಯ ತೀವ್ರವಾಗಿರುವುದನ್ನು ಕಾಣಬಹುದು.

ಆರೋಗ್ಯ ಮತ್ತು ವೈದ್ಯಕೀಯ ಸೌಲಭ್ಯಗಳು
ಕೋಷ್ಟಕ: .

೧. ವೈದ್ಯಕೀಯ ಸಂಸ್ಥೆಗಳ ಸಂಖ್ಯೆ (ಸರ್ಕಾರಿ) ೧೯೬೧ – ೨೬  
೧೯೭೧ – ೫೨
೧೯೮೧ – ೭೯  
೧೯೯೧ – ೮೨
೧೯೯೬ – ೧೦೪
೨.  ಪ್ರತಿ ಲಕ್ಷ ಜನಸಂಖ್ಯೆಗೆ ಇರುವ ವೈದ್ಯಕೀಯ ಸಂಸ್ಥೆಗಳ ಸಂಖ್ಯೆ ೧೯೯೬ – ೩.೮೬ (೫.೨೪)
೩.  ಪ್ರತಿ ಲಕ್ಷ ಜನಸಂಖ್ಯೆಗೆ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳು ೧೯೯೬ – ೩.೮೨ (೪.೬೪)
೪.  ಪ್ರತಿ ಲಕ್ಷ ಗ್ರಾಮೀಣ ಜನಸಂಖ್ಯೆಗೆ ಇರುವ ಉಪಕೇಂದ್ರಗಳ ಸಂಖ್ಯೆ ೧೯೯೬ – ೧೮(೨೪)
೫.  ಪ್ರತಿ ಲಕ್ಷ ಜನಸಂಖ್ಯೆಗೆ ಇರುವ ಸರ್ಕಾರಿ ಆಸ್ಪತ್ರೆ ಹಾಸಿಗೆಗಳ ಸಂಖ್ಯೆ ೧೯೯೭ – ೪೩ (೮೬)
೬.  ವೈದ್ಯಕೀಯ ಸಂಸ್ಥೆಗಳಲ್ಲಿ ನಡೆದ ಮಕ್ಕಳ ಜನನ ಪ್ರಮಾಣ ಶೇ. ೧೧.೯ (ಶೇ. ೪೧.೮)
೭.  ಕುಟುಂಬ ಯೋಜನೆ ಕ್ರಮವನ್ನು ಅನುಸರಿಸುವ ದಂಪತಿಗಳ ಪ್ರಮಾಣ ೧೯೯೦.೯೧ ಶೇ. ೩೫ (ಶೇ.೪೮)

(Human Development in Karnataka – 1998)

ಆರೋಗ್ಯವೈದ್ಯಕೀಯ ಸೌಲಭ್ಯಗಳು

ರಾಯಚೂರು ಜಿಲ್ಲೆಯು ತೀವ್ರ ಸ್ವರೂಪದ ಆರೋಗ್ಯ ದುಸ್ಥಿತಿಯಿಂದ ನರಳುತ್ತಿರುವುದನ್ನು ನೋಡಬಹುದಾಗಿದೆ. ಈ ಆರೋಗ್ಯ ದುಸ್ಥಿತಿಯನ್ನು ನಿವಾರಿಸಲು ಅಧಿಕ ಪ್ರಮಾಣದ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಬೇಕಾಗುತ್ತದೆ. ಆದರೆ ರಾಯಚೂರು ಜಿಲ್ಲೆಯಲ್ಲಿನ ವೈದ್ಯಕೀಯ ಸೌಲಭ್ಯಗಳು ಉತ್ತಮವಾಗಿಲ್ಲ.

ವೈದ್ಯಕೀಯ ಸೌಲಭ್ಯ ಕುರಿತಂತೆ ರಾಯಚೂರು ಜಿಲ್ಲೆಯ ಸ್ಥಿತಿಗತಿಯು ತುಂಬಾ ಕೆಳ ಮಟ್ಟದಲ್ಲಿದೆ. ಆರೋಗ್ಯ ಸೂಚ್ಯಂಕದ ದೃಷ್ಟಿಯಿಂದ ರಾಯಚೂರು ಜಿಲ್ಲೆ ಉತ್ತಮ ಸ್ಥಾನದಲ್ಲಿದೆ. ಆದರೆ ಜನಸಂಖ್ಯೆಯ ಬೆಳವಣಿಗೆ ಗತಿ ಮಾತ್ರ ತೀವ್ರವಾಗಿದೆ. ಈ ವಿಷಯದಲ್ಲಿ ಜಿಲ್ಲೆಯು ರಾಜ್ಯ ಮಟ್ಟದ ಸೂಚಿಗಳನ್ನು ಮೀರಿಸುತ್ತದೆ. ಪ್ರಜನೋತ್ಪತ್ತಿ ಪ್ರಮಾಣ ಹಾಗೂ ಜನನ ಪ್ರಮಾಣಗಳನ್ನು ತಗ್ಗಿಸುವ ದಿಶೆಯಲ್ಲಿ ಕಾರ್ಯಕ್ರಮ ಕೈಗೊಳ್ಳಬೇಕು. ಕುಟುಂಬ ಯೋಜನೆ ಅನುಸರಿಸುತ್ತಿರುವ ಅರ್ಹ ದಂಪತಿಗಳ ಪ್ರಮಾಣ ಕೇವಲ ಶೇ. ೩೫. ರಾಜ್ಯ ಮಟ್ಟದಲ್ಲಿ ಇದು ಶೇ. ೪೮ ರಷ್ಟಿದೆ. ರಾಯಚೂರು ಜಿಲ್ಲೆಯಲ್ಲಿ ಆಂದೋಳನ ರೀತಿಯಲ್ಲಿ ನಡೆಯಬೇಕಾದ ಕೆಲಸವೆಂದರೆ ಜನರನ್ನು ಅಕ್ಷರಸ್ಥರನ್ನಾಗಿ ಮಾಡುವುದು. ಪ್ರಾಥಮಿಕ ಶಿಕ್ಷಣವನ್ನು ಮಹಿಳಾ ಮುಖಿಯನ್ನಾಗಿಸಬೇಕು.