೩೧

ಊರು ನಾಗೇಂದ್ರಗಡ
ಸ್ಮಾರಕ ಕೋಟೆ
ಸ್ಥಳ ಗ್ರಾಮದಲ್ಲಿ
ಕಾಲ ೧೬-೧೭ನೇ ಶತಮಾನ
ಶೈಲಿ ವಿಜಯನಗರೋತ್ತರ
ಅಭಿಮುಖ ಪೂರ್ವ-ಪಶ್ಚಿಮ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಗಜೇಂದ್ರಗಡ ಅರಸರ ಅಧೀನ ಕೋಟೆಯಾಗಿದ್ದ ನಾಗೇಂದ್ರಗಡ ಕೋಟೆಯ ವಿಶಾಲವಾದ ಭದ್ರಕೋಟೆ, ಎರಡು ಕಡೆಗೆ ಬುರುಜು (ಕಾವಲು ಗೋಪುರ)ಗಳನ್ನು ನಿರ್ಮಿಸಿದ್ದಾರೆ. ಹಾಗೂ ಪೂರ್ವ ಮತ್ತು ಪಶ್ಚಿಮದಲ್ಲಿ ಪ್ರವೇಶ ದ್ವಾರಗಳನದನು ನಿರ್ಮಿಸಲಾಗಿದೆ. ಈ ದ್ವಾರ ಬಾಗಿಲುಗಳನ್ನು ಕೆಲವು ಚಿಕ್ಕ-ಪುಟ್ಟ ಅಲಂಕರಣೆಗಳಿಂದ ಅಂದಗೊಳಿಸಲಾಗಿದೆ. ಕೋಟೆಯ ಸುತ್ತಲೂ ಬಲವಾದ ಗೋಡೆಯನ್ನು ನಿರ್ಮಿಸಲಾಗಿದೆ.

ಕೋಟೆಯಲ್ಲಿ ನೀರಿನ ವ್ಯವಸ್ಥೆಗಾಗಿ ಒಂದು ಬಾವಿಯನ್ನು ತೋಡಲಾಗಿದೆ. ಕೋಟೆಯ ಕಟ್ಟಡವನ್ನು ಭದ್ರಗೊಳಿಸಲು ಬೇಕಾದ ಗಾರೆ-ಗಚ್ಚನ್ನು ತರಾರಿಸುವ ಪಿಂಗಾಣಿ ಮಾದರಿಯಲ್ಲಿರುವ ಕೊಳಾಯಿಯನ್ನು ಕೋಟೆಯ ಮೇಲ್ಭಾಗದಲ್ಲಿ ನಿರ್ಮಿಸಿ ಸುರಕ್ಷಿತ ಕಾರ್ಯಕ್ಕಾಗಿ ಬಳಸಿಕೊಳ್ಳಲಾಗಿದೆ. ಕೋಟೆಯ ರಕ್ಷಣೆಗಾಗಿ ದುರ್ಗಾ ದೇವಾಲಯವೊಂದನ್ನು ಕಟ್ಟಲಾಗಿದೆ. ಅದರಲ್ಲಿ ಇತ್ತೀಚೆಗೆ ರಚಿಸಿದ ಚಾಮುಂಡಿ ಶಿಲ್ಪವನ್ನು ಇಟ್ಟು ಗುಡ್ಡದ ಮೇಲ್ಭಾಗದಲ್ಲಿ ಕಟ್ಟಲಾಗಿದ್ದು ಅದನ್ನು ಏರಿಕೊಂಡು ಹೋಗುವುದು ಶ್ರಮದಾಯಕ ಕಾರ್ಯವು ಹೌದು.

೩೨

ಊರು ಬೆಣಸಮಟ್ಟಿ (ಬೆಣಚಮಟ್ಟಿ)
ಸ್ಮಾರಕ ಈಶ್ವರ
ಸ್ಥಳ ಕೆರೆಯ ದಂಡೆ
ಕಾಲ ೧೨-೧೩ನೇ ಶತಮಾನ
ಶೈಲಿ ವಿಜಯನಗರೋತ್ತರ
ಅಭಿಮುಖ ಉತ್ತರ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಗ್ರಾಮದ ಕೆರೆಯ ದಂಡೆಯ ಮೇಲಿರುವ ಈ ಪ್ರಾಚೀನ ಸ್ಮಾರಕದ ಬಹು ಭಾಗಗಳು ನೆಲಕಚ್ಚಿವೆ. ಬಿದ್ದುಹೋಗಿರುವ ಭಾಗಗಳನ್ನು ಗಮನಿಸಿದರೆ ಈ ದೇವಾಲಯ ದೊಡ್ಡ ಸಂಕೀರ್ಣವಾಗಿದ್ದರಬಹುದೆಂದು ತಿಳಿಯುವುದು. ಗರ್ಭಗೃಹವನ್ನು ಬಿಟ್ಟು ಉಳಿದೆಲ್ಲ ಭಾಗಗಳು ಬಿದ್ದುಹೋಗಿವೆ. ಬಹುಶಃ ಈ ದೇವಾಲಯ ಗರ್ಭಗೃಹ, ಅಂತರಾಳ, ನವರಂಗ ಹಾಗೂ ಮುಖಮಂಟಪಗಳನ್ನು ಹೊಂದಿದ್ದರಬಹುದು.

ಗರ್ಭಗೃಹದಲ್ಲಿ ತಕ್ಕಮಟ್ಟಿಗೆ ದೊಡ್ಡದಾದ ಲಿಂಗವಿದೆ. ಇದನ್ನು ಇಪ್ಪು ಶಿಲೆಯಲ್ಲಿ ನಿರ್ಮಿಸಲಾಗಿದೆ ಹಾಗೂ ಕಲ್ಯಾಣ ಚಾಲುಕ್ಯ ಕಾಲದ ಶಿಲ್ಪದ ಲಕ್ಷಣವನ್ನು ಲಿಂಗವು ಹೊಂದಿರುವುದು. ಗರ್ಭಗೃಹದ ಬಾಗಿಲವಾಡವು ಎತ್ತರವಾಗಿದ್ದು ಅದರಲ್ಲಿ ಐದು ಶಾಖೆ (ಪಟ್ಟಿಕೆ)ಗಳನ್ನು ಕಂಡರಿಸಿದ್ದಾರೆ. ದೇವಾಲಯದ ಮುಂಭಾಗದಲ್ಲಿ ಪ್ರಾಚೀನ ಬಾವಿಯೊಮದಿದೆ. ಈ ಬಾವಿಯ ಪಕ್ಕದಲ್ಲಿಯು ಒಂದು ದೇವಾಲಯ ಇದ್ದಿರಬಹುದಾದ ಸಾಧ್ಯತೆಗಳಿವೆ. ಬಾವಿಯ ಸುತ್ತಲೂ ಪ್ರಾಚೀನ ಅವಶೇಷಗಳು ಬಿದ್ದಿರುವುದುದನ್ನು ಈವರೆಗೂ ಕಾಣುತ್ತೇವೆ. ಇದೇ ಗುಡಿಯ ಮುಂಭಾಗದಲ್ಲಿ ಅಪ್ರಕಟಿತ ಶಾಸನವೊಂದು ಬಿದ್ದಿದೆ. ಇದರ ಲಿಪಿಯನ್ನು ಗಮನಿಸಿದಾಗ ಇದು ಬಹುಶಃ ಕ್ಲಯಾಣ ಚಾಲುಕ್ಯ ಆಡಳಿತ ಕಾಲಾವಧಿಗೆ ಸಂಬಂಧಿಸಿದ್ದೆನ್ನಬಹುದು.

ಬೆಣಚಮಟ್ಟಿ ಗ್ರಾಮದ ಸುತ್ತಲೂ ಅನೇಕ ಪ್ರಾಚೀನ ಕುರುಹುಗಳು ಕಂಡುಬಂದಿರುವ ಬಗೆಗೆ ವರದಿಯಾಗಿವೆ. (ಇಂ.ಆರಿ, ೧೯೬೩-೬೪, ಪುಟ ೨೬ ಹಾಗೂ ೩೧). ಆದಿ ಹಳೆಯ ಶಿಲಾಯುಗದ (Lower palaeolithic) ಅಂದರೆ ಅಶ್ಯೂಲಿಯನ್ ಮಾದರಿಯ ಉಪಕರಣಗಳು ಅಲ್ಲಲ್ಲಿ ಕಂಡುಬಂದಿವೆ. ಅಲ್ಲದೆ ಇತಿಹಾಸ ಆರಂಭ ಕಾಲದ ಅವಶೇಷಗಳು ಬೆಣಸಮಟ್ಟಿ ಗ್ರಾಮ ಪರಿಸರದಲ್ಲಿ ಸಿಕ್ಕಿರುವ ವರದಿಗಳಿವೆ.

೩೩

ಊರು ಮಲ್ಲಾಪುರ
ಸ್ಮಾರಕ ಕಲ್ಲಪ್ಪನ ಗುಡಿ
ಸ್ಥಳ ನರೇಗಲ್ಲು ರಸ್ತೆ
ಕಾಲ ೧೮-೧೯ನೇ ಶತಮಾನ
ಶೈಲಿ ವಿಜಯನಗರೋತ್ತರೆ
ಅಭಿಮುಖ ಪೂರ್ವ
ಸ್ಥಿತಿ ಕನಿಷ್ಠ
ಸಂರಕ್ಷಣೆ

ನರೇಗಲ್ಲು ಪಟ್ಟಣಕ್ಕೆ ಹೋಗುವ ರಸ್ತೆಯ ಪಕ್ಕದಲ್ಲಿರುವ ಪ್ರಾಚೀನ ಕಲ್ಲಪ್ಪನ ಗುಡಿಯು ಸಂಪೂರ್ಣವಾಗಿ ಬಿದ್ದುಹೋಗಿದೆ. ಹೊಸದಾಗಿ ದೇವಾಲಯವನ್ನು ನಿರ್ಮಿಸಿದ್ದಾರೆ. ಹಾಗೂ ಹಳೆಯ ಗುಡಿಯ ಅವಶೇಷಗಳಾದ ನಂದಿ, ಲಿಂಗ, ಹಾಗೂ ಗಣಪತಿಯ ಶಿಲ್ಪಗಳನ್ನು ಗರ್ಭಗೃಹದಲ್ಲಿ ಇಡಲಾಗಿದೆ.

ಕ್ರಿ.ಶ. ೧೧೫೬ರ ತೇದಿವುಳ್ಳ (ಲ್ಯಾಣ ಚಾಲುಕ್ಯ ಮೂರನೆಯ ಶೈಲ) ಶಾಸನವೊಂದು ಪ್ರಕಟಗೊಂಡಿದೆ. (ಧಾ.ಜಿ.ಶಾ.ಸೂ, ಸಂ.ರೋ. ೬೮ ಪು. ೧೮; SII, XV No. 53) ಇದು ದಂಡನಾಯಕ ದುಗ್ಗಿಮಯ್ಯನಿಂದ ದಾನ ನೀಡಿದ ಹಾಗೂ ವಿದಿಗೆಯ ಕೆರೆಯ ಉಲ್ಲೇಖವನ್ನು ನೀಡುತ್ತದೆ. ವಿದಿಗೆ ಎಂಬುದು ಬಹುಶಃ ಮಲ್ಲಾಪುರ ಗ್ರಾಮದ ಪ್ರಾಚೀನ ಹೆಸರಾಗಿದ್ದಿರಬಹುದೇ? ಅಥವ ಸಮೀಪದಲ್ಲಿಯೇ ಈ ಹೆಸರಿ ಬೇರೊಂದು ಗ್ರಾಮ ಇದ್ದಿರಬಹುದೇ ಎಂಬುದನ್ನು ತಿಳಿಯಲು ಹೆಚ್ಚಿನ ಸಂಶೋಧನೆಯ ಅಗತ್ಯವಿದೆ. ಹನುಂತನ ಗುಡಿಯು ಸಹ ಗ್ರಾಮದಲ್ಲಿದೆ. ಅದು ಅರ್ವಾಚೀನ ಕಾಲದ್ದು.

೩೪

ಊರು ಮಾರನಬಸರಿ
ಸ್ಮಾರಕ ಗೋನಪ್ಪ ಗುಡಿ
ಸ್ಥಳ ಗ್ರಾಮದ ಹೊರಭಾಗ
ಕಾಲ ೧೮-೧೯ನೇ ಶತಮಾನ
ಶೈಲಿ ವಿಜಯನಗರೋತ್ತರೆ
ಅಭಿಮುಖ ಪೂರ್ವ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಗ್ರಾಮದ ಹೊರಭಾಗದಲ್ಲಿರುವ ಈ ದೇವಾಲಯ ಸಂಪೂರ್ಣವಾಗಿ ಬಿದ್ದಿದೆ. ಬಿದ್ದಿರುವ ಗುಡಿಯನ್ನು ಸ್ಥಳೀಯರು ಸ್ಥಳೀಯವಾಗಿ ಸಿಗುವ ಕಲ್ಲು ಹಾಗೂ ಇಟ್ಟಿಗೆಗಳಿಂದ ದೇವಾಲಯವನ್ನು ಮರು ನಿರ್ಮಿಸಿದ್ದಾರೆ. ಗರ್ಭಗೃಹ ಹಾಗೂ ಮಂಟಪಗಳು ಇದರ ಭಾಗಗಳಾಗಿವೆ. ಪ್ರಾಚೀನ ಗುಡಿಯ ಆವಶೇಷಗಳನ್ನು ಆವರಣದಲ್ಲಿ ಇಡಲಾಗಿದೆ.

ಇದೇ ಗ್ರಾಮದ ಕೆರೆಯ ದಂಡೆ ಮೇಲೆ ಕಲ್ಲಪ್ಪನ ಹಳೆಯ ಗುಡಿಯೊಂದಿತ್ತು. ಅದು ಸಹ ಸಂಪೂರ್ಣವಾಗಿ ಬಿದ್ದಿದೆ. ಪೂರ್ವಾಭಿಮುಖವಗಿರುವ ಈ ದೇವಾಲಯ ಪ್ರಾಚ್ಯಾವಶೇಷಗಳು ಇವರೆಗೂ ಅಲ್ಲಲ್ಲಿ ಬಿದ್ದಿರುವುದನ್ನು ಕಾಣುತ್ತೇವೆ.

೩೫

ಊರು ಮುಶಿಗೇರಿ
ಸ್ಮಾರಕ ಈಶ್ವರ
ಸ್ಥಳ ಗ್ರಾಮದಲ್ಲಿ
ಕಾಲ ೧೮-೧೯ನೇ ಶತಮಾನ
ಶೈಲಿ ವಿಜಯನಗರೋತ್ತರ
ಅಭಿಮುಖ ಪೂರ್ವ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಗ್ರಾಮದಲ್ಲಿರುವ ಈ ದೇವಾಲಯ ಪ್ರಾಚೀನ ಕಾಲದ್ದಾಗಿದ್ದರೂ ಕಾಲಾನಂತರದಲ್ಲಿ ಇದನ್ನು ಮರುನಿರ್ಮಿಸಲಾಗಿದೆ. ಈ ದೇವಾಲಯವು ಗರ್ಭಗೃಹ ಹಾಗೂ ನವರಂಗವನ್ನು ಹೊಂದಿರುವುದು. ಗರ್ಭಗೃಹದಲ್ಲಿ ಉಮಾ-ಮಹೇಶ್ವರ ಪ್ರಾಚೀನ ಶಿಲ್ಪವಿದೆ. ಉಳಿದಂತೆ ದೇವಾಲಯವು ಹೊಸದಾಗಿ ಕಟ್ಟಲ್ಪಟ್ಟಿದ್ದು ಸುಣ್ಣ-ಬಣ್ಣದಿಂದ ಅಲಂಕೃತಗೊಂಡಿದೆ.

೩೬.

ಊರು ಮೆಣಸಗಿ
ಸ್ಮಾರಕ ಕಲ್ಮೇಶ್ವರ (ಕಲ್ಲಪ್ಪ)
ಸ್ಥಳ ಗ್ರಾಮದ ಪೂರ್ವಕ್ಕೆ
ಕಾಲ ೧೨ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಪೂರ್ವ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಸುಂದರವಾಗಿದ್ದ ಪ್ರಾಚೀನ ದೇವಾಲಯದ ಹೆಚ್ಚಿನ ಭಾಗಗಳು ಬಿದ್ದಿವೆ. ಗರ್ಭಗೃಹದ ಭಾಗ ಮಾತ್ರ ಉಳಿದಿದೆ. ಈ ದೇವಾಲಯ ಗರ್ಭಗೃಹ, ಅಂತರಾಳ ಹಾಗೂ ನವರಂದಗಳನ್ನು ಹೊಂದಿತ್ತು. ಅಂತರಾಳ ಹಾಗೂ ನವರಂಗಗಳ ಮೇಲ್ಛಾವಣಿ ಸಂಪೂರ್ಣವಾಗಿ ಕುಸಿದು ಬಿದ್ದಿದ್ದು ಅವುಗಳಲ್ಲಿನ ಕಂಬಗಳು ಹಾಗೂ ಅವುಗಳ ಬಾಗಿಲವಾಡಗಳ ಚೌಕಟ್ಟುಗಳು ಹಾಗೂ ಇತರೆ ಪ್ರಾಚ್ಯಾವಶೇಷಗಳು ಇಗಲೂ ಕಂಡುಬರುತ್ತವೆ. ಅಲ್ಲದೇ ಬಿದ್ದುಹೋಗಿರುವ ಗುಡಿಯ ಸುತ್ತಲೂ ಮುಳ್ಳಿನ ಗಿಡಗಳು ದಟ್ಟವಾಗಿ ಬೆಳೆದು ನಿಂತಿರುವುದರಿಂದ ದೇವಾಲಯದ ಪ್ರವೇಶವು ಸಹ ದುರ್ಗಮವಾಗಿದೆ.

ಎತ್ತರದ ಕಟ್ಟೆಯ ಮೇಲೆ ಈ ದೇವಾಲಯವನ್ನು ಕಟ್ಟಲಾಗಿದೆ. ಹಾಗೂ ನಕ್ಷತ್ರಾಕಾರದ ತಲವಿನ್ಯಾಸವು ದೇವಾಲಯಕ್ಕಿದೆ. ಗರ್ಭಗೃಹದಲ್ಲಿ ಲಿಂಗವನ್ನಿಡಲಾಗಿದೆ. ಒಳಗೋಡೆಯಲ್ಲಿ ಅರ್ಧಕಟ್ಟೆಯನ್ನು ನಿರ್ಮಿಸಲಾಗಿದೆ. ಗುಡಿಯ ರಚನಾಕಾರದ ಅಂದದ ಭುವನೇಶ್ವರಿಯನ್ನು ಚಿತ್ರಿಸಿದ್ದನೆ.

ಅಧಿಷ್ಠಾನ ಭಾಗವು ಎತ್ತರವಗಿದೆ. ಅದು ಕಪೋತ, ಗಳ, ತ್ರಿಪಟ್ಟ ಕುಮದ ಭಾಗಗಳನ್ನು ನೊಂದಿದೆ. ಗರ್ಭಗೃಹದ ಹೊರಭಿತ್ತಿಯಲ್ಲಿ ಸುಂದರವಾಗ ಗೋಡೆ (ಅರ್ಧಕಂಬ) ಕಂಬಗಳನ್ನು ರಚಿಸಲಾಗಿದೆ. ಹೊರಗೋಡೆಯ್ಲಲಿ ಮೂರು ಕೋಷ್ಠಗಳಗನ್ನು ನಿರ್ಮಿಸಲಾಗಿದೆ. ಅವುಗಳನ್ನು ದ್ರಾವಿಡ ಮಾದರಿಯ ಶಿಖರ ಅಲಂಕಾರದಿಂದ ಅಂದಗೊಳಿಸಲಾಗಿದೆ.

ಹೊರಭಿತ್ತಿಯಲ್ಲಿನ ಕೋಷ್ಠಕಗಳಿಗೆ ಹಾಗೂ ಅರ್ಧಕಂಬಗಳ ನಡುವೆ ಇರುವ ಭಾಗದಲ್ಲಿ ನಾಗಮಂಡಲ ಅಕಂಕಾರದ ಕೀರ್ತಿಮುಖಗಳನ್ನು ಕಲಾಕಾರನು ನಯ ಹಾಗೂ ಸೂಕ್ಷ್ಮತೆಯಿಂದ ಕಂಡರಿಸಿದ್ದಾನೆ. ಅಲ್ಲದೇ ಹೊರಭಿತ್ತಿಯಲ್ಲಿ ಉಬ್ಬುಶಿಲ್ಪಗಳನ್ನು ಕೆತ್ತಲಾಗಿದೆ. ಅವುಗಳು ಶಿವನ ಅವತಾರಗಳನ್ನು (ವೀರಭದ್ರ, ಜಟಾಮುಕಟ ಶಿವ, ಧ್ಯಾನಾಸಕ್ತ ಶಿವ ಇತ್ಯಾದಿ) ಪರಿಚಯಿಸುವ ಶಿಲ್ಪಗಳು. ಅಲ್ಲದೆ ಕೆಲವು ಶಿಲ್ಪಗಳನ್ನು ಹೊರಗೋಡೆಯಲ್ಲಿ ನಿರ್ಮಿಸಲಾಗಿರುವ ಕೋಷ್ಠಕಗಳಲ್ಲಿ ಇಡಲಾಗಿದೆ. ಈ ಕೋಷ್ಠಕಗಳು ದ್ರಾವಿಡ ಮಾದರಿಯ ಶಿಖರ ಅಲಂಕಾರವನ್ನು ಹೊಂದಿವೆ.

ಮೇಲ್ಛಾವಣಿಯಲ್ಲಿ ಕೀರ್ತಿಮುಖ, ಆನೆ, ಹಾಗೂ ಸಿಂಹಗಳ ಉಬ್ಬು ಶಿಲ್ಪಗಳನ್ನು ಅಳವಡಿಸಲಾಗಿದೆ. ಗರ್ಭಗೃಹವು ಸುಂದರವಾದ ಹೊರಗೋಡೆಯನ್ನು ಹೊಂದಿದ್ದರೂ ದೇವಾಲಯದ ಶಿಖರ ಭಾಗ ಸಂಪೂರ್ಣವಾಗಿ ಬಿದ್ದುಹೋಗಿದೆ. ಈಗಿರುವ ಕಲಾನೈಪುಣ್ಯತೆಯನ್ನು ಗಮನಿಸಿದರೆ ಈ ದೇವಾಲಯದ ಶಿಖರವು ಸಹ ಅತ್ಯಂತ ಮನಮೋಹಕವಾಗಿತ್ತೆಂಬುದರಲ್ಲಿ ಸಂಶಯವಿಲ್ಲ. ಪ್ರಾಚೀನ ಶಿಖರವು ಬಿದ್ದುಹೋಗಿದ್ದು ಅದಕ್ಕೆ ಸಂಬಂಧಿಸಿದ ಹಲವಾರು ಪ್ರಾಚ್ಯಾವಶೇಷಗಳು ದೇವಾಲಯದ ಸುತ್ತಲೂ ಬಿದ್ದಿವೆ. ಕಲಾವೈಶಿಷ್ಟ್ಯತೆಯಿಂದ ಕೂಡಿರುವ ಈ ದೇವಾಲಯ ಬಗೆಗೆ ಲಿಖಿತವಾದ ಯಾವ ಮಾಹಿತಿ ಈವರೆಗೂ ಸಿಕ್ಕಿಲ್ಲ.

ಮಲಪ್ರಭಾ ನದಿ ಪರಿಸರದಲ್ಲಿ ಇರುವ ಮೆಣಸಗಿ ಗ್ರಾಮದ ಸುತ್ತಲಿನ ಪ್ರದೇಶದಲ್ಲಿ ಆದಿ ಇತಿಹಾಸದ ಅನೇಕ ಕುರುಹುಗಳು ಕಂಡುಬರುತ್ತವೆ. ಇಲ್ಲಿ ಆದಿಹಳೆಯ ಶಿಲಾಯುಗ ಹಾಗೂ ನೂತನ ಶಿಲಾಯುಗಕ್ಕೆ ಸಂಬಂಧಿಸಿದ ಪ್ರಾಚ್ಯಾವಶೇಷಗಳು ಕಂಡುಬಂದಿವೆ. ಇಲ್ಲಿ ಸಿಕ್ಕಿರುವ ಆದಿ ಹಳೆಯ ಶಿಲಾಯುಗ (Early Palaeolithic) ಕಾಲದ ಆಯುಧೋಪಕರಣಗಳಿಂದ ಈ ನೆಲೆಯು ಕರ್ನಾಟಕದ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಆದಿ ಶಿಲಾಯುಗ ಸಂಸ್ಕೃತಿಗೆ ಸಂಬಂಧಿಸಿದಂತೆ ತನ್ನನ್ನು ವಿಶೇಷವಾಗಿ ಗುರುತಿಸಿಕೊಂಡಿದೆ.

೩೭

ಊರು ಯಾವಗಲ್ಲ
ಸ್ಮಾರಕ ವೀರಭದ್ರ
ಸ್ಥಳ ಗ್ರಾಮದಲ್ಲಿ
ಕಾಲ ೧೨ನೇ ಶತಮಾನ
ಶೈಲಿ ಕಲ್ಯಾಣ ಚಾಲುಕ್ಯ
ಅಭಿಮುಖ ಉತ್ತರ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಪ್ರಾಚೀನ ಕಾಲದ ವೀರಭದ್ರ ದೇವಾಲಯ ಇತ್ತೀಚೆಗೆ ಹಲವು ಮಾರ್ಪಾಡುಗಳಿಗೆ ಒಳಗಾಗಿರುವುದು. ಗರ್ಭಗೃಹ, ಅಂತರಾಳ ಹಾಗೂ ಮಂಟಪಗಳ ಭಾಗಗಳನ್ನು ಈ ದೇವಾಲಯ ಹೊಂದಿದೆ. ಮಂಟಪದಲ್ಲಿ ಕಂಬಗಳಿವೆ. ಅವುಗಳ ರಚನಾ ಮಾದರಿಯನ್ನು ಗಮನಿಸಿ ಹೇಳುವುದಾದರೆ ವೀರಭದ್ರನ ಗುಡಿಯು ೧೩ನೇ ಶತಮಾನದ ನಂತರವೆ ನಿರ್ಮಾಣವಾಗಿದ್ದಿರಬಹುದೆಂದು ತಿಳಿಯಬಹುದು. ದುರಸ್ತಿ ಕಾರ್ಯಗಳಿಗೆ ಒಳಗಾಗಿರುವ ಈ ದೇವಾಲಯ ಭಗ್ನಾವಶೇಷಗಳನ್ನು ಗುಡಿಯ ಆವರಣದಲ್ಲಿ ಇಡಲಾಗಿದೆ. ಪ್ರಾಚೀನವಾಗಿರುವ ವೀರಭದ್ರನ ಸುಮದರವಾದ ಕತ್ತನೆಯುಳ್ಳ ಶಿಲ್ಪವು ಗರ್ಭಗೃಹದಲ್ಲಿದ್ದು ನಿತ್ಯವು ಪೂಜಿಸಲ್ಪಡುತ್ತದೆ.

ದೇವಾಲಯಕ್ಕೆ ಕದಂಬ-ನಾಗರ ಶೈಲಿಯ ಶಿಖರವಿದ್ದು ಅದು ಸಹ ಕೆಲವು ಮಾರ್ಪಾಡುಗಳಿಗೆ ಒಳಗಾಗಿರುವುದು. ಸುಖನಾಸದಲ್ಲಿ ಶಿಲಾಫಲಕವನ್ನು ಅಳವಡಿಸಿದ್ದಾರೆ. ಇದೇ ಗ್ರಾಮದಲ್ಲಿ ಇನ್ನೊಂದು ಪ್ರಾಚೀನ ಕಾಲದ ದೇವಾಲಯವಿತ್ತು. ಈಶ್ವರನೆಂಬ ಹೆಸರಿನಿಂದ ಕರೆಯಲ್ಪಡುವ ಈ ಗುಡಿಯನ್ನು ಸದ್ಯ ಸಂಪೂರ್ಣವಾಗಿ ನವೀಕರಿಸಲಾಗಿದೆ. ಗರ್ಭಗೃಹದಲ್ಲಿ ಪ್ರಾಚೀನ ದೇವಾಲಯದ ಲಿಂಗ ಮಾತ್ರ ಇಂದಗೂ ಕಂಡಬುರುತ್ತದೆ.

ಯಾವಗಲ್ಲ ಗ್ರಾಮದ ಮೂರು ಶಾಸನಗಳು ಪ್ರಕಟಗೊಂಡಿವೆ. (ಧಾ.ಜಿ.ಶಾ.ಸೂ, ಸಂ.ರೋ ೭೦, ೭೧ ಮತ್ತು ೭೨ ಪು. ೧೮; SII, XV No. 197, 263 ಮತ್ತು 699) ಕ್ರಿ.ಶ. ೧೨೭೧ರ ತೇದಿವುಳ್ಳ ಶಾಸನವು ಯಾದವ ಅರಸ ಮಹಾದೇವನ ಕಾಲಕ್ಕೆ ಸಂಬಂಧಿಸಿದ್ದು. ಬೆಲವಣಿಗೆಯ (ಬೆಳವಣಿಕೆ ಇರಬಹುದು) ದೇವಾಲಯಕ್ಕೆ ದಾನ ಕೊಟ್ಟಿರುವ ಮಾಹಿತಿ ಈ ಶಾಸನದಲ್ಲಿದೆ. ಇನ್ನೆರಡು ಶಾಸನಗಳು ಕ್ರಮವಾಗಿ ಕ್ರಿ.ಶ. ೧೫೫೫ ಹಾಗೂ ಕ್ರಿ.ಶ. ೧೬ನೇ ಶತಮಾನಕ್ಕೆ ಸೇರಿದವುಗಳು. ಆದರೆ ಅವುಗಳ ಬಗೆಗೆ ಸ್ಪಷ್ಟ ವಿವರಗಳು ಲಭ್ಯವಿಲ್ಲ. ೧೫೫೫ರ ಶಾಸನವು ಮಲಿಕ್ ಸಾಹೇಬನ ಆದೇಶದಂತೆ ದತ್ತಿ ನೀಡಿರುವ ಬಗೆಗೆ ಮಾಹಿತಿ ನೀಡುತ್ತದೆ. ಆದರೆ ಉಲ್ಲೇಖಿತ ಮಲ್ಲಿಕ್ ಸಾಹೇಬ ಯಾರು? ಯಾವ ಪ್ರದೇಶವನ್ನು ಆಳುತ್ತಿದ್ದ ಹಾಗೂ ಯಾರ ಅಧೀನ ಕಾರ್ಯನಿರ್ವಹಿಸುತ್ತಿದ್ದನೆಂಬ ಮಾಹಿತಿಗಳಿಲ್ಲ. ೧೬ನೇ ಶತಮಾನದ ತೇದಿವುಳ್ಳ ಶಾಸನವು ಹೂವಿನ ಹಡಗಲಿಯಲ್ಲಿ ನರಹರಿ ಭಟ್ಟನಿಗೆ ಭೂಮಿಯನ್ನು ದಾನಬಿಟ್ಟ ಉಲ್ಲೇಖವನ್ನು ಒಳಗೊಂಡಿದೆ. ಈ ಶಾಸನದಲ್ಲಿಯೂ ಸಹ ಯಾವುದೇ ಸ್ಪಷ್ಟ ಮಾಹಿತಿ ಇಲ್ಲ. ಇನ್ನೊಂದು ಮುಖ್ಯವಾದ ಸಂಗತಿ ಎಂದರೆ ಮೇಲೆ ವಿವರಿಸಿದ ಮೂರು ಶಾಸನಗಳು ಬೇರೆ ಬೇರೆ ಗ್ರಾಮಗಳ ವಿವರಗಳನ್ನು ನೀಡುತ್ತವೆ ಹೊರತು ಯಾವಗಲ್ಲ ಗ್ರಾಮದ ಬಗೆಗೆ ಯಾವುದೇ ಮಾಹಿತಿ ನೀಡುವುದಿಲ್ಲ.

ಯಾವಗಲ್ಲ ಗ್ರಾಮವು ಇತಿಹಾಸಪೂರ್ವ ಕಾಲದ ಸಂಸ್ಕೃತಿಯ ಕುರುಹುಗಳನ್ನು ಹೊಂದಿರುವ ಬಗ್ಗೆ ವಿವರಗಳಿಗೆ. ನೂತನ ಶಿಲಾ (ನವಶಿಲಾ) ಯುಗದ ಕಾಲಕ್ಕೆ ಸೇರಿದ ಮಡಕೆ ಹಾಗೂ ಇನ್ನಿತರ ಪ್ರಾಚೀನ ಸಲಕರಣೆಗಳು ಗ್ರಾಮದ ಸುತ್ತಲೂ ಕಂಡುಬರುತ್ತವೆ. (ಇಂ.ಆ.ರಿ. ೧೯೬೬-೬೭ ಪುಟ ೨೮).

೩೮

ಊರು ರಾಜೂರು
ಸ್ಮಾರಕ ರಾಂಲಿಂಗೇಶ್ವರ
ಸ್ಥಳ ಗ್ರಾಮದ ಆಗ್ನೇಯಕ್ಕೆ
ಕಾಲ ೯-೧೦ನೇ ಶತಮಾನ
ಶೈಲಿ ರಾಷ್ಟ್ರಕೂಟ
ಅಭಿಮುಖ ಪೂರ್ವ
ಸ್ಥಿತಿ ಕನಿಷ್ಠ
ಸಂರಕ್ಷಣೆ

ರಾಷ್ಟ್ರಕೂಟರ ಕಲಾ ರಚನೆಯ ಲಕ್ಷಣಗಳನ್ನು ಹೊಂದಿರುವ ಈ ದೇವಾಲಯ ಭಗ್ನಾವಸ್ಥೆಯಲ್ಲಿದೆ. ಉತ್ತರ ಕರ್ನಾಟದಲ್ಲಿ ಸಿಗುವ ಹಾಗೂ ರಾಷ್ಟ್ರಕೂಟ ಪ್ರಾರಂಭದ ಕಾಲದಲ್ಲಿ ನಿರ್ಮಾಣವಾದ ದೇವಾಲಯಗಳಲ್ಲಿ ರಾಜೂರಿನ ರಾಮಲಿಂಗೇಶ್ವರ ದೇವಾಲಯ ಕೂಡಾ ಒಂದು. ಗರ್ಭಗೃಹ, ತೆರದ ಅಂತರಾಳ ಹಾಗೂ ಭಾಗಶಃ ನಾಶವಾಗಿರುವ ನವರಂಗದ ಭಾಗಗಳು ದೇವಾಲಯಕ್ಕಿವೆ. ದೇವಾಲಯಕ್ಕಿರುವ ಪ್ರಾರಂಭದ ಪ್ರವೇಶ ದ್ವಾರವು ಸಹ ಹಾಳಾಗಿದ್ದು ಸದ್ಯ ಉತ್ತರಕ್ಕೆ ಮುಖ ಮಾಡಿದ ಇನ್ನೊಂದು ಪ್ರವೇಶ ದ್ವಾರವನ್ನು ನಿರ್ಮಿಸಲಾಗಿದೆ.

ಗರ್ಭಗೃಹದಲ್ಲಿ ಲಿಂಗವಿದೆ. ಪಮಚಪಟ್ಟಿಕೆಯನ್ನೊಳಗೊಂಡ ಬಾಗಿಲವಾಡದ ಲಲಾಟದಲ್ಲಿ ಗಜಲಕ್ಷ್ಮೀ ಉಬ್ಬುಶಿಲ್ಪ ಇರುವುದು. ಅಲ್ಲದೆ ದ್ವಾರಪಾಲಕ ಉಬ್ಬುಶಿಲ್ಪಗಳು ಇದೇ ಬಾಗಿಲವಾಡದಲ್ಲಿವೆ. ತೆರದ ಅಂತರಾಳವು ಬರಿದಾಗಿದೆ.

ನವರಂಗದಲ್ಲಿ ರಾಷ್ಟ್ರಕೂಟರ ಕಾಲದ ಲಕ್ಷಣವುಳ್ಳ ನಾಲ್ಕು ಗಿಡ್ಡನೆಯ ಕಂಬಗಳಿವೆ. ಅವು ಬುಡದಲ್ಲಿ ಚೌಕಾಕಾರವಾಗಿದ್ದು ಮೇಲ್ಭಾಗದಲ್ಲಿ ದುಂಡಾಕಾರವಾಗಿವೆ. ನವರಂಗದಲ್ಲಿನ ಒಳಗೋಡೆಯಲ್ಲಿ ಅರ್ಧಕಂಬಗಳನ್ನು ಕಾಣುತ್ತೇವೆ. ಅವುಗಳ ಮೇಲೂ ತ್ರಿಕೋನಾಕಾರದ ಅಲಂಕಾರವನ್ನು ಮಾಡಲಾಗಿದೆ.

ದೇವಾಲಯದ ಹೊರಗೋಡೆಯ ಧಕ್ಕೆಗೆ ಒಳಗಾಗಿದೆ. ಸ್ತ್ರೀ ದೇವತೆಯ ಉಬ್ಬುಶಿಲ್ಪ ಬ್ರಹ್ಮ, ವಿಷ್ಣು ಅವತಾರ, ಆನೆ ಹಾಗೂ ಸಿಂಹಗಳ ಉಬ್ಬುಶಿಲ್ಪಗಳನ್ನು ಹೊರಗೋಡೆಯ ಮೇಲೆ ಕಂಡರಿಸಲಾಗಿದೆ. ಚಿಕ್ಕ ಮಂಟಪಗಳನ್ನು ಗೋಡೆಯ ಭಾಗದಲ್ಲಿ ಚಿತ್ರಿಸಿದ್ದು ಅವುಗಳ ಮೇಲೆ ಶಿಕರವನ್ನು ಸಹ ಮೂಡಿಸಿದ್ದಾರೆ. ದ್ರಾವಿಡ ಮಾದರಿಯ ಶಿಖರ ಇದಾಗಿದೆ. ಆದರೆ ಮುಖ್ಯ ದೇವಾಲಯದ ಶಿಖರ ಭಾಗವು ನಾಶವಗಿದೆ. ದೇವಾಲಯದ ಅಧಿಷ್ಠಾನ ಭಾಗವು ಉಪಾನ, ಜಗತಿ, ಗಳ, ಕಪೋತ ಹಾಗೂ ತ್ರಿಪಟ್ಟ ಕುಮದ ಭಾಗಗಳನ್ನು ಹೊಂದಿದೆ. ಇತ್ತೀಚೆಗೆ ದೇವಾಲಯಕ್ಕೆ ಸಣ್ಣ-ಬಣ್ಣ ಬಳಿಯಲಾಗಿದೆ.

ರಾಷ್ಟ್ರಕೂಟರ ಕಾಲದ ಯಾವ ಶಾಸನಗಳು ರಾಜೂರಿನಲ್ಲಿ ಸಿಕ್ಕಿಲ್ಲ. ಆದರೆ ಕಲ್ಯಾಣ ಚಾಲುಕ್ಯ ಕಾಲದ ಎರಡು ಶಾಸನಗಳು ಗ್ರಾಮಕ್ಕೆ ಸಂಬಂಧಿಸಿದಂತೆ ಪ್ರಕಟವಾಗಿವೆ. (ಧಾ.ಜಿ.ಶಾ.ಸೂ, ಸಂ.ರೋ ೭೩ ಮತ್ತು ೭೪ ಪು. ೧೮; SII, XV No. 43 ಮತ್ತು SSLXI pt. I. 69) ಗ್ರಾಮದ ಹನುಂತ ದೇವರ ಗುಡಿಯ ಮುಂಭಾಗದಲ್ಲಿ ಎರಡನೆಯ ಜಯಸಿಂಹನ ಕ್ರಿ.ಶ. ೧೦೩೩ರ ತೇದಿವುಳ್ಳ ಶಾಸನವಿದೆ. ಜೋಗಗಾವುಂಡನಿಂದ ಕಿಸುಕಾಡು-೭೦ (ಪಟ್ಟದಕಲ್ಲು)ರ ರಾಜೂರು ಗ್ರಾಮದಲ್ಲಿ ಗವರೇಶ್ವರ ದೇವಾಲಯದ ನಿರ್ಮಾಣ ಹಾಗೂ ದಾನ ನೀಡಿರುವ ಉಲ್ಲೇಖವಿದೆ. ಆದರೆ ಗವರೇಶ್ವರ ಎಂಬ ದೇವಾಲಯ ರಾಜೂರಿನಲ್ಲಿ ಸದ್ಯಕ್ಕಿಲ್ಲ. ಇನ್ನೊಂದು ಸಾಸನ ಕ್ರಿ.ಶ. ೧೧೪೪ರ ಇಸ್ವಿಯದ್ದು. ಹೆಗ್ಗಡೆ ಬಲದೇವಯ್ಯನಾಯಕನೆಂಬುವನು ಕೊಂಟಿಗೆ (ಕೋಟ ಉಮ್ಮಚಗಿ ಆಗಿರಬಹುದು-ಗದಗ ತಾಲೂಕು) ಮತ್ತು ರಾಜೂರಿನ ರಾಣೆಗಳ ಪನ್ನಾಯಸುಂಕವನ್ನು ರಾಜೂರು ಗ್ರಾಮದ ಮೂಲ ಸ್ಥಾನದೇವರ ನಿತ್ಯನಿರ್ವಹಣೆಗಾಗಿ ಬಿಟ್ಟಿರುವ ಉಲ್ಲೇಖವಿದೆ. ಬಹುಶಃ ಮೂಲಸ್ಥಾನದೇವರೆಂದರೆ ರಾಮಲಿಂಗೇಶ್ವರನೇ ಆಗಿರಬಹುದು? ಈ ಸಂಗತಿಯನ್ನು ಹೆಚ್ಚಿನ ಅಧ್ಯಯನಕ್ಕೆ ಒಳಪಡಿಸುವ ಅವಶ್ಯಕತೆ ಇದೆ. ರಾಜೂರು ಗ್ರಾಮ ಪರಿಸರದಲ್ಲಿ ಬೃಹತ್ ಶಿಲಾಯುಗ ಸಂಸ್ಕೃತಿಯ ಕುರುಹುಗಳು ಪತ್ತೆಯಾಗಿವೆ. (ಇಂ.ಆರಿ. ೧೯೬೪-೬೫, ಪುಟ ೩೧).

೩೯

ಊರು ರೋಣ
ಸ್ಮಾರಕ ಸೋಮೇಶ್ವರ
ಸ್ಥಳ ಬ್ರಾಹ್ಮಣರ ತೋಟ
ಕಾಲ ೧೦-೧೧ನೇ ಶತಮಾನ
ಶೈಲಿ ರಾಷ್ಟ್ರಕೂಟ
ಅಭಿಮುಖ ಪೂರ್ವ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಇದೊಂದು ದ್ವಿಕೂಟ ರಚನೆ. ಎರಡು ಗರ್ಭಗೃಹಗಳು ಹಾಗೂ ಅವುಗಳನ್ನು ಒಳಗೊಂಡಂತೆ ಒಂದು ನವರಂಗವನ್ನು ಹೊಮದಿದೆ. ಇಲ್ಲಿರುವ ಎರಡು ಗರ್ಭಗೃಹಗಳು ಭಾಗಶಃ ಹಾಳಾಗಿವೆ. ಒಂದರಲ್ಲಿ ಲಿಂಗವನ್ನು ಇನ್ನೊಂದರಲ್ಲಿ ಗಣಪತಿಯ ಶಿಲ್ಪವನ್ನು ಇಡಲಾಗಿದೆ.

ನವರಂಗವು ನಾಲ್ಕು ಕಂಬಗಳನ್ನು ಹಾಗೂ ಅವುಗಳನ್ನು ಒಳಗೊಂಡಂತೆ ಎತ್ತರೆ ಕಟ್ಟೆಯನ್ನು ಹೊಂದಿರುವುದು. ಕಂಬಗಳು ಗಾತ್ರದಲ್ಲಿ ಗಿಡ್ಡಾಗಿದ್ದು ಚೌಕಾಕಾರದ ಬೋಧಿಗೆಗಳನ್ನು ಹೊಂದಿವೆ. ಅವು ಕಲ್ಯಾಣ ಚಾಲುಕ್ಯ ಆಡಳಿತದ ಪ್ರಾರಂಭಕಾಲದಲ್ಲಿ ನಿರ್ಮಾಣವಾಗಿರುವ ಲಕ್ಷಣಗಳನ್ನು ಒಳಗೊಂಡಿರುವುವು. ಬಾಗಿಲ ಚೌಕಟ್ಟಿನ ಮೇಲ್ಭಾಗದಲ್ಲಿ ದ್ರಾವಿಡ ಶಿಖರ ಮಾದರಿಯ ಅಲಂಕಾರದ ಚಿಕ್ಕ ಮಂಟಪಗಳನ್ನು ಕಂಡರಿಸಲಾಗಿದೆ. ದೇವಾಲಯದ ಹೊರಗೋಡೆಯಲ್ಲಿ ಅರ್ಧಕಂಬಗಳನ್ನು ಸುತ್ತಲೂ ನಿರ್ಮಿಸಲಾಗಿದೆ.

ಕಲಚೂರಿ ಸಂಕಮದೇವನ ಕಾಲಕ್ಕೆ ಸೇರಿದ ಕ್ರಿ.ಶ. ೧೧೭೯ರ ತೇದಿವುಳ್ಳ ಶಾಸನವೊಂದು ಸೋಮೇಶ್ವರ ದೇವಾಲಯದ ಗೋಡೆಯಲ್ಲಿದೆ (ಧಾಜಿಶಾಸೂ, ಸಂ.ರೋ. ೮೧ ಪು. ೧೮; SII, XV No. 137 ಮತ್ತು EI, XIX p. 226-36). ಸಿಂದವಂಶದ ಮಹಾಮಂಡಳೇಶ್ವರ (ಬಹುಶಃ ಯಲ್ಬುರ್ಗಿಯ ಸಿಂದನಿರಬಹುದು) ವಿಕ್ರಮಾದಿತ್ಯನಿಂದ ಚಾಮೇಶ್ವರ ಮತ್ತು ಮಲ್ಲೇಶ್ವರ ದೇವರಿಗೆ ಭೂಮಿಯನ್ನು ದಾನ ಮಾಡಿರುವ ಉಲ್ಲೇಖವಿದೆ. ಬಹುಶಃ ಶಾಸನದಲ್ಲಿ ಉಲ್ಲೇಖಿತ ಚಾಮೇಶ್ವರ ದೇವಾಲಯವೇ ಈಗೀನ ಸೋಮೇಶ್ವರ ದೇವಾಲಯವಾಗಿರಬಹುದೇ? ಎಂಬುದು ಅಧ್ಯಯನ ಯೋಗ್ಯವಾದ ಸಂಗತಿ. ಆದರೆ ಮಲ್ಲೇಶ್ವರ ದೇವಾಲಯ ಯಾವುದು ಎಂಬುದು ಪ್ರಶ್ನಾರ್ಥಕವಾಗಿಯೇ ಉಳಿದುಕೊಳ್ಳುತ್ತದೆ.

೪೦

ಊರು ರೋಣ
ಸ್ಮಾರಕ ರಾಮಲಿಂಗನ
ಸ್ಥಳ ಕೆರೆಯ ದಂಡೆ
ಕಾಲ ೧೦-೧೧ನೇ ಶತಮಾನ
ಶೈಲಿ ರಾಷ್ಟ್ರಕೂಟ
ಅಭಿಮುಖ ಪೂರ್ವ
ಸ್ಥಿತಿ ಕನಿಷ್ಠ
ಸಂರಕ್ಷಣೆ

ಗರ್ಭಗೃಹ, ಅಂತರಾಳ ಹಾಗೂ ನವರಂಗಗಳನ್ನು ಈ ದೇವಾಲಯ ಹೊಂದಿದೆ. ಗರ್ಭಗೃಹದಲ್ಲಿ ಚೌಕಾಕಾರದ ಲಿಂಗವಿದ್ದು ಅದನ್ನು ನಿತ್ಯವು ಪೂಜಿಸುತ್ತಾರೆ. ಚಿಕ್ಕದಾದ ಗರ್ಭಗೃಹ ಸಾದಾ ಬಾಗಿಲವಾಡವನ್ನು ಹೊಂದಿದೆ. ಅದರಲ್ಲಿ ತ್ರಿಪಟ್ಟಿಕೆಗಳನ್ನು ಕಂಡರಿಸಿದ್ದಾರೆ. ಲಲಾಟದಲ್ಲಿ ಗಜಲಕ್ಷ್ಮೀ ಉಬ್ಬುಶಿಲ್ಪವಿದೆ. ತೆರದ ಅಂತರಾಳವು ಚಿಕ್ಕದಾಗಿದ್ದು ಹಾಗೂ ಅದು ಎರಡು ಕಂಬಗಳನ್ನು ಹೊಂದಿರುವುದು.

ನವರಂಗವು ನಾಲ್ಕು ಕಂಬಗಳನ್ನು ಹಾಗೂ ಗೋಡೆಯಲ್ಲಿನ ಅರ್ಧ ಕಂಬಗಳನ್ನು ಒಳಗೊಂಡಿದೆ. ವಾಸ್ತುಶಿಲ್ಪ ಅಧ್ಯಯನದಲ್ಲಿ ಇಲ್ಲಿನ ಕಂಬಗಳು ಗಮನಾರ್ಹ. ಕಾರಣ ರಾಷ್ಟ್ರಕೂಟರ ವಾಸ್ತು ಲಕ್ಷಣಗಳನನ್‌ಉ ಮೈಗೂಡಿಕೊಂಡು ಕಲ್ಯಾಣ ಚಾಲುಕ್ಯರ ಆಳ್ವಿಕೆಯ ಪ್ರಥಮ ಪಾದದಲ್ಲಿ ರಚನೆಯಾಗಿರುವಂಥವು. ಆಕಾರದಲ್ಲಿ ಗಿಡ್ಡನೆಯವುಗಳಾಗಿದ್ದು ಬುಡದಲ್ಲಿ ಚೌಕಾಕಾರವಗಿವೆ. ಕಿಕ್ಕ ಬೋಧಿಗೆಗಳನ್ನು ಕಂಬಗಳಲ್ಲಿ ಅಳವಡಿಸಲಾಗಿದೆ. ಗೋಡೆಗಂಬಗಳು ಆಥವ ಆರ್ಧಕಂಬಗಳು ಸಹ ಕೆಳಭಾಗದಲ್ಲಿ ಚೌಕಾಕಾರವಾಗಿವೆ. ಮೇಲ್ಛಾವಣೆ ಹಾಗೂ ಕಂಬಗಳ ಮಧ್ಯೆ ದೊಡ್ಡ ತೊಲೆಗಳನ್ನು ಅಳವಡಿಸಲಾಗಿದೆ. ರಾಷ್ಟ್ರಕೂಟರಿಂದ ಕಲ್ಯಾಣ ಚಾಲುಕ್ಯರ ಕಾಲಕ್ಕೆ ಸ್ಥಿತ್ಯಂತರಗೊಂಡ ಕಲಾ ಶೈಲಿಯ ಅಧ್ಯಯನವನ್ನು ಪರಿಗಣಿಸುವ ಸಂದರ್ಭದಲ್ಲಿ ರೋಣದಲ್ಲಿನ ಕೆಲವು ದೇವಾಲಯಗಳು ಮಹತ್ವದವುಗಳಾಗಿ ಪರಿಗಣಿಸಲ್ಪಡುವುವು. ನವರಂಗದ ಬಾಗಿಲವಾಡದಲ್ಲಿ ಐದು ಪಟ್ಟಿಕೆಯ ರಚನೆ ಇದೆ. ಈ ದೇವಾಲಯ್ಕೆಕ ಸಭಾ ಮಂಟಪವು ಇದ್ದಿರುವ ಸಾಧ್ಯತೆಗಳಿವೆ. ಬಹುಶಃ ದು ಕಾಲಾನಂತರದಲ್ಲಿ ಬಿದ್ದು ಹೋಗಿದೆ. ಪ್ರಾಚೀನ ದೇವಾಲಯದ ಕೆಲವು ಅವಶೇಷಗಳು ಗುಡಿಯ ಸಂಕೀರ್ಣದಲ್ಲಿ ಅನಾಥವಾಗಿ ಬಿದ್ದಿವೆ. ಇದೇ ಗುಡಿಯ ಆವರಣದಲ್ಲಿ ದಾವಲ ಮಲ್ಲಿಕ ಸಾಹೇಬನ ದರ್ಗಾವನ್ನು ಇತ್ತೀಚೆಗೆ ನಿರ್ಮಿಸಲಾಗಿದೆ.

ಶಾಸನದಲ್ಲಿ ರೋಣ ಪಟ್ಟಣವನ್ನು ‘ದ್ರೋಣಪುರ’ ಎಂದು ಕರೆಯಲಗಿದೆ. ದ್ರೋಣಪುರವೇ ರೋಣ ಆಗಿರುವ ಸಾಧ್ಯತೆಗಳಿವೆ. ದ್ರೋಣಪುರವನ್ನು ದ್ರೋಣಚಾರ್ಯರಿಗೆ ಸಂಧ ಕಲ್ಪಸಿ ಕೆಲವು ಐತಿಹ್ಯಗಳು ಹುಟ್ಟಿಕೊಮಡಿವೆ. ಆದರೆ ದ್ರೋಣಾಚಾರ್ಯರಿಗೆ ಹಾಗೂ ದ್ರೋಣಪುರಕ್ಕೆ ಸಂಭಂಧ ಕಲ್ಪಿಸುವುದು ಅಷ್ಟು ಸಮಂಜಸ ವಿಷಯವಾಗಲಾರದು ಎಂದು ಹೇಳಬಹುದು. ಪ್ರಾಚೀನ ದ್ರೋಣಪುರವು (ರೋಣ) ಮಹಾ ಅಗ್ರಹಾರವು ಆಗಿತ್ತು ಎಂಬ ಉಲ್ಲೇಖಗಿವೆ.