ಅಂಕಣ ದೇವಾಲಯದಲ್ಲಿನ ನಾಲ್ಕು ಕಂಬಗಳ ಮಧ್ಯದ ಭಾಗ (ವಿಂಗಡನೆಯ ಒಂದು ಭಾಗ)
ಅಂತರಾಳ ಗರ್ಭಗೃಹದ ಮುಂದಿನ ಭಾಗ. ಗರ್ಭಗೃಹ ಮತ್ತು ನವರಂಗಕ್ಕೆ ನಡುವೆ ಇರುತ್ತದೆ. ಈ ಜಾಗದಲ್ಲಿ ಕೆಲವು ದೇವಾಲಯಗಳಲ್ಲಿ ನಂದಿಯ ಶಿಲ್ಪಗಳನ್ನು ಇರಿಸಿರುತ್ತಾರೆ.
ಅಧಿಷ್ಠಾನ ದೇವಾಯದ ಪ್ರಧಾನ ಭಾಗ. ಇದು ಗುಡಿಯ ತಳಪಾಯ. ಸಾಮಾನ್ಯವಾಗಿ ಇದು ಜಗತಿ. ಕುಮುದ. ಗಳ ಮತ್ತು ಪಟ್ಟಿ ಭಾಗಗಳನ್ನು ಒಳಗೊಂಡಿರುತ್ತದೆ. ಕೆಲವು ಸಂಕೀರ್ಣವಾದ ಅಧಿಷ್ಠಾನನಗಳಲ್ಲಿ ಕರ್ಣ, ಪ್ರತಿಭದ್ರ, ಭದ್ರಭಾಗಗಳು ಇರುತ್ತವೆ.
ಅರ್ಧಮಂಟಪ ನವರಂಗ ಮಂಟಪದ ಮುಂದಿನ ಭಾಗ. ಇದರಲ್ಲಿ ಎರಡು ಕಂಬಗಳಿರುತ್ತವೆ.
ಅಮ್ಮನವರ ಗುಡಿ ಪುರುಷ ದೇಗುಲದ ಎಡಬದಿಯ ಸಣ್ಣ ಸ್ತ್ರೀ ದೇಗುಲ
ಉತ್ಸವ ಮಂಟಪ ಮೆರವಣಿಗೆಯ ಸಮಯದಲ್ಲಿ ದೇವತಾ ಮೂರ್ತಿಯನ್ನು ಇಡಲು ಮಾಡಿದ ಮಂಟಪ
ಉಪ ಪೀಠ ದೇವಾಲಯದ ಅಧಿಷ್ಠಾನದ ಕೆಳಗೆ ಇರುವ ಭಾಗ
ಊರ್ಧ್ವಮುಖ ದೇವಾಲಯದ ಮೇಲ್ಮುಖ ರಚನೆ (Eleration) ಕೆಳಗಿನಿಂದ ಒಂದಾದ ಮೇಲೊಂದರಂತೆ
ಏಕತಲ ಪ್ರಸ್ತರದ ಮೇಲೆ ಕೂಟ, ಶಾಲ, ಶಿಖರ ಹಾಗೂ ಕಲಶಗಳನ್ನು ಹೊಂದಿರುವ ದೇವಾಲಯ
ಕಂಬ ಇದು ಉದ್ದನೆಯ ಕಲ್ಲಿನ ಭಾಗ. ಇದು ದೇವಾಲಯದ ಚಾವಣಿಯನ್ನು ಮತ್ತು ಅಡ್ಡ ತೊಲೆಗಳನ್ನು ಆಧರಿಸುತ್ತದೆ. ಇವು ಚೌಕಾಕಾರ, ದುಂಡನೆಯ ಕಂಬ, ಅಷ್ಟಕೋನಾಕೃತಿ, ನಕ್ಷತ್ರಾಕಾರ ಗಳಾಗಿಯೂ ಇರುತ್ತವೆ.
ಕಕ್ಷಾಸನ ನವರಂಗದ ಒಳಗೋಡೆಯ ಸುತ್ತಲೂ ಇರುವ ಕಲ್ಲಿನ ಕಟ್ಟೆ, ಒರಗಿಕೊಳ್ಳಲು ಏರ್ಪಾಡುಗಳನ್ನು ಮಾಡಿರುತ್ತಾರೆ.
ಕಲ್ಯಾಣ ಮಂಟಪ  ದೇವಾಲಯದ ಆವರಣದಲ್ಲಿ ಶುಭಕಾರ್ಯಗಳನ್ನು ನಡೆಸಲು ಕಟ್ಟಲಾದ ಮಂಟಪ.
ಕಪೋತ  ಅಧಿಷ್ಠಾನದ ಮುಖ್ಯ ಅಂಗಗಳಲ್ಲಿ ಒಂದು ಕಪೋತವು ಇದು ಕುಮುದ ಮೇಲೆ ಪ್ರಧಾನವಾಗಿರುವ ರಚನೆ ಪಾರಿವಾಳದ ತಲೆಯ ಆಕಾರದ ಮುಂಚಾಚಿದ ಭಾಗ. ಇದನ್ನು ಅನೇಕ ಅಲಂಕರಣೆಗಳಿಂದ ರಚಿಸುತ್ತಾರೆ.
ಕಲಶ ಗರ್ಭಗೃಹದ ಮೇಲಿರುವ ತುತ್ತತುದಿಯ ಭಾಗ
ಕುಂಭ ದೇವಾಲಯದ ಭಿತ್ತಿಯಲ್ಲಿ ಸಾಮಾನ್ಯವಾಗಿ ಅಲಂಕಾರಕ್ಕಾಗಿ ರಚಿಸಿದ ಕೊಡದಂತಹ ವಸ್ತು ಸರಿ
ಕೋಷ್ಠ ಗೋಡೆಯಲ್ಲಿ ಎರಡು ಸ್ತಂಭಗಳ ನಡುವೆ ಇರುವ ಗೂಡುಗಳಿಗೆ ಕೋಷ್ಠ ಎಂದು ಕರೆಯುತ್ತಾರೆ.
ಕರಡು ಗಂಬ ದೇವಾಲಯದ ಎದುರಿಗೆ ನಿಲ್ಲಿಸಿದ ಗರುಡನ ಚಿತ್ರ ಕೆತ್ತಿದ ಎತ್ತರವಾದ ದೀಪ ಸ್ತಂಭ.
ಗೃಹಪಿಂಡಿ ದೇವಾಲಯದಲ್ಲಿನ ಗರ್ಭಗೃಹದ ಸುತ್ತ ಇರುವ ಭಿತ್ತಿ.
ಗ್ರೀವ ದೇವಾಲಯದ ಮೇಲ್ಮಟ್ಟದ ಶಿಖರದ ಕತ್ತಿನ ಭಾಗ
ಗೋಪುರ ದೇವಾಲಯದ ಪ್ರವೇಶದ್ವಾರದ ಮೇಲಿನ ವಿಮಾನ
ಜಗತಿ ದೇವಾಳಯದ ಎತ್ತರವನ್ನು ಹೆಚ್ಚು ಮಾಡಲು ಕಟ್ಟಿದ ಕಟ್ಟೆ. ಇದು ಸಾಮಾನ್ಯ ೪-೫ ಅಡಿ ಎತ್ತರವಾಗಿರುತ್ತದೆ. ಇದು ದೇವಾಲಯದ ಸೌಂದರ್ಯವನ್ನು ಹೆಚ್ಚು ಮಾಡುತ್ತದೆ.
ತ್ರಿಪಟ್ಟ ಕಮುದ ಅಧಿಷ್ಠಾನದ ಕುಮುದ ಮೂರು ಮುಖಗಳನ್ನು ಹೊಂದಿರುವ ಭಾಗ
ದ್ವಾರ ಪಾಲಕರು ದೇವಾಲಯದ ಪ್ರವೇಶ ದ್ವಾರದಲ್ಲಿ ಹಾಗೂ ಗರ್ಭಗೃಹದ ದ್ವಾರದ ಅಕ್ಕಪಕ್ಕದ ಪೇದ್ಯ ಭಾಗದಲ್ಲಿ ಕಾಣುವ ಶಿಲ್ಪಗಳು (ಬಾಗಿಲನ್ನು ಕಾಯುವ ಸೇವಕರು).
ದ್ವಾರಬಂಧ ದೇವಾಲಯವನ್ನು ಪ್ರವೇಶಿಸುವ ಬಾಗಿಲವಾಡದಲ್ಲಿ ದ್ವಾರಶಾಖೆ, ಮಕರ ಮತ್ತು ಕಂಬಗಳಿಂದ ಅಲಂಕರಿಸಿರುತ್ತಾರೆ. ಇದರ ಮಧ್ಯದಲ್ಲಿ ಫಲಕ ಇಲ್ಲವೆ ಗರ್ಭಗೃಹದಲ್ಲಿ ಪ್ರತಿಷ್ಠಾಪಿಸಿದ ಮುಖ್ಯ ದೇವತೆಯ ಶಿಲ್ಪವನ್ನು ಕಾಣುತ್ತೇವೆ. ಅಥವಾ ಬ್ರಹ್ಮ, ವಿಷ್ಣು, ಮಹೇಶ್ವರ ಉಬ್ಬು ಶಿಲ್ಪವನ್ನು ಕಂಡಿರಿಸಿರುತ್ತಾರೆ.
ದ್ವಿಕೂಟ ಒಂದೇ ತಳಪಾಯದಲ್ಲಿ ಎರಡು ಗರ್ಭ ಗುಡಿಗಳಿರುವ ದೇವಾಲಯ
ದೇವಕೋಷ್ಠ ದೇವರ ಮೂರ್ತಿಶಿಲ್ಪಗಳನ್ನು ಇರಿಸಲು ಮಾಡಿರುವ ಗೂಡು.
ನವರಂಗ ಇದು ಗರ್ಭಗೃಹ ಅಥವ ಅಂತರಾಳ ಮಂಟಪವಿದೆ ನಂತರದ ಭಾಗವಾಗಿದೆ. ಬರುತ್ತ ಸಾಲು ಅಂಕಣಗಳನ್ನು ಒಂದಿರುತ್ತದೆ. ಸಾಮಾನ್ಯವಾಗಿ ನಾಲ್ಕು ಬಿಡಿಕಂಬಗಳನ್ನು ಹೊಂದಿದ್ದು ಹನ್ನೆರಡು ಗೋಡೆ ಕಂಬಗಳನ್ನು ಹೊಂದಿರುವುದು
ನಿರಾಂಧಾರ ದೇವಾಲಯ ಪ್ರದಕ್ಷಿಣ ಪಥ ರಹಿತವಾದ ದೇವಾಲಯ
ಪಂಜರ ದೇವಾಲಯದ ಭಿತ್ತಿಯಲ್ಲಿರುವ ಗೂಡು
ಪಟ್ಟಿಕಾ ಅಧಿಷ್ಠಾನದ ಕೊನೆಯ ಅಂಗ, ವಾಚನದಂತೆಯೇ ಹೊರಚಾಚಿರುವ ಅಗಲವಾದ ಪಟ್ಟಿ.
ಪದ್ಮ ಕಮಲದ ಅಲಂಕರಣೆ
ಪದ್ಮಪೀಠ ಕಮಲದಿಂದ ಅಲಂಕರಿಸಿದ ಪೀಠ
ಪ್ರಭಾವಳಿ ಮೂರ್ತಿಯ ಬೆನ್ನ ಹಿಂದೆ ಮಾಡಿರುವ ಸುತ್ತಲಿನ ಅಲಂಕಾರ ಪಟ್ಟಿ
ಪ್ರಕಾರ ಗೋಡೆ ದೇವಾಲಯದ ರಕ್ಷಣೆಗಾಗಿ ಕಟ್ಟಿದ ಆವರಣ ಗೋಡೆ, ಇದಕ್ಕೆ ಹೊಂದಿಕೊಂಡು ಭಕ್ತಾದಿಗಳು ವಿಶ್ರಾಂತಿ ಪಡೆಯಲು ಪವಳಿಗಳಿರುತ್ತವೆ.
ಪ್ರಸ್ತರ ಭಿತ್ತಿ ತಳಗಳ ನಡುವಿನ ಭಾಗ
ಬಲಿಪೀಠ ದೇವರಿಗೆ ನೈವೇದ್ಯವಾದ ಆಹಾರವನ್ನು ಇಡಲು ದೇವಾಲಯದ ಎದುರಿಗೆ ನಿಲ್ಲಿಸಿದ ಎತ್ತರದ ಕಲ್ಲು ಕಂಬ.
ಭಿತ್ತಿ ಅಧಿಷ್ಠಾನದ ಮೇಲೆ ಬಹು ಭಾಗವೇ ಭಿತ್ತಿ ಅಥವಾ ಗೋಡೆ ಇದನ್ನು ಕಲ್ಲು ಅಥವಾ ಇಟ್ಟಿಗೆಯನ್ನು ಬಳಸಿ ಕಟ್ಟಲಾಗುತ್ತದೆ.
ಭುವನೇಶ್ವರಿ ನವರಂಗದ ಛತ್ತಿನ ಒಳಭಾಗ ನವರಂಗದ ನಾಲ್ಕು ಕಂಬಗಳ ನಡುವಿನ ಒಳ ಛತ್ತಿನಲ್ಲಿರುತ್ತವೆ. ತಾವರೆ ಅಥವಾ ಹೂವಿನ ಅಥವ ಅಲಂಕರಣವಿರುವ ಭಾಗ. ಕೆಲವು ದೊಡ್ಡ ದೇವಾಲಯಗಳಲ್ಲಿ ನವರಂಗದ ಒಂಬತ್ತು ಅಂಕಣಗಳ ಒಳಛತ್ತಿನಲ್ಲಿ ವಿವಿಧ ಅಲಂಕರಣೆಗಳನ್ನು ಹೊಂದಿರುತ್ತದೆ. ನವಗ್ರಹಗಳ ಉಬ್ಬುಶಿಲ್ಪ, ಅಷ್ಟದಿಕ್ಪಾಲಕರ ಉಬ್ಬುಶಿಲ್ಪಗಳ ಚಿತ್ರಣಗಳು ಸಹ ಇರುವುದುಂಟು.
ಬೋಧಿಗೆ ಕಂಬದ ತುದಿಯಲ್ಲಿ ಮುಂಚಾಚಿದ ಭಾಗ
ಭುಜ ಬಂಧ ಮೂರ್ತಿಯ ಭುಜದಲ್ಲಿ ಅಲಂಕರಿಸಿದ ಆಭರಣಗಳು
ಮಕರ ತೋರಣ ಮೊಸಳೆ ಬಾಯಿಂದ ತೋರಣಗಳು ಹೊರಬಂದ ಹಾಗೆ ಮಾಡಿರುವ ಅಲಂಕಾರ
ಯಜ್ಞೋಪವೀತ ಎದೆಯ ಭಾಗದಲ್ಲಿ ಅಡ್ಡವಾಗಿ ಧರಿಸಿದ ಪವಿತ್ರದಾರ (ಜನಿವಾರ)
ಯಾಳಿ ಸಿಂಹಮುಖ, ಆನೆಯ ಕೋರೆ ಹಾಗೂ ಸೊಂಡಿಲಗಳಿರುವ ಕಾಲ್ಪನಿಕ ಪ್ರಾಣಿ.
ಯೋಗ ಮುದ್ರೆ ಧ್ಯಾನದಲ್ಲಿ ಕುಳಿತ ಭಂಗಿ
ರಂಗ ಮಂಟಪ ಸಂಗೀತ, ನೃತ್ಯ, ನಾಟಕ ಮೊದಲಾದ ಸಾಂಸ್ಕೃತಿಕ ಚಟುವಟಿಕೆಗಳು ನಡೆಯುವ ಸ್ಥಳ.
ಲಲಿತಾಸನ ಒಂದು ಕಾಲನ್ನು ಇಳಿ ಬಿಟ್ಟು, ಇನ್ನೊಂದು ಕಾಲನ್ನು ಮಡಚಿ ಕುಳಿತುರುವ ಭಂಗಿ
ವರದ ಹಸ್ತ ವರವನ್ನು ನೀಡುವ ಕೈ
ವಲ್ಲೀಬಂಧ ಬಳ್ಳಿಗಳು ಒಂದಕ್ಕೊಂದು ವೃತ್ತಾಕಾರದಲ್ಲಿ ಹೆಣೆದು ಕೊಂಡಂತಿರುವ ಕಿಟಕಿ
ವಾತಾಯನ ಗಾಳಿ, ಬೆಳಕಿಗಾಗಿ ಗೋಡೆಯಲ್ಲಿ ಮಾಡಿರುವ ಕಿಟಕಿ
ಶಿಖರ ಇದು ಪ್ರಸ್ತರದ ಮೇಲಿನ ದುಂಡನೆಯ ಭಾಗ. ಇದು ದೇವಾಲಯದ ಮುಖ್ಯ ಅಂಗ
ಸಾಂದಾರ ದೇವಾಲಯ ಗರ್ಭಗೃಹದ ಸುತ್ತಲೂ ಪ್ರದಕ್ಷಿಣಾ ಪಥವಿರುವ ದೇವಾಲಯದ (ಒಳಗಿನಿಂದಲೇ ಪ್ರದಕ್ಷಿಣೆ ಹಾಕಲು ಇರುವ ಸ್ಥಳ)
ಸಮಭಂಗಿ ಎರಡು ಕಾಲಿನ ಮೇಲೆ ಸಮನಾಗಿ ನಿಂತ ಭಂಗಿ
ಸುಕನಾಸಿ ಗಿಣಿಯ ಕೊಕ್ಕಿನಂತೆ ಶಿಖರದ ಮುಂಭಾಗದಲ್ಲಿ ಮುಂಚಾಚಿದ ರಚನೆ
ಸ್ತೂಪಿ ಕಲಶದ ಮೇಲಿನ ಮೊನಚಾದ ಕೊನೆಯ ಭಾಗ
ಸೋಪಾನ ದೇವಾಲಯವನ್ನು ಪ್ರವೇಶಿಸಲು ಹತ್ತಿಹೋಗಲು ಮಾಡಿದ ಮೆಟ್ಟಿಲು, ಪಾವಟಿಗೆ.