ಅನುಬಂಧ – ೯ : ಕೆಲವು ಹೊಸ ಶೋಧಗಳು

೧. ನೇಪಾಳದ ಕನ್ನಡ ಶಾಸನಗಳನ್ನು ಪ್ರಥಮವಾಗಿ ಓದಿ ಅವುಗಳ ಮೌಲ್ಯವನ್ನು ಗುರುತಿಸಿದ್ದು; ಅವು ಕರ್ನಾಟಕದಿಂದ ಅತ್ಯಂತ ದೂರದಲ್ಲಿ ದೊರಕಿರುವ ಕನ್ನಡ ಶಾಸನಗಳು.

೨. ನೇಪಾಳದ “ಜಂಗಂ” ಮಠದ ಕಟ್ಟಡವು ದೊಡ್ಡ ಸಂಕಣ್ಣ ನಾಯಕನಿಂದ (ಕ್ರಿ.ಶ. ೧೫೬೫) ನಿರ್ಮಾಣಗೊಂಡ ವಿಷಯ. ಹನುಮಾನ್‌ಘಾಟ್‌ಪ್ರದೇಶದ ಶಿಲಾಮೂರ್ತಿಗಳು ವೀರಶೈವ ಗುರುಗಳವು ಎಂದು ಗುರುತಿಸಿದ್ಧು.

೩. ಭಕ್ತಪುರದ ಜಂಗಂ ಮಠದ ಕಾಶಿ ವಿಶ್ವೇಶ್ವರ ಲಿಂಗವನ್ನು ದೊಡ್ಡ ಸಂಕಣ್ಣ ನಾಯಕನು ಕಾಶಿಯಿಂದ ನೇಪಾಳಕ್ಕೆ ಕೊಂಡೊಯ್ದು ಸ್ಥಾಪಿಸಿದ ವಿಷಯ.

೪. ನೇಪಾಳದ “ಕರ್ನಾಟ” ರಾಜರ ವಂಶಸ್ಥರು ಇಂದಿಗೂ ಇರುವ ಸಂಗತಿ; ಅವರ ವಂಶಾವಳಿಯನ್ನು ಪ್ರಕಟಿಸಿದ್ದು.

೫. “ಕರ್ನಾಟ” ರಾಜವಂಶದ ಪದ್ಮಲ್ಲದೇವಿ, ಬಿಜ್ಜಲದೇವಿ, ದೇಗುಲ ದೇವಿ, ವೀರಮ್ಮದೇವಿ ಇಂತಹ ಹೆಸರುಗಳ ಮಧ್ಯದ ‘- ಲ -’, ‘- ಮ್ಮ -’ ಕಾರಣವಾಗಿ ಅವು ಕರ್ನಾಟಕದ ಹೆಸರುಗಳೆಂಬ ಸಂಗತಿ.

೬. ನೆವಾರಿಗಳಲ್ಲಿ “ಕರ್ನಾಟ” ಎಂಬ ವರ್ಗದವರಿರುವುದು; ಅಂತೆಯೇ ಕುಡುಖ್‌ಜನರು ತಾವು ಕರ್ನಾಟಕದಿಂದ ಬಂದವರೆಂದು ಹೇಳಿಕೊಳ್ಳುವುದು. ‘ಕುಡುಖ್‌’ ಮತ್ತು ದಕ್ಷಿಣ ಕನ್ನಡದ ಕೊರಗ ಜನರಿಗೆ ಇರುವ ಭಾಷಿಕ ಹಾಗೂ ಸಾಮಾಜಿಕ ದಟ್ಟ ಸಾಮ್ಯ.

೭. “ತಲೇಜು” ದೇವತೆ ಮೂಲತಃ ತುಳಜಾ ಭವಾನಿಯೇ ಎಂಬುದು ಪ್ರಸಿದ್ಧ ವಿಷಯವಾದರೂ ಆ ಎರಡೂ ದೇವತೆಗಳನ್ನು ತೌಲನಿಕವಾಗಿ ಸಮೀಕ್ಷಿಸಿರುವುದು. ತುಳಜಾಭವಾನಿಯು ಮೂಲತಃ ಕರ್ನಾಟಕದ ದೇವತೆ ಮಾತ್ರವಲ್ಲ, ತುಳಜಾ ಭವಾನಿ ಸೇರಿದಂತೆ ಇಂದಿನ ಮಹಾರಾಷ್ಟ್ರದ ನಾಲ್ಕೂ ‘ರಾಷ್ಟ್ರೀಯ’ ದೈವಗಳು (ತುಳಜಾ, ಕೊಲ್ಲಾಪುರದ ಮಹಾಲಕ್ಷ್ಮಿ, ಖಂಡೋಬ, ವಿಠೋಬ) ಇವು ಮೂಲತಃ ಕರ್ನಾಟಕದ ದೈವಗಳೆಂಬುದನ್ನು ಗುರುತಿಸಿದ್ದು.

೮. ಇಂದಿಗೂ ನೇಪಾಳದ ದೊರೆಗಳು ತಮ್ಮ ರಾಜ್ಯವನ್ನಾಳಲು ‘ಕುಮಾರಿ’ ಮೂಲಕ ವರ್ಷಕ್ಕೊಮ್ಮೆ ಪರೋಕ್ಷವಾಗಿ ಪ್ರಾಚೀನ ಕರ್ನಾಟಕದ ತುಳಜಾ ಭವಾನಿಯ ಅನುಮತಿ ಪಡೆಯಬೇಕು ಎಂಬ ಸಂಗತಿ.

೯. ಭಾರತದ ಹೊರಗೆ ಆಳಿದ ಕರ್ನಾಟಕ ದೊರೆಗಳ ಪ್ರದೇಶಕ್ಕೇ ಹೋಗಿ ಅವರ ಆಡಳಿತದ ಪ್ರಭಾವ ಕುರಿತಂತೆ ನಡೆದಿರುವ ಅಧ್ಯಯನಗಳಲ್ಲಿ ಇದು ಮೊದಲನೆಯದು; ಮತ್ತು ಇದು ಅಂತಹ ಅಧ್ಯಯನಗಳ ಆರಂಭವಾಗಲಿ ಎಂದೂ ಹಾರೈಸುತ್ತೇನೆ. ಭಾರತದ ಬೇರೆ ಬೇರೆ ಕಡೆ ಆಳಿದ ದೊರೆಗಳ ಪ್ರದೇಶಗಳಿಗೂ ಹೋಗಿ ಪ್ರತ್ಯಕ್ಷ ಅಧ್ಯಯನಗಳನ್ನು ನಡೆಸುವ ಅಗತ್ಯವಿದೆ.

೧೦. “ಮಿತಾಕ್ಷರಾ” ಕೃತಿಯು ಬಂಗಾಳ ಹೊರತುಪಡಿಸಿ ಆಧುನಿಕ ಭಾರತದ ಕಾನೂನು ಗ್ರಂಥವಾಗುವಲ್ಲಿ ಕರ್ನಾಟಕ ದೊರೆಗಳ ಮುಖ್ಯಪಾತ್ರ ಇರುವುದನ್ನು ಗುರುತಿಸಿದ್ದು.

೧೧. ಭಕ್ತಪುರದ ತಲೇಜು ದೇವಾಲಯದ ಹಿಂಬದಿಯ “ಕರ್ನಾಟ” ರಾಜರ ಶಾಸನಯುಕ್ತ ಕಾಷ್ಠಶಿಲ್ಪಗಳ ಅಭಿಜ್ಞೆ (ಡಾ. ಶ್ರೇಷ್ಠ ಅವರ ಮೂಲಕ).

೧೨. ಇನ್ನು ಮಾಹಿತಿ ಜೋಡಣೆ, ವ್ಯಾಖ್ಯಾನ, ಚಿತ್ರಗಳು ಇವುಗಳ ಒಟ್ಟು ಸಮುದಾಯವೂ ನೂತನವೇ.

ಇವು ಕೆಲವು ಹೊಸ ಸಂಗತಿಗಳು: ಹೊರಬರಲು ನನ್ನನ್ನು ಆರಿಸಿಕೊಂಡು ನನ್ನನ್ನು ಸಾರ್ಥಕಗೊಳಿಸಿರತಕ್ಕವು. ಈ ರೀತಿ ಒಬ್ಬ ಸಂಶೋಧಕ ತನ್ನ ಕೃತಿಯಲ್ಲಿನ ಹೊಸ ಅಂಶಗಳನ್ನು ತಾನೇ ಎತ್ತಿಹಿಡಿಯುವ ಪದ್ಧತಿಯಿರದಿದ್ದರೂ ಅಂತಹ ಕೆಲಸ ಮಾಡಿರುವುದಕ್ಕೆ ಓದುಗೆ ಕ್ಷಮೆ ಇರಲಿ.


ಗ್ರಂಥ ಸೂಚಿ

ಅನಂತಕೃಷ್ಣ ಸೋಮಯಾಜಿ ಶ್ರೀ ಪಶುಪತಿ ದರ್ಶನ್‌(ಹಿಂದಿ)
ಇಮ್ಮಡಿ ಶಿವಬಸವ ಸ್ವಾಮಿಗಳು ಸಂಸ್ಕೃತ ಸಾಹಿತ್ಯಕ್ಕೆ ಕರ್ನಾಟಕದ ಕೊಡುಗೆ
ಕೃಷ್ಣಮೂರ್ತಿ ಮ.ಸು. ಬಸವ ರಾಜ ಮಾರ್ಗ
ಗುರುಮೂರ್ತಿ ಜಿ. ಆರ್‌. `ತಮಿಳುನಾಡಲ್ಲಿ ವೀರಶೈವರ ರೂಪರೇಖೆಗಳು.’ (ರಂಭಾಪುರಿ ಬೆಳಗು, ಆಗಸ್ಟ್‌೨೦೦೦)
ಗೋವಿಂದ ತಂಡನ್‌ ಪಶುಪತಿ ಕ್ಷೇತ್ರಕ್ಕೋ ಸಾಂಸ್ಕೃತಿಕ್‌ಅಧ್ಯಯನ್‌ (ನೇಪಾಳಿ)
ಚಿದಾನಂದಮೂರ್ತಿ ಎಂ. ವಚನ ಶೋಧ I, II
ಚಿದಾನಂದಮೂರ್ತಿ ಎಂ. ಕನ್ನಡಾಯಣ
ಚಿದಾನಂದಮೂರ್ತಿ ಎಂ. ಹೊಸತು ಹೊಸತು
ದಾಸನೂರು ಕೂಸಣ್ಣ ಶೋಷಿತ ಜಂಗಮರ ಮೀಸಲಾತಿ
ನಟರಾಜ್‌ಆಗುಂಬೆ, ಎಸ್‌. ಹೊರನಾಡಿನ ಮೂರು ಕನ್ನಡ ರಾಜ್ಯಗಳು
(ಅನು.) ನಾರಾಯಣ ಪಿ.ವಿ. ಪಾಲ್ಕುರಿಕೆ ಸೋಮನಾಥನ ಬಸವ ಪುರಾಣ
ಪುರುಷೋತ್ತಮ ಬಿಳಿಮಲೆ ಕೊರಗರ ಸಂಸ್ಕೃತಿ
ಪುರುಷೋತ್ತಮ ಲೋಚನ ಶ್ರೇಷ್ಠ `ಐತಿಹಾಸಿಕ್‌ಏವಂ ಸಾಂಸ್ಕೃತಿಕ್‌ ಸಂದರ್ಭಮಾ ಭಕ್ತಪುರ ತಲೇಜುಮಾ ಗರಿನೇದರ್ಶ ಪೂಜಾ ವಿಧಾನ್‌ – ಏಕ್‌ಚ ಚರ್ಚಾ’ (Rolamba. II No.3, 1991. ನೇಪಾಲಿ)
ಪುರುಷೋತ್ತಮ ಲೋಚನ ಶ್ರೇಷ್ಠ ‘ಭಕ್ತಪುಮಾ ವೀರಶೈವ ಮತಕೋ ವಿಕಾಸ್‌ ರ್ ಪ್ರಭಾವ್‌’ (ಖೋಪೃಢ್‌. ೧೯೯೯ – ೨೦೦೦. ನೇಪಾಲಿ)
ಪುರುಷೋತ್ತಮ ಲೋಚನ ಶ್ರೇಷ್ಠ ‘ಜಂಗಮ್‌ಮಠಕಾ ಅಭಿಲೇಖ್‌’ (Voice of History June 2000. ನೇಪಾಲಿ)
(ಸಂ.) ಬಸಪ್ಪ ಎಸ್‌. ಶಿವತತ್ವ ಚಿಂತಾಮಣಿ
(ಸಂ.) ಬಸಪ್‌ಎಸ್‌. ಸಾನಂದ ಚರಿತೆ
ಭರತ್‌ಮಣಿ ಜಂಗಮ್‌ ‘ಭಕ್ತಪುರಕಾ ಧಾರ್ಮಿಕ್‌ರ ಸಾಂಸ್ಕೃತಿಕ್‌ವಿಕಾಸ ಮಾ ಜಂಗಮ್‌ಜಾತಿಕೋ ಭೂಮಿಕಾ’ (ನೇಪಾಲಿ)
ಮಹಾದೇವ ಶಾಸ್ತ್ರೀ ಜೋಶಿ ಭಾರತೀಯ ಸಂಸ್ಕೃತಿ ಕೋಶ (ಮರಾಠಿ)
ಮೋಹನ ಪ್ರಸಾದ್‌ಖನಾಲ್‌ ಸಿಮರೌನ್‌ಗಡ ಕೀ ಇತಿಹಾಸ್‌(ನೇಪಾಲಿ)
ರಾಘವೇಂದ್ರರಾವ್‌ಪಗಡೀ ಮೈಥಿಲೀ ಕವಿ ವಿದ್ಯಾಪತಿ (ಮರಾಠಿ)
(ಸಂ.) ರಾಮದಯಾಲ್‌ರಾಕೇಶ್‌ ಸಿಮರೌನ್‌ಗಡ ವಿಷಯಕ್‌ಸಂಗೋಷ್ಠಿ (ನೇಪಾಲಿ)
(ಸಂ.) ಶಾಮಾಶಾಸ್ತ್ರಿ ಆರ್‌. ಕೆಳದಿನೃಪವಿಜಯ
(ಸಂ.) ಶಿವಾನಂದ ವಿ. ಉತ್ತರ ಭಾರತದ ಕನ್ನಡದ ಹಸ್ತಪ್ರತಿ – ಇತರ ದಾಖಲೆಗಳ ಸೂಚಿ.
(ಅನು.) ಸದಾನಂದ ಕನವಳ್ಳಿ ಮಿಥಿಲೆಯನ್ನಾಳಿದ ಕರ್ನಾಟರು (ಸಿಪಿಎನ್‌. ಸಿನ್ಹಾರವರ ಇಂಗ್ಲಿಷ್‌ಕೃತಿಯ ಕನ್ನಡಾನುವಾದ)
ಸೂರ್ಯನಾಥ ಕಾಮತ್‌ ಕರ್ನಾಟಕದ ವೀರರಾಣಿಯರು
ಹರಿಶಂಕರ್‌ ಕಾಶಿ ಕೆ ಘಾಟ್‌ – ಕಲಾತ್ಮಕ್‌ಏವಂ ಸಾಂಸ್ಕೃತಿಕ್‌ಅಧ್ಯಯನ್‌(ಹಿಂದಿ)
(ಸಂ.) ಹಿರೇಮಠ ಬಿ. ಕೆ. ಸಮಗ್ರ ವಚನ ಸಂಪುಟ. ೯.
(ಸಂ.) ಹಿರೇಮಠ ಆರ್‌. ಸಿ. ಪದ್ಮರಾಜ ಪುರಾಣ
(ಸಂ.) ಹಿರೇಮಠ ಆರ್‌. ಸಿ., ಸುಂಕಾಪುರ ಎಂ. ಎಸ್‌. ಭೈರವೇಶ್ವರ ಕಾವ್ಯದ ಕಥಾಮಣಿ ಸೂತ್ರರತ್ನಾಕರ
(ಸಂ.) ಹಿರೇಮಠ ಎ. ಎಸ್‌. ವೀರಶೈವ ದರ್ಶನ
Amladi D. R. Tulajapur Bhavani
Baidyanath Saraswathi Kashi (Myth and Reality of a Classical Cultural Tradition)
(Ed.) Bajracharya, Sarma S. R. & Bakshi S. R. Cultural History of Nepal
Bikram Jit Hasra History of Nepal
Burrow T & Emeneau M. B. A. Dravidian Etymological Dictionary
Chakravarti B. Sens of Himachala Pradesh : their pan – Indian Heritage
Daniel Wright History of Nepal
David N. Gedllner Monk, Household& Tantrik Priest – Newar Buddhism & its hierarachy of ritual.
Dietmar Frank Dreamland Nepal
(Ed.) Diwakar R. R. Bihar through the Ages.
Dor Bahadur Bista People of Nepal
Gopal B. R. The Chalukyas of Kalyan
Grierson G. A. Linguistic Survey of India, IV.
Gurujachar S. `Vijnaneshwara & Contemporary Society’ (Ed) M. S. Nagaraja Rao The Chalukyas of Kalyan.
Haraprasada Sastri Mahamahopadhyaya A Catalogue of Palm – leaf Manuscripts and Selected Paper Manuscripts and Selected Paper Manuscripts.
Jagadish Chandra Sharma Regmi Nepal – India Cultural Relations (ಅಪ್ರಕಟಿತ).
(Ed.) Majumdar R. C. The Struggle for Empire
Mary M. Anderson The Festivals of Nepal
Munni S. D. Foreign Policy of Nepal
Netra B. Thapa A short History of Nepal
Om Prakash Gupta “The Iconoclasts and Varnasi in Mediieval Times’’. (Varanasi through the Ages)
Radha Krishnamurthy Shivatatavaratnakara of Keladi Basavaraja – A Cultural Study
Ramanatha Jha Vidyapathi
Ray H. C. Dynastic History of Northern India. II
(Ed.) Regmi D. R. Inscriptions of Ancient Nepal. III
Rishikesh Raj Regmi Khatmandu, Patan and Bhaktapur
Shankara Bhat D. N. The Koraga Language
Singh K. S. India’s Communities, IV & V.
Singh P. B. Shiva’s Universe in Varanasi
Sinha C.P.N. Mithila under the Karnatas
Sircar D. C. `Kannadigas outside Karnataka down the Ages’ (Ed) G. S. Halappa: Studies in Education and Culture (D.C. Pavate Felicitation Volume)
Sushil Tyagi Indo – Nepalese Relations
Thurston Edgar South Indian Castes and Tribes, III.
Turner R. L. A Comparative Dictionary of Indo – Aryan Languages
Vinayaka Misra Cultural Heritage of Mithila ನೇಪಾಳಿ ಬೃಹತ್‌ಶಬ್ದಕೋಶ (ನೇಪಾಳಿ) ಕನ್ನಡ ನಿಘಂಟು, III & IV Encyclopaedia Britannica (Macropaedia) Imperial Gazetteer of India, XXIV Maharashtra State Gazeteer (Osmanabad District) South Indian Inscriptions, I. The Europa World Year Book (2000), II The Khatamandu Post (26. 9. 02) Uttar Pradesh Gazetteer (Varanasi) ಶಿವಾಜಿ – ಮಲ್ಲಮ್ಮಾಜಿ ಸಮರೋತ್ಸವ (ಮರಾಠಿ)