ಆರು ಬೆಟ್ಟವನೋರ್ವ ಹಾರಬಹುದೆಂತೊಂದೊಡೆ
ಹಾರಬಹುದೇನಬೇಕೆ ಹೊರತು ಆ ಮೂರ್ಖನೊಳು
ಕಲಹ ಬೇಡೆಂದ ಸರ್ವಜ್ಞ

ಹೊಳೆಯ ನೀರನ್ನು ಓರ್ವನೆ ಅಳೆಬಹುದೆಂತು
ಎಂದೊಡೆ ಅಳೆಯ ಬಹುದಿನ ಬೇಕೇ ಹೊರತು
ಆ ಮೂರ್ಖನೊಳು ಕಲಹ ಬೇಡೆಂದ ಸರ್ವಜ್ಞ || ತತ್ತ್ವ ||

ಜ್ಞಾನದಿಂದ ಶಿವ ಧ್ಯಾನವ ಮಾಡಣ್ಣ ನೀ ಕೇಳು
ಜಾಣ ಜ್ಞಾನದಿಂದ ಗುರುಧ್ಯಾನವ ಮಾಡಣ್ಣ || ಜ್ಞಾನ ||

ಗರ್ವಂಕಾರ ಗಲಾಟೆ ಮಾಡುವುದು ಮಾಶ್ವಯ
ಮಾಪಿಯ ಮಾಡು ನಡೆನಡಿಯೊಂದ
ಬಿಗಿಯ ಮಾಡಣ್ಣ ನೀ ಕೇಳು ಜಾಣ || ಜ್ಞಾನ ||

ಕಾಮಕ್ರೋಧವ ಕಡೆಯಕ ಮಾಡು ನಾಡಿ ನೋಡಿ
ನೀನು ವೈಧ್ಯವ ಮಾಡು ಎಂಟೆಂದು
ದಿನಕ್ಕೊಂದು ಸಂತೆಯ ಮಾಡಣ್ಣ ನೀ ಕೇಳು ಜಾಣ || ಜ್ಞಾನ ||

ಹೆತ್ತ ತಾಯಿ ತಂದೆಯ ಪೂಜೆ ಮಾಡು ಅತ್ತೆ ಮಾವಂದಿರ
ಮರ‍್ಯಾದೆ ನೋಡು ನಿನ್ನಲ್ಲಿ
ನೀನೆ ವಿಚಾರ ಮಾಡಣ್ಣ ನೀ ಕೇಳು ಜಾಣ || ಜ್ಞಾನ ||

ವೈರಿ ಕಂಡರೆ ಧೈರ‍್ಯವ ಮಡು ಸರ್ಕಾರವ ಕಂಡರೆ
ಸಲಾಮು ಮಾಡು ಕೋಪ ಬಂದರೆ ನಿಧಾನ
ಮಾಡಣ್ಣ ನೀ ಕೇಳು ಜಾಣ || ಜ್ಞಾನ ||

ಗುರು ಕಂಡರೆ ಭಕ್ತಿಯ ಮಾಡು ಗೋತ್ರವ ನೋಡಿ
ಪೂಜೆಯ ಮಾಡು ಆದಾಯ ನೋಡಿ ವೆಚ್ಚ ಮಾಡಣ್ಣ
ನೀ ಕೇಳು ಜಾಣ || ಜ್ಞಾನ ||

ಹೊತ್ತು ಮುಳುಗಿದಲ್ಲಿ ವಸ್ತಿಯ ಮಾಡು ಧರೆಯೊಳು
ಕಡೆಕೊಳ ಮಾಖಾಮು ಮಾಡು ನಡೆನುಡಿಯೆಂದು
ಬಿಗಿಯ ಮಾಡಣ್ಣ | ನೀ ಕೇಳು ಜಾಣ || ಜ್ಞಾನ ||