ನೀ ಹೇಳೆ ನಾ ಬರೆದೆ,
ನೀ ಹಾಡೆ ನಾನೊರೆದೆ!
ನನ್ನ ತಪ್ಪೇನು?
ನೀ ಕುಣಿಸೆ ನಾ ಕುಣಿದೆ,
ನೀ ನಲಿಸೆ ನಾನಲಿದೆ,
ನನ್ನ ತಪ್ಪೇನು?

ನೀ ಮೊಗವನೊಡ್ಡಿ ಬರೆ
ನಾ ಮುತ್ತನೊತ್ತಿದರೆ
ನನ್ನ ತಪ್ಪೇನು?
ನೀನೆದೆಯ ನೀಡಿಬರೆ
ನಾನೆದೆಯ ನೀಡಿದರೆ
ನನ್ನ ತಪ್ಪೇನು?

೨೧-೦೫-೧೯೩೧