ಎಲ್ಲ ನಶಿಸುವುದು; ವರಕಲೆಯೊಂದೇ
ಚಿರತೆಯ ಸವಿಯುವುದು;
ಸಾಮ್ರಾಜ್ಯಕೆ ಜಡ ಶಾಸನವೊಂದೇ
ಸ್ಮಾರಕವಾಗುವುದು.

ರೈತನ ನೇಗಿಲ ಕುಳ ಮೇಲೆತ್ತುವ
ಬಿಳಿ ತಲೆಯೋಡೊಂದೇ
ಸಾರ್ವಭೌಮನಾ ಸರ್ವೈಶ್ವರ್ಯಕೆ
ಸಾಕ್ಷಿಯಾಗುವುದು.

ಅಮರರು ಕೂಡ ಸಾಯಲೆಬೇಕು;
ಕವಿತಾ ಕಲೆಯೊಂದೇ
ಬಾಳುವುದು;
ಸಾವನೆ ಹೂಳುವುದು.*

೦೪-೦೩-೧೯೩೧


* Gautier ಕವಿಯ ಕವನವೊಂದರ ಭಾಷಾಂತರ.