ನನ್ನನು ನಿನ್ನಯ ಕೊಳಲನು ಮಾಡು,
ಹೇ ಜೀವೇಶನೆ ಬೇಡುವೆನು;
ನಿನ್ನಯ ಸವಿಗೊರಲುಸಿರನು ನೀಡು,
ವಿಧ ವಿಧ ರಾಗವ ಹಾಡುವೆನು.

ನನ್ನೀ ಹೃದಯದ ಶೂನ್ಯವ ತುಂಬಲಿ
ನಿನ್ನುಸಿರೊಲ್ಮೆಯು ಪೂರ್ಣತೆಯಿಂ;
ಬನದುಸಿರೆದೆಯಲಿ ತೊದಲುವ ಬದಲು
ನಿನ್ನುಸಿರಾಡಲಿ ಪರಿಣತೆಯಿಂ!

೧೮-೧೧-೧೯೨೯