ನಿನ್ನ ಕೈಲಿಹ ಕೈದು ನಾನು !
ಕೆಲಸ ಮುಗಿಯಲು ನನ್ನ ತೊರವೆಯೇನು?
ಸಮರದಲಿ ಜಯ ಹೊಂದಿ ಹಿಂತಿರುಗಿದಾ ಕಲಿಯು
ಬಿಲ್ಲು ಬಾಣವ ಮೂಲೆಗೆಸೆಯುವಂತೆ;
ಮೂರ್ತಿಯನು ಕಡೆದು ಮುಗಿಸಿದ ಶಿಲ್ಪಿ ಚಾಣವನು
ಹಳತೆಂದು ದೂರ ತೆಗೆದೊಗೆಯುವಂತೆ!
ಕರುವಿನಿಂದಲು ಸಾಕಿ ಹೊರುವ ಎತ್ತನು ಮಾಡಿ,
ಮುದಿಯಾಗಲದನುಳಿವ ರೈತನಂತೆ;
ಮುದಿತನವದೈತರಲು ತಾನು ಬಳಸಿದ ತನುವ
ಯೌವನವು ತಾನೆ ಹಳಿದುಳಿಯುವಂತೆ!
೦೧-೦೭-೧೯೨೯
Leave A Comment