ಕಾಡಿನ ಮೂಲೆಯ ಕೆರೆಯ ಕೆಸರಿನಲಿ
ಮೂಡಿದ ಹೂವಿನು ನೀ ಕೊಯ್ದೆ;
ಕರುಣದಿ ಕೃಪೆಯಲಿ ಕೊರಳ ಹಾರದಲಿ
ಪ್ರೇಮದಿ ಚುಂಬಿಸಿ ನೀ ನೆಯ್ದೆ!
ಯಾರೂ ನೋಡದೆ ಬಾಡುವ ಹೂವಿದು
ನಾಡಿನ ಕಣ್ಣೀಗೆ ಕಣ್ಣಾಯ್ತು;
ಹೇ ಗುರುದೇವನೆ, ನಿನ್ನ ಪರುಸದಲಿ
ಗೋಡದ ಮಣ್ಣಿದು ಹೊನ್ನಾಯ್ತು!
ಪಂಕಜವಿದು ನಿನ್ನೆದೆಯೊಳೆಯೆ ಸದಾ
ಮಾಸದ ಹಾಸದಿ ನಲಿದಿರಲಿ!
ಸೌಂದರ ಸೌರಭಗಳು ದಿನದಿನದಲಿ
ಹೆಚ್ಚುತ ಅಚ್ಯುತವಾಗಿರಲಿ!
೩೦-೧೧-೧೯೩೨
Leave A Comment