ಕೆಚ್ಚಿರುವುದಾತ್ಮದಲಿ
ಬೆಚ್ಚುತಿದೆ ಮೈ;
ನೆಚ್ಚಿರುವುದೆದೆಯಲ್ಲಿ,
ಕೆಚ್ಚಿಲಿಯು ಕೈ!

ಬೀಳುವೆನು ಕೆಳಗೊಮ್ಮೆ;
ಏಳುವೆನು ಮೇಲೊಮ್ಮೆ;
ಗುರು, ನಿನ್ನ ಕರೆಕರೆದು
ಮರುಕ ತಾಳುವೆನು!

ಧ್ಯೇಯವೋ ಗಗನದಲಿ;
ದೇಹವೋ ಭೂಮಿಯಲಿ;
ಬಲವಿಲ್ಲ ಭಕ್ತಿಯಲಿ,
ಮನದ ಶಕ್ತಿಯಲಿ!

ಕೆಚ್ಚಿರುವುದಾತ್ಮದಲಿ,
ಬೆಚ್ಚುತಿದೆ ಮೈ!
ನೆಚ್ಚಿರುವುದೆದೆಯಲ್ಲಿ,
ಕೆಚ್ಚಿಲಿಯ ಕೈ!

೧೮-೦೧-೧೯೩೦