ಕೊಂದರೂ ಕೊಂದಿಲ್ಲ,
ತಿಂದರೂ ತಿಂದಿಲ್ಲ.
ಮಾಡಿದರು ಮಾಡಿಲ್ಲ,
ನೋಡಿದರು ನೋಡಿಲ್ಲ.
ಸತ್ತರು ಸತ್ತಿಲ್ಲ;
ಬದುಕಿದರು ಬದುಕಿಲ್ಲ.
ಎದ್ದರೂ ಎದ್ದಿಲ್ಲ,
ಬಿದ್ದರೂ ಬಿದ್ದಿಲ್ಲ.
ಕಪ್ಪಗಿದ್ದರು ಬೆಳ್ಪು,
ಬೆಳ್ಳಗಿದ್ದರು ಕಪ್ಪು.
ಹೌದಾದರೂ ಅಲ್ಲ,
ಅಲ್ಲವಾದರು ಹೌದು!
ವೇದಾಂತವಂತೆಯಿದು
ತರ್ಕವಂತೆ!
ಹುಚ್ಚಿಗಿದು ಬೇರೊಂದು
ಹೆಸರಲ್ಲವೇ?

೧೨-೦೪-೧೯೩೦