ಪ್ರಾರಂಭ

ಚೌಕಟ್ಟಿನ ಹೊರಗೆ ವಿಚಾರ ಮಾಡಲು ಈ ಕೆಳಕಂಡ ‘ನಾಲ್ಕು ಚುಕ್ಕೆಗಳ ಸಮಸ್ಯೆ’ ಸಹಾಯ ಮಾಡುತ್ತದೆ. ಅಭ್ಯಾಸ ಮಾಡಿ. ನಾಲ್ಕು ಚುಕ್ಕೆಗಳು ಎರಡು ಸಾಲುಗಳಲ್ಲಿವೆ. ಮೂರು ಸರಳ ರೇಖೆಗಳ ಸಹಾಯದಿಂದ ನಾಲ್ಕು ಚುಕ್ಕೆಗಳಲ್ಲಿ ಹಾಯ್ದು ಹೋಗುವಂತೆ, ಪೆನ್ನನ್ನು ಎತ್ತದೆ ಒಂದು ‘ಬಂಧ ಚಿತ್ರ’ವನ್ನು (closed diagram) ಬರೆಯಬೇಕು. ಇದೇ ನಿಮಗೆ ಸವಾಲು.

ಸಮಸ್ಯೆಯ ಪರಿಹಾರವನ್ನು ಹೇಗೆ ಮಾಡಲಾಯಿತು?

ಈ ಸಮಸ್ಯೆಯನ್ನು ನೀವು ಹೇಗೆ ಪರಿಹರಿಸಿದಿರಿ ಎಂಬುದನ್ನು ವಿಚಾರಮಾಡಿ. ನೀವು ಇದನ್ನು trial & error ಅಥವಾ ಇನ್ನಾವುದೊ ಪದ್ಧತಿಯಿಂದ ಪರಿಹರಿಸಿದ್ದಿರೊ? ಕೆಳಗೆ ನಿಮ್ಮ ಪ್ರತಿಕ್ರಿಯೆಗಳನ್ನು ಬರೆಯಿರಿ.

ಅಧ್ಯಾಯದ ಪರಿಕಲ್ಪನೆ

ಅಧ್ಯಾಯದ ಪ್ರಯೋಜನಗಳು

 • ಸೃಜನಶೀಲತೆಯ ಪರಿಕಲ್ಪನೆಯನ್ನು ವಿವರಿಸುವುದು.
 • ಘಟನೆ ಮತ್ತು ಪ್ರಕ್ರಿಯೆಯ ವ್ಯತ್ಯಾಸವನ್ನು ತಿಳಿಯುವುದು.
 • ಸೃಜನಶೀಲ ವ್ಯಕ್ತಿಯ ವಿಶೇಷ ಗುಣಗಳ ಪ್ರಶಂಸೆ.
 • ಸೃಜನಶೀಲತೆಯ ಪ್ರತಿಬಂಧಕಗಳನ್ನು ಮತ್ತು ಅವುಗಳ ಪರಿಹಾರ ಮಾರ್ಗಗಳನ್ನು ಕಂಡುಕೊಳ್ಳುವುದು.
 • ಸೃಜನಶೀಲತೆಯ ಪ್ರಚೋದನೆಗೆ ಹಂತಗಳ ಅನುಸರಣೆ.

ಪೀಠಿಕೆ

ವಿಮಾನದ ಆವಿಷ್ಕಾರ

ನಾನು ೧೯೦೧ರಲ್ಲಿ ನನ್ನ ತಮ್ಮ ಓರ್ವಿಲ್ಲೆಗೆ, ಮಾನವ ಇನ್ನು ಐವತ್ತು ವರ್ಷದವರೆಗೂ ಹಾರಲಾರ ಎಂದು ಹೇಳಿದ್ದು ಒಪ್ಪಿಕೊಳ್ಳುತ್ತೇನೆ.” Wilburt Wright, U.S. Aviation Pioneer, 1908

ಒಬ್ಬ ಪಾದ್ರಿ ನಂಬಿದ್ದ- ‘ಮಾನವ ಹಾರಲಾರ, ಕೇವಲ ದೇವದೂತರು ಮಾತ್ರ ಹಾರಬಲ್ಲರು’ ಎಂದು.

ಆದರೆ ಆರು ವರ್ಷಗಳಲ್ಲಿ, ಬೈಬಲ್‌ನ ಈ ವಿಚಾರವನ್ನು ಆತನ ಇಬ್ಬರು ಮಕ್ಕಳು ಅಲ್ಲಗಳೆದರು. ಅವರೇ ಓರ್‌ವಿಲ್ಲೆ ರೈಟ್(೧೮೭೧-೧೯೪೮) ಮತ್ತು ವಿಲ್‌ಬರ್ಟ್ ರೈಟ್ (೧೮೬೭-೧೯೧೨) ಈ ನಂಬಿಕೆಯನ್ನೇ ಬದಲಾಯಿಸಿದರು. ೨೦ನೇ ಶತಮಾನದ ಒಂದು ಬಹು ದೊಡ್ಡದಾದ ಆವಿಷ್ಕಾರ ‘ವಿಮಾನ’, ನಮ್ಮ ಜೀವನಕ್ಕೆ ಒಂದು ಹೊಸ ಆಯಾಮವನ್ನು ನೀಡಿದೆ. ಓರ್‌ವಿಲ್ಲೆ ರೈಟ್‌ರು ತಮ್ಮ ದಿನಚರಿಯಲ್ಲಿ ದಾಖಲಿಸಿರುವಂತೆ, ಅವರು ಡಿಸೆಂಬರ್ ೧೯೦೩ರಲ್ಲಿ ತಮ್ಮ ಯಶಸ್ವಿ ಹಾರಾಟಕ್ಕಿಂತ ಒಂಭತ್ತು ತಿಂಗಳು ಮುಂಚೆ “ಹಾರಾಡುವ ಯಂತ್ರ”ಕ್ಕೆ ಒಂದು ಪೇಟೆಂಟ್ ಅರ್ಜಿಗಾಗಿ ವಿನಂತಿಸಿದರು. ಈ ಪುಟ್ಟ ವಿಮಾನ ೧೦ ಅಡಿ ಎತ್ತರದಲ್ಲಿ, ೧೨೦ ಅಡಿ ದೂರಕ್ಕೆ ಪ್ರಯಾಣಿಸಿ, ಹಾರಾಟ ಪ್ರಾರಂಭಿಸಿದ ೧೨ ಸೆಕೆಂಡ್‌ನ ನಂತರ ಕೆಳಗಿಳಿಯಿತು.

ಸೃಜನಶೀಲತೆಯನ್ನು ಅರ್ಥ ಮಾಡಿಕೊಳ್ಳುವುದು.

ನೀವು ಇದುವರೆಗೂ ಕಂಡಿರುವ, ಕೇಳಿರುವ ಮತ್ತು ಭೇಟಿಯಾಗಿರುವ ಅತ್ಯಂತ ಸೃಜನಶೀಲ ವ್ಯಕ್ತಿಯನ್ನು ಹೆಸರಿಸಿ.

ಈ ಪ್ರಪಂಚದಲ್ಲಿ ಅತ್ಯಂತ ಸೃಜನಶೀಲ ವ್ಯಕ್ತಿ ‘ನೀವೇ’. ಹೌದು, ಈ ಪ್ರಪಂಚದಲ್ಲಿ ಹುಟ್ಟಿದ ನಾವೆಲ್ಲರೂ ಅತ್ಯಂತ ಸೃಜನಶೀಲರು. ಒಂದೇ ರೀತಿ ಕಾಣುವ ಅವಳಿ ಮಕ್ಕಳಲ್ಲೂ ಕೂಡ ಬೌದ್ಧಿಕ ಮಟ್ಟ ಒಂದೇ ಆಗಿರುವುದಿಲ್ಲ.

ಸೃಜನಶೀಲತೆ ಎಂದರೇನು?

ಜನರು ಸೃಜನಶೀಲತೆಯನ್ನು ವಿಭಿನ್ನ ರೀತಿಯಲ್ಲಿ ವ್ಯಾಖ್ಯಾನಿಸಿದ್ದಾರೆ. ಅವರೆಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಸರಿಯೇ! ಬಹಳ ಜನ ತಿಳಿದಿದ್ದಾರೆ- ಸೃಜನಶೀಲರಾಗಿರಲು ‘ಏನನ್ನಾದರೂ ಸೃಷ್ಟಿಸಬೇಕು’ ಎಂದು. ‘ಸೃಜನಶೀಲತೆ’, ಮತ್ತು ‘ಸೃಷ್ಟಿ’, ‘ಸೃಷ್ಟಿಸುವುದು’ ಎಂಬ ಮೂಲ ಪದದಿಂದಲೇ ಬಂದಿದ್ದರೂ, ಪ್ರಾಮಾಣಿಕವಾಗಿ ಹೇಳುವುದಾದರೆ, ಸೃಜನಶೀಲತೆಯೆಂದರೆ ಏನನ್ನಾದರೂ ‘ಸೃಷ್ಟಿಸುವುದು’ ಎಂದೇ ಅಲ್ಲ.

ವಿಶ್ವವು ಒಬ್ಬ ಬುದ್ಧ, ಒಬ್ಬ ಐನ್‌ಸ್ಟೀನ್, ಒಬ್ಬ ಸಚಿನ್ ತೆಂಡೂಲಕರ್, ಒಬ್ಬ ಪಿಕಾಸೊಗಳನ್ನು ನೋಡಿದೆ. ಅವರನ್ನು ನಾವು ‘ಸೃಜನಶೀಲ ವ್ಯಕ್ತಿಗಳು’ ಎಂದು ಗುರುತಿಸುತ್ತೇವೆ.

ಸೃಜನಶೀಲತೆಯೆಂದರೆ ತನ್ನ ಕೆಲಸದಲ್ಲಿ ಗುಣಮಟ್ಟವನ್ನು ತರುವುದು ಎಂದೂ ಆಗಬಹುದು. ಎಲ್ಲರೂ ಹಾಡಬಲ್ಲರು, ಆದರೆ ಕೆಲವರು ಮಾತ್ರ ಅಸಾಮಾನ್ಯ ಹಾಡುಗಾರರಾಗುತ್ತಾರೆ; ಎಲ್ಲರೂ ಕ್ರಿಕೆಟ್ ಆಡುತ್ತಾರೆ, ಆದರೆ ಕೆಲವರನ್ನು ಮಾತ್ರ ‘ಅನನ್ಯ ಸೃಜನಶೀಲ ಕ್ರಿಕೆಟಿಗರು’ ಎಂದು ಗುರುತಿಗೆ ಬರುತ್ತಾರೆ. ಎಲ್ಲರೂ ನೃತ್ಯ ಮಾಡಬಲ್ಲರು, ಆದರೆ ಕೆಲವರು ಮಾತ್ರ ಅಸಾಧಾರಣ ನೃತ್ಯಗಾರರೆನಿಸುತ್ತಾರೆ.                                                                                           

ಶತಮಾನಗಳಿಂದ ಜನರು, ತಮ್ಮ ಸುತ್ತಲ ವಸ್ತುಗಳು ತಮ್ಮ ತಲೆ ಮೇಲೆ ಬೀಳುವುದನ್ನು ನೋಡಿದ್ದರು. ಆದರೆ ಇದನ್ನು ವೈಜ್ಞಾನಿಕವಾಗಿ ವೀಕ್ಷಿಸಿದವನು ನ್ಯೂಟನ್ ಮಾತ್ರ. ಅವನ ವೀಕ್ಷಣೆ ಸಿದ್ಧಾಂತವಾಗಿ ಪರಿವರ್ತನೆಯಾಯಿತು. ಇವರೆಲ್ಲರನ್ನು ಉಳಿದವರಿಂದ ಬೇರ್ಪಡಿಸುವ ವಿಶೇಷವೇನು? ಅದು ಅವರ ಗುಣಮಟ್ಟವೇ ಅಲ್ಲವೆ? ಬಹಳ ಜನ ಒಂದೇ ಕೆಲಸವನ್ನು ಮಾಡುತ್ತಿದ್ದರೂ, ಕೆಲವರ ಚಿಂತನೆಯ ಧಾಟಿ ಬೇರೆ. ಅವರು ಕೆಲಸದ ಗುಣಮಟ್ಟವನ್ನೇ ಬದಲಾಯಿಸುತ್ತಾರೆ. ನೀವು ಸೃಜನಶೀಲರಾಗಲು ದೊಡ್ಡ ಕಾರ್ಯವನ್ನೇನೂ ಮಾಡಬೇಕೆಂದಿಲ್ಲ.

ಮಾತಾಡುವದರಲ್ಲಿ, ನಡಿಗೆಯಲ್ಲಿ, ವಿಚಾರಿಸುವಾಗ, ಬರೆಯುವಾಗ, ಉಡುಪು ಧರಿಸುವಾಗ, ಅಡುಗೆ ಮಾಡುವಾಗ, ನೆಲ ಒರೆಸುವಾಗ, ಅಥವಾ ಪಾತ್ರೆ ತೊಳೆಯುವಾಗ ಮತ್ತು ನೀವು ಏನೂ ಮಾಡದೇ ಸುಮ್ಮನೆ ಇರುವಾಗಲೂ ಕೂಡ ನೀವು ಸೃಜನಶೀಲರಾಗಿರಬಹುದು. ಗೌತಮ ಬುದ್ಧನ ಧ್ಯಾನಮಗ್ನ ಭಂಗಿಯನ್ನು ಕಲ್ಪಿಸಿಕೊಳ್ಳಿ, ಆತ ಏನನ್ನೂ ಮಾಡುತ್ತಿಲ್ಲ, ಆದರೆ ವಿಶ್ವವು ಕಂಡಿರುವ ಅತ್ಯಂತ ಶ್ರೇಷ್ಠ ಸೃಜನಶೀಲ ವ್ಯಕ್ತಿಗಳಲ್ಲಿ ಆತ ಒಬ್ಬ.

ಅಂದರೆ, ನೀವು ಏನಾದರೂ ಮಾಡುತ್ತಿರುವುದರಲ್ಲಿ ಗುಣಮಟ್ಟವನ್ನು ತಂದರೂ ಕೂಡ, ನೀವು ಸೃಜನಶೀಲರು ಎಂದರ್ಥ.

ಏನನ್ನಾದರೂ ವಿಭಿನ್ನ ರೀತಿಯಲ್ಲಿ ಮಾಡುವ ವಿಧಾನವನ್ನು ಗುರುತಿಸುವ ಸಾಮರ್ಥ್ಯವೇ ಸೃಜನಶೀಲತೆ. ನೀವು ಒಂದು ಕೆಲಸವನ್ನು ಒಂದೇ ತರಹ ಬಹಳ ಕಾಲದವರೆಗೂ ಮಾಡುತ್ತಿದ್ದರೆ, ಸ್ವಲ್ಪ ನಿಲ್ಲಿಸಿ, ‘ಅದೇ ಕೆಲಸವನ್ನು ಬೇರೊಂದು ರೀತಿಯಲ್ಲಿ ಮಾಡಲು ಸಾಧ್ಯವೇ?’ ಎಂದು ವಿಚಾರ ಮಾಡಿ. ನಿಮ್ಮ ಮನಸ್ಸಿಗೆ ವಿಚಾರ ಮಾಡಲು ಅವಕಾಶ ಕೊಟ್ಟಾಗ ಹಾಗೂ ಹಿಂದೆ ಇದ್ದ ಅನೇಕ ಆಯ್ಕೆಗಳ ಬಗ್ಗೆ ವಿಚಾರ ಮಾಡಿದಾಗ ನಿಮಗೆ ಲಭ್ಯವಿರುವ ಸಾಧ್ಯತೆಗಳ ಬಗ್ಗೆ ಹಾಗೂ ನಿಮ್ಮ ಗಮನಕ್ಕೆ ಬಾರದೇ ಹೋದ ಎಷ್ಟೋ ಉಪಾಯಗಳು ನಿಮ್ಮ ಗಮನಕ್ಕೆ ಬಂದು ನಿಮಗೆ ಆಶ್ಚರ್ಯವೆನಿಸುತ್ತದೆ!

ಪ್ರಸಂಗಾಧ್ಯಯನ (case study) ಹೊಲಿಗೆ ಯಂತ್ರದ ಆವಿಷ್ಕಾರ

೧೯ನೇ ಶತಮಾನದ ಮಧ್ಯಕಾಲದಲ್ಲಿ, ಎಲ್ಲರಂತೆ, ಇಲಿಯಾಸ್ ಹೋವ್, ಲೊಕ್ ಸ್ಟಿಚ್ ಹೊಲಿಗೆ ಯಂತ್ರವನ್ನು ಮಾಡಲು ಒಂದು ಮಾರ್ಗವನ್ನು ಹುಡುಕಲು ಪ್ರಯತ್ನಿಸುತ್ತಿದ್ದ. ‘ಸೂಜಿಗೆ ದಾರವನ್ನು ಹೇಗೆ ಹಾಕುವುದು?’ ಎನ್ನುವುದನ್ನೇ ವಿಚಾರ ಮಾಡುತ್ತ ಅದಕ್ಕೇ ಬದ್ಧನಾಗಿದ್ದ. ೧೮೪೪ರಲ್ಲಿ ಅವನಿಗೊಂದು ಕನಸಾಯಿತು. ಆ ಕನಸು ಹೀಗಿತ್ತು- ‘ಕಾಡುಜನರ ತಂಡವೊಂದು ತನ್ನನ್ನು ಬಂಧಿಸಿ “ನೀನು ಈ ಯಂತ್ರವನ್ನು ಕಂಡು ಹಿಡಿಯಲಿಲ್ಲದಿದ್ದರೆ ನಿನ್ನನ್ನು ಕೊಲ್ಲುತ್ತೇವೆ” ಎಂದು ಹೆದರಿಸಿದರು. ಈ ಕಪ್ಪು ಚರ್ಮದ, ಬಣ್ಣ ಹಚ್ಚಿದ ಯೋಧರು ಅವನನ್ನು ಸುತ್ತುವರಿದು, ಮರಣ ದಂಡನೆ ನೀಡುವ ಸ್ಥಳಕ್ಕೆ ಕರೆದುಕೊಂಡು ಹೋಗಿ ಬೆದರಿಸಿದರು. ಈತ ಭಯದಿಂದ ನಡುಗುತ್ತಿರುವಾಗ ಅವರ ಕೈಯಲ್ಲಿರುವ ಝಳಪಿಸುವ ಶೂಲದ ಶಿರಭಾಗದಲ್ಲಿ ಕಣ್ಣಿನಾಕಾರದ ರಂದ್ರಗಳನ್ನು ನೋಡಿದ. ಈತನಿಗೆ ಥಟ್ಟನೆ ಹೊಸ ಉಪಾಯ ಹೊಳೆಯಿತು! ಸಾಂಪ್ರದಾಯಿಕ ಸೂಜಿಗಳಂತೆ, ‘ಹೊಲಿಗೆ ಯಂತ್ರದ ಸೂಜಿಗೆ ರಂದ್ರಗಳು ಹಿಂಭಾಗದಲ್ಲಿರದೆ ಮುಂಭಾಗದಲ್ಲಿದ್ದರೆ ಸರಿ’ ಎಂದು! ಆಶ್ಚರ್ಯ! ಈತ ಎದ್ದು, ಕಣ್ಣಿನ ಆಕಾರದ ಸೂಜಿಯ ಮೊನೆಯ ಮಾದರಿಯನ್ನು ಮಾಡಿದ. ಪ್ರಥಮ ಹೊಲಿಗೆ ಯಂತ್ರದ ಸ್ವಾಮ್ಯ (ಪೇಟೆಂಟ್) ಪತ್ರ ಪಡೆಯಲು ಈತನ ವಿಚಿತ್ರ ಕನಸು ಸಹಾಯ ಮಾಡಿತು!

ಹೀಗೆ ಸೃಜನಶೀಲತೆ ಎಂದರೆ ವಸ್ತುಗಳನ್ನು ವಿಭಿನ್ನ ದೃಷ್ಟಿಕೋನದಿಂದ ನೋಡುವ ಸಾಮರ್ಥ್ಯವೇ ಆಗಿದೆ.

ಸಂಗಾಧ್ಯಯನ– ‘Post-it notes’ ಆವಿಷ್ಕಾರದ ಕಥೆ

ಒಬ್ಬ 3M ಸಂಸ್ಥೆಯ ವಿಜ್ಞಾನಿ ಒಂದು ತಾತ್ಕಾಲಿಕ ಅಂಟನ್ನು ಆವಿಷ್ಕರಿಸಿದ.

ಒಬ್ಬ 3M ಉದ್ಯೋಗಿ ಆರ್ಟಫ್ರೈ ಎಂಬುವವನಿಗೆ ತನ್ನ ಹಾಡಿನ ಪುಸ್ತಕದಿಂದ ಪುಸ್ತಕದ ಪುಟ ಸೂಚಿ ಆಗಾಗ ಬೀಳುತ್ತಿರುವುದನ್ನು ಕಂಡು ಬೇಸರವಾಗುತ್ತಿತ್ತು. ಆತ ‘ತಾತ್ಕಾಲಿಕವಾದರೂ ಸ್ಥಿರವಾದ’ ಅಂಟಿನ ಪುಟ ಸೂಚಿಗಳ ಕುರಿತಾಗಿ ಆಲೋಚಿಸುತ್ತಿದ್ದ.

3M ಸಂಸ್ಥೆಯಲ್ಲಿ ಒಂದು ಪದ್ಧತಿ ಇತ್ತು. ವಿಜ್ಞಾನಿಗಳು ೧೨% ಅಷ್ಟು ಸಮಯವನ್ನು ತಮ್ಮ ಆಯ್ಕೆಯ ವಿಷಯದ ಕುರಿತಾಗಿ ಯೋಜನಾ ಕಾರ್ಯಗಳನ್ನು ಮಾಡಲು ಮುಕ್ತ ಅವಕಾಶವಿತ್ತು. ಫ್ರೈರವರು ಈ ಅವಕಾಶವನ್ನು ಸದುಪಯೋಗಿಸಿಕೊಂಡ. ತನ್ನ ಉಪಾಯವನ್ನು ಬಳಸಿ ಒಬ್ಬನೇ ಶ್ರಮಿಸಿ ಸಫಲನೂ ಆದ. ಇದನ್ನು ತಕ್ಷಣವೇ ಒಂದು ಕಪಾಟಿನ ಮೇಲೆ ಹಾಕಿ ‘ಅಂಟದ ಅಂಟು ಯಾರಿಗೆ ಬೇಕು?” ಎಂದು ಬರೆದು ಜಾಹಿರಾತು ಮಾಡಿದ. ಮೊದಮೊದಲು ಉಚಿತ ಸ್ಯಾಂಪಲ್‌ಗಳನ್ನು ಕೊಟ್ಟ, ಬರಬರುತ್ತ ಈ ವಸ್ತುವಿಗೆ ಬೇಡಿಕೆ ಹೆಚ್ಚಿತು. ಬಳಿಕ 3M ಸಂಸ್ಥೆಯ ವಾಣಿಜ್ಯ ಕಚೇರಿಯ ವಿತರಣಾ ವಿಭಾಗದ ಬೆಂಬಲವೂ ಒದಗಿತು.

Post-it notes ಎನ್ನುವ ಈ ವಸ್ತು ಇಂದು ಅಮೇರಿಕದ ಪಠ್ಯಸಾಮಗ್ರಿಗಳ ಮಾರುಕಟ್ಟೆಯಲ್ಲಿ ಅತಿ ಹೆಚ್ಚಿನ ಮಾರಾಟವಾಗುವ ಸರಕುಗಳ ಪೈಕಿ ೫ನೆಯ ಸ್ಥಾನವನ್ನು ಪಡೆದಿದೆ!

ಸೃಜನಶೀಲತೆಯನ್ನು ಇನ್ನೊಂದು ದೃಷ್ಟಿಯಿಂದ ನೋಡುವುದಾದರೆ, ಒಂದು ನಿರ್ದಿಷ್ಟ ಸಂದರ್ಭಕ್ಕೆ ಸಂಬಂಧಿಸಿದಂತೆಸಾಧ್ಯವೆನಿಸುವ ಎಷ್ಟು ಪರಿಹಾರೋಪಾಯಗಳನ್ನು ಚಿಂತಿಸಬಹುದು ಎನ್ನುವುದೆ ಆಗಿದೆ. ನಿಮ್ಮಲ್ಲಿ ಹಲವು ಉಪಾಯಗಳಿದ್ದಲ್ಲಿ ಹೆಚ್ಚು ಸಮಸ್ಯೆ ಆಗುವುದಿಲ್ಲ. ಏಕೆಂದರೆ ಒಂದು ಕ್ರಮ ವಿಫಲವಾದಲ್ಲಿ ಮತ್ತೊಂದು ಕ್ರಮವನ್ನು ಬಳಸಿ ಮುಂದುವರೆಯಬಹುದು. ಆದರೆ ಒಂದೇ ಉಪಾಯವಿದ್ದು ಅದು ವಿಫಲವಾದಲ್ಲಿ ಭಯಂಕರ ಸಮಸ್ಯೆಯ ಪರಿಸ್ಥಿತಿ ನಿರ್ಮಾಣವಾಗಿ ಅಸಹಾಯಕರಾಗುವ ಅಪಾಯದ ಪರಿಸ್ಥಿತಿ ಏರ್ಪಡುವ ಸಾಧ್ಯತೆಯುಂಟಾಗುತ್ತದೆ.

ಚಟುವಟಿಕೆ:

ಎರಡು ರೇಖೆಗಳನ್ನು ಬಳಸಿ ಒಂದು ತ್ರಿಭುಜವನ್ನು ಬರೆಯಬಲ್ಲಿರಾ?

ಈ ಮೇಲಿನ ಉದಾಹರಣೆಯೊಂದಿಗೆ ಈ ಪರಿಕಲ್ಪನೆಯನ್ನು ಸ್ವಲ್ಪ ವಿಸ್ತರಿಸೋಣ.

(ಹೀಗೆ ಸಭೆಗಳಲ್ಲಿ ಮಾಡಿದಾಗ ಆದ ಪ್ರಯೋಗಗಳ ಫಲಗಳು ಇಂತಿವೆ-)

ಪ್ರಕ್ರಿಯೆ


ಪ್ರಕ್ರಿಯೆ ೨-

ಪ್ರಕ್ರಿಯೆ ೩-

ಈಗ, ನೀವು ಪಲಕದ ಅಂಚನ್ನಾಗಲಿ, ಲೇಖನಿ, ಪೆನ್ಸಿಲ್, ಸ್ಕೇಲ್ ಅಥವಾ ಯಾವುದೆ ಬರೆಯುವ ಸಾಧನವನ್ನು ಬಳಸದೆ, ಒಂದು ತ್ರಿಭುಜವನ್ನು ರಚಿಸಬಲ್ಲಿರೇನು? ಪ್ರಯತ್ನಿಸಿ ನೋಡೋಣ.
ಪ್ರಕ್ರಿಯೆ ೪-

ಈಗ ನೀವು ಫಲಕದ ಅಂಚನ್ನಾಗಲಿ, ಯಾವುದೆ ಬರೆಯುವ ಸಾಧನವನ್ನಾಗಲಿ ಬಳಸದೆ, ಬಾಗಿದ ರೇಖೆಗಳನ್ನೂ ಬಳಸದೆ ಎರಡು ರೇಖೆಗಳೊಂದಿಗೆ ತ್ರಿಭುಜವನ್ನು ರಚಿಸಬಲ್ಲಿರೇನು?
ಪ್ರಕ್ರಿಯೆ ೫-

ಸ್ವಾರಸ್ಯವೇನೆಂದರೆ ಇಲ್ಲಿ ಹೇಳಿರುವುದು- ಎರಡು ಸರಳ ‘ರೇಖೆಗಳೊಂದಿಗೆ’ ತ್ರಿಭುಜವನ್ನು ರಚಿಸಬೇಕು, ಎರಡು ಸರಳ ‘ರೇಖೆಗಳ’ ತ್ರಿಭುಜವನ್ನಲ್ಲ! ಈಗ ನೀವು ಹತ್ತು ಇಪ್ಪತ್ತು, ನೂರು ಸರಳ ರೇಖೆಗಳೊಂದಿಗೆ ಒಂದು ತ್ರಿಭುಜವನ್ನು ರಚಿಸುವ ಸೃಜನಶಿಲತೆಯನ್ನು ಪಡೆದಿರುವಿರಿ ಅಲ್ಲವೆ?!

ಎರಡು ಸರಳ ರೇಖೆಗಳನ್ನು ಬಳಸಿ ತ್ರಿಭುಜವನ್ನು ರಚಿಸುವ ಬಗ್ಗೆ ನಾವೇಕೆ ವಿಚಾರ ಮಾಡಲಿಲ್ಲ ಎಂಬುದನ್ನು ಆಲೋಚಿಸೋಣ. ‘ತ್ರಿ’ ಎಂದರೆ ಮೂರು, ಹಾಗಾಗಿ ಮೂರು ರೇಖೆಗಳಿಂದ ಸುತ್ತುವರೆಯಲ್ಪಟ್ಟ ವಿಸ್ತೀರ್ಣಕ್ಕೆ ‘ತ್ರಿಭುಜ’ ಎಂದು ಹೆಸರು ಎಂದು ರೇಖಾ-ಗಣಿತ ಶಿಕ್ಷಕರು ನಮಗೆಲ್ಲ ಕಲಿಸಿದ್ದಾರಷ್ಟೆ? ಇದು ಮನಸ್ಸಿನಲ್ಲಿ ಆಳವಾಗಿ ನಾಟಿದ್ದು ನಮಗೆ ಬೇರಾವ ಉತ್ತರಗಳೂ ಹೊಳೆಯುವುದೇ ಇಲ್ಲ. ವಸ್ತುತಃ ಅವರಿಗೆ ಬೇರೆ ಆಯ್ಕೆಗಳಿರಲಿಲ್ಲ ಎನ್ನಿ. ಒಂದು ವಿಷಯಕ್ಕೆ ಅನೇಕ ಆಯ್ಕೆಗಳನ್ನು ಸೃಷ್ಟಿಸುವುದೇ ಸೃಜನಶೀಲತೆ. ಆಯ್ಕೆಗಳು ಹೆಚ್ಚಾಗಿ ಇದ್ದಷ್ಟೂ ಯಶಸ್ಸಿನ ಅವಕಾಶಗಳೂ ಹೆಚ್ಚು.

ಇಂದಿನ ಸಂಕೀರ್ಣ ಪ್ರಪಂಚದಲ್ಲಿ, ನಾವು ನಮ್ಮ ಸೃಜನಶೀಲ ಬೇಡಿಕೆಗಳನ್ನು ಪ್ರಾರಂಭಿಕ ಜೀವನದಲ್ಲಿಯೇ ಸೀಮಿತಗೊಳಿಸಿ “ಬಹಳ ಶ್ರಮ ಪಡಬೇಡಿ, ನೀವು ಹುಡುಕಿ ಪಡೆಯುವ ಉಪಾಯಕ್ಕಿಂತ ಉತ್ತಮವಾದುದು ನಮ್ಮಲ್ಲಿ ಈಗಾಗಲೇ ಇದೆ” ಎಂದು ಹೇಳುತ್ತೇವೆ.

ಎರಡು ರಸ್ತೆಗಳು ಕಾಡಿನೊಳಕ್ಕೆ ಹೋದವುನಾನು ಈಗಾಗಲೆ ಕಡಿಮೆ ಜನರು ಪಯಣಿಸಿದ ರಸ್ತೆಯನ್ನೇ ಆಯ್ದುಕೊಂಡೆ. ಅದೇ ದೊಡ್ಡ ವ್ಯತ್ಯಾಸಕ್ಕೆ ಕಾರಣ!- ರಾಬರ್ಟ್ ಫ್ರಾಸ್ಟ್

ಸೃಜನಶೀಲತೆಗೆ ಪ್ರತಿಬಂಧಕಗಳು

೩೫ ವರ್ಷದ ವ್ಯಕ್ತಿಯೊಬ್ಬ ಅಪ್ರಸ್ತುತನೆನಿಸಲು ಹಾಗೂ ೭೦ ವರ್ಷವಾದರೂ ಮುಂಚೂಣಿಯಲ್ಲಿರುವ ವ್ಯಕ್ತಿಗೂ ವ್ಯತ್ಯಾಸವಿರುವುದು ಅವರವರದೄಷ್ಟಿಕೋನವನ್ನು ಪರಿವರ್ತಿಸಿಕೊಳ್ಳಬಲ್ಲ ಸಾಮರ್ಥ್ಯದಲ್ಲಿಸಿ ಕೆಟರಿಂಗ್.

ನಾವೆಲ್ಲರೂ ಸೃಜನಶೀಲರು ಎಂದು ಒಪ್ಪಿಕೊಂಡರೂ ನಾವು ದಿನ ನಿತ್ಯದ ಕಾರ್ಯಗಳಲ್ಲಿ ಸತತವಾಗಿ ಸೃಜನಶೀಲತೆಯನ್ನು ಏಕೆ ಪ್ರದರ್ಶಿಸುತ್ತಿಲ್ಲ ಎಂಬ ಪ್ರಶ್ನೆ ಏಳುತ್ತದೆ. ನಮ್ಮ ಸ್ವಾಭಾವಿಕ ಸೃಜನಶೀಲತೆಯನ್ನು ತಡೆ ಹಿಡಿಯುವ ಪ್ರತಿಬಂಧಕಗಳಾದರೂ ಯಾವುವು?

ನಮ್ಮಲ್ಲಿರುವ ಸಹಜ ಪ್ರತಿಭೆಯ ಅಭಿವ್ಯಕ್ತಿಯಲ್ಲಿ ಬಹಳ ಪ್ರತಿಬಂಧಕಗಳು ಇವೆ. ಅವುಗಳಲ್ಲಿ ಮುಖ್ಯವಾದವುಗಳೆಂದರೆ

೧. ಭಾವನಾತ್ಮಕ ಪ್ರತಿಬಂಧಕಗಳು.
೨. ಗ್ರಹಿಕೆಯಲ್ಲಿನ ಪ್ರತಿಬಂಧಕಗಳು.
೩. ರೂಢಿಗತ ಪ್ರತಿಬಂಧಕಗಳು.
೪. ಸಾಂಸ್ಕೃತಿಕ ಪ್ರತಿಬಂಧಕಗಳು.
೫. ಪರಿಸರ ಸಂಬಂಧೀ ಪ್ರತಿಬಂಧಕಗಳು.
೬. ಬೌದ್ಧಿಕ ಪ್ರತಿಬಂಧಕಗಳು.
೭. ಅಭಿವ್ಯಕ್ತಿಯ ಪ್ರತಿಬಂಧಕಗಳು.

. ಭಾವನಾತ್ಮಕ ಪ್ರತಿಬಂಧಕಗಳು

ನಮ್ಮ ಮನಸ್ಸು ಬಹಳ ವೇಗವಾಗಿ ಪ್ರತಿಬಂಧಕಗಳನ್ನು ನಿರ್ಮಾಣ ಮಾಡಿಕೊಳ್ಳುತ್ತದೆ. ಆದ್ದರಿಂದ ಮುಖ್ಯ ಅಡಚಣೆ ನಮ್ಮ ಮನಸ್ಸಿನದೇ ಆಗಿದೆ.

ಈ ಸನ್ನಿವೇಶವನ್ನು ಕಲ್ಪಿಸಿಕೊಳ್ಳಿ. ನಿಮ್ಮ ಕಾಲೇಜಿನ ಆಡಳಿತ ಮಂಡಳಿ ಮತ್ತು ಪ್ರಾಚಾರ್ಯರು, “ಭಾರತದಲ್ಲಿ ತಂತ್ರಜ್ಞಾನದ ಬಳಕೆ” ಎಂಬ ವಿಷಯದ ಮೇಲೆ ಒಂದು ರಾಷ್ಟ್ರೀಯ ವಿಚಾರಗೋಷ್ಟಿಯನ್ನು ಏರ್ಪಡಿಸಲು ನಿರ್ಧರಿಸಿದ್ದಾರೆ. ಅದನ್ನು ಬಹಳ ದೊಡ್ಡ ಪ್ರಮಾಣದಲ್ಲಿ ಮಾಡುವ ಸಂಕಲ್ಪ ಹೊಂದಿದ್ದಾರೆ. ಅವರು ಭಾರತದಲ್ಲಿಯ ಅನೇಕ ವಿಶ್ವವಿದ್ಯಾಲಯಗಳಿಗೆ ಆಮಂತ್ರಣ ಪತ್ರಿಕೆಯನ್ನು ಕಳಿಸಿದ್ದಾರೆ. ಆಶ್ಚರ್ಯಕರವಾಗಿ ಪ್ರತಿಕ್ರಿಯೆಯೂ ಅದ್ಭುತವಾಗಿದ್ದು ಸುಮಾರು ಹತ್ತುಸಾವಿರ ಪ್ರವೇಶ ಪತ್ರಗಳು ಬಂದಿವೆ. ಪ್ರತಿಕ್ರಿಯೆಯಿಂದ ಪ್ರಭಾವಿತರಾಗಿ ಅವರು ಉದ್ಘಾಟನಾ ಸಮಾರಂಭಕ್ಕೆ ಭಾರತದ ರಾಷ್ಟ್ರಪತಿಯನ್ನು ಆಹ್ವಾನಿಸಲು ನಿಶ್ಚಯಿಸಿದ್ದಾರೆ. ಆ ದಿನವೂ ಬಂದಿದೆ. ಈ ಸಂದರ್ಭದಲ್ಲಿ ನೀವು ಮಾತಾಡಬೇಕಾಗಿದೆ. ಮಾತನಾಡಬೇಕಾದವರ ಸರಣಿಯಲ್ಲಿ ನೀವು ನಾಲ್ಕನೆಯವರು. ಆ ಸನ್ನಿವೇಶವನ್ನು ಭಾವಿಸಿ. ದೇಶ ವಿದೇಶಗಳ ಗಣ್ಯವ್ಯಕ್ತಿಗಳೆಲ್ಲ ಮೊದಲ ೨೫ ಸಾಲುಗಳಲ್ಲಿ ಕುಳಿತ್ತಿದ್ದಾರೆ. ಅಂತರ್‌ರಾಷ್ಟ್ರೀಯ ಮತ್ತು ರಾಷ್ಟ್ರೀಯ ಮಾಧ್ಯಮದ ವ್ಯಕ್ತಿಗಳು ತಮ್ಮ ತಮ್ಮ ಕ್ಯಾಮರಾ ಹಿಡಿದು ಸಿದ್ಧರಿದ್ದಾರೆ. ನೀವು ಸ್ನೇಹಿತರೊಂದಿಗೆ ಕೊನೆಯ ಸಾಲಿನಲ್ಲಿ ಕುಳಿತಿದ್ದೀರಿ. ತಲೆ ಎತ್ತಿ ನೋಡಿದರೆ, ಅಸಂಖ್ಯಾತ ತಲೆಗಳು ಕಾಣುತ್ತಿವೆ. ಮೊದಲನೆಯವರು ಮಾತನಾಡಲು ವೇದಿಕೆಯನ್ನು ಏರಿದ್ದಾರೆ. ನೀವು ಅವರ ಮಾತನಾಡುತ್ತಿರುವುದನ್ನು ಏಕಾಗ್ರತೆಯಿಂದ ಕೇಳುತ್ತಿದ್ದೀರಾ? ಖಂಡಿತ ಇಲ್ಲ, ನಿಮಗೆ ನಿಮ್ಮ ಭಾಷಣದ ಬಗ್ಗೆ ತುಂಬಾ ಆತಂಕ. ಈಗ ಮೂರನೇ ಭಾಷಣಕಾರರು ತಮ್ಮ ಭಾಷಣ ಮುಗಿಸುವ ಹಂತದಲ್ಲಿದ್ದಾರೆ. ನಿಮ್ಮೊಳಗೆ ಏನಾಗುತ್ತಿದೆ? ಆತಂಕ ಹೆಚ್ಚಾಗುತ್ತಿದೆ, ಕಾಲುಗಳು ಸೋತಿವೆ, ಕಂಪಿಸುತ್ತಿವೆ. ನಿಮ್ಮ ಹೆಸರನ್ನು ಕರೆಯುವ ಹೊತ್ತಿಗೆ ನಿಮ್ಮ ತುಟಿಗಳೇ ಒಣಗಿ ಹೋಗಿವೆ. ಜೀವನದಲ್ಲಿಯೇ ಪ್ರಥಮ ಬಾರಿಗೆ ನೀವು ನಡೆದು ಬರುತ್ತಿರುವಂತೆ ಭಾಸವಾಗುತ್ತದೆ. ‘ಎಲ್ಲರ ದೃಷ್ಟಿ ನಿಮ್ಮ ಮೇಲೆ ಕೇಂದ್ರೀಕೃತವಾಗಿದೆ’ ಎಂದು ಅನಿಸುವಾಗ ಸಹಜವಾಗಿಯೆ ಆತಂಕವಾಗುವುದಿಲ್ಲವೆ? ಆದರೆ ಸ್ವಾರಸ್ಯವೇನೆಂದರೆ ವಾಸ್ತವವಾಗಿ ಯಾರೂ ಅಷ್ಟಾಗಿ ನಿಮ್ಮನ್ನೇ ನೋಡುತ್ತಿಲ್ಲ. ನಿಮ್ಮಲ್ಲಿನ ಅತಿಯಾದ ಸ್ವಪ್ರಜ್ಞೆಯಿಂದ ಹುಟ್ಟಿದ ಭಾವನಾತ್ಮಕ ಪ್ರತಿಬಂಧಕ ಇದು. ಈ ಅಡಚಣೆಗಳನ್ನು ನಿವಾರಿಸಲು ಪ್ರಯತ್ನಿಸಿ.

ಈ ಚಿತ್ರವನ್ನು ನೋಡಿದಾಗ ನಿಮಲ್ಲಿ ಯಾವ ಭಾವನೆಗಳು ಮೂಡುತ್ತವೆ?

ಇವಳು ದೃತಿಗೆಟ್ಟಂತೆ, ಸುಸ್ತಾಗಿ, ಜೀವನದಲ್ಲಿ ನಿರಾಶಳಾದಂತೆ ಕಾಣುತ್ತಾಳೆ. ಆದರೆ ನಿಮಗೆ ಆಶ್ಚರ್ಯ ಆಗಬಹುದು, ವಾಸ್ತವದಲ್ಲಿ ಈಕೆ ವಿಶ್ರಮಿಸುತ್ತಿದ್ದಾಳೆ. ಅವಳು ಓಟದಲ್ಲಿ ಚಿನ್ನದ ಪದಕ ಪಡೆದ ಪ್ರಸಿದ್ಧ ಓಟಗಾರ್ತಿ ಎಲ್ಲಾ ಜೋನ್ಸ್. ಅವಳು ವಿಶ್ರಮಿಸುತ್ತಿದ್ದಾಗ ಈ ಚಿತ್ರವನ್ನು ತೆಗೆದುಕೊಳ್ಳಲಾಗಿದೆ.

ಈ ಮಾನಸಿಕ ಪ್ರತಿಬಂಧಕಗಳಿಂದ ನವನವೀನ ವಿಚಾರಗಳನ್ನು ಶೋಧಿಸುವ ಸ್ವಾತಂತ್ರ್ಯ ಹಾಗೂ ಸಂದರ್ಭೋಚಿತವಾಗಿ ವಿಚಾರಗಳನ್ನು ಅನ್ವಯ ಮಾಡುವ ಅನುಕೂಲವೂ ಕುಂಟಿತವಾಗುತ್ತದೆ. ಇವು ವಿಚಾರಧಾರೆಯ ಸ್ಪಷ್ಟ ನಿರರ್ಗಳ ಹರಿಯುವಿಕೆಗೆ ಹಾಗೂ ಕಲ್ಪನಾ ಸಾಮರ್ಥ್ಯಕ್ಕೆ ಅಡಚಣೆ ಉಂಟು ಮಾಡುತ್ತವೆ. ಅಷ್ಟೇ ಅಲ್ಲ, ಈ ಭಾವನಾತ್ಮಕ ಪ್ರತಿಬಂಧಕವು ಇತರರೊಂದಿಗೆ ಮಾಡುವ ಸಂವಹನವನ್ನೂ ತಡೆಗಟ್ಟುತ್ತದೆ.

ಕೆಲವು ಭಾವನಾತ್ಮಕ ಪ್ರತಿಬಂಧಕಗಳು

ಸವಾಲುಭರಿತ ಕಾರ್ಯಗಳನ್ನು ಕೈಗೆತ್ತಿಕೊಳ್ಳುವ ಭಯಅಪಾಯಕರ ಕೆಲಸಗಳನ್ನು ಮಾಡುವುದು ಕಷ್ಟವೇ ನಿಜ. ನಾವು ಬಾಲ್ಯದಿಂದಲೇ ಜಾಗರೂಕರಾಗಿರಲು, ವಿಫಲರಾಗದೆ ಇರಲು ಮತ್ತು ಮೂರ್ಖರಾಗದಂತೆ ಎಚ್ಚರವಹಿಸಲು ‘ಪಾಠ’ ಕಲಿತು ಅದನ್ನೇ ಸ್ವಭಾವವನ್ನಾಗಿ ಬೆಳೆಸಿಕೊಂಡಿರುತ್ತೇವೆ. ವಯಸ್ಕರಾಗುವ ಹೊತ್ತಿಗೆ ಇದು ‘ಅಡ್ಡಿಯಾಗಿ’ ನಮ್ಮ ಮನಸ್ಸಿನಲ್ಲಿ ಬಹಳ ಆಳವಾಗಿ ಬೇರೂರಿಬಿಡುತ್ತದೆ.

ಅನಿಶ್ಚಿತತೆಯ ಬಗ್ಗೆ ಅಸಂತೋಷನೀವು ಯಶಸ್ವೀ ಸಮಸ್ಯಾ ಪರಿಹಾರಕರಾಗಬೇಕಾದರೆ, ಕೆಲವು ಗೊಂದಲಮಯ ಸಮಸ್ಯೆಗಳನ್ನು ಎದುರಿಸಲು ಸಿದ್ಧರಿರಬೇಕು. ಸಮಸ್ಯೆಗಳಿಗೆ ನಿಶ್ಚಿತವೂ ಸೂಕ್ತವೂ ಆದ ಪರಿಹಾರಗಳು ಕಾಣದೆ ಇದ್ದಾಗ, ಪರ‍್ಯಾಯ ಪರಿಹಾರಗಳನ್ನು ಕಂಡುಕೊಳ್ಳಬೇಕಾಗುತ್ತದೆ. ಹಾಗಿದ್ದರೂ ಅತ್ಯುತ್ತಮವೆನಿಸುವ ಪರಿಹಾರಗಳೂ ಕೂಡ ವಿವಾದಾಸ್ಪದವಾಗಿರಬಹುದು.

ನಿರ್ಣಯಾತ್ಮಕ ಮನೋಭಾವನೆಈ ಪ್ರತಿಬಂಧಕ ನಕಾರಾತ್ಮಕ ಮನೋಭಾವದಿಂದ ಬರುತ್ತದೆ. ಹೊಸ ವಿಲಕ್ಷಣ ಉಪಾಯವನ್ನು ಸ್ವೀಕರಿಸುವುದಕ್ಕಿಂತ ‘ಕಾರ್ಯವು ಯಾಕೆ ಫಲಿಸುವುದಿಲ್ಲ’ ಎನ್ನುವುದನ್ನು ಪತ್ತೆ ಹಚ್ಚಿ ಹೇಳುವುದೇ ಸುಲಭ! ಆದರೂ, ವಿಚಿತ್ರವೆನಿಸುವ ಉಪಾಯಗಳನ್ನು ಸಂಶೋಧಿಸುತ್ತ ಹೋದಲ್ಲಿ ಅನೇಕ ಸೃಜನಶೀಲ ಪರಿಹಾರಗಳು ಹುಟ್ಟಿಯಾವು. ಆದ್ದರಿಂದ ವಿಲಕ್ಷಣವೆನಿಸುವ ಉಪಾಯಗಳ ಕುರಿತಾಗಿಯೂ ಸಕಾರಾತ್ಮಕ ಭಾವವನ್ನು ತಾಳಿದಲ್ಲಿ ಈ ಪ್ರತಿಬಂಧಕವನ್ನು ಗೆಲ್ಲಬಹುದು.

ಪರಕೀಯಉಪಾಯ ಈ ಹೊಸದಾಗಿ ಬಂದ ವಿಚಾರದಿಂದಾಗಿ ಅದಾಗಲೇ ಪ್ರಚಲಿತವಿರುವ ನಮ್ಮ ಹಳೆಯ ಉಪಾಯ/ವಿಚಾರವು ಮಹತ್ವವನ್ನು ಕಳೆದುಕೊಂಡರೇನು ಗತಿ?’ ಎಂಬ ಭೀತಿಯಿಂದ ಈ ಪ್ರತಿಬಂಧಕ ಉಂಟಾಗುತ್ತದೆ.

ಸವಾಲು ಇಲ್ಲದಿರುವುದು – ಕೆಲವೊಮ್ಮೆ ವಿಚಾರವು/ ಉಪಾಯವು ಸವಾಲು ಎನಿಸದೇ ಅತಿ ಅಲ್ಪವೂ ಅಪ್ರಧಾನವೂ ಎನಿಸಿದಲ್ಲಿ ಅದರಿಂದ ಸಮಯ ವ್ಯರ್ಥ ಎನಿಸುವ ಭಾವ ಮೂಡಬಹುದು. ಇದೊಂದು ಪ್ರತಿಬಂಧಕವೂ ಆಗಬಹುದು.

ಪಕ್ವವಾಗುವವರೆಗೂ ಕಾಯಲು ಅಸಮರ್ಥಸಾಕಷ್ಟು ಸಮಯ ಕಾಯದೆ, ಚಿಂತನ ಮಂಥನ ಮಾಡದೆ, ಬೇರೆ ಉಪಾಯಗಳ ಸಾಧ್ಯತೆಯನ್ನೂ ವಿಚಾರಿಸದೆ ಪರಿಹಾರಕ್ಕಾಗಿ ಆತುರ ಪಡುವ ಭಾವ.

ಉನ್ನತವಾದ ಆತ್ಮ-ಸ್ಥೈರ್ಯ ಮತ್ತು ಆತ್ಮಬಲದಿಂದ ಭಾವನಾತ್ಮಕ ಅಡಚಣೆಗಳನ್ನು ಗೆಲ್ಲಬಹುದು. ಭಯ, ಅಪನಂಬಿಕೆ, ಆತ್ಮರಕ್ಷಣೆ ಮತ್ತು ಬದಲಾವಣೆಯ ಅಸಾಮರ್ಥ್ಯಗಳು ನಮ್ಮ ಸೃಜನಶೀಲತೆಗೆ ಅಡ್ಡಿಗಳಾಗಬಹುದು. ಹಠದ ‘ಬಿಗಿ’ಯಿಲ್ಲದ ಉದಾರ ಹಾಗೂ ಹೊಂದಿಕೊಳ್ಳುವ ಮನೋಭಾವಗಳು ಇರಬೇಕು. ಭಾವನಾತ್ಮಕ ಪ್ರತಿಬಂಧಕಗಳನ್ನು ಹೋಗಲಾಡಿಸಲು ವ್ಯಕ್ತಿಗತ ಕೌಶಲಗಳು ಹಾಗೂ ಬಿಗಿತನದ ನಿಲುವಿಲ್ಲದ ಹೊಂದಾಣಿಕೆಯ ಭಾವ ತುಂಬ ಸಹಾಯಕವಾಗುತ್ತದೆ.

. ಗ್ರಹಿಕೆಯ ಪ್ರತಿಬಂಧಕಗಳು

ಒಂದು ಸಮಸ್ಯೆಯನ್ನು ಸ್ಪಷ್ಟವಾಗಿ ಗ್ರಹಿಸಲು ಅಥವಾ ಅದರ ಕುರಿತಾಗಿ ಸರಿಯಾದ ಮಾಹಿತಿಯನ್ನು ಪಡೆಯುವಲ್ಲಿ ಅನೇಕ ತೊಡಕುಗಳು ಬರಬಹುದು. ಗ್ರಹಿಕೆಯಲ್ಲಿನ ಪ್ರತಿಬಂಧಕಗಳು ಅಂದರೆ – ಅ. ರೂಢಿಬದ್ಧತೆ ಆ. ಕಾಲ್ಪನಿಕ ಸೀಮೆಗಳು ಮತ್ತು ಇ. ಅಗತ್ಯಕ್ಕಿಂತ ಹೆಚ್ಚಿನ ಮಾಹಿತಿ.

. ‘ರೂಢಿಬದ್ಧತೆ – ರೂಢಿಬದ್ಧತೆ ಎನ್ನುವುದು ಒಂದು ವಸ್ತುವಿಗೆ ಒಂದೇ ಉಪಯೋಗ, ಅದರಿಂದ ಇನ್ನಾವ ಬೇರೆ ಪ್ರಯೋಜನವಿಲ್ಲ ಎಂಬ ದೃಢ ನಂಬಿಕೆ. ಅದರ ಹೆಸರನ್ನು ಎತ್ತಿದರೆ ಸಾಕು ಒಂದೇ ಪ್ರಯೋಜನ ಗುರುತಿಗೆ ಬರುತ್ತದೆ. ಪೊರಕೆಯನ್ನು ಕಸ ಗುಡಿಸಲು ಬಳಸುವ ಸಾಧನವೆಂದಷ್ಟೇ ಭಾವಿಸುತ್ತೇವೆ. ಅದನ್ನು ಜೇಡರಬಲೆ ತೆಗೆಯಲು, ಕಾರನ್ನು ತೊಳೆಯಲು, ವ್ಯಾಯಾಮ ಮಾಡಲು, ಬಾಗಿಲನ್ನು ತೆರೆಯಲು ಬಳಸಬಹುದೆಂದು ಭಾವಿಸುವುದೇ ಇಲ್ಲ. ಲಾನ್ ಮೋವರ್ ಯಂತ್ರ ಹೇಗೆ ಆವಿಷ್ಕಾರವಾಯಿತು ಎಂದು ನೋಡೋಣ- ಅದು ತನ್ನ ಬ್ಲೇಡ್‌ಗಳಿಂದ ಹುಲ್ಲನ್ನು ಸಮವಾಗಿ ನುಣುಪಾಗಿ ಕತ್ತರಿಸುತ್ತದೆ.

ಪ್ರಸಂಗಾಧ್ಯಯನಹುಲ್ಲು ಕತ್ತರಿಸುವ ಯಂತ್ರ

ಹುಲ್ಲು ಕತ್ತರಿಸುವ ಯಂತ್ರದ ಆವಿಷ್ಕಾರ ಬಟ್ಟೆ ಮಾಡುವ ಕಾರ್ಖಾನೆಯಲ್ಲಿ ಆಯಿತು ಎಂದರೆ ಹಾಸ್ಯಾಸ್ಪದ ಎನ್ನಿಸಬಹುದಲ್ಲವೆ? ಆದರೆ, ಇದು ನಿಜ! ಇದನ್ನು ಆವಿಷ್ಕರಿಸಿದ ಎಡ್‌ವಿನ್ ಬಡ್ಡಿಂಗ್, ಇಂಗ್ಲೆಂಡಿನ ಬಟ್ಟೆ ಮಾಡುವ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ. ಕಾರ್ಖಾನೆಯಲ್ಲಿ ತಯಾರಿಸಿದ ಬಟ್ಟೆ ಗೋಜುಗೋಜಲಾಗಿ ಇರುತ್ತಿತ್ತು. ಅದನ್ನು ನುಣುಪಾಗಿಸಲು ‘ತಿರುಗುವ ಕತ್ತಿಯಿರುವ ಯಂತ್ರ’ವನ್ನು ಬಳಸಿ ಅದರ ಮೇಲ್ಪದರವನ್ನು ಒಂದೇ ಅಳತೆಯಲ್ಲಿ ಕತ್ತರಿಸಿ ಸಮಪಡಿಸಲಾಗುತ್ತಿತ್ತು. ಬಡ್ಡಿಂಗ್ ತನ್ನ ಮನೆಯಲ್ಲಿ ಒಂದು ಹುಲ್ಲು ಮೈದಾನವನ್ನು ಮಾಡಿದ್ದ. ಹುಲ್ಲನ್ನು ಉದ್ದವೂ ಭಾರವೂ ಆದ ಚಾಕುವಿನಿಂದ ಸಮವಾಗಿ ಕತ್ತರಿಸುವುದು ತುಂಬಾ ಆಯಾಸಕರ ಕೆಲಸ. ಬಟ್ಟೆಯನ್ನು ಕತ್ತರಿಸುವ ಯಂತ್ರದಂತೆಯೇ ಹುಲ್ಲನ್ನು ಸಮನಾಗಿ ಕತ್ತರಿಸಬಹುದಾದ ಯಂತ್ರವನ್ನು ಮಾಡುವ ಉಪಾಯ ಹೊಳೆಯಿತು. ಇದಕ್ಕಾಗಿ ಎರಡು ಗಾಲಿಗಳೂ, ಉದ್ದವಾದ ಬ್ಲೇಡ್‌ಗಳೂ ಇರುವ ಯಂತ್ರವನ್ನು ತಾನೇ ನಿರ್ಮಿಸಿದ್ದ. ಆ ಯಂತ್ರವು ಬಾಗದಂತೆ ಹಿಡಿದು ಮುಂದೆ ತಳ್ಳಲು ಒಂದು ಹಿಡಿಯನ್ನೂ ಅಳವಡಿಸಿದ. ಅದನ್ನೇ ಸ್ವಲ್ಪ ಪರಿಷ್ಕರಿಸಿ ‘ಹುಲ್ಲು ಕತ್ತರಿಸುವ ಯಂತ್ರ’ವನ್ನು ಮಾಡಿ ಬಳಸಲಾರಂಭಿಸಿದ. ಹೀಗೆ ೧೮೩೧ರಲ್ಲಿ ಮೊದಲನೇ ಹುಲ್ಲು ಕತ್ತರಿಸುವ ಯಂತ್ರದ ನಿರ್ಮಾಣವಾಯಿತು.

ಚಟುವಟಿಕೆ– ‘ವರ್ತಮಾನ ಪತ್ರಿಕೆ’ಯಿಂದ ಮಾಹಿತಿಯನ್ನು ಪಡೆಯುತ್ತೇವೆ, ನಿಜ. ಆದರೆ  ಅದನ್ನು ಬೇರೆ ಯಾವ ಯಾವ ರೀತಿಯಲ್ಲಿ  ಬಳಸಬಹುದೆಂದು ಸೃಜನಶೀಲವಾಗಿ ಆಲೋಚಿಸಿ ಬರೆಯಿರಿ.

. ಕಾಲ್ಪನಿಕ ಸೀಮೆಗಳುವಾಸ್ತವದಲ್ಲಿ ಒಂದು ಸಮಸ್ಯೆ ಮತ್ತು ಅದರ ಪರಿಹಾರದ ನಡುವೆ ಇಲ್ಲದ ಸೀಮೆಗಳನ್ನು ಬಿಂಬಿಸುತ್ತೇವೆ. ವಯಸ್ಸಾದಂತೆ, ಹೆಚ್ಚು ಹೆಚ್ಚು ಪೂರ್ವಗ್ರಹಗಳನ್ನು ಹೊಂದುತ್ತೇವೆ. ಈ ಪೂರ್ವಗ್ರಹಗಳು ನಾವು ಈಗಾಗಲೇ ತಿಳಿದಿರುವ ಅಥವಾ ನಂಬಿರುವ ಚೌಕಟ್ಟಿನ ಆಚೆ ವಿಚಾರ ಮಾಡಲು ಬಿಡುವುದಿಲ್ಲ. ಯಾವುದೇ ಪರಿವರ್ತನೆ ಅಥವಾ ಪ್ರಗತಿಯತ್ತ ಸಾಗಲು ಇದು ನಮನ್ನು ಬಿಡುವುದಿಲ್ಲ.

ಚಟುವಟಿಕೆ – ೧

ಮೇಲಿನ ಚಿತ್ರದಲ್ಲಿ ಒಬ್ಬ ಹುಡುಗಿ ಕಾಣಿಸುತ್ತಾಳೋ ಅಥವಾ ಮುದುಕಿ ಕಾಣಿಸುತಾಳೋ? ನಿಮ್ಮ ಅನಿಸಿಕೆಯನ್ನು ಬರೆಯಿರಿ.

 

ಮೇಲಿನ ವಾಕ್ಯವನ್ನು ಓದಿ ಮತ್ತು ನಿಮ್ಮ ಅನಿಸಿಕೆಯನ್ನು ಬರೆಯಿರಿ.

ಚಟುವಟಿಕೆ

ರೋಮಿಯೊ’ ಮತ್ತು ‘ಜ್ಯೂಲಿಯಟ್’, ಬ್ರಿಗೇಡ್ ರಸ್ತೆಯ ಫುಟ್‌ಪಾತ್‌ನ ಮೇಲೆ ಸತ್ತು ಬಿದ್ದಿದ್ದರು. ಆದರೆ ಇದರ ಬಗ್ಗೆ ಯಾರಿಗೂ ಕಾಳಜಿ ಇಲ್ಲ. ಅಕ್ಕಪಕ್ಕ ಕೆಲವು ಗಾಜಿನ ತುಂಡುಗಳು ಹರಡಿವೆ. ಇಬ್ಬರ ದೇಹದ ಮೇಲೆ ಯಾವುದೇ ತರಹದ ಗಾಯದ ಗುರುತುಗಳಿಲ್ಲ. ವಿಷಸೇವನೆಯನ್ನೂ ಮಾಡಿಸಿಲ್ಲ ಅಥವಾ ಉಸಿರುಗಟ್ಟಿಸಿಯೂ ಇಲ್ಲ ಎಂದು ವೈದ್ಯಕೀಯ ವರದಿಗಳು ಸೂಚಿಸುತ್ತಿವೆ. ಹಾಗಾದರೆ ಅವರ ಸಾವಿಗೆ ಕಾರಣವೇನಿರಬಹುದು?

. ಅತಿ ಹೆಚ್ಚಿನ ಮಾಹಿತಿ

ಅತಿ ಹೆಚ್ಚಿನ ಮಾಹಿತಿಯನ್ನು ಪಡೆಯುವ ಪ್ರಯತ್ನವು ಪರ್ಯಾಯೋಪಾಯವನ್ನು ಗುರುತಿಸಲು ಅಡ್ಡಿಯುಂಟು ಮಾಡುತ್ತದೆ.

. ರೂಢಿಯ ಪ್ರತಿಬಂಧಕಗಳು

ನಾವು ನೆನ್ನೆ ಎಲ್ಲಿದ್ದೆವು ಎನ್ನುವುದನ್ನು ನಮ್ಮಹವ್ಯಾಸಗಳು ನಿರ್ಣಯಿಸಿದರೆ, ನಾವು ಅಲ್ಲಿ ಇರುವಂತೆ ಮಾಡುವುದು ನಮ್ಮ ಮನೋಭಾವ – ಕನ್ಪ್ಯೂಶಿಯಸ್

ರೂಢಿಗಳು ಒಳ್ಳೆಯವೇ ಆಗಿದ್ದು ಬೇರೆ ಬೇರೆ ಕೆಲಸಗಳನ್ನು ಮಾಡಲು ಬೇಕಾದ ಮನಃಶಕ್ತಿಯನ್ನು ಸಂಚಯ ಮಾಡುತ್ತವೆ. ಆದರೂ ರೂಢಿಬದ್ಧ ವರ್ತನೆ ಒಂದು ರೀತಿಯ ಕುರುಡುತನಕ್ಕೆ ದಾರಿ ಮಾಡಿಕೊಡುವುದೂ ಉಂಟು. ನಮ್ಮ ಸೃಜನಶೀಲತೆಗೆ ಮುಖ್ಯ ಅಡ್ಡಿಗಳು ಹುಟ್ಟುವುದೇ ನಾವು ಬಹಳ ಕಾಲದಿಂದ ಬೆಳೆಸಿಕೊಂಡು ಬಂದಂತಹ ದೈಹಿಕ, ಮಾನಸಿಕ ರೂಢಿಗಳಿಂದ ಹಾಗೂ ಭಾವಗ್ರಹಣೆಯ ಪರಿಯಿಂದ. ನೂತನ ಅಂತರ್ದೃಷ್ಟಿಗೆ ಆಧಾರವಾಗಬಲ್ಲಂತಹ ಹೊಸ ಉಪಾಯ ಹಾಗೂ ಸಂದರ್ಭಗಳನ್ನು ಈ ಹಳೆಯ ರೂಢಿಗಳು ತಡೆಗಟ್ಟುತ್ತವೆ.

ರೂಢಿಗಳು ಮನೋಭಾವವನ್ನು ಸೃಷ್ಟಿಸುತ್ತವೆ. ಈ ಮನಃಸ್ಥಿತಿಯು ಕೆಲಸದಲ್ಲಿ ಏಕತಾನತೆಯನ್ನು ಸೃಷ್ಟಿಸುತ್ತದೆ. ಕೆಲಸ ಯಾಂತ್ರಿಕವಾಗುತ್ತ ಬಂದಂತೆ ಅದರಲ್ಲಿ ಸಂತೋಷ ಕಡಿಮೆಯಾಗುತ್ತ ಹೋಗುತ್ತದೆ. ಇಂತಹ ರೂಢಿಗತ ಪ್ರತಿಬಂಧಕಗಳು ವ್ಯಕ್ತಿಗಳನ್ನಷ್ಟೇ ಅಲ್ಲ, ಸಂಸ್ಥೆಗಳನ್ನೂ ಪ್ರಭಾವಗೊಳಿಸಿವೆ.

ಈ ರೂಢಿಗಳನ್ನು ಗೆಲ್ಲುವ ಮಾರ್ಗವೆಂದರೆ ಮೊದಲು ನಮ್ಮ ಕೆಲಸ ಯಾಂತ್ರಿಕವೂ ಸಪ್ಪೆಯೂ ಆಸಕ್ತಿಹೀನವೂ ಆಗುತ್ತಿದೆ ಎನ್ನುವುದನ್ನು ಗುರುತಿಸಿಕೊಳ್ಳುವುದು. ಈ ಅತೃಪ್ತಿಯೇ ನೀವು ಪ್ರತಿಬಂಧಕಕ್ಕೆ ಒಳಪಟ್ಟಿದ್ದೀರೆಂಬುದನ್ನು ನಿಮಗೆ ಸೂಚಿಸುತ್ತದೆ. ಆಗ ನಿಮ್ಮ ಕಾರ್ಯವಿಧಾನದ ಕಡೆಗೆ ಗಮನ ಹರಿಯಿಸಿ. ಅದೇ ಕೆಲಸವನ್ನು ಬೇರೆ ಯಾವ ಯಾವ ರೀತಿಯಲ್ಲಿ ಮಾಡಬಹುದು ಎನ್ನುವುದನ್ನು ಆಲೋಚಿಸಿ ಪಟ್ಟಿ ಮಾಡಿ. ಆ ಬಳಿಕ ಸವಾಲೆನಿಸುವ ಹೊಸ ಪರಿಯಲ್ಲಿ ಕೆಲಸವನ್ನು ಮಾಡಲು ಪ್ರಾರಂಭಿಸಿ. ಕಷ್ಟವೆನಿಸಿದರೂ ನಿಮಗದು ಇಷ್ಟವಾಗುತ್ತದೆ. ಪ್ರತಿ ಬಾರಿಯೂ ಹೊಸ ಹೊಸ ರೀತಿಯಲ್ಲಿ ಕೆಲಸವನ್ನು ಮಾಡಲು ಪ್ರಯತ್ನಿಸಿ. ಈ ಪ್ರಯತ್ನಗಳು ನಿಮ್ಮ ಬುದ್ಧಿಯನ್ನು ಶ್ರಮಪಡಿಸಿದರೂ ಹೆಚ್ಚಿನ ತೃಪ್ತಿ ಸಿಗುವುದಂತೂ ಸತ್ಯ.

. ಸಾಂಸ್ಕೃತಿಕ ಪ್ರತಿಬಂಧಕಗಳು

ನಾವು ಯಾವುದೋ ಸಮಾಜ, ಪದ್ಧತಿ ಅಥವಾ ಕುಲ-ಗುಂಪುಗಳಿಗೆ ಸೇರಿದ್ದು ಅದರ ಪ್ರಭಾವದಿಂದ ನಮಗೆ ನಾವೆ ಹಾಕಿಕೊಳ್ಳುವ ನಿರ್ಬಂಧಗಳೇ ಸಾಂಸ್ಕೃತಿಕ ಪ್ರತಿಬಂಧಕಗಳು. ಈ ಸಾಂಸ್ಕೃತಿಕ ಪ್ರತಿಬಂಧಕಗಳಿಂದಾಗಿ ಬೇರೆ ಪಂಗಡ ಗುಂಪುಗಳವರ ದೄಷ್ಟಿಕೋನ ಅಭಿರುಚಿಗಳು ಬೇರೆಯಾಗಿಯೂ ಇರಬಹುದು ಎನ್ನುವುದನ್ನು ಅಂಗೀಕರಿಸುವುದಕ್ಕೆ ಸಿದ್ಧರಾಗಿರುವುದಿಲ್ಲ. ಕೆಲವು ಪ್ರತಿಬಂಧಕಗಳು ಹೀಗಿವೆ-

ನಮ್ಮ ವಿಧಾನವೇ ಸರಿ: ಒಂದು ಕಾರ್ಯವನ್ನು ಮಾಡಲು ಬೇರೆ ವಿಧಾನವು ಇರಬಹುದು ಎನ್ನುವುದನ್ನು ಒಪ್ಪುವುದಿಲ್ಲ.

ನಾವು ಆ ರೀತಿಯಲ್ಲಿ ಮಾತನಾಡುವುದಾಗಲಿ ಆಲೋಚಿಸುವುದಾಗಲಿ ಸಾಧ್ಯವೇ ಇಲ್ಲ: ಇದು ನಮ್ಮ ಪೂರ್ವಗ್ರಹಗಳನ್ನು ಸೂಚಿಸುತ್ತದೆ. ಉತ್ತಮ ಪರಿಹಾರಗಳನ್ನು ಪಡೆಯಬೇಕಾದರೆ ಒಪ್ಪಾಲಾಗದ್ದನ್ನೂ ಒಪ್ಪಬೇಕಾದೀತು, ಊಹಿಸಲಾಗದ್ದನ್ನೂ ಊಹಿಸಬೇಕಾದೀತು ಎನ್ನುವುದನ್ನು ಮರೆಯಬಾರದು.

ಪಾರಿಸರಿಕ ಪ್ರತಿಬಂಧಕಗಳು: ನಮ್ಮ ಪರಿಸರದಲ್ಲಿನ ನೈಜ, ಕಾಲ್ಪನಿಕ ಹಾಗೂ ನಿರೀಕ್ಷಿತ ಚಾಂಚಲ್ಯಗಳಿಂದ ಈ ಪ್ರತಿಬಂಧಕ ಉಂಟಾಗುತ್ತದೆ. ಸಂತೋಷದಾಯಕವೂ ಅನುಕೂಲಕರವೂ ಆದ ಪರಿಸರದಲ್ಲಿ ಕೆಲಸ ಮಾಡುವಾಗ ಉತ್ತಮ ಹೊಸ ಉಪಾಯಗಳು ಹುಟ್ಟಲು ಸುಲಭವಾಗುತ್ತದೆ. ಬೌದ್ಧಿಕ ಪ್ರತಿಬಂಧಕಗಳು: ಒಂದು ನಿರ್ದಿಷ್ಟ ವಿಲಕ್ಷಣ ಸಮಸ್ಯೆಯನ್ನು ಬಗೆಹರಿಸಲು ಬೇಕಾದ ಜ್ಞಾನದ ಅಭಾವವಿದ್ದಾಗ ಈ ಪ್ರತಿಬಂಧಕ ಉಂಟಾಗುತ್ತದೆ.
ಅಭಿವ್ಯಕ್ತಿಯ ಪ್ರತಿಬಂಧಕಗಳು:ತನಗೆ ತಾನೆ ಅಥವಾ ಬೇರೊಬ್ಬರ ಮುಂದೆ ತನ್ನ ವಿಚಾರಗಳನ್ನು ವ್ಯಕ್ತಪಡಿಸುವ ಸಾಮರ್ಥ್ಯವಿಲ್ಲದಿರುವುದು ಅಥವಾ ಹಿಂಜರಿಕೆ. ಮಾಡೆಲ್‌ಗಳನ್ನು ನಿರ್ಮಿಸುವುದು, ರೇಖಾ ಚಿತ್ರ, ಚಿತ್ರ ಅಥವಾ ಡಯಾಗ್ರಾಮ್‌ಗಳನ್ನು ರಚಿಸುವ ಪ್ರಕ್ರಿಯೆ ವಿಚಾರಗಳನ್ನು ಸ್ಪಷ್ಟಪಡಿಸಲು ಹಾಗೂ ಸಂವಹನಗೈಯಲು ಅನುಕೂಲಿಸುತ್ತದೆ.

‘ಹಿಂದಿನಿಂದಲೂ ಹೀಗೆಯೇ ನಡೆದು ಬಂದಿದೆ’, ‘ಯಾಕೆ ಬದಲಾಯಿಸಬೇಕು?’ಎನ್ನುವ ಧೋರಣೆಗಳು ಸಾಂಸ್ಕೃತಿಕ ಪ್ರತಿಬಂಧಕಗಳಿಂದ ಬರುತ್ತವೆ. ಹೊಸ ಶೈಲಿಗಳು ಹೆಚ್ಚು ಕಾಲ ಮುಂದುವರೆಯದೇ ಹೋಗಬಹುದು. ಆದರೂ ಕಾಲ-ಸಂದರ್ಭಗಳಿಗೆ ಸಂಬಂಧಿಸಿದ ಸಣ್ಣ ಆಯಾಮದಲ್ಲಿ ಸಿಲುಕಿರುವ ಬದಲು ದೊಡ್ಡ ಚಿತ್ರಣವನ್ನು ಕಾಣುವಂತೆ ನಮ್ಮ ಮನಸ್ಸನ್ನು ಪ್ರೋತ್ಸಾಹಿಸಿದಾಗಲೇ ಈ ಸಾಂಸ್ಕೃತಿಕ ಪ್ರತಿಬಂಧಕಗಳು ನಾಶವಾದಾವು. ಕೆಲವೊಮ್ಮೆ ಸಾಂಸ್ಕೃತಿಕ ಪ್ರತಿಬಂಧಕದಲ್ಲಿ ‘ಹುಡುಗಿಯರು ಗಣಿತದಲ್ಲೂ ವಿಜ್ಞಾನದಲ್ಲು ಸ್ವಲ್ಪ ಹಿಂದೆ ಬೀಳುತ್ತಾರೆ’ ಮುಂತಾದ ಲಿಂಗಭೇದ/ವರ್ಣಭೇದ ಭಾವಗಳೂ ಅಡಗಿರಬಹುದು.

ಸೃಜನಶೀಲತೆಯ ಪ್ರಚೋದನೆಗೆ ಹಂತಗಳು:

ಮೊದಲು ಆಲೋಚನೆ ಬರುತ್ತದೆ. ಆ ಆಲೋಚನೆ ಕಲ್ಪನೆ ಮತ್ತು ವಿಚಾರಗಳ ರೂಪದಲ್ಲಿ ಸಂಘಟಿತವಾಗುತ್ತದೆ. ಆ ಕಲ್ಪನೆಗಳು ವಾಸ್ತವವಾಗಿ ಪರಿವರ್ತನೆಗೊಳ್ಳುತ್ತೆವೆ. ನೀವು ಹೇಗೆ ಕಲ್ಪಿಸಿದ್ದಿರೋ, ಹಾಗೆ ಕಾಣುತ್ತದೆ. – Napolean Hill

ಇದೊಂದು ನೈಜ ಕತೆ. ರಷ್ಯದ ಒಬ್ಬ ರೈಲ್ವೆ ಉದ್ಯೋಗಿ ಒಂದು ರೆಫ್ರಿಜರೇಟರ್ ಕಾರ್ನೊಳಗೆ ಹೋಗಿದ್ದಾಗ ಆಕಸ್ಮಿಕವಾಗಿ ಬೀಗ ಹಾಕಿಕೊಂಡಿತು. ತಪ್ಪಿಸಿಕೊಳ್ಳಲು ಸಾಧ್ಯವಾಗದೇ ವಿಧಿಗೆ ತಲೆಬಾಗಿದ. ದೇಹ ಜೋಮುಗಟ್ಟಿದ ಅನುಭವವಾಯಿತು. ಮೃತ್ಯು ಸಮೀಪಿಸುತ್ತಿರುವ ಕತೆಯನ್ನು ಕಾರಿನ ಗೋಡೆಯ ಮೇಲೆ ಬರೆದು ದಾಖಲಿಸಿದ. “ನಾನು ತುಂಬಾ ತಣ್ಣಗಾಗುತ್ತಿದ್ದೇನೆ…. ಇನ್ನೂ ತಣ್ಣಗೆ….. ಈಗ ಏನು ಮಾಡಲೂ ಆಗದು—-ಮೃತ್ಯುವಿಗೆ ಕಾಯುವುದು ಅಷ್ಟೆ….. ಕೊನೆಗೆ…. ಬಹುಶಃ ಇದೇ ನನ್ನ ಕೊನೆಯ ಪದಗಳು ……” ಆತ ಮೃತ್ಯು ಹೊಂದಿದ್ದ. ನಂತರ ಕಾರನ್ನು ತೆಗೆದಾಗ, ಕಾರಿನಲ್ಲಿಯ ತಾಪಮಾನ ಕೇವಲ ೨೪ ಸೆಲ್ಸಿಯಸ್ ಇತ್ತು. ಶೀತೋಪಕರಣ ಚಾಲನೆಯಲ್ಲಿರಲಿಲ್ಲ. ಅವನು ಉಸಿರುಗಟ್ಟಿರಲೇ ಇಲ್ಲ! ಏಕೆಂದರೆ ಕಾರಿನಲ್ಲಿ ಸಾಕಷ್ಟು ಗಾಳಿಯಿತ್ತು. ಆತ ಸತ್ತಿದ್ದು ಕೇವಲ ತನ್ನ ಬಲವಾದ ಭ್ರಮೆಯಿಂದಾಗಿ!

ಸುಪ್ತಾವಸ್ಥೆಯಲ್ಲಿದ್ದ ಒಬ್ಬ ರೋಗಿಗೆ ಅವನ ಕೈಯನ್ನು ಕಾದ ಕಬ್ಬಿಣದಿಂದ ಮುಟ್ಟುತ್ತೇವೆ ಎಂದು ಹೇಳಲಾಯಿತು. ಪ್ರಯೋಗಕಾರನು ಆತನನ್ನು ಕೇವಲ ಪೆನ್ಸಿಲ್ ಒಂದರಿಂದ ಮುಟ್ಟಿದ. ಏನಾಯಿತು ಗೊತ್ತೆ? ಅವನ ಕೈಯ ಮೇಲೆ ಬೊಬ್ಬೆ ಎದ್ದಿತು!

ಒಂದು ಘಟನೆ ಮಾನವನ ಮೆದುಳನ್ನು ಎಷ್ಟು ನಾಟಕೀಯವಾಗಿ ಪ್ರಭಾವಗೊಳಿಸಬಲ್ಲುದು ನೋಡಿ! ಅದು ವ್ಯಕ್ತಿಯ ಭವಿಷ್ಯವನ್ನೇ ನಿರ್ಧರಿಸುವಷ್ಟು ಶಕ್ತಿಶಾಲಿ! ಎಷ್ಟು ಸಲ ನಾವು ನಮ್ಮ ಶಕ್ತಿ-ಸಾಮರ್ಥ್ಯಗಳನ್ನೇ ಅರಿಯದೆ ಕೀಳರಿಮೆಯಿಂದಾಗಿ ಸಾಫಲ್ಯದಿಂದ ದೂರಾಗಿದ್ದೀವೆ ಎನ್ನುವದರ ಕಲ್ಪನೆಯೂ ನಮಗೆ ಇಲ್ಲ!

ತಜ್ಞರು ವ್ಯಕ್ತಿಗಳಲ್ಲಿನ ಸೃಜನಶೀಲತೆಯನ್ನು ಪ್ರಚೋದಿಸಲು ಹಲವಾರು ಮಾರ್ಗಗಳನ್ನೂ ಸಲಹೆಗಳನ್ನೂ ನೀಡಿದ್ದಾರೆ.

ಸೃಜನಶೀಲತೆಯನ್ನು ಸುಧಾರಿಸಲು ೧೦ ಯೋಚನೆಗಳು

ಅನಿರೀಕ್ಷಿತ ಕಾರ್ಯಗಳ ಕಡೆಗೆ ಸದಾ ಒಂದು ಕಣ್ಣಿರಲಿ
ಪ್ರತಿದಿನ ಆತ್ಮಶೋಧಕ ಪ್ರಶ್ನೆಗಳನ್ನು ನಿಮಗೆ ನೀವೇ ಹಾಕಿಕೊಳ್ಳಿ
ಕಾಲ, ಪ್ರಸ್ತುತತೆ ಮುಂತಾದುವನ್ನು ಗಮನಿಸಿ ಅದರಂತೆ ನಿಮ್ಮ ಆಯ್ದ ಕ್ಷೇತ್ರದಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿರಿ.
ನಿಮ್ಮನ್ನು ನೀವು ಅರಿಯಲು ಪ್ರಯತ್ನಿಸಿ.
ಬಿಗಿ ಸ್ವಭಾವ ಬೇಡ. ಪ್ರತಿ ಕೆಲಸಕ್ಕೂ ಕನಿಷ್ಟ / ಪರ್ಯಾಯೋಪಾಯಗಳನ್ನು ಹೊಂದಿರಿ.
ಸೃಜನಾತ್ಮಕ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳಿ.
ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಂಡು ಬರುವ ಅಡಚಣೆಗಳಿಗೆ ಸೂಕ್ತವಾದ ಪರಿಹಾರ ಕಂಡುಕೊಳ್ಳುವುದು.
ನಿಮ್ಮ ವಿಶೇಷ ಜ್ಞಾನದ ಕ್ಷೇತ್ರವಲ್ಲದೆ ಬೇರೆ ವಿಷಯಗಳ ಬಗ್ಗೆಯೂ ಮಾಹಿತಿ ಪಡೆಯಿರಿ.
ಹೊಸ ವಿಚಾರಗಳನ್ನು ಸ್ವಾಗತಿಸಿ.
ಹಾಸ್ಯ ಪ್ರಜ್ಞೆಯನ್ನು ಉಳಿಸಿಕೊಳ್ಳಿ. ನೀವು ಆರಾಮವಾಗಿರುವಾಗ ಹೆಚ್ಚು ಸೃಜನಶೀಲರಾಗುತ್ತೀರಿ.

ಅಭ್ಯಾಸವನ್ನು ಪೂರ್ಣಗೊಳಿಸಿ
ಸಾಧ್ಯವಾದಷ್ಟು ಸೃಜನಶೀಲ ಉಪಾಯಗಳನ್ನು ಸೃಷ್ಟಿ ಮಾಡಿ.

. ಕೆಳಕಂಡ ಚಿತ್ರದಲ್ಲಿ ಎಷ್ಟು ವಿಭಿನ್ನತೆಗಳಿವೆ ಗುರುತಿಸಬಲ್ಲಿರಿ?

—————————————————————————————-

—————————————————————————————-

—————————————————————————————-

—————————————————————————————-

—————————————————————————————-

—————————————————————————————-

. ಕೆಲವು ವಸ್ತುಗಳ ಹೆಸರುಗಳನ್ನು ಕೆಳಗೆ ನೀಡಲಾಗಿದೆ. ವಸ್ತುಗಳ ಉಪಯೋಗವನ್ನು ವಿಭಿನ್ನವಾಗಿ, ಆಸಕ್ತಿಯುತ ವೈವಿಧ್ಯಮಯವಾಗಿ ಮಾಡುವ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿ.

೧.  ಒಂದು ಖಾಲಿ ಶೀಷೆ

—————————————————————————————-

—————————————————————————————-

—————————————————————————————-

೨.  ಪುಸ್ತಕ

—————————————————————————————-

—————————————————————————————-

—————————————————————————————-

. ಕೆಳಗಿನ ಚಿತ್ರವನ್ನು ಬಹಳ ಎಚ್ಚರಿಕೆಯಿಂದ ವೀಕ್ಷಿಸಿ ಮತ್ತು ಅದು ಪ್ರತಿನಿಧಿಸುವ ವಿವಿಧ ಅಂಶಗಳನ್ನು ಬರೆಯಿರಿ:

—————————————————————————————-

—————————————————————————————-

—————————————————————————————-

. ಸನ್ನಿವೇಶದ ಪರಿಣಾಮ

೧. ನಾವು ಬೇಕೆಂದಾಗ ಅದೃಶ್ಯರಾಗುವಂತಾದರೆ?

—————————————————————————————-

—————————————————————————————-

—————————————————————————————-

೨. ಒಂದೇ ದಿನದಲ್ಲಿ ಎಲ್ಲಾ ಋತುಗಳು ಬಂದರೆ?

—————————————————————————————-

—————————————————————————————-

—————————————————————————————-

೩. ನಾವು ಯಾವಾಗ ಅಳುತ್ತೇವೆಯೋ ಆಗ ಬೆಳಕು / ಲೈಟ್ ಹೋಗಿ ಬಿಟ್ಟರೆ?

—————————————————————————————-

—————————————————————————————-

—————————————————————————————-

೪. ನಮ್ಮ ಭಾವನೆಗಳಿಗನುಗುಣವಾಗಿ ಮನುಷ್ಯನ ಕೂದಲಿನ ಬಣ್ಣ ಬದಲಾದರೆ?

—————————————————————————————-

—————————————————————————————-

—————————————————————————————-

೫. ಒಂದು ಬುಕ್ ಕಂಪನಿಗೆ ಅಥವಾ ತಂಪು ಪಾನೀಯ ಕಂಪನಿಗೆ ಅಥವಾ ಒಂದು ಸಾಪ್ಟ್‌ವೇರ್ ಕಂಪನಿಗಾಗಿ ಒಂದು ವಿಶೇಷ Logo ವನ್ನು ಚಿತ್ರಿಸಿ.

—————————————————————————————-

—————————————————————————————-

—————————————————————————————-

೬. ಒಂದು ಕೊಡದ ತಳದಲ್ಲಿ ಸ್ವಲ್ಪ ನೀರನ್ನು ಕಂಡ “ಬಾಯಾರಿಕೆಯಾದ ಕಾಗೆ”ಯ ಕತೆ ನಿಮಗೆ ಗೊತ್ತಿದೆ. ಬೇರೊಂದು ಪಾಠವನ್ನೂ ಕಲಿಸುವ ತೆರದಲ್ಲಿ ಆ ಕಥೆಯನ್ನು ಹೇಗೆ ಬಲ್ಲಿರಿ? ಬೇರಾರೂ ಆಲೋಚಿಸಿರದಂತಹ ರೀತಿಯಲ್ಲಿ ಕಥೆಗೆ ಮುಕ್ತಾಯವನ್ನು ಕೊಡಿ.

—————————————————————————————-

—————————————————————————————-

—————————————————————————————-

೭. ಯಾವುದೇ ಒಂದು ವಸ್ತು ಅಥವಾ ಹಳೆಯ ಸಲಕರಣೆಯನ್ನು ಸುಧಾರಿಸಲು ಅತ್ಯಂತ ಆಸಕ್ತಿಯುತ, ಅಸಾಮಾನ್ಯ ಮತ್ತು ಕಾಲ್ಪನಿಕ ವಿಚಾರಗಳ ಬಗ್ಗೆ ಚಿಂತಿಸಿ.

. ಪೆನ್ನು

—————————————————————————————-

—————————————————————————————-

—————————————————————————————-

. ಕೊಡೆ

—————————————————————————————-

—————————————————————————————-

—————————————————————————————-

೮. ಸುಖ ಸಂತೋಷದಿಂದ ಒಂದು ಹಬ್ಬವನ್ನು ಆಚರಿಸಲು ಏನು ಮಾಡಬೇಕು?

—————————————————————————————-

—————————————————————————————-

—————————————————————————————-

ಗ್ರಂಥ ಸಲಹೆ:

 • De Bono Edward (1970), Lateral Thinking, Penguin Books-New York
 • De Bono Edward (1976), Teaching Thinking, Penguin Books. New York.
 • De Bono Edward (1996), Serious Creativity, HarperCollins. London
 • NCERT (1993). Education for Creativity, a resource book. New Delhi.
 • Runco.M.A and Steven.R.P (1999), Encyclopedia of Creativity Volume: I, Academic Press. California.
 • Runco.M.A and Steven.R.P (1999), Encyclopedia of Creativity Volume: II, Academic Press. California.

ಅಂತರ್ಜಾಲ ಮೂಲ:

http://www.mindtools.com

http://www.virtualsalt.com/crebook1.htm

http://www.brainstorming.co.uk/tutorials/creativethinking.html