ಪ್ರಾರಂಭ

ಈ ಕೆಳಗಿನ ವೃತ್ತಗಳಲ್ಲಿ ೧, ೨, ೩, ೪, ೫ ಹಾಗೂ ೬ ಸಂಖ್ಯೆಗಳನ್ನು ಬರೆಯಿರಿ. ಹಾಗೆ ಬರೆಯುವಾಗ ಒಂದು ವೃತ್ತದಲ್ಲಿ ಒಂದು ಸಂಖ್ಯೆಯನ್ನು ಒಂದು ಬಾರಿ ಮಾತ್ರ ಉಪಯೋಗಿಸಬೇಕು ಮತ್ತು ಕೊನೆಯಲ್ಲಿ ಪ್ರತಿ ಬದಿಯ ೩ ಸಂಖ್ಯೆಗಳ ಒಟ್ಟು ಮೊತ್ತ ಒಂದೇ ಆಗಿರಬೇಕು.

ಅಧ್ಯಾಯದ ಪರಿಕಲ್ಪನೆ:

ಅಧ್ಯಾಯದ ಕಲಿಕೆಯ ಪರಿಣಾಮ

 • ವಿಮರ್ಶಾತ್ಮಕ ಚಿಂತನೆಯನ್ನು ಅರ್ಥಮಾಡಿಕೊಳ್ಳುವ ಪ್ರಯತ್ನ.
 • ವಿಮರ್ಶಾತ್ಮಕ ಚಿಂತನೆಯ ಕೌಶಲಗಳು ಮತ್ತು ನಿಜ ಜೀವನದಲ್ಲಿ ಅದರ ಉಪಯುಕ್ತತೆ.
 • ದಿನನಿತ್ಯದಲ್ಲಿ ವಿಮರ್ಶಾತ್ಮಕ ಚಿಂತನೆಗಳ ಅಳವಡಿಕೆ.
 • ಸಮಸ್ಯೆಯನ್ನು ಪರಿಹರಿಸುವಾಗ ದೊರಕುವ ಮಾಹಿತಿ ಮತ್ತು ಆಲೋಚನೆಗಳನ್ನು ಅನೇಕ ದೃಷ್ಟಿಕೋನಗಳಿಂದ ಎಚ್ಚರಿಕೆಯಿಂದ ಹಾಗೂ ತರ್ಕಬದ್ಧವಾಗಿ ವಿಶ್ಲೇಷಿಸುವುದು.

ಪರಿಚಯ:

ಮನುಷ್ಯನ ಹೆಗ್ಗಳಿಕೆ ನಿರ್ಮಾಣವಾಗಿರುವುದೇ ಅವನ ಚಿಂತನಸಾಮರ್ಥ್ಯದಿಂದಾಗಿ. ಅದರಿಂದಲೇ ಆತನು ಇತರ ಪ್ರಾಣಿಗಳಿಗಿಂತ ಭಿನ್ನ ಎನಿಸುತ್ತಾನೆ”.   – ಸ್ವಾಮಿ ವಿವೇಕಾನಂದ (ನೈಜಜೀವನ ವೇದಾಂತದಲ್ಲಿ)

ಜೀವನ ಒಂದು ಆಟವಿದ್ದಂತೆ, ಪ್ರತಿಯೊಂದು ಚಲನೆಯಲ್ಲೂ ಬಹಳ ಜಾಗರೂಕರಾಗಿರಬೇಕು. ಕೆಲವು ಸಮಸ್ಯೆಗಳು ಸವಾಲಾಗಿ ನಿಲ್ಲುತ್ತವೆ. ಕೆಲವೊಮ್ಮೆ ‘ಮುಂದೆ ಯಾವ ಕೆಲಸ ಮಾಡಬೇಕು’ ಎಂದು ದಿಕ್ಕು ತೋಚದೆ ಹೋಗಬಹುದು. ಅಂತಹ ಸಂದರ್ಭಗಳಲ್ಲಿ ನಾವು ಮತ್ತೊಬ್ಬರೊಂದಿಗೆ ಗಹನವಾಗಿ ಚರ್ಚಿಸಿ ಸೂಕ್ತ ಪರಿಹಾರವನ್ನು ಕಂಡುಕೊಳ್ಳುತ್ತೇವೆ.

ಬಾಳು ಚದುರಂಗದ ಆಟವಿದ್ದಂತೆ, ಪ್ರತಿಯೊಂದು ಚಲನೆಯೂ ನಿರ್ಣಾಯಕವೂ ಮಹತ್ವಪೂರ್ಣವೂ ಆಗಿರುತ್ತದೆ. ಅದು ನಮ್ಮ ಚಿಂತನ-ಪ್ರಕ್ರಿಯೆಯಿಂದ ಹುಟ್ಟುವ ಆಲೋಚನೆಗಳನ್ನು ಹಾಗೂ ಅವುಗಳ ಗುಣಮಟ್ಟವನ್ನು ಪ್ರಚೋದಿಸಿ ಪ್ರಭಾವಗೊಳಿಸುತ್ತದೆ.

ನಾವೆಲ್ಲರೂ ಆಲೋಚಿಸುತ್ತೇವೆ, ಅದು ನಮ್ಮ ಸಹಜ ಸ್ವಭಾವ. ಸಾಕ್ರೆಟೀಸ್ (469 – 399 ಕ್ರಿ.ಪೂ) ಓರ್ವ ಮಹಾನ್ ಚಿಂತಕ. ಈತ ‘ಪ್ರಶ್ನೆ ಕೇಳುವ ಮತ್ತು ವಿದ್ಯಾರ್ಥಿಗಳಿಂದ ಉತ್ತರಗಳನ್ನು ಹೊರ ತೆಗೆಯುವ’ ವಿಧಾನವನ್ನು ಕಲಿಸಿದವನು.

ವಿಮರ್ಶಾತ್ಮಕ ಚಿಂತನೆಗೆ ಸಾಕ್ರೆಟೀಸ್ನ ಈ ಸಂವಾದ ಶೈಲಿ ಪುಷ್ಟಿ ಕೊಡುತ್ತದೆ. ಈ ವಿಧಾನದ ಮೂಲ ಉದ್ದೇಶಗಳು ಮುಖ್ಯವಾಗಿ ಕ್ಲಿಷ್ಟಕರ ಸಂಗತಿಗಳ ಬಾಹ್ಯ ರೂಪಗಳನ್ನು ಸಂಶೋಧಿಸುವುದು ಹಾಗೂ ವಿಮರ್ಶಾತ್ಮಕ ಚಿಂತನೆಯ ಕೌಶಲವನ್ನು ಬೆಳೆಸಿಕೊಳ್ಳುವುದು.

ಈ ಚಿತ್ರವನ್ನು ಕ್ಷಣಕಾಲ ಗಮನಿಸಿ ನೋಡಿ:

ಈ ಗ್ರಾಫಿಕ್‌ನಲ್ಲಿ ನೀವು LOVE ಅಥವಾ HATE ಶಬ್ದಗಳನ್ನು ಕಾಣುವಿರಿ. ನಿಮ್ಮ ಗಮನ HATE ಶಬ್ದದ ಮೇಲೆ ಇದ್ದಲ್ಲಿ LOVE ಶಬ್ದ ಸುಲಭವಾಗಿ ಗಮನಕ್ಕೆ ಬರುವುದಿಲ್ಲ; ಅಂತೆಯೇ LOVE ಶಬ್ದದ ಮೇಲೆ ಗಮನವಿರಿಸಿದಾಗ HATE ಶಬ್ದ ಸುಲಭವಾಗಿ ಗಮನಕ್ಕೆ ಬರುವುದಿಲ್ಲ.

ಈ ಸಾಮಾನ್ಯ ಅಭ್ಯಾಸ ವಿಮರ್ಶಾತ್ಮಕ ಚಿಂತನೆಯ ಮಹತ್ವವನ್ನು ಸಾರುತ್ತದೆ. ಮಾಹಿತಿ ಒಂದೇ ಆದರೂ ನಮ್ಮ ನಮ್ಮ ಗ್ರಹಿಕೆಗೆ ಅನುಸಾರವಾಗಿ ಹೇಗೆ ವಿವಿಧ ಬಗೆಯಲ್ಲಿ ನಿರ್ಣಯಗಳನ್ನು ಮಾಡುತ್ತೇವೆ ಎನ್ನುವುದನ್ನು ಇದು ಸೂಚಿಸುತ್ತದೆ. ಏಕೆಂದರೆ ಮನಸ್ಸು ತನ್ನದೇ ಆದ ಗ್ರಹಿಕೆಯ ವಿನ್ಯಾಸವನ್ನು ಮೊದಲೇ ಹೊಂದಿರುತ್ತದೆ. ಇದರಿಂದ ಆಚೆ ಬಂದು ಬೇರೊಂದು ದೃಷ್ಟಿಕೋನದಿಂದ ಮಾಹಿತಿಯನ್ನು ಅರ್ಥಮಾಡಿಕೊಳ್ಳಲು ಸ್ವಲ್ಪ ಕಾಲಾವಕಾಶ ಬೇಕಾಗುತ್ತದೆ.

ವಿಮರ್ಶಾತ್ಮಕ ಚಿಂತನೆ ಎಂದರೇನು?

೧) ‘ವಿಮರ್ಶಾತ್ಮಕ ಚಿಂತನೆ’ ಎನ್ನುವುದು ‘ಏನನ್ನು ನಂಬಬೇಕು?’ ಹಾಗೂ ‘ಏನನ್ನು ಮಾಡಬೇಕು’ ಎನ್ನುವುದನ್ನು ಆಧರಿಸಿ ನಡೆಯುವ ತರ್ಕಸಮ್ಮತ, ಆತ್ಮನಿರೀಕ್ಷಣಾಪೂರ್ಣ ಚಿಂತನೆ. (Ennis, 1982)

೨) ನಮ್ಮ ಗಮನಕ್ಕೂ ಅನುಭವಕ್ಕೂ ಬಂದ ಹಾಗೂ ಸಂವಹನದ ಮೂಲಕ ನಾವು ಗ್ರಹಿಸಿದ ಎಲ್ಲ ಮಾಹಿತಿ ಹಾಗೂ ವಿಚಾರಗಳನ್ನು ಕೌಶಲಯುತ ಸಕ್ರಿಯ ವಿಶ್ಲೇಷಣೆಯ ಮೂಲಕ ಮೌಲ್ಯಮಾಪನ ಮಾಡುವುದೇ ‘ವಿಮರ್ಶಾತ್ಮಕ ಚಿಂತನೆ’. (Fisher & Seriven, 1997)

೩) ‘ಸತ್ಯ-ಶೋಧನ’ (reality checks) ಹಾಗೂ ‘ಮೌಲ್ಯ-ಶೋಧನ’ (quality checks)ಗಳ ಮೂಲಕ ತರ್ಕ, ವಿಮರ್ಶೆ ಹಾಗೂ ತರ್ಕಯುತ ಮೌಲ್ಯಮಾಪನಗಳನ್ನು ಮಾಡುವುದು ವಿಮರ್ಶಾತ್ಮಕ ಚಿಂತನೆಯ ಹೆಗ್ಗುರುತು. ಅದು ಸ್ಪಷ್ಟವಾಗಿ ಉದ್ದೇಶವರಿತು, ತರ್ಕಬದ್ಧವಾಗಿ ಲಕ್ಷ್ಯದತ್ತ ಹರಿಯುವ ಚಿಂತನ ಕ್ರಮ.

ವಿಮರ್ಶಾತ್ಮಕ ಚಿಂತನೆಯನ್ನು ಇನ್ನೂ ಚೆನ್ನಾಗಿ ಅರ್ಥಮಾಡಿಕೊಳ್ಳೋಣ

೧) ವಿಮರ್ಶಾತ್ಮಕ ಚಿಂತನೆ Who, What, When, Where, Why ಹಾಗೂ How ಎಂಬ 5 ‘W’s ಹಾಗೂ 1 ‘H’ ಸಿದ್ಧಾಂತವನ್ನು ಆಧರಿಸಿದೆ- ವಿಭಿನ್ನ ಕೋನಗಳಿಂದ ಮಾಡುವ ಆಲೋಚನೆ, ಪರಿಣಾಮಗಳ ಮೌಲ್ಯಶೋಧನೆ, ಪರಿಹಾರಗಳು ಹಾಗೂ ನಿರ್ಣಯ ಮಾಡುವ ಕೌಶಲಗಳು ಮುಂತಾದವು ಇದರಲ್ಲಿ ಸೇರಿವೆ.

೨) ತರ್ಕಬದ್ಧ ವಿಶ್ಲೇಷಣೆ ಹಾಗೂ ವಿವೇಚನಾ ಕೌಶಲಗಳನ್ನು ಇದು ಅಪೇಕ್ಷಿಸುತ್ತದೆ.

೩) ಶಿಸ್ತು, ವ್ಯವಸ್ಥಿತ ವಿನ್ಯಾಸ, ಆಳ, ಸಾಮರ್ಥ್ಯ ಮತ್ತು ತರ್ಕಯುಕ್ತತೆಗಳೂ ಅಪೇಕ್ಷಿತ.

೪) ಒಂದು ನಂಬಿಕೆಯನ್ನು ಅದು ‘ನಂಬಿಕೆಗೆ ಅರ್ಹವೇ?’ ಎಂದು ವಿಮರ್ಶಿಸಲು ಇದು ಸಹಾಯಕ. (ಚಿತ್ರ ೬೦)

ಕಲಿಕೆ ಪ್ರಭಾವಶಾಲಿಯೂ ಫಲಪ್ರದವೂ ಆಗಲು ವಿಮರ್ಶಾತ್ಮಕ ಚಿಂತನೆ ಅಗತ್ಯ. ಈ ಶತಮಾನ ಹಾಗೂ ಮುಂಬರುವ ಕಾಲಕ್ಕೆ ಹೊಂದಿಕೊಳ್ಳುವಂತೆ ವೈಯಕ್ತಿಕ, ಸಾಮಾಜಿಕ ಹಾಗೂ ಔದ್ಯೋಗಿಕ ಕೋರಿಕೆಗಳನ್ನು ಪೂರೈಸಿಕೊಳ್ಳಲು ಸೂಕ್ತ ನೆಲೆಯನ್ನು ನಿರ್ಮಿಸಲು ಇದು ಸಹಾಯಕ. ಅತ್ಯಂತ ಸಂಕೀರ್ಣವಾಗುತ್ತ ಸಾಗುತ್ತಿರುವ ನಮ್ಮ ಪರಿಸರದಲ್ಲಿ ಗೆಲುವಿಗಾಗಿ ವಿಮರ್ಶಾತ್ಮಕ ಚಿಂತನೆ ಅಗತ್ಯ. ವಿಮರ್ಶಾತ್ಮಕ ಚಿಂತನೆ ವಿಮರ್ಶೆ, ಆಲೋಚನೆ ಹಾಗೂ ವ್ಯವಹಾರಗಳನ್ನು ಪ್ರೋತ್ಸಾಹಿಸುವ ಚಿಂತನೆಯ ಪರಿ.

ವಿಮರ್ಶಾತ್ಮಕ ಚಿಂತನೆಗಳಿಂದಾಗುವ ಅನುಕೂಲತೆಗಳು:

೧) ವಿಮರ್ಶಾತ್ಮಕವಾಗಿ ಚಿಂತಿಸುವ ವ್ಯಕ್ತಿಗಳು ಸ್ವಂತ್ರವಾಗಿ ಆಲೋಚಿಸುತ್ತಾರೆ. ಇದರ ಲಾಭಗಳು ಹೀಗಿವೆ-

೨) ಸಮಸ್ಯೆಗಳನ್ನು ಗುರುತಿಸುವುದು ಸಾಧ್ಯವಾಗುತ್ತದೆ.

೩) ಸೂಕ್ತ ಮಾಹಿತಿಯನ್ನು ಸಂಗ್ರಹಿಸುವುದು ಸಾಧ್ಯವಾಗುತ್ತದೆ.

೪) ಮಾಹಿತಿಯನ್ನು ಸರಿಯಾಗಿ ವಿಶ್ಲೇಷಿಸುವುದು ಸಾಧ್ಯವಾಗುತ್ತದೆ.

೫) ಸ್ವತಂತ್ರವಾಗಿ ಸೂಕ್ತ ಪರಿಹಾರ/ ಉಪಸಂಹಾರಕ್ಕೆ ಬರುವುದು ಸಾಧ್ಯವಾಗುತ್ತದೆ.

೬) ಯೋಗ್ಯವಾದ ಪ್ರಪಂಚ-ಜ್ಞಾನವನ್ನು ಪಡೆದು ವಾಸ್ತವವನ್ನು ಗ್ರಹಿಸಿ ಎದುರಿಸಲು ಸಾಧ್ಯವಾಗುತ್ತದೆ.

ವಿಮರ್ಶಾತ್ಮಕ ಚಿಂತನೆಗಳನ್ನೊಳಗೊಳ್ಳಬಲ್ಲ ಕೆಲವು ಸಂದರ್ಭಗಳು

೧) ಪ್ರಚಲಿತ ವಿಚಾರಗಳ ಬಗ್ಗೆ ವಿವಾದಾತ್ಮಕ ಹೇಳಿಕೆಗಳು.

೨) ಅಪೂರ್ಣವಾಗಿ ಹೊರಬಂದ ಕಥೆಗಳು.

೩) ಚಲನಚಿತ್ರ ವಿಶ್ಲೇಷಣೆ / ಮೌಲ್ಯಮಾಪನ.

೪) ಸೂಕ್ಷ್ಮ ವಿಚಾರಗಳ ಕುರಿತಾದ ಚರ್ಚೆ.

೫) ವರದಿಯನ್ನು ತಯಾರಿಸುವಾಗ.

ಮೇಲ್ಕಂಡ ವಿಷಯಗಳಲ್ಲಿ ಒಂದನ್ನು ಆಯ್ದು ಸಂಬಂಧಿತ ಘಟನೆಯೊಂದನ್ನು ವಿವರಿಸಿ.

—————————————————————————————-

—————————————————————————————-

—————————————————————————————-

—————————————————————————————-

—————————————————————————————-

—————————————————————————————-

—————————————————————————————-

—————————————————————————————-

—————————————————————————————-

—————————————————————————————-

—————————————————————————————-

—————————————————————————————-

 

ವಿಮರ್ಶಾತ್ಮಕ ಚಿಂತನೆಯ ಪ್ರಕ್ರಿಯೆಗಳು: Courtesy: “Church of Thinking”.

ನಮ್ಮ ಜೀವನದ ಮೇಲೆ ಸಮೂಹ ಮಾಧ್ಯಮಗಳು ಬೀರುವ ಪ್ರಭಾವವನ್ನೇ ಉದಾಹರಣೆಯಾಗಿ ತೆಗೆದುಕೊಂಡು ಅದನ್ನು ವಿಮರ್ಶಾತ್ಮಕ ಚಿಂತನೆಗೆ ಒಳಪಡಿಸೋಣ-

ವಿಮರ್ಶಾತ್ಮಕ ಚಿಂತನೆಯ ಹಂತಗಳು ವಿಮರ್ಶಾತ್ಮತ ಚಿಂತನೆಯ ವಿಷಯಗಳು ವಿಶ್ಲೇಷಣೆ
ವಿಷಯವನ್ನು ಗುರುತಿಸುವುದು ಜೀವನದ ಮೇಲೆ ಸಮೂಹ ಮಾಧ್ಯಮಗಳ ಪ್ರಭಾವ
 • ವೈಯಕ್ತಿಕ ಜೀವನಶೈಲಿಯ ಮೇಲೆ ಪ್ರಭಾವ
 • ಶಾಲೆ ದೃಷ್ಟಿಕೋನದ ನಿರ್ಮಾಣ
 • ಸಮುದಾಯ: ಮೌಲ್ಯಗಳ ಬಳಕೆ
 • ಸಮಾಜ ಬದಲಾಗುತ್ತಿರುವ ಮೌಲ್ಯಗಳು
ವಿಷಯವನ್ನು ಅರ್ಥಮಾಡಿಕೊಳ್ಳುವುದು
 • ಇದು ಹೇಗೆ ಹುಟ್ಟಿತು?
 • ಹೇಗೆ ಜನರ ಮೇಲೆ ಪ್ರಭಾವ ಬೇರುತ್ತದೆ?
 • ಲಾಭಗಳು
 • ಪ್ರತಿಕೂಲಗಳು
 • ದೂರದರ್ಶನ, ರೇಡಿಯೋ, ಮೊಬೈಲ್, ಎಲೆಕ್ಟ್ರಾನಿಕ್ ಮಾಧ್ಯಮ ಮುಂತಾದ ತಂತ್ರಜ್ಞಾನಕ್ಕೆ ಸಾಮೂಹಿಕ ಪರಿಣಾಮ ಬೀರುವ ಶಕ್ತಿ ಇದೆ. ಇದು ಪಡೆಯಲು ಸುಲಭ, ಅರ್ಥ ಮಾಡಿಕೊಳ್ಳಲು ಸುಲಭ ಹಾಗೂ ಮೂಲೆ ಮೂಲೆಗಳನ್ನೂ ತಲುಪಬಲ್ಲುದು.
 • ಉದ್ಯೋಗಸ್ಥರಿಗೆ ಹಾಗೂ ಅಧಿಕಾರದಲ್ಲಿರುವವರಿಗೆ ಲಾಭದಾಯಕ.
 • ಇದೇ ಸವಲತ್ತುಗಳು ಕೆಲವೊಮ್ಮೆ ಪರಸ್ಪರ ವೈಮನಸ್ಯಕ್ಕೆ ಅಥವಾ ತಪ್ಪು ಮಾರ್ಗಹಿಡಿಯುವುದಕ್ಕೆ ಪ್ರೇರಕವಾಗಬಹುದು.
 
ದೃಷ್ಟಿಕೋನದ ಬೆಳವಣಿಗೆ
 • ಇರುವ ಪರ್ಯಾಯಗಳು
 • ಬೇರೆ ಪರ್ಯಾಯಗಳು
 • ಸಾಮಾಜಿಕ ನ್ಯಾಯ
 • ಮುದ್ರಣ ಮಾಧ್ಯಮವನ್ನು ಬಲಗೊಳಿಸುವುದು.
 • ಸ್ಥಾನೀಯ ಅಂತರ್ಜಾಲ- ಎಲೆಕ್ಟ್ರಾನಿಕ್ ಹಾಗೂ ಸಮುದಾಯ ಗುಂಪುಗಳನ್ನು ಬಲಪಡಿಸುವುದು.
 • ಸಾಮಾಜಿಕ-ರಾಷ್ಟ್ರೀಯ ಹಾಗೂ ಅಂತರ್ರಾಷ್ಟ್ರೀಯ ಮಟ್ಟದಲ್ಲು ಗುಣಮಟ್ಟದ ಕುರಿತಾಗಿ ಒಪ್ಪಂದದ ಅಗತ್ಯ.
ಸಾಧ್ಯ ಪರಿಹಾರಗಳನ್ನು ಹುಡುಕುವುದು
 • ಬದಲಾವಣೆ
 • ಸಮಾಜದ ಮೇಲಿನ ಪ್ರಭಾವ
 • ಪರಿವರ್ತನೆಯ ದಿಕ್ಕಿನಲ್ಲಿ ನನ್ನ ಕಾರ್ಯಗಳು
 • ಮೌಲ್ಯಗಳನ್ನು ಉಳಿಸಿಕೊಂಡು ಪ್ರಪಂಚದ ಬದಲಾವಣೆಗಳಿಗೆ ಹೊಂದಿಕೊಳ್ಳುವುದು.
 • ಸಾಮಾಜಿಕ ವಿಚಾರಗಳ ಚರ್ಚೆ.
 • ಸಂಬಂಧಗಳನ್ನು ಬಲಪಡಿಸುವುದು.
 • ನೆರೆಹೊರೆಯವರೊಡನೆ ಸೌಹಾರ್ದತೆ.
 • ಸಮರ್ಥ ಸಮುದಾಯವನ್ನು ಕಟ್ಟುವುದು.
ಕಾರ್ಯಪ್ರಣಾಳಿ

ಯೋಜನೆ 
 
 • ಬದಲಾವಣೆಗೆ ಅಡಚಣೆಗಳು
 • ಬದಲಾವಣೆಯ ಹಂತಗಳು
 • ಸಕಾರಾತ್ಮಕ ಧೋರಣೆ
 • ಜಾಗತೀಕರಣದ ಕುರಿತಾಗಿ ಅರಿವು ಹಾಗೂ ಜೀವನದಲ್ಲಿ ಅದರ ಅಳವಡಿಕೆ
 • ಮಾನಸಿಕ ಸ್ಥಿತಿ
 • ಧೋರಣೆ- ಬಿಗಿತ
 
ವಿಮರ್ಶಾತ್ಮಕ ಕ್ರಿಯೆಗಳನ್ನು ಮಾಡುವುದು
 • ವೈಯಕ್ತಿಕ ಹಾಗೂ ಸಮಾಜಿಕ ಜವಾಬ್ದಾರಿಗಳು
 • ಮಾಧ್ಯಮದ ಪ್ರಭಾವದ ಬಗ್ಗೆ ಅಧ್ಯಯನ.
 • ಜನಪ್ರಿಯ ಕಾರ್ಯಕ್ರಮದ ಶೋಧನೆ.
 • ಬದಲಾದ ಸಂಗತಿಗಳ ಕುರಿತಾಗಿ ಸಮಾಜದ ಹಿರಿಯರನ್ನು, ಶಿಕ್ಷಕರನ್ನೂ ಹಾಗೂ ಒಂದೇ ಉದ್ದೇಶದಿಂದ ಕೆಲಸ ಮಾಡುವ ಸಂಸ್ಥೆಗಳನ್ನೂ ಸಂದರ್ಶಿಸುವುದು.
 
ಪರಿಣಾಮದ ಕುರಿತಾದ ಪ್ರತಿಕ್ರಿಯೆ
 • ಸಾಧನೆ-ಸಿದ್ಧಿ
 • ಕಲಿಕೆ
 • ಕೆಲಸ ಮಾಡುವ ವಿಬಿನ್ನ ಶೈಲಿಗಳು
 • ಬೇರೆ ವಿಚಾರಗಳು/
 • ತೊಡಕುಗಳು
 • ಚರ್ಚೆಗೆ ಅವಕಾಶವನ್ನು ಕೊಡುವುದು.
 • ನಮ್ಮ ಸಂಸ್ಕೃತಿಯ ಮೂಲಕ್ಕೆ ಹೋಗಿ ವಿಮರ್ಶಿಸುವುದು.
 • ಜಾಗತೀಕರಣದ ಭರದಲ್ಲಿ ನಮ್ಮ ತನವನ್ನು (identity) ಉಳಿಸಿಕೊಳ್ಳುವುದು.
 • ಜನರಲ್ಲಿ ಜಾಗೃತಿ ಮೂಡಿಸುವುದು.
 • ಯುವಶಕ್ತಿಯನ್ನು ಬಳಸಿಕೊಳ್ಳುವುದು.
 • ಮಾಧ್ಯಮಗಳ ಸಕಾರಾತ್ಮಕ ಕೊಡುಗೆ.
 

ಇದಕ್ಕಿಂತ ಸಂಕ್ಷಿಪ್ತವಾದ ಒಂದು ಪರಿಪಾಠ (shorter version) ಸರಿಎನಿಸುವ ಕಲೆ

ನಮ್ಮ ಮೆದುಳು ಮಾಂಸ-ಖಂಡಗಳನ್ನು ಬಳಸಿಕೊಂಡು ತರ್ಕ, ವಿಮರ್ಶೆ ಹಾಗೂ ಚಿಂತನೆಗಳನ್ನು ಮಾಡುತ್ತದೆ- ಹೀಗೆ ಮಾಡುವುದರಿಂದ ನಮ್ಮಲ್ಲಿನ ಪ್ರಶ್ನೆ ಕೇಳುವಿಕೆ, ಕಲಿಕೆ ಹಾಗೂ ವಿಷಯವನ್ನು ಗುರುತಿಸುವ ಸಾಮರ್ಥ್ಯ ಹೆಚ್ಚುತ್ತದೆ.

ಶೈಕ್ಷಣಿಕ ಉತ್ಕೃಷ್ಟತೆಗಾಗಿ ೧೯೮೩ರಲ್ಲಿ ರಚಿಸಲಾದ National Commission on Excellence in Education ಕೊಟ್ಟಿರುವ ಹೇಳಿಕೆಯ ಪ್ರಕಾರ- ‘ಹೆಚ್ಚಿನ ಸಂಖ್ಯೆಯ ೧೭ ವರ್ಷ ಪ್ರಾಯದವರಲ್ಲಿ ಅವರಿಂದ ನಿರೀಕ್ಷಿಸಬಹುದಾದ ಮಟ್ಟದ ಬೌದ್ಧಿಕ ಕೌಶಲಗಳು ಕಾಣಬರುತ್ತಿಲ್ಲ. ಶೇಖಡ ೪೦% ರಷ್ಟು ಮಂದಿ ಬರೆದುಕೊಟ್ಟದ್ದನ್ನು ಓದಿ ಅರ್ಥಮಾಡಿಕೊಳ್ಳುವಲ್ಲಿ ಅಸಮರ್ಥರು; ಕೇವಲ ೧/೫ರಷ್ಟು ಮಂದಿ ಉದ್ದಿಷ್ಟ ಪ್ರಬಂಧವನ್ನು ರಚಿಸಬಲ್ಲರು; ಹಾಗೂ ಕೇವಲ ೧/೩ ರಷ್ಟು ಮಂದಿ ಹಲವು ಹಂತಗಳನ್ನೊಳಗೊಂಡ ಗಣಿತದ ಲೆಕ್ಕವನ್ನು ಪರಿಹರಿಸಬಲ್ಲರು”.

ಇತಿಹಾಸ, ವಿಜ್ಞಾನ, ತಂತ್ರಜ್ಞಾನ ಮತ್ತಿತರ ವಿಷಯಗಳ ಅಧ್ಯಯನಕ್ಕೆ ವಿಮರ್ಶಾತ್ಮಕ ಚಿಂತನೆ ಒಂದು ಸಾಧನ. ಇದನ್ನು- ‘ಗ್ರಹಿಕೆಯ ಕೌಶಲ’ (ಜಾಣ್ಮೆ) ಹಾಗೂ ‘ಈ ಕೌಶಲವನ್ನು ದಿನನಿತ್ಯದಲ್ಲಿ ಅಳವಡಿಸುವಿಕೆ’ ಎಂದು ೨ ಗುಂಪಾಗಿ ವಿಭಜಿಸಬಹುದು. ಅಷ್ಟೇ ಅಲ್ಲ, ಈ ವಿಮರ್ಶಾತ್ಮಕ ಚಿಂತನೆಯು ರಾಷ್ಟ್ರೀಯ ಹಾಗೂ ಅಂತರ್ರಾಷ್ಟ್ರೀಯ ಸಮಸ್ಯೆಗಳನ್ನು ಸಂಬೋಧಿಸಿ ಪರಿಹರಿಸುವಲ್ಲಿ ಸಹಾಯಕವಾಗುತ್ತದೆ.

ವಿಮರ್ಶಾತ್ಮಕ ಚಿಂತಕ ಯಾರು?

ಝೆರಾಲ್ಡ್ ನೋಸಿಚ್ನ ಪ್ರಕಾರ- “ತನ್ನ ನಂಬಿಕೆ ಹಾಗೂ ವಿಚಾರಗಳ ಕುರಿತಾಗಿ ಅಷ್ಟೇ ಅಲ್ಲದೆ, ಅದಕ್ಕೆ ವಿರುದ್ಧವಾದ ವಿಚಾರಧಾರೆಯ ಕುರಿತಾಗಿಯೂ ವಿಮರ್ಶಾತ್ಮಕವಾಗಿ ಹಾಗೂ ಸಮಂಜಸವಾಗಿ ಆಲೋಚಿಸಬಲ್ಲವನು ವಿಮರ್ಶಾತ್ಮಕ ಚಿಂತಕ ಎನಿಸಿಕೊಳ್ಳುತ್ತಾನೆ”. ವಿಮರ್ಶಾತ್ಮಕ ವ್ಯಕ್ತಿಗಳು ದುಡುಕಿ ನಡೆಯುವುದಿಲ್ಲ. ಜಾಗರೂಕತೆಯಿಂದ ನಿರ್ಣಯಗಳನ್ನು ತೆಗೆದುಕೊಳ್ಳುತ್ತಾರೆ.


ವಿಮರ್ಶಾತ್ಮಕ ಚಿಂತಕನ ಗುಣ-ಲಕ್ಷಣಗಳು:
 
 • ಪ್ರಶ್ನೆ ಕೇಳುವುದು.
 • ಸಮಸ್ಯೆಯನ್ನು ಗುರುತಿಸಿ ವಿಸ್ತಾರವಾಗಿ ಬಿಡಿಸುವುದು.
 • ಸಾಕ್ಷಿಗಳನ್ನು ಸಂಗ್ರಹಿಸಿ ಅಧ್ಯಯನ ಮಾಡುವುದು.
 • ಅನಿಸಿಕೆಗಳನ್ನು ಹಾಗೂ ಪಕ್ಷಪಾತಗಳನ್ನು ಗಮನಿಸಿ ವಿಮರ್ಶಿಸುವುದು.
 • ಭಾವುಕತೆಗೆ ಬಲಿಯಾಗದಿರುವುದು ಹಾಗೂ ಕ್ಷುಲ್ಲಕ ವಿಚಾರಗಳಿಂದ ದೂರವಿರುವುದು.
 • ಇತರರ ಅಭಿಪ್ರಾಯಗಳನ್ನು ಪರಿಗಣಿಸಿ ಸಂಧಿಗ್ಧತೆಗಳನ್ನು ತಾಳ್ಮೆಯಿಂದ ಕಾಣುವುದು.

ವಿಮರ್ಶಾತ್ಮಕ ಚಿಂತನೆ Vs ಸೃಜನಾತ್ಮಕ ಚಿಂತನೆ:

ಸೃಜನಶೀಲ ಚಿಂತನೆ ವಿಭಿನ್ನ ರೀತಿಯಲ್ಲಿ ಆಲೋಚಿಸಿ ಹೊಸ ಆಯಾಮಗಳನ್ನು ಸೃಷ್ಟಿಸುವತ್ತ ಕೇಂದ್ರೀಕೃತವಾಗಿರುತ್ತದೆ. ಇದು ಮೂಲತಃ ‘ವಿಭಿನ್ನ ಶೈಲಿಯ ಆಲೋಚನೆ’ ಎನ್ನಬಹುದು. ಆದರೆ ವಿಮರ್ಶಾತ್ಮಕ ಚಿಂತನೆ ತರ್ಕವುಳ್ಳದ್ದು.

ಒಂದು ಉದಾಹರಣೆಯನ್ನು ಗಮನಿಸೋಣ:

ನೀವು ಒಂದು ಮನೆಗೆ ಹಾಲನ್ನು ಮಾರಲು ಹೋಗುತ್ತೀರಿ. ನಿಮ್ಮ ಬಳಿ ೩ ಮತ್ತು ೫ ಲೀಟರ್ನ ಎರಡು ಹಾಲಿನ ಕ್ಯಾನ್ ಗಳಿವೆ. ೫ ಲೀಟರ್ ಹಿಡಿಯುವ ಕ್ಯಾನ್ ಭರ್ತಿಯಾಗಿದೆ. ೩ ಲೀಟರ್ ಕ್ಯಾನ್ ಖಾಲಿ ಇದೆ. ಗಿರಾಕಿಯ ಹತ್ತಿರ ೮ ಲೀಟರ್ ಹಿಡಿಯುವಷ್ಟು ಇನ್ನೊಂದು ದೊಡ್ಡ ಪಾತ್ರೆಯಿದೆ. ಗಿರಾಕಿಯು ಕೇವಲ ೪ ಲೀಟರ್ ಮಾತ್ರ ಕೇಳುತ್ತಾನೆ. ನಿಮ್ಮ ಬಳಿ ಅಳೆಯುವ ಬೇರಾವ ಸಾಧನಗಳೂ ಇಲ್ಲ. ಗಿರಾಕಿಗೆ ಈ ಮೂರು ಪಾತ್ರೆಗಳನ್ನು ಉಪಯೋಗಿಸಿ ಕೇವಲ ೪ ಲೀಟರ್ ಹೇಗೆ ಕೊಡುವಿರಿ? 

 

  

 

ಇಂಥ ಸಮಸ್ಯೆಗಳಿಗೆ ಅನೇಕ ಪರಿಹಾರಗಳು ಇರುತ್ತವೆ. ಒಂದು ವಿಮರ್ಶಾತ್ಮಕ ಪರಿಹಾರವನ್ನು ಹೀಗೆ ಮಾಡಲಾಯಿತು – ಅವನು ೨ ಲೀಟರ್ ಹಾಲನ್ನು ದೊಡ್ಡ ಪಾತ್ರೆಗೆ ಸುರಿಯಬಹುದು (೩ ಲೀಟರನ್ನು A ಕ್ಯಾನ್ನಲ್ಲಿ ಮತ್ತು ೨ ಲೀಟರನ್ನು ದೊಡ್ಡ ಪಾತ್ರೆಯಲ್ಲಿ). B ಕ್ಯಾನ್ನಲ್ಲಿರುವ ಉಳಿದ ೩ ಲೀಟರನ್ನು ಖಾಲಿಯಿರುವ A ಕ್ಯಾನ್ನಲ್ಲಿ ಪುನಃ ಸುರಿಯಬೇಕು. A ಕ್ಯಾನ್ನಲ್ಲೀಗ ೩ ಲೀಟರ್ ಹಾಲು ಹಾಗೂ ೨ ಲೀಟರ್ ಹಾಲು ಹಿಡಿಸುವಷ್ಟು ಜಾಗ ಇದೆ. ಅಲ್ಲವೆ? ಈಗ ಖಾಲಿಯಾದ B ಕ್ಯಾನನ್ನು A ಕ್ಯಾನ್ನೊಳಗೆ ತಲೆಕೆಳಗಾಗಿ ಮುಳುಗಿಸಿ ತಳ್ಳಿರಿ. B ಕ್ಯಾನ್ನಲ್ಲಿರುವ ಗಾಳಿ ೧ ಲೀಟರ್ ಹಾಲನ್ನು ಆಚೆಗೆ ತಳ್ಳುತ್ತದೆ. ಈಗ ಅಲ್ಲಿ ೨ ಲೀಟರ್ ಹಾಲು ಉಳಿದಿದೆ. ಈಗಾಗಲೇ ೨ ಲೀಟರ್ ಹಾಲಿರುವ ದೊಡ್ಡ ಪಾತ್ರೆಯಲ್ಲಿ ಈ ಹಾಲನ್ನು ಹಾಕಿರಿ. ಸಮಸ್ಯೆ ಬಗೆಹರಿಯಿತಷ್ಟೆ?

ಇದಕ್ಕೆ ಸೃಜನಾತ್ಮಕ ಪರಿಹಾರವನ್ನು ಹೀಗೂ ಮಾಡಬಹುದು

ಹಾಲಿನವನ ಬಳಿ ಬೇರೆ ಪಾತ್ರೆಯಿಲ್ಲವಾದ್ದರಿಂದ ಅವನು ೫ ಲೀಟರ್ ನಿಂದ ೨ ಲೀಟರನ್ನು ದೊಡ್ಡ ಪಾತ್ರೆಗೆ ಸುರಿದು ಸ್ವಲ್ಪ ಕಾಲ ಬಿಡುತ್ತಾನೆ. ಈಗ A ಕ್ಯಾನ್ ನಲ್ಲಿ ೩ ಲೀಟರ‍್ಗಳಿವೆ. B ಕ್ಯಾನ್ ಖಾಲಿ ಮತ್ತು ದೊಡ್ಡ ಪಾತ್ರೆಯಲ್ಲಿ ೨ ಲೀಟರ್ ಹಾಲಿದೆ. ಹಾಲಿನ ಒಂದು ಗುಣವೇನೆಂದರೆ ಅದು ಪಾತ್ರೆಯಲ್ಲಿ ಗುರುತು ಬಿಡುತ್ತದೆ (ಸ್ವಲ್ಪ ಕಾಲ ಬಿಟ್ಟಿದ್ದರಿಂದ). ಆಗ ಅವನು A ಕ್ಯಾನ್ನ್ನು ಬಳಸಿ ದೊಡ್ಡ ಪಾತ್ರೆಯಿಂದ B ಕ್ಯಾನ್ಗೆ ಹಾಲಿನ ಗುರುತಿನವರೆಗೂ ನಿಧಾನವಾಗಿ ಸುರಿಯುತ್ತಾನೆ. ಮತ್ತೆ ೨ ಲೀಟರನ್ನು B ಕ್ಯಾನ್ನಿಂದ ಸುರಿದಾಗ ದೊಡ್ಡ ಪಾತ್ರೆಯಲ್ಲೀಗ ೪ ಲೀಟರ್ ಹಾಲಿರುತ್ತದೆ!

ಇದೀಗ ನೀವೂ ಕೂಡ ವಿಮರ್ಶಾತ್ಮಕವಾಗಿಯೂ, ಸೃಜನಾತ್ಮಕವಾಗಿಯೂ ಆಲೋಚಿಸುತ್ತಿರುವಿರಲ್ಲ—!

ವಿಮರ್ಶಾತ್ಮಕ ಚಿಂತನೆಯ ಸಂದರ್ಭಗಳು :

೧. ಒಂದು ದಿನ ರಾತ್ರಿ ನಮ್ಮ ಚಿಕ್ಕಪ್ಪ ಒಂದು ದೊಡ್ಡ ಕಥೆಯನ್ನು ಹೇಳಲು ಪ್ರಾರಂಭಿಸಿದರು- “ಒಬ್ಬ ಪೂಜಾರಿ ಪೂಜೆಯ ಸಮಾರಂಭದಲ್ಲಿ ನಿದ್ದೆ ಹೋಗುತ್ತಿದ್ದ. ಹಾಗೇ ಒಂದು ಭಾನುವಾರ, ನಿದ್ರೆಯಲ್ಲಿರುವಾಗ…….‘ತಾನು ಭಾರತದ ಸ್ವಾತಂತ್ರ್ಯದ ಸಂಗ್ರಾಮದಲ್ಲಿ ಭಾಗವಹಿಸಿದ’ ಹಾಗೆ ಕನಸು ಕಂಡ. ಆ ಕನಸಿನಲ್ಲಿ ಅವನು ‘ಮರಣದಂಡನೆಗೆ ಕಾಯುತ್ತಿರುವ ಕ್ರಾಂತಿಕಾರಿಯಾಗಿದ್ದ. ಅವನ ತಲೆಯನ್ನು ನೇಣು ಹಗ್ಗದ ಕುಣಿಕೆಯಲ್ಲಿ ತೂರಿಸಿದ್ದರು. ಆಗ ಕೆಳಗೆ ಆಸರೆಗೆ ಇಟ್ಟ ಮರದ ತುಂಡನ್ನು ಸರಿಸಿಬಿಟ್ಟರು. ಇನ್ನೇನು ಹಗ್ಗದಲ್ಲಿ ಅವನ ದೇಹ ಜೋತಾಡಬೇಕು——’, ಅಷ್ಟರಲ್ಲಿ ಪೂಜಾರಿಯ ಹೆಂಡತಿ ಗಾಢ ನಿದ್ರೆಯಲ್ಲಿದ್ದ ಅವನನ್ನು ಎಬ್ಬಿಸಲು ಒಂದು ಚಿಕ್ಕ ಸೂಜಿಯಿಂದ ಅವನ ಕತ್ತಿನ ಹಿಂಭಾಗವನ್ನು ಸ್ಪರ್ಶಿಸಿದಳು. ಗಾಬರಿಗೊಂಡ ಪೂಜಾರಿ ಎದ್ದು ಕುಳಿತ.  ಕೆಲವೇ ಕ್ಷಣಗಳಲ್ಲಿ ಹೃದಯಾಘಾತವಾಗಿ ಸತ್ತೇ ಹೋದ!” ನನ್ನ ಚಿಕ್ಕಪ್ಪ ಹೇಳಿದ ಕಥೆಯು ಸತ್ಯವೋ ಅಥವಾ ಸುಳ್ಳೋ – ನಿಮ್ಮ ಉತ್ತರವನ್ನು ಸಮರ್ಥಿಸಿ.

 

 
 
 

೨.ಕಲ್ಪಿಸಿಕೊಳ್ಳಿ – ನೀವು ಕೇವಲ ಅರ್ಧ ಇಂಚು ಎತ್ತರ ಮತ್ತು ೨೫೦ ಗ್ರಾಂ ಭಾರ ಇದ್ದೀರಿ. ನೀವು ತೋಟದಲ್ಲಿ ಅಡ್ಡಾಡುವಾಗ ಒಂದು ಗುಲಾಬಿ ಗಿಡದ ಬಳಿ ಬಂದಿದ್ದೀರಿ. ಸುಂದರವಾದ ಕೆಂಪು ಗುಲಾಬಿ ಹೂವು ಮನಮೋಹಕವಾಗಿ ಅರಳಿದೆ. ಅದನ್ನು ಕೀಳುವ ಆಸೆ ನಿಮಗೆ. ಈ ಕಾರ್ಯದಲ್ಲಿ ಯಶಸ್ವಿಯಾಗಲು ನೀವು ಏನು ಮಾಡಬಲ್ಲಿರಿ?

 
 
ವಿಮರ್ಶಾತ್ಮಕ ಆಲೋಚನೆಯ ಮಾದರಿಗಳು:
ವಿಮರ್ಶಾತ್ಮಕ ಚಿಂತನೆಯ ಮೂಲತತ್ತ್ವ ಸಾಕ್ರೆಟೀಸ್ನ ‘ಪ್ರಶ್ನೆ ಪದ್ಧತಿ’ಯೇ ಆಗಿದೆ. ಈ ಪದ್ಧತಿ ವಿಮರ್ಶಾತ್ಮಕ ಚಿಂತನೆಯನ್ನು ಬೆಳೆಸುತ್ತದೆ. ಸಾಕ್ರೆಟೀಸ್ನ ಪ್ರಶ್ನೆಗಳು ಸವಾಲುಗಳನ್ನು ಬಿಡಿಸುವಾಗ ಸಂಪೂರ್ಣವಾಗಿಯೂ ಅಚ್ಚುಕಟ್ಟಾದ ಕ್ರಮದಲ್ಲೂ ಬಿಡಿಸಿ ಧ್ಯೇಯವನ್ನು ಮುಟ್ಟಲು ಸಹಾಯ ಮಾಡುತ್ತವೆ.
  
  

ವಿಮರ್ಶಾತ್ಮಕ ಚಿಂತನೆಪ್ರಶ್ನೆಗಳಮೂಲಕ ಮುನ್ನಡೆಯುತ್ತವೆ.

ವಿಮರ್ಶಾತ್ಮಕ ಚಿಂತನೆ ‘ಉತ್ತರ’ಗಳಿಂದ ಮುಂದುವರೆಯುವುದಿಲ್ಲ, ಬದಲಾಗಿ, ‘ಪ್ರಶ್ನೆ’ಗಳಿಂದ ಮುಂದುವರೆಯುತ್ತದೆ. ಯಾವುದೇ ಕ್ಷೇತ್ರವನ್ನು ತೆಗೆದುಕೊಳ್ಳಿ, ಅಲ್ಲಿನ ಮೂಲಭೂತ ವಿಚಾರಗಳನ್ನು ಮಂಡಿಸುವ ಸಾಧಕರು ಪ್ರಶ್ನೆಗಳನ್ನೇ ಹಾಕದೇ ಹೋಗಿದ್ದರೆ, ಆ ಕ್ಷೇತ್ರದಲ್ಲಿ ಹೆಚ್ಚಾಗಿ ಸಾಧನೆಗಳಾಗಲಿ ಮುನ್ನಡೆಗಳಾಗಲಿ ಆಗುತ್ತಲೇ ಇರಲಿಲ್ಲ ಎನ್ನುವುದು ಖಂಡಿತ. ಯಾವುದೇ ಕ್ಷೇತ್ರವು ಪ್ರಗತಿಯನ್ನು ಕಾಣಬೇಕಾದರೆ ಅಲ್ಲಿ ಹೊಸ ಹೊಸ ಪ್ರಶ್ನೆಗಳು ಉದ್ಭವಿಸಿದ್ದು ಅದೇ ಮುಂದಿನ ಗಂಭೀರ ಆಲೋಚನೆ ಹಾಗೂ ಪ್ರಯತ್ನಗಳಿಗೆ ಮೂಲ ಪ್ರಚೋದನೆಯನ್ನು ಉಂಟುಮಾಡುತ್ತವೆ. ಆಲೋಚನೆ/ಪುನರಾಲೋಚನೆಗಳನ್ನು ಮಾಡಲು ಚಿಂತನೆಯನ್ನು ಪ್ರಚೋದಿಸುವಂತಹ ಪ್ರಶ್ನೆಗಳನ್ನು ಹಾಕಬೇಕು. ಇಂತಹ ಉತ್ತಮ ಪ್ರಶ್ನೆಗಳು ಇನ್ನೆಷ್ಟೋ ಉತ್ತಮ ಪ್ರಶ್ನೆಗಳಿಗೆ ಎಡೆ ಮಾಡಿಕೊಡುತ್ತವೆ.

ವಾಟ್ಸನ್ಗ್ಲೇಸರ್ನ R-E-D ಮಾದರಿ

೧.         R-Recognise assumptions (ಅನಿಸಿಕೆಗಳನ್ನು ಗುರುತಿಸಿ)
೨.         E-Evaluate arguments (ಚರ್ಚೆಯ ಮೌಲ್ಯಮಾಪನ ಮಾಡಿ)
೩.         D-Draw conclusions (ನಿರ್ಣಯ ತೆಗೆದುಕೊಳ್ಳಿ)

ವಿಮರ್ಶಾತ್ಮಕ ಚಿಂತನೆಯ ಹಂತಗಳು:

ವಿಮರ್ಶಾತ್ಮಕ ಚಿಂತನೆಗಳನ್ನು ಪ್ರಯೋಗಿಸಲು ಕೆಲವು ಚಟುವಟಿಕೆಗಳು:

. ಸ್ವಲ್ಪ ಕಾಲದ ಹಿಂದೆ ಆದ ‘ಆರ್ಥಿಕ ಹಿನ್ನಡೆ’ (economic recession) ಎಲ್ಲಾ ಕ್ಷೇತ್ರಗಳಲ್ಲೂ ಸಾಕಷ್ಟು ಪ್ರಭಾವ ಬೀರಿ ಜೀವನವನ್ನು ಅಸ್ತವ್ಯಸ್ತಗೊಳಿಸಿತು. ಆ ಕುರಿತಾಗಿ ವಿಮರ್ಶಾತ್ಮಕ ವಿವರಣೆಯನ್ನು ಬರೆಯಿರಿ.

—————————————————————————————-

—————————————————————————————-

—————————————————————————————-

—————————————————————————————-

. ಆತಂಕವಾದವು ಇವತ್ತಿನ ಜಗತ್ತನ್ನು ಆವರಿಸುತ್ತಿದೆ. ಈ ವಿಧ್ವಂಸಕಕಾರ್ಯವನ್ನು ತಡೆಗಟ್ಟುವಲ್ಲಿ ನೀವೇನು ಪಾತ್ರವಹಿಸಬಲ್ಲಿರಿ?

—————————————————————————————-

—————————————————————————————-

—————————————————————————————-

—————————————————————————————-

. ಭೂಮಿಯ ಉಷ್ಣತೆ ಹೆಚ್ಚುತ್ತಿದೆ. ಇದನ್ನು ತಡೆಗಟ್ಟುವಲ್ಲಿ ನೀವೇನು ಮಾಡಬಲ್ಲಿರಿ?

—————————————————————————————-

—————————————————————————————-

—————————————————————————————-

—————————————————————————————-

ಕೇವಲ ಮನಸ್ಸಿನಿಂದ ವಿಮರ್ಶಾತ್ಮಕ ಚಿಂತನೆ ಮಾಡಲು ಸಾಧ್ಯವಿಲ್ಲ ಎಂದು ಕೆಲವರ ಅಭಿಪ್ರಾಯ. ಕೆಲವರು ಬುದ್ಧಿ ಮತ್ತು ಮನಸ್ಸನ್ನು ಒಳಗೊಂಡ ಅನೇಕ ವಿಮರ್ಶಾತ್ಮಕವಾದ ನಿರ್ಣಯಗಳನ್ನು ಕೆಲವೊಮ್ಮೆ ತೆಗೆದುಕೊಳ್ಳುವುದೂ ಉಂಟು.

ಪ್ರಾರಂಭದಲ್ಲಿ ಕೊಟ್ಟ ಸಮಸ್ಯೆಗಳಿಗೆ ಪರಿಹಾರ:

ಗ್ರಂಥ ಸಲಹೆ:

Critical Thinking Skills, Developing Effective Analysis and Argument, Stella Cottrell, Palcrave Macmillan 
 

ಅಂತರ್ಜಾಲ ಮೂಲ:

http://www.criticalthinking.com

http://www.freeinquiry.com