Categories
ಪತ್ರಿಕೋದ್ಯಮ ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ

ಕಲ್ಲೇ ಶಿವೋತ್ತಮ ರಾವ್

ನಾಡಿನ ಹಿರಿಯ ಪತ್ರಕರ್ತರಲ್ಲಿ ಒಬ್ಬರಾಗಿರುವ ಕಲ್ಲೇ ಶಿವೋತ್ತಮರಾವ್ ಅವರು ಪ್ರಜಾವಾಣಿ ಸಂಯುಕ್ತ ಕರ್ನಾಟಕ ವಿಶಾಲ ಕರ್ನಾಟಕ ಪತ್ರಿಕೆಗಳ ಸಂಪಾದಕ ವರ್ಗದ ನೇತೃತ್ವ ವಹಿಸಿ ಕಾರ್ಯ ನಿರ್ವಹಿಸಿದ್ದಾರೆ.
ಹಿಂದೂ ದೈನಿಕದ ಹಂಗಾಮಿ ವರದಿಗಾರರಾಗಿ ಹಾಗೂ ಎನ್ಲೈಟ್ ಇಂಗ್ಲಿಷ್ ವಾರಪತ್ರಿಕೆಯ ಕರ್ನಾಟಕ ಬ್ಯೂರೋ ಚೀಫ್ ಆಗಿ ಕೆಲಸ ಮಾಡಿದ ಅನುಭವ ಇರುವ ಕಲ್ಲೇ ಶಿವೋತ್ತಮರಾವ್ ಅವರು ಪತ್ರಿಕಾ ಲೋಕದ ದಿಗ್ಗಜರಲ್ಲೊಬ್ಬರಾದ ಬಿ.ಎನ್.ಗುಪ್ತಾ ಅವರ ಸಂಪಾದಕತ್ವದ ಜನಪ್ರಗತಿ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾಗಿ ನಂತರ ಸಂಪಾದಕ ಹಾಗೂ ಮುದ್ರಕರಾಗಿ ಒಟ್ಟು ಹದಿನಾಲ್ಕು ವರ್ಷಗಳ ಕಾಲ ಸೇವೆ ಸಲ್ಲಿಸಿದರು.
ಸಾಹಿತ್ಯದ ವಿವಿಧ ಪ್ರಾಕಾರಗಳಲ್ಲಿ ಕೈ ಆಡಿಸಿರುವ ಕಲ್ಲೇ ಶಿವೋತ್ತಮರಾವ್ ಪ್ರಜಾವಾಣಿ ಪತ್ರಿಕೆಯ ಅಂಕಣಕಾರರಾಗಿ ವಿಶ್ವದ ವಿದ್ಯಮಾನಗಳನ್ನು ವಿಶ್ಲೇಷಿಸುವ ಕಾರ್ಯವನ್ನು ಹೊತ್ತುಕೊಂಡಿದ್ದರು. ಕನ್ನಡ ಹಾಗೂ ಆಂಗ್ಲ ಭಾಷೆಗಳಲ್ಲಿ ಪ್ರೌಢ ಪ್ರಭುತ್ವ ಹೊಂದಿರುವ ಕಲ್ಲೇ ಶಿವೋತ್ತಮ ರಾವ್ ತಮ್ಮ ಹದಿನಾಲ್ಕನೆಯ ವಯಸ್ಸಿನಿಂದ ಪತ್ರಿಕೋದ್ಯಮದ ಒಡನಾಟದಲ್ಲಿರುವವರು.