ನಾನು ಬಲ್ಬು, ನೀನು ಸ್ವಿಚ್ಚು
ನಿನ್ನಿಂದಲೆ ನನಗೆ ಕೆಚ್ಚು
ಇಲ್ಲದಿರಲು ಇದರೊಳೇನು ?
ಬರಿಯ ಗಾಜು ಬುರುಡೆಯು !

ನನಗು ನಿನಗು ಮೀರಿದೊಂದು
ಮೂಲ ಶಕ್ತಿ ಒಳಗೆ ನಿಂದು
ಬೆಳಕ ತುಳುಕದಿರಲು, ನಮ್ಮ
ಬಾಳು ಬರಿಯ ಶೂನ್ಯವು !