ಪಲ್ಲವಿ : ಕಸ್ತೂರಿ ತಿಲಕ ತಿದ್ದುವೆ ಕಾಲಿಗೆ ಗೆಜ್ಜೆ ಕಟ್ಟುವೆ
ಕಾಶೀ ಪೀತಾಂಬರ ಕೊಡುವೆ ಕಣ್ಣಿಗೆ ಕಾಡಿಗೆ ಹಚ್ಚುವೆ

ಚರಣ :  ನೊರೆಯ ಹಾಲನ್ನು ಕೊಡುವೆ ಓಡೋಡಿ ಬಾರೋ ಕೃಷ್ಣ
ಅಪ್ಪಿಕೊಳ್ಳುವೆ ನಿನ್ನ ಮುದ್ದನ್ನು ಕೊಡುವೆ ಕೃಷ್ಣಾ       

ಕಡೆದ ಬೆಣ್ಣೆಯ ಕೊಡುವೆ ಹಾಲಿನ ಕೆನೆಯ ಕೊಡುವೆ
ನವಿಲಿನ ಪುಕ್ಕ ಕೊಡುವೆ ಮುತ್ತಿನ ಹಾರ ಹಾಕುವೆ

ಎತ್ತಿಕೊಳ್ಳುವೆ ನಿನ್ನ ಸುತ್ತಾಡಿಸುವೆ ನಿನ್ನ
ನಾ ನಿನ್ನ ಬಿಡಲಾರೆ ಬಾರೋ ನನ್ನಯ ಕೃಷ್ಣ

ಜನುಮ ಜನುಮದಲ್ಲಿ ನೀನೆ ನನ್ನಯ ಜೀವ
ಜಲಜಾಕ್ಷನು ನೀನೇ ಜಗನ್ಮೋಹನ ಕೃಷ್ಣ

ಜಡವನ್ನು ಹರಿಸುವ ಜಗದೀಶ ನೀನೆ ಸ್ವಾಮಿ
ಜಯವನ್ನು ಹೇಳುವೆನು ಜಯಲಕ್ಷ್ಮಿ ಒಲಿವಳು