ನಾಟಕವೊಂದು ಒಂದು ಮುದ್ರಣ ಕಾಣುವುದೇ ಪುಣ್ಯ ಎನ್ನುವಂತಹ ಸ್ಥಿತಿಯಲ್ಲಿ ನನ್ನ ನಾಟಕಗಳು ಹಲವಾರು ಮುದ್ರಣ ಕಂಡಿರುವುದು ನನ್ನ ಭಾಗ್ಯ ಎಂದೇ ಭಾವಿಸುತ್ತೇನೆ.

ಈಗ ಮರುಮುದ್ರಣ ಕಾಣುತ್ತಿರುವ ’ಕಾಡು ಕುದುರೆ’ ನನ್ನ ಜನಪ್ರಿಯ ನಾಟಕಗಳಲ್ಲೊಂದು. ಚಲನಚಿತ್ರವಾಗಿಯೂ ಪ್ರಸಿದ್ಧವಾದ ನಾಟಕವಿದು. ’ಕಾಡು ಕುದುರೆ’ ಶೀರ್ಷಿಕೆ ಗೀತೆಗಾಗಿ ರಾಷ್ಟ್ರಪ್ರಶಸ್ತಿ ಗಳಿಸಿಕೊಂಡಿತ್ತು. ಈಗ ನಾಲ್ಕನೆಯ ಮುದ್ರಣ ಕಾಣುತ್ತಿದೆ.

ಶ್ರೀ ಭೈರಮಂಗಲ ರಾಮೇಗೌಡ ಅವರು ಈ ನಾಟಕ ಕುರಿತು ಹಿಂದಿನ ಮುದ್ರಣಕ್ಕೆ ಬರೆದಿರುವ ಮಾತುಗಳನ್ನು ಇಲ್ಲಿಯೂ ಉಳಿಸಿಕೊಳ್ಳಲಾಗಿದೆ. ಮುನ್ನುಡಿ ಬರೆದ ಶ್ರೀ ಬೈರಮಂಗಲ ರಾಮೇಗೌಡ ಅವರಿಗೆ;

ಮುಖಪುಟ ಚಿತ್ರ ರಚಿಸಿದ ಶ್ರೀ ಚಂದ್ರಕಾಂತ ಕುಸನೂರು ಅವರಿಗೆ;

ಈ ನಾಟಕವನ್ನು ಮುದ್ರಿಸಿದ ಸ್ವ್ಯಾನ್ ಪ್ರಿಂಟರ್ಸ್‌ ಅವರಿಗೆ ಮತ್ತು ಪ್ರಕಟಿಸಿದ ಪ್ರಕಾಶ್ ಕಂಬತ್ತಳ್ಳಿ ದಂಪತಿಗಳಿಗೆ;

ನನ್ನ ನಾಟಕಗಳನ್ನು ಓದಿ, ನೋಡಿ ಮೆಚ್ಚಿದ ಪ್ರೇಕ್ಷಕರಿಗೆ, ಆಡಿದ ರಂಗ ತಂಡಗಳಿಗೆ;

ನನ್ನ ಸಮಸ್ಕಾರಗಳು ಸಲ್ಲುತ್ತವೆ.

ಚಂದ್ರಶೇಖರ ಕಂಬಾರ