ರಂಗಭೂಮಿ : ಉತ್ತರ ಕರ್ನಾಟಕದ ಹಳ್ಳಿಯ ಗೌಡರ ಮನೆ. ರಂಗದ ತೀರ ಮುಂಭಾಗದಲ್ಲಿ ಪ್ರೇಕ್ಷಕರ ಬಲಗಡೆ ಒಂದು ರೂಮು. ಅದರಲ್ಲೊಂದು ಮಂಚ. ನೇತುಹಾಕಿದ ಸೀರೆಗಳು, ಗೋಡೆಗೊಂದು ಕನ್ನಡಿ ಇದೆ. ಎಡಬದಿಗೊಂದು ಕಿಡಿಕಿಯಿದ್ದು ಹೊರಗಿನ ಬೆಳಕು ಆ ಮೂಲಕವೇ ಬರಬೇಕು. ಇದೇ ಚಂಪಿಯ ಕೋಣೆ. ಪ್ರೇಕ್ಷಕರ ಎಡಭಾಗದಲ್ಲಿ ಪಾರೋತಿಯ ಕೋಣೆ ತುಸು ಹಿಂಭಾಗಕ್ಕಿದೆ. ಬಾಗಿಲು ಚಂಪಿಯ ರೂಮಿನ ಕಡೆಗಿದೆ. ಕಿಡಿಕಿಯನ್ನು ಮುಚ್ಚಿರುವುದರಿಂದ ಬೆಳಕು ಅಷ್ಟಾಗಿ ಬರುವುದಿಲ್ಲ. ಈಕೋಣೆಯ ಈಚೆಯಿಂದ ಎಡಕ್ಕೆ ಹೋದರೆ, ರಂಗ ಮುಗಿಯುವಲ್ಲಿ ತೊಲೆ ಬಾಗಿಲಿದೆ. ಹೊರಗಿನವರು ಬರುವುದೂ, ಬಂದವರು ಹೊರಕ್ಕೆ ಹೋಗುವುದೂ ಇಲ್ಲಿಂದಲೇ. ಈ ಎರಡೂ ರೂಮುಗಳ ಮಧ್ಯೆ ಪಡಸಾಲೆಯಿದೆ. ಅಲ್ಲಿಯೇ ಗೌಡ್ತಿಯ ಮಂಚವಿದೆ. ಅದರ ಹಿಂಭಾಗದ ಗೋಡೆಯ ಮೇಲೆ ಒಂದು ಬಂದೂಕು ತೂಗುಹಾಕಲಾಗಿದೆ. ಪಡಸಾಲೆಯ ಬೆನ್ನಿಗೆ ಅಡಿಗೆಮನೆಯ ಬಾಗಿಲಿದೆ. ಪಡಸಾಲೆಯ ಬಲಬದಿಗೆ, ಪಾರೋತಿಯ ಕೋಣೆಯ ಹಿಂದೆ ಮೆಟ್ಟಿಲಿದ್ದು ಮೇಲ್ಗಡೆ ಒಂದು ಕೋಣೆಯಿದೆ. ಕೋಣೆಯ ಮುಂದೊಂದು ಕಾರಿಡಾರ್ ಇದ್ದು, ಅಲ್ಲಿ ನಿಂತರೆ ಹೊರಗಿನ ರಸ್ತೆಯಲ್ಲಿಯ ವಿದ್ಯಮಾನಗಳು ಕಾಣಿಸುತ್ತವೆ. ಬಾಗಿಲು ಪ್ರೇಕ್ಷಕರ ಬಲದಿಕ್ಕಿಗಿರುವುದರಿಂದ ಅದು ಕಾಣಿಸುವುದಿಲ್ಲ. ಇದು ಶೀಲಕ್ಕನ ಕೋನೆ.

ರಂಗವಿನ್ಯಾಸವನ್ನು ಕೊನೆಯಲ್ಲಿ ಕೊಡಲಾಗಿದೆ.