ಸವತಿಯರೆಂಬರಲ್ತೆ ಮುಳಿಸಿಂಗುರು ಕಾರಣಮಿನ್ನವಪ್ಪ ಬ
ನ್ನವನವರಾರೊ ಸೈರಿಸುವರಿನ್ನೆವರಂ ಪೆಱತಾದೊಡಾಗಳೇ
ತವೆ ಜವದಿಂದೆ ಕಿಚ್ಚುವೊಗಲಣ್ಮದೆ ನಂಜುದಿನಲ್ಕೊಡರ್ಚದಿ
ರ್ಕುವೆ ಪೆಱತೇನೊ ಭಾವಿಸುವೊಡಿಂತಿದಱಂ ಪಿರಿದಪ್ಪ ಲಾಘವಂ          ೮೯

ವ|| ಅಂತುಮಲ್ಲದೆಯುಂ

ಇಂತಪ್ಪಪರಾಧಂಗೆ
ಯ್ದುಂ ತಾನಲ್ಲದವೊಲೆಸೆವುದೀ ಶುಕನೊಳ್ ಮ
ತ್ತಂ ತೊಡರ್ದು ನಿಂದುದಪ್ಪೊಡಿ
ದಂ ತೊಯದೆ ನಿಲಿಸಲಕ್ಕುಮೇ ಸಾರಿಕೆಯಂ             ೯೦

ವ|| ಎಂದು ನುಡಿಯೆ ಪರಿಹಾಸನರಸನ ಮೊಗಮಂ ನೋಡಿ

ಒಳರ್ದೊಡೆ ಪರಿಹಾಸದ ನುಡಿ
ಗಳಿವೆಂಬುದನಱವಳಲ್ತೆ ಸಾರಿಕೆ ಬಲ್ಲಳ್
ಮುಳಿವ ತಿಳಿವೆಡೆಯುಮಂ ಮೇ
ಣೊಳಗಾಗಳ್ ವಕ್ರಭಣಿತಿಗಳ್ಗವನಿಪತೀ         ೯೧

ವ|| ಎಂದು ನುಡಿವುತ್ತಿರ್ಪನ್ನೆಗಮೊರ್ವಂ ಕಂಚುಕಿ ಬಂದು ಗಂಧರ್ವರಾಜನುಂ ಮದಿರಾಮಹಾದೇವಿಯುಂ ನಿಮ್ಮಂ ನೋಡಲುತ್ಕಂಠಿತರಾಗಿ ಕರೆಯಲಟ್ಟಿದರೆಂಬುದುಂ ಮಹಾಶ್ವೇತೆ ಪೋಗಲುದ್ಯೋಗಂಗೆಯ್ದರಸಂಗಿಕ್ಕೆ ದಾಣಮಾವುದೆಂದು ಕಾದಂಬರಿಯಂ ಬೆಸಗೊಳ್ವುದು ಮಾಕೆಯಿಂತೆಂದಳ್

ಮೊದಲೀಯರಸನನಾಂ ಕಾ
ಣ್ಬುದುಮೆನ್ನಯ ತನುವುಮೆನ್ನದಲ್ತೆನೆ ಮನೆಯಾ
ರದು ನೃಪತಿಗೆಲ್ಲಿ ಬಗೆ ಬ
ರ್ಪುದಾವೆಡೆ ಭವನ್ಮನೋಜ್ಞಮಲ್ಲಿಯೆ ನಿಲಿಸಿಂ            ೯೨

ವ|| ಎಂಬುದುಂ ಮಹಾಶ್ವೇತೆ ನಿಜಪ್ರಾಸಾದಸಮೀಪವರ್ತಿಯಪ್ಪ ಪ್ರಮದವನ ಕೇಳೀಶೈಲದ ರತ್ನಭವನದೊಳ ರಸನಿರ್ಕೆಂದು ಪೇೞ್ದು ಚೈತ್ರರಥನಂ ಕಾಣಲ್ಕೆ ಪೋದಳಿತ್ತಲಾ ಕಾಂತೆಯ ಪಿಂತನೆ ಚಂದ್ರಾಪೀಡಂ ವಿನೋದಾರ್ಥಂ ಕಾದಂಬರಿಯ ಬೆಸದಿಂ ಪ್ರತೀಹಾರ ಪ್ರೇಷಿತೆಯರಪ್ಪ ವೀಣಾವೇಣುವಾದ್ಯನಿಪುಣೆಯರುಂ ಗೀತಕಲಾಕುಶಲೆಯರುಂ ದುರೋದರ ಕ್ರೀಡಾರಾಗಿಣಿಯರುಂ ಚಿತ್ರಕರ್ಮಚತುರೆಯರುಂ

ನೋಡದೆ ಕೊಡಬಹುದೆ? ಕಾಳಿಂದಿಯ ಬಗ್ಗೆ ಕಾದಂಬರೀದೇವಿಯು ಪ್ರೀತಿಯಿಲ್ಲದವಳೇ ಆಗಿರಬೇಕು. ೮೯. ಸವತಿಯರೆಂಬವರು ಹೆಂಗಸರಿಗೆ ಕೋಪಕ್ಕೆ ಮುಖ್ಯ ಕಾರಣರು. ಇಂತಹ ಅವಮಾನವನ್ನು ಇದುವರೆಗೂ ಯಾರು ಸಹಿಸಿಕೊಳ್ಳುತ್ತಾರೆ ಬೇರೆ ಪಕ್ಷಿಯಾಗಿದ್ದರೆ ಬಹಳ ಬೇಗನೆ ಅಗ್ನಿಪ್ರವೇಶ ಮಾಡಲು ಹೊರಡುತ್ತಿರಲಿಲ್ಲವೆ? ವಿಷಪಾನ ಮಾಡುವುದಕ್ಕೆ ಪ್ರಯತ್ನಮಾಡುತ್ತಿರಲಿಲ್ಲವೆ? ವಿಚಾರ ಮಾಡಿದರೆ ಹೆಂಗಸರಿಗೆ ಇದಕ್ಕಿಂತಲೂ ಮಿಗಿಲಾದ ಅಗೌರವಕ್ಕೆ ಕಾರಣವು ಬೇರೆ ಏನಿದೆ? ವ|| ಅದಲ್ಲದೆ ೯೦. ಇಂತಹ ಗುರುತರವಾದ ತಪ್ಪನ್ನು ಮಾಡಿದರೂ ಈ ಗಿಳಿಯು ತಾನು ಅಪರಾಯೇ ಅಲ್ಲವೆಂಬಂತೆ ವರ್ತಿಸುತ್ತಿದೆ. ಇಂತಹ ಗಿಳಿಯಲ್ಲಿ ತಿರುಗಿ ಸೇರಿಕೊಂಡುಬಿಟ್ಟರೆ ಆ ಸಾರಿಕೆಯನ್ನು ದೇವಿಯು ತ್ಯಜಿಸದೆ ಇಟ್ಟುಕೊಳ್ಳುವುದು ಸರಿಯೆ?” ವ|| ಎಂದು ಹೇಳಲಾಗಿ ಪರಿಹಾಸಕನು ಚಂದ್ರಾಪೀಡನ ಮುಖವನ್ನು ನೋಡಿ ೯೧. “ಎಲೈ ರಾಜನೆ, ಹರಟಿದರೆ ಇವು ಹಾಸ್ಯದ ಮಾತುಗಳೆಂದು ಈ ಸಾರಿಕೆಯು ತಿಳಿದುಕೊಳ್ಳುತ್ತಾಳೆ. ಕೋಪಿಸಿಕೊಳ್ಳುವ ಹಾಗೂ ಪ್ರಸನ್ನಳಾಗುವ ವಿಷಯ, ಕಾಲ, ದೇಶಗಳನ್ನು ಇವಳೂ ಚೆನ್ನಾಗಿ ತಿಳಿದಿದ್ದಾಳೆ. ಹಾಗೆಯೆ ನಿನ್ನ ಕೊಂಕುನುಡಿಗಳಿಗೆ ಇವಳು ಮಾರುಹೋಗುವವಳಲ್ಲ.” ವ|| ಹೀಗೆ ಹೇಳುತ್ತಿರುವಷ್ಟರಲ್ಲಿ ಒಬ್ಬ ಕಂಚುಕಿಯು ಬಂದು ಗಂಧರ್ವರಾಜನೂ ಮದಿರಾದೇವಿಯರೂ ನಿಮ್ಮನ್ನು ನೋಡಲು ಅಪೇಕ್ಷೆಯುಳ್ಳವರಾಗಿ ಹೇಳಿಕಳುಹಿಸಿದ್ದಾರೆ ಎಂದು ಅರಿಕೆ ಮಾಡಲಾಗಿ ಮಹಾಶ್ವೇತೆಯು ಹೋಗಲು ಪ್ರಯತ್ನಿಸಿ ಈ ಚಂದ್ರಾಪೀಡನಿಗೆ ಎಲ್ಲಿ ಬಿಡಾರವೆಂದು ಕಾದಂಬರಿಯನ್ನು ಕೇಳಲಾಗಿ ಅವಳು ಹೀಗೆ ಹೇಳಿದಳು.

೯೨. ನಾನು ಮಹಾರಾಜನನ್ನು ನೋಡಿದಾರಭ್ಯ ನನ್ನ ದೇಹವೂ ನನ್ನದಲ್ಲ ಎಂದಾಗಿದೆ. ಹೀಗಿರಲು ಈ ಮನೆ ಯಾರದು? ಆ ಅರಸನಿಗೆ ಎಲ್ಲಿ ಇಷ್ಟವೋ ಅಥವಾ ನಿಮಗೆ ಎಲ್ಲಿ ಚೆನ್ನಾಗಿ ಕಾಣುತ್ತದೆಯೊ ಅಲ್ಲೇ ಇರುವಂತೆ ಮಾಡಿ ವ|| ಎಂದು ಹೇಳಲಾಗಿ ಮಹಾಶ್ವೇತೆಯು ನಿನ್ನ ಮಹಲಿನ ಹತ್ತಿರದಲ್ಲಿರುವ ಉದ್ಯಾನವನದಲ್ಲಿ ಕ್ರೀಡಾಪರ್ವತದ ಮಣಿಗೃಹದಲ್ಲಿ ಅರಸನು ಇರಲೆಂದು ಹೇಳಿ

ಸುಭಾಷಿತಪಠಣಪರಿಣತೆಯರುಂ ಎನಿಸಿದ ಕನ್ನಿಕೆಯರೊಡನೆ ಕೇಯೂರಕೋಪದಿಶ್ಯಮಾನಮಾರ್ಗನಾಗಿ ಕೇಳೀಶೈಲಮಣಿಯಮಯಭವನಕ್ಕೆ ಬಿಜಯಂಗೆಯ್ದನನ್ನೆಗಮಿತ್ತಲ್ ಗಂಧರ್ವರಾಜಪುತ್ರಿ ವಿಸರ್ಜಿತ ಸಕಲ ಸಖೀಜನೆಯುಂ ಪರಿಮಿತ ಪರಿಚಾರಿಕಾನುಗಮ್ಯಮಾನೆಯುಮಾಗಿ ತನ್ನ ಕನ್ನೆಮಾಡಮನೇಱ ಶಯ್ಯಾತಳದೊಳ್ ಮೆಯ್ಯನಿಕ್ಕಿ ತನ್ನಂ ತಾನಱಯದಲೆ ಚಪಲೆ ನೀನಿದಾವ ಕಜ್ಜುಕುಜ್ಜುಗಂಗೆಯ್ದೆಯೆಂದು ಲಜ್ಜೆಯಿಂ ತರ್ಜಿತೆಯಾದಂತೆಯುಂ ಗಂಧರ್ವರಾಜನಂದನೆ ನಿನಗಿದಾವ ಯುಕ್ತಮೆಂದು ವಿನಯಮೆ ತನ್ನನುಪಾಲಂನಂಗೆಯ್ವಂತೆಯುಂ ಬಾಲೆ ನಿನ್ನ ಬಾಲಭಾವಮೆತ್ತವೋದುದೆಂದು ಮುಗ್ಧತೆಯೆ ತನ್ನಂ ಹಾಸ್ಯಂಮಾಡಿದಂತೆಯುಂ ಕುಲಕನ್ನೆಯರ್ಗಿದನ್ನೆಯಮೆಂದು ಮಹತ್ವಮೆ ಗರ್ಹಿಪಂತೆಯುಂ ದುರ್ವಿನೀತೆ ವಿನಯಂಗೆಟ್ಟೆಯೆಂದಾಚಾರಮೆ ತನ್ನಂ ಜಡಿವಂತೆಯುಂ ಮೂಢೆ ಮದನನಿಂ ಲಘುವಾದೆಯೆಂದಾಭಿಜಾತ್ಯಮೆ ತನ್ನನನುಶಾಸಿಪಂತೆಯುಂ ನಿನಗೆ ತರಳತೆಯಿದೆತ್ತಣಿಂ ಬಂದುದೆಂದು ಧೈರ್ಯಮೆ ಕ್ಕರಿಸುವಂತೆಯುಂ ಅತಿಲಜ್ಜಿತೆಯಾಗಿ ತನ್ನೊಳಿಂತೆಂದಳ್

ಮನಮಱಗುಂ ನರೇಂದ್ರಸುತನೆಂದಿನಿಸಳ್ಕೆನೆ ಸುತ್ತಲುಂ ಸಖೀ
ಜನಮಿರೆಯುಂ ವಿಚಾರಿಸೆನೆ ದುಖದೊಳಕ್ಕನಿರಲ್ಕೆ ಲಜ್ಜೆಗಾ
ಯೆನೆ ಗುರುಗಳ್ಗೆ ಬೆಳ್ಕ ನೆ ಚೇಟಕಿಯರ್ ನೆರೆದಿರ್ದರೆಂಬಿದಂ
ನೆನೆಯೆನೆ ಕೆಟ್ಟೆನೇನನಿರದಿಂತುಟು ವಿಭ್ರಮದಿಂದೊಡರ್ಚಿದೆಂ   ೯೩

ಕಿಱುಗೂಸುಗಳುಂ ಮೊದಲಾ
ಗಱದಪರೆನೆ ಮದನಹತಕನಿಂದಂ ನೆ ಮು
ನ್ನುಱವೋದಕ್ಕಂ ತಾಂ ಪೇ
ೞಱಯಳೆ ಮುನ್ನಮೆ ಮದೀಯ ಧೈರ್ಯಚ್ಯುತಿಯಂ    ೯೪

ಏನೆಂಬರೊ ತಾಯ್ತಂದೆಯ
ರೇನಂ ಗಂಧರ್ವಲೋಕಮೆಂಗುಮೊ ಕೇಳ್ದಿಂ
ತೇನೆಂಬೆನದೇಗೆಯ್ದಪೆ
ನೇ ನೆವದಿಂ ಮಱಸಿದಪ್ಪೆನೆನ್ನಯ ತಪ್ಪಂ      ೯೫

ಚಿತ್ರರಥನನ್ನು ಕಾಣಲು ಹೊರಟುಹೋದಳು. ಇತ್ತ ಅವಳು ಹೋದ ಮೇಲೆ ಚಂದ್ರಾಪೀಡನು ಕಾದಂಬರಿಯ ಅಪ್ಪಣೆಯಂತೆ ತನ್ನ ವಿನೋದಕ್ಕಾಗಿ ದ್ವಾರಪಾಲಕನಿಂದ ಕಳುಹಿಸಲ್ಪಟ್ಟ ವೀಣೆ ಕೊಳಲು ವಾದ್ಯಗಳಲ್ಲಿ ನಿಪುಣೆಯರಾದ, ಸಂಗೀತಕಲೆಯಲ್ಲಿ ಕುಶಲೆಯರಾದ, ಜೂಜಾಟದಲ್ಲಿ ಅಭಿರುಚಿಯುಳ್ಳ, ಚಿತ್ರರಚನೆಯಲ್ಲಿ ಚತುರೆಯರಾದ, ಸುಭಾಷಿತಗಳನ್ನು (ಚಾಟು ಶ್ಲೋಕ) ಹೇಳುವುದರಲ್ಲಿ ಪರಿಣತೆಯರೆನಿಸಿದ ಕನ್ನೆಯರೊಡನೆ ಕೇಯೂರಕನು ದಾರಿ ತೋರಿಸುತ್ತಿರಲು, ಕ್ರೀಡಾಪರ್ವತದ ಮಣಿಖಚಿತ ಮಂದಿರಕ್ಕೆ ಬಿಜಯ ಮಾಡಿದನು. ಈ ಕಡೆ ಕಾದಂಬರಿಯು ತನ್ನ ಗೆಳತಿಯರನ್ನೆಲ್ಲ ಕಳುಹಿಸಿ ಕೆಲವಾರು ಮಂದಿ ಪರಿಚಾರಿಕೆಯರಿಂದ ಮಾತ್ರ ಕೂಡಿಕೊಂಡು ತನ್ನ ಅಂತಪುರದ ಮಹಡಿಯನ್ನು ಹತ್ತಿ ಹಾಸಿಗೆಯಲ್ಲಿ ಮೈಯನ್ನು ಈಡಾಡಿ, ತನ್ನನ್ನು ತಾನೆ ತಿಳಿದುಕೊಳ್ಳಲಾರದೆ ‘ಎಲೈ ಚಂಚಲಬುದ್ಧಿಯವಳೆ, ನೀನು ಇದಾವ ಕೆಲಸವನ್ನು ಮಾಡಲು ಹೊರಟಿದ್ದೀಯೆ?’ ಎಂದು ನಾಚಿಕೆಯಿಂದ ಕ್ಕರಿಸಲ್ಪಟ್ಟಂತೆಯೂ, ‘ಗಂಧರ್ವರಾಜಪುತ್ರಿ, ಇದು ನಿನಗೆ ಸರಿಯೆ?’ ಎಂದು ವಿನಯಗುಣವೇ ತನ್ನನ್ನು ತೆಗಳುತ್ತಿರುವಂತೆಯೂ, ‘ಎಳೆಯಳೆ, ನಿನ್ನ ಎಳೆತನವು ಎಲ್ಲಿ ಹೋಯಿತೆಂದು’ ಮೊದ್ದುತನವು ತನ್ನನ್ನು ಹಾಸ್ಯಮಾಡುತ್ತಿರುವಂತೆಯೂ, ಸತ್ಕುಲದಲ್ಲಿ ಹುಟ್ಟಿದ ಹುಡುಗಿಯರಿಗೆ ಇದು ನ್ಯಾಯವಲ್ಲವೆಂದು ದೊಡ್ಡತನವು ನಿಂದಿಸುತ್ತಿರುವಂತೆಯೂ, ‘ಕೆಟ್ಟ ನಡತೆಯವಳೆ, ಶಿಷ್ಟಾಚಾರವನ್ನು ಬಿಟ್ಟುಬಿಟ್ಟೆಯಲ್ಲ!’ ಎಂದು ಆಚಾರವೇ ತನ್ನನ್ನು ಗದರಿಸುವಂತೆಯೂ, ‘ಎಲೈ ದಡ್ಡೆ, ಮನ್ಮಥನಿಂದ ಕೆಳಮಟ್ಟಕ್ಕೆ ಇಳಿಸಲ್ಪಟ್ಟೆಯಲ್ಲ!’ ಎಂದು ಕುಲೀನತೆಯೆ ತನಗೆ ಉಪದೇಶ ಮಾಡುವಂತೆಯೂ, ‘ನಿನಗೆ ಈ ಚಂಚಲಬುದ್ಧಿಯು ಎಲ್ಲಿಂದ ಬಂತು?’ ಎಂದು ಧೈರ್ಯವೇ ಕ್ಕರಿಸುವಂತೆಯೂ, ಭಾವಿಸಿ ಬಹಳವಾಗಿ ನಾಚಿಕೆಪಟ್ಟು ತನ್ನಲ್ಲಿ ಹೀಗೆ ಆಲೋಚಿಸಿದಳು. ೯೩. “ರಾಜಕುಮಾರನು ನನ್ನ ಮನಸ್ಸನ್ನು ತಿಳಿದುಕೊಂಡುಬಿಡುತ್ತಾನೆ” ಎಂದು ನಾನು ಸ್ವಲ್ಪವೂ ಹೆದರಲಿಲ್ಲವಲ್ಲ! ಸುತ್ತಲೂ ಗೆಳತಿಯರಿದ್ದಾರೆಂದು ಆಲೋಚಿಸಲೇ ಇಲ್ಲವಲ್ಲ! ಅಕ್ಕನು ಇಷ್ಟು ದುಖದಲ್ಲಿ ಮುಳುಗಿರುವಾಗ ನಾನು ಹೀಗಾಡಬಾರದೆಂದು ನಾಚಿಕೆಯನ್ನೂ ಉಳಿಸಿಕೊಳ್ಳಲಿಲ್ಲವಲ್ಲ! ತಂದೆ ತಾಯಿಗಳಿಗೆ ಭಯಪಡಲಿಲ್ಲವಲ್ಲ. ಸೇವಕಿಯರು ನೆರೆದಿದ್ದಾರೆ ಎಂಬುದನ್ನು ಆಲೋಚಿಸಲಿಲ್ಲವಲ್ಲ! ಅಯ್ಯೊ ಕೆಟ್ಟೆ! ಸುಮ್ಮನಿರದೆ ಬುದ್ಧಿಭ್ರಮಣೆಯಿಂದ ಹೀಗೆ ನಾನು ಏನು ಮಾಡಿಬಿಟ್ಟೆ! ೯೪. ನಾನು ಹೀಗೆ ಧೈರ್ಯಗೆಟ್ಟು ಮಾಡಿದ್ದನ್ನು ಚಿಕ್ಕಮಕ್ಕಳೇ ಮೊದಲಾಗಿ ಎಲ್ಲರೂ ತಿಳಿದುಕೊಳ್ಳುತ್ತಾರೆಂದಮೇಲೆ ಮೊದಲು ನಿಜವಾದ ಮನ್ಮಥನಿಂದ ಕಷ್ಟವನ್ನು ಅನುಭವಿಸುತ್ತಿರುವ ಅಕ್ಕನು ತಿಳಿದುಕೊಳ್ಳದೆ ಇರುತ್ತಾಳೆಯೆ? ೯೫. ಇದನ್ನು ಕೇಳಿ

ತನುವಂ ತೆಯ್ದಪ್ಪಳಕ್ಕಂ ಬ್ರತದೊಳೆನುತೆ ಕನ್ಯಾಬ್ರತಕ್ಕಂತೆ ಪೂಣ್ದಿ
ರ್ದೆನದಂ ಕೇಳ್ದಿರ್ದರಂತೆನ್ನಯ ಕೆಳದಿಯರಾ ಮಾರ್ಗದಿಂದಂತೆ ಕೇಯೂ
ರನ ಕೆಯ್ಯೊಳ್ ಮುಂ ಮಹಾಶ್ವೇತೆಗೆ ಮಿಗೆ ನುಡಿದಾನಟ್ಟಿಯುಂ ಮತ್ತಿದೇನೆಂ
ಬೆನೊ ಬಂದತ್ತೆತ್ತಣಿಂದೆಂದಱಯೆನೆನಗೆ ಮತ್ಪಾಪದಿಂ ವಿಪ್ರಲಂಭಂ        ೯೬

ಪೆಱತಂತಿರ್ಕೆಂದುಂ ಕೇ
ಳ್ದಱಯೆಂ ಕಂಡಱಯೆನರಸನೆಂದಾರೆಂದಾ
ನಱಯೆಂ ನಾಣ್ಗೆಡುವಿನಮೀ
ತೆಱದಿಂದೆನ್ನಂ ವಿಡಂಬಿಸಲ್ಕೊಡರಿಕುಮೇ     ೯೭

ಮನಿಸಿಂ ಮನ್ಮಥನೆಸ್ತ್ರಪಂಜರದೊಳಿಟ್ಟೆನ್ನಂ ನೃಪಂಗೊಪ್ಪುಗೊ
ಟ್ಟನೊ ತದ್ದರ್ಶನಮಾತ್ರದಿಂ ಗುಣಪಣಕ್ಕಾನಾವಗಂ ಮಾಱುವೋ
ದೆನೊ ರಾಗೋದಯಮೆನ್ನನೋವದೆಳದೊಯ್ದೋಂ ತೊಳ್ತುಗೊಟ್ಟಿತ್ತೋ ಭೋಂ
ಕೆನಲೆನ್ನಿಂದ್ರಿಯಸಂಕುಲಂ ಪಿಡಿದುತಂದೇಂ ಕಟ್ಟಿ ಮುಂದುಟ್ಟುದೋ        ೯೮

ನೋಡಿದನಿತಱ ಳೆ ಚಂದ್ರಾ
ಪೀಡಂ ಸಂತಾಪದೊದವನೆನಗಿಂತೀಗಳ್
ಮಾಡಿದನಾತನ ದೆಸೆಯಂ
ನೋಡಲ್ಕಂಜುವೆನೆನುತ್ತೆ ಚಿಂತಿಸುವಿನೆಗಂ    ೯೯

ವ|| ನೀನಿಂತು ಪುಸಿಸೈರಣೆಯನೊಡರ್ಚುವೊಡಿಂ ಪೋದಪೆನೆಂದಂತರ್ಗತನಪ್ಪ ಚಂದ್ರಾಪೀಡನಿಂ ಪರಿಹಸಿತೆಯಾದಂತೆಯುಂ ಆತನಂ ಪ್ರಕ್ಷಾಳಿತಲೋಚನೆಯಾಗಿ ಮಗುೞೆ ನೋಡಿ ಕೃತಾರ್ಥೆಯಾಗೆಂದು ಬಾಷ್ಪದಿಂದಭಿಹಿತೆಯಾದಂತೆಯುಂ ನಿನ್ನ ಪ್ರಕ್ಷಾಳಿತಲೋಚನೆಯಾಗಿ ಮಗುೞೆ ನೋಡಿ ಕೃತಾರ್ಥೆಯಾಗೆಂದು ಬಾಷ್ಪದಿಂದಭಿಹಿತೆಯಾದಂತೆಯುಂ ನಿನ್ನ ಧೈರ್ಯಾವಲೇಪಮು ಪ್ರಾಣಂಬೆರಸು ತೆಗೆಯದೆ ಮಾಣೆನೆಂದು ಮನೋಭವನಿಂ ನಿರ್ಭರ್ತ್ಸಿತೆಯಾದಂತೆಯುಂ ಯುವರಾಜಾಭಿಮುಖ ಹೃದಯೆಯಾಗಿ ಮನಂಗೊಟ್ಟತಿ ಪ್ರೇಮವಶದಿನಸ್ವತಂತ್ರೀಕೃತೆಯುಂ ಪರವಶೀಭೂತೆಯುಮೆನಿಸಿ ಭೋಂಕನೆೞ್ದು ಮಣಿಮಯಗವಾಕ್ಷನಿಕ್ಷಿಪ್ತಮುಖಿಯಾಗಿ ನೃಪರೂಪ ಚಂದ್ರನಿರ್ದ ಕೇಳೀಪರ್ವತಮನೆ ನೋಡುತಿರ್ದು

ನನ್ನ ತಾಯಿ ತಂದೆಗಳು ಏನನ್ನು ಹೇಳುತ್ತಾರೊ? ಗಂಧರ್ವಲೋಕವು ಏನು ಹೇಳುತ್ತದೆಯೊ? ನಾನು ಏನು ಹೇಳಲಿ? ಏನು ಮಾಡಲಿ? ಯಾವ ನೆಪವನ್ನು ಹೇಳಿ ನನ್ನ ತಪ್ಪನ್ನು ಮರೆಮಾಚಲಿ? ೯೬. ನನ್ನ ಅಕ್ಕ ಮಹಾಶ್ವೇತೆ ಈ ಕಾಮನ ದೆಸೆಯಿಂದ ವ್ರತವನ್ನು ಹಿಡಿದು ತನ್ನ ದೇಹವನ್ನು ದಂಡಿಸುತ್ತಿದ್ದಾಳೆ. ಆದ್ದರಿಂದ ನಾನೂ ಮದುವೆ ಮಾಡಿಕೊಳ್ಳದೆ ಬ್ರಹ್ಮಚಾರಿಣಿಯಾಗಿಯೇ ಇರುತ್ತೇನೆ ಎಂದು ಪ್ರತಿಜ್ಞೆಮಾಡಿದ್ದೇನೆ. ಅದನ್ನು ನನ್ನ ಗೆಳತಿಯರೆಲ್ಲ ಕೇಳಿದ್ದರು. ಅದೇ ರೀತಿಯಿಂದ ಕೇಯೂರಕನ ಕೈಯಲ್ಲಿ ಮೊದಲು ಮಹಾಶ್ವೇತೆಗೆ ಹೇಳಿಕಳುಹಿಸಿದ್ದೆನು. ಮತ್ತೆ ಈಗ ಏನು ಹೇಳಲಿ. ಈ ವಿರಹವೇದನೆಯು ಪಾಪವಿಶೇಷದಿಂದ ನನಗೆ ಎಲ್ಲಿಂದ ಬಂತು? ಎಂಬುದು ಗೊತ್ತಾಗುವುದಿಲ್ಲ ೯೭. ಉಳಿದಿದ್ದೆಲ್ಲ ಹಾಗಿರಲಿ. ಇವನನ್ನು ಯಾವಾಗಲೂ ಕೇಳರಿಯೆನು ಮತ್ತು ಕಂಡರಿಯೆನು, ಈ ದೊರೆಯು ಯಾರೆಂದು ನನಗೆ ಗೊತ್ತೇ ಇಲ್ಲ. ಹೀಗೆ ಇವನು ನನ್ನನ್ನು ನಾಚಿಕೆಗೆಡುವಂತೆ ಮಾಡಿ ಅಪಹಾಸ್ಯಕ್ಕೀಡುಮಾಡಲು ಪ್ರಯತ್ನಿಸಬಹುದೆ? ೯೮. ಮನ್ಮಥನು ನನ್ನ ಮೇಲಿನ ಕೋಪದಿಂದ ಶರಪಂಜರದಲ್ಲಿ ನನ್ನನ್ನು ಕೂಡಿ ಈ ರಾಜನಿಗೆ ಕಾಣಿಕೆಯಾಗಿ ಒಪ್ಪಿಸಿದನೋ ಅಥವಾ ಅವನನ್ನು ನೋಡಿದ ಕೂಡಲೆ ಅವನ ಸೌಂದರ್ಯಾದಿ ಗುಣಗಳೆಂಬ ಹಣಕ್ಕೆ ನಾನು ಶಾಶ್ವತವಾಗಿ ಮಾರಿಕೊಂಡೆನೊ? ಅಥವಾ ಅನುರಾಗವು ನನ್ನನ್ನು ಎಳೆದೊಯ್ದು ಅವನಿಗೆ ದಾಸಿಯನ್ನಾಗಿ ಮಾಡಿಬಿಟ್ಟಿತೋ? ತಟ್ಟನೆ ನನ್ನನ್ನು ಇಂದ್ರಿಯಗಳು ಹಿಡಿದುತಂದು ಕಟ್ಟಿ ಅವನ ಮುಂದೆ ಇರಿಸಿಬಿಟ್ಟುವೋ? ೯೯. ಈ ಚಂದ್ರಾಪೀಡನು ನೋಡಿದ ಮಾತ್ರದಿಂದಲೆ ನನಗೆ ಈಗ ಹೀಗೆ ಸಂತಾಪವುಂಟಾಗುವಂತೆ ಮಾಡಿದ್ದಾನೆ. ಆದ್ದರಿಂದ ಅವನಿಂದ ದಿಕ್ಕನ್ನೂ ನೋಡುವುದಕ್ಕೆ ಹೆದರಿಕೆಯಾಗುತ್ತದೆ” ಎಂದು ಚಿಂತಿಸುತ್ತಿದ್ದಳು. ವ|| ನೀನು ಹೀಗೆ ಸುಳ್ಳು ಸಮಾಧಾನವನ್ನು ಮಾಡಿಕೊಳ್ಳುವುದಾದರೆ ನಾನಿನ್ನು ಇಲ್ಲಿ ಇರುವುದಿಲ್ಲ, ಹೊರಟುಹೋಗುತ್ತೇನೆ ಎಂದು ಅಂತರಂಗದಲ್ಲಿರುವ ಚಂದ್ರಾಪೀಡನಿಂದ ಹಾಸ್ಯ ಮಾಡಲ್ಪಟ್ಟವಳಂತೆಯೂ, ಅವನನ್ನು ಕಣ್ಣು ತೊಳೆದುಕೊಂಡು ಮತ್ತೆ ನೋಡಿ ಧನ್ಯಳಾಗು ಎಂದು ಕಣ್ಣೀರಿನಿಂದ ಹೇಳಲ್ಪಟ್ಟವಳಂತೆಯೂ, ನಿನ್ನ ಧೈರ್ಯದ ಜಂಭವನ್ನು ಪ್ರಾಣಸಹಿತ ತೆಗೆಯದೆ ಬಿಡುವುದಿಲ್ಲ ಎಂದು ಮನ್ಮಥನಿಂದ ನಿಂದಿಸಲ್ಪಟ್ಟವಳಂತೆಯೂ, ಯುವರಾಜನನ್ನೇ ಮನಸ್ಸಿನಲ್ಲಿ ಚಿಂತಿಸುವವಳಾಗಿ ಮನಸ್ಸನ್ನು ಅರ್ಪಿಸಿ ಅತ್ಯಕವಾದ ಅನುರಾಗದಿಂದ ಸ್ವಾತಂತ್ರ ವಿಲ್ಲದವಳಾಗಿ ಪರವಶೆಯಾಗಿ ತಟ್ಟನೆದ್ದು ರತ್ನದ ಕಿಟಕಿಯಲ್ಲಿ ಮುಖವನ್ನಿಟ್ಟು

ಆನಂದಾಶ್ರುಜಲವ್ಯವ
ಧಾನಕ್ಕುಮ್ಮುಳಿಸಿದಂತೆವೊಲ್ ಕಣ್ಮಲರಿಂ
ದಾ ನೃಪನಂ ನೋಡದೆ ಕಮಲಾ
ನನೆ ನೆನಪಿನೊಳೆ ಪದೆದು ನೋಡುತ್ತಿರ್ದಳ್             ೧೦೦
ಬೆರಲ ಬೆವರಿಂದೆ ನಾಂದಪು
ದಿರದಿನಿಸೆಂಬಂತೆ ಚಿತ್ರತೂಲಿಕೆಯಿಂದಂ
ಬರೆಯದೆ ಕಾಮಿನಿ ವಿದ್ದಂ
ಬರೆದಳ್ ಚಿಂತೆಯೊಳೆ ಮನುಜಮಕರಧ್ವಜನಾ          ೧೦೧

ಪುದಿದ ಪುಳಕಂಗಳಡ್ಡೆ
ಸದಿರವೆನುತ್ತಂಜಿದಂತೆ ನಳಿತೋಳ್ಗಳಿನ
ಪ್ಪದೆ ಕಾಂತೆ ಹೃದಯದಿಂದ
ಪ್ಪಿದಳುತ್ಸುಕೆಯಾಗಿ ಮನುಜಮಕರಧ್ವಜನಾ ೧೦೨

ತಡವಾದಪುದುೞದರನೀ
ಯೆಡೆಗೆ ನಿಯೋಜಿಸಲಿಕೆಂಬವೋಲ್ ನೃಪವರನಿ
ರ್ದೆಡೆಗೆ ನಿಯೋಜಿಸಿದಳ್ ಬಿಡ
ದೆಡೆಯಾಡುವ ಬೆಸಕೆ ಕನ್ನೆ ತನ್ನಯ ಮನಮಂ          ೧೦೩

ವ|| ಇತ್ತಲ್ ಚಂದ್ರಾಪೀಡಂ ಕ್ರೀಡಾಪರ್ವತದ ಮಣಿಮಯಭವನದೊಳ್

ಅಡಿಯೊತ್ತಲ್ ಕೇಯೂರಕ
ನೆಡೆಯಱದೋಲೈಸೆ ಕನ್ಯಕಾಸಂಕುಳಮಂ
ದಡಕಿಲ್ಗೊಂಡೊಪ್ಪುವ ಕೌ
ಳುಡೆಯಿಂ ಸೊಗಯಿಸುವ ಪಾಸಿನೊಳ್ ಪಟ್ಟಿರ್ದಂ     ೧೦೪

ವ|| ಇಂತು ಗಂಧರ್ವರಾಜನಂದನೆಯ ನೆಗೞ್ತೆಗೆ ಡೋಲಾಯಮಾನಚಿತ್ತನಾಗಿ ತನ್ನೊಳಿಂತೆಂದಂ

ಕುಸುಮಶರಾಸ್ತ್ರಪುಷ್ಪರಜದಿಂ ಪೊರೆದಂತಿರೆ ಬಾಷ್ಪವಾರಿಗಳ್
ಪಸರಿಸೆ ರಾಗವಗ್ಗಲಿಸೆ ಚಾರುಚಲನ್ನಯನತ್ರಿಭಾಗದಿಂ
ಕುಸಿಕುಸಿದೆನ್ನನೀಕ್ಷಿಸುವಳಾನಿನಿಸೀಕ್ಷಿಸಲಾ ಲತಾಂಗಿ ಲ
ಜ್ಜಿಸಿ ತನುವಂ ನಿಜಸ್ಮಿತಸಿತಾಂಶುಕಪಲ್ಲವದಿಂ ಮುಸುಂಕುವಳ್            ೧೦೫

ರಾಜರೂಪಚಂದ್ರನಾದ ಚಂದ್ರಾಪೀಡನು ಇದ್ದ ಕ್ರೀಡಾಶೈಲವನ್ನು ನೋಡುತ್ತಾ ಇದ್ದು, ೧೦೦. ಆನಂದಬಾಷ್ಪದಿಂದ ಅವನನ್ನು ನೋಡಲು ಮರೆಯಾದುದಕ್ಕೆ ದುಖಪಡುವವಳಂತೆ ಕಣ್ಣಿನಿಂದ ಅರಸನನ್ನು ನೋಡದೆ ಕಮಲಮುಖಿಯಾದ ಕಾದಂಬರಿಯು ಸ್ಮರಣೆಯಿಂದಲೆ ಪ್ರೀತಿಪೂರ್ವಕವಾಗಿ ನೋಡುತ್ತಿದ್ದಳು. ೧೦೧. ಅವನ ಚಿತ್ರವನ್ನು ಬರೆಯಬಹುದಾಗಿತ್ತು. ಆದರೆ ಬರೆಯುವಾಗ ಬೆರಳಿನ ಬೆವರಿಂದ ಚಿತ್ರವು ಸ್ವಲ್ಪವೂ ನಿಲ್ಲದೆ ತೊಯ್ದುಹೋಗುತ್ತದೆ ಎಂಬ ಭಾವನೆಯಿಂದಲೋ ಎಂಬಂತೆ ಆ ಕಾಮಿನಿಯು ಮನುಜರೂಪದ ಮನ್ಮಥನಂತಿರುವ ಆ ಚಂದ್ರಾಪೀಡನನ್ನು ಕುಂಚದಿಂದ ಬರೆಯದೆ ಕೇವಲ ಚಿಂತೆಯಿಂದಲೆ ಚಿತ್ರಿಸಿದಳು. ೧೦೨. ಆಲಿಂಗನ ಮಾಡಿಕೊಳ್ಳುವಾಗ ಉಂಟಾಗುವ ರೋಮಾಂಚನಗಳು ಇಬ್ಬರ ಮಧ್ಯೆ ಅಡ್ಡಬಾರದೆ ಇರುವುದಿಲ್ಲ ಎಂದು ಹೆದರಿದಂತೆ ಆ ರಮಣಿಯು ಮನುಜರೂಪದ ಮನ್ಮಥನಂತಿರುವ ಅರಸನನ್ನು ತನ್ನ ಕೋಮಲವಾದ ತೋಳುಗಳಿಂದ ತಬ್ಬಿಕೊಳ್ಳದೆ ಕುತೂಹಲದಿಂದ ಕೂಡಿದವಳಾಗಿ ಮನಸ್ಸಿನಿಂದಲೇ ತಬ್ಬಿಕೊಂಡಳು. ೧೦೩. ಬೇರೆ ಜನರನ್ನು ಈ ಕೆಲಸಕ್ಕೆ ನೇಮಿಸಿದರೆ ಹೊತ್ತಾಗಿಬಿಡುತ್ತದೆಯೊ ಎಂಬಂತೆ ಆ ರಾಜೇಂದ್ರನಿದ್ದ ಸ್ಥಳಕ್ಕೆ ಕಾದಂಬರಿಯು ಹೋಗಿಬಂದು ಸಮಾಚಾರವನ್ನು ತಿಳಿಸುವ ಕೆಲಸಕ್ಕೆ ತನ್ನ ಮನಸ್ಸನ್ನೇ ನೇಮಿಸಿದಳು. ವ|| ಈ ಕಡೆ ಚಂದ್ರಾಪೀಡನು ಕ್ರೀಡಾಪರ್ವತದ ರತ್ನಮಯಗೃಹದಲ್ಲಿ ೧೦೪. ಕೇಯೂರಕನು ಕಾಲನ್ನು ಒತ್ತುತ್ತಿರಲಾಗಿ, ಹುಡುಗಿಯರ ಗುಂಪು ಸಂದರ್ಭವನ್ನಿರಿತು ಸೇವಿಸುತ್ತಿರಲು ಒಂದರ ಮೇಲೆ ಒಂದನ್ನು ಇಟ್ಟಿರುವ ತಲೆದಿಂಬುಗಳಿಂದ ಸೊಗಸಾಗಿರುವ ಹಾಸಿಗೆಯಲ್ಲಿ ಮಲಗಿದ್ದನು. ವ|| ಹೀಗೆ ಗಂಧರ್ವರಾಜಪುತ್ರಿಯಾದ ಕಾದಂಬರಿಯ ವರ್ತನೆಗೆ ಡೋಲಾಯಮಾನವಾದ ಮನಸ್ಸುಳ್ಳವನಾಗಿ ತನ್ನಲ್ಲಿ ಹೀಗೆ ಚಿಂತಿಸಿದನು. ೧೦೫. “ಮನ್ಮಥನ ಬಾಣಗಳಾದ ಹೂವುಗಳ ಧೂಳಿಯಿಂದ ತುಂಬಿಕೊಂಡಂತೆ ಕಣ್ಣೀರು ಸುರಿಯುತ್ತಿರಲು,

ವ|| ಮತ್ತಮಾ ಕಾಂತೆ ಲಜ್ಜಾನತವದನೆಯಾಗಿ ಪ್ರತಿಬಿಂಬಮಾದೊಡಂ ನೆಲಸುಗೆಂಬಂತೆ ಕಪೋಲಮಣಿದರ್ಪಣಮಂ ಸಮರ್ಪಿಸಿಯುಮೆನಗೆ ತಂಬುಲಂಗೊಡಲುಜ್ಜುಗಂಗೆಯ್ವುಲ್ಲಿ ನಡುಗುವ ಕೆಂದಳಮಂ ಚೆನ್ನೆ ದಿಲ್ಗೆತ್ತೆಱಗುವ ಮಱದುಂಬಿಯ ಬಂಬಲಿಂ ತಮಾಲಪಲ್ಲವಮಂ ಪಿಡಿದು ತನ್ನ ಬಿಂದುವಿಡುವ ಮೊಗದ ಬೆಮರಂ ಬೀಸುವಂತೆಯುಮಿರ್ದಳಿವೆಲ್ಲಮೇನೆಂದು ತನನ್ನೊಳಗೆ ಬಗೆಯುತ್ತಮಿಂತೆಂದಂ