(ಒಂದು ಅರಣ್ಯ. ಮೂವರು ಬ್ರಹ್ಮಚಾರಿಗಳು ಪ್ರವೇಶ.)

೧ನೇ ಬ್ರಹ್ಮಚಾರಿ — ತರುಣಾರುಣ ಕಿರಣಗಳಿಂದ ನಲಿಯುತ್ತಿರುವ ಈ ಅರಣ್ಯವು ಎಷ್ಟು ಮನೋಹರವಾಗಿದೆ! ನಾನ ಬಣ್ಣಗಳಿಂದ ಮೆರೆಯುತ್ತಿರುವ ವಿಹಂಗಮಗಳ ನುಣ್ಚರವು ಎಷ್ಟು ಹೃದಯಂಗಮವಾಗಿದೆ. ಈ ಸೌಂದರ್ಯ ಸಾಗದಲ್ಲಿ ಮುಳುಗಿ ತೇಲಾಡುವ ನಾವೆ ಧನ್ಯರು.

೨ನೇ ಬ್ರಹ್ಮಚಾರಿ — ಇಂಥಾ ಸನ್ನಿವೇಶವೆ ಪರಮಾತ್ಮನ ಪ್ರತ್ಯಕ್ಷಾನುಭವಕ್ಕೆ ಅತ್ಯಂತ ಸಹಕಾರಿಯಾದುದು.

೩ನೇ ಬ್ರಹ್ಮಚಾರಿ — ನಮ್ಮ ಗುರುಗಳು ಹೇಳಲಿಲ್ಲವೆ, ಅದರಿಂದಲೆ ಮಹರ್ಷಿಗಳು ಇಂಥಾ ರಮ್ಯಪ್ರದೇಶಗಳಲ್ಲಿ ವಾಸಮಾಡುವುದು. ಸೌಂದರ್ಯವೆ ಪರಮಾತ್ಮನ ಹೃದಯ!

೨ನೇ ಬ್ರಹ್ಮಚಾರಿ — ಉಳಿದ ವಟುಗಳೆಲ್ಲಿ?

೧ನೇ ಬ್ರಹ್ಮಚಾರಿ — ಅವರೆಲ್ಲಾ ಗುರುಗಳೊಡನೆ ಬೇರೊಂದು ಕಡೆಗೆ ಹೋದರು. ನಾವಿನ್ನು ಕಾಲಹರಣ ಮಾಡದೆ ಸವಿತ್ಪುಷ್ಪಗಳನ್ನು ಆಯೋಣ: ಹೊತ್ತಾದರೆ, ಗೊತ್ತೇ ಇದೆ ಗುರುಗಳ ಕೋಪ.

೩ನೇ ಬ್ರಹ್ಮಚಾರಿ — ಹಾಗಾದರೆ ಬನ್ನಿ, ಬೇಗ ಬೇಗ ಆಯೋಣ.
(ಹೋಗುವರು. ತರಳನಾದ ಕರ್ಣನು ಬಿಲ್ಲು ಬತ್ತಳಿಕೆಗಳಿಂದ ತರುಣ ಯೋಧರಂತೆ ಪ್ರವೇಶಿಸುವನು. ಸುತ್ತಲೂ ನೋಡಿ)

ಕರ್ಣ — ಜಗತ್ತೆಷ್ಟು ವಿಸ್ತಾರವಾಗಿಹುದು! ಇದುವರೆಗೆ
ಬಾವಿಯಲ್ಲಿಹ ಕಪ್ಪೆಯಂತೆ ನಾನಿದ್ದೆ.
ಈ ಮಹಾ ಪರ್ವತಶ್ರೇಣಿಗಳು, ಈ ಮಹಾ
ಅರಣ್ಯಗಳು, ಬಾಂದಳವನಿರಿಯುತಿಹ ಈ ಮಹಾ
ವೃಕ್ಷಗಳು ಇವುಗಳನು ನೋಡಿದರೆ
ನನ್ನೆದೆಯು ವಿಸ್ತಾರವಾಗುವುದು.
ಗುರುಗಳಾಶ್ರಮವೆಲ್ಲಿ?
ಈ ಬನದೊಳೆಲ್ಲೆಲ್ಲಿ ಅರಸಿದರು ತೋರದಿದೆ.
ಸಾಧಿಸಿದ ಹರತೂ ಸಿದ್ಧಿಯಾಗುವುದಿಲ್ಲ
ಎಂದು ತಾಯಿಯು ಹೇಳಿ ಕಳುಹಿಸಿದಳೆನ್ನ! (ಕೆಳಗೆ ನೋಡಿ)
ಏನಿದೀ ಪಾದಗಳ ಚಿಹ್ನೆ : ಹನಿಯಿಡಿದ ಈ
ಹಸುರಿನಲಿ ಈಗತಾನೇ ಯಾರೋ ಸಂಚಾರ
ಮಾಡಿಹರು. ಇರಲಿ, ಹುಡಕಿ ನೋಡುವೆನು.
(ಒಂದೆರಡು ಹೆಜ್ಜೆಗಳನ್ನಿಡುವನು. ಅಷ್ಟರಲಿ ತೆರೆಯಲ್ಲಿಅಯ್ಯೋ! ಹುಲಿ! ಹುಲಿ!” ಎಂದು ಮೂರು ಜನರು ಕೂಗಿಕೊಳ್ಳುವರು. ಕರ್ಣನು ಅನ್ವೇಷಕ ದೃಷ್ಟಿಯಿಂದ ದೂರನೊಡಿ)

ಕರ್ಣ — ಯಾರ ದನಿ : ‘ಹುಲಿ’ ಎಂದು ಕೂಗುತಿಹರು!
(ಬ್ರಹ್ಮಚಾರಿಗಳು ಓಡಿಬರುವುದನ್ನು ಕಂಡು, ಹಿಂಬಾಲಿಸುವ ಹುಲಿಯನ್ನು ನೋಡಿ)
ಹೆದರದಿರಿ! ಹೆದರದಿರಿ!
(ಎಂದು ಒಂದು ಬಾಣವನ್ನು ಎಳೆದುಬಿಟ್ಟು ಕೂಡಲೆ ಮತ್ತೊಂದು ಬಾಣವನ್ನು ಜೋಡಿಸುವನು. ಬ್ರಹ್ಮಚಾರಿಗಳು ನುಗ್ಗುವರು.)
ಹೆದರದಿರಿ! ಹೆದರದಿರಿ!
ಹುಲಿ ಸತ್ತಿತ್ತು!

೧ನೇ ಬ್ರಹ್ಮಚಾರಿ — ಯಾರಪ್ಪಾ ನೀನು ನಮ್ಮ ಭಾಗದ ಸಂರಕ್ಷಕನು!

೨ನೇ ಬ್ರಹ್ಮಚಾರಿ — ಅಯ್ಯೊ ಇನ್ನೇನು ನನ್ನನ್ನು ಹಿಡಿಯುವುದರಲ್ಲಿತ್ತು!

೩ನೇ ಬ್ರಹ್ಮಚಾರಿ — ನೀನಾರಪ್ಪಾ? ನಮ್ಮ ಭಾಗದ ದೇವತೆ!

ಕರ್ಣ — ಹೆದರದಿರಿ! ಹುಲಿಯಳಿದುದಿನ್ನೇನು ಭಯವಿಲ್ಲ.
ನೋಡಲ್ಲಿ, ನನ್ನ ಬಾಣದ ಪೆಟ್ಟಿನಿಂದುರುಳಿ
ಬಿದ್ದಿಹುದು. ನಿಮ್ಮ ಕೂಗನು ಕೇಳಿ, ನೋಡುತಿರೆ
ಹುಲಿಯನ್ನ ಕಂಗಳಿಗೆ ತೋರಿತು. ಕೂಡಲೇ
ಒಂದು ಶರದಿಂದೆಚ್ಚೆನು.

೧ನೇ ಬ್ರಹ್ಮಚಾರಿ — ಅಣ್ಣಾ, ನೀನಾರು!
ಇಲ್ಲಿಗೇತಕೆ ಬಂದೆ? ಯಾವೆಡೆಗೆ ಹೋಗುತಿಹೆ!

ಕರ್ಣ — ನೀವಾರು?

೧ನೇ ಬ್ರಹ್ಮಚಾರಿ — ನಾವು ಪರುಶುರಾಮ ಮಹರ್ಷಿಗಳ ಶಿಷ್ಯರು. ಸಮಿತ್ಪುಷ್ಪಗಳನ್ನು ಆಯುವುದಕ್ಕಾಗಿ ಅರಣ್ಯಕ್ಕೆ ಬಂದೆವು.

ಕರ್ಣ — ಏನು! ಕೊಡಲಿಯೋಜನ ವಟುಗಳೆ?

೨ನೇ ಬ್ರಹ್ಮಚಾರಿ — ಹೌದು!

ಕರ್ಣ — ಗುರುಗಳೆಲ್ಲಿ?

೩ನೇ ಬ್ರಹ್ಮಚಾರಿ — ಅವರೊಡನೆಯೇ ನಾವು ಬಂದೆವು. ಅವರು ಕೆಲವು ಶಿಷ್ಯರೊಡನೆ ಕಾಡಿನ ಬೇರೆಯೆಡೆಗೆ ಹೋದರು. ನಾವು ಈ ಕಡೆಗೆ ಬಂದೆವು.

ಕರ್ಣ — ನಾನೂ ನಿಮ್ಮ ಗುರಗಳನ್ನೆ ಹುಡುಕಿಕೊಂಡು ಬಂದೆ. ನನ್ನನು ಅವರೆಡೆಗೆ ಕೊಂಡೊಯ್ಯುವಿರಾ?

೧ನೇ ಬ್ರಹ್ಮಚಾರಿ — ನೀನೆಮ್ಮ ರಕ್ಷಕನು, ಸೋದರನು. ನಿನಗೆ ಬೇಕಾದ ಸಹಾಯ ಮಾಡುವೆವು. ಸಂತೋಷದಿಂದ ಗುರುವಿನೆಡೆಗೆ ಕೊಂಡೊಯ್ಯುವೆವು.

೨ನೇ ಬ್ರಹ್ಮಚಾರಿ — ಗುರುವಿನೆಡೆ ನಿನಗೇನು ಕಾರ್ಯ?

ಕರ್ಣ — ಕಾರ್ಯವಿನ್ನೇನು? ಶಿಷ್ಯನನ್ನಾಗಿ ಸ್ವೀಕರಿಸಿ ಎಂದು ಬೇಡುವುದು!

೩ನೇ ಬ್ರಹ್ಮಚಾರಿ — ಏನು, ಶಾಸ್ತ್ರಾಭ್ಯಾಸ ಮಾಡುವುದಕ್ಕೆ?

ಕರ್ಣ — ಹೌದು! ಆದರೆ ಶಾಸ್ತ್ರಾಭ್ಯಾಸಕ್ಕಿಂತಲೂ ಶಸ್ತ್ರಾಭ್ಯಾಸದಲ್ಲಿ ನನಗೆ ಅಭಿರುಚಿ ಹೆಚ್ಚು. ಗುರುಗಳು ನನ್ನನ್ನು ಶಿಷ್ಯನನ್ನಾಗಿ ಸ್ವೀಕರಿಸುವರೇ?

೧ನೇ ಬ್ರಹ್ಮಚಾರಿ — ಅದಕ್ಕೇನು? ಸಂತೋಷದಿಂದ ಸ್ವೀಕರಿಸುವರು. ನಿನ್ನಂತಹ ಶಿಷ್ಯರಿರುವುದು ಗುರುಗಳಿಗೆ ಹೆಮ್ಮೆಯಲ್ಲವೆ?

ಕರ್ಣ — ಆದರೆ ನಾನು ಬ್ರಾಹ್ಮಣನಲ್ಲ!

೧ನೇ ಬ್ರಹ್ಮಚಾರಿ — ಕ್ಷತ್ರಿಯರನ್ನು ಕೂಡ ಅವರು ಶಿಷ್ಯರನ್ನಾಗಿ ಸ್ವೀಕರಿಸುವರು. ಹಿಂದೆ ಭೀಷ್ಮರಿಗೆ ಚಾಪಾಗಮವನ್ನು ಬೋಧಿಸಿರುವರು.

ಕರ್ಣ — ಆದರೆ ನಾನು ಕ್ಷತ್ರಿಯನೂ ಅಲ್ಲ!

೧ನೇ ಬ್ರಹ್ಮಚಾರಿ — ಹಾಗಾದರೆ ಇನ್ನಾವ ಜಾತಿ?

ಕರ್ಣ — ನಾನು ಬೆಸ್ತರ ಕುಲದವನು!

೩ನೇ ಬ್ರಹ್ಮಚಾರಿ — ಏನು? ಬೆಸ್ತರ ಕುಲದವನೆ? (ದೂರ ಸರಿದು ನಿಲ್ಲುವನು)

೨ನೇ ಬ್ರಹ್ಮಚಾರಿ — ನೀನು ಬೆಸ್ತರವನಂತೆ ತೋರುವುದಿಲ್ಲವಲ್ಲಾ!

ಕರ್ಣ — ಆದರೂ ನಾನು ಬೆಸ್ತರ ಕುಲದವನೆ?

೧ನೇ ಬ್ರಹ್ಮಚಾರಿ — ಚಿಂತೆಯೇಕೆ ಕುಲವು ಜನನದೊಳಿಲ್ಲ; ಗುಣದೊಳಿಹುದು; ಎಂದು ಗುರುಗಳು ಅನೇಕಸಾರಿ ಹೇಳಿರುವರು. ನಿನ್ನ ಪುಣ್ಯದಿಂದ ಶಿಷ್ಯವೃತ್ತಿ ಲಭಿಸಬಹುದು, ಪ್ರಯತ್ನಿಸಿ ನೋಡೋಣ!
(ಪರಶುರಾಮನು ತನ್ನ ಇಬ್ಬರು ವಟುಗಳೊಡನೆ ಬರುವನು. ಶಿಷ್ಯರು ದೂರ ಸರಿದು ವಿನಯದಿಂದ ನಿಲ್ಲುವರು ಕರ್ಣನು ಸಾಷ್ಟಾಂಗ ನಮಸ್ಕಾರ ಮಾಡುವರು.)

ಪರುಶುರಾಮ — “ಹುಲಿ! ಹುಲಿ!” ಎಂದು ಕೂಗಿದವರು ಯಾರು?

೧ನೇ ಬ್ರಹ್ಮಚಾರಿ — ಗುರುವರ್ಯ, ಕೂಗಿದವರು ನಾವೆ! ಒಂದ ದುಷ್ಟ ವ್ಯಾಘ್ರವು ನಮ್ಮನ್ನು ಅಟ್ಟಿಸಿಕೊಂಡು ಬಂದು ಇನ್ನೇನು ಹಿಡಿದು ತಿನ್ನುವುದರಲ್ಲಿತ್ತು. ಅಷ್ಟರಲ್ಲಿ ಈತನು (ಕರ್ಣನನ್ನು ತೋರಿಸಿ) ತನ್ನ ಬಾಣದಿಂದ ಅದನ್ನು ಕೊಂದನು.
(ಪರಶುರಾಮನು ಕರ್ಣನನ್ನು ನೋಡಿ ಮುಗುಳು ನಗೆಯಿಂದ)

ಪರಶುರಾಮ — ನಿನ್ನನ್ನು ನಾನೆಲ್ಲಿಯೋ ನೋಡಿದಂತಿದೆ!

ಕರ್ಣ — ಹೌದು, ಗುರುದೇವ! ಕೆಲವು ದಿನಗಳ ಹಿಂದೆ ನಮ್ಮ ಹಳ್ಳಿಯ ಬಳಿಯ ತೊರೆಯೆಡೆಯಲ್ಲಿ ನಾನು ಕುಳಿತಾಗ ಅಲ್ಲಿಗೆ ಬಂದ ತಾವು ನನ್ನನ್ನು ಮಾತಾಡಿಸಿ ಪಾವನನನ್ನಾಗಿ ಮಾಡಿದಿರಿ.
(ಪರಶುರಾಮನು ಯೋಚಿಸಿ)

ಪರಶುರಾಮ — ನೀನು ಇಲ್ಲಿಗೇತಕೆ ಬಂದೆ?

ಕರ್ಣ — ತಮ್ಮ ಬಳಿ ಶಿಷ್ಯವೃತ್ತಿಯನ್ನವಲಂಬಿಸಿ ಶಸ್ತ್ರಾಭ್ಯಾಸ ಮಾಡಬೇಕೆಂದು ಬಂದೆ. ನನ್ನನ್ನು ಅನುಗ್ರಿಸಬೇಕು. (ಕೈ ಮುಗಿಯುವನು.)

೨ನೇ ಬ್ರಹ್ಮಚಾರಿ — ಗುರುದೇವ, ಇವನು ಬೆಸ್ತರವನಂತೆ!

ಪರಶುರಾಮ (ಕರ್ಣನನ್ನು ಅಪಾದಮಸ್ತಕಪರ್ಯಂತ ನೋಡಿ)
ಹೌದು, ಅರಿಗಳ ರುಂಡಗಳೆಂಬ ಮತ್ಸ್ಯಗಳನನ್ನು ತನ್ನ ಶರಜಾಲದಲ್ಲಿ ಹಿಡಿಯುವ ಬೆಸ್ತನು! ಬಾಲಕನೆ, ನಿನ್ನ ಹೆಸರೇನು?

ಕರ್ಣ — ರಾಧೇಯ.

ಪರಶುರಾಮ — ವಟುಗಳಿರಾ, ಯಾವಾತನ ಮೊಗದಲ್ಲಿ ತೇಜಸ್ಸು
ತೋರುವುದೊ, ಯಾವನೊಳು ಬಾಂದಳದ ಗಾಂಭೀರ್ಯ
ಮೆರೆಯುವುದೊ, ಯಾವನು ಸದಾ ಸತ್ಯವಾಡುವನೂ,
ಅವನೆಲ್ಲಿಯೆ ಇರಲಿ, ಅವನಾರೆ ಆಗಿರಲಿ,
ಬ್ರಾಹ್ಮಣನು! ಎಲ್ಲಿ ಔದಾರ್ಯವಿರುವುದೊ?
ಎಲ್ಲಿ ಸಾಮರ್ಥ್ಯ ಮೈದೋರುವುದೊ? ಮೇಣೆಲ್ಲಿ
ವೀರರಸ ಉಕ್ಕುವುದೊ ಅವರೆಲ್ಲ ಕ್ಷತ್ರಿಯರು.
ರಾಧೇಯ, ನಿನ್ನ ಸಾಮರ್ಥ್ಯಕ್ಕೆ ಮೆಚ್ಚಿದೆನು.
ನಾನರಿತ ವಿದ್ಯೆನು ನಿನಗೆ ಸಂತಸದಿಂದ
ಬೋಧಿಸುವೆ. ಸಂಪ್ರದಾಯವು ಯೋಗ್ಯತೆಯ ಮುಂದೆ
ಬಹುಕಾಲ ನಿಲ್ಲಲರಿಯದು. ಒಳಗಿಹ ಬೆಳಕು
ಹೊಳೆಯತೊಡಗಿದರೆ ಹೊರಗಿರುವ ಕತ್ತಲೆಯು
ತಡೆಯಲಾರದು ಅದನು. ನಿನ್ನ ಕಣ್ಣಿನ ಬೆಳಕೆ
ನಿನ್ನ ಕುಲವನು ಬಿಚ್ಚಿ ಹೇಳುತಿದೆ. ಮುಂದೆಂದೂ
ರಾಧೇಯನೆಂಬುವನು ಪರಶುರಾಮನ ಶಿಷ್ಯ!

(ಪರದೆ ಬೀಳುವುದು.)

ವಿಧಿವಾಣಿ

ಜನಿಸಿದರು ಕೌರವರು ಅಂಧನೃಪತಿಯ ಸತಿಯ
ಗಾಂಧಾರಿಯುದರಲಿ. ಕುಂತಿದೇವಿಯು ಪಡೆದ
ಐದುಮಂತ್ರಂಗಳಲಿ ಕಳೆದುಳಿದ ನಾಲ್ಕರಲಿ
ಮೊದಲನೆಯ ಮೂರರಲಿ ಯಮಸೂನು, ಕಲಿಭೀಮ,
ಕಲಿಪಾರ್ಥರೆಂಬುವರು, ಕಡೆಯ ಮಂತ್ರದಲಿ
ಮಾದ್ರಿಯ ಬಸಿರಿನಲ್ಲಿ ಮೂಡಿದರು ನಕುಲ
ಸಹದೇವರೆಂಬುವರು ಪಂಚಪಾಂಡವರು.
ನಂದಗೋಕುಲದಲ್ಲಿ ದೂರ್ತ ಕಂಸನ ಕೈಗೆ
ಸಿಕ್ಕದಲೆ ವಸುದೇವ ದೇವಕಿಯ ಗರ್ಭದಲಿ
ಬಂದು, ಗೊಪರ ಕೂಡಿ ಬೆಳೆಯುತಿಹನಾಟದಲಿ
ಶ್ರೀ ಕೃಷ್ಣ ಪರಮಾತ್ಮ. ಮುನಿಶಾಪದಿಂದಳಿಯೆ
ಪಾಂಡುಭೂಪತಿಯು ಮುನಿಗಳವರೈವರನು,
ಕುಂತಿಯನು, ಭೀಷ್ಮರಲ್ಲಿಗೆ ಕಳುಹಿ ತೆರಳಿದರು.
ತರುವಾಯ ಪಾಂಡವರು ಕೌರವರು ಜೊತೆಯಾಗಿ
ಲೀಲೆಯಲಿ ಬಳೆಯುತಿರೆ ಭೀಮ ದುರ್ಯೋಧನರ
ಮುನಿಸಿನಾ ತಾಮಸಿಕೆ ಮಿಗಿಲಾಯ್ತು. ಪಾಂಡವರು
ಕೌರವರು ಚಾಪಾಗಮಚಾರ್ಯ ದ್ರೋಣನಲಿ
ಶಸ್ತ್ರಶಾಸ್ತ್ರಾಭ್ಯಾಸವನು ಮಾಡುತಿಹರೀಗ.
ಕುಂತಿದೇವಿಯ ಹಿರಿಯಮಗನಾದ ಕರ್ಣನು
ರಾಧೇಯನಾಗಿ ಪರುಶುರಾಮರ ಕೂಡಿ
ಬಿಲ್ವಿದ್ಯೆನು ಕಲಿಯುತಿಹನು. ನೋಡಲ್ಲಿ;
ಮುನಿವರ ಎಲೆವನೆಯ ಬಳಿಯ ಹೊರಬಯಲಿನಲಿ
ತಾಯಿ ಗಂಗೆಯು ಕೊಟ್ಟ ಬಿಲ್ಲನೆಂತೆತ್ತುವನು! ami8 �Uug@��yನಗೇಕಮ್ಮಾ ಹೆದರಿಕೆ?
(ರಾಧೆಯೂ ಸೂತನೂ ಒಬ್ಬರನ್ನೊಬ್ಬರು ನೋಡುವರು. ಕರ್ಣನು ಬಿಲ್ಲಿಗೆ ಅಂಬನ್ನು ಹೂಡಿ ಸೇದಿ ಎಳೆಯುವನು.)

 

ಸೂತ — ಸಾಕು! ಸಾಕು, ಮಗೂ ಹೆಚ್ಚು ಏಳೆಯಬೇಡ!
(ಕರ್ಣನು ಕಿವಿಯವರೆಗೂ ಎಳೆದು ಒಂದು ಬಾಣವನ್ನು ಬಿಡುತ್ತಾನೆ.)

ರಾಧೆ — ಅಯ್ಯೊ, ಅಲ್ಲಿ ನೋಡಿ! ಆ ಮರದ ದೊಡ್ಡ ಕೊಂಬೆ ಮುರಿದು ಬಿತ್ತು.

ಸೂತ (ಸಂತೋಷದಿಂದ ಕರ್ಣನನ್ನು ಅಪ್ಪಿಕೊಂಡು) ಕಂದಾ, ನೀನೆನ್ನ ಜೀವನದ ರತ್ನ!

ರಾಧೆ — ಅವನು ಬಿಲ್ಲು ವಿದ್ಯೆ ಕಲಿಯಲು ಹೋಗುತ್ತಾನಂತೆ.

ಸೂತ — ಅದಕ್ಕೆ ನನ್ನ ತಡೆಯೇನು? ಅವನು ಕಲಿಯದಿದ್ದರೆ ಇನ್ಯಾರು ಕಲಿಯುವರು?

ಕರ್ಣ (ಸಂತೋಷದಿಂದ)
ಅಪ್ಪಾ, ಈ ಬಿಲ್ಲು ಬತ್ತಳಿಕೆಗಳನ್ನೂ ತೆಗೆದುಕೊಂಡು ನಾಳೆಯೇ ಹರಡುವೆನು.

ಸೂತ — ಆಗಲಿ ಮಗೂ. ಮನೆಗೆ ಹೋಗಿ ಎಲ್ಲವನ್ನೂ ಆಲೋಚಿಸೋಣ.

(ಎಲ್ಲರೂ ಹೊರಡುವರು)

(ಪರದೆ ಬೀಳುವುದು.)