(ಪರಶುರಾಮನ ಪರ್ಣಶಾಲೆಯ ಹೊರಭಾಗ. ಕರ್ಣನು ಧನಸ್ಸನ್ನು ಎತ್ತತ್ತಿರುವನು)

ಕರ್ಣ — ನಿನ್ನೆ ಗುರುಗಳು ಬೋಧಿಸಿದ ಮಾರ್ಗ ಬಲುಸೊಗಸು!
ಇಂದು ಗುರುಗಳು ಬರುವ ಮುನ್ನವೇ ಕಲಿತದನು
ತೋರಿಸುವೆ. ಗುರಿಯ ಗುರುತೆಲ್ಲಿ? ಎಳೆಬಿಸಿಲ
ಕಾಂತಿಯಲಿ ಕಾಣಿಸುವುದೇ ಇಲ್ಲ.
(ದೂರನೊಡಿ) ಅಲ್ಲಿಹುದು!
(ಒಂದು ಬಾಣವನ್ನು ಜೋಡಿಸಿ ಹೊಡೆದು ಪುನಃ ಗುರುತನ್ನು ನೋಡಿ)
ಗುರಿಯು ಸರಿಯಾಯ್ತೊ ಇಲ್ಲವೊ ನೋಡುವೆನು.
(ಓಡುವನು. ಇಬ್ಬರು ವಟುಗಳು ಬರುವರು.)

೧ನೇ ಬ್ರಹ್ಮಚಾರಿ — ಏನಪ್ಪಾ ಅವನ ಉತ್ಸಾಹ! ಕನಸಿನಲ್ಲಿಯೂ ಕೂಡ ಅವನಿಗೆ ವಿಲ್ವಿದ್ಯೆಯ ಹಂಬಲು!

೨ನೇ ಬ್ರಹ್ಮಚಾರಿ — ನಿನ್ನೆ ರಾತ್ರಿ ಮಲಗಿದ್ದಾಗ ಯುದ್ಧರಂಗದಲ್ಲಿ ಕೂಗುವವರಂತೆ ಕೂಗಿದನು. ನನಗೆ ಗಾಬರಿಯಾಗಿ ತಟ್ಟಿ ಎಬ್ಬಿಸಿದೆ. ಎಂತಹ ಕಷ್ಟಸಾಧ್ಯವಾದ ಕೈಚಳಕಗಳನ್ನು ಎಷ್ಟು ಬೇಗ ಕಲಿತುಬಿಟ್ಟ!

೧ನೇ ಬ್ರಹ್ಮಚಾರಿ — ಅವನು ಅನನ್ಯಸಾಮಾನ್ಯನಪ್ಪಾ!
(ಕರ್ಣನು ಬಾಣದೊಡನೆ ಓಡಿಬರುವನು)

೨ನೇ ಬ್ರಹ್ಮಚಾರಿ — ರಾಧೇಯ, ಇದೇನು ಅವಸರ?

ಕರ್ಣ — ಸರಿಯಾಗಿ ಗುರಿಯು ಬಿತ್ತೋ ಇಲ್ಲವೋ ಎಂದು ನೋಡಲು ಹೋಗಿದ್ದೆ. ಬಾಣದಿಂದ ಮುಚ್ಚಿಕೊಂಡ ಗುರಿಯ ಚಿಹ್ನೆಯೇ ಕಾಣಲಿಲ್ಲ!

೧ನೇ ಬ್ರಹ್ಮಚಾರಿ — ನಿನ್ನೆ ಗುರುಗಳು ಹೇಳಿಕೊಟ್ಟ ಮಾರ್ಗ ಚೆನ್ನಾಗಿ ಗೊತ್ತಾಯಿತೋ?

ಕರ್ಣ — ಅದನ್ನೇ ಅಭ್ಯಾಸಮಾಡುತ್ತಿದ್ದೇನೆ!

೨ನೇ ಬ್ರಹ್ಮಚಾರಿ — ಎಲ್ಲಿ? ನೋಡೋಣ ಇನ್ನೊಂದು ಸಾರಿ!

೧ನೇ ಬ್ರಹ್ಮಚಾರಿ — ಈ ಸಾರಿ ಬೇರೆಗುರಿ. ನೋಡು, ದೂರದ ಆ ಮರದ ನೆತ್ತಿಯಲ್ಲಿ ಕೆಂಪಾಗಿ ರಂಜಿಸುವ ಹೂವನ್ನು ಕತ್ತರಿಸಬೇಕು.

ಕರ್ಣ — ಅಯ್ಯೋ, ಹೂವನ್ನು ಕತ್ತರಿಸುವುದೊಂದು ವೀರತ್ವವೇ?

೧ನೇ ಬ್ರಹ್ಮಚಾರಿ — ಹಾಗಲ್ಲ, ಹಾಗಲ್ಲ; ನಿನ್ನ ಚಾತುರ್ಯದ ಪರೀಕ್ಷೆಯಾಗುವುದು.

ಕರ್ಣ — ಆಗಲಿ, ಅದಕ್ಕೇನು.
(ಒಂದು ಬಾಣವನ್ನು ಸಿಂಜಿನಿಗೆ ಸೇರಿಸಿ ಗುರಿಯಿಟ್ಟು ನಿಲ್ಲುವನು. ಪರಶುರಾಮನು ದೂರ ಬಂದು ನಿಂತು ನೋಡುವನು.)

೧ನೇ ಬ್ರಹ್ಮಚಾರಿ — ಹೂವು ಸ್ವಲ್ಪವೂ ಹಾಳಾಗಬಾರದು. ಹಾಗೆ ಕತ್ತರಿಸಬೇಕು!
(ಕರ್ಣನು ಬಾಣಪ್ರಯೋಗ ಮಾಡುವನು)

೨ನೇ ಬ್ರಹ್ಮಚಾರಿ — ಭಲಾ! ಭಲಾ! ಹೂ ಬಿದ್ದೇಬಿಟ್ಟಿತು. (ಓಡುವನು.)

೧ನೇ ಬ್ರಹ್ಮಚಾರಿ — ರಾಧೇಯ, ಇದೇನು ನಿನ್ನ ಕರಚಾತುರ್ಯ! ಅನುಪಮವಾಗಿದೆ.

ಕರ್ಣ — ಗುರುಗಳ ಕೃಪೆಯೊಂದು ಇದ್ದರೆ ಅಸಾಧ್ಯ ಸಾಧನೆಯಾಗುವುದೇನೊ ಕೌತುಕವಲ್ಲ.
(೨ನೇ ವಟು ಹೂವನ್ನು ತೆಗೆದುಕೊಂಡು ಪ್ರವೇಶಿಸಿ)

೨ನೇ ಬ್ರಹ್ಮಚಾರಿ — ಹೂವನ್ನು ಕೈಯಿಂದ ಕೊಯ್ದರೂ ಇಷ್ಟು ಸೊಗಸಾಗಿರುವುದಿಲ್ಲ. ನೋಡಿಲ್ಲಿ, ಒಂದು ದಳವು ಕೂಡ ಅಲುಗಾಡಿಲ್ಲ. ತೊಟ್ಟು ಮಾತ್ರ ತುಂಡಾಗಿದೆ.
(ಎಲ್ಲರೂ ನೋಡಿ ಸಂತೋಷಪಡುವರು.)

ಕರ್ಣ — ಅಷ್ಟೇ ಸಾಲದು. ನಿಮ್ಮಲ್ಲಿ ಯಾರಾದರೂ ಒಂದು ಸಣ್ಣ ಕಲ್ಲನ್ನು ವೇಗವಾಗಿ ಎಸೆಯಿರಿ. ನಾನು ಅದನ್ನು ಮಧ್ಯದಲ್ಲಿಯೆ ಬಾಣದಿಂದ ಹೊಡೆದು ಪುಡಿಮಾಡುವೆನು.

೧ನೇ ಬ್ರಹ್ಮಚಾರಿ — ನಿಜವಾಗಿಯೂ!

ಕರ್ಣ — ಹೆಚ್ಚು ಮಾತೇಕೆ? ನೀವು ಎಸೆಯಿರಿ!
(ಬ್ರಹ್ಮಚಾರಿಯು ಒಂದು ಸಣ್ಣಕಲ್ಲನು ಆಯ್ದು ನಿಲ್ಲುವನು. ಕರ್ಣನು ಬಾಣವನ್ನು ಹೂಡಿ ನಿಲ್ಲುವನು. ಬ್ರಹ್ಮಚಾರಿಯು ಕಲ್ಲನ್ನು ಎಸೆಯಲು ಕರ್ಣನು ಬಾಣವನ್ನು ಬಿಡುವನು. ಕಲ್ಲು ಮಧ್ಯಮಾರ್ಗದಲ್ಲಿ ಪುಡಿ ಪುಡಿಯಾಗುವುದು.)

೨ನೇ ಬ್ರಹ್ಮಚಾರಿ — ಹೋ ಕಲ್ಲು ಧೂಳಿಯಾಯಿತು.

೧ನೇ ಬ್ರಹ್ಮಚಾರಿ — ಭಾಪು ರಾಧೇಯ! ಭಾಪು! ನಿನಗೆ ಎಣೆಯಾಗುವರು ಮತ್ತಾರು ಇಲ್ಲ.

ಕರ್ಣ — ಇದೆಲ್ಲಾ ಚತುರತೆಯ ಕಾರ್ಯವಾಯಿತು. ಇನ್ನು ಶಕ್ತಿಯ ಕಾರ್ಯ! ನೋಡಿ, ಅಲ್ಲಿ ದೂರದಲ್ಲಿ ಎದ್ದಿರುವ ದೊಡ್ಡಬಂಡೆಗೆ ಬಾಣದಿಂದೆಚ್ಚು ಒಡೆಯುವೆನು.

ಇಬ್ಬರೂ — ನೋಡೋಣ! ನೋಡೋಣ!
(ಕರ್ಣನು ಬಾಣದಿಂದೆಚ್ಚು ಬಂಡೆಯನ್ನು ಒಡೆಯುವನು.)

೧ನೇ ಬ್ರಹ್ಮಚಾರಿ — ಬಂಡೆ ಪುಡಿಪುಡಿಯಾಯಿತು.

೨ನೇ ಬ್ರಹ್ಮಚಾರಿ — ಅಯ್ಯೋ ಬೆಂಕಿ! ಬೆಂಕಿ!

ಕರ್ಣ — ಹೆದರಬೇಡಿ ಜಲಾಸ್ತ್ರದಿಂದ ಅದನ್ನು ಆರಿಸುವೆನು.
(ಮತ್ತೊಂದು ಬಾಣದಿಂದ ಹೊಡೆಯುವನು. ಪರಶುರಾಮನು ಮುಂದೆ ಬಂದು ಕರ್ಣನ ಬೆನ್ನು ತಟ್ಟಿ)

ಪರಶುರಾಮ — ರಾಧೇಯ, ಇಂದಿಗೆ ನೀನು ಚಾಪಾಗಮ ಕೋವಿದನಾದೆ. ನೀನು ನನ್ನ ಕೀರ್ತಿಗೆ ಕಾಂತಿದಾಯಕನಾಗುವುದರಲ್ಲಿ ಸಂದೇಹವಿಲ್ಲ. ನಿನ್ನ ಭವಿಷ್ಯತ್ತು ಅತ್ಯಂತ ಮಹತ್ತಾದುದಾಗಿದೆ. ಕಲಿಯಬೇಕಾದುದೆಲ್ಲವನ್ನೂ ಕಲಿತಿರುವೆ. ನೀನಿನ್ನೂ ಹೊರ ಹೊರಟು ನಿನ್ನ ಸಾಮರ್ಥ್ಯದಿಂದ, ನಿನ್ನ ಅಲೌಕಿಕ ಪ್ರತಿಭೆಯಿಂದ ಜಗತ್ತನ್ನು ಬೆರಗುಗೊಳಿಸಿ ಕೀರ್ತಿವಂತನಾಗು.

ಕರ್ಣ — ಗುರುದೇವ, ಎಂದೆನಗೆ ಅಡವಿಯಲಿ ತಮ್ಮತುಳ
ಧರ್ಶನವು ದೊರಕಿತೋ, ಎಂದು ನೀವೀ ಸೂತ
ಪುತ್ರನನು ಶಿಷ್ಯನನ್ನಾಗಿ ಸ್ವೀಕರಿಸಿದಿರೋ,
ಅಂದೆನ್ನ ಪುಣ್ಯತರು ಕುಸುಮಿಸಿತು. ನೀವುಳಿಯೆ
ನಾನೆಲ್ಲಿ? ನಿಮ್ಮ ಕೃಪೆಯಿಂದೆನೆಗೆ ಕೈಸೇರಿತೀ
ಮಹಾ ಬಿಲ್ವಿದ್ಯೆ. ನಾ ನಿಮಗೆ ಚಿರಋಣಿಯು!
ಏನು ಗುರುದಕ್ಷಿಣೆಯ ನೀಡುವೆನೊ ನಾನರಿಯೆ!

ಪರಶುರಾಮ — ನನ್ನಿಯನುಗಳಿಯಬೇಡ; ಸಲಹಿದೊಡೆಯಗೆ ಮರಳಿ
ದ್ರೋಹವನೆಣಿಸಬೇಡ; ದೀನರನು ತುಳಿಯದಿರು;
ಧೂರ್ತರಿಗೆ ಮಣಿಯದಿರು. ಕಾಳೆಗದೊಳಿರುವಾಗ
ಧರ್ಮಯದ್ಧವನೆಂದೂ ನೀಗದಿರು. ಅರಿಗಳಿಗೆ
ಮೈಸೋತು ಹಿಮ್ಮೆಟ್ಟದಿರು. ಸಿಂಹದೋಲು ಬಾಳು!
ಅದುವೆ ನೀನೆನಗೀವ ಗುರುದಕ್ಷಿಣೆ!

ಕರ್ಣ (ಮಣಿದು) ಅಂತೆಗೆಯ್ವೆನು, ದೇವ, ನಿಮ್ಮೊಲ್ಮೆಯೊಂದಿರಲಿ!
(ಒಬ್ಬ ಬ್ರಹ್ಮಚಾರಿಯು ಓಡಿ ಬಂದು ಗುರುಗಳಿಗೆ ನಮಿಸಿ)

ಬ್ರಹ್ಮಚಾರಿ — ಗುರುವರ್ಯ ಭೀಷ್ಮದೇವನು ತಮ್ಮ ಸಂದರ್ಶನಕ್ಕಾಗಿ ಬಂದಿರುವನು.

ಪರಶುರಾಮ — ಆತನನ್ನು ಕರೆದುಕೊಂಡು ಬಾ. (ಕರ್ಣನಿಗೆ) ರಾಧೇಯ, ಗಾಂಗೇಯನ ಕೀರ್ತಿಯನ್ನು ಕೇಳಿದ್ದೀಯಾ?

ಕರ್ಣ — ಹೌದು, ಗುರುದೇವ, ಸ್ವಲ್ಪ ಕೇಳಿದ್ದೇನೆ.

ಪರಶುರಾಮ — ಬ್ರಹ್ಮಚರ್ಯದ ಮೂರ್ತಿ, ಸ್ವಾರ್ಥತ್ಯಾಗದ ಬೀಡು;
ಗಾಂಭೀರ್ಯದಾಗರವು, ಭಕ್ತಿಗೆ ನಲೆವನೆಯು;
ಪೂಣ್ದ ಪೂಣ್ಕೆಯ ಸಾಧಿಸುವರೊಳಗೆ ಅಗ್ಗಳನು.
ಕಲಿಯಾತನ್‌ ಅಮಿತಬಲಯುತನಾತನ್‌ ಇರಿವರೊಳು
ಕಟ್ಟಾಳು; ಮಾನನಿಧಿ; ಪಂಡಿತನು; ವರಯೋಗಿ;
ಭೀಷ್ಮನಂತಹ ಮಹಾಪುರಷನನು ಇದುವರೆಗು
ಭೂದೇವಿ ಪಡೆದಿಲ್ಲ. ಕೌರವರು ಪಾಂಡವರಿ-
ಗಾತನು ಪಿತಾಮಹನು. ಅವನೊಡನೆ ನೀನು
ಗಜಪುರಿಗೆ ಹೋದಯಾದೊಡೆ ನಿನಗೆ ಬೇಕಾದ
ಸಂಗ ದೊರೆಕೊಳ್ಳುವುದು. ನನಗವನು ಹಿರಿಯ ಶಿಷ್ಯ.
ನಿನ್ನ ಅದಟನು ತಿಳುಹಿ ಅವನೊಡನೆ ಕಳುಹುವೆನು.
ನಿನ್ನಲ್ಲಿ ನಿನ್ನ ಶೌರ್ಯವ ಮೆರೆದು ಮೇಲೇರು.
(ಭೀಷ್ಮನು ವಟುವಿನೊಡನೆ ಬಂದು ಗುರುಗಳಿಗೆ ನಮಸ್ಕರಿಸಿ ನಿಲ್ಲುವನು.)

ಪರಶುರಾಮ — ಗಾಂಗೇಯ, ನೀನಿಲ್ಲಿಗೈತಂದಹದನೇನು?

ಭೀಷ್ಮ — ಗುರುವರ್ಯ, ಅರಗಜ್ಜದಡವಿಯೊಳು ತಿರುತಿರುಗಿ
ಬೇಸತ್ತ ನಾನು, ಶಾಂತಿಲಾಭಕ್ಕಾಗಿ
ನಿಮ್ಮ ದರ್ಶನಕೆಳಸಿ ಇಲ್ಲಿಗೈತಂದಿಹೆನು;
ಮತ್ತೇನು ಇಲ್ಲ.

ಪರಶುರಾಮ — ಸಂತೋಷ. ಗಾಂಗೇಯ,
ಕುಂತೀದೇವಿಗೆ ಸುಖವೆ? ಧೃತರಾಷ್ಟ್ರ, ಗಾಂಧಾರಿ
ಪಾಂಡವರು, ಕೌರವರು ಕ್ಷೇಮವೇ? ಭಕ್ತವರ
ಶ್ರೀವಿದುರನೆಂತಿಹನು?

ಭೀಷ್ಮ — ಇದುವರೆಗೆ ಎಲ್ಲರೂ
ಸುಕ್ಷೇಮದಿಂದಿಹರು, ಗುರುದೇವ. ಪಾಂಡವರು
ಕೌರವರು ಚಾಪಾಗಮಾಚಾರ್ಯರಾಗಿರುವ
ಶ್ರೀದ್ರೋಣರಡಿಯಲ್ಲಿ ಶಸ್ತ್ರವಿದ್ಯಯನೀಗ
ಕಲಿಯುತಿಹರು. (ಕರ್ಣನನ್ನು ನೋಡಿ)
ಗುರುದೇವ, ಈ
ಕ್ರತ್ರಿಯ ಯುವಕನಾರು? (ಕರ್ಣನು ತಲೆತಗ್ಗಿಸುವನು.)

ಪರಶುರಾಮ — ಜಾತಿಯಲಿ ಸೂತಜನು;
ಗುಣದಲ್ಲಿ ಕ್ಷತ್ರಿಯನು. ಇವನೆನ್ನ ಶಿಷ್ಯ,
ರಾಧೇಯನೆಂಬುವನು. (ಕರ್ಣನು ಭೀಷ್ಮರಿಗೆ ವಂದಿಸುವನು)
ಶಸ್ತ್ರವಿದ್ಯೆಯೊಳೀತನ್
ಅಪ್ರತಿಮನಾಗಿಹನು. ಈತನನು ನೀನು
ಗಜಪುರಿಗೆ ಕೊಂಡೊಯ್ದು ಸಲಹಿದರೆ, ಮುಂದೆ
ನಿಮ್ಮ ರಾಜ್ಯದ ಬಲಕೆ ಬಲದ ಕೈಯಾಗುವನು.

ಭೀಷ್ಮ (ಸ್ವಗತ) ಈ ಬಾಲಕನ ಕಂಡು ಇಂತೇಕೆ ನನ್ನೆದೆಯು
ಮೋಹದಲಿ ಸಿಕ್ಕಿಹುದು? ಇವನನ್ನರಮಿತರನು
ಕಂಡೆನಾದರು ಇಂತು ಎದೆ ತಲ್ಲಣಿಸಲಿಲ್ಲ.
(ಬಹಿರಂಗ) ಗುರುದೇವ, ತಮ್ಮಾಜ್ಞೆಯಂತೆಯೇ ವರ್ತಿಸುವೆ.
ನನ್ನ ಮೊಮ್ಮಕ್ಕಳೊಡನೀತನೂ ಕೂಡಿರಲಿ.

ಪರಶುರಾಮ — ರಾಧೇಯ, ಭೀಷ್ಮನೊಂದಿಗೆ ಹೊರಡಲನುವಾಗು!
(ಕರ್ಣ ಮೊದಲಾದವರು ಹೋಗುವರು. ಪರಶುರಾಮ ಗಂಭೀರ ಧ್ವನಿಯಿಂದ)
ಗಾಂಗೇಯ, ಈ ವೀರ ಬಾಲಕನು ಸಾಮಾನ್ಯ-
ನೆಂದರಿಯಬೇಡ. ನೀನೊಂದು ವರ್ಷದಲಿ
ಕಲಿತುದನು ಇವನೊಂದು ತಿಂಗಳಲಿ ಅರಿತಿಹನು.

ಭೀಷ್ಮ — ಗುರುದೇವ, ಅವನ ಮುಖಕಾಂತಿಯೇ ಉಸುರವುದು
ಅವನಾತ್ಮವೆನಿತು ಮಹಿಮಾಸ್ಪದವು ಎಂಬುದನು.
ವೀರನರಿಯನೆ ವೀರನಾರೆಂಬುದನು?

ಪರಶುರಾಮ — ಹೌದು, ಗಾಂಗೇಯ, ಯಾವ ಚಿಪ್ಪಿನೊಳಾವ
ಮುತ್ತಿರುವುದೆಂಬುದನು ಬಲ್ಲವರೆ ಬಲ್ಲರು! o�fGes@��ymily: “Times New Roman”;mso-fareast-theme-font:minor-fareast;mso-ansi-language:EN-US; mso-fareast-language:EN-US;mso-bidi-language:KN’>ಪಂಚಪಾಂಡವರು.
ನಂದಗೋಕುಲದಲ್ಲಿ ದೂರ್ತ ಕಂಸನ ಕೈಗೆ
ಸಿಕ್ಕದಲೆ ವಸುದೇವ ದೇವಕಿಯ ಗರ್ಭದಲಿ
ಬಂದು, ಗೊಪರ ಕೂಡಿ ಬೆಳೆಯುತಿಹನಾಟದಲಿ
ಶ್ರೀ ಕೃಷ್ಣ ಪರಮಾತ್ಮ. ಮುನಿಶಾಪದಿಂದಳಿಯೆ
ಪಾಂಡುಭೂಪತಿಯು ಮುನಿಗಳವರೈವರನು,
ಕುಂತಿಯನು, ಭೀಷ್ಮರಲ್ಲಿಗೆ ಕಳುಹಿ ತೆರಳಿದರು.
ತರುವಾಯ ಪಾಂಡವರು ಕೌರವರು ಜೊತೆಯಾಗಿ
ಲೀಲೆಯಲಿ ಬಳೆಯುತಿರೆ ಭೀಮ ದುರ್ಯೋಧನರ
ಮುನಿಸಿನಾ ತಾಮಸಿಕೆ ಮಿಗಿಲಾಯ್ತು. ಪಾಂಡವರು
ಕೌರವರು ಚಾಪಾಗಮಚಾರ್ಯ ದ್ರೋಣನಲಿ
ಶಸ್ತ್ರಶಾಸ್ತ್ರಾಭ್ಯಾಸವನು ಮಾಡುತಿಹರೀಗ.
ಕುಂತಿದೇವಿಯ ಹಿರಿಯಮಗನಾದ ಕರ್ಣನು
ರಾಧೇಯನಾಗಿ ಪರುಶುರಾಮರ ಕೂಡಿ
ಬಿಲ್ವಿದ್ಯೆನು ಕಲಿಯುತಿಹನು. ನೋಡಲ್ಲಿ;
ಮುನಿವರ ಎಲೆವನೆಯ ಬಳಿಯ ಹೊರಬಯಲಿನಲಿ
ತಾಯಿ ಗಂಗೆಯು ಕೊಟ್ಟ ಬಿಲ್ಲನೆಂತೆತ್ತುವನು! ami8 �Uug@��yನಗೇಕಮ್ಮಾ ಹೆದರಿಕೆ?
(ರಾಧೆಯೂ ಸೂತನೂ ಒಬ್ಬರನ್ನೊಬ್ಬರು ನೋಡುವರು. ಕರ್ಣನು ಬಿಲ್ಲಿಗೆ ಅಂಬನ್ನು ಹೂಡಿ ಸೇದಿ ಎಳೆಯುವನು.)

 

ಸೂತ — ಸಾಕು! ಸಾಕು, ಮಗೂ ಹೆಚ್ಚು ಏಳೆಯಬೇಡ!
(ಕರ್ಣನು ಕಿವಿಯವರೆಗೂ ಎಳೆದು ಒಂದು ಬಾಣವನ್ನು ಬಿಡುತ್ತಾನೆ.)

ರಾಧೆ — ಅಯ್ಯೊ, ಅಲ್ಲಿ ನೋಡಿ! ಆ ಮರದ ದೊಡ್ಡ ಕೊಂಬೆ ಮುರಿದು ಬಿತ್ತು.

ಸೂತ (ಸಂತೋಷದಿಂದ ಕರ್ಣನನ್ನು ಅಪ್ಪಿಕೊಂಡು) ಕಂದಾ, ನೀನೆನ್ನ ಜೀವನದ ರತ್ನ!

ರಾಧೆ — ಅವನು ಬಿಲ್ಲು ವಿದ್ಯೆ ಕಲಿಯಲು ಹೋಗುತ್ತಾನಂತೆ.

ಸೂತ — ಅದಕ್ಕೆ ನನ್ನ ತಡೆಯೇನು? ಅವನು ಕಲಿಯದಿದ್ದರೆ ಇನ್ಯಾರು ಕಲಿಯುವರು?

ಕರ್ಣ (ಸಂತೋಷದಿಂದ)
ಅಪ್ಪಾ, ಈ ಬಿಲ್ಲು ಬತ್ತಳಿಕೆಗಳನ್ನೂ ತೆಗೆದುಕೊಂಡು ನಾಳೆಯೇ ಹರಡುವೆನು.

ಸೂತ — ಆಗಲಿ ಮಗೂ. ಮನೆಗೆ ಹೋಗಿ ಎಲ್ಲವನ್ನೂ ಆಲೋಚಿಸೋಣ.

(ಎಲ್ಲರೂ ಹೊರಡುವರು)

(ಪರದೆ ಬೀಳುವುದು.)