(ಹಸ್ತಿನಾಪುರದ ಅರಮನೆಯ ಒಂದು ಭಾಗ. ಕೌರವನೂ ದುಶ್ಯಾಸನನೂ ಬರುವರು)

ಕೌರವ — ಅವನು ಸೂತಜನಾದರೇನು, ದುಶ್ಯಾಸನ?
ಕುಂಭಸಂಭವನಾದ ಕತದಿಂದ ದ್ರೋಣನೇಂ
ಬಿಲ್ಲೋಜನಾಗನೇ? ನಮಗೆ ಗುರುವಾಗನೇ?
ಆಚಾರ್ಯನಾಗನೇ? ಬ್ರಾಹ್ಮಣನಾಗನೇ?
ಸೂತನೊಬ್ಬನು ಸಾಕಿ ಸಲಹಿದ ಮಾತ್ರದಿಂ
ರಾಧೇಯನಕುಲಜನೆ? ಅವನ ತೇಜಸ್ಸು
ನಮ್ಮನಿಬರೊಳಗಾವನಲ್ಲಿಹುದು? ನೀನೆ ಹೇಳು!
ಪಾರ್ಥನಲ್ಲಿರುವುದೇ? ಭೀಮನಲ್ಲಿರುವುದೇ?
ಯಮಜನಲ್ಲಿರುವುದೇ? ಮೇಣೆನ್ನೊಳಿರುವುದೇ?
ಮೇಣ್‌ ನಿನ್ನೊಳೊಳದೇ? ಪಿತಾಮಹನು, ಭೀಷ್ಮನು
ತನಗೆಣೆಯು ರಾಧೇಯನೆಂದರುಹಲಿಲ್ಲವೇ?
ಹೆರರ ಜಸವನು ಸಹಿಸಲಾರದವನಾ ನರನು.
ಭೀಮನಿಗೆ ಮಚ್ಚರವು ಮಿಗಿಲು. ಯಮಜನೋ
ನುಡಿಯಲೊಲ್ಲನು, ಕಲ್ಲು, ಅವನ ಮಾತೆಮಗೇಕೆ?

ದುಶ್ಯಾಸನ — ಅಣ್ಣಾ, ನೀನೆಂದ ನುಡಿ ನನ್ನಿ, ನಮಗೇನು?
ಯಾರಾದರೇನಂತೆ, ವೀರನಾದರೆ ಸಾಕು.
ಸೂತನಾಗಲಿ, ಬೆಸ್ತನಾಗಲಿ! ಆತ್ಮಕ್ಕೆ
ಸೂತತ್ವಮೆಲ್ಲಿಯದು? ಬೆಸ್ತತನವೆಲ್ಲಿಯದು?
ರಾಧೇಯನೆಮ್ಮೊಡನೆ ಸೇರಿದರೆ, ಭೀಮ
ಅರ್ಜುನರ ಬಲವೆಲ್ಲ ಉಡುಗುವುದು. ಕುಗ್ಗುವುದು
ಹೆಮ್ಮೆ. ಹೆಚ್ಚುವುದು ನಮ್ಮೆಡೆಯ ಸಾಮರ್ಥ್ಯ!
ಸಾಮಾನ್ಯ ಬಲಯುತನೆ ಪರಶುರಾಮನ ಶಿಷ್ಯನು?
ಬಿಲ್ವಿದ್ಯೆಯೆಲ್ಲವನು ಬಾಲ್ಯದಲ್ಲಿಯೆ ಅರಿತ
ರಾಧೇಯನಳವಿಗಳವೆಲ್ಲಿಯದು? ಗರುಗಳೊ-
ಪ್ಪಿದರಾಯ್ತು!

ಕೌರವ — ಗುರುಗಳೊಪ್ಪಿಗೆಯೇಕೆ? ನಾನೊಪ್ಪೆ
ಗರುಗುಳೊಪ್ಪಲೆ ಬೇಕು!

ದುಶ್ಯಾಸನ — ಭೀಮ ಅರ್ಜುನರು?

ಕೌರವ — ನನ್ನ ನಚ್ಚಿನ ಗೆಳೆಯ ರಾಧೇಯನನು ತಡೆವ
ಕಲಿಯಾರು? ನೋಡುವೆನು! ರಾಧೇಯ! ರಾಧೇಯ!
ಏನು ಗಾಂಭೀರ್ಯವವನದು, ತಮ್ಮ? ಕಂಡೊಡನೆ
ನನ್ನೆದೆಯು ಅವನೆದೆಯೊಳಾಂದಾಗಿ ಹೋಯಿತು!

ದುಶ್ಯಾಸನ — ಸೂತಜನ ಕೂಡಿಹರು ಕ್ಷತ್ರಿಯರು ಎಂದು ಜನ
ಆಡಿಕೊಳ್ಳುವರಲ್ಲಾ!

ಕೌರವ (ತಿರಸ್ಕಾರದಿಂದ) ಜನರು! ಕುರಿಗಳ ಹಿಂಡು!
ಅವರೇನು ಬಲ್ಲರು? ರಾಧೇಯನಂ ಕರೆದು
ತರಲೆಂದು ಹೋದ ದೂತನು ಏಕೆ ಬರಲಿಲ್ಲ?
(ಕರ್ಣನು ದೂತನೊಡಗೂಡಿ ಬರುವನು. ಕೌರವನು ಅವನನ್ನು ಸ್ನೇಹದಿಂದ ಕೈಹಿಡಿದು ಮಾತಾಡಿಸುವನು.)

ಕರ್ಣ — ಕೌರವೇಂದ್ರ, ನನಗಾಗಿ ಬಹಳ ಹೊತ್ತು ಕಾದಂತೆ ತೋರುವುದು.
ಕೌರವ — ಹೌದು ರಾಧೇಯ ಚಿಂತೆಯೇನದರಲ್ಲಿ?
ಒಲಿದವರಿಗಾಗಿ ಕಾಯುವುದೊಂದು ಸವಿಗಜ್ಜ!
ನೀನೆಮ್ಮ ರಾಜನಗರಿಗೆ ಬಂದುದೆಮಗೆಲ್ಲ
ಬನಗಳಿಗೆ ಸುಗ್ಗಿ ಬಂದಂತಿಹುದು.

ಕರ್ಣ — ಕೌರವೇಂದ್ರ,
ನಿಮ್ಮ ಪರಿಚಯದಿಂದ ನನ್ನೆದೆಯು ಹೊಸಬೆಳಕ
ಕಂಡಿಹುದು. ಹೊಸಬನಾದೆನಗಿಲ್ಲಿ ದೊರೆತ
ಸನ್ಮಾನವೆನ್ನ ಯೋಗ್ಯತೆ ಮೀರಿ ಹೋಗಿಹುದು.
ನಾನು ಸೂತಜನೆಂಬ ನನ್ನಿಯನೆ ಮರೆತಿಹೆನು;
ನಿಮ್ಮೆಲ್ಲರೊಡನೆ ನಾನೊಬ್ಬನೆಂದರಿತಿಹೆನು.
ಆಚಾರ್ಯ ಭೀಷ್ಮರೊಲ್ಮೆಯು ನನ್ನನಾವರಿಸಿ
ಬಿಟ್ಟಿಹುದು. ನಿನ್ನ ನೇಹದ ಬಲೆಗೆ ಸಿಕ್ಕಿರುವ
ನಾನಂತೂ, ಚೆಲುವಿನಲಿ ಸೆರೆಯಾದ ಒಲುಮೆಯೊಲು,
ಮೈಮರೆತು ಹೋಗಿರುವೆ.

ಕೌರವ — ರಾಧೇಯ, ಮರೆತುಬಿಡು
ನೀನು ಸೂತಜನೆಂಬ ಚಿಂತೆಯನು.

ದುಶ್ಯಾಸನ — ನೀನೆಮ್ಮ
ಸೋದರನು.

ಕರ್ಣ (ನಗುತ್ತ) ನಿನ್ನೆ ಬಿಲ್ವಿದ್ಯೆಯಲ್ಲಿ ತೊಡಗಿದ್ದ
ನಿಮ್ಮೆಲ್ಲರನು ನಾನು ದೂರದಿಂ ನೋಡಿದೆನು.
ತಪ್ಪಾಗಿ ಬಿಲ್ವಿಡಿದು ತಪ್ಪು ಗುರಿಯನ್ನಿಟ್ಟು
ವಿಕ್ರಮದ ಮೆರೆಯುತಿರ್ದಾ ಕಲಿ ಅದಾರು?

ಕೌರವ — ಅವನು ಪಾಂಡುನಂದನನಾದ ಅರ್ಜುನನು,
ಕುಂತಿದೇವಿಯ ಮಗನು.

ಕರ್ಣ — ನನ್ನನ್ನು ನೋಡುತ್ತಲೆ
ಹುಬ್ಬುಗಂಟಿಕ್ಕುತ್ತ ಹೆಮ್ಮರನ ಹೋಲಿರ್ದ
ಮತ್ತೊಬ್ಬನೊಡಗೂಡಿ ಪಿಸುಮಾತನಾಡಿದನು.
ಅವನ ನಡತೆಯು ನನಗೆ ಏಕೊ ಸರಿಬೀಳಲಿಲ್ಲ.

ದುಶ್ಯಾಸನ — ಮತ್ತೊಬ್ಬನೇ? ದುರಳನೆಂದು ಹೆಸರಾಂತಿರುವ
ಭೀಮಸೇನನು, ಪಾರ್ಥನಿಗೆ ಅಣ್ಣನಾತನು.

ಕೌರವ — ನೀನಿಂದು ಗರುಡಿಗೆ ಬಂದೊಡೆಲ್ಲವನರಿವೆ.

ದುಶ್ಯಾಸನ — ಇನ್ನೇನು ಗರುಡಿಯಾಚಾರ್ಯನೈತರುವ ಹೊತ್ತು
ಸನ್ನಿಹಿತವಾಗುತಿದೆ. ನಮ್ಮೊಡನೆಯೇ ಬಾ.

ಕರ್ಣ — ಸಂತೋಷದಿಂದಲ್ಲಿಗೈತರುವೆ. ನಾನರಿತ
ವಿಲ್ವಿದೈಗಿನ್ನಿಷ್ಟು ಕಾಂತಿ ಮಿಗಿಲಾಗುವುದು.
ಕಂಡರೆಯೆ ಕಲಿತ ವಿದ್ಯೆಗೆ ಕಾಂತಿ ಹೆಚ್ಚುವುದು.
ಎಂದೆನ್ನ ಗುರುದೇವ ಪರಶುರಾಮನ ಮತವು.

ದುಶ್ಯಾಸನ — ರಾಧೇಯ, ನೀನವನ ಶಿಷ್ಯನಾದುದು ಹೇಗೆ?
ಕೊಡಲಿಗೊರವನು ವಿಲಯದಗ್ನಿಯ ಕಿಡಿಯು
ಎಂದು ನಾವೆಲ್ಲ ಕೇಳಿರುವೆವು.

ಕರ್ಣ — ಸುಳ್ಳುಮಾತು;
ಗುರುದೇವನನ್ನರಿಯದಿಹರಂತು ತಿಳಿಯುವರು.
ಸಂಚರಿಸುತವನೊಡನೆ ಸೇವಿಸಿದರಾತನನು
ಅವನು ಕರುಣೆಯ ಗಣಿಯು ಎಂದು ಗೊತ್ತಾಗುವುದು.
ನನ್ನ ಬಿಲ್ಲೋಜನತಿಶಾಂತಚಿತ್ತನೆಂದರಿಯುವುದು.
ಕೌರವೇಂದ್ರ, ಏನನಾಲೋಚಿಸುತಲಿರುವೆ?

ಕೌರವ — ರಾಧೇಯ, ನಿನ್ನ ಮಾತಾಪಿತೃಗಳೆಲ್ಲಿಹರು?

ಕರ್ಣ — ನಮ್ಮ ಹಳ್ಳಿಯಲಿಹರು. ನನ್ನ ತಾಯಿಯು ನನ್ನ
ನೆನೆಯತಿಹಳಲ್ಲಿ. ನಲಿಯುತಿಹೆ ನಾನಿಲ್ಲಿ.
ನನ್ನ ತಾಯಿಯ ನೋಡಲೆನ್ನೆದೆಯು ತವಕ
ಪಡುತಿಹುದು. ಶೀಘ್ರದಲ್ಲಿಯೆ ಹೋಗಿ
ಕಾಣುವೆನು.

ಕೌರವ — ಬೇಡೀಗ, ರಾಧೇಯ. ಕೆಲವು ದಿನ-
ಮಿಲ್ಲಿರ್ದು, ಆಮೇಲೆ ಅವರನಿಲ್ಲಿಗೆ ಕರೆಸಿ
ಸುಖದಿಂದಲಿರಿಸೋಣ! ದೊರೆಯ ಗೆಳೆಯನ ತಾಯಿ
ತಂದೆಗಳು ಬಡವರಂತಿಹುದುಂಟೆ?
(“ಎಲಾ ಅರ್ಜುನ, ಇಂದವನು ಜಗಳಕ್ಕೆ ಬಂದರೆ ಎಲುಬನ್ನು ನುಚ್ಚು ನೂರಾಗೊಡೆಯುವೆನುಭೀಮನ ಕೂಗು ಕೇಳಿಸುವುದು)

ಕರ್ಣ — ಅದೇನು ಕೋಲಾಹಲ?

ದುಶ್ಯಾಸನ — ಗರಡಿಯ ಗದ್ದಲ. ಆ ಕಹಳೆಬಾಯಿಯ ಭೀಮನ
ಅಟ್ಟಹಾಸದ ಕೂಗು!

ಕೌರವ — ಅವನೇನೆಂದನೆಂದು ಕೇಳಿದೆಯಾ, ದುಶ್ಯಾಸನ?

ದುಶ್ಯಾಸನ — ಅವನ ಹೆಗ್ಗೊರಲಿನ ತೂರ್ಯವಾಣಿಯ ಅರ್ಥ ನನಗೆ
ಗೊತ್ತಾಗಲಿಲ್ಲ.

ಕೌರವ — “ಇಂದವನು ಜಗಳಕ್ಕೆ ಬಂದರೆ ಎಲುಬನ್ನು ನುಚ್ಚು
ನೂರಾಗೊಡೆಯುವೆನು” ಎಂದನಲ್ಲಾ!

ದುಶ್ಯಾಸನ — ಯಾರ ಎಲುಬನ್ನು?

ಕೌರವ — ಇನ್ನಾರದು? ನನ್ನದೆಂದೇ ಅವನ ಭಾವ!

ಕರ್ಣ — ಕೌರವೇಂದ್ರನ ಕೂಡೆ ರಾಧೇಯನಿರುವನ್ನೆಗಂ
ಭೀಮನಾಗಲಿ, ಪಾರ್ಥನಾಗಲಿ, ಯಾರಾದ-
ರೇನಂತೆ ಕೌರವೇಂದ್ರನ ಮುಟ್ಟಲಾರರು.

ದುಶ್ಯಾಸನ — ಈಗ ಗರುಡಿಗೆ ಹೋಗಿ ಗುರುಗಳೈತಹ ಮುನ್ನ
ಭೀಮನೇನೆಸಗುವನೊ ನೋಡೋಣ; ಬನ್ನಿ. (ತೆರಳುವನು)

ಕೌರವ (ಕರ್ಣನನ್ನೆ ನೋಡುತ್ತ)
ರಾಧೇಯ, ಮುಂದೆ ಎಂದೆಂದಿಗೂ ನೀನೆನ್ನ
ಜೀವದುಸಿರೆಂದು ತಿಳಿಯುವೆನು.

ಕರ್ಣ — ಕೌರವೇಂದ್ರ,
ನೀ ಬೇರೆ ನಾ ಬೇರೆ ಎಂಬುದನು ಮರೆತೆ.
ನಿನ್ನುಸಿರೆ ಎನ್ನುಸಿರು; ನಿನ್ನದೆಯೆ ಎನ್ನದೆಯು!
ನಿನ್ನಳಿವೆ ಎನ್ನಳಿವು; ನಿನ್ನುಳಿವೆ ಎನ್ನುಳಿವು! (ಅಪ್ಪವರು.)

(ಪರದೆ ಬೀಳುವುದು) pan>.
ಕಲಿಯಾತನ್‌ ಅಮಿತಬಲಯುತನಾತನ್‌ ಇರಿವರೊಳು
ಕಟ್ಟಾಳು; ಮಾನನಿಧಿ; ಪಂಡಿತನು; ವರಯೋಗಿ;
ಭೀಷ್ಮನಂತಹ ಮಹಾಪುರಷನನು ಇದುವರೆಗು
ಭೂದೇವಿ ಪಡೆದಿಲ್ಲ. ಕೌರವರು ಪಾಂಡವರಿ-
ಗಾತನು ಪಿತಾಮಹನು. ಅವನೊಡನೆ ನೀನು
ಗಜಪುರಿಗೆ ಹೋದಯಾದೊಡೆ ನಿನಗೆ ಬೇಕಾದ
ಸಂಗ ದೊರೆಕೊಳ್ಳುವುದು. ನನಗವನು ಹಿರಿಯ ಶಿಷ್ಯ.
ನಿನ್ನ ಅದಟನು ತಿಳುಹಿ ಅವನೊಡನೆ ಕಳುಹುವೆನು.
ನಿನ್ನಲ್ಲಿ ನಿನ್ನ ಶೌರ್ಯವ ಮೆರೆದು ಮೇಲೇರು.
(ಭೀಷ್ಮನು ವಟುವಿನೊಡನೆ ಬಂದು ಗುರುಗಳಿಗೆ ನಮಸ್ಕರಿಸಿ ನಿಲ್ಲುವನು.)

 

ಪರಶುರಾಮ — ಗಾಂಗೇಯ, ನೀನಿಲ್ಲಿಗೈತಂದಹದನೇನು?

ಭೀಷ್ಮ — ಗುರುವರ್ಯ, ಅರಗಜ್ಜದಡವಿಯೊಳು ತಿರುತಿರುಗಿ
ಬೇಸತ್ತ ನಾನು, ಶಾಂತಿಲಾಭಕ್ಕಾಗಿ
ನಿಮ್ಮ ದರ್ಶನಕೆಳಸಿ ಇಲ್ಲಿಗೈತಂದಿಹೆನು;
ಮತ್ತೇನು ಇಲ್ಲ.

ಪರಶುರಾಮ — ಸಂತೋಷ. ಗಾಂಗೇಯ,
ಕುಂತೀದೇವಿಗೆ ಸುಖವೆ? ಧೃತರಾಷ್ಟ್ರ, ಗಾಂಧಾರಿ
ಪಾಂಡವರು, ಕೌರವರು ಕ್ಷೇಮವೇ? ಭಕ್ತವರ
ಶ್ರೀವಿದುರನೆಂತಿಹನು?

ಭೀಷ್ಮ — ಇದುವರೆಗೆ ಎಲ್ಲರೂ
ಸುಕ್ಷೇಮದಿಂದಿಹರು, ಗುರುದೇವ. ಪಾಂಡವರು
ಕೌರವರು ಚಾಪಾಗಮಾಚಾರ್ಯರಾಗಿರುವ
ಶ್ರೀದ್ರೋಣರಡಿಯಲ್ಲಿ ಶಸ್ತ್ರವಿದ್ಯಯನೀಗ
ಕಲಿಯುತಿಹರು. (ಕರ್ಣನನ್ನು ನೋಡಿ)
ಗುರುದೇವ, ಈ
ಕ್ರತ್ರಿಯ ಯುವಕನಾರು? (ಕರ್ಣನು ತಲೆತಗ್ಗಿಸುವನು.)

ಪರಶುರಾಮ — ಜಾತಿಯಲಿ ಸೂತಜನು;
ಗುಣದಲ್ಲಿ ಕ್ಷತ್ರಿಯನು. ಇವನೆನ್ನ ಶಿಷ್ಯ,
ರಾಧೇಯನೆಂಬುವನು. (ಕರ್ಣನು ಭೀಷ್ಮರಿಗೆ ವಂದಿಸುವನು)
ಶಸ್ತ್ರವಿದ್ಯೆಯೊಳೀತನ್
ಅಪ್ರತಿಮನಾಗಿಹನು. ಈತನನು ನೀನು
ಗಜಪುರಿಗೆ ಕೊಂಡೊಯ್ದು ಸಲಹಿದರೆ, ಮುಂದೆ
ನಿಮ್ಮ ರಾಜ್ಯದ ಬಲಕೆ ಬಲದ ಕೈಯಾಗುವನು.

ಭೀಷ್ಮ (ಸ್ವಗತ) ಈ ಬಾಲಕನ ಕಂಡು ಇಂತೇಕೆ ನನ್ನೆದೆಯು
ಮೋಹದಲಿ ಸಿಕ್ಕಿಹುದು? ಇವನನ್ನರಮಿತರನು
ಕಂಡೆನಾದರು ಇಂತು ಎದೆ ತಲ್ಲಣಿಸಲಿಲ್ಲ.
(ಬಹಿರಂಗ) ಗುರುದೇವ, ತಮ್ಮಾಜ್ಞೆಯಂತೆಯೇ ವರ್ತಿಸುವೆ.
ನನ್ನ ಮೊಮ್ಮಕ್ಕಳೊಡನೀತನೂ ಕೂಡಿರಲಿ.

ಪರಶುರಾಮ — ರಾಧೇಯ, ಭೀಷ್ಮನೊಂದಿಗೆ ಹೊರಡಲನುವಾಗು!
(ಕರ್ಣ ಮೊದಲಾದವರು ಹೋಗುವರು. ಪರಶುರಾಮ ಗಂಭೀರ ಧ್ವನಿಯಿಂದ)
ಗಾಂಗೇಯ, ಈ ವೀರ ಬಾಲಕನು ಸಾಮಾನ್ಯ-
ನೆಂದರಿಯಬೇಡ. ನೀನೊಂದು ವರ್ಷದಲಿ
ಕಲಿತುದನು ಇವನೊಂದು ತಿಂಗಳಲಿ ಅರಿತಿಹನು.

ಭೀಷ್ಮ — ಗುರುದೇವ, ಅವನ ಮುಖಕಾಂತಿಯೇ ಉಸುರವುದು
ಅವನಾತ್ಮವೆನಿತು ಮಹಿಮಾಸ್ಪದವು ಎಂಬುದನು.
ವೀರನರಿಯನೆ ವೀರನಾರೆಂಬುದನು?

ಪರಶುರಾಮ — ಹೌದು, ಗಾಂಗೇಯ, ಯಾವ ಚಿಪ್ಪಿನೊಳಾವ
ಮುತ್ತಿರುವುದೆಂಬುದನು ಬಲ್ಲವರೆ ಬಲ್ಲರು! o�fGes@��ymily: “Times New Roman”;mso-fareast-theme-font:minor-fareast;mso-ansi-language:EN-US; mso-fareast-language:EN-US;mso-bidi-language:KN’>ಪಂಚಪಾಂಡವರು.
ನಂದಗೋಕುಲದಲ್ಲಿ ದೂರ್ತ ಕಂಸನ ಕೈಗೆ
ಸಿಕ್ಕದಲೆ ವಸುದೇವ ದೇವಕಿಯ ಗರ್ಭದಲಿ
ಬಂದು, ಗೊಪರ ಕೂಡಿ ಬೆಳೆಯುತಿಹನಾಟದಲಿ
ಶ್ರೀ ಕೃಷ್ಣ ಪರಮಾತ್ಮ. ಮುನಿಶಾಪದಿಂದಳಿಯೆ
ಪಾಂಡುಭೂಪತಿಯು ಮುನಿಗಳವರೈವರನು,
ಕುಂತಿಯನು, ಭೀಷ್ಮರಲ್ಲಿಗೆ ಕಳುಹಿ ತೆರಳಿದರು.
ತರುವಾಯ ಪಾಂಡವರು ಕೌರವರು ಜೊತೆಯಾಗಿ
ಲೀಲೆಯಲಿ ಬಳೆಯುತಿರೆ ಭೀಮ ದುರ್ಯೋಧನರ
ಮುನಿಸಿನಾ ತಾಮಸಿಕೆ ಮಿಗಿಲಾಯ್ತು. ಪಾಂಡವರು
ಕೌರವರು ಚಾಪಾಗಮಚಾರ್ಯ ದ್ರೋಣನಲಿ
ಶಸ್ತ್ರಶಾಸ್ತ್ರಾಭ್ಯಾಸವನು ಮಾಡುತಿಹರೀಗ.
ಕುಂತಿದೇವಿಯ ಹಿರಿಯಮಗನಾದ ಕರ್ಣನು
ರಾಧೇಯನಾಗಿ ಪರುಶುರಾಮರ ಕೂಡಿ
ಬಿಲ್ವಿದ್ಯೆನು ಕಲಿಯುತಿಹನು. ನೋಡಲ್ಲಿ;
ಮುನಿವರ ಎಲೆವನೆಯ ಬಳಿಯ ಹೊರಬಯಲಿನಲಿ
ತಾಯಿ ಗಂಗೆಯು ಕೊಟ್ಟ ಬಿಲ್ಲನೆಂತೆತ್ತುವನು! ami8 �Uug@��yನಗೇಕಮ್ಮಾ ಹೆದರಿಕೆ?
(ರಾಧೆಯೂ ಸೂತನೂ ಒಬ್ಬರನ್ನೊಬ್ಬರು ನೋಡುವರು. ಕರ್ಣನು ಬಿಲ್ಲಿಗೆ ಅಂಬನ್ನು ಹೂಡಿ ಸೇದಿ ಎಳೆಯುವನು.)

 

ಸೂತ — ಸಾಕು! ಸಾಕು, ಮಗೂ ಹೆಚ್ಚು ಏಳೆಯಬೇಡ!
(ಕರ್ಣನು ಕಿವಿಯವರೆಗೂ ಎಳೆದು ಒಂದು ಬಾಣವನ್ನು ಬಿಡುತ್ತಾನೆ.)

ರಾಧೆ — ಅಯ್ಯೊ, ಅಲ್ಲಿ ನೋಡಿ! ಆ ಮರದ ದೊಡ್ಡ ಕೊಂಬೆ ಮುರಿದು ಬಿತ್ತು.

ಸೂತ (ಸಂತೋಷದಿಂದ ಕರ್ಣನನ್ನು ಅಪ್ಪಿಕೊಂಡು) ಕಂದಾ, ನೀನೆನ್ನ ಜೀವನದ ರತ್ನ!

ರಾಧೆ — ಅವನು ಬಿಲ್ಲು ವಿದ್ಯೆ ಕಲಿಯಲು ಹೋಗುತ್ತಾನಂತೆ.

ಸೂತ — ಅದಕ್ಕೆ ನನ್ನ ತಡೆಯೇನು? ಅವನು ಕಲಿಯದಿದ್ದರೆ ಇನ್ಯಾರು ಕಲಿಯುವರು?

ಕರ್ಣ (ಸಂತೋಷದಿಂದ)
ಅಪ್ಪಾ, ಈ ಬಿಲ್ಲು ಬತ್ತಳಿಕೆಗಳನ್ನೂ ತೆಗೆದುಕೊಂಡು ನಾಳೆಯೇ ಹರಡುವೆನು.

ಸೂತ — ಆಗಲಿ ಮಗೂ. ಮನೆಗೆ ಹೋಗಿ ಎಲ್ಲವನ್ನೂ ಆಲೋಚಿಸೋಣ.

(ಎಲ್ಲರೂ ಹೊರಡುವರು)

(ಪರದೆ ಬೀಳುವುದು.)