ಒಕ್ಕಲಿಗರು (ವಕ್ಕಲಿಗ, ಗೌಡ, ಹೆಗಡೆ) : ಒಕ್ಕಲು(ವ್ಯವಸಾಯ) ಮಾಡುವವರು. ವರ್ಣಾಶ್ರಮ ವ್ಯವಸ್ಥೆಯಲ್ಲಿ ಶೂದ್ರ ವರ್ಗಕ್ಕೆ ಸೇರುತ್ತಾರೆ.

ಕುಂಬಾರ : ಮಡಿಕೆ- ಕುಡಿಕೆಗಳನ್ನು ತಯಾರಿಸುವವರು

ಕಿಲಿಸ್ತರು : ಕಿಲಿಸ್ತರು ಎಂದರೆ ಕ್ರೈಸ್ತ ಧರ್ಮದವರು. ಈ ಧರ್ಮ ಯುರೋಪಿನಿಂದ ಭಾರತಕ್ಕೆ ಸಾಮ್ರಾಜ್ಯಶಾಹಿಯ ಭಾಗವಾಗಿ ಬಂದಿತು. ಇದರಲ್ಲಿ ಕ್ಯಾಥೋಲಿಕ್ಕರು ಮತ್ತು ಪ್ರಾಟಿಸ್ಟೆಂಟರು ಎಂದು ಎರಡು ಪಂಗಡಗಳಿವೆ. ಇವೆರಡೂ ಪಂಗಡಗಳ ಕ್ರೈಸ್ತರ ಆಗಮನದಿಂದ ಭಾರತದಲ್ಲಿ ಮತಾಂತರ ಪ್ರಕ್ರಿಯೆ ಕ್ಷಿಪ್ರಗತಿಯಲ್ಲಿ ಸಾಗಿತು. ಇದು ಮೊದಲಿಗೆ ಆದದ್ದು ಕರಾವಳಿ ತೀರ ಪ್ರದೇಶಗಳಲ್ಲಿ ಮತ್ತು ಪಶ್ಚಿಮ ಘಟ್ಟಗಳ ಮಲೆನಾಡಿನಲ್ಲಿ.

ಯುರೋಪಿಯನ್ ಕ್ರಿಶ್ಚಿಯನ್ನರನ್ನೂ ‘ಕಿಲಿಸ್ತರು’ ಎಂದು ಆಡುಭಾಷೆಯಲ್ಲಿ ಸಂಬೋಧಿಸಲಾಯಿತು. ಈ ಧರ್ಮೀಯರು ಯೇಸುಕ್ರಿಸ್ತನನ್ನು ಏಕೈಕ ದೇವನೆಂದು ನಂಬುತ್ತಾರೆ. ಚರ್ಚುಗಳು ಇವರ ದೇವಾಲಯಗಳು.ಬೈಬಲ್ ಇವರ ಧರ್ಮಗ್ರಂಥ.

ಬೇಲರು : ತುಳುವರು. ತುಳು ಭಾಷೆ ಮಾತನಾಡುವ ಬಿಲ್ವರು.

ಬಿಲ್ಲವರು : ಬೇಡರು, ಬೇಟೆಗಾರರು, ಶಬರರು.

ಬ್ರಾಹ್ಮಣರು : ವೈದಿಕರು. ಪುರೋಹಿತರು. ಚತುರ್ವರ್ಣಗಳಲ್ಲಿ ಮೊದಲನೆಯೆ ವರ್ಣಕ್ಕೆ ಸೇರಿದವರು

ದಲಿತರು : ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಶೋಷಣೆಗೆ ಒಳಗಾದವರು. ವರ್ಣವ್ಯವಸ್ಥೆಯಲ್ಲಿ ಇವರನ್ನು ಅತ್ಯಂತ ಕೆಳಸ್ತರದಲ್ಲಿ ಇಡಲಾಗಿತ್ತು. ಪಂಚಮರು, ಅಸ್ಪೃಶ್ಯರು ಎಂದು ಕರೆಯಲ್ಪಡುತ್ತಾರೆ.

ಮರಾಟಗಾರು : ಮಹಾರಾಷ್ಟ್ರ ಮೂಲದವರು. ಗುಡ್ಡಗಾಡಿನ ಈ  ಮರಾಟಿಗರನ್ನು ಒಗ್ಗೂಡಿಸಿಯೇ ಶಿವಾಜಿ ಮರಾಠಾ ಸಾಮ್ರಾಜ್ಯವನ್ನು ಸ್ಥಾಪಿಸಿದುದು. ಕರ್ನಾಟಕ ಮುಂತಾದ ಹೊರ ರಾಜ್ಯಗಳಲ್ಲಿ ವ್ಯಾಪಾರವನ್ನು ಅರಸುತ್ತ ಚದುರಿಕೊಂಡಿದ್ದಾರೆ.

ಕ್ಷೌರಿಕರು (ಬಜಂತ್ರಿ) : ಕ್ಷೌರಿಕರು ಎಂದರೆ ಕ್ಷೌರಮಾಡುವವರು; ಬಜಂತ್ರಿಗಳು ಎಂದರೆ ಮಂಗಳ ವಾದ್ಯಗಳನ್ನು ನುಡಿಸುವವರು.ಇವೆರಡೂ ವೃತ್ತಿಗಳನ್ನು ಮಾಡುವವರು ಒಂದೇ ಕುಲಕ್ಕೆ ಸೇರುತ್ತಾರೆ.

ಸೆಟ್ಟರು : ವ್ಯಾಪಾರಿಗಳು, ಶ್ರೇಷ್ಟಿಗಳು, ವೈಶ್ಯರು.

ಹಳೆಪೈಕದವರು (ದೀವರು) : ಕಳ್ಳು ಹೆಂಡಗಳನ್ನು ಇಳಿಸುವ ಕುಲವೃತ್ತಿಗೆ ಸೇರಿದವರು.