ಇಂದು ಹಾನೂರು ಮನೆ ಪಾಲಾಗುವ ದಿನ. ಬಹುಕಾಲದಿಂದಲೂ ಒಂದಾಗಿ ಹರಿದುಬಂದಿದ್ದ ಸಂಸಾರನದಿ ಇಂದು ಎರಡಾಗುತ್ತದೆ. ಹೊರಗಡೆಯ ಜಗತ್ತಿಗೆ ಅದೊಂದು ಅತಿಸಾಮಾನ್ಯ ಘಟನೆಯಾಗಿದ್ದರೂ ಆ ಮನೆಯವರಿಗೆ ಅವರಗೆ ಸಂಬಂಧಪಟ್ಟವರಿಗೂ ಅದೊಂದು ವಿಷಮ ಸನ್ನಿವೇಶವಾಗಿದೆ. ಒಬ್ಬೊಬ್ಬರ ಹೃದಯದಲ್ಲಿ ಒಂದೊಂದು ರೀತಿಯ ಭಾವತರಂಗಗಳೇಳುತ್ತಿವೆ. ಹೂವಯ್ಯ ರಾಮಯ್ಯರಿಗೆ ದುಮ್ಮಾನ. ಚಂದ್ರಯ್ಯಗೌಡರು ನಾಗಮ್ಮನವರು ಇವರಿಗೆ ಹಿಗ್ಗು. ಸುಬ್ಬಮ್ಮನಿಗೆ ಒಂದು ವಿಧವಾದ ಭೀತಿ. ಪುಟ್ಟಮ್ಮ ವಾಸು ಇವರಿಗೆ ದುಮ್ಮಾನ, ಹಿಗ್ಗು, ಭೀತಿ-ಎಲ್ಲಾ ಒಟ್ಟುಗೂಡಿ ಉಂಟಾಗಿರುವ ಸಂಭ್ರಾಂತಿ. ಪುಟ್ಟಣ್ಣನಿಗೆ ಮುಂದೆ ತಾನೇನು ಮಾಡಬೇಕೆಂಬ ಚಿಂತೆ. ಸೇರೆಗಾರ ರಂಗಪ್ಪಸೆಟ್ಟರಿಗೆ ಏನೋ ಒಂದು ತೆರನಾದ ದಿಗ್ವಿಜಯದ ಹರ್ಷ: ಚಂದ್ರಯ್ಯಗೌಡರು ತನ್ನನ್ನು ತಮ್ಮ ಅಂಗರಂಗಕ್ಕೆ ತೆಗೆದುಕೊಂಡಿದ್ದಾರಲ್ಲಾ ಎಂಬ ಹೆಮ್ಮೆ. ಆಳುಗಳಿಗೆಲ್ಲ ಏನಾದರೂ ಆಗಲಿ ಎಂಬ ನಿಸ್ಸಹಾಯಭಾವ. ಅಂತೂ ಇಂದು ಪ್ರಾತಃಕಾಲದಿಂದ ಮನೆಯಲ್ಲಿ ಗಜಿಬಿಜಿ ಪ್ರಾರಂಭವಾಗಿದೆ!

ವಿಷಯವನ್ನರಿಯದ ಹೊರಗಿನವರು ಯಾರಾದರೂ ಒಂದು ನೋಡಿದ್ದರೆ ಅಂದು ಆ ಮನೆಯಲ್ಲಿ ಏನೋ ಒಂದು ವಿಶೇಷೋತ್ಸವ ನಡೆಯುತ್ತಿದೆ ಎಂದು ಊಹಿಸುತ್ತಿದ್ದರು. ಪ್ರತಿಯೊಬ್ಬರ ಚಲನೆಯಲ್ಲಿಯೂ ಏನೋ ಒಂದು ನಿರೀಕ್ಷಣೆ ವ್ಯಕ್ತವಾಗುತ್ತಿತ್ತು. ಜಗಲಿಯಲ್ಲಿ ಹಾಸಿದ್ದ ಪಟ್ಟೆಪಟ್ಟೆಯ ಜಮಖಾನದ ಮೇಲೆ ಜರಿ ರುಮಾಲುಗಳನ್ನುಸುತ್ತಿದ್ದ. ಗೌಡರುಗಳೂ ಹೆಗ್ಗಡೆಗಳೂ ನಾಯಕರೂ ದಿಂಬುಗಳಿಗೊರಗಿಕೊಂಡು, ಹರಿವಾಣದಿಂದ ಎಲೆಯಡಕೆ ಹಾಕಿಕೊಳ್ಳುತ್ತಾ, ಏನೋ ವಹತ್ಕಾರ್ಯಗಳನ್ನು ಮಾಡಬಂದಿರುವ ರಾಯಭಾರಿಗಳಂತೆ ಲೋಕಾಭಿರಾಮವಾಗಿ ಮಾತಾಡುತ್ತ ಕುಳಿತಿದ್ದರು. ಅವರ ಓಲಗದ ಓಜೆ ಎಷ್ಟರಮಟ್ಟಿಗಿತ್ತು ಎಂದರೆ ಗಟ್ಟಿಯಾಗಿ ಮಾತಾಡುತ್ತ ಹೆಬ್ಬಾಗಿಲು ದಾಟಿ ಚೌಕಿಗೆ ತಲೆಹಾಕಿದ್ದ ಬೇಲರ ಬೈರ ಜಗಲಿಯ ಕಡೆ ನೋಡಿದೊಡನೆಯೆ ಬಾಯಿ ಮುಚ್ಚಿಕೊಂಡು, ತಾನೆಸಗಿದ ಅಪರಾಧಕ್ಕೆ ನಾಲಗೆ ಕಚ್ಚಿಕೊಂಡು. ಹಿಂತಿರುಗಿ ಹೊರಗೆ ಹೋಗಿ, ಅಲ್ಲಿ ನೆರೆದಿದ್ದ ಇತರ ಆಳುಗಳಿಗೆ ಒಳಗಿದ್ದ ವೈಭವದ ದೃಶ್ಯವನ್ನು ವರ್ಣಿಸಲು ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಹೆಬ್ಬಾಗಿಲಿನ ಸಂದಿಯಲ್ಲಿ ಇಣಿಕಿ ಇಣಿಕಿ ನೋಡತೋಡಗಿದರು.

“ಬೈರಣ್ಣಾ, ಆ ಮುಂಡಿಗೆ ಕಂಭಕ್ಕೆ ಒರಗಿಕೊಂಡು ಕೂತಾರಲ್ಲಾ ಅವರ‍್ಯಾರೋ?” ಎಂದು ಸಿದ್ದ ಕೇಳಿದನು.

ಬೈರ “ಏ! ನೀನ್ಯಾಕೋ ಹೀಂಗೆ ಹೋಸಬನ್ಹಾಂಗೆ ಮಾತಾಡ್ತೀಯಾ? ಬೈದೂರು ಬಸವೇಗೌಡ್ರು ಅಲ್ಲೇನೋ!” ಎಂದು ತನಗೆ ನಾಡಿನ ದೊಡ್ಡ ದೊಡ್ಡ ಗೌಡರೆಲ್ಲರೂ ಗೊತ್ತು ಎಂಬ ಹೆಮ್ಮೆಯಿಂದ ಪಿಚ್ಚನೆ ಹಲ್ಲುಬಿಟ್ಟನು.

ಹಳೆಪೈಕದ ತಿಮ್ಮನೂ ಸಂದಿಯಲ್ಲಿ ಇಣಿಕಿನೋಡಿ “ಹೋಗೋ ಹೋಗೋ! ಬೈದೂರು ಬಸವೇಗೌಡ್ರು ಗೋಡೆಗೆ ಒರಗಿಕೊಂಡು ಕೂತಾರೆ! ಮುಂಡಿಗೀಗೆ ಒರಗಿಕೊಂಡು ಕೂತೋರು ಬಾಳೂರು ಸಿಂಗೇಗೌಡ್ರು!” ಎಂದು ಬೈರನ ಸರ್ವಜ್ಞತೆಗೆ ಭಂಗತಂದನು!

ಬೈರ ಮತ್ತೆ ಇಣಿಕಿನೋಡಿ ” ಹೋಗ್ರೋ ಹೋಗ್ರೋ! ನಿಮಗೇನು ಗೊತ್ತು? ನಂಗಿಲ್ಲೇನು ಬೈದೂರು ಬಸವೇಗೌಡ್ರ ಗುರ್ತು!” ಎಂದು ಪ್ರತಿವಾದಿಸಿದನು.

“ಸಾಕು! ನಿನ್ನ ಕೂಳ್ಹೊತ್ತಿತ್ತು! ಅವರಿಲ್ಲೀಗೆ ಬಂದಗಲೆಲ್ಲಾ ಕಳ್ಲುಕೊಡೋ ನಂಗೇ ಗೊತ್ತಿಲ್ಲಂತೆ ಅವರ ಗುರ್ತು! ಎಂದು ತಮ್ಮ ಅಧಿಕಾರವಾನಿಯಿಂದ ಹೇಳಿದನು.

ಆದರೂ ಬೈರ ಒಪ್ಪಲಿಲ್ಲ. ಇಬ್ಬರಿಗೂ ಮಾತು ಹತ್ತಿತು! ಅಷ್ಟರಲ್ಲಿ ಸಿದ್ದ “ತಡೀರ‍್ರೊ; ಯಾಕೆ ಬಡ್ಕೋತೀರಿ. ನೋಡಲ್ಲಿ ಸೇರೆಗಾರ‍್ರು ಬತ್ತಾರೆ. ಅವರನ್ನೇ ಕೇಳಿದ್ರೆ ಎಲ್ಲ ಗೊತ್ತಾಗ್ತದೆ” ಎಂದನು.

ಅಲ್ಲಿಗೆ ಬಂದ ರಂಗ್ಪಸೆಟ್ಟರು ಕಾನೂರು ಮನೆಯನ್ನು ಹಿಸ್ಸೆಮಾಡಲು ಬಂದು ಜಗಲಿಯಮೇಲೆ ಮಂಡಿಸಿದ್ದ ಮುಂಡಾಸದ ಗೌಡರು ಹೆಗ್ಗಡೆ ನಾಯಕರುಗಳನ್ನೆಲ್ಲ ಒಬ್ಬೊಬ್ಬರನ್ನಾಗಿ ವರ್ಣಿಸಿ ವಿವರಿಸಿ ಗುರುತು ಹೇಳಿದರು:

“ಮುಂಡಿಗೆಗೆ ಒರಗಿಕೊಂಡು ಕೂತವರು ನೆಲ್ಲುಹಳ್ಳಿ ಪೆದ್ದೇಗೌಡರು…. ಅವರ ಹತ್ತಿರ ಗೋಡೆಗೆ ಒರಗಿಕೊಂಡವರು ಮುದ್ದೂರು ಭರೈಗೌಡರು…ಅವರೀಚೆಗೆ ಕುಳ್ಳಗೆ ತೆಳ್ಲಗೆ ಕೂತಾರಲ್ಲಾ ಅವರು ಎಂಟೂರು ಶೇಷೇಗೌಡರು.”

“ಹುಡ್ಗಿ ಹಾರಿಸಿದರು ಅಂತಾ ಕೇಸಾಗಿತ್ತಲ್ಲಾ ಅವರೇ ಏನ್ರೊ?” ಎಂದು ನಡುವೆ ಬಾಯಿಹಾಕಿ ಬೈರ ಪ್ರಶ್ನೆ ಕೇಳಿದನು.

ಸೇರೆಗಾರರು ” ಅದೆಲ್ಲಾ ಪಾರುಪತ್ತಿ ನಿಂಗ್ಯಾಕೋ?” ಎಂದು ಗದರಿಸಿ ಮುಂದೆ ಹೇಳಿದರು. ” ಕರೀ ಗೀರುಗೀರು ಕೋಟಿನವರೇ ಬಾಳೂರು ಸಿಂಗೇಗೌಡ್ರು…. ಗಿರ‍್ಲುಮೀಸೆ ಬಿಟ್ಟವರು ಮೇಗ್ರಳ್ಳಿ ನಾಗಪ್ಪ ಹೆಗ್ಗಡ್ರೇರು…. ಗಡಿಯಾರದ ಸರಪಣಿ ಕಾಣ್ತದಲ್ಲಾ ಅವರೇ ಬೈದೂರು ಬಸವೇಗೌಡ್ರ….”

ಸೇರೆಗಾರರು ಬಾಯಿತುಂಬ ತುಂಬಿಕೊಂಡಿದ್ದ ಎಲೆಯಡಿಕೆಯ್ನನು ತುಂತುರು ತುಂತುರಾಗಿ ಊದಿ ಉಗುಳಿ ಒಳಗೆ ಹೋದರು. ಆಳುಗಳೆಲ್ಲ ಹೊರಗೇ ನಿಂತು ಆ ಅಪೂರ್ಣ ದೃಶ್ಯವನ್ನು ಆಗಾಗ್ರೆ ನೋಡುತ್ತ, ಮಾತಾಡುತ್ತ ಸಂತೆ ಸೇರಿದ್ದರು. ಅವರ ಕಣ್ಣಿಗೆ ಅಷ್ಟೊಂದು ಜರಿ ಪೇಟಗಳು ಬಣ್ಣದ ಬಟ್ಟೆಗಳೂ ಬಚಕಾನಿಗಳೂ ಒಟ್ಟಿಗೆ ಸೇರಿದ್ದುದು ಮೈಸೂರಿಗೆ ಹೋದ ಹಳ್ಳಿಗನ ದೃಷ್ಟಿಗೆ ದಸರಾ ದರ್ಬಾರು ಸೇರಿದಹಾಗಿತ್ತು.

ಇತ್ತ ಆಳು ಒಕ್ಕಲುಗಳು ದೃಶ್ಯಾವಲೋಕನದಲ್ಲಿ ಆಸಕ್ತರಾಗಿರುಲು ಅತ್ತ ಜಗಲಿಯಲ್ಲಿ ಮಾತುಕತೆ ಭರದಿಂದ ಸಾಗಿತ್ತು. ಸಂಭಾಷಣೆಯ ಆಳ ಅಗಲಗಳು ಗ್ರಾಮ್ಯಜೀವನದ ಎಲ್ಲೆಕಟ್ಟನ್ನು ದಾಟಿರಲಿಲ್ಲ. ಜಮೀನು, ಬೇಸಾಯ, ಮಳೆ, ಅಡಕೆ ತೋಟದ ಕೊಳೆರೋಗ, ಅಡಕೆ ಧಾರಣೆ, ಘಟ್ಟದ ಕೆಳಗಿನ ಆಳುಗಳ ವಿಚಾರ-ಇವುಗಳನ್ನೆ ಕುರಿತು ಒಬ್ಬೊಬ್ಬರೂ ತಮ್ಮ ತಮ್ಮ ದೃಷ್ಟಿಯಿಂದ ಉಪನ್ಯಸಿಸುತ್ತಿದ್ದರು. ಚಂದ್ರಯ್ಯಗೌಡರು ಬೀರುವಿನ ಪಕ್ಕದಲ್ಲಿ ಶಾಲುಹೊದೆದುಕೊಂಡು ಕುಳಿತು, ಆಗಾಗ್ಗೆ ನಶ್ಯ ಹಂಚುತ್ತಲೂ ಹಾಕಿಕೊಳ್ಳುತ್ತಲೂ, ಅತಿಥಿಗಳನ್ನು ಉಪಚರಿಸುತ್ತಿದ್ದರು.

ಇದ್ದಕ್ಕಿದ್ದ ಹಾಗೆ ಏಣಿ ಮೆಟ್ಟಿಲು ಸದ್ದಾಗಿ ಎಲ್ಲರೂ ಮಾತು ನಿಲ್ಲಿಸಿ ಆ ಕಡೆ ನೋಡಿದರು. ಪ್ರತಿಯೊಬ್ಬರ ಭಂಗಿಯಲ್ಲಿಯೂ ಗೌರವಪ್ರದರ್ಶನದ ಸೂಚನೆಯೆದ್ದಿತು. ಮುತ್ತಳ್ಳಿ ಶ್ಯಾಮಯ್ಯಗೌಡರು ಉಪ್ಪರಿಗೆಯಿಂದ ಇಳಿದು ಒಂದು ಎಲ್ಲರನ್ನೂ ಮೇಲಕ್ಕೆ ಬರುವಂತೆ ಕರೆದರು. ಅವರನ್ನು ಹಿಂಬಾಲಿಸಿ ಒಬ್ಬೊಬ್ಬರಾಗಿ ಜಗಲೀಯ ಮೇಲಿದ್ದವರೆಲ್ಲರೂ ಉಪ್ಪರಿಗೆಗೆ ಹೋದರು.

ಅಲ್ಲಿ ಚೊಕ್ಕಟವಾಗಿ ಹಾಸಿದ್ದ ಕೆಂಪು ಕಪ್ಪು ಪಟ್ಟೆಯ ವಿಸ್ತಾರವಾದ ಜಮ ಖಾನದಮೇಲೆ, ಒಂದು ಭಾಗದಲ್ಲಿ, ಹೂವಯ್ಯನೊಡನೆ ಮಾತಾಡುತ್ತ ಸೀತೆಮನೆ ಸಿಂಗಪ್ಪಗೌಡರು ಕುಳಿತಿದ್ದರು. ಒಂಬತ್ತು ಗಂಟೆಯ ಬಿಸಿಲಿನಲ್ಲಿ ಅವರಿಬ್ಬರ ಛಾಯೆಗಳೂ ಜಮಖಾನದ ಮೇಲೆ ಕರ್ರ‍ಗೊರಗಿದ್ದುವು. ನಂಟರು ಬಂದ ಒಡನೆಯೆ ಇಬ್ಬರೂ ಎದ್ದು ನಿಂತು ನಮಸ್ಕಾರ ಮಾಡಿದರು. ಪ್ರತಿಯೊಬ್ಬರೂ ತಮತಮಗೆ ಉಚಿತವಾದ ತಾಣಗಳಲ್ಲಿ ಮಂಡಿಸಿದ ತರುವಾಯ ಆ ದಿನದ ಕಾರ್ಯಕ್ಕಾರಂಭವಾಯಿತು.

ಆ ಸಭೆಗೆ, ಅವರನ್ನು ಯಾರೂ ಚುನಾಯಿಸದಿದ್ದರೂ ತಮ್ಮ ತೂಕ ಸಂಪತ್ತು ವ್ಯಕ್ತಿತ್ವಗಳ ಮಹಿಮೆಯಿಂದಲೆ, ಮುತ್ತಳ್ಳಿ ಶ್ಯಾಮಯ್ಯಗೌಡರೆ ಸ್ವಾಭಾವಿಕವಾಗಿ ಸ್ವಯಂ ಅಧ್ಯಕ್ಷರಾಗಿ ಕಾರ್ಯಕಲಾಪಗಳನ್ನು ಪ್ರಾರಂಭಿಸಿದರು.

ಪ್ರಾರಂಭದಲ್ಲಿ ಎಲ್ಲವೂ ಸುಸೂತ್ರವಾಗಿ ಸಾಗಿತು. ಲಕ್ಕೆಪತ್ರಗಳ ಪರಿಕ್ಷೇಯಾಯಿತು; ಮನೆಗೆ ಸೇರಿದ ತರಿ ಖುಷ್ಕಿ ಮತ್ತು ಇತರ ಜಮೀನುಗಳನ್ನು ತೋರಿಸುವ ನಕಾಶೆಯ ಸಮೀಕ್ಷೆಯಾಯಿತು; ಹೂವಯ್ಯನ ತಂದೆಯೂ ಚಂದ್ರಯ್ಯಗೌಡರೂ ಸೋದರರಾದುದರಿಂದ ಇರುವ ಆಸ್ತಿಯನ್ನೆಲ್ಲ ಸಮಪಾಲು ಮಾಡಬೇಕೆಂಬ ಇತ್ಯರ್ಥವಾಯಿತು. ನಡುವೆ ಸೀತೆಮನೆ ಸಿಂಗಪ್ಪಗೌಡರು ಹೂವಯ್ಯನ ಪರವಾಗಿ, ಹೂವಯ್ಯನ ತಂದೆ ಚಂದ್ರಯ್ಯಗೌಡರಿಗಿಂತಲೂ ಹಿರಿಯರಾಗಿದ್ದುದರಿಂದ ಹೂವಯ್ಯನಿಗೆ ಹೆಚ್ಚಿನ ಆಸ್ತಿ ಬರಬೇಕೆಂದು ವಾದ ಹೂಡಿದರೂ ಸ್ವಲ್ಪ ಚರ್ಚೆಯಾದಮೇಲೆ ಚಂದ್ರಯ್ಯಗೌಡರ ಪಕ್ಷವೇ ಜಯಹೊಂದಿತು.

ಆದರೆ ಜಮೀನಗಳನ್ನು ಪಾಲು ಮಾಡುವ ಸಮಯ ಬಂದಾಗ ಚಂದರಯ್ಯಗೌಡರು ಒಂದು ತಕರಾರು ತಂದರು:

“ಹಿಸ್ಸೆಗೆ ಎಲ್ಲ ಆಸ್ತಿಯೂ ಸೇರಲಾರದು. ಪಿತ್ರಾರ್ಜಿತವಾದ ಆಸ್ತಿ ಮಾತ್ರ ಸೇರಬೇಕು. ನನ್ನ ಸ್ವಯಾರ್ಜಿತವಾದ ಆಸ್ತಿಯಲ್ಲಿ ಪಾಲುಕೊಡಲು ನಾನು ಒಪ್ಪುವುದಿಲ್ಲ. ಬಾವೀಮಕ್ಕೆ ಜಮೀನು-ಗದ್ದ ತೋಟ ಎಲ್ಲಾ-ನಾನೇ ಸ್ವತಃ ಬೆವರು ಸುರಿಸಿ ಸಂಪಾದಿಸಿದ್ದು. ಹಾಗೆಯೆ ಚಿಕ್ಕೂರು ತೋಟವನ್ನೂ ನನ್ನ ಯಜಮಾನಿಕೆಯಲ್ಲಿ ನಾನೇ ಸಂಪಾದಿಸಿದ್ದು” ಎಂದು

ಬಾಳೂರು ಸಿಂಗೇಗೌಡರೂ ನೆಲ್ಲು ಹಳ್ಳಿ ಪೆದ್ದೇಗೌಡರೂ ಚಂದ್ರಯ್ಯಗೌಡರ ಹೇಳಿಕೆಯನ್ನೆ ಸಮರ್ಥಿಸಿದರು. ಆದರೆ ಸೀತೆಮನೆ ಸಿಂಗಪ್ಪಗೌಡರು ಮನಃಪೂರ್ವಕವಾಗಿ ಪ್ರತಿಭಟಿಸಿದರು.

ಹೂವಯ್ಯನೂ ಚಂದ್ರಯ್ಯಗೌಡರ ಮಾತನ್ನು ಪ್ರತಿಭಟಿಸಿ “ಸ್ವಯಾರ್ಜಿತ ಪಿತ್ರಾರ್ಜಿತ ಎಂದು ಆಸ್ತಿಯನ್ನು ವಿಭಾಗಮಾಡುವುದು ನ್ಯಾಯವಲ್ಲ. ಒಂದು ಮನೆಗೆ ಯಜಮಾನನಾದವನು ಏನು ಸಂಪಾದನೆ ಮಾಡಿದರೂ ಅವು ಮನೆಯ ಸಂಪತ್ತಿಗೇ ಸೇರುತ್ತದೆ. ಯಜಮಾನನು ವೈವಟ್ಟು ನಡೆಸುವಾಗ ಏನಾದರೂ ನಷ್ಟ ಸಂಭವಿಸಿದರೆ ಆ ನಷ್ಟವನ್ನು ತನ್ನೊಬ್ಬನ ಮೈಮೇಲೆಯೇ ಹಾಕಿಕೊಳ್ಳುತ್ತಾನೆಯೆ? ಮನೆಯ ಲೆಕ್ಕಕ್ಕೆ ಖರ್ಚು ಹಾಕುವುದಿಲ್ಲವೇನು? ನಷ್ಟದಂತೆಯೇ ಲಾಭವೂ ಮನೆಯ ಆಸ್ತಿಗೇ ಸೇರತಕ್ಕದ್ದು. ಪಿತ್ರಾರ್ಜಿತವಾದ ಆಸ್ತಿಯ ಆಧಾರ, ಬೆಂಬಲ, ಧನ, ಗೌರವ, ವಿರಾಮ ಇವುಗಳೆಲ್ಲ ಇಲ್ಲದಿದ್ದರೆ ಯಜಮಾನನು ಹೊಸ ಆಸ್ತಿಗಳನ್ನು ಸಂಪಾದಿಸಲು ಸಾಧ್ಯವಾಗುತ್ತಿತ್ತೆ? ಆದ್ದರಿಂದ ಸಂಪಾದಿಸಿದ ಹೊಸ ಆಸ್ತಿಗಳನ್ನು ಸಂಪಾದಿಸಲು ಸಾಧ್ಯವಾಗುತ್ತಿತ್ತೆ? ಆದ್ದರಿಂದ ಸಂಪಾದಿಸಿದ ಹೊಸ ಆಸ್ತಿಗಳೆಲ್ಲವೂ ಪಿತ್ರಾರ್ಜಿತ ಆಸ್ತಿ ಎಂಬ ಮೂಲಧನದ ಮೇಲೆ ಬಂದ ಬಡ್ಡಿಯಂತೆಯೇ ಹೊರತು ಮತ್ತೆ ಬೇರೆಯಲ್ಲ. ಆದ್ದರಿಂದ ಚಿಕ್ಕಯ್ಯ ಹೇಳಿದಂತೆ, ಪಿತ್ರಾರ್ಜಿತ. ಸ್ವಯಾರ್ಜಿತ ಎಂದು ಆಸ್ತಿಯನ್ನು ವಿಭಾಗಿಸುವುದಕ್ಕೆ ನನೋಪ್ಪುವುದಿಲ್ಲ” ಎಂದು ವಾದಿಸಿದನು.

ಆ ವಾದವನ್ನು ಕೇಳಿ ಚಂದ್ರಯ್ಯಗೌಡರಾದಿಯಾಗಿ ಎಲ್ಲರೂ ಸ್ತಬ್ಧರಾದರು. ಅಲ್ಲಿದ್ದರೆಲ್ಲರೂ ನಿಷ್ಪಕ್ಷಪಾತಿಗಳಾಗಿಯೆ ಇದ್ದಿದ್ದರೆ ಹೂವಯ್ಯನ ವಾದವನ್ನು ಒಪ್ಪಿಕೊಳ್ಳಬೇಕಾಗಿತ್ತು. ಆದರೆ ಸನ್ನಿವೇಶ ಹಾಗಿರಲಿಲ್ಲ. ಅಲ್ಲಿ ನೆರೆದಿದ್ದವರೆಲ್ಲರೂ-ಮುತ್ತಳ್ಳಿ ಶ್ಯಾಮಯ್ಯಗೌಡರನ್ನುಳಿದು-ಒಳಗೊಳಗೇ ಚಂದ್ರಯ್ಯಗೌಡರ ಅಥವಾ ಹೂವಯ್ಯನ ಪಕ್ಷಗಳನ್ನು ವಹಿಸಿಯೇ ಬಂದಿದ್ದರು. ಬಾಳೂರು ಸಿಂಗೇಗೌಡರೂ ನೆಲ್ಲುಹಳ್ಳಿ ಪೆದ್ದೇಗೌಡರೂ ಚಂದ್ರಯ್ಯಗೌಡರ ಪಕ್ಷವಹಿಸಿ ಬಂದಿದ್ದಂತೆ ಸೀತೆಮನೆ ಸಿಂಗಪ್ಪಗೌಡರು ಹೂವಯ್ಯನ ಪರವಾಗಿ ಬಂದಿದ್ದರು. ಆದ್ದರಿಂದ ಅವರಲ್ಲಿ ಯಾರೊಬ್ಬರ ನಿರ್ಣಯಕ್ಕೂ ಕಾರಣಗಳ ಆವಸ್ಯಕತೆ ಬೇಕಿರಲಿಲ್ಲ. ಅವರ ಮಾತುಗಳೆಲ್ಲವೂ ಅವರ ಮನಸ್ಸಿನ ಕೋರಿಕೆಗಳನ್ನು ಹೇಳುತ್ತಿದ್ದುವೆ ಹೊರತು ನಿಷ್ಪಕ್ಷಪಾತವಾಗಿ ವಿಚಾರಮಾಡಿ ಸಿದ್ಧಾಂತಕ್ಕೆ ಬಂದ ಅಭಿಪ್ರಾಯಗಳನ್ನು ಸೂಚಿಸುತ್ತಿರಲಿಲ್ಲ.

ಅಂತೂ ಮೊದಮೊದಲು ಗಂಭೀರವಾಗಿ ಪ್ರಾರಂಭವಾದ ಚರ್ಚೆ ಬರಬರುತ್ತಾ ಬಿಸಿಹೆಚ್ಚಿ, ಕೂಗಾಟದ ಕದನವಾಗಿ ಪರಿಣಮಿಸಿತು. ಕೆಳಗಡೆ ಹೆಬ್ಬಾಗಿಲಾಚೆ ಕುತೂಹಲದಿಂದಿದ್ದ ಆಳು ಒಕ್ಕಲುಗಳೆಲ್ಲ ಬೆಪ್ಪುಬೆರಗಾಗಿ ಭೀತರಾದರು. ಹಳೆಪೈಕದ ತಿಮ್ಮ ಬೇಲರ ಬೈರನನ್ನು ಕುರಿತು ಚಂದ್ರಯ್ಯಗೌಡರನ್ನು ಪ್ರಶಂಸಿಸುವ ಸಲುವಾಗಿ “ನೋಡ್ದೇನೋ, ನಮ್ಮ ಗೌಡ್ರು ಹ್ಯಾಂಗೆ ಮಾತಾಡ್ತಾರೆ ಅಂತಾ? ಅಷ್ಟು ದೊಡ್ಡೊಡ್ಡ ಮುಂಡಾಸದ ಗೌಡ್ರನ್ನೆಲ್ಲಾ ಲಕ್ಸಾಮಾಡ್ದೆ ಮುಲಾಜ್ ನೋಡ್ದೆ ಹೆಚರಿಸ್ತಿದ್ದಾರೆ!……. ನಿಂಗೆ ನಾ ಹೇಳ್ಲಿಲ್ಲೇನು? ಹೂ! ಏನು ಮನೆ ಪಾಲಾಗದಂದ್ರೆ ಕುಸಾಲು ಅಂತಾ ಮಾಡಿದ್ದೇನು?” ಎಂದು ಮತ್ತೆ ಕಿವಿಗೊಟ್ಟು, ಸಂಗೀತ ಕೇಳುವವನಂತೆ, ಉಪ್ಪರಿಗೆಯ ಮೇಲೆ ನಡೆಯುತ್ತಿದ್ದ ಗಲಭೆಯನ್ನು ಆನಂದದಿಂದ ಆಲಿಸತೊಡಗಿದನು/

ಬೈರನೂ ಭೀತಸ್ವರದಿಂದ ಗಂಟಲು ಧ್ವನಿಯಲ್ಲಿ “ಹೌದು ಕಣ್ರಾ! ಮಾರಾಮಾರಿ ಆಗ್ಹಾಂಗೆ ಕಾಣ್ತದೆ!” ಎಂದು ಕಣ್ಣು ಕಣ್ಣು ಬಿಟ್ಟು ಕಿವಿಗೊಟ್ಟನು.

ಜಗಲಿಯಲ್ಲಿ ಮೇಲೆ ನಡೆಯುತ್ತಿದ್ದ ದಾಂಧಲೆಯನ್ನು ಆಲಿಸುತ್ತಿದ್ದ ವಾಸು, ಪುಟ್ಟಮ್ಮ, ನಾಗಮ್ಮನವರು, ಸುಬ್ಬಮ್ಮ, ಪುಟ್ಟಣ್ಣ, ಸೇರೆಗಾರರು ಮೊದಲಾದವರೆಲ್ಲರೂ ಉದ್ವಿಗ್ನರಾದರು. ವಾಸುವಿನ ಕಣ್ಣಿನಲ್ಲಿ ಹೆದರಿಕೆಯಿಂದಲೋ ಶೋಕದಿಂದಲೋ, ಅಥವಾ ದೊಡ್ಡವರು ಹೀಗೇಕೆ ಕಾದಾಡುತ್ತಾರೆ ಎಂಬುದರ ಅರ್ಥವಾಗದಿದ್ದುದರಿಂದಲೋ ನೀರು ಸುರಿಯತೊಡಗಿತು. ಪುಟ್ಟಣ್ಣ ಸುಮ್ಮನಿರಲಾರದೆ ಮೆಲ್ಲಗೆ ಏಣಿ ಮೆಟ್ಟಿಲು ಏರಿ ಉಪ್ಪರಿಗೆಯ ದೃಶ್ಯವನ್ನು ಇಣಿಕಿ ನೋಡತೊಡಗಿದನು. ಅವನ ಹಿಂದೆ ಸೇರೆಗಾರರೂ ಹತ್ತಿ ಏಣಿಯ ಅರ್ಧದಲ್ಲಿಯೆ ನಿಂತು ನಿರೀಕ್ಷಿಸಿದರು. ಉಪ್ಪರಿಗೆಯಲ್ಲಾಗುತ್ತಿದ್ದ ಗಲಾಟೆಗೆಗಾರಾದ ನಾಯಿಗಳೂ ಬೊಗಳತೊಡಗಿದುವು.

ಇದ್ದಕ್ಕಿದಂತೆ ಏಣಿಯ ತುದಿಯಲ್ಲಿ ಇಣಿಕಿ ಸೋಡುತ್ತಿದ್ದ ಪುಟ್ಟಣ್ಣ ಹಿಮ್ಮೊಗವಾಗಿಯೆ ಬಡಬಡನೆ ಕೆಳಗಿಳಿದನು. ಸೇರೆಗಾರರ ಮೋರೆಗೆ ಅವನ ಮೈ ಢಿಕ್ಕಿ ಹೊಡೆದು ಅವರು ಕೆಳಗುರುಳಿ ತರಹರಿಸಿ ನಿಂತರು! ಅಷ್ಟರಲ್ಲಿ ಸೀತೆಮನೆ ಸಿಂಗಪ್ಪಗೌಡರೂ ಏಣಿಯನ್ನಿಳಿದು ಬಂದರು. ಅವರ ಹಿಂದೆ ಹೂವಯ್ಯನೂ ಬಂದನು. ಇಬ್ಬರೂ ಹೆಬ್ಬಾಗಿಲು ದಾಟಿ ತೋಟದ ಕಡೆಗೆ ಹೋದರು.

ಹೂವಯ್ಯನ ಒಪ್ಪಿಗೆಯ ಮೇರೆಗೆ ಚಂದ್ರಯ್ಯಗೌಡರ ಇಷ್ಟವೇ ಮತ್ತೆ ಗೆದ್ದಿತು. ಅವರ ’ಸ್ವಯರ್ಜಿತ’ ಆಸ್ತಿಗಳನ್ನು ಅವರಿಗೆ ಬಿಟ್ಟು ’ಪಿತ್ರಾರ್ಜಿತ’ ಆಸ್ತಿಯನ್ನೇ ಎರಡು ಪಾಲು ಮಾಡುವುದೆಂದು ನಿರ್ಣಯವಾದ ಮೇಲೆ ಎಲ್ಲರೂ ಮಧ್ಯಾಹ್ನದ ಊಟಕ್ಕೆ ತೆರಳಿದರು.

ಅಪರಾಹ್ಣದಲ್ಲಿ ಜಮೀನಿನ ಹಿಸ್ಸೆಗೆ ಮೊದಲಾಯಿತು. ಚಂದ್ರಯ್ಯಗೌಡರಿಗೆ ತಮ್ಮ ಜಮೀನುಗಳಲ್ಲಿ ಫಲವತ್ತಾದುವು ಯಾವುವು, ಯಾವ ಯಾವ ಭಾಗಗಳಲ್ಲಿ ಹೆಚ್ಚು ಫಸಲು ದೊರೆಯುತ್ತದೆ ಎಂಬ ವಿಚಾರಗಳೆಲ್ಲ ಚೆನ್ನಾಗಿ ತಿಳಿದಿದ್ದುದರಿಂದಲೂ, ಹೂವಯ್ಯನಿಗೆ ಅದರ ಅನುಭವ ಲೋಶಮಾತ್ರವೂ ಇಲ್ಲದಿದ್ದುದರಿಂದಲೂ, ಹಿಸ್ಸೆ ಮಾಡಲೆಂದು ಅಲ್ಲಿ ನೆರೆದಿದ್ದವರಿಗೆ ಕಾನೂರು ಜಮೀನುಗಳ ಪರಿಚಯ ಸಾಲದಿದ್ದುದರಿಂದಲೂ ಪಾಲಾಗುವುದರಲ್ಲಿ ಕೆಲವು ಅವಿವೇಕಗಳು ಅನಿವಾರ್ಯವಾಗಿಯೂ, ಮತ್ತೆ ಕೆಲವು ಆಕಾಂಕ್ಷಿತವಾಗಿಯೂ ನಡೆದುಹೋದವು. ಸೀತೆ  ಸಿಂಪ್ಪಗೌಡರು ತಮಗೆ ತಿಳಿದಮಟ್ಟಿಗೆ, ತಮ್ಮ ಕೈಲಾದವಟ್ಟಿಗೆ ಹೂವಯ್ಯ ಅನುಕೂಲವಾಗಬೇಖೆಂದೇ ಪ್ರಯತ್ನ ಮಾಡಿದರು. ಮುತ್ತಳ್ಳಿ ಶ್ಯಾಮೇಗೌಡರು ಬಂದ ಕಡೆ ಸಿಂಗಪ್ಪಗೌಡರ ಮತ್ತು ಹೂವಯ್ಯನ ದಾಕ್ಷಿಣ್ಯಕ್ಕೂ ಮತ್ತೊಂದುಕ ಚಂದ್ರಯ್ಯಗೌಡರ ದಾಕ್ಷಿಣ್ಯಕ್ಕೂ ಸಿಕ್ಕಿ, ಸ್ವಲ್ಪ ತಟಸ್ಥಭಾವವನ್ನೆ ತಾಲಿಬಿಟ್ಟರು. ಅಲ್ಲ ಸ್ವಭಾವತಃ ಸಾತ್ವಿಕರಾಗಿದ್ದ ಅವರು ಏನನ್ನು ಮಾಡಲು ಹೇಸದಷ್ಟು ರಜೋಗುಣಿಗಳಾಗಿದ್ದ ಚಂದ್ರಯ್ಯಗೌಡರಿಗೆ ಅನಾನುಕೂಲವಾಗುವಂತೆ ಮಾತಾಡಿ, ಅವವೈರದೃಷ್ಟಿಗೆ ಭಾಜನರಾಗಲು ಅಳುಕಿದರು.

ಅಂತೂ ಹಿಸ್ಸೆಯಲ್ಲಿ ಜಮೀನಿನ ಉತ್ತಮಾಂಶಗಳೆಲ್ಲವೂ, ಮೀಸೆ ಹುರಿಮಾಡಿ ಕಣ್ಣು ಕೆಂಪಗೆ ಮಾಡಿಕೊಂಡು, ರಭಸದಿಂದ ವರ್ತಿಸುತ್ತಿದ್ದ ಚಂದ್ರಯ್ಯಗೌಡರ ಪಾಲಿಗೆ ದಕ್ಕಿದುವು. ನಾಗಮ್ಮನವರು ಮೂರು ನಾಲ್ಕು ಸಾರಿ ಹೂವಯ್ಯನಿಗೆ ಹೇಳಿ ಕಳುಹಿಸಿ ತಮಗೆ ಗೊತ್ತಿದ್ದ ಕೆಲವು ಉತ್ತಮವಾದ ಗದ್ದೆತೋಟಗಳು ತಮ್ಮ ಪಾಲಿಗೇ ಬರುವಂತಾ ಹಟ ಹಿಡಿಯಬೇಖೆಂದು ಮಾಡಿದ ಬುದ್ಧಿ ವಾದವೂ ಪ್ರಯೋಜನಕಾರಿಯಾಗಲಿಲ್ಲ.

ಸಾಯಂಕಾಲ ಚಂದ್ರಯ್ಯಗೌಡರು ಕಡುಕರಾಗಿದ್ದ ಅತಿಥಿಗಳನ್ನೆಲ್ಲ ಕಾನುಬೈಲಿನ ಸತ್ಕಾರಸೇವೆಗಾಗಿ ಜೊತೆ ಬರುವಂತೆ ಕರೆದರು. ರಾಮಯ್ಯ ತನಗೆ ಮೈ ಸರಿಯಾಗಿದಲ್ಲವೆಂದು ನೆವ ಹೇಳಿ ಒಪ್ಪಲಿಲ್ಲ. ಚಂದ್ರಯ್ಯಗೌಡರು ಮಗನ ಮೇಲೆ ರೇಗಿ, “ನಿನಗೆ ಎರಡಕ್ಷರ ಕಲ್ತಿದ್ದಕ್ಕೆ ಜಂಭ ನೆತ್ತಿಗೇರಿಬಿಟ್ಟಿದೆ…. ನೆಲಗುಡಿಸೋ ಪಂಚೆ ಉಟ್ಕೊಂಡು ಪ್ಯಾಟೇಲಿ ತಿರುಗೀ ತಿರುಗೀ ಈಗ ಕೆಲಸಾ ಮಾಡೋದು ಅಂದ್ರೆ ಮೈ ಬಗ್ಗೋದಿಲ್ಲ…. ಇನ್ನೆಷ್ಟುದಿನಾ ಹೀಂಗೇ ಮಾಡ್ತೀಯಾ ನೋಡ್ತೇನೆ….” ಎಂದು ಮೊದಲಾದ ಬಾಯಿಗೆ ಬಂದಂತೆ ಅಂದರು.

ರಾಮಯ್ಯ ಮರುಮಾತಾಡಲಿಲ್ಲ. ಹೆಂಡಕುಡುಕರಿಗೆ ಕಳ್ಳು ಮತ್ತು ಹುರಿದ ಮಾಂಸಗಳನ್ನು ಹಂಚುವುದು ಅವನ ಮನಸ್ಸಿಗೆ ಅತಿ ಹೀನವಾಗಿಯೂ ಅವಮಾನ ಕರವಾಗಿಯೂ ಕಂಡಿತು. ಬಹಳ ದುಃಖದಿಂದ ಪಶ್ಚಿಮ ದಿಕ್ಕಿನ ಹೆಬ್ಬಾಗಿಲನ್ನು ದಾಟಿ ತೋಟದ ಕಡೆಗೆ ನಡೆದನು. ನಂಟರೆಲ್ಲ ಚಂದ್ರಯ್ಯಗೌಡರ ನಾಯಕತ್ವದಲ್ಲಿ ಪೂರ್ವದಿಕ್ಕಿನ ಹೆಬ್ಬಾಗಿಲಿಂದ ಕಾನುಬೈಲಿಗೆ ಹೋದಮೇಲೆ, ಉಪ್ಪರಿಗೆಯಲ್ಲಿ ಹಿಂದಕ್ಕುಳಿದುಕೊಂಡಿದ್ದ ಸಿಂಗಪ್ಪಗೌಡರು ಹೂವಯ್ಯನನ್ನು ಕುರಿತು “ನೀನೆಂಥವನೋ? ಅವರು ಹೆಳಿದ್ದಕ್ಕೆಲ್ಲಾ ಹ್ಞು ಅಂತಾ ಒಪ್ಪಿಕೊಂಡುಬಿಡೋದೇನು? ಎಂದರು.

ಹೂವಯ್ಯ “ಹೋಗಲಿ ಬಿಡು, ಸಿಂಗಪ್ಪ ಕಕ್ಕಯ್ಯ, ನಿಜವಾದ ಸುಖ ಇರುವುದು ಆ ಜಮೀನಿನಲ್ಲಲ್ಲ, ಇಲ್ಲಿ!” ಎಂದು ತನ್ನ ಎದೆಯನ್ನು ಮುಟ್ಟಿ ತೋರಿಸಿದನು.

“ಅದೂ ಹೌದು!…… ಆದ್ರೂ…..”

“ಏನು ಆದ್ರೂ ?….”

ಆದ್ರೂ ವ್ಯವಹಾರ ಇದೆಯಲ್ಲ…. ”

ಅಷ್ಟರಲ್ಲಿ ಏಣಿ ಮೆಟ್ಟಲು ಸದ್ದಾಗಿ ನಾಗಮ್ಮನವರು ಮೇಲೆ ಬಂದರು ಂಗಪ್ಪಾ, ಏನು ಎಲ್ಲಾ ಪೂರೈಸ್ತಾ?” ಎಂದರು.

ಸಿಂಗಪ್ಪಗೌಡರು ನೆಲದ ಕಡೆ ನೋಡುತ್ತ “ಪೂ…. ರೈ…ಸ್ತೂ…. ಆದ್ರೆ  ಡೋದು? ನಿನ್ನ ಮಗ ಅವರು ಹೇಳಿದ್ದಕ್ಕೆಲ್ಲಾ ಹ್ಞೂ ಹ್ಞೂ ಅಂತಾ ಬಸವನ ತಲೆ ಅಲ್ಲಾಡಿಸಿಬಿಟ್ಟ” ಎಂದು ಪ್ರಾರಂಭಮಾಡಿ ನಡೆದುದನ್ನೆಲ್ಲ ವಿವರಿಸಿದರು.

ಅದನ್ನೆಲ್ಲ ಕೇಳಿ ನಾಗಮ್ಮನವರು ಹನಿಗಣ್ಣಾಗಿ ನಿಟ್ಟುಸಿರುಬಿಟ್ಟು ದುಃಖ ನಿಯಿಂದ  “ಏನ್ಮಾಡೋದು? ನನ್ನ ಗಿರಾಚಾರ! ಅವರು ಇದ್ದಿದ್ರೆ ಹೀಂಗೆಲ್ಲಾ ಆಗ್ತಿತ್ತೇನು?… ಇದನಂತೂ ಬಸವನಂತಾ ಮನುಷ್ಯ! ಸನ್ನೇಸಿ ಹಾಂಗೆ ಏನೂ ಬ್ಯಾಡ ಅಂತಾನೆ!” ಎಂದು ಮಗನ ಕಡೆ ಅಕ್ಕರೆ ತುಂಬಿದ ಕನಿಕರದಿಂದ ನೋಡಿದರು.

ಹೂವಯ್ಯ “ಹಾಗಲ್ಲವ್ವಾ; ಚಿಕ್ಕಯ್ಯ ಹತ್ತು ಹದಿನೈದು ಸಾವಿರ ರೂಪಾಯಿ ತೋರಿಸಿಬಿಟ್ಟಿದ್ದಾರೆ. ಅದರಲ್ಲಿ ಹೆಚ್ಚು ಪಾಲು ನನ್ನ ವಿದ್ಯಾಭ್ಯಾಸಕ್ಕೆ ಆಯ್ತು ಅಂತಾ ಹೆಳ್ತಾರೆ…. ಏನ್ಮಾಡೋದು?…. ಅವರಿಗೆ ಜಮೀನೇನೋ ಹೆಚ್ಚಾಗಿ ಪಾಲು ಹೋಗಿದೆ. ಆದರೆ ಅದರ ಜೋತೆಗೆ ಪೂರ್ತಿ ಸಾಲವನ್ನೂ ಅವರೇ ಹಾಕಿಕೊಂಡಿದ್ದಾರೆ…. ನಮಗೆ ಆ ಸಾಲದ ಹೊರೆ ತಪ್ಪಿದ್ದು ಒಳ್ಳೇದಾಗಲಿಲ್ಲೇನು?” ಎಂದು ತಾಯಿಗೆ ತಮಗಾದ  ಲೇಸನ್ನೇ ಹೇಳಿ ಸಮಾಧಾನ ಪಡಿಸಲೆಳಸಿದನು.

ನಾಗಮ್ಮನವರು ಸ್ವಲ್ಪ ರಭಸದಿಂದ “ಯಾರು ಹೇಳ್ದೋರು ಆ ಸಾಲ ಎಲ್ಲಾ ನಿನ್ನ ಓದೋಕೆ ಆಯ್ತು ಅಂತಾ? ಅವರ ಹೆಂಡಿರು ಮಕ್ಕಳಿಗೆ ಜರತಾರಿ ಸೀರೆಯೇನು! ಒಡವೆಯೇನು! ಉಂಗುರ, ಅಡ್ಡಿಕೆ, ಡಾಬು, ಕಾಸಿನಸರ, ಕಟ್ಟಾಣಿ, ಹೊಂಳೆ-ಇವನ್ನೆಲ್ಲಾ ಮಾಡ್ಸೀ ಮಾಡ್ಸೀ ಪೆಟ್ಟಿಗೆ ತುಂಬಿದ್ರೆ ಸಾಲ ಆಗ್ದೆ ಬಿಡ್ತದೇನು?….” ಎಂದು ಮುಂದುವರಿಯುವಷ್ಟರಲ್ಲಿ, ಹೂವಯ್ಯ.

“ಹೋಗಲಿ ಬಿಡವ್ವಾ, ಅವರ ಅನ್ಯಾಯ ಅವರಿಗೇ ಇರಲಿ! ನಮಗೆ ಹೊಟ್ಟೆಗೆ ಬಟ್ಟೆಗೆ ಸಿಕ್ಕಿದರಾಯ್ತು! ಅದೂ ಅಲ್ಲದೆ ಚಿನ್ನ ತುಂಬಿಕೊಂಡು ಸುಖಪಟ್ಟೋರು ಪ್ರಪಂಚದಲ್ಲಿ ಬಹಳ ಜನ ಇಲ್ಲ” ಎಂದು ಧೀರವಾಣಿಯಿಂದ ಹೆಳಿದನು.

ನಾಗಮ್ಮನವರಿಗೆ ಆ ಮಾತು ಕೇಳಿ ತಮ್ಮ ಮಗನೇ ತಮ ಗೊಂದು ದೊಡ್ಡ ನಿಧಿ ಎಂಬ ಹೆಮ್ಮೆ ಹುಟ್ಟಿ “ಏನೋ ಅಪ್ಪಾ, ನನಗೊಂದೂ ತಿಳಿಯಾದಿಲ್ಲ” ಎಂದು ನಿಧಿ ಎಂಬ ಹೆಮ್ಮೆ ಹುಟ್ಟಿ ” ಏನೋ ಅಪ್ಪಾ, ನನಗೊಂದೂ ತಿಳಿಯಾದಿಲ್ಲ” ಎಂದು ಸಿಂಗಪ್ಪಗೌಡರ ಕಡೆಗೆ ತಿರುಗಿ “ನಾಳೆ ಚರಸೋತ್ತು ಪಾಲು ಮಾಡುವಾಗಲಾದ್ರೂ ಸ್ವಲ್ಪ ಬಿಗಿಹಿಡಿದು ಮಾಡಿಯಪ್ಪಾ” ಎಂದು ಹೇಳಿ, ಉಪ್ಪರಿಗೆಗೆ ಲ್ಯಾಂಪು ಹೊತ್ತಿಸಲೆಂದು ಬಂದಿದ್ದ ನಿಂಗನನ್ನು ಕುರಿತು “ಎಣ್ಣೆಯಿದೆಯೇನೋ ಲ್ಯಾಂಪಿನಾಗೆ?” ಎಂದರು.

ನಿಂಗ ಸಾವಧಾನವಾಗಿ ರಾಗದಿಂದ “ಎಣ್ಣೆ ಇದೇ!…. ಲ್ಯಾಂಪು ಸಿಗಿಸಾಕ್ಕೆ ಮಳೆ ಹುಡುಕ್ತಿದ್ದೀನಿ…… ಇಲ್ಲೆಲ್ಲೊ ಇತ್ತಪ್ಪಾ ಒಂದು ಹಾಳ್ಮಳೆ!” ಎಂದು ಹೇಳುತ್ತಾ ತೂಲೆಗಳ ಮೇಲೆ ಕೈಸವರಿ ಮೊಳೆಯನ್ನು ಹುಡುಕತೊಡಗಿದನು.

ನಾಗಮ್ಮನವರು ಕೆಳಗಿಳಿದು ಹೋದರು. ನಿಂಗ ತೂಗು ಲ್ಯಾಂಪನ್ನು ಮೊಳೆಗೆ ತಗುಲಿಹಾಕಿ, ದೀಪ ಹೊತ್ತಿಸಿ ಹೊರಟುಹೋದನು.

“ಏನಾದರೂ ಓದೋ” ಎಂದು ಸಿಂಪ್ಪಗೌಡರು.

ಹೂವಯ್ಯ “ಕಿಂಗ್ ಲೀರ‍್” ನಾಟಕವನ್ನು ಕೈಗೆ ತೆಗೆದುಕೊಂಡು ಅದನ್ನು ಓದುತ್ತಾ ಅರ್ಥ ಹೇಳತೊಡಗಿದನು.

“ಸಿಂಗಪ್ಪಗೌಡರು ಅತ್ಯಂತ ಕುತೂಹಲದಿಂದ ಆಲಿಸತೊಡಗಿದರು. ಬಹಳ ಹೊತ್ತಾದ ಮೇಲೆ, ಆಲಿಸುತ್ತಿದ್ದ ಸಿಂಗಪ್ಪಗೌಡರು ಚಕಿತರಾಗಿ.

“ಆರೋ ಕೂಗ್ತಾರಲ್ಲೋ?” ಎಂದು ಹಣೆ ಸುಕ್ಕಾಗುವಂತೆ ಹುಬ್ಬು ಗಂಟಾಗಿ ಓರೆಗಣ್ಣಿನಿಂದ ವಕ್ರದೃಷ್ಟಿಯನ್ನು ಬೀರುತ್ತ ಕಿವಿಗೊಟ್ಟರು. ಹೂವಯ್ಯನೂ ಓದುವುದನ್ನು ನಿಲ್ಲಿಸಿ ಆಲಿಸಿದನು.

ಯಾರೋ ಗಟ್ಟಿಯಾಗಿ ಕೂಗುತ್ತಿದ್ದುದು ಇಬ್ಬರಿಗೂ ಕೇಳಿಸಿತು.

“ಚಂದ್ರಯ್ಯಗೌಡರಲ್ಲೇನೊ?” ಎಂದರು ಸಿಂಗಪ್ಪಗೌಡರು.

“ಹೌದು! ಅವರ ಧ್ವನಿ ಕೇಳಿದ ಹಾಗೇ ಆಗ್ತದೆ!” ಎಂದು ಹೂವಯ್ಯ ಗಾಬರಿಯಿಂದ ಎದ್ದುನಿಂತನು.

ಸಿಂಗಪ್ಪಗೌಡರೂ ದಡಬಡನೆ ಎದ್ದು, ಇಬ್ಬರೂ ಏಣಿ ಇಳಿದು ಜಗಲಿಗೆ ಬಂದರು. ರಾಮಯ್ಯ, ಪುಟ್ಟಣ್ಣ, ನಾಗಮ್ಮನವರು, ಸುಬ್ಬಮ್ಮ-ಎಲ್ಲರೂ ಅಲ್ಲಿ ಆಗಲೆ ಸೇರಿ ಗುಜುಗುಜು ಮಾಡುತ್ತಿದ್ದರು.

“ಪುಟ್ಟಣ್ಣಾ, ಯಾರೋ ಅದು ಕೂಗಿದ್ದು?” ಎಂದರು ಸಿಂಗಪ್ಪಗೌಡರು.

“ನಮ್ಮ ಗೌಡರ ಕೂಗು ಕೇಳಿದ ಹಾಗಾಯ್ತು!” ಎಂದು ಒಂದು ಲಾಟೀನು ಹೊತ್ತಿಸಿದನು.

ರಾಮಯ್ಯ, ಹೂವಯ್ಯ, ಸಿಂಪ್ಪಗೌಡರು, ಪುಟ್ಟಣ್ಣ ಮತ್ತು ಗಾರಾದ ನಾಯಿಗಳು ಎಲ್ಲರೂ ಕಾನುಬೈಲಿನ ಕಡೆಗೆ ಹೊರಟರು.

ಹತ್ತುಮಾರು ಹೋಗುವಷ್ಟರಲ್ಲಿ ಎದುರಾಗಿ ಸೇರೆಗಾರರೊಡನೆ ಅವರ ಹಿಂದೆ ಓಡಿಬರುತ್ತಿದ್ದ ವಾಸು ಅವರಿಗಿಂತಲೂ ಮುಂದೆ ನುಗ್ಗಿ, ಒಂದೇ ಉಸುರಿನಲ್ಲಿ ಏದುತ್ತಾ ಏದುತ್ತಾ ” ಮತ್ತೆ….. ನೆಲ್ಹಳ್ಳಿ ಪೆದ್ದಮಾವ!…. ಕುಡಿದು ಹೆಚ್ಚಾಗಿ….. ಬಿದ್ದು…. ತಲೆ ಒಡೆದುಹೋತು!….” ಎಂದು ಏದಲಾರಂಭಿಸಿದನು.

ಸಿಂಗಪ್ಪಗೌಡರು ‘ತಲೆ ಒಡೆದುಹೋಯಿತು’ ಎಂಬ ಮಾತನ್ನು ಕೇಳಿ ಭಯವಿಹ್ವಲರಾಗಿ “ಆಂ! ಏನಾಯ್ತು… ” ಎನ್ನುತ್ತಿರಲು ಸೇರೆಗಾರ ರಂಪ್ಪಸೆಟ್ಟರು “ಅಲ್ಲಾ ಕಾಣಿ; ಹಾಂಗಲ್ಲ! ಕುಡಿದು ತಲೆಗೇರಿತ್ತಂಬರು! ನಡೆದು ಒಪ್ಪಾಗ ಕಲ್ಲು ತಗಲಿತ್ತಂಬರು ಕಾಲಿಗೆ…. ಬಿದ್ದು ಹಣೆಗೆ ಗಾಯವಾಯಿತ್ತಂಬರು…. ಎಣ್ಣೆ ಬೇಕೆಂಬರು…. ಕಯ್ಯಲ್ಲಾಗದಮೇಲೆ ಹಾಂಗೆ ಯಾಕೆ ಕುಡಿಯುವುದಪ್ಪಾ?….” ಎನ್ನುತ್ತಾ ಎಣ್ಣೆ ತರಲು ಮನೆಗೆ ಓಡಿದರು.

ಉಳಿದವರೆಲ್ಲ ಒಟ್ಟಿಗೆ ಗುಡ್ಡವೇರಿ ನೆಲ್ಲುಹಳ್ಳಿ ಪೆದೇಗೌಡರ ‘ಕುರುಕ್ಷೇತ್ರ’ಕ್ಕೆ ತಲುಪಿದರು.

ಅವರಿಗೆ ಹೆಚ್ಚೇನೂ ಗಾಯವಾಗಿರಲಿಲ್ಲ. ಆದರೂ ಕಲ್ಲು ಹಣೆಗೆ ಬಡಿದು ಪೆಟ್ಟೇನೊ ಬಲವಾಗಿತ್ತು. ಜೊತೆಗೆ ಕುಡಿದ ಅಮಲು ಬೇರೆ! ಮೈ ಬಟ್ಟೆ ತುಂಬಾ ವಾಂತಿ ಮಾಡಿಕೊಂಡು ದುರ್ವಾಸನೆ ಮೂಗು ಮುಚ್ಚಿಕೊಳ್ಳುವಂತಿತ್ತು.

ಅವರ ಜೊತೆಯಿದ್ದವರು ಅವರನ್ನು ಎತ್ತಿನಿಲ್ಲಿಸಿ ಮೆಲ್ಲಗೆ ನಡೆಸಿಕೊಂಡು ತೂರಾಡುತ್ತ ಗುಡ್ಡವಿಳಿಯುತ್ತಿದ್ದರು. ಅವರಲ್ಲಿ ಯಾರಿಗೂ ಕಾಲಾಗಲಿ ತಲೆಯಾಗಲಿ ಹತೋಟಿಯಲ್ಲಿರಲಿಲ್ಲ ಎಂಬುದು ಚೆನ್ನಾಗಿ ತೋರುತ್ತಿತ್ತು.

ಮಹತ್ತನ್ನು ಕ್ಷುದ್ರಕ್ಕೆ ಹೋಲಿಸುವುದಾದರೆ ಚಂದ್ರನನ್ನು ಪರಿವೇಷ ಸುತ್ತುವರಿದಂತೆ ಅವರೆಲ್ಲರನ್ನು ಕಳ್ಳಿನ ವಾಸನೆ ಆವರಿಸಿತ್ತು!.