ಹೆಸರು: ಕಾವೇರಿ
ಊರು: ಕೃಷ್ಣರಾಜಸಾಗರ

 

ಪ್ರಶ್ನೆ: ಡಾ.ಶರತ್ ಕುಮಾರ ಹಾಗೂ ಎಸ್.ಸುಬ್ರಹ್ಮಣ್ಯರವರಿಗೆ ನನ್ನ ಧನ್ಯವಾದಗಳು. ಕಾರ್ಯಕ್ರಮದಿಂದ ಮಹಿಳೆಯರಿಗೆ ತುಂಬಾ ಉಪಯೋಗವಾಗುತ್ತಿದೆ. ನನ್ನ ಪ್ರಶ್ನೆ ಎಂದರೆ, ಆಪರೇಷನ್ ಇಲ್ಲದೆ ಎಷ್ಟು ವರ್ಷ ಕಾಲ ಗರ್ಭದಾರಣೆ ಮುಂದೂಡಬಹುದು ಹಾಗೂ ಮಾತ್ರೆ/ಕಾಪರ್ಟಿ ಬಹಳಷ್ಟು ವರ್ಷ ಉಪಯೋಗಿಸುವುದು ಸರಿಯೋ ತಪ್ಪೋ? ನಾನು ವರ್ಷಗಳ ಹಿಂದೆ ಕಾಪರ್ಟಿ ಹಾಕಿಸಿಕೊಂಡಿದ್ದೆ. ಕಳೆದ ತಿಂಗಳು ತೆಗೆಸಿದ್ದೇನೆ. ತೆಗೆಸಿದ ಮೇಲೆ ನನ್ನ ತೂಕ ಇಪತ್ತು ಕೆ.ಜಿ. ಏರಿದೆ. ಇದಕ್ಕೆ ಮೊದಲು ೪೦ ಕೆ.ಜಿ. ಇತ್ತು. ನನಗೆ ವರ್ಷದ ಒಬ್ಬ ಮಗನಿದ್ದಾನೆ. ನಾನು ಈಗ ಕಾಪರ್ಟಿ  ಉಪಯೋಗಿಸಿದರೆ ಏನೂ ತೊಂದರೆ ಆಗುವುದಿಲ್ಲವೇ? ಎಲ್ಲಾ ಪ್ರಶ್ನೆಗಳ ಉತ್ತರಗಳಿಗೆ ನಿಮ್ಮ ನಿರೀಕ್ಷೆಯಲ್ಲಿರುತ್ತೇನೆ. ದಯವಿಟ್ಟು ಇದರ ಉತ್ತರವನ್ನು ಒಂದು ಕಾಗದದಲ್ಲಿ ಬರೆದು ಕಳುಹಿಸಿ, ಏಕೆಂದರೆ ಇಲ್ಲಿ ಕರೆಂಟ್ ವ್ಯವಸ್ಥೆ ಸರಿಯಾಗಿ ಇರುವುದಿಲ್ಲ ಕಾರ್ಯಕ್ರಮ ಬಗ್ಗೆ ನಾನು ಬೇರೆಯವರಿಂದ ಮಾಹಿತಿ ಪಡೆದು ಪತ್ರ ಬರದಿದ್ದೇನೆ.

ಉತ್ತರ: ತೂಕ ಜಾಸ್ತಿ ಆಗಿರುವುದಕ್ಕೂ ನೀವು ಕಾಪರ್-ಟಿ ತೆಗೆಸಿರುವುದಕ್ಕೂ ಯಾವುದೇ ಸಂಬಂಧವಿಲ್ಲ. ಕೆಲಸ ಕಡಿಮೆಯಾಗಿ ತಿನ್ನುವುದು ಜಾಸ್ತಿ ಮಾಡಿದ್ದೀರಿ ಅನ್ನಿಸುತ್ತದೆ.  ಆದ್ದರಿಂದ ನೀವು ಡಯಟ್ ಮಾಡಿ, ಎಣ್ಣೆ, ತುಪ್ಪ, ನಿಲ್ಲಿಸಿ, ಸಿಹಿ ಪದಾರ್ಥಗಳನ್ನು ಕಡಿಮೆ ಮಾಡಿ. ಹಸಿ ತರಕಾರಿಗಳನ್ನು ಹೆಚ್ಚಾಗಿ ಸೇವಿಸಿರಿ.  ಪ್ರತಿನಿತ್ಯ ವ್ಯಾಯಾಮ ಯೋಗಾಸನಗಳ ಜೊತೆಗೆ ಬೆಳಿಗ್ಗೆ, ಸಂಜೆ ವಾಕಿಂಗ್ ಮಾಡಿ. ತೂಕ ಕಡಿಮೆ ಆಗುತ್ತದೆ. ಮತ್ತೆ ಕಾಪರ‍್-ಟಿ ಹಾಕಿಸಿಕೊಳ್ಳಿ, ೨-೩ ವರ್ಷ ಕಾಪರ್-ಟಿ ಉಪಯೋಗಿಸಬಹುದು.