ರ್ನಾಟಕದ ಬುಡಕಟ್ಟುಗಳ ಪೈಕಿ ಬೇಡಬುಡಕಟ್ಟಿನ ಚರಿತ್ರೆ ಮತ್ತು ಸಂಸ್ಕೃತಿ ಹಿರಿದಾದುದು. ಈ ಬಗ್ಗೆ ಅನುಮಾನವೇ ಬೇಡ. ಚರಿತ್ರೆಯ ಪುಟಗಳಲ್ಲಿ ದಾಖಲಾಗಿರುವ ಇವರ ಸಾಧನೆಗಳು ಅಜರಾಮರ. ಹಾಗೆಯೇ ಸಾಂಸ್ಕೃತಿಕ ಕ್ಷೇತ್ರದಲ್ಲಿಯೇ ಇವರು ಗಣನೀಯ ಸಾಧನೆ ಮಾಡಿರುವುದು ಶ್ಲಾಘನೀಯ. ಬೇಡ – ನಾಯಕ ಬುಡಕಟ್ಟಿನಲ್ಲಿ ಕಾಮಗೇತಲಾರು ಗೋತ್ರದವರು ಈ ನಾಡಿಗಾಗಿ ದುಡಿದು ತನು – ಮನ – ಧನ ಅರ್ಪಿಸಿ ಹುತಾತ್ಮರಾಗಿರುವುದು ಇತಿಹಾಸ. ಇಂಥವರ ಬಗ್ಗೆ ಸರಿಯಾಗಿ ಎಲ್ಲೂ ದಾಖಲಿಸಲಾಗಿಲ್ಲ. ದೊರೆತ ಆಕರಗಳನ್ನಷ್ಟೇ ಬಳಸಿಕೊಂಡು ಇಲ್ಲಿ ಸಂಕ್ಷಿಪ್ತವಾಗಿ ಅವರ ಚರಿತ್ರೆ ಬುಡಕಟ್ಟು ಸಂಸ್ಕೃತಿ ಬಗ್ಗೆ ವಿಶ್ಲೇಷಿಸಲಾಗಿದೆ.

ಈ ಪ್ರಯತ್ನಕ್ಕೆ ಅನೇಕ ಕಾರಣಗಳಿವೆ. ಕಳೆದ ಒಂದು ದಶಕದಿಂದ ನಾನು ಬೇಟೆ ಮತ್ತು ಬೇಡರನ್ನು ಕುರಿತು ಪಿ.ಎಚ್.ಡಿ ಅಧ್ಯಯನ ಮಾಡುವಾಗ ಕಾಮಗೇತಿಯರ ಬಗ್ಗೆ ಮಾಹಿತಿ ಸಂಗ್ರಹಿಸಿದ್ದೆನು. ಕ್ಷೇತ್ರಕಾರ್ಯದ ಸಂದರ್ಭದಲ್ಲಿ ಹಿರಿಯರು, ಹಿತೈಷಿಗಳು, ಸ್ನೇಹಿತರು ಈ ಬಗ್ಗೆ ಚರ್ಚಿಸಿ ನನಗೆ ಪ್ರೋತ್ಸಾಹಿಸುತ್ತಿದ್ದರು. ಹಾಗೆ ಪ್ರೋತ್ಸಾಹಿಸಿದವರಲ್ಲಿ ಚಿತ್ರದುರ್ಗದ ದಿ.ಟಿ.ಎನ್. ಗಂಡುಗಲಿ, ಕಾಮಗೇತಿ ವಂಶಸ್ಥರು, ವಾಣಿಜ್ಯ ತೆರಿಗೆ ಆಯುಕ್ತರಾದ ಕೆ. ಲಕ್ಷ್ಮಣಸ್ವಾಮಿ, ಕಾಮಗೇತನಹಳ್ಳಿ ಪೂಜಾರಿ ನಿಜಲಿಂಗಪ್ಪ, ಪೂಜಾರಹಳ್ಳಿ ಬಸಣ್ಣ ಬಸವಣ್ಣನ ಪೂಜಾರಿಗಳು, ದಾವಣಗೆರೆ ಅನುಭವ ಮಂಟಪದ ನಿವೃತ್ತ ಪ್ರಾಂಶುಪಾಲರಾದ ಎ. ಲಿಂಗಪ್ಪನವರು ಕಾಮಗೇತಿಗಳ ಪುಸ್ತಕವನ್ನು ಬರೆಯಲು ಬೆಂಬಲ ಕೊಟ್ಟಿರುವರು

ಪ್ರಸ್ತುತ ಕಿರು ಕೃತಿ ಕಾಮಗೇತಿಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ಒದಗಿಸಿದೆ. ಈ ವರೆಗೆ ಕಾಮಗೇತಿಗಳ ಚರಿತ್ರೆ ಮತ್ತು ಸಂಸ್ಕೃತಿ ಕುರಿತಾದ ಸಮಗ್ರ ಅಧ್ಯಯನಗಳು ನಡೆದಿಲ್ಲ. ಈ ಮೊದಲು ಬಿ.ಎಸ್. ಶ್ರೀನಿವಾಸ ನಾಯಕರು ಚಿತ್ರದುರ್ಗದ ಕಾಮಗೇತಿ ಅರಸರ ಬಗ್ಗೆ ಸಂಶೋಧನಾ ಕೃತಿ ಹೊರತಂದಿದ್ದಾರೆ. ಅದೇ ರೀತಿ ಪ್ರೊ. ಲಕ್ಷ್ಮಣ್ ತೆಲಗಾವಿಯವರು ಚಿತ್ರದುರ್ಗ ಕಾಮಗೇತಿ ಅರಸರು ಎಂಬ ಪುಸ್ತಕವನ್ನು ಪ್ರಕಟಿಸಲಿದ್ದಾರೆ. ಡಾ. ಬಿ. ರಾಜಶೇಖರಪ್ಪನವರು ಕಾಮಗೇತಿ ಅರಸರು ಮತ್ತು ಆ ಮನೆತನದ ಬಗ್ಗೆ ಕೃಷಿ ನಡೆಸಿದ್ದಾರೆ. ಈ ಹಿಂದೆ ಪ್ರೊ. ಎಂ.ವಿ ಚಿತ್ರಲಿಂಗಯ್ಯ, ಪಂಡಿತ ರೇವಣ್ಣಶಾಸ್ತ್ರಿಗಳು ಮೊದಲಾದವರು ಪರೋಕ್ಷವಾದ ಅಧ್ಯಯನಗಳನ್ನು ಕೈಗೊಂಡಿದ್ದು ಗಮನಾರ್ಹ.

ಈ ಅಧ್ಯಯನಕ್ಕೆಂದು ಊರೂರು ಅಲೆಯುವಾಗ ಅನೇಕ ಮಹನೀಯರು ಮಾಹಿತಿ ಕೊಟ್ಟು ಸಹಕರಿಸಿರುವುದಕ್ಕೆ ಋಣಿಯಾಗಿರುವೆನು. ಚಿತ್ರದುರ್ಗ, ಬಳ್ಳಾರಿ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ನೆಲಸಿರುವ ಅಪಾರ ಸಹೋದರ ಬಂಧುಗಳನ್ನು ಇಲ್ಲಿ ಸ್ಮರಿಸಿಕೊಳ್ಳುವೆನು. ಇಂಥ ಕೆಲಸಕ್ಕೆ ಪ್ರೋತ್ಸಾಹಿಸುವ ಹಿರಿಯರಾದ ತಿಪ್ಪೇಸ್ವಾಮಿ ಮಾಜಿ ಸಚಿವರು, ಚಳ್ಳಕೆರೆ. ನಿವೃತ್ತ ಮುಖ್ಯ ನ್ಯಾಯಾಧೀಶರು ಹಾಗೂ ಚಿತ್ರದುರ್ಗ ಲೋಕಸಭಾ ಸದಸ್ಯರಾದ ಎನ್.ವೈ. ಹನುಮಂತಪ್ಪ, ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಎನ್.ವೈ. ಗೋಪಾಲಕೃಷ್ಣ, ಎನ್.ಟಿ.ಬೊಮ್ಮಣ್ಣ, ಮಾಜಿ ಶಾಸಕರು, ಕೂಡ್ಲಿಗಿ. ತೆಕ್ಕಲಕೋಟೆ ಎಂ.ಎಸ್. ಸೋಮಲಿಂಗಪ್ಪ ಶಾಸಕರು ಸಿರುಗುಪ್ಪ ಕ್ಷೇತ್ರ. ಬಿ. ಶ್ರೀರಾಮಲು ಶಾಸಕರು ಬಳ್ಳಾರಿ, ಎ.ವೆಂಕಟೇಶನಾಯಕ ಸಂಸದರು ರಾಯಚೂರು ಕ್ಷೇತ್ರ, ರಾಜಾಅಮರೇಶ್ವರ ನಾಯಕ ಮಾಜಿಸಚಿವರು ಗುಂತಗೋಳ, ವಿ.ಎಸ್. ಉಗ್ರಪ್ಪ ಎಂ.ಎಲ್.ಸಿ., ಡಿ.ಎಂ. ಸಾಲಿ, ಯೋಜನಾ ಮಂಡಳಿ ಮಾಜಿ ಉಪಾಧ್ಯಕ್ಷರು, ಮಾತೃಶ್ರೀ ಡಾ. ಕಮಲಾಹಂಪನಾ, ದಿ.ಪ್ರೊ.ಸಿ.ಜಿ. ಕೃಷ್ಣಸ್ವಾಮಿ, ಡಾ.ತೇಜಸ್ವಿಕಟ್ಟೀಮನಿ, ಪ್ರೊ. ಸುಕನ್ಯಾಮಾರುತಿ, ಡಾ. ರಂಗರಾಜು ವನದುರ್ಗ, ಡಾ. ಆರ್. ರಾಜಣ್ಣ, ಡಾ. ಹನುಮನಾಯಕ, ಕನ್ನಡ ವಿಶ್ವವಿದ್ಯಾಲಯದಲ್ಲಿನ ಸಂಶೋಧನೆಗೆ ಪ್ರೇರಣೆ ನೀಡಿದ ಗುರುಗಳಾದ ಪ್ರೊ. ಲಕ್ಷ್ಮಣ್ ತೆಲಗಾವಿ, ಅಧ್ಯಯನ ಮಾಡಲು ಅವಕಾಶ ಕಲ್ಪಿಸಿದ ಡಾ. ಚಂದ್ರಶೇಖರ ಕಂಬಾರ, ಸಂಶೋಧನೆಯಲ್ಲಿ ಸದಾ ಕ್ರಿಯಾಶೀಲತೆಯನ್ನು, ಸ್ಫೂರ್ತಿಯನ್ನು ತುಂಬುತ್ತಿರುವ ಡಾ.ಎಂ.ಎಂ.ಕಲಬುರ್ಗಿ, ಅಪಾರ ಓದುವಿಕೆ, ಶೈಕ್ಷಣಿಕ ಬೆಳವಣಿಗೆಗೆ ಪ್ರೊತ್ಸಾಹಕೊಟ್ಟ ಡಾ. ಎಚ್.ಜೆ. ಲಕ್ಕಪ್ಪಗೌಡರನ್ನು ವಿಶೇಷವಾಗಿ ಕೃತಜ್ಞತೆಗಳೊಂದಿಗೆ ಸ್ಮರಿಸಿಕೊಳ್ಳುತ್ತೇನೆ. ಇಂದಿನ ಕುಲಪತಿಯವರಾದ ಡಾ. ಬಿ.ಎ. ವಿವೇಕ ರೈ ಅವರು ಮುನ್ನುಡಿ ಬರೆದುಕೊಟ್ಟಿದ್ದಾರೆ. ಅವರಿಗೆ ತುಂಬು ಹೃದಯದ ಕೃತಜ್ಞತೆಗಳು.

ನನ್ನ ಸಂಶೋಧನೆಗೆ ಪ್ರೋತ್ಸಾಹ ನೀಡುತ್ತಿರುವ ವಾಲ್ಮೀಕಿ ಸಮಾಜದ ಬಂಧುಗಳಿಗೆ, ಶ್ರೀ ಶ್ರೀ ಶ್ರೀ ಪುಣ್ಯಾನಂದಪುರಿ ಸ್ವಾಮಿ ಅವರು, ಸಹನೆಯಿಂದ ನನ್ನ ಬರವಣಿಗೆಯನ್ನು ಗುರುತಿಸಿದ್ದಾರೆ. ಈ ಎಲ್ಲಾ ಸಂಶೋಧನಾ ಚಟುವಟಿಕೆಗಳನ್ನು ತೊಡಗಿಸಿಕೊಂಡಿರುವುದಕ್ಕೆ ಸದಾ ಉತ್ತೇಜಿಸಿದ ದೊಡ್ಡಪ್ಪನವರಾದ ಪೂಜಾರಿ ದೊಡ್ಡ ಪಾಲಯ್ಯ, ಅಪ್ಪ ಪೂಜಾರಿ ಸಣ್ಣ ಪಾಲಯ್ಯ ಅಮ್ಮ ತೋಟದ ಚಿನ್ನಮ್ಮ, ಮಾವ ಟಿ.ಎಸ್. ಓಬಯ್ಯ, ಅಕ್ಕಂದಿರಾದ ಶ್ರೀಮತಿ ಓಬಮ್ಮ, ಶ್ರೀಮತಿ ಪಾಲಾಕ್ಷಮ್ಮ, ಶ್ರೀಮತಿ ಏಕಾಂತಮ್ಮನವರನ್ನು ಮತ್ತು ಅವರ ಮಕ್ಕಳನ್ನು ಇಲ್ಲಿ ನೆನೆಯುವೆನು. ನನ್ನ ಪ್ರೀತಿಯ ಧರ್ಮಪತ್ನಿ ಶ್ರೀಮತಿ ಟಿ.ಎಸ್. ಪೂರ್ಣಿಮಾ ಮತ್ತು ಮಕ್ಕಳಾದ ಅಶೋಕ ವಿ. ಗಾದರಿ, ರೋಹಿತ್ ವಿ.ಭರತ್ ಮತ್ತು ಸುಕಿ ಧರ್ಮಪಾಲ ನನ್ನ ನೋವುಗಳನ್ನು, ದುಃಖಗಳನ್ನು ಮರೆಸಲು ಅವರ ನಗು ಹಂಚಿಕೊಂಡಿದ್ದಾರೆ. ಹಾಗೆಯೆ ತನ್ನೆಲ್ಲ ತ್ಯಾಗಕ್ಕೂ ಸಿದ್ಧನಾದ ನನ್ನ ಆತ್ಮೀಯ ಗೆಳೆಯ ಎಚ್.ಎ. ವಿಶ್ವನಾಥ ಬೋಸೇದೇವರಹಟ್ಟಿ, ವಿಶ್ವವಿದ್ಯಾಲಯದ ಸಹೋದ್ಯೋಗಿ ಮಿತ್ರರಾದ ಡಾ. ಟಿ.ಪಿ. ವಿಜಯ್, ಡಾ. ಸಿ.ಆರ್. ಗೋವಿಂದರಾಜು, ಡಾ. ಮೋಹನ್‌ಕೃಷ್ಣರೈ, ಡಾ. ಚಿನ್ನಸ್ವಾಮಿ ಸೋಸಲೆ, ಗಾದಿಲಿಂಗ, ಗಂಡಿ ಬೋರಯ್ಯ, ಚಿದಂಬರ, ಮಾಳಿಗ ವಿಶ್ವನಾಥ. ಎ.ಎಸ್.ಐ. ಕೃಷ್ಣಪ್ಪ ಚಿತ್ರದುರ್ಗ, ಎನ್.ಟಿ. ದಾಸಪ್ಪ ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತರು, ಬಿ.ಎಂ. ರಂಗಣ್ಣ, ಕೆ.ಸಿ. ನಾಗರಾಜ, ಟಿ.ಜಿ. ಪಾಪಣ್ಣ ವಾಲ್ಮೀಕಿ ಮಹಾಸಂಘ, ಬೆಂಗಳೂರು ಅವರಿಗೆ, ಬಳ್ಳಾರಿ, ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳ ನಾಯಕ ಬುಡಕಟ್ಟಿನ ಪ್ರತಿನಿಧಿಗಳಿಗೆ ಹೃತ್ಫೂರ್ವಕ ಕೃತಜ್ಞತೆಗಳು.

ಡಾ. ವಿರೂಪಾಕ್ಷಿ ಪೂಜಾರಹಳ್ಳಿ