ವಿವಿಧ ಸಂಸ್ಥೆಗಳು ಜರುಗಿಸಬೇಕಾದ ಕಾರ್ಯದ ವಿವರ   

೧. ಗ್ರಾಮ ಸಭೆಯಲ್ಲಿ ಹಸಿರು ಹೊನ್ನು ಕಾರ್ಯಕ್ರಮದ ಬಗ್ಗೆ ಚರ್ಚೆ ಹಾಗೂ ಗುರಿ ನಿಗದಿ ಪಡಿಸಿಕೊಳ್ಳುವುದು ಹಾಗೂ ಅರಣ್ಯ ಇಲಾಖೆಗೆ ಸಸಿಗಳ ಬೇಡಿಕೆ ತಿಳಿಸುವುದು (ಗ್ರಾ.ಪಂ. ಗಳಿಂದ).

ತಿಂಗಳು : ಆಕ್ಟೋಬರ್ ಮಾಹೆಯಲ್ಲಿ

೨. ಗ್ರಾಮ ಪಂಚಾಯ್ತಿಯ ಕಾರ್ಯಯೋಜನೆಯಲ್ಲಿ ಹಸಿರು ಹೊನ್ನು ಕಾರ್ಯಕ್ರಮ ನಿಗದಿ ಪಡಿಸುವುದು ಮತ್ತು ಜಿಲ್ಲಾ ಪಂಚಾಯತ್‌ಗಳಿಂದ ನೋಡಲ್ ಅಧಿಕಾರಿ ನೇಮಕ (ಗ್ರಾಮ ಪಂಚಾಯ್ತಿ ಹಾಗೂ ಜಿಲ್ಲಾ ಪಂಚಾಯತ್‌ಗಳಲ್ಲಿ)

ತಿಂಗಳು : ನವೆಂಬರ ಮತ್ತು ಡಿಸೆಂಬರ್‌ಮಾಹೆಗಳಲ್ಲಿ

೩. ಸ್ವಯಂ ಸೇವಾ ಸಂಸ್ಥೆ ಗುರುತಿಸುವುದು ಹಾಗೂ (ಅನುಬಂಧ-೩ರಂತೆ) ಒಡಂಬಡಿಕೆ ಮಾಡಿಕೊಳ್ಳುವುದು ಸ್ವಯಂ ಸೇವಾ ಸಂಸ್ಥೆಗಳಿಗೆ ಹಾಗೂ ಅನುಷ್ಠಾನಾಧಿಕಾರಿಗಳಿಗೆ ಜಿಲ್ಲಾ ಮಟ್ಟದಲ್ಲಿ ತರಬೇತಿ ಏರ್ಪಡಿಸುವುದು. (ಜಿ.ಪಂ. ಹಾಗೂ ತಾ.ಪಂ.ಗಳಿಂದ)

ತಿಂಗಳು : ಜನವರಿ ಮತ್ತು ಫೆಬ್ರವರಿ ಮಾಹೆಗಳಲ್ಲಿ

೪. ಸ್ವಯಂ ಸೇವಾ ಸಂಸ್ಥೆಯಿಂದ ಪ್ರಚಾರಾಂದೋಲನ ಹಾಗೂ ರೈತರಿಂದ ಭರ್ತಿ ಮಾಡಿದ ಅರ್ಜಿಗಳನ್ನು ಪಡೆದು ಗ್ರಾಮ ಪಂಚಾಯ್ತಿಗೆ ಸಲ್ಲಿಸುವುದು. (ಅನುಬಂಧ-೨ ರಂತೆ) (ಸ್ವಯಂ ಸೇವಾ ಸಂಸ್ಥೆ/ತಾಲೂಕು ಪಂಚಾಯತ್‌ಗಳಿಂದ

ತಿಂಗಳು : ಎಪ್ರಿಲ್ ಮತ್ತು ಮೇ ಮಾಹೆಯಲ್ಲಿ

೫. ಗ್ರಾಮ ಪಂಚಾಯ್ತಿಯಿಂದ ಫಲಾನುಭವಿಗಳ ಪಟ್ಟಿ ಪ್ರಕಟಣೆ ಹಾಗೂ ಫಲಾನುಭವಿಗಳು ತಮ್ಮ ಹೊಲಗಳಲ್ಲಿ ಸಸಿ ನೆಡಲು ಗುಂಡಿ ತಗೆಯುವ ಕಾರ್ಯ. (ಗ್ರಾಮ ಪಂಚಾಯ್ತಿ/ಫಲನುಭವಿಗಳಿಂದ)

ತಿಂಗಳು : ಮೇ ಮಾಹೆಯಲ್ಲಿ

೬. ನೋಡಲ್ ಅಧಿಕಾರಿಗಳಿಂದ ಸ್ಥಳ ಪರಿಶೀಲನೆ ಹಾಗೂಅರಣ್ಯ ಇಲಾಖೆಯಿಂದ ಸಸಿಗಳ ಪೂರೈಕೆ (ನೋಡಲ್ ಅಧಿಕಾರಿ/ಅರಣ್ಯ ಇಲಾಖೆಗಳಿಂದ)

ತಿಂಗಳು : ಮೇ/ಜೂನ್/ಜುಲೈಮಾಹೆಗಳಲ್ಲಿ

೭. ಫಲಾನುಭವಿಗಳಿಂದ ಸಸಿ ನೆಡುವ ಕಾರ್ಯ.(ಸ್ವಯಂ ಸೇವಾ ಸಂಸ್ಥೆ/ಅರಣ್ಯ ಇಲಾಖೆಗಳಿಂದ ಪರಿಶೀಲನೆ, ದಾಖಲಾತಿ)

ತಿಂಗಳು : ಜೂನ್/ಜುಲೈ/ಆಗಸ್ಟ್‌ಮಾಹೆಗಳಲ್ಲಿ

೮. ಜಿಲ್ಲಾ ಪಂಚಾಯತ್‌ಗಳಿಗೆ ಅಂತಿಮ ಪ್ರಗತಿ ವರದಿ ಸಲ್ಲಿಕೆ (ತಾಲೂಕು ಪಂಚಾಯತ್‌ಗಳಿಂದ)

ತಿಂಗಳು : ಆಕ್ಟೋಬರ್ ಮಾಹೆಯಲ್ಲಿ

 

ಕಾರ್ಯಕ್ರಮ ಉಸ್ತುವಾರಿ ಮತ್ತು ಮೌಲ್ಯಮಾಪನ

ಕಾರ್ಯಕ್ರಮದ ಉಸ್ತುವಾರಿ ಮತ್ತು ಮೌಲ್ಯ ಮಾಪನವನ್ನು ಈ ಕೆಳಗಿನಂತೆ ನಿರ್ವಹಿಸುವುದು

೧. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ- ಶೇ.೧೦೦ ರಷ್ಟು ಉಸ್ತುವಾರಿಯನ್ನು ಗ್ರಾಮ ಪಂಚಾಯತಿಯ ಕಾರ್ಯದರ್ಶಿ ಹಾಗೂ ಸಂಬಂಧಿಸಿದ ವನಪಾಲಕರು/ವಲಯ ಅರಣ್ಯಾಧಿಕಾರಿ ನಿರ್ವಹಿಸತಕ್ಕದ್ದು.

೨. ತಾಲೂಕು ಮಟ್ಟದಲ್ಲಿ- ತಾಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ, ಪಂಚಾಯಿತಿಯ ವಿಸ್ತರಣಾಧಿಕಾರಿ ಹಾಗೂ ವಲಯ ಅರಣ್ಯಾಧಿಕಾರಿಗಳು /ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಪ್ರಾದೇಶಿಕ ಹಾಗೂ ಸಾಮಾಜಿಕ ಅರಣ್ಯ ವಲಯ) ಕನಿಷ್ಟ ಶೇ.೧೦ ರಷ್ಟು ಉಸ್ತುವಾರಿ ನಿರ್ವಹಿಸತಕ್ಕದ್ದು.

೩. ಜಿಲ್ಲಾ ಮಟ್ಟದಲ್ಲಿ- ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಪಂಚಾಯತಿಯ ಉಪ ಕಾರ್ಯದರ್ಶಿ ಅಭಿವೃದ್ಧಿ, ಉಪ ಅರಣ್ಯ ಸಂರಕ್ಷಣಾಧಿಕಾರಿ(ಪ್ರಾದೇಶಿಕ ಹಾಗೂ ಸಾಮಾಜಿಕ ಅರಣ್ಯ ವಲಯ) ಹಾಗೂ ಜಿಲ್ಲಾ ಪಂಚಾಯ್ತಿ ಸೂಚಿಸಿದ ನೋಡಲ್ ಅಧಿಕಾರಿಗಳು ಕನಿಷ್ಟ ಶೇ. ೫ ರಷ್ಟು ಉಸ್ತುವಾರಿ ನಿರ್ವಹಿಸತಕ್ಕದ್ದು. ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯ್ತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಕಾರ್ಯಕ್ರಮ ಅನುಷ್ಠಾನಗೊಳಿಸಲು ಸಮನ್ವಯ ಸಮಿತಿ* ಸಭೆಗಳನ್ನು ಉಪ ಕಾರ್ಯದರ್ಶಿ (ಅಭಿವೃದ್ಧಿ) ಅವರ ಅಧ್ಯಕ್ಷತೆಯಲ್ಲಿ ನಡೆಸಿ ಕಾರ್ಯಕ್ರಮಕ್ಕೆ ಚಾಲನೆ ನೀಡುವುದು.

೪. ಸಂಪೂರ್ಣ ಮೌಲ್ಯ ಮಾಪನವನ್ನು ಜಿಲ್ಲಾ ಪಂಚಾಯ್ತಿಯ ಮುಖ್ಯ ಯೋಜನಾಧಿಕಾರಿ ನಿರ್ವಹಿಸತಕ್ಕದ್ದು.

೫. ರಾಜ್ಯ ಮಟ್ಟದಲ್ಲಿ – ಜೈವಿಕ ಇಂಧನ ಕಾರ್ಯಪಡೆ, ಅರಣ್ಯ ಇಲಾಖೆಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ(ಕೇಂದ್ರ ಸ್ಥಾನ), ನಿರ್ದೇಶಕರು, ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಇವರುಗಳು ಆಗಿಂದಾಗ್ಯೆ ವಿವಿಧ ಸ್ಥಳಗಳಿಗೆ ಭೇಟಿ ನೀಡಿ, ಪ್ರಗತಿ ಪರಿಶೀಲನೆ ಮಾಡಿ, ಸಲಹೆ ಸೂಚನೆಗಳನ್ನು ಅನುಷ್ಠಾನಾಧಿಕಾರಿಗಳಿಗೆ/ಜಿಲ್ಲಾ ಪಂಚಾಯ್ತಿಗಳಿಗೆ ನೀಡತಕ್ಕದ್ದು.   

* ತಾಲೂಕುವಾರು ಸಮನ್ವಯ ಸಮಿತಿಯನ್ನು ರಚಿಸುವುದು. ಸಮಿತಿಗೆ  ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳಾಗಿ ನಿಯೋಜಿಸಿ ಕಾರ್ಯಕ್ರಮದ ಉಸ್ತುವಾರಿ ಜವಾಬ್ದಾರಿ ನೀಡುವುದು.