ಪಲ್ಲವಿ : ಕಾಲಿಗೆ ಗೆಜ್ಜೆ ಕಟ್ಟಿ ಕೈಯಲ್ಲಿ ತಾಳ ಹಿಡಿವೆ
ಮೈಯೆಲ್ಲ ಮೆರೆತು ಕುಣಿವೆ ಕೃಷ್ಣ ಕೃಷ್ಣ

ಚರಣ :  ಬಂಧು ಬಳಗ ನೀನೆ ಅಂದೆ ತಂದೆ ತಾಯಿ ನೀನೆ ಎಲ್ಲ
ಒಂದೂ ಅರಿಯೆ ದೇವನೇ ಕೃಷ್ಣ ಕೃಷ್ಣ

ಪ್ರಾಣವೆಲ್ಲ ನಿಂದೇ ಕೃಷ್ಣ – ನನ್ನ ಆಣೆ ಎಂದೆ ಕೃಷ್ಣ
ನಿನ್ನ ಕಾಣ ಬಂದೆ ಕೃಷ್ಣ ಕೃಷ್ಣಾ ಕೃಷ್ಣಾ

ಜನ್ಮವೆತ್ತಿ ಬಂದೆ ಕೃಷ್ಣ – ಮತ್ತೆ ಹುಟ್ಟಲಾರೆ ಕೃಷ್ಣ
ಜಯದ ಕೂಗು ಕೂಗಿಕೊಂಡೆ ಕೃಷ್ಣ ಕೃಷ್ಣ