ಈ ಯೋಜನೆಯನ್ನು ಕೈಗೆತ್ತಿಕೊಂಡಾಗ ಪರಿಪೂರ್ಣವಾಗಿ ಉತ್ತೇಜಿಸಿದ ಕುಲಪತಿಗಳಾಗಿದ್ದ ಡಾ. ಹೆಚ್.ಜಿ. ಲಕ್ಕಪ್ಪಗೌಡ ಹಾಗೂ ಇಂದಿನ ಬಹುಳತ್ವ ಪ್ರತಿಭೆಯುಳ್ಳ ಕುಲಪತಿಗಳಾದ ಡಾ. ಬಿ.ಎ. ವಿವೇಕ ರೈ ಅವರಿಗೆ.

ಈ ಯೋಜನೆಯ ಪೂರಕವಾಗಿ ಒಡಲಾಳದಿಂದ ಸ್ಥೈರ್ಯ ಹಾಗೂ ಪ್ರೋತ್ಸಾಹ, ಸಲಹೆಗಳನ್ನು ನೀಡಿದ ಕುಲಸಚಿವರಾದ ಡಾ. ಕರೀಗೌಡ ಬೀಚನಹಳ್ಳಿ, ಬುಡಕಟ್ಟು ಮತ್ತು ಜಾನಪದ ಕ್ಷೇತ್ರದ ದಿಗ್ಗಜರಾದ ಡಾ. ಹಿ.ಚಿ. ಬೋರಲಿಂಗಯ್ಯ ಈ ಯೋಜನೆಯನ್ನು ಪುಸ್ತಕ ರೂಪದಲ್ಲಿ ಪ್ರಕಟಣೆಯನ್ನು ಓದುಗರಿಗೆ ಒದಗಿಸುತ್ತಿರುವ ಸಾಹಿತ್ಯವಾಗ್ಮಿ ಮತ್ತು ಪ್ರಸಾರಾಂಗದ ನಿರ್ದೇಶಕರಾದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ, ಅಧ್ಯಯನಾಂಗ ನಿರ್ದೇಶಕರಾದ ಡಾ. ಟಿ.ಆಋ. ಚಂದ್ರಶೇಖರ್ ಅವರಿಗೆ, ನನ್ನೆಲ್ಲ ಕೆಲಸಗಳಿಗೆ ತುಂಬು ಹೃದಯದಿಂದ  ಸಂಪೂರ್ಣ ಸಹಕಾರ ನೀಡುತ್ತಿರುವ ಪ್ರೊ. ಕಾಳೇಗೌಡ ನಾಗವಾರ, ಪ್ರೊ. ವೀರಣ್ಣದಂಡೆ, ಪ್ರೊ. ಕೆ. ಚಿನ್ನಪ್ಪಗೌಡ, ಪ್ರೊ. ಅಂಬಳಿಕೆ ಹಿರಿಯಣ್ಣ, ಡಾ. ಹಿ.ಶಿ. ರಾಮಚಂದ್ರಗೌಡ, ಡಾ. ಶ್ರೀಕಂಠ ಕೂಡಿಗೆ ಅವರಿಗೆ.

ಈ ಯೋಜನೆಯ ಹಸ್ತಪ್ರತಿಯನ್ನು ಪರಾಮರ್ಶಿಸಿ ಸೂಕ್ತ ಸಲಹೆಗಳನ್ನು ನೀಡಿದ ಡಾ.‍ಆರ್ವಿಯಸ್, ಅಲ್ಲದೆ ಈ ಕೃತಿಯ ಸಿದ್ಧತೆಯಲ್ಲಿ ಸಹಕಾರ ನೀಡಿದ ಸಹೋದ್ಯೋಗಿ ಬಳಗದವರಾದ ಡಾ. ಮಂಜುನಾಥ ಬೇವಿನಕಟ್ಟಿ, ಡಾ. ಸ.ಚಿ. ರಮೇಶ್, ಡಾ. ಮೊಗಳ್ಳಿ ಗಣೇಶ್, ಡಾ.ಸಿ.ಟಿ. ಗುರುಪ್ರಸಾದ್, ಡಾ. ಹರಿಶ್ಚಂದ್ರ ದಿಗ್ಸಂಗಿಕರ್, ಎಚ್.ಎಂ. ವಿರೂಪಾಕ್ಷಯ್ಯ ಅವರಿಗೆ.

ಈ ಕೃತಿಯನ್ನು ಹೊರತರುವಲ್ಲಲಿ ನಿರಂತರ ಶ್ರಮವಹಿಸಿದ ಪ್ರಸಾರಾಂಗದ ಬಳಗದಲ್ಲಿರುವ ಶ್ರೀ ಸುಜ್ಞಾನಮೂರ್ತಿ, ಕೆ.ಕೆ. ಮಕಾಳಿ, ಕೆ.ಎಲ್. ರಾಜಶೇಖರ್, ಎಚ್.ಬಿ. ರವೀಂದ್ರ, ಪೂವಯ್ಯ, ಶ್ರೀಮತಿ ಎ. ನಾಗವೇಣಿ ಅವರಿಗೆ.

ಮರೆಯಲಾಗದ ಮನಸ್ಸುಗಳೊಂದಿಗೆ ನೆನೆಯುತ್ತೇನೆ.

– ಡಾ. ಹೆಬ್ಬಾಲೆ ಕೆ. ನಾಗೇಶ್