ಗಿರಿದರಿಯಲೆಲ್ಲೊ ಹುಟ್ಟಿರುವ ಹೊಳೆಗೆ
ಭೂಗೋಳ ಶಾಸ್ತ್ರ ಬೇಕೆ ?
ಎಂತೆಂತೊ ಹರಿದು ಹರಿದಂತೆ ಮೊರೆದು
ಹೋದಲ್ಲಿ ತಂಪನೆರೆದು-
ನಲಿದುಲಿವ ನದಿಗೆ ಕಡಲಿರುವ ಕಡೆಗೆ
ಕೈಮರದ ನೆರವು ಬೇಕೆ ?

ಕಾವ್ಯಕ್ಕೆ ಶಾಸ್ತ್ರವೇಕೆ ?