ಕಾಲಿಲ್ಲದ ಈ ಅನಾಥ ಹುಡುಗ
ನಡಸುತ್ತಾನೆ ಕವಿತೆಯ ಹಡಗ.
ಸುತ್ತಲು ಮೊರೆದಿದೆ ಕರಾಳ ಕಡಲು
ನಡುವೆ ಒಬ್ಬನೇ, ಹಬ್ಬಿದೆ ದಿಗಿಲು.
ನಮಗೂ ನಿಮಗೂ ದಡವಿರಬಹುದು
ಆ ಭರವಸೆಯೂ ಈತನಿಗಿರದು.
ಹಸಿರು ತೀರಗಳ ಕನಸನು ಕಂಡು
ಅದಮ್ಯ ಧೈರ್ಯವ ತುಂಬಿಸಿಕೊಂಡು
ಹಾಡುತ್ತಾನೆ ಪ್ರೀತಿ – ಸ್ನೇಹಗಳ
ಮರೆಯುತ್ತಾನೆ ತನ್ನ ಬವಣೆಗಳ.
‘ಮೌನಗೀತೆ’ಯಲಿ ಮಿಡಿಯುವನೀತ
ನೋವಿನ ತಂತಿಯ ಸ್ವರ ಸಂಗೀತ.

ಮೌನಗೀತೆ : ಟಿ.ಎಂ. ಷಡಕ್ಷರಿ, ೧೯೮೫