ನಾನು, ನಾನು, ನಾನು! ನನ್ನದು, ನನ್ನದು, ನನ್ನದು! ಎಂತಹ ಸವಿಮಾತುಗಳವು! ಎಂತಹ ಮುದ್ದಿನ ಮಾತದು “ನಾನು!” ಎಂತಹ ಸವಿಸುಳ್ಳದು “ನನ್ನದು!”?

“ನಾನು” ಸೃಷ್ಟಿಗೆ ಕಾರಣ. “ನನ್ನದು” ಸ್ಥಿತಿಗೆ ಕಾರಣ. “ನಾನು” “ನನ್ನದು” ಅಳಿದು “ನೀನು” “ನಿನ್ನದು” ಆಗುವುದೆ ಲಯಕ್ಕೆ ಕಾರಣ.

“ನಾನು” ಎಂಬುದು “ನೀನು” ಎಂದಾಗಿ, ನಾನೆ ನೀನಾಗಿ, ಮಾತು ಮೌನವಾಗಿ, ತನಗೆ ತಾನಾಗಿ, ಕಡೆಗೆಲ್ಲವೂ ಬರಿದಾಗಿ, ಇದು ಅದಾಗಿ ಹೋಗುವುದು!

ಮಾಯಾವಿ, ಇಂತಹ ಮಹಾ ಘನ ವಿಶ್ವವನು ಎಂತಹ ಸವಿಸುಳ್ಳಿನಲಿ ಕೆತ್ತಿರುವೆ!