ಕಣ್ಣೀರನೊರಸಿಕೊ! ಕಳೆದುದಕಳಲು ನಮಗೆ ಹೊತ್ತಿಲ್ಲ.

ಇಲ್ಲಿಗೇ ಮುಗಿಯಲಿಲ್ಲ ಎಮ್ಮಳಲ ಹೊರೆ. ಅತ್ತತ್ತು ಕಣ್ಣೀರನೆಲ್ಲ ಬತ್ತಿಸಬೇಡ. ಮುಂದೆ ದಾರಿಯೊಳೆಮ್ಮನಡ್ಡಗಟ್ಟುವ ದುಃಖಗಳಿಗಾಗಿ ಅಳಲು ಒಂದಿನಿತು ಕಣ್ಣೀರಾದರೂ ಇರಲಿ ಎದೆಯ ಅರಳಿನಲಿ.

ಏಕೆನೆ, ನಮ್ಮ ಕಷ್ಟಕ್ಕೆಲ್ಲ ಕಣ್ಣೀರೆ ಮದ್ದು!