ಇವರೆಲ್ಲ ನಿನ್ನ ನೋಡಿರುವರೇನು, ಓ ಎನ್ನ ದೊರೆಯೆ?
ಹಗಲಿರುಳೂ ನಿನ್ನನರಿತವರಂತೆ ನಿನ್ನನು ಕುರಿತು ಮಾತಾಡುತಿಹರು.
ನಿನಗಿಂತಲೂ ನಿನ್ನನು ಕುರಿತ ಹರಟೆಯೆ ಇವರಿಗೆ ರುಚಿಕರವಾಗಿದೆ!
ಸೂತ್ರಬದ್ಧವಾಗುವವರೆಗೂ ಮಾಧುರ್ಯ ಮಧುರವಾಗದೆಂದು ಇವರ ನಂಬುಗೆ ಇರುವಂತೆ ತೋರುತಿದೆ.
ಮಕರಂದ ಪಾನಮಾಡಿದ ಮಧುಕರದಂತೆ ನಿನ್ನೊಲ್ಮೆಯ ಸವಿಯನೆನಗಿತ್ತು ನನ್ನನು ಮೂಕನನ್ನಾಗಿ ಮಾಡು, ಓ ಎನ್ನ ಅಕ್ಷಯಮಾಧುರ್ಯ ನಿಧಿಯೆ!
Leave A Comment