ಮಾತಿನಿಂದೇನು? ಮಂತ್ರದಿಂದೇನು? ಮಾತು ಮಂತ್ರಗಳೆಲ್ಲ ಬರಿ ನೆವಗಳೆಮಗೆ.

ನನ್ನ ನಿನ್ನಯ ಮಧುರ ಮಿಲನವು ಮಾತುಗಳರಿಯದ ಮಂತ್ರಗಳಳೆಯದ ಹಿರಿಯಾಳದಲಿ ಶಾಶ್ವತವಾಗಿದೆ.

ಏಕೆಂದರೆ, ನನಗೂ ನಿನಗೂ ಭೇದವಿಲ್ಲ;

ಏಕೆಂದರೆ, ಪ್ರೇಮ ಅದ್ವೈತಿ!