ನಿನ್ನವನು ನಾನು; ನನ್ನವನು ನೀನು. ನಿನ್ನಲ್ಲಿ ನಾನು; ನನ್ನಲ್ಲಿ ನೀನು. ನೀನೆ ನಾನು; ನಾನೆ ನೀನು.

ನೀನು ತುಟಿಯಾಗಿರಲು ನಾ ಕೆನ್ನೆಯಾಗುವೆನು; ನೀ ಕೆನ್ನೆಯಾಗಿರಲು ನಾನು ತುಟಿಯಾಗುವೆನು.

ನಾವಿಬ್ಬರೂ ಎಂದು ತುಟಿಯೊಳೊಂದಾಗುವೆವೊ ಅಂದು ಬ್ರಹ್ಮಾಂಡವೆಲ್ಲವೂ ಸೊನ್ನೆ.

ಜಗವೆಲ್ಲ ನಮ್ಮ ತುಟಿ ಕೆನ್ನೆಗಳ ಮುತ್ತಿನ ಕೆತ್ತನೆ.

ಮುತ್ತಿನ ಬೆಲೆ ನೆಲೆಗಳನು ತಿಳಿದವರೊಬ್ಬರಿಲ್ಲ.

ಅಂತ ಅನಂತಗಳು ಮುತ್ತಿನ ಮುದ್ರೆಯಿಂದ ಚಿರಮುದ್ರಿತವಾಗಿ ಒಂದನೊಂದು ಬಿಡಲಾರದಿವೆ.