ನಿನ್ನ ಕಂಗಳು ಎನ್ನ ಕಂಗಳ ಸಂಧಿಸಲು, ನಾ ನಿನ್ನ ಕಣ್ಣಾಗಿ, ನೀನೆನ್ನ ಕಣ್ಣಾಗಿ……

ಮುಂದೆ ಮಾತಿಲ್ಲದಾಗುವುದು!

ಮೌನವೆ ವಾಙ್ಮಯವಾಗುವುದು!

ನಿನ್ನ ಕಣ್ಣ ಅನಂತ ನೀಲಾಕಾಶದಂತೆ; ನನ್ನದು ಸ್ತಬ್ಧಸಾಗರದ ಅಪಾರ ಸುನೀಲ ಜಲರಾಶಿಯಂತೆ!

ನಮ್ಮಿಬ್ಬರ ಪ್ರಣಯ ಗಗನವಾರಿಧಿಗಳ ಅಂಗಜಪರಿಷ್ವಂಗ ನೀಲಿಮೆಯಂತೆ!