ನಾನು ಕರೆದಲ್ಲದೆ ನೀನೆನ್ನ ಬಳಿಗೆ ಬರಬಾರದೇನು? ನಾ ಕರೆದ ಮೇಲೆಯೇ ನೀನು ಬರಬೇಕೇನು? ನಿನ್ನ ಸಾನ್ನಿಧ್ಯಕಾಗಿ ನಾನು ಅನವರತವೂ ಪರಿತಪಿಸುತಿಹೆನೆಂಬುದನು ನೀನರಿಯೆಯೇನು?

ಅರಿತರಿತೂ ಮತ್ತೇಕೆ ಈ ಮೂದಲೆಯ ನಡತೆ? ನನ್ನ ಮೇಲೆ ನಿನಗಿರುವ ಒಲುಮೆಯಲಿ ಔದಾಸೀನ್ಯದ ನಟನೆ ಏಕೆ? ಅವರಿವರು ಇರುವಾಗ ನಾ ಕರೆಯಲಳುಕಿದರೆ ನೀ ಬರಲಳುಕಲೇಕೆ?

ನಿನಗಿದೋ ನಾ ಕರೆಯದಿದ್ದರೂ ನೀನು ಬರಬೇಕೆಂಬ ಅನಂತ ಆಹ್ವಾನ, ಓ ನನ್ನ ಪ್ರೇಮಮೂರ್ತಿ!