ನನ್ನ ತುಟಿ ನಿನ್ನ ಚೆಂದುಟಿ ಮುತ್ತಿನ ಮಧುರ ಮದಿರೆಯನೆ ಹಾರಿ ಬಾಯಾರಿ ಬೇಗುದಿಗೊಂಡಿವೆ.

ಜಗದ ಮರುಭೂಮಿಯಲಿ ಮುತ್ತೊಂದೆ ಮರುವನ:

ಜಗದ ದುಃಖದ ನಡುವೆ ಮುತ್ತೊಂದೆ ಸುಖ.

ವಿಷಮಯ ಜಗತ್ತಿನಲಿ ಅಮೃತವೆನೆ ಮುತ್ತು.

ಲೋಕದ ಅಶಾಂತಿಯಲಿ ಶಾಂತಿಯೆನೆ ಮುತ್ತು!

ನಿನ್ನ ತುಟಿ ನನ್ನ ತುಟಿಯ ಸಂಧಿಸುವ ಸ್ಥಾನದಾ ಕಂದರದಿ ಪ್ರವಹಿಸುವ ವಿಸ್ಮೃತಿಯ ವೈತರಣಿಯಲ್ಲಿ ಜಗಜ್ಜೀವನದ ಅನಂತ ಆಪತ್ತುಗಳೆಲ್ಲ ಮುಳುಗಿ ಕರಗಿ ಲಯವಾಗಲಿ.

ನಾನು ನೀನು ಜಗತ್ತುಗಳಳಿದು ನಮ್ಮೊಲವಿನ ಮುತ್ತೊಂದೆ ಚಿರವಾಗಲಿ.