ನಾನು ಬಾಗಿಲು ಮುಚ್ಚಿ, ಊದುಕಡ್ಡಿಯ ಹೊತ್ತಿಸಿ, ನಿನ್ನ ಧ್ಯಾನಿಸಲೆಂದು ಪದ್ಮಾಸನವನಾಂತು ಮೈಮರೆತೆ, ಓ ಸೌಂದರ್ಯಮೂರ್ತಿ.
ಮನಸ್ಸು ನೆನಹಿನ ಸುಂದರ ಬೃಂದಾವನದಲ್ಲಿ ವಸಂತಮಾಸದ ತಂಬೆಲರಂತೆ ನಲಿದಾಡಿತು:
ಫಾಲ್ಗುಣ ಮಾಸದ ದೀರ್ಘದಿಗಂತದಲ್ಲಿ ಕುಂಕುಮಾರುಣ ಬಿಂಬದ ಸೂರ್ಯನ ಉದಯವನು ಕಂಡೆ;
ಮಾಘಮಾಸದ ಗಿರಿ ವನ ಕಂದರಗಳಲ್ಲಿ ಮಂಜಿನ ಮಾಯಾಮೋಹದ ಇಂದ್ರಜಾಲವನು ಕಂಡೆ;
ಸುಗ್ಗಿಯ ಸಗ್ಗವಕ್ಕಿಗಳ ಸಾಸಿರ ಸಾಸಿರ ಇಂಚರಗಳನು ಆಲಿಸಿ ಪುಳಕಿತನಾದೆ;
ದಶಲಕ್ಷ ಲಕ್ಷದಶ ನಕ್ಷತ್ರ ನೀಹಾರಿಕಾ ಸಮಾಕೀರ್ಣ ಮಹಾವಿಶ್ವದ ಅನಂತತೆಯಲ್ಲಿ ಸಂಚರಿಸಿ ಸ್ತಬ್ಧನಾದೆ!
ಸತ್ಯ ಸೌಂದರ್ಯಗಳ ಮಂದಹಾಸದಲ್ಲಿ ಲೀನವಾದೆ!
Leave A Comment