ನನ್ನೆದೆ ಶೂನ್ಯವಾಗುತ್ತಿದೆ. ಬಾಯ್ದೆರೆವ ಶೂನ್ಯತಾ ಪಾತಾಳದ ಭಯಂಕರತೆಗೆ ಕಂಪಿಸುತ್ತಿಹೆ ನಾನು. ಬಾ, ತುಂಬದನು ನಿನ್ನ ಸವಿದುಟಿಯ ಮಧುರ ಚುಂಬನದಿಂದ, ಓ ನನ್ನ ಪ್ರೇಮರಸಮೂರ್ತಿ.

ಚಾರುತರ ಪಾಶಗಳೆಲ್ಲ ಸಡಿಲ ನಗ್ನ ನಿರಾಕಾರದಲಿ ಲಗ್ನವಾಗುತಿಹೆ ನಾನು. ನಿನ್ನ ಮೋಹನಾಲಿಂಗನ ಬಂಧನದಿ ಬಿಗಿದು ನನ್ನನು ಕಟ್ಟು.

ಅಯ್ಯೊ, ಬಂದು ನನ್ನನು ಮುಟ್ಟು! ಮುಟ್ಟು! ಮುಟ್ಟು!