ಮೇಳ : ಬಂದ ಕುಂತಿದೀರಿ ಹಿರಿಯ ಕಿರಿಯರಾ
ಶರಣು ಹೇಳತೀವಿ ನಾವು ನಿಮಗ| ಸ್ವಾಮಿ
ಸಣ್ಣ ಹುಡುಗರು ಬಣ್ಣದ ಗಾಬರಿ
ಚೆನ್ನಾಗಿ ಕೇಳಿರಿ ನಮ್ಮ ಕಥನಾ||

ತಪ್ಪ ಮಾಡಿದರೆ ಒಪ್ಪ ಮಾಡಿಕೊಳ್ಳಿ
ಚಪ್ಪಾಳಿ ಹೊಡೆಯಿರಿ ನಗುನಗುತಾ| ಸ್ವಾಮಿ
ಸ್ಕೂಲಿನ ಎಳೆಯರು ತಲೆಯ ಬಾಗತೀವಿ
ಕೈಯ ಮುಗಿಯತೀವಿ ನಾವು ನಿಮಗ|| ಸ್ವಾಮಿ

ಬುದ್ಧಿವಂತ ಗಣಪ ಡೊಳ್ಳ ಹೊಟ್ಟಿ ಟೊಣಪ
ಕೈಯ ಮುಗಿಯತೀವಿ ನಾವು ನಿಮಗ| ಸ್ವಾಮಿ
ಬುದ್ದಿಕೊಡು ನಮಗಷ್ಟು ದೊಡ್ಡ ಕಡುಬಿನಷ್ಟು
ಹಾಡಿ ಕುಣಿಯತೀವಿ ನಿನ್ನ ಮುಂದ|| ಸ್ವಾಮಿ