ಹೆಸರು: ಕುಮಾರಿ
ಊರು: ಬಿಳಿಕೆರೆ

 

ಪ್ರಶ್ನೆ: ವೈದ್ಯಾಧಿಕಾರಿಗಳಿಗೆ, ನನ್ನ ಸಮಸ್ಯೆ ಏನೆಂದರೆ ಹೊಟ್ಟೆ ನೋವು. ಅಂದರೆ ತಿಂಗಳು ಮುಟ್ಟಿನ ಸಮಯದಲ್ಲಿ ಕಿಬ್ಬೊಟ್ಟೆ ನೋವು ಬರುವಾಗ ನಡೆಯಲಿಕ್ಕೆ ಆಗುವುದಿಲ್ಲ. ಮಲಗಿಕೊಂಡೆ ಇರಬೇಕು ಅನ್ನಿಸುತ್ತದೆ. ನನಗೆ ಮದುವೆಯಾಗಿ ಮಕ್ಕಳು ಮತ್ತು ಆಪರೇಷನ್ ಕೂಡ ಆಗಿದೆ. ನನ್ನ ವಯಸ್ಸು ೩೬. ನನಗೆ ಮೊದಲು ಹೂಟ್ಟೆ ನೋವು ಬರುತ್ತಿರಲಿಲ್ಲ ಈಗ ಒಂದು ವರ್ಷದಿಂದ ಶರುವಾಗಿದೆ. ಎಲ್ಲಾ ಡಾಕ್ಟ್ರ್ ಗೆ ತೋರಿಸಿದ್ದೇನೆ. ಮತ್ತು ಸ್ಕ್ಯಾನಿಂಗ್ ಕೂಡ ಮಾಡಿಸಿದ್ದೇನೆ. ಏನೂ ತೊಂದರೆ ಇಲ್ಲವೆಂದು ತಿಳಿಸಿರುತ್ತಾರೆ. ತಿಂಗಳು ತಿಂಗಳು Meftal space ಮಾತ್ರೆ ತೆಗೆದುಕೊಳ್ಳುತ್ತೇನೆ. ಆಗ ನೋವು ಸ್ವಲ್ಪ ಕಡಿಮೆಯಾಗುತ್ತದೆ. ಹೀಗೆ ಪ್ರತಿ ತಿಂಗಳು ಮಾತ್ರೆ ತೆಗೆದುಕೊಳ್ಳುವುದರಿಂದ ತೊಂದರೆ ಇದೆಯೇ ತಿಳಿಸಿ. ದಯವಿಟ್ಟು ಎಲ್ಲಾ ಸಮಸ್ಯೆಗೆ ಉತ್ತರ ತಿಳಿಸುತ್ತೀರೆಂದು ನಂಬಿರುತ್ತೇನೆ.

ನಮಸ್ಕಾರಗಳು.

ಉತ್ತರ: ಮುಟ್ಟಿನ ಸಮಯದಲ್ಲಿ ಸ್ವಲ್ಪ ಕಿಬ್ಬೊಟ್ಟೆನೋವು ಬರುವುದು ಬಹುತೇಕ (ಶೇ.೬೦ರಷ್ಟು) ಮಹಿಳೆಯರಲ್ಲಿ ಕಂಡುಬರುವುದು ಸಾಮಾನ್ಯ ಸಂಗತಿ. ನೋವು ನಮ್ಮ ನಿತ್ಯ ಚಟುವಟಿಕೆಗಳಿಗೆ ತೊಂದರೆಯಾದರೆ ಅದು ಜನನೇಂದ್ರೀಯಗಳಲ್ಲಿನ ಕಾಯಿಲೆಗಳ ಸೂಚನೆಯಾಗಿರುತ್ತದೆ. ನಿಮಗೆ ಮುಟ್ಟು ಮುನ್ನಾದಿನದ ತೊಂದರೆ ಇದೆ. ಸ್ಕ್ಯಾನಿಂಗ್‌ನಲ್ಲಿ ಏನೂ ತೊಂದರೆ ಇಲ್ಲ ಎಂದು ತಿಳಿಸಿರುವುದರಿಂದ ಹೆದರಬೇಕಾಗಿಲ್ಲ. ನೋವು ಬಂದಾಗ ಒಂದೆರಡು ದಿನ MEFTAL SPAS ಮಾತ್ರೆ ತೆಗೆದುಕೊಳ್ಳುವುದರಿಂದ ತೊಂದರೆ ಏನೂ ಇಲ್ಲ.

ನೀವು ಮುಟ್ಟಾದ ೧೫ನೇ ದಿನದಿಂದ ೨೫ನೇ ದಿನದವರೆಗೆ ಪ್ರತಿದಿನ ಒಂದು PREMENCE Tablet ಮತ್ತು ಒಂದು MEPRATE 10mg ಮಾತ್ರೆ ತೆಗೆದುಕೊಳ್ಳಿ. ಈ ರೀತಿ ೩ ತಿಂಗಳು ತೆಗೆದುಕೊಳ್ಳಿ. ಮುಟ್ಟಾದ ೧೫ನೇ ದಿನದಿಂದ ಮತ್ತೆ ಮುಟ್ಟಾಗುವ ವರೆಗೆ ಉಪ್ಪು ಸೇವನೆ ಕಡಿಮೆ ಮಾಡಿ, ಕಾಫಿ, ಟೀ ನಿಲ್ಲಿಸಿ. ವ್ಯಾಯಾಮ ಮತ್ತು ಯೋಗ ಮಾಡಿ ಸರಿಹೋಗುತ್ತೆ. ದಪ್ಪ ಇದ್ದರೆ ತೂಕ ಕಡಿಮೆ ಮಾಡಿ.