ಫ್ರಾನ್ಸಿನ ನೆಪೋಲಿಯನ್ ಬೊನಾಪಾರ್ಟೆ ತನ್ನ ಶೌರ್ಯ ಮತ್ತು ಸಮರ ಕೌಶಲ್ಯದಿಂದ ಜಗತ್ತನ್ನೇ ದಂಗುಬಡಿಸಿದ್ದನು. ಅವನು ಯಾವಾಗಲೂ ಕೂಡ ಚೈನಾದ ಸನಝ (Sun Tzu) ಬರೆದ ದಿ. ಆರ್ಟ್ ಆಫ್ ವಾರ್ (The Art of War) ಎಂಬ ಪುಸ್ತಕವನ್ನು ತನ್ನ ಜೊತೆಯಲ್ಲೇ ಆಗಾಗ ಓದಲು ಇಟ್ಟುಕೊಂಡಿದ್ದ ಎಂಬುದು ಪ್ರತೀತಿ. ಆ ಪುಸ್ತಕವೇ ಅವನನ್ನು ಅತ್ಯಂತ ಬಲಿಷ್ಠ ಜನರಲ್ ಆಗಿ ಮಾಡಲು ಸಾಧ್ಯವಾಯಿತೆಂಬುದು ಒಂದು ಇತಿಹಾಸ.

ಮುಖ್ಯವಾಗಿ ಯುರೋಪ್ ಅಥವಾ ಅಮೇರಿಕದ ಬೃಹತ್ ಕಂಪನಿಗಳ ಸಾವಿರಾರು ಮುಖ್ಯಸ್ಥರು ಅಥವಾ ಉದ್ಯಮಿಗಳು ಯುಗಯುಗಾಂತರದಲ್ಲಿ ಕಳೆದುಕೊಂಡ ಮಿಲಿಟರಿ ನಾಯಕರ ಆದರ್ಶವನ್ನು ಹಚ್ಚಿಕೊಂಡಿದ್ದಾರೆಂಬುದು ಅವರ ಆತ್ಮಚರಿತ್ರೆಗಳಿಂದ ತಿಳಿದುಬರುತ್ತದೆ. ತಮ್ಮ ತಮ್ಮ ಕ್ಷೇತ್ರದಲ್ಲಿ ವಿಜಯಿಗಳಾಗಲು ತಾವು ಬಯಸಿದ ಗುರಿಯನ್ನು ಸಾಧಿಸಲು ಈ ಸಮರ ಸೂತ್ರಗಳು ಕಾರಣೀಭೂತವಾಗಿದ್ದವು. ಫಲಿತಾಂಶಗಳು ದಕ್ಷತೆಯ ಒಂದು ಮಾನದಂಡ. ಆದರೆ ಫಲಿತಾಂಶವೇ ಪ್ರಮುಖವಲ್ಲ. ಅವುಗಳು ಕ್ಲಪ್ತಕಾಲದಲ್ಲಿ ಸಾಗಿರಬೇಕು. ಕಾಲವೇ ಅವರ ಸ್ಪರ್ಧಿ ಮತ್ತು ಅದೇ ಪ್ರಮುಖ ಕಾಲ. ಅನಿವಾರ‍್ಯತೆ ಅವರ ಜೀವನದ ಅವಿಭಾಜ್ಯ ಅಂಗವಾಗುತ್ತದೆ. ಚಿಂತನೆಯ ಪ್ರಬಲ ಅಸ್ತ್ರವುಳ್ಳ ಇಂತಹ ಮುಖಂಡರು ಯಾವ ಕಾಲದಲ್ಲಿ ಯಾವ ಸ್ಪರ್ಧೆ ಎದುರಾದರೂ ಅವುಗಳನ್ನು ಮೆಟ್ಟಿ ಗೆಲ್ಲುವ ಯಶಸ್ವಿ ಸೈನಿಕರಾಗುತ್ತಿದ್ದರು.

ಮಧ್ಯಪ್ರಾಚ್ಯದಲ್ಲಿ ಒಬ್ಬ ಯುವಕ ನ್ಯೂಯಾರ್ಕಿನ ವಸತಿ ಶಾಲೆಯಲ್ಲಿ ಒಂದು ಬೋರ್ಡಿಂಗ್ ಮನೆಯಲ್ಲಿ ಇದ್ದು ಅತ್ಯಂತ ಕನಿಷ್ಠ ದರ್ಜೆಯ ದೊಡ್ಡ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಅವನಿಗೆ ಬರೀ ಪ್ರೌಢಶಾಲಾ ವಿದ್ಯಾಭ್ಯಾಸ ಮಾತ್ರವಿದ್ದು, ಸಾಮಾನ್ಯ ಕುಟುಂಬದಲ್ಲಿ ಜನಿಸಿದ. ಅವನಲ್ಲಿ ಆತ್ಮವಿಶ್ವಾಸವಿರಲಿಲ್ಲ. ಮುಂದಿನ ಭವಿಷ್ಯ ಚಿತ್ರಿಸುವ ಯೋಚನೆ ಕೂಡ ಇರಲಿಲ್ಲ. ಮೂರು ವರ್ಷಗಳ ತನಕ ಬೆಳಗ್ಗೆ ಎದ್ದು ಕೆಲಸಕ್ಕೆ ಮಾಮೂಲಾಗಿ ಹೋಗಿ ತನ್ನ ಕರ್ತವ್ಯ ನಿರ್ವಹಿಸಿ ತನ್ನ ಜೀವನದ ಗತಿ ಮತ್ತು ಪರಿಮಿತಿಯೇ ಇಷ್ಟೆಂದು ಸಂತೃಪ್ತಿ ಪಡೆಯುತ್ತಿದ್ದ. ಅದೊಂದು ದಿನ ವಯಸ್ಸಾದ ಅಪರಿಚಿತ ಮುದುಕ ಅವನ ಮನೆಗೆ ಪ್ರತಿದಿವಸ ಬಂದು ಯುವಕನ ಜೊತೆಯಲ್ಲಿ ಕುಳಿತು ನಿನ್ನ ಪೂರ್ವ ಜನ್ಮದಲ್ಲಿ ನೀನು ‘ನೆಪೋಲಿಯನ್ ಬೊನಾಪಾರ್ಟೆ’ಯಾಗಿದ್ದೆ. ನೆಪೋಲಿಯನ್ ಬೊನಾಪಾರ್ಟೆ ಕೋರ್ಸಿಕಾ ದ್ವೀಪದಲ್ಲಿ ಅತ್ಯಂತ ಬಡ ಕುಟುಂಬದಲ್ಲಿ ಜನಿಸಿ ತನ್ನ ಶ್ರಮದಿಂದ ಮತ್ತು ತನ್ನ ಚಿಂತನೆಯಿಂದ ಫ್ರೆಂಚ್ ಸೈನ್ಯದಲ್ಲಿ ಅಧಿಕಾರಿಯಾದ. ಅನಂತರ ಫ್ರಾನ್ಸಿನ ಸಾಮ್ರಾಟ ನಾದ. ಆ ಮದುಕನು ಯುವಕನಿಗೆ ಕಥೆ ಹೇಳುತ್ತ ‘ನೆಪೋಲಿಯನ್ ಬೊನಾಪಾರ್ಟೆ’ ನೂರಾರು ಸಮರಗಳನ್ನು ಸೈನ್ಯದ ನಾಯಕತ್ವವನ್ನು ವಹಿಸಿ ಯುರೋಪ್, ಈಜಿಪ್ಟ್ ರಾಷ್ಟ್ರಗಳಲ್ಲಿ ಕೂಡ ಎಷ್ಟೇ ಕಷ್ಟ ಕಾರ್ಪಣ್ಯಗಳು ಬಂದರೂ ಅದ್ಭುತ ವಿಜಯ ಸಾಧಿಸಿದ ಪ್ರಚಂಡ. ಸರ್ಕಾರದ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲು ಕ್ರಾಂತಿಕಾರಿ ಪರಿವರ್ತನೆಯನ್ನು ತಂದ. ಜಗತ್ತಿನ ಇತಿಹಾಸವಿಡೀ ಅತ್ಯಂತ ಬಲಿಷ್ಠ ನಾಯಕನಾಗಿ ಮೆರೆದ.

ಯುವಕನು ಆ ಅಪರಿಚಿತ ಮುದುಕನ ಮಾತನ್ನು ನಂಬಲಿಲ್ಲ. ಆದರೆ ತನ್ನ ಹಿಂದಿನ ಜನ್ಮದಲ್ಲಿ ತಾನು ‘ನೆಪೋಲಿಯನ್ ಬೊನಾಪಾರ್ಟೆ’ಯಾಗಿದ್ದೆನೆಂಬ ವಿಚಾರದಲ್ಲಿ ಮನಸ್ಸಿ ನಲ್ಲೇ ಹೆಮ್ಮೆಯನ್ನು ಪಡೆದ. ಆದರೆ ವಾರಗಳು ಕಳೆದಂತೆ ನೆಪೋಲಿಯನ್ ಯಶಸ್ವಿ ಬದುಕಿನ ಬಗ್ಗೆ ಗಾಢವಾದ ಅಧ್ಯಯನ ಕೈಗೊಂಡ ನೆಪೋಲಿಯನ್ ನಾಯಕತ್ವ ಶೀಲಸಂಪತ್ತು ಮತ್ತು ವ್ಯಕ್ತಿತ್ವದ ಬಗ್ಗೆ ಅರಿತುಕೊಂಡ. ದಿನ ಹೋದಂತೆ ಅಪರಿಚಿತ ಸಂಪನ್ನವಾದ ನೆಪೋಲಿಯನ್ ಜೀವನದ ವೈಚಾರಿಕತೆಯನ್ನು ಕುರಿತು ನಂಬಿಕೆ ಬಂದು ತನ್ನ ಹಿಂದಿನ ಜನ್ಮದ ಚರಿತ್ರೆ ಯಥಾರ್ಥವೆಂಬ ಭಾವನೆ ಹೊಂದಲಾರಂಭಿಸಿದ.

‘ನೆಪೋಲಿಯನ್ ಬೊನಾಪಾರ್ಟೆ’ಯ ಗುಣಮೌಲ್ಯ, ಶೌರ್ಯ, ಅಪರಿಮಿತ ಪರಾಕ್ರಮ ಪ್ರಜೆಗಳನ್ನು ಮತ್ತು ಸೈನಿಕರನ್ನು ತನ್ನ ಹತೋಟಿಯಲ್ಲಿ ಇಟ್ಟುಕೊಳ್ಳುವ ಪ್ರಬಲ ಶಕ್ತಿಯ  ಬಗ್ಗೆ ನಂಬಿಕೆ ಹೆಚ್ಚೆಚ್ಚು ಬಂದಂತೆ ಮತ್ತು ಗುಣ ಮೌಲ್ಯಗಳನ್ನು ತಾನೇ ‘ನೆಪೋಲಿಯನ್ ಬೊನಾಪಾರ್ಟೆ’ ಎಂಬ ಸ್ಫುರಣ ಬೀಜವಾಗಿ, ಬೀಜ ಸಸಿಯಾಗಿ, ಸಸಿ ಹೆಮ್ಮರವಾಗಿ ಅವನ ವ್ಯಕ್ತಿತ್ವದಲ್ಲಿ ಒಡಮೂಡಿತು. ಅದರ ಜೊತೆಯಲ್ಲಿ ಜಗತ್ತಿನ ಬೇರೆ ಬೇರೆ ಜನರಲ್‌ಗಳ, ವೀರಪುರುಷರ ಚರಿತ್ರೆ ಕೂಡ ಓದಲಾರಂಭಿಸಿದ. ಹೆಚ್ಚೆಚ್ಚು ಕಲಿತಂತೆಲ್ಲ ತಾನೇ ಅಂತಹ ಒಬ್ಬ ಬಲಿಷ್ಠ ನಾಯಕನೆಂಬ ಹಮ್ಮಿನಲ್ಲಿ ನಡೆದಾಡತೊಡಗಿದ. ಅವನ ಕೆಲಸದಲ್ಲಿ ಕೂಡ ಇಂತಹ ನಾಯಕತ್ವದ ಗುಣ ಬೆಳೆಸಿಕೊಂಡಾಗ ತನ್ನ ಕಛೇರಿಯಲ್ಲಿ ಕೂಡ ನವೀನವಾದ ವಿಧಾನಗಳನ್ನು ಮತ್ತು ಉದ್ಯಮಶೀಲತೆ ಬೆಳೆಸಿಕೊಂಡಿದ್ದ ಮಾತ್ರವಲ್ಲದೆ ಹೆಚ್ಚುವರಿ ಜವಾಬ್ದಾರಿ ಕೂಡ ನಿರ್ವಹಿಸತೊಡಗಿದ. ತನ್ನ ಕೆಲಸದ ನಂತರ ತನ್ನ ಉಳಿದ ನಾಯಕರಲ್ಲಿ ತನ್ನ ಚಾಕಚಕ್ಯತೆಯನ್ನು ಬಳಸಿಕೊಂಡಿದ್ದ, ಮಾತ್ರವಲ್ಲದೆ ಹೆಚ್ಚೆಚ್ಚು ಅಧ್ಯಯನಶೀಲನಾದ. ಜಿಗುಟಾದ ಸಮಸ್ಯೆಗಳನ್ನು ಬಗೆಹರಿಸುತ್ತ ನಿರ್ಣಯಗಳನ್ನು ಸಂಕಲ್ಪ ಶಕ್ತಿಯಿಂದ ತೆಗೆದುಕೊಳ್ಳುತ್ತ ಕಂಪನಿಯ ಶ್ರೇಯಸ್ಸಿಗೆ ಸಂಪೂರ್ಣವಾಗಿ ತನ್ನನ್ನು ತಾನು ಅರ್ಪಿಸಿಕೊಂಡ. ಕ್ರಮೇಣ ಅವನಲ್ಲಿಯ ಭಯ, ಶಂಕೆ ತಾನೇ ತೊಲಗಿ ಆತ್ಮವಿಶ್ವಾಸ ಮತ್ತು ಸ್ಥೈರ್ಯ ತಲೆಯೆತ್ತಿತು. ಅವನ ಮೇಲಾಧಿಕಾರಿಗಳು ಈ ಯುವಕನಲ್ಲಾಗುವ ಬದಲಾವಣೆಯನ್ನು ವಿಶೇಷವಾಗಿ ಗಮನಿಸಿದರು. ಅವನಿಗೆ ಹೆಚ್ಚೆಚ್ಚು ಜವಾಬ್ದಾರಿಯ ಜೊತೆಯಲ್ಲಿ ಸಾಹಸಮಯ ಯೋಜನೆಗಳನ್ನು ಹಚ್ಚಿದ್ದರು. ಹೆಚ್ಚೆಚ್ಚು ಜವಾಬ್ದಾರಿ ನೀಡಿದಂತೆ ಆ ಯುವಕನು ಅತ್ಯಂತ ತಾದಾತ್ಮ್ಯತೆಯಿಂದ ಅವಕಾಶಗಳನ್ನು ಆಲಂಗಿಸಿದ ಮತ್ತು ಅಂತಹ ಸಾಹಸಮಯ ಯೋಜನೆಗಳ ಕ್ಷೇತ್ರಕ್ಕೆ ಧುಮುಕಿ ಅದ್ಭುತವಾದ ಸಾಧನೆಯನ್ನು ಪ್ರದರ್ಶಿಸಿದ. ಇದರಿಂದಾಗಿ ಅವನು ಹೆಚ್ಚು ಜ್ಞಾನಯುತನಾದ ಮತ್ತು ಅತ್ಯಂತ ಪರಿಣಿತ ಉದ್ಯಮಿಯಾದ. ಕ್ರಮೇಣ ಆ ಕಂಪನಿಯನ್ನೇ ನಡೆಸುವ ಉತ್ಕೃಷ್ಟ ಸ್ಥಾನಕ್ಕೇರಿದ.

ಮೇಲಿನ ಕಥೆ ಎಷ್ಟು ಸತ್ಯವೋ ಹೇಳಲಾಗುವುದಿಲ್ಲ. ಆದರೆ ಆ ಕಥೆಯಿಂದ ನಾವು ಪಡೆಯುವ ಪಾಠ ಮಾತ್ರ ಅನುಕರಣೀಯ. ನೀವು ಪ್ರಬಲ ಮುಖಂಡನಂತೆ ಯೋಚಿಸಿ ಕಾರ್ಯವೆಸಗಿದಾಗ ಅಂತಹ ಗುಣಮೌಲ್ಯಗಳನ್ನು ಮತ್ತು ಉತ್ಕೃಷ್ಟ ಮುಖಂಡರ ನಡವಳಿಕೆಯನ್ನು ತಮ್ಮದಾಗಿಸಿಕೊಳ್ಳುತ್ತೀರಿ. ಆದರೆ ಇದನ್ನು ದಿನವಹೀ ಜೀವನದಲ್ಲಿ ಉಪಯೋಗಿಸಿಕೊಳ್ಳಬೇಕು. ಆಗ ಮಾತ್ರ ಅತ್ಯಂತ ಪಳಗಿದ ನಾಯಕತ್ವದ ಗುಣ ಅನಿವಾರ‍್ಯ ವಾಗಿ ನಿಮ್ಮದಾಗುತ್ತದೆ. ನಿಮ್ಮ ಬದುಕನ್ನು ಮತ್ತು ಭವಿಷ್ಯದ ಸಂಪೂರ್ಣ ಹತೋಟಿಯನ್ನು ನೀವು ನಿಮ್ಮ ಕೈಯಲ್ಲಿ ತೆಗೆದುಕೊಂಡು ನಿಮ್ಮ ಜೀವಮಾನದ ಸಾಧನೆಯ ಗುಣಗಳನ್ನು ವೇಗದ ಹೆದ್ದಾರಿಯಲ್ಲಿ ಸಾಗಿಸಿಕೊಂಡಾಗ ಅದ್ಭುತವಾದ ಸಫಲತೆ ನಿಮಗೆ ದಕ್ಕುತ್ತದೆ. ಇಂತಹ ಅದ್ಭುತ ಮತ್ತು ಉತ್ಕೃಷ್ಟ ಜೀವನ ಕ್ರಮಗಳನ್ನು ನಮ್ಮದಾಗಿಸಬೇಕು. ಬರೀ ಕೀರ್ತಿ ಕಾಮನೆ ಮರೀಚಿಕೆಯಾಗುತ್ತದೆ.

ನಮ್ಮ ಆಧುನಿಕ ಜೀವನ ಒಂದು ಸಮರರಂಗ. ನಿಮ್ಮ ಕೆಲಸದಲ್ಲಿ ಮತ್ತು ವ್ಯವಹಾರ ಗಳಲ್ಲಿ ಅನೇಕ ಬಾರಿ ತುಮುಲವನ್ನು ಎದುರಿಸುತ್ತೀರಿ. ಅಂತ್ಯವಿಲ್ಲದ ಸಮಸ್ಯೆಗಳ  ಪ್ರಪಾತ ಗಳನ್ನು ಸರಮಾಲೆಯಂತೆ ಎದುರಿಸುತ್ತೀರಿ. ನಿಮ್ಮ ಜೀವನದ ಸಮರಕ್ಕೆ ಅಂತ್ಯವಿಲ್ಲ. ಆದರೆ ಧೃತಿಗುಂದಬಾರದು. ಅತಂತ್ರ ಜಗತ್ತಿನಲ್ಲಿ ‘ನೆಪೋಲಿಯನ್ ಬೊನಾಪಾರ್ಟೆ’ಯಂತಹ ಜನರಲ್ಸ್ ಬೇಕಾಗುತ್ತದೆ. ನಿಮ್ಮ ಕೆಲಸ ಮುನ್ನಡೆಯುವುದು ಮತ್ತು ವ್ಯವಸ್ಥೆಯ ಹತೋಟಿ ನಿಮ್ಮ ಕೈಯಲ್ಲಿ ತೆಗೆದುಕೊಳ್ಳುವುದು ಮತ್ತು ಜವಾಬ್ದಾರಿ ಸ್ವೀಕರಿಸಿ ಸಾಧನೆಯ ಸಫಲತೆಯ ಕಡೆಗೆ ಸಾಗುವುದು ಹಾಗೂ ವಿನೋದ ಪರಿಸ್ಥಿತಿಯಲ್ಲಿ ಹೋರಾಡುವ ಮನವಿರಬೇಕು. ಎಷ್ಟೇ ಕಷ್ಟವಾದರೂ ಕಾರ್ಯ ಮುಖ್ಯವೆಂದು ಮುಂದೆ ಸಾಗಿ ಫಲಿತಾಂಶ ಸಾಧಿಸುವ ದಾರಿ ಯಲ್ಲಿ ಜೀವನದ ಪ್ರಶಸ್ತಿ ಸದಾ ಕಾದಿರುತ್ತದೆ. ಜೀವನಮಟ್ಟ ನಮ್ಮ ಚಿಂತನೆಯ ಗುಣಮಟ್ಟ ವನ್ನು ಹೊಂದಿಕೊಂಡಿರುತ್ತದೆ. ಒಳ್ಳೆಯ ಚಿಂತನೆ, ಒಳ್ಳೆಯ ಫಲಿತಾಂಶಕ್ಕೆ ದಾರಿಯನ್ನು ಮಾಡಿಕೊಡುತ್ತದೆ. ನೀವು ಅನುಸರಿಸುವ ನಾಯಕರ ಗುಣಮೌಲ್ಯಗಳನ್ನು ಎಷ್ಟರಮಟ್ಟಿಗೆ ಅಳವಡಿಸುತ್ತೀರೋ ಅಷ್ಟರಮಟ್ಟಿಗೆ ನಿಮ್ಮ ಜೀವನಮಟ್ಟ ಮೇಲೇರುತ್ತದೆ.

ಮಿಲಿಟರಿ ತಂತ್ರಗಳಲ್ಲಿ ೧೨ ಪ್ರಮುಖ ಸೂತ್ರಗಳಿವೆ. ಅವುಗಳೆಂದರೆ :

ಆಕ್ರಮಣ, ಸಮುದಾಯ ಕ್ರೋಡೀಕರಣ, ಕುಶಲತೆಯ ವ್ಯೂಹ, ಯೋಜನೆ, ಜಾಣ್ಮೆ, ಕೇಂದ್ರೀಕೃತ ಕಾರ್ಯತಂತ್ರ, ಏಕನಿಯಂತ್ರಣ, ಸರಳತೆ, ಸುರಕ್ಷತೆ, ಮಿತವ್ಯಯ, ವಿಸ್ಮಯ, ಲಾಭಕರವಾಗಿ ಬಳಸಿಕೊಳ್ಳುವ ವಿಧಿವಿಧಾನ ಇವುಗಳಲ್ಲಿ ಯಾವುದೇ ಕಾರ್ಯತಂತ್ರದಲ್ಲಿ ಲೋಪವಾದರೂ ಸೋಲು ಅನಿವಾರ‍್ಯ. ಈ ಬಗ್ಗೆ ಅತ್ಯಂತ ಎಚ್ಚರಿಕೆಯ ಹೆಜ್ಜೆಗಳನ್ನು ನಾಯಕನಾದವನು ತನ್ನ ಜೀವನದಲ್ಲಿ ಇಡಬೇಕಾಗಿದೆ. ಜೀವಮಾನದ ವಿಜಯಪಥದಲ್ಲಿ ಈ ಸೂತ್ರಗಳು ಅವಿಭಾಜ್ಯ ಅಂಗವಾಗುತ್ತದೆ.